ನೆನಪು

ಮುರಳೀ ರವಳೀ ಹಾಯಿ!

ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ ಕೃಷ್ಣ  ಇಂದು ನಮ್ಮೊಡನೆ ಇಲ್ಲ ಎಂದುನಾನು ಹೇಳಿದರೆ  ಅದು ತಪ್ಪೇ ಆಗುತ್ತದೆ! ಏಕೆಂದರೆ,  ಪೂರ್ಣಾಯಸ್ಸನ್ನು ಸಂಗೀತಕ್ಕೆ ಧಾರೆ ಎರೆದು ಕೋಟ್ಯಂತರರಸಿಕರ ಮನಸೂರೆಗೈದ ಬಾಲಮುರಳಿಯ ಸಂಗೀತ ಸುಧೆ ಅಮರ! ಅವರು , ನಮ್ಮಂತೆ ಅವರ ಹಾಡುಗಾರಿಕೆಯನ್ನುಕೇಳಿ ಆನಂದಿಸುವ ರಸಿಕರು ಬದುಕಿರುವವರೆಗೂ, ಅವರ ರಚನೆಗಳನ್ನು ಇತರ ಸಂಗೀತಗಾರರುಹಾಡುತ್ತಿರುವವರೆಗೂ, ಅವರು ಬದುಕಿಯೇ, ನಮ್ಮ ನಡುವೆಯೇ ಇದ್ದಂತೆ.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (6 votes)
To prevent automated spam submissions leave this field empty.

ಮರಳಿ ನೆನಪಿಗೆ..

ನನ್ನ ಮಾವನ ಮಗನ ಮದುವೆಗೆ ಇನ್ನೂ ೨ ದಿನ ಬಾಕಿ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾವನ ಮಗ ಮಾತ್ರವಲ್ಲದೆ ನನ್ನ ಇನ್ನೂ ಇಬ್ಬರು ಆಪ್ತ ಗೆಳೆಯರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಆಫೀಸ್‌ನಲ್ಲಿ ರಜೆ ಸಿಗುವುದು ತೀರಾ ಕಷ್ಟವಾದರೂ ನನ್ನ ಕೆಲಸದ ರೀತಿ ರಿವಾಜುಗಳನ್ನರಿತ ನನ್ನ ಮ್ಯಾನೇಜರ್ ನನಗೆ ರಜೆ ಅಂತ ಕೊಡದಿದ್ದರೂ, ಇಂಟರ್ನೆಟ್ ನೆಟ್ವರ್ಕ್ ಇರುವಂಥ ಜಾಗದಿಂದ ಕುಳಿತು ಕೆಲಸ ಮಾಡಲು ಅನುಮತಿ ನೀಡಿದ್ದಳು. ಒಂದೇ ವಾರದಲ್ಲಿ ಮೂರು ಮದುವೆ ಇದ್ದ ಕಾರಣ ನಾಲ್ಕು ದಿನಗಳ ಮುಂಚೆಯೇ ನಮ್ಮೂರ ಕಡೆ ಧಾವಿಸಿದ್ದೆ. ಮಾವನ ಮನೆ ಇರುವುದು ತೀರ್ಥಹಳ್ಳಿಯಲ್ಲಿ. ಅಲ್ಲೇ ಕುಳಿತು ಸಂಜೆಯ ನಂತರ ಅಮೇರಿಕ ಕಚೇರಿ ವೇಳೆಯಲ್ಲಿ ಕೆಲಸ ಮಾಡಬೇಕಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವರ್ಷ ಹತ್ತು ಕಳೆದರೂ, ಬತ್ತದ ನೆನಪು!

ಇಂದಿಗೆ ಹತ್ತು ವರ್ಷಗಳ ಹಿಂದೆ, ಆಗಿನ್ನೂ ನಾನು ಬೆಂಗಳೂರಿಗೆ ಬಂದ ಹೊಸತು. ಮನದಲ್ಲಿ ಏನೇನೋ ಆಶೆಗಳು, ತವಕಗಳು, ದುಗುಡಗಳು. ಒಮ್ಮೊಮ್ಮೆ ಏನೂ ಇಲ್ಲ ಎನ್ನುವ ಆತಂಕ, ಮತ್ತೊಮ್ಮೆ ಏನು ಇಲ್ಲದಿದ್ದರೂ ಎಲ್ಲಾ ಇವೆ ಎನ್ನುವ ಉತ್ಸಾಹ. ಎಂ.ಸಿ.ಏ. ಪದವಿಯ ಕೊನೆಯ ಶಿಕ್ಷಣಾವಧಿಯ ವಿದ್ಯಾರ್ಥಿಯಾಗಿ, ಏನಾದರೂ ಒಂದು ಪ್ರೊಜೆಕ್ಟ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಬಂದವ ನಾನು. ಪರಿಚಿತರಿದ್ದರೂ ಅಪರಿಚಿತ ಎನಿಸುವ ಊರು, ಅಪರಿಚಿತ ರಸ್ತೆಗಳು, ಅಪರಿಚಿತ ಜನರು. ಇವೆಲ್ಲವುಗಳ ಮದ್ಯೆ ನಾನು ಬೆರಳಣಿಕೆಯಷ್ಟೇ ಜನರಿಗೆ ಪರಿಚಿತನಾಗಿ, ಹಲವರಿಗೆ ಅಪರಿಚಿತನಾಗಿ ಬೆಂಗಳೂರು ಎನ್ನುವ ಮಾಯಾಲೋಕದೊಳಗೆ ಸೇರಿಕೊಂಡಿದ್ದೆ. ಬಂದ ಹೊಸದರಲ್ಲಿ ಎಲ್ಲವೂ ವಿಶ್ಮಯ, ಎಲ್ಲೆಲ್ಲೂ ವಾಹನಗಳಿಂದ ಕಿಕ್ಕಿರಿದು ತುಂಬಿರುವ ರಸ್ತೆಗಳು, ಹತ್ತು ಇಪ್ಪತ್ತು ಮಾರಿಗೆ ಒಂದು ಸಿಗ್ನಲಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತ್ಯಾಗರಾಜನೆಂಬ ರಾಗರಾಜ

ಐದುಹೊಳೆಯೂರಿನಲಿ* ಇದ್ದನವ ಮಹನೀಯ ಹೆಸರವನದಾಗಿತ್ತು ತ್ಯಾಗರಾಜ; ಬಗೆಬಗೆಯ ರಾಗದಲಿ ನೂರಾರು ರಚನೆಗಳ ಮಾಡಿ ಇತ್ತಿಹನೆಮಗೆ ಯೋಗಿ ರಾಜ! ತ್ಯಾಗರಾಜ ವಿರಾಗಿಯೇಕಾದೆ ಹೇಳು ನೀ ನಾಗಿರಲು ರಸಿಕ ಮನವಾಳ್ವ ರಾಜ; ಭೋಗಗಳ* ಬೇಡೆನುತ ನಿಲೆನಿಂತೆ ಹಾಡುತ್ತ ರಾಗಗಳ ನೀ ನಿಜದಿ ರಾಗ ರಾಜ! -ಹಂಸಾನಂದಿ ಕೊ: ಐದುಹೊಳೆಯೂರು = ತ್ಯಾಗರಾಜರು ಬದುಕಿ ಬಾಳಿದ ತಿರುವೈಯಾರು ಕೊ.ಕೊ: ಶರಭೋಜಿ ಮಹಾರಾಜ ತಂಜಾವೂರಿನ ಆಸ್ಥಾನವಿದ್ವಾಂಸರಾರಿರಬೇಕೆಂಬ ಆಹ್ವಾನವಿತ್ತರೂ, ತ್ಯಾಗರಾಜರು ಅದನ್ನು ಬೇಡವೆಂದೆಣಿಸಿ, ತಿರುವೈಯ್ಯಾರಿನಲ್ಲೇ ನೆಲೆ ನಿಂತರು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಹೊಸ ವರುಷ

ನೆಡೆಯುತ್ತಿದೆ ನೆಡೆಯುತ್ತಿದೆ ನಮ್ಮ ಈ ಬಾಳ ಪಯಣ,

ಎರಡು ಸಾವಿರದ ಹನ್ನೋಂದರಿಂದ ಎರಡು ಸಾವಿರದ ಹನ್ನೇರಡರೆಡೆಗೆ

ಹೊಸ ಕನಸುಗಳ ಹೊತ್ತ ಈ ಪಯಣ ಸಾಗುತ್ತಿಹದು ಹನ್ನೇರಡರ ಬದುಕಿನ ಕಡೆಗೆ,

ತನ್ನ ನೋವುಗಳನೆಲ್ಲಾ ಮರೆತು ಹೊಸ ವರುಷ ನಿಮಗೆ ಶುಭತರಲಿ ಎಂದು ಹರಸಿ,

ಬಾಳಿನಲ್ಲಿ ಪ್ರತಿಯೊಂದು ದಿನವು ಹೊಸ ದಿನವಾಗಲಿ

ಹಳೆಯ ನೆನಪುಗಳು ಮರೆಯದಿರಿ ಎಂದು ಶುಭ ಹಾರೈಸುವ.

                                       -  ಎರಡು ಸಾವಿರದ ಹನ್ನೊಂದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರೆಯಲಾರೆ ಕರಿಯ ನಿನ್ನ!

     ಪುತ್ತೂರು ತಾಲ್ಲೂಕು ಕಡಬವನ್ನು ತಾಲ್ಲೂಕು ಎಂದು ಘೋಷಿಸದಿದ್ದರೂ ಪೂರ್ವಭಾವಿಯಾಗಿ ವಿಶೇಷ ತಹಸೀಲ್ದಾರರ ಹುದ್ದೆ ಮಂಜೂರು ಮಾಡಿ ಆದೇಶವಾದಾಗ ಪ್ರಥಮ ವಿಶೇಷ ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ್ದ ನಾನು ಕಡಬದಲ್ಲಿ ಸೂಕ್ತ ವಸತಿ ಸಿಗದಿದ್ದರಿಂದ ೨೦ ಕಿ.ಮೀ. ದೂರದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ವಸತಿಗೃಹವೊಂದರಲ್ಲಿ ನನಗೆ ಉಳಿದುಕೊಳ್ಳಲು ಅವಕಾಶವಾಗಿತ್ತು. ಸುಬ್ರಹ್ಮಣ್ಯ ಸಹ ಉದ್ದೇಶಿತ ಕಡಬ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಗ್ರಾಮವಾಗಿತ್ತು. ಆ ಸಂದರ್ಭದ ನೆನಪೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನವರಾತ್ರಿಯ ದಿನಗಳು ಮತ್ತು ಸಂಗೀತ ನವರಾತ್ರಿ

 ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ ಹಾಕಿದ್ದೇನೆ. 

 

ನವರಾತ್ರಿಯ ದಿನಗಳು: http://sampada.net/books/5976

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೆನಪುಗಳ ನಾಯಕಿ, ಕನಸುಗಳ ನಿರೂಪಕಿ!

ಆ ಸಂಜೆ ಹೊತ್ತು... ಅವಳನ್ನೇ ನೆನೆಯುತ್ತಾ ಕೂತಿದ್ದೆ. ಇಳಿ ಬಿಸಿಲಿನ ಎಳೆಗಳು, ಆ ತೆಂಗಿನ ಗರಿಗಳ ಮಧ್ಯೆ ನುಸುಳಿ ನೆಲದ ಮೇಲೆ ಹಾಸಿರುವ ಹಸಿರು ಹುಲ್ಲನ್ನು ಚುಂಬಿಸುತ್ತಿದ್ದವು! ಹದವಾಗಿ ಬೀಸುತ್ತಿರುವ ತಂಪು ಗಾಳಿಗೆ ಹಕ್ಕಿ ಪುಕ್ಕವೊಂದು ತೇಲುತ್ತಾ, ಬೀಳುತ್ತಾ ಮಾಯವಾಯಿತು! ನನ್ನ ಮನಸೂ ಅಷ್ಟೇ ಹಗುರವಾಗಿತ್ತೇನೋ ಎಂಬಂತೆ ಹಲವಾರು ಸಿಹಿ ಯೋಚನೆಗಳು ಸುತ್ತಿ ಸುಳಿದು ಮಾಯವಾಗುತ್ತಿದ್ದವು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಳ್ಳ ಹೊಳೆ ಮತ್ತು ಹೇಮಾವತಿ

ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ, ಹೊಳೆಯ ಪಾತ್ರದಲ್ಲಿ ಆಟವಾಡುತ್ತಿದ್ದ ಮಕ್ಕಳು, ದನ ಕರುಗಳೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದವಂತೆ. ಯಾವಾಗ ನೀರು ಬರುತ್ತೆ ಅನ್ನೋದು ಗೊತ್ತಾಗದೇ, ಕಳ್ಳನ ತರಹ ಜನ ಜಾನುವಾರನ್ನೆಲ್ಲ ನುಂಗಿಕೋತಾ ಇದ್ದಿದ್ದರಿಂದಲೇ ಇದು ಕಳ್ಳ ಹೊಳೆ ಅಂತ ಹೆಸರಾಗಿತ್ತಂತೆ. ಇವೆಲ್ಲ ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದ ವಿಷಯಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಗಾನ ವನ ಮಯೂರಿ

ಇವತ್ತು (ಏಪ್ರಿಲ್ ೬,೨೦೧೧)  ಸಂಗೀತಪ್ರೇಮಿಗಳನ್ನು ಅಗಲಿದ ಸಂಗೀತ ಕಲಾಚಾರ್ಯ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್ (೧೯೨೨-೨೦೧೧) ಮುತ್ತುಸ್ವಾಮಿ ದೀಕ್ಷಿತರ ಶಿಷ್ಯ ಪರಂಪರೆಯ ಒಂದು ಮುಖ್ಯ ಕೊಂಡಿ.ಇವತ್ತು ಅವರು ಸಂಗೀತ ಪ್ರೇಮಿಗಳ ಜೊತೆ ಇಲ್ಲದಿರಬಹುದು. ಆದರೆ, ಅವರ ಸಂಗೀತ ಇನ್ನೂ ನಮ್ಮೊಡನೆ ಇದೆ. ಮತ್ತೆ ಇನ್ನೂ ಬಹುಕಾಲ ಇರುವುದು.

ಚಿತ್ರ ಕೃಪೆ: ವಿಜಯ್ ಶರ್ಮ Picture Courtesy: Vijay Sarma

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಅವರ ಹೆಸರನ್ನೂ ಕೇಳಿರಲಿಲ್ಲ. ಸ್ವತಃ ನಾನೇ ಚೆನ್ನೈ ವಾಸಿಯಾಗಿ ಹದಿನೆಂಟು ತಿಂಗಳು ಕಳೆದಿದ್ದಾಗಲೂ ಒಮ್ಮೆಯೂ ಅವರ ಕಚೇರಿಯನ್ನು ಕೇಳಿರಲಿಲ್ಲ. ಎಂತಹ ದುರದೃಷ್ಟ! ನಂತರ ನನಗೆ ಅವರ ಕಚೇರಿಯನ್ನು ನೇರವಾಗಿ ಕೇಳುವ ಅವಕಾಶವೂ ಸಿಗಲೇ ಇಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಅಪ್ಪನ ಮನದಲ್ಲೊಮ್ಮೆ ಇಣುಕಿ...

ಮಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳುವ ಆ ಚಿಕ್ಕ ಬೂಟಿನ ಸದ್ದಿಗೆ ಅವ ನಗುತ್ತಾನೆ. ಎರಡು ಜಡೆಯಲ್ಲೂ ಮಲ್ಲಿಗೆ ಮುಡಿದು, ಬಣ್ಣ ಬಣ್ಣದ ಫ್ರಾಕ್ ಹಾಕಿಕೊಂಡು ಅಪ್ಪನ ಕಿರುಬೆರಳು ಹಿಡಿದು ನಡೆಯುವ ಮಗಳು ಈವಾಗ ಕೂದಲು ಹರಡಿ ಬಿಟ್ಟು ಸುಯ್ಯಿ ಅಂತಾ ಸ್ಕೂಟಿಯೇರುತ್ತಾಳೆ. ಕೈ ತುಂಬಾ ಬಳೆ ಬೇಕು ಎಂದು ಹಠ ಹಿಡಿಯುತ್ತಿದ್ದ ಪೋರಿ ಈಗ ರಟ್ಟೆಯಲ್ಲಿ ಟ್ಯಾಟೂ ಹಾಕಿಸಿ ಸ್ಲೀವ್ ಲೆಸ್ ಟೀಶರ್ಟ್ ಹಾಕ್ತಾಳೆ. ಅವಳ ಹೈ ಹೀಲ್ಡ್ ಶೂವಿನ ಟಕ್ ಟಕ್ ಸದ್ದು ಮಹಡಿಯವರೆಗೂ ಕೇಳಿಸುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೋಡಗಳು

ನಿತ್ಯ ಬಿಡುವು ಇಲ್ಲದಷ್ಟು ಕೆಲಸದ ನಡುವೆ ಆಗೊಮ್ಮೆ ಈಗೊಮ್ಮೆ ಎಲ್ಲೋ ಒಂದಷ್ಟು ಹೊತ್ತು ಒಮ್ಮೆಲೇ ಎಲ್ಲವೂ ನಿಂತು, ಸಮಯ ಹಿಡಿದಿಟ್ಟಂತೆ ಭಾಸವಾಗುವುದುಂಟು. ಆ ಸಮಯ ಏನೋ ಒಂದಷ್ಟು ಮನಸ್ಸಿಗೆ ತಟ್ಟನೆ ಬಂದು ಮಾಯವಾಗುವುದು. ಇವುಗಳಲ್ಲಿ ನೆನಪುಗಳೇ ಹೆಚ್ಚಿನವು. ಸುಮಾರು ಹತ್ತು ವರ್ಷಗಳ ಹಿಂದೆ ಮಾಮ ಪುಣೆಯಿಂದ ನನಗಾಗಿಯೇ ಕಳುಹಿಸಿಕೊಟ್ಟಿದ್ದ ಮೋಡಗಳ ಚಿತ್ರಗಳನ್ನುಳ್ಳ ಕ್ಯಾಲೆಂಡರ್. ಜಗತ್ತಿನ ವಿವಿಧ ರೀತಿಯ ವಿಶೇಷ ಮೋಡಗಳ ಚಿತ್ರಗಳು, ಅವುಗಳ ಕುರಿತು ವೈಜ್ಞಾನಿಕ ಮಾಹಿತಿ ಆ ಕ್ಯಾಲೆಂಡರಿನಲ್ಲಿತ್ತು. ಉಳಿದಂತೆ, ನೆನಪಿನಲ್ಲಿ ಅಚ್ಚಾದಂತಿರುವ ಶಿವಮೊಗ್ಗದ ಮಳೆ ಹಿಡಿದ ಮೋಡಗಳು, ದುರ್ಗದ ಖಾಲಿ ಆಗಸದ ಮೋಡಗಳು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಊರಿಗೆ ಪ್ರೀತಿಯ ಕರೆಯೋಲೆ

ಜನವರಿಯ ಜಾತ್ರೆ. ನೆಹರೂ ಬಟರ್ ಸ್ಟೋರ್. ಮಂಗಳವಾರ ಸಂತೆ. ಚಳಿಗಾಲದ ಕಾವಳ. ಅದರ ಜೊತೆಗೆ ಸೊಗಡಿನ ಅವರೇಕಾಯಿ.ರಾತ್ರಿ ಓಡಾಡುವಾಗ ಜೀವವೇ ಬಾಯಿಗೆ ಬರುವಂತೆ ಬೊಗಳುವ ಬೀದಿ ನಾಯಿಗಳು. ಸುಧಾ ಹೋಟೆಲ್ಲಿನ ಮಸಾಲೆ ದೋಸೆ. ಕಟ್ಟಿನ ಕೆರೆಯ ಬಸ್ ಸ್ಟಾಂಡ್. ಜಾತ್ರೆ ಮಾಳಕ್ಕೆ ಹೋಗುವ ಅಲಂಕಾರ ಮಾಡಿರುವ ರಾಸುಗಳು. ಪಿಕ್ಚರ್ ಪ್ಯಾಲೇಸ್ ಮುಂದೆ ಚೌಕಾಸಿ ವ್ಯಾಪಾರ. ಗಂಧದ ಕೋಟಿ.  ಸಂಪಿಗೆ ರಸ್ತೆ. ವರುಷದಲ್ಲಿ ಒಮ್ಮೆ ಮಾತ್ರ ಹತ್ತು ದಿನ ತೆಗೆಯುವ ಊರ ದೇವತೆಯ ಗುಡಿ. ಮೂರು ತಿಂಗಳ ಸೋನೆ ಮಳೆ. ಗಣಪತಿ ಪೆಂಡಾಲಿನಲ್ಲಿ ಕದ್ರಿ ಗೋಪಾಲನಾಥ್ ಸ್ಯಾಕ್ಸಫೋನ್ ಕಚೇರಿ. ಡಬಲ್ ಟ್ಯಾಂಕ್ ಬಳಿ ಆಡುವ ಹುಡುಗರು. ಆಂಜನೇಯನ ದೇವಸ್ಥಾನದಲ್ಲಿ ಸಂಸ್ಕೃತ ಶಾಲೆ. ವರ್ಷಗಟ್ಟಲೆ ಟಾರು ಕಾಣದೇ ಮಳೆಗಾಲದಲ್ಲಿ ಕೆಸರಿನ ಓಟಕ್ಕೆ ಲಾಯಕ್ಕಾದ ರಸ್ತೆಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊಸ ವರ್ಷದ ಹೊಸ್ತಿಲಿನಲ್ಲಿ ಒಂದು ಸಮ್ಮೇಳನ

೨೦೧೦ರ ಕೊನೆ ದಿನದಂದು ವಿಶ್ವ ಸಂಕೇತಿ ಸಮ್ಮೇಳನ ಆರಂಭವಾಗಲಿದೆ. ಮೂರು ದಿನದ ಈ ಸಮ್ಮೇಳನಕ್ಕೆ ನಾಲ್ಕೈದು ಸಾವಿರ ಜನ ಬಂದು ಸೇರುವ ನಿರೀಕ್ಷೆ ಇದೆಯಂತೆ!

ಶಿವಮೊಗ್ಗ ಜಿಲ್ಲೆಯ ಮತ್ತೂರು-ಹೊಸಳ್ಳಿಗಳಲ್ಲಿ ನಡೆಯುತ್ತಿರುವ ಈ ಮೂರು ದಿನದ ಸಮ್ಮೇಳನ, ಕರ್ನಾಟಕವನ್ನು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಬಂದು ತಮ್ಮ ಮನೆಯಾಗಿಸಿಕೊಂಡ ಎಲ್ಲ ಸಂಕೇತಿಗಳಿಗೂ ಒಂದು ಸಂಭ್ರಮದ ಆಚರಣೆಯೇ ಸರಿ.

ಸಮ್ಮೇಳನದ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ: www.sankethi.net/

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಕೃಷ್ಣಾಷ್ಟಮಿಯಲ್ಲಿಷ್ಟು ಕೃಷ್ಣ ಸ್ಮರಣೆ

ಪ್ರತೀ ವರ್ಷ ಅಂದ್ಕೋತೀನಿ ಕೃಷ್ಣಾಷ್ಟಮಿಯ ಹೊತ್ತಿಗೆ ಒಂದು ಒಳ್ಳೇ ಬರಹ ಬರೀಬೇಕು - ಹರಿದಾಸರು ಕಂಡ ಕೃಷ್ಣನ ಬಗ್ಗೆ ಅಂತ. ಆ ಬಗ್ಗೆ ನೂರಾರು ಜನ ಬರ್ದಿದಾರೆ ಅಂದ್ರಾ? ಹೌದು. ಬರೆದಿದ್ರೇನಂತೆ. ನನ್ನ ಹಾಡು ನನ್ನದು -  ನನ್ನ ಮಾತು ನನ್ನದು - ನನ್ನ ನೋಟ ನನ್ನದು - ನನ್ನ ಧಾಟಿ ನನ್ನದು ಅಂತ ಅಂದ್ಕೊಳೋದಪ್ಪ! ಆದ್ರೆ ಯಾಕೋ ಕೃಷ್ಣನಿಗೆ ಅದರ ಮೇಲೆ ಮನಸ್ಸಿಲ್ಲ ಅನ್ಸತ್ತೆ. ಯಾಕಂದ್ರೆ ಎಂತೆಂತಹವರೋ ಅವನ ಬಗ್ಗೆ ಹಾಡಿಬಿಟ್ಟಿರೋವಾಗ ನನ್ನ ನಾಕು ಸಾಲು ಇದ್ರೇನಂತೆ ಇಲ್ದಿದ್ರೇನಂತೆ ಅಂತಲೇ ಇರಬೇಕು, ಎರಡು ಮೂರು ವರ್ಷದಿಂದ ನೋಡ್ತಿದೀನಿ, ಈ ಗೋಕುಲಾಷ್ಟಮಿ ಬರೋ ಹೊತ್ತಿಗೇ ಇನ್ನೇನೋ ಜರೂರಾದ ಕೆಲಸವೋ ಮತ್ತೊಂದೋ ಅಂಟ್ಕೊಳತ್ತೆ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಅನ್ನೋ ತರಹ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ನೆನಪಿನ ಪುಟದಿಂದ...

"ನೆನಪಿನ ಪುಸ್ತಕದಲ್ಲಿನ ಎಲ್ಲಾ ಅಕ್ಷರಗಳು ಮಾಸಿಹೋಗಬಹುದು....
ಅದರೆ ನಿನ್ನ ನೆನಪಿದೆಯಲ್ಲಾ... ಅದನ್ನು ನನ್ನ ಮನ ಎಂದೂ ಮರೆಯುವುದಿಲ್ಲ.."


 


   

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ೦ಪದಿಗರ ಕಲರವ, ಒ೦ದು ಅದ್ಭುತ ಅನುಭವ

ಆತ್ಮೀಯ ಸ೦ಪದಿಗರೇ
ಸ೦ಪದ ’ಸ೦’ಮಿಲನದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ನನ್ನ ಧನ್ಯವಾದಗಳು. ಒ೦ದು ಪುಟ್ಟ ಕುತೂಹಲ ಮತ್ತು ಸಣ್ಣ ಭಯದೊ೦ದಿಗೆ ಈ ಕೆಲಸವನ್ನ ಆರ೦ಭಿಸಿದೆ
ಎಲ್ಲರನ್ನೂ ನೋಡಬೇಕೆನ್ನುವ ಕುತೂಹಲ ಮತ್ತು ಮುಖ ಪರಿಚಯವಿಲ್ಲದ ಸ೦ಪದಿಗರೊ೦ದಿಗೆ ಹೇಗೆ ಮಾತ ಆರ೦ಭಿಸಲಿ ಎ೦ಬ ಸಣ್ಣ ಭಯ ದೊ೦ದಿಗೇ ಹೆಜ್ಜೆ ಇಡುತ್ತಿದ್ದೆ. ಮನಸ್ಸಿನಲ್ಲೇ ತಯಾರಾಗುತ್ತಿದ್ದೆ.
ಆದರೆ ಮೊದಲು ಸಿಕ್ಕವರೇ ನನ್ನನ್ನು ಹಳೇ ಪರಿಚಯವೇನೋ ಎ೦ಬ೦ತೆ ಮಾತನಾಡಿಸಿಬಿಟ್ಟರು . ನನ್ನಲ್ಲಿದ ಭಯವನ್ನು ಹೋಗಲಾಡಿಸಿಬಿಟ್ಟರು. ಬೆಳ್ಳಾಲ ಗೋಪೀನಾಥ ರಾಯರಿಗೆ ನಾನು ಈ ವಿಷಯದಲ್ಲಿ ಋಣಿ
ಗೋಪೀನಾಥ ಮತ್ತವರ ಶ್ರೀಮತಿಯವರೊ೦ದಿಗೆ ಮಾತನಾಡುತ್ತಿದ್ದಾಗಲೇ ಮ೦ಜುನಾಥರ ಆಗಮನ. ಮ೦ಜುರವರ ಮುಖದಲ್ಲಿನ ಆತ್ಮೀಯತೆಯನ್ನ ಎ೦ದಿಗೂ ಮರೆಯಲಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಿಷ್ಣುವರ್ಧನ್ : ಒಂದು ವರ್ಷದ ಹಿಂದಿನ ನೆನಪು

ಈ ಲೇಖನ ೧೩ ರಂದು ಬರೆದಿದ್ದರೆ ಮತ್ತಷ್ಟು ಅರ್ಥಪೂರ್ಣವಾಗಿರುತ್ತಿತ್ತೇನೋ.

೭ ದಿನಗಳ ನಂತರ ಬರೆಯುತ್ತಿದ್ದೇನೆ.

ನನ್ನ ಕಂಪ್ಯೂಟರ್ ನಲ್ಲಿ ಯಾವುದೋ ಇಮೇಜ್ ಹುಡುಕುತ್ತಿದ್ದಾಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದಾಗ ನೆನಪಾದದ್ದು.

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಲ್ಕನೆಯ ವರ್ಷ

ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕಾಲ ಉರುಳುವುದಿಲ್ಲ, ಓಡುತ್ತದೆ ಅನ್ನುವುದೇ ದಿಟವೇನೋ.

ಆದರೆ ಕೆಲವು ಸಂಗತಿಗಳು ಮಾತ್ರ ಬದಲಾಗುವುದೇ ಇಲ್ಲ. ಅದರಲ್ಲಿ ಕೆಲವು ಒಳ್ಳೆಯವು. ಕೆಲವು ಕೆಟ್ಟವು. ಅಂತಹುದರಲ್ಲಿ ಮತ್ತೊಂದು ಗಲಭೆ ನಮ್ಮೂರಿನಲ್ಲಿ ನಡೆಯುತ್ತಿದೆಯಂತೆ. ಕೇಳಿದೊಡನೆಯೇ ಮನೆಗೆ ಮಾತನಾಡಿ, ಏನೂ ತೊಂದರೆಯಿಲ್ಲ ಅನ್ನುವುದನ್ನು ತಿಳಿಯುವವರೆಗೆ ಮನಸ್ಸು ತಡೆಯಲೇ ಇಲ್ಲ. ಇಂತಹ ಘಟನೆ ಹಿಂದೆಯೂ ಆಗಿದ್ದು, ನೋಡಿದ್ದು, ಯಾವುದೇ ತಪ್ಪು ಇಲ್ಲದವರೇ ತೊಂದರೆಗೊಳಗಾಗಿದ್ದು ಎಲ್ಲ ನೋಡಿದ್ದೇನೆ. ಇವಕ್ಕೆ ಕೊನೆ ಎಲ್ಲಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ

ನೆನಪಿನ ಮತ್ತೊಂದು ಕೊಂಡಿ ಕಳಚಿತು.

ನಿರೀಕ್ಷಿತವಾಗಿದ್ದರೂ, ಕೆ.ಎಸ್‌. ಅಶ್ವತ್ಥ ಅವರ ಸಾವು ವಿಚಿತ್ರ ವ್ಯಾಕುಲತೆ ಉಂಟು ಮಾಡುತ್ತಿದೆ. ಅವರನ್ನು ನಾಯಕರನ್ನಾಗಿ ಆರಾಧಿಸದಿದ್ದರೂ, ಅದರಾಚೆಯ ಜೀವಂತ ವ್ಯಕ್ತಿಯನ್ನಾಗಿ ನಾವೆಲ್ಲ ನೋಡಿದ್ದೆವು. ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅವರ ಪ್ರತಿಭೆಗೆ ಮಾರು ಹೋಗಿದ್ದೆವು. ಅವರು ಮುಖ್ಯ ವ್ಯಕ್ತಿಯಾಗಿ ಚರ್ಚೆಯಾಗುತ್ತಿರಲಿಲ್ಲ. ತುಂಬಿದ ಮನೆಯಲ್ಲಿ ತನ್ನ ಪಾಡಿಗೆ ತಾನು ಒಂದೆಡೆ ಕೂತ ಹಿರಿಯನಂತೆ, ನೆನಪಿನ ಅವಿಭಾಜ್ಯ ಅಂಗವಾಗಿದ್ದರು. ಈಗ ಆ ಸ್ಥಳ ಖಾಲಿ ಖಾಲಿ. ಒಂದು ಬನಿಯನ್‌, ಒಂದು ಲುಂಗಿ ಹಾಕಿಕೊಂಡ ನಮ್ರ ಮುಖದ, ವಿನಂತಿಸುವ ಕಂಗಳ ಅಶ್ವತ್ಥ ಈಗಿಲ್ಲ.

ಸುಮ್ಮನೇ ಕೂತು ನೆನಪಿಸಿಕೊಂಡರೂ ವಿವಿಧ ಪಾತ್ರಗಳ ಅಶ್ವತ್ಥ ಮುಖ ಕಣ್ಮುಂದೆ ಬರುತ್ತದೆ. ನಾನು ತುಂಬ ಇಷ್ಟಪಟ್ಟ ಸಿನಿಮಾಗಳಲ್ಲಿ ಕೆ. ಬಾಲಚಂದರ್‌ ನಿರ್ದೇಶನದ ಎರಡು ರೇಖೆಗಳು ಚಿತ್ರವೂ ಒಂದು. ಅದರಲ್ಲಿ ಅಸಹಾಯಕ ಮೇಷ್ಟ್ರ ಪಾತ್ರದಿಂದ, ನಿಷ್ಠುರ-ನಿಷ್ಕರುಣಿ ತಂದೆಯಾಗಿ ಅಶ್ವತ್ಥ ಅಭಿನಯ ಇವತ್ತಿಗೂ ಅಚ್ಚಳಿಯದಂತಿದೆ. ತನ್ನ ಮಗಳಿಗೆ ವಂಚಿಸಿ, ಅವಳ ಮಡಿಲಿಗೊಂದು ಮಗು ಕರುಣಿಸಿ, ಹೇಳದೇ ಕೇಳದೇ ಹೋಗಿ ಇನ್ನೊಂದು ಮದುವೆಯಾದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿದ ಪಾತ್ರವಾಗಿ ಅಶ್ವತ್ಥ ಅಭಿನಯ ಅದ್ಭುತ. ಕುವೆಂಪು ಅವರನ್ನು ಆರಾಧಿಸುವ ಮೇಷ್ಟ್ರು ಪೈಪ್‌ ಸೇದುವ ಕುಲೀನ ವರ್ಗದ ವ್ಯಕ್ತಿಯಾಗಿ ಬದಲಾಗುತ್ತಾರೆ. ವಿನಯದ ಜಾಗದಲ್ಲಿ ನಿಷ್ಠುರತೆ, ನಮ್ರತೆಯ ಸ್ಥಾನದಲ್ಲಿ ಅಂತಸ್ತಿನ ಹಮ್ಮು ಸೇರಿಕೊಳ್ಳುವ ಪರಿಯೇ ಅದ್ಭುತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಬಾಲ್ಯದಲ್ಲಿ ಕಂಡ ಗ್ರಹಣ

ಸೂರ್ಯನಿಗೂ ಅಡ್ಡಗಟ್ಟುವವರಿದ್ದಾರಲ್ಲಾ…!! ಕಣ್ಣು ಹಾಗೆಯೇ ಕ್ಯಾಲೆಂಡರ್ ನೋಡಿತು.. ಮನಸ್ಸು ಹಾಗೆಯೇ.., ಈ ಸೂರ್ಯಗ್ರಹಣದ ಯೋಚನಾ ಲಹರಿಯ ಸುತ್ತ ಸುತ್ತ ತೊಡಗಿತು. ಬಾಲ್ಯದಲ್ಲಿ ಇದೇ ರೀತಿ.. (ಮೂರನೆಯೋ, ಐದನೆಯೋ ಕ್ಲಾಸ್ನಲ್ಲಿದ್ದಾಗ)ಮಧ್ಯಾಹ್ನ ಹೊತ್ತಲ್ಲೆ ಗ್ರಹಣ ಕಾಲವಿತ್ತು.ರಜಾ ದಿನವೇ ಬಂದಿತ್ತು. ನಾವೆಲ್ಲರೂ ನನ್ನ ಅಜ್ಜನ ಮನೆಯಲ್ಲಿದ್ದೆವು. ಹೆಚ್ಚಿನ ಮೊಮ್ಮಕ್ಕಳೆಲ್ಲರೂ ಸೇರಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಸಿ ಮಡಿಕೆಯ ಮೇಲೆ ಬರೆದ ಚಿತ್ತಾರ

ನೆನ್ನೆ ಸ್ಟಾನ್ಫರ್ಡ್ ರೇಡಿಯೋದಲ್ಲಿ ’ಇಟ್ಸ್ ಡಿಫ್’ ಶೋ ಕೇಳುತ್ತಾ ಬರುತ್ತಿದ್ದೆ. ಮಾನವ ಪ್ರಯತ್ನ ಮತ್ತೆ ಯಶಸ್ಸು ಸಿಗುವಲ್ಲಿ ಅದೃಷ್ಟದ ಪಾತ್ರ - ಇವುಗಳ ಬಗ್ಗೆ ಚೆನ್ನಾಗಿ ಮಾತುಕತೆ ನಡೆಯುತ್ತಿತ್ತು. ಆಗ ಕೇಳಿದ ಒಂದು ಹಳೇ ಕಥೆ - "ಮಾಡುವ ಕೆಲಸ ಸರಿಯಾಗಬೇಕಾದರೆ ಅದೃಷ್ಟ ಬೇಕೇ ಬೇಕು. ಹೇಗೆ? ನಾವು ಬತ್ತದ ಪೈರು ಬೆಳೀಬೇಕು ಅಂತಿಟ್ಕೊಳ್ಳಿ. ಮೊದಲು ನಮ್ಮದೇ ಆಗ ಜಮೀನಿರ್ಬೇಕು, ಅಥವಾ ಗುತ್ತಿಗೆ ತೊಗೊಬೇಕು. ಮತ್ತೆ ಅದನ್ನ ಉತ್ತು, ಬಿತ್ತು, ನಾಟಿ ಮಾಡಿ, ಕಳೆ ತೆಗೆದು ಎಲ್ಲಾ ಕೆಲಸ ಆಗಬೇಕಾದ ಸಮಯದಲ್ಲಿ ಮಾಡಬೇಕು. ಜೊತೆಗೆ ಸರಿಯಾದ ಸಮಯದಲ್ಲಿ ಮಳೆಯೂ ಬರಬೇಕು. ಈಗ ಮಳೆ ಸುರಿಯೋದು ನಮ್ಮ ಕೈಲಿದೆಯೇ? ಇಲ್ಲ. ಅದೇ ಅದೃಷ್ಟ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಸರಣಿ: 

ಮಲಯ ಮಾರುತ ಗಾನ

ಹೆಚ್ಚೇನೂ ಬರೆಯಲಾರೆ. ಆದರೆ ವಿಷ್ಣುವರ್ಧನ್ ನಟಿಸಿರುವ ಕೆಲವು ಹಾಡುಗಳನ್ನ ಈ ಸಂದರ್ಭದಲ್ಲಿ ಮತ್ತೆ ಕೇಳೋಣವೆನಿಸಿತು:

 

’ಮಲಯಮಾರುತ’ ಚಿತ್ರದಲ್ಲಿ ಮಲಯಮಾರುತ ರಾಗದಲ್ಲಿ ಅಳವಡಿಸಿರುವ ಹಾಡು:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನೆನಪಿನಾಳದಿ೦ದ......೯....ನೂರೊಂದು ನೆನಪು ಎದೆಯಾಳದಿಂದ,

"ನೂರೊಂದು ನೆನಪು ಎದೆಯಾಳದಿಂದ, ಹಾಡಾಗಿ ಬಂತು ಬಹು ದು:ಖದಿಂದ",  ನಿನ್ನೆ ಗಾನ ಗಾರುಡಿಗನ ಸಾವಿನ ಸುದ್ಧಿ ಕೇಳಿ ನೊಂದಿದ್ದ ಮನಕ್ಕೆ ಇಂದು ಅಭಿನವ ಭಾರ್ಗವನ ಸಾವಿನ ಸುದ್ಧಿ ಬರಸಿಡಿಲಿನಂತೆ ಎರಗಿದೆ.  ಮನಸ್ಸು ಮೂಕವಾಗಿದೆ, ಕಣ್ಗಳು ಮಬ್ಬಾಗಿವೆ, ಆ ನೋವ ಬಣ್ಣಿಸಲು ಪದಗಳು ಸಾಲದಾಗಿವೆ.  ಇಂದು ನಮ್ಮನ್ನಗಲಿದ ನಟ ವಿಷ್ಣುವರ್ಧನ್ ನನ್ನ ಜೀವನದಲ್ಲಿ ನಡೆದ ಬಹುತೇಕ ಘಟನೆಗಳಿಗೆ ತಮ್ಮ ಸಿನಿಮಾಗಳಲ್ಲಿ ಜೀವ ತುಂಬಿ ನಾಯಕನಾಗಿದ್ದವರು, ಸೋಲುತ್ತಿದ್ದ ನನ್ನ ಮನಸ್ಸಿಗೆ, ನಂದಿ ಹೋಗುತ್ತಿದ್ದ ಆತ್ಮ ವಿಶ್ವಾಸಕ್ಕೆ ಹೊಸ ಭರವಸೆಯನ್ನು ತುಂಬಿದ್ದವರು.  ಬಾಲ್ಯದಲ್ಲಿ ಅಪ್ಪ ಅವರ ರಾಮಾಚಾರಿ ಪಾತ್ರದಿಂದ ತುಂಬಾ ಆಕರ್ಷಿತರಾಗಿ "ನಾಗರಹಾವು" ಚಿತ್ರವನ್ನು ನಾಲ್ಕಾರು ಸಲ ನೋಡಿ, ನನ್ನನ್ನೂ ಜೊತೆಗೆ ಕರೆದೊಯ್ದಿದ್ದರು.  ಆ ಕಂಗಳ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನಿಮ್ಮನ್ನು ಕಂಡ ಆ ಮೂರು ಘಟನೆಗಳು...

ಅರಮನೆ ಮೈದಾನನದಲ್ಲಿ ಕನ್ನಡವೇ ಸತ್ಯ ಕಾರ್ಯಕ್ರಮ... ಮೂವರು ಸ್ನೇಹಿತರೊಂದಿಗೆ ಸಂಜೆ ನಾಲ್ಕು ಘಂಟೆಗೆ ಹೋದಾಗ ಆಗಲೇ ಅಲ್ಲಿ ಮೈದಾನ ತುಂಬಿತ್ತು... ಹಾಗೂ ಹೀಗೂ ಕಷ್ಟ ಪಟ್ಟು ಜನರ ಮದ್ಯೆ ತೂರಿಕೊಂಡು ಒಂದೆಡೆ ಇದ್ದ ಲೇಸರ್ ಪ್ರೊಜೆಕ್ಟ್ ಆಗ್ತಾ ಇದ್ದ ಸ್ಕ್ರೀನಿನ ಹತ್ತಿರ ಹೋಗಿ ಕೂತೆ...ಸಂಜೆ ಆರಕ್ಕೆ ಕಾರ್ಯಕ್ರಮ ಶುರುವಾಯಿತು.. ಸತತ ನಾಲ್ಕು ಘಂಟೆಗಳ ಕಾಲ ಕೈಮೇಲೆ ನಿಂತ ರೋಮ ಕಾರ್ಯಕ್ರಮ ಮುಗಿದು ಅಲ್ಲಿಂದ ಅದೇ ಗುಂಗಿನಲ್ಲಿ ಅರಮನೆ ಮೈದಾನದಿಂದ ಮತ್ತೀಕೆರೆಯಲ್ಲಿನ ಮನೆಯವರೆಗೂ ನಡೆದುಕೊಂಡು ಹೋಗಿ ಮನೆ ಸೇರುವವರೆಗೂ ನಿಂತ ರೋಮ ಮಲಗಿರಲಿಲ್ಲ....ರೆ ರೆ ರೇ...ರೆರೆ ರ ರಾ... ಅಂತ... ಅಂದು  ಹತ್ತು ಘಂಟೆಯಾದರು ಸ್ವಲ್ಪವೂ ದಣಿಯವರಿಯದೆ  once more   ಅಂತೇಳಿ ಜನ ಕೇಳಿದಷ್ಟು ಸಲವೂ ಹಾಡುತ್ತಿದ್ದಿರಿ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ...

(ತುಂಬ ದಿನಗಳ ಹಿಂದೆ ಬರೆದು ಮರೆತ ಬರಹ ಇದು. ಥೇಟ್‌ ಕಟ್ಟಿಟ್ಟು ಮರೆತ ಕಾಣಿಕೆಯಂತೆ. ಊರು ಬಿಟ್ಟು ಬಂದವರಿಗೆ, ಪ್ರೀತಿಯ ಜೀವಗಳನ್ನು ದೂರದಲ್ಲಿ ಬಿಟ್ಟು ತಪಿಸುತ್ತಿರುವ ಎಲ್ಲರಿಗೂ ಹೊಸ ವರ್ಷದ ಸಂದರ್ಭಕ್ಕೆಂದು ಇದನ್ನು ಅರ್ಪಿಸುತ್ತಿದ್ದೇನೆ.)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ’

ಬೆಳೆಯುತ್ತ ಬೆಳೆಯುತ್ತ ನಾವು ಬಾಲ್ಯವನ್ನೇ ಮರೆಯುತ್ತೇವೆ.

ಏಕೋ ಇವತ್ತು ಈ ಭಾವನೆ ಬಲವಾಗಿ ಕಾಡತೊಡಗಿದೆ. ಚಿಕ್ಕವರಿದ್ದಾಗ ಬೇಗ ಬೇಗ ದೊಡ್ಡವರಾಗಬೇಕು ಎಂದು ಹಂಬಲಿಸುತ್ತೇವೆ. ಬೆಳೆದು, ಜವಾಬ್ದಾರಿಗಳು ಹೆಗಲಿಗೇರಿದಾಗ ಬಾಲ್ಯ ಪ್ರಿಯವಾಗತೊಡಗುತ್ತದೆ. ಕಳೆದುಕೊಂಡಿದ್ದಕ್ಕಾಗಿ, ಇಲ್ಲದಿರುವುದಕ್ಕಾಗಿ ಹಂಬಲಿಸುವುದು ಮನುಷ್ಯನ ಜೊತೆಗೇ ಬೆಳೆದುಬಂದ ಗುಣವಿರಬೇಕು.

ಅದಕ್ಕೆಂದೇ ಬಾಲ್ಯ ಒಂದು ಶಾಶ್ವತ ನೆನಪು.

ಬಾಲ್ಯದ ಎಲ್ಲ ನೆನಪುಗಳೂ ಸುಂದರ ಎಂದು ಹೇಳಲಾಗದು. ಆದರೂ, ಹಲವಾರು ಕಾರಣಗಳಿಗಾಗಿ ಅದು ಪ್ರಿಯವೇ. ತೀರ ದುಃಸ್ಥಿತಿ ಎದುರಿಸಿದವರನ್ನು ಬಿಟ್ಟರೆ, ಬಹುತೇಕ ಜನರ ಪಾಲಿಗೆ ಬಾಲ್ಯದ ನೆನಪೇ ಸುಂದರ. ಈಗಿನ ಸೌಲಭ್ಯಗಳ್ಯಾವವೂ ಇದ್ದಿರದಿದ್ದರೂ ನಮ್ಮ ಬಾಲ್ಯ ನಮಗೆ ಸೊಗಸೇ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.9 (11 votes)
To prevent automated spam submissions leave this field empty.

ಮಳೆ ಎಂದರೆ ಬಾಲ್ಯದ ನೆನಪು ಕಣಾ...

ಮುಂಗಾರು ಶುರುವಾಗಿದೆ. ಜೊತೆಗೆ, ನೆನಪುಗಳ ಮಳೆಯೂ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೆನಪಿನ ಬುತ್ತಿಯಿಂದ ಒಂದಷ್ಟು-೩ :)

ಪ್ರಥಮ "ಪಿಯುಸಿ"ಯ ಪ್ರಥಮ ದಿನ
*********************

ಕಾಲೇಜಿನ ಪ್ರಥಮ ದಿನ. ಬೇಗನೆ ಎದ್ದಿದ್ದೆ. ಇನ್ನೇನು ಸಮಸ್ತ್ರ ಆ ಕೆಂಪು ಲಂಗ, ರವಿಕೆ ಹೋಗಿ ನೀಲಿ ಬಿಳಿ ಬಣ್ಣದ ಚೂಡಿದಾರದಲ್ಲಿ ನಾನು ರೆಡಿ. ಎರಡು ಜಡೆ ಕಟ್ಟೋದು, ಅಮ್ಮ ಕಟ್ಟುತ್ತಿರಬೇಕಾದರೆ ಸರಿ ಕೂತ್ಕೊ, ಎಂದು ಕುಟ್ಟೋದು, ಎಲ್ಲದಕ್ಕೂ ಪೂರ್ಣವಿರಾಮ. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪಿನ ಬುತ್ತಿಯಿಂದ ಒಂದಷ್ಟು....-೧

ಪಿಯಾನೋ "ಢಮ್" ಎಂದಾಗ!!
***************************

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

(ಮರ್ಕಟ )ನನ್ನೀ ಮನಸ್ಸು

ತಣ್ಣನೆಯ ತಿಳಿ ಗಾಳಿ ಬೀಸುತ್ತಿತ್ತು , ಆಗಸದಲ್ಲಿ ಸೂರ್ಯ ನಿಧಾನವಾಗಿ ತನ್ನ ಮನೆಯತ್ತ ಹೆಜ್ಜೆಹಾಕತೊಡಗಿದ್ದ ,ಅವನಿಗೂ ಪಾಪ ಕತ್ತಲಾಗಿರಬೇಕು ಕೆಂಪು ಬಣ್ಣದ ಟಾರ್ಚ್ ಹಿಡಿದಿದ್ದ ಅನ್ನಿಸುತ್ತೆ ಅದಕ್ಕೇನೋ ಹೋಗೋ ದಾರಿಯಲೆಲ್ಲ ಕೆಮ್ಪನ್ನೇ ಚೆಲ್ಲಿದ ಹಾಗಿತ್ತು .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅವಳಿಲ್ಲದ ಐದು ವರ್ಷ

ಎಲ್ಲಿ ಹೋದೆಯೇ ಸೌಮ್ಯ ಹೆಸರಿನ ಸೌಂದರ್ಯವತಿ?

ನೀನಿಲ್ಲದ ಐದು ವರ್ಷ ಇಲ್ಲಿ ಏನೇನು ಬದಲಾವಣೆಯಾಗಿದೆ ಗೊತ್ತೆ? ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದಿದೆ. ನೀನು ಆ ಪರಿ ಬೆಂಬಲಿಸಿದ್ದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಕಾವೇರಿ ಗಲಾಟೆಯಾಗಿಲ್ಲ. ಆಲಮಟ್ಟಿ ಏಕೋ ಉಕ್ಕಿಉಕ್ಕಿ ಹರಿದಿದೆ. ರಾಜ್ಯ ಮೊದಲಿಗಿಂತ ಸದೃಢವಾಗಿದೆ. ಹಣದುಬ್ಬರ ಇಳಿದಿದೆ. ಆರ್ಥಿಕ ಹಿಂಜರಿತವನ್ನೂ ಮೆಟ್ಟಿ ನಿಲ್ಲಬಲ್ಲ ವಿಶ್ವಾಸ ವ್ಯಕ್ತವಾಗಿದೆ. ಇದನ್ನೆಲ್ಲ ನೋಡಲು ನೀನಿರಬೇಕಿತ್ತೇ ಸೌಂದರ್ಯವತಿ.

ಎಂಥಾ ವಿಚಿತ್ರ ನೋಡು, ನೀನು ಅತ್ತ ಹೋದ ಐದು ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಎಪ್ಪತ್ತೈದು ತುಂಬಿತು. ನಿನ್ನ ಅನುಪಸ್ಥಿತಿಯಲ್ಲಿ ಸಡಗರಪಡಬೇಕಾದ ದೌರ್ಭಾಗ್ಯ ಕನ್ನಡಿಗರದು. ನಿನ್ನನ್ನು ಆ ಪರಿ ಮೆರೆಸಿದ ಆಂಧ್ರಪ್ರದೇಶದಲ್ಲಿ ಚಿರಂಜೀವಿ ಹೊಸ ಪಕ್ಷ ಶುರು ಮಾಡಿ ಚುನಾವಣೆಗೆ ನಿಂತಿದ್ದಾರೆ. ನೀನಿದ್ದರೆ ಪ್ರಜಾರಾಜ್ಯಂ ಕಡೆ ವಾಲುತ್ತಿದ್ದೆಯೇನೋ. ಯಾರಿಗೆ ಗೊತ್ತು? ಆಂಧ್ರದಲ್ಲಿ ಚುನಾವಣೆಗೆ ನಿಂತಿದ್ದರೂ ಗೆದ್ದು ಬರಬಲ್ಲ ಜನಪ್ರಿಯತೆ, ಆಕರ್ಷಣೆ ನಿನಗಿತ್ತು. ನಿನ್ನೊಲುಮೆಯಿಂದ ಚಿರುಗೆ ಇನ್ನಷ್ಟು ಸೀಟ್‌ಗಳು ಸಿಗುವ ಸಾಧ್ಯತೆಗಳೂ ಇದ್ದವು. ಎಷ್ಟೊಂದು ಜನ ನಿನ್ನನ್ನು ಮಿಸ್ ಮಾಡಿಕೊಳ್ತಿದ್ದಾರೆ ಗೊತ್ತೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಟಿ ಸೌಂದರ್ಯಳ ಪುಣ್ಯತಿಥಿ...

ನಟಿ ಸೌಂದರ್ಯ ವಿಮಾನ ದುರಂತದಲ್ಲಿ ಮರಣ ಹೊಂದಿ (೧೭ ಏಪ್ರಿಲ್ ೨೦೦೪) ಇಂದಿಗೆ ಐದು ವರುಷಗಳಾದುವು.
ಆಕೆಯನ್ನೂ ನಾವಿಂದು ಸ್ಮರಿಸೋಣ.
ಆಕೆಯಾತ್ಮದ ಶಾಂತಿಗಾಗಿ ಪ್ರಾರ್ಥಿಸೋಣ.
ಆಕೆ ಬದುಕಿದ್ದಿದ್ದರೆ ಇನ್ನೂ ಎಷ್ಟೊಂದು ಚಿತ್ರಗಳಲ್ಲಿ ನಟಿಸುತ್ತಿದ್ದರೇನೋ...
ಇಂತಹ ವೃತ್ತಿ ನಿರತರಾಗಿರುವ ಕಲಾವಿದರನ್ನು ಕಳೆದು ಕೊಳ್ಳುವುದರಿಂದ ಕಲಾಭಿಮಾನಿಗಳಾಗುವ ನಷ್ಟ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆ ಹಾಡು

ಯಾವುದೇ ವ್ಯಕ್ತಿ ಯನ್ನು ಆತ ಸತ್ತ ಮೇಲೆ ಗುರುತಿಸುವುದು ಅವ ಮಾಡಿದ ಕೆಲಸ ಹೊಗಳುವುದು ನಮ್ಮ ಭಾರತದೇಶ ಪಾಲಿಸಿಕೊಂಡು ಬಂದ ಒಂದು ಸಂಪ್ರದಾಯ. ಆದರೆ ಕೆಲವು ಕಲಾವಿದರಿಗೆ ಆ ಭಾಗ್ಯ ಸಹ ಸಿಗುವುದಿಲ್ಲ ಉದಾಹರಣೆಗೆ ಮೊನ್ನೆ ತೀರಿಕೊಂಡ ಸುಲೋಚನ ಅವರ ವಿಷಯ ತಗೊಳ್ಳಿ. ನಮ್ಮ ಕನ್ನಡ ಭಾಷೆಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರೆತೇನೆಂದರೆ ಮರೆಯಲಿ ಹ್ಯಾಂಗ...?

’ಬಿಸಿಲು ಬಲಿಯುತ್ತಿದೆ’

ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಅಂತಹ ಬೆಳವಣಿಗೆಗಳೇನೂ ಆಗಿಲ್ಲ ಅಂತ ಅಂದುಕೊಳ್ಳುತ್ತ ಸ್ಕೂಟಿ ಚಲಿಸುವಾಗ, ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕುರಿಗಳು

ಹಿಂದೆ..........
ಹಿಂದೆ ಗುರುವಿದ್ದ , ಮುಂದೆ ಗುರಿಯಿತ್ತು
ಸಾಗುತ್ತಿತ್ತು ವಿದ್ಯಾರ್ಥಿಗಳ ದಂಡು;

ಇಂದು..........
 ಹಿಂದೆ  ಗುರುವಿಲ್ಲ, ಮುಂದೆ ಗುರಿಯಿಲ್ಲ
ಸಾಗುತ್ತಿದೆ ರಣಹೇಡಿಗಳ ಹಿಂಡು.
..................... ಕುವೆಂಪು


ಕುರಿಗಳು ಸಾರ್ ಕುರಿಗಳು
ಸಾಗಿದ್ದೇ ಗುರಿಗಳು
ಇವನ ಬಾಲವ ಅವನು ಮೂಸುತ
ಅವನ ಬಾಲವ ಇವನು ಮೂಸುತ
ಮೂಸಿ ತಲೆ ತಗ್ಗಿಸಿ ಅಂಡಲೆಯುವ
                         ನಾವು ನೀವು
ಕುರಿಗಳು ಸಾರ್ ಕುರಿಗಳು
                   ಸಾಗಿದ್ದೇ ಗುರಿಗಳು!

.........................ನಿಸಾರ್ ಅಹ್ಮದ್  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲೇ ಇರು, ಹೇಗೇ ಇರು...

ಪ್ರೀತಿಯ ಗೆಳತಿ,

ತುಂಬ ಸ್ವಸ್ಥ ಮನಸ್ಸಿನಿಂದ ಕೂತು ಇದನ್ನು ಬರೆಯುತ್ತಿದ್ದೇನೆ. ಕಣ್ಣೀರು ಒರೆಸಿಕೊಂಡು ಓದು, ಇಲ್ಲದಿದ್ದರೆ ಕಣ್ಣು ಮಂಜಾಗಿ ಅಕ್ಷರಗಳು ಕಾಣದೆ ಹೋದಾವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೀನಿದ್ದೆ- ನೀನಿಲ್ಲ

ಗೆಳೆಯ ನನ್ನ ಕಣ್ರೆಪ್ಪೆ ಮುಚ್ಚುವ ಮುಂಚಿನ ಕ್ಷಣದಿ
ನೀನಿದ್ದೆ , ಕಣ್ತೆರೆದಾಗ ನಾ ಕಾಣಲಿಲ್ಲ ನಿನ್ನ

ತೀರದ ಎಡರುಗಳು ಬಂದೆರೆಗಿದಾಗ ರಕ್ಷ್ತೆಯಂತೆ
ನೀನಿದ್ದೆ, ಎಡರು ಮುಗಿದಾಗ ನೀ ಕಾಣಲಿಲ್ಲ

ಜಗವೆಲ್ಲ ಶತೃವಾಗಿ ಬೇಡೆನಿಸಿದಾಗ ಮಿತ್ರನಂತೆ
ನೀನಿದ್ದೆ, ಜಗದೆಲ್ಲರೂ ಮಿತ್ರರಾದಾಗ ನೀ ಹೋದೆ ಎಲ್ಲಿ

ಬಾಳೆಲ್ಲಾ ಕತ್ತಲ್ಲೆಯಾಗಿ ಕಣ್ ಕಾಣದಾಗ ಬೆಳಕಂತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲಿಂದಲೋ ಬಂದವರು

ಬೆಂಗಳೂರಿನ ಚಂದ್ರಾ ಲೇಔಟ್‌ ಬಡಾವಣೆಗೆ ಮನೆ ಬದಲಿಸಿದ ಪ್ರಾರಂಭದ ದಿನಗಳವು.

ಇಡೀ ದಿನ ಮನೆ ಸಾಮಾನುಗಳನ್ನು ಪ್ಯಾಕ್‌ ಮಾಡಿ, ಲಾರಿಗೆ ಹೇರಿಸಿ, ಇಳಿಸಿ, ಮತ್ತೆ ಜೋಡಿಸುವ ಕೆಲಸದಲ್ಲಿ ಹೈರಾಣಾಗಿದ್ದೆ. ಅದು ಕೇವಲ ದೈಹಿಕ ದಣಿವಲ್ಲ. ಪ್ರತಿಯೊಂದು ಸಲ ಮನೆ ಬದಲಿಸಿದಾಗಲೂ ಆಗುವ ಭಾವನಾತ್ಮಕ ತಾಕಲಾಟಗಳ ಸುಸ್ತದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯಾತ್ರೆ

ಜೀವನದ ಅರ್ಥವನ್ನರಸಿ
ಕವಲು ದಾರಿಯ ನಾಲ್ಕು ದಿನಗಳ
ಯಾತ್ರೆ ಮುಗಿದಾಗ ಸುಖದ
ಸೊನ್ನೆಯ ಜೊತೆಗೆ ಏಕಾಂಗಿ ನಾನು...

ಕಳೆದ ಬಾಲ್ಯದ ನೆನಪುಗಳು
ಮನದ ಕದ ತಟ್ಟುತಿರಲು
ಮರಳಿ ಬಾರದ ನಿನ್ನೆಗಳಿಗೆ
ವರ್ತಮಾನದೊಳು ಮರುಗಲೆಂತು?

ಯೌವ್ವನದ ಮೆಟ್ಟಿಲಲಿ ಹೆಜ್ಜೆಯಿತ್ತಾಗ
ಮಧು ಹೀರಿ ಹಾರುವ ದುಂಬಿಯಂತೆ
ಮನದೊಳಗೆ ಹೊಕ್ಕು, ಮುತ್ತನಿಟ್ಟವರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನೆ ಎಂಬ ಕನಸುಗಳ ಹುತ್ತ...

ಹೊರಗೆ ಲಾರಿಯವ ಹಾರ್ನ್‌ ಹಾಕಿದ.

’ಬಂದೆ ಮಾರಾಯಾ...’ ಎಂದು ಮನೆಯೊಳಗಿಂದ ಕೂಗು ಹಾಕಿ ಒಮ್ಮೆ ಮನೆಯನ್ನು ಸುಮ್ಮನೇ ನೋಡಿದೆ.

ಇಲ್ಲೇ ಅಲ್ಲವಾ ನಾವು, ಅಂದರೆ ರೇಖಾ ಮತ್ತು ನಾನು, ನೂರೆಂಟು ಕನಸುಗಳನ್ನು ಕಂಡಿದ್ದು. ಅದರಲ್ಲಿ ಕೆಲಸ ಬದಲಿಸುವ ಒಂದು ಕನಸು ನನಸಾಗಿತ್ತು. ಮಗಳು ಗೌರಿಗೆ ವಿಶೇಷ ಶಾಲೆ ಹುಡುಕುವ ಇನ್ನೊಂದು ಕನಸೂ ನೆರವೇರಿತ್ತು. ಉಳಿದವು ಕನಸಾಗಿಯೇ ಉಳಿದಿವೆ. ದಿನಾ ಹೊಸ ಭಾವನೆಗಳಿಗೆ ಕಾವು ಕೊಡುತ್ತಿವೆ.

ದಿಟ್ಟಿಸಿ ನೋಡಿದೆ. ಇಲ್ಲಿ ಹಾಕಿದ್ದ ದಿವಾನ್‌ ಮೇಲೆ ಕೂತು ಗೌರಿ ತನಗಿಷ್ಟವಾದ ಉದಯ ಟಿವಿಯವರ ಯು೨ ಟಿವಿ ನೋಡುತ್ತಿದ್ದುದು. ಇಲ್ಲೇ ಅಲ್ಲವಾ ಸಣ್ಣ ಮಗಳು ನಿಧಿ ಆಟವಾಡುತ್ತಿದ್ದುದು. ಈ ಚಿಕ್ಕ ಗೂಡಿನಲ್ಲಿ ಕೂತು ನಮ್ಮತ್ತ ನೋಡಿ ಕೇಕೆ ಹಾಕುತ್ತಿದ್ದುದು. ನಾವು ದಿನಾ ಮುಂಜಾನೆಯ ವಾಕ್‌ ಮುಗಿಸಿ ಇಲ್ಲೇ ಅಲ್ಲವಾ ಚಹ ಕುಡಿಯುತ್ತಿದ್ದುದು. ದೊಡ್ಡ ಬೆಡ್‌ ರೂಮ್‌ ತುಂಬ ಹುಡುಗಿಯರಿಬ್ಬರೂ ಹರವಿ ಹಾಕುತ್ತಿದ್ದ ಆಟಿಕೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಹಾಸಿಗೆ ಎಳೆದಾಡಿ ಅಸ್ತವ್ಯಸ್ತ ಮಾಡಿರುತ್ತಿದ್ದರು. ಛಕ್ಕನೇ ಯಾರಾದರೂ ಬೆಡ್‌ ರೂಮಿಗೆ ನುಗ್ಗಿದರೆ ಮುಸಿಮುಸಿ ನಗುತ್ತ ಹೊರಗೆ ಹೋಗಬೇಕು, ಹಾಗೆ ಮಾಡಿರುತ್ತಿದ್ದರು ಹಾಸಿಗೆಯನ್ನು. ಅರೆಕ್ಷಣ ಅವನ್ನೆಲ್ಲ ಮತ್ತೆ ಕಣ್ಣು ತುಂಬಿಕೊಂಡೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕ್ರಿಸ್ತಜಯಂತಿಯ ಮೆಲುಕು


"ದ್ಯಾವರಿಗೆ ರಾಜರ ಪಟ್ಟ ಕಟ್ಟಿ ಊರು ತುಂಬಾ ಮೆರವಣಿಗೆ ಮಾಡಿದ್ದಾಯ್ತು, ಇನ್ನು ಒಂದು ತಿಂಗಳಿಗೆ ಸ್ವಾಮಿ ಹುಟ್ಟೋ ಹಬ್ಬ, ನಾಳೆಯಿಂದ ಕೊರೆತ ಒಸಿ ಜಾಸ್ತಿ" ಇವು ನಮ್ಮ ತಾತನ ಮಾತುಗಳನ್ನು ಕೇಳಿದಾಗ "ಸ್ವಾಮಿ ಹುಟ್ಟೋದು" ಅನ್ನೋ ಪದ ಮನಸ್ಸಿಗೆ ಲಗತ್ತಾಗಿ ಓ ಅದು ಕ್ರಿಸ್ಮಸ್ ಅಲ್ಲವೇ ಎಂಬುದು ಹೊಳೆದು ಮನ ಪ್ರಫುಲ್ಲವಾಗುತ್ತದೆ. ಈ ಕ್ರಿಸ್ಮಸ್ ಅನ್ನೋ ಪದವೇ ವಿಶ್ವದೆಲ್ಲೆಡೆ ಎಲ್ಲರ ಮನಸಿನಲ್ಲೂ ಸಂತಸದ ಭಾವ ಮೂಡಿಸುತ್ತದೆ. 

ಕ್ರಿಸ್ಮಸ್ಸು ಅಂತ ನಾವು ಹೇಳೋ ಪದ ತಾತನ ಬಾಯಲ್ಲಿ ಕಿಸ್‌ಮಿಸ್ಸು ಆಗುವಾಗ ಮರೆಯಲ್ಲೇ ಕಿಸಕ್ಕನೆ ನಕ್ಕು ರಾತ್ರಿ ಅಮ್ಮನೊಟ್ಟಿಗೆ ಈ ಮಾತು ಹೇಳುತ್ತಾ ನಗುತ್ತಿದ್ದುದು ಕನಸೆಂಬಂತೆ ಕ್ರಿಸ್ಮಸ್ ಬಂದ ಕೂಡಲೇ ಮನಸಿನಲ್ಲಿ ಹಾಯ್ದುಹೋಗುತ್ತದೆ.

ಅದು ಸರಿ ಕ್ರಿಸ್ಮಸ್ಸಿಗೆ ಅಮ್ಮ ಅದೇನೆಲ್ಲ ತಿಂಡಿಗಳನ್ನು ಮಾಡುತ್ತಿದ್ದರಲ್ಲ. ಶಾಲೆ ಕಳೆದು ಮನೆಗೆ ಬರುವಷ್ಟರಲ್ಲಿ ನಾನಾ ತರದ ತಿಂಡಿಗಳನ್ನು ಮಾಡಿ ಡಬ್ಬಿಗಳಿಗೆ ತುಂಬಿ ಅಟ್ಟಕ್ಕೇರಿಸಿ, ಏನೂ ನಡೆದಿಲ್ಲವೆಂಬಂತೆ ಮನೆಯನ್ನು ಒಪ್ಪ ಓರಣವಾಗಿಟ್ಟಿರುತ್ತಿದ್ದರಲ್ಲ. ಹಬ್ಬದ ದಿನವಷ್ಟೇ ಅಷ್ಟೂ ತಿಂಡಿಗಳು ಹೊರಬರುತ್ತಿದ್ದವು. ಕಜ್ಜಾಯ, ಕರ್ಚಿಕಾಯಿ, ಚಕ್ಕುಲಿ, ಕಲ್‌ಕಲ್, ರೋಸ್‌ ಕುಕ್ಕೀಸ್, ಶಕ್ಕರ್‍ ಪೊಳೆಯಂಥ ಬಿಸ್ಕತ್ತು, ರವೆಉಂಡೆ, ನಿಪ್ಪಟ್ಟು, ಕೋಡುಬಳೆ, ಕಾರಸೇವೆ ಇನ್ನೂ ಏನೇನೋ? ನೆರೆಹೊರೆಯವರಿಗೆಲ್ಲ ಅವನ್ನು ಹಂಚಿದಾಗ ಅಪರೂಪದ ತಿಂಡಿಗಳನ್ನು ಕಂಡ ಅವರ ಮುಖಗಳು ಅರಳುವುದನ್ನು ನೋಡುವುದೇ ಒಂದು ಚೆಂದವಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮತ್ತೆ ಮತ್ತೆ ನೆನಪಾಗುವ ಶಂಕರ್ ನಾಗ್

ಮೊನ್ನೆ ಭಾನುವಾರ, ಅಂದರೆ ನವೆಂಬರ್ ೯ ರಂದು, ಶಂಕರ್ ನಾಗ್ ಅವರ ನೆನಪಾಯಿತು.

ಯಾಕೆ ಅಂದರೆ ನವೆಂಬರ್ ೯ ರಂದು ಅವರ ಜನ್ಮದಿನ. ೧೯೫೪ ನವೆಂಬರ್ ೯ ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು.

ಅವರ ಬಗ್ಗೆ ಈಗಾಗಲೇ ಇಲ್ಲಿ ಬರೆದಿದ್ದೇನೆ.

ಏನಪ್ಪ ಇವನು ಶಂಕರ್ ನಾಗ್ ಹುಟ್ಟಿದ ದಿನ ಮತ್ತು ಅವರು ತೀರಿಹೋದ ದಿನ ಮಾತ್ರ ಇವರನ್ನು ನೆನಪಿಸಿಕೊಳ್ಳುತ್ತಾನೆ ಅಂತ ತಿಳಿಯಬೇಡಿ. ಆಗಾಗ ಶಂಕರ್ ನಾಗ್ ನೆನಪಾಗ್ತಾ ಇರ್ತಾರೆ.

ಶಂಕರ್ ನಾಗ್ ಒಬ್ಬ ಮಹಾನ್ ಕಲಾವಿದ, ಅದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೇ ಮನುಷ್ಯ.

ಶಂಕರ್ ನಾಗ್ ಇಳಯರಾಜ ಜೊತೆಗೂಡಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎದೆಯೊಳಗೆ ಶೂನ್ಯ ಹೊಕ್ಕಾಗ...

ನೆನಪುಗಳಷ್ಟೇ ಕಾಡುತ್ತೇವೆಂದುಕೊಂಡಿದ್ದೆ

ಕನಸುಗಳೂ ಕಾಡುತ್ತವೆ
ಸೋತ ಕನಸಿನ ವಿಷಾದ ಕೂಡ

ಮರೆತೆ ಅಂದುಕೊಂಡಿದ್ದು
ಊರಾಚೆ ಬಿಟ್ಟು ಬಂದ ಬೆಕ್ಕಿನಂತೆ
ವಾಪಸ್‌ ಬರುತ್ತದೆ
ಹಾಸಿಗೆಯಂಚಿನಲ್ಲಿ ಕೂತು ಒರಲುತ್ತದೆ

ಅಪರಿಚಿತ ಊರಿನ ಪೇಟೆಬೀದಿಯಲ್ಲಿ
ಆಕೆ ಗಕ್ಕನೇ ಎದುರಾಗುತ್ತಾಳೆ
ಸುಮ್ಮನೇ ನಿಂತವಳ ಮುಖದಲ್ಲೇನಿತ್ತು?
ಗೊಂದಲ? ವಿಷಾದ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆರದ ದೀಪ

ಎಷ್ಟೋ ವರ್ಷಗಳ ಹಿಂದಿನ ಮಾತು.

ಅವತ್ತು ಮೇಜಿನ ಮೇಲಿಟ್ಟಿದ್ದ ಅವನ ಡೈರಿ ತೆಗೆದು ನೋಡುತ್ತಿದ್ದೆ.

ತೆಗೆದ ತಕ್ಷಣ ಯಾವುದೋ ಸಡುವಿನ ಪುಟದಲ್ಲಿ ಕಂಡದ್ದು ಒಂದು ಕವಿತೆ.

ಪದ್ಯದ ಹೆಸರಲ್ಲೇ ಒಂದು ಹುಡುಗಿ ಕಂಡಳು! ಆಸಕ್ತಿಯಿಂದ ಓದತೊಡಗಿದೆನೆಂಬ ನೆನಪು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಒಂಚೂರು ಕೋಗಿಲೆ

ಏನು ಹೇಳಲಿ ಮನವೇ

ತಿಳಿಯದು, ಹೊಳೆಯದು
ತಿಳಿದು ಹೊಳೆದರೂ ಸುಮ್ಮನಿರದು
ಹೊಳೆಯ ಸುಳಿಯಂತೆ
ತಿರುಗುತಿವೆ ನೆನಪು

ಸೆಳೆಯುತಿದೆ ಒಳಗೆ
ಬಲು ಆಳಕ್ಕೆ
ಅರೆಗತ್ತಲೆಯ ಮೋಡಿಗೆ
ತಿರುಗಿ ಬಾರದ ಹಾದಿಗೆ

ಬಯಕೆ, ಬಿನ್ನಾಣ, ನೆನಪು, ಕನಸು
ಸಿಹಿ, ಕಹಿ, ಒಗರು, ರುಚಿ
ಎಲ್ಲ ಬಲ್ಲೆಯೇನೆ? ಕೇಳುತಿಹೆ ನೀನು
ಏನು ಹೇಳಲಿ ನಾನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಣ್ಣೇ ಮುಚ್ಚೇ, ಕಾಡಬೇಡ್ವೇ...

’ಎಂಥಾ ಹದವಿತ್ತೇ ಹರಯಕೆ ಏನು ಮುದವಿತ್ತೆ...’

ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆ ತೂರಿ ಬರುತ್ತಿದೆ.

ಎಷ್ಟು ಸಾರಿ ಕೇಳಿದ್ದೇನೋ ಗೊತ್ತಿಲ್ಲ. ಆದರೂ ಮನಸ್ಸು ಮತ್ತೆ ಮತ್ತೆ ಅತ್ತಲೇ ಹೊರಳುತ್ತದೆ.

ಕರೆಂಟ್‌ ಹೋದ ಮೇಲೆಯೇ ಸಿಡಿ ಬಂದಾಗಿದ್ದು. ಆದರೆ, ಮನಸ್ಸು ಗುನುಗಲು ಶುರು ಮಾಡಿತು. ಮತ್ತದೇ ಸಾಲುಗಳು ’ಎಂಥಾ ಹದವಿತ್ತೇ, ಹರಯಕೆ ಏನು ಮುದವಿತ್ತೇ...’.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಚ್ಚಳವಿಲ್ಲದ ಪೆನ್ನು

ತುಂಬ ದಿನವಾಗಿತ್ತು ಪೆನ್ನು ಹೊರ ತೆಗೆದು ಬರೆಯಲು ಕೂತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇಬ್ಬನಿ ಬಿದ್ದ ಭೂಮಿಯಲ್ಲಿ ಜಗ್ಗಲಗಿ ಕಲರವ

ಕೊಂಚ ಸಮಯ ಜತೆಗಿದ್ದು ದೂರ ಹೋದ ಸಂಗಾತಿಯೆ,

ಎಲ್ಲೋ ಇರುವ, ಹೇಗೋ ಬದುಕುತ್ತಿರುವ ನಿನಗೆ ಕಾಲೇಜಿನ ಕ್ರೀಡಾಂಗಣಕ್ಕೆ ಉತ್ಸವದ ಪುಳಕ ಬಂದಿದ್ದು ನೆನಪಿದೆಯೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೆಹಲಿ ದೂದ ಹಾಗೂ ನೆನಪುಗಳು!

ಕಾಡಬೆಳದಿಂಗಳಿಗೆ ಪ್ರಶಸ್ತಿ ಬಂದ ವಿಷಯ ಹರಿ ಬರೆದಿದ್ರು. ಅದನ್ನ ಓದ್ದೆ. ಅದ್ರಲ್ಲಿ ದಟ್ಸ್ ಕನ್ನಡದಲ್ಲಿದ್ದ ವರದಿಗೂ ಕೊಂಡಿ ಹಾಕಿದ್ರು. ನಾನೂ ಹಿನ್ನಲೆ ಗಾಯನಕ್ಕೆ ಯಾರಿಗೆ ಬಂದಿದೆ ಈ ಸರ್ತಿ ಪ್ರಶಸ್ತಿ ಅಂತ ನೋಡ್ದೆ. ಪಂಜಾಬಿ ಸಿನೆಮಾದಲ್ಲಿ ಗುರುದಾಸ್ ಮಾನ್ ಗೆ ಪ್ರಶಸ್ತಿ ಬಂದಿದೆ! ಆಗ ಹಿಂದೆ ನಮಗೆಲ್ಲ ಟಿ.ವಿ. ಅಂದ್ರೆ ಬರೀ ಹಿಂದಿ ದೂರದರ್ಶನ ಆಗಿದ್ದ ಕಾಲ ನೆನಪಾಯ್ತು. ನಮ್ಮೂರಲ್ಲಿ ಟಿ.ವಿ. ಸ್ಟೇಷನ್ ಶುರುವಾದ ಹೊಸತು. ದಿನಾ ಬೆಳಗೂ ಸಂಜೆ ಬರೀ ಹಿಂದಿ ಅಷ್ಟೆ. ಭಾನುವಾರ ಮಧ್ಯಾಹ್ನ ಒಂದು ಪ್ರಾದೇಶಿಕ ಚಿತ್ರ ಅಂತ ಹಾಕೋರು. ಕನ್ನಡದ ಸರತಿ ಎರಡೋ ಮೂರೋ ತಿಂಗಳಿಗೆ ಒಮ್ಮೆ. ಆದ್ರೆ, ಅದು ಹೇಗೋ ನಮ್ಮ ಮನೆಗೆ ಟಿ.ವಿ.ತಂದ ದಿನವೇ ಕನ್ನಡ ಚಿತ್ರ ಸಂಧ್ಯಾರಾಗ ಬಂದಿತ್ತು. ಅದ್ದ್ಯಾವ್ದೋ ಶ್ರೀವಾಸ್ತವ ಅನ್ನೋ ನಿರ್ವಾಹಕಿ "ಅಬ್ ದೇಖಿಯೇ ಕನ್ನಡ್ ಚಿತ್ರ್ ಸಾಂಧ್ಯ್ ರಾಗ್" ಅಂತ ತಪ್ಪು ತಪ್ಪಾಗಿ ಉಲಿದಿದ್ದಳು. ಈ ಪ್ರಾದೇಶಿಕ ಚಿತ್ರದ ಸಾಲಿನಲ್ಲೇ ಎಷ್ಟೋ ಒಳ್ಳೆ ಮಲೆಯಾಳಮ್, ತಮಿಳು ಚಿತ್ರಗಳನ್ನೂ ನೋಡಿದ ನೆನಪಿದೆ.

ಇದಲ್ಲದೆ, ಟಿ.ವಿ.ಯಲ್ಲಿ ಕನ್ನಡ ಏನಾರೂ ಕೇಳ್ಬೇಕಂತಿದ್ರೆ, ಎರಡುವಾರಕ್ಕೊಂದು ಸಲ ರಾತ್ರಿ ೧೦:೧೦ ಕ್ಕೋ ಏನೋ ( ಅದ್ಯಾಕೆ ಈ ಸಮಯ ಇಟ್ಕೊಂಡಿದ್ರೋ ಗೊತ್ತಿಲ್ಲ, ಬೇರೆ ಭಾಷೆಯವರಿಗೆ ತಾನೇ, ತಡ ಆದ್ರೂ ಕಾಯ್ತಾರೆ ಅಂತಿರ್ಬೋದು), ಚಿತ್ರಮಾಲಾ ಅಂತ ಒಂದು ಕಾರ್ಯಕ್ರಮ. ಅದರಲ್ಲಿ ಹಿಂದಿ ಬಿಟ್ಟು ಬೇರೆಬೇರೆ ಭಾಷೆಯ ಚಿತ್ರಗೀತೆ ಹಾಕೋರು. ಒಂದು ತರಹದಲ್ಲಿ ಈ ಚಿತ್ರಗೀತೆ ಕಾರ್ಯಕ್ರಮಕ್ಕೇ ಪರವಾಗಿಲ್ಲ, ಸ್ಪೆಶಲ್ ಟ್ರೀಟ್‍ಮೆಂಟ್ ಅಂದ್ಕೋಬಹುದು. ಯಾಕಂದ್ರೆ, ತಿಂಗಳಿಗೋ ಎರಡು ತಿಂಗಳಿಗೋ ಬರ್ತಿದ್ದ ಶಾಸ್ತ್ರೀಯ ಸಂಗೀತ ಬರ್ತಾ ಇದ್ದದ್ದು ಇನ್ನೂ ತಡವಾಗಿ - ರಾತ್ರಿ ಹತ್ತೂ ಐವತ್ತಕ್ಕೋ ಏನೋ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು

ಮೊನ್ನೆ ಮಡಿಕೇರಿಯಲ್ಲಿ ನಡೆದ ಹೊಗೇನಕಲ್ ಧರಣಿಯ ಬಗ್ಗೆ ಬರೆಯುತ್ತ ವಿಜಯ ಕರ್ನಾಟಕದಲ್ಲಿ ಒಂದು ವಾಕ್ಯ
"ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಹೋರಾಟದಲ್ಲಿ ಒಂದು ನಾಯಕರಿಲ್ಲದ ಅನಾಥ ಪ್ರಜ್ನೆ ಕಾಡಿತು."

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಪಾಡುವ ತಾಯಿಯರು

ಅವನು ಆ ಊರಿನಲ್ಲಿ ಕಾಲಿಟ್ಟು ಹೆಚ್ಚು ಕಾಲ ಆಗಿರಲಿಲ್ಲ. ಒಂದೆರಡು ತಿಂಗಳಿರಬಹುದು. ಅಥವಾ ಮೂರುನಾಕೇ ಇದ್ದಿರಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪು

ಮನದ ತಟದಿ,
ಬಡಿವ ನಿನ್ನ ನೆನಪಿನಲೆಗಳು,
ಬಿಡದೆ ನನ್ನನು ಕಾಡಿ,
ಮಾಡುತಿವೆ ಅದೇನೋ ಮೋಡಿ..

ಹೊತ್ತು ತಂದ,
ಮುತ್ತು, ಚಿಪ್ಪು, ರತ್ನಗಳ,
ಎದೆಯ ತುಂಬೆಲ್ಲಾ ಹರಡಿ..
ಮಾಡಿದೆ ಅಳಿಸಲಾಗದಂತೆ..ರಾಡಿ..

ಅಲೆಗಳಪ್ಪಳಿಸುವಿಕೆಗೆ ಆಗಿರುವಾಗ,
ಬಂಡೆಗಳೇ ಪುಡಿ ಪುಡಿ..
ನಾ ಅದಾವ ಲೆಕ್ಕ ಹೇಳೇ ??
ಈ ನಿನ್ನ ಪ್ರೀತಿ ರಭಸದಡಿ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅವನಿಲ್ಲ

ಅವನಿಲ್ಲದೇ ಎಂಟು ವರ್ಷ ಕಳೆದು ಹೋಯಿತು. ಎಂಟು ವರ್ಷ ಹೇಗೆ ಕಳೆಯಿತೆಂದು ತಿಳಿಯಲೇ ಇಲ್ಲ ಎಂದು ಸುಳ್ಳು ಹೇಳಲಾರೆ. ಅವನನ್ನು ಈ ಎಂಟು ವರ್ಷಗಳಲ್ಲಿ ಎಷ್ಟು ಬಾರಿ ನೆನೆದಿರಬಹುದು ಎಂಬ ಲೆಕ್ಕವನ್ನೂ ನಾನು ಇಡಲಾರೆ. ಹಾಗೇ, ನಾನು ಎಂಟು ವರ್ಷ ಹಿಂದೆ, ಇದೇ ದಿನ, ಮುಂಜಾನೆ ಬಂದ ಆ ಘೋರ ದೂರವಾಣಿ ಕರೆಯನ್ನೂ ಎಂದೆಂದಿಗೂ ಮರೆಯಲಾರೆ.

ಅವನು ಇದ್ದಿದ್ದು ಒಂದು ಚಿಕ್ಕ ಊರಿನಲ್ಲಿ. ಚಿಕ್ಕ ಊರೆಂದರೆ, ಸಣ್ಣ ಹಳ್ಳಿಯೂ ಅಲ್ಲ, ಭಾರೀ ನಗರವೂ ಅಲ್ಲ - ಆ ರೀತಿಯ ನಡುವಿನ ಮಟ್ಟದ ಒಂದು ಪಟ್ಟಣ. ಅಲ್ಲಿಗೊಂದು ಒಳ್ಳೇ ಶಾಲೆ. ಆ ಊರಿಗೆ ಬಂದಾಗ ಅವನು ಮೂರನೆಯದೋ-ನಾಕನೆಯದೋ ತರಗತಿಯರಲ್ಲಿ ಇದ್ದಿರಬೇಕು. ಶಾಲೆಯ ಎಲ್ಲ ಕಲಿಸುವವರಿಗೂ ಅಚ್ಚುಮೆಚ್ಚಾಗಲು ಅವನಿಗೆ ಹೆಚ್ಚೇನೂ ವೇಳೆ ಬೇಕಾಗಲಿಲ್ಲ. ತನ್ನ ಹೆಸರಿಗೆ ತಕ್ಕಂತೆ, ಎಲ್ಲರ ಮನಸ್ಸನ್ನೂ ಕದ್ದುಬಿಟ್ಟ ಅವನು. ಯಾವ ಪ್ರಬಂಧ ಸ್ಪರ್ಧೆಯಾಗಲಿ, ಚರ್ಚಾಕೂಟವಾಗಲಿ, ಅವನಿಗೆ ಬಹುಮಾನ ಅನ್ನುವುದು ಕಟ್ಟಿಟ್ಟ ಬುತ್ತಿಯೇ. ಪರೀಕ್ಷೆಗಳಲ್ಲಿ, ಬರೇ ಶಾಲೆಗೇಕೆ, ಜಿಲ್ಲೆಗೇ ಮೊದಲಿದ್ದವನು ಅವನು.

ಅವನು ನನಗಿಂತ ಎಂಟು ವರ್ಷ ದೊಡ್ಡವನು. ಚಿಕ್ಕ ವಯಸ್ಸಿಗೇ ಬಹಳ ವಿಷಯಗಳನ್ನು ಅರಿತಿದ್ದ ಅವನು, ಅದೇ ರೀತಿ ನಾನೂ ಆಗಬೇಕೆಂಬ ಬಯಕೆಯನ್ನು ನನಗೆ ಗೊತ್ತೊಲ್ಲದೇ ಮೂಡಿಸಿದ್ದ. ಲೈಬ್ರರಿಗೆ ತಾನು ಹೋಗುವಾಗ ನನ್ನನ್ನೂ ಕರೆದೊಯ್ದು, ನನ್ನ ಮುಂದೆ ಪುಸ್ತಕಗಳನ್ನು ಹಾಕಿ ಓದಲು ಹೇಳುತ್ತಿದ್ದ. ನನಗೆ ಓದುವ ಹುಚ್ಚು ಹತ್ತಿಸಿದ್ದೇ ಅವನು ಅನ್ನೋದು ನನ್ನ ನೆನಪು. ಅವನ ಜೊತೆ ನಾನು ಹೋಗುತ್ತಿದ್ದರೆ, ನನಗೆ ಎಲ್ಲರೂ ನನ್ನನ್ನೇ ನೋಡ್ತಾ ಇದ್ದಾರೆ, ಅನ್ನೋ ಅನಿಸಿಕೆ. ನಾನು ಆ ಶಾಲೆಯೆ ಸೇರಿದ ವರ್ಷ ಅವನು ಆ ಶಾಲೆಯಿಂದ ಹೊರಬಿದ್ದ. ಅದೂ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೇ ಮೂರನೇ ಸ್ಥಾನ ಪಡೆದು. ಹಾಗಾಗಿ, ನಾನು, ಅವನು ಒಂದು ಶಾಲೆಯಲ್ಲಿ ಯಾವತ್ತೂ ಹೋಗಿದ್ದೇ ಇಲ್ಲ. ಹಾಗಿದ್ದ್ರೂ, ಎಷ್ಟೋ ಜನ ಕಲಿಸುವವರು ಅವನ ಬಗ್ಗೆ ನನ್ನಲ್ಲಿ ವಿಚಾರಿಸಿಕೊಳ್ಳುವವರೇ. ಶಾಲೆಯಲ್ಲಿ ನನಗೆ ಅಂತ ಒಂದು ವ್ಯಕ್ತಿತ್ವ, ಬರುವ ವೇಳೆಗೆ, ಅವನು ಮೊದಲ, ಎರಡನೆ ಪ್ರಿಯೂನಿವರ್ಸಿಟಿ ಪರೀಕ್ಷೆಗಳೆರಡರಲ್ಲೂ ರಾಜ್ಯಕ್ಕೇ ಹತ್ತರೊಳಗೇ ಬಂದು ಹೆತ್ತವರಿಗೆ ಹೆಮ್ಮೆ ತಂದ. ಎಲ್ಲ ಪತ್ರಿಕೆಗಳಲ್ಲೂ ಅವನ ಚಿತ್ರ. ಆದರೂ, ಹಮ್ಮು -ಬಿಮ್ಮಿಲ್ಲದ ಸ್ವಭಾವ ಅವನದು. ತನಗೇನು ಗೊತ್ತು ಅನ್ನುವುದನ್ನು ವಾಚ್ಯವಾಗಿ ತೋರಿಸಿಕೊಳ್ಳದೆಯೇ, ಅದರ ಅನುಭವ ಮಾತ್ರ ಮಾಡಿಸುವ ಅವನ ಗುಣ ಹಲವರಲ್ಲಿ ಕಾಣಸಿಗದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ನೆನಪು