Skip to main content

ಮಂಗಳವಾರ 20 August 2019

ಇತ್ತೀಚೆಗೆ ಸೇರಿಸಿದ ಪುಟಗಳು

ಏರ್ಟೆಲ್

ಲಿನಕ್ಸಾಯಣ - ೪೪ - ಮೋಟೊಮಿಂಗ್ A1200 ನಿಂದ ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಉಪಯೋಗಿಸಿದ್ದು

ಗ್ನು/ಲಿನಕ್ಸ್ ಹಬ್ಬಕ್ಕೆ ಮಂಗಳೂರಿಗೆ ಹೊರಟ ದಿನದಿಂದ ಛಲ ಬಿಡದ ತಿವಿಕ್ರಮನಂತೆ ನಾ ಹಿಂದೆ ಬಿದ್ದದ್ದು ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಕನೆಕ್ಷನ್ ಉಪಯೋಗಿಸಿ ತೀರಬೇಕು ಅಂತ.

504_master-black-fn185k-50m

ಅಂತೂ ಇಂತೂ ಕಡೆಗೆ ನನ್ನ Motorola Motoming
A1200 ಮೊಬೈಲ್ ಮೂಲಕ Airtel GPRS ಕನೆಕ್ಷನ್ ಬಳಸಿ ಉಬುಂಟು ನಲ್ಲಿ ಇಂಟರ್ನೆಟ್ ಪಡೆಯೋ ಹಾಗಿದೆ. ಬಿ.ಎಸ್.ಎನ್.ಎಲ್ ಬ್ರಾಡ್ ಬ್ಯಾಂಡ್ ಕೆಟ್ಟಿದ್ದು ಎರಡು ತಿಂಗಳಾದರೂ ಅವರಿಗ್ಯಾರಿಗೂ ಕರ್ತವ್ಯ ಪ್ರಜ್ಞೆಯಿಲ್ಲದವರಂತೆ ಕಂಡು ಬಂದದ್ದರಿಂದ, ಮತ್ತು ಅಪ್ಪ ಅವರಲ್ಲಿಗೆ ದಿನವೂ ಅಲಿಯೋದು, ನಾನು ಪ್ರತಿ ಬಾರಿ ಕಾಲ್ ಮಾಡಿ ನನ್ನ ತಲೆ ಬಿಸಿ ಮಾಡಿಕೊಳ್ಳೋದನ್ನ ತಪ್ಪಿಸ್ಲಿಕ್ಕೆ ಇದು ಒಂದು ತರಾ ಸುಲಭ ಉಪಾಯ ಅನ್ನಿಸ್ತು. ಮೇಲಧಿಕಾರಿಗಳೂ ಕಿವಿಗೆ ಹತ್ತಿ ಇಟ್ಟು ಕುಂತ್ರೆ ನಾನೇನು ಮಾಡ್ಲಿ ಹೇಳಿ. ಟೆಕ್ನಿಕಲ್ ಸೊಲ್ಯೂಶನ್ ಹ್ಯಾಗಾದ್ರೂ ಕಂಡಿಡಕೊಳ್ಬೇಕಲ್ವಾ? 

ಸರಿ, ನೀವು ಹ್ಯಾಗೆ ಇದನ್ನ ನಿಮ್ಮ ಉಬುಂಟುವಿನಲ್ಲಿ ಸಾಧ್ಯವಾಗಿಸ್ಕೊಳ್ಳ ಬಹುದು ಅನ್ನೋದನ್ನ ಈಗ ನೋಡೋಣ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಂಟರ್ನೆಟ್ ಗಾಗಿ ಏನೆಲ್ಲ (೧)

 

 

ಕಳೆದ ತಿಂಗಳು ಕಡಿಮೆ ಸಮಯದಲ್ಲೇ ಬನಶಂಕರಿಯ ಬಾಡಿಗೆ ಮನೆ ಖಾಲಿ ಮಾಡಿ ಹೊಸತೊಂದು ಬಾಡಿಗೆ ಮನೆಗೆ ಹೋಗುವ ಸನ್ನಿವೇಶ ಎದುರಾಯಿತು. ಹೆಚ್ಚು ಕಾಲ ಬಾಡಿಗೆ ಮನೆಗಳಲ್ಲೇ ಇದ್ದದ್ದರಿಂದ ಮನೆ ಬದಲಾಯಿಸುವುದು, ಸಾಮಾನು ಸಾಗಿಸುವುದು ಈಗ ಕಷ್ಟವೆನಿಸುವುದಿಲ್ಲ. ಕಷ್ಟವಾಗುವುದು ಹೊಸ ಜಾಗದಲ್ಲಿ ಇಂಟರ್ನೆಟ್ ಕನೆಕ್ಷನ್ ತೆಗೆದುಕೊಳ್ಳುವುದು!

ಹಿಂದಿದ್ದ ಮನೆಯಲ್ಲಿ ಏರ್ಟೆಲ್ ಬ್ರಾಡ್ ಬ್ಯಾಂಡ್ ಹಾಕಿಸಿಕೊಂಡಿದ್ದೆ. ಬಿ ಎಸ್ ಎನ್ ಎಲ್ ಶಿಫ್ಟ್ ಮಾಡೋದು ತಿಂಗಳುಗಟ್ಟಲೆ ಹಿಡಿಯಬಹುದೆಂದು ಅದರ ತರಲೆಯೇ ಬೇಡವೆಂದು ಅದರೊಂದಿಗೆ ಹಾಕಿಸಿಕೊಂಡಿದ್ದ ಬ್ರಾಡ್ ಬ್ಯಾಂಡ್ ಕನೆಕ್ಷನ್ ತೆಗೆಸಿಹಾಕಿಬಿಟ್ಟಿದ್ದೆ. ಈಗ ಹೊಸ ಜಾಗದಲ್ಲಿ ಏರ್ಟೆಲ್ ರವರ ಕವರೇಜ್ ಇಲ್ಲ. ಮರಳಿ .... ಪಾದಕ್ಕೆ ಎಂಬಂತೆ ಬಿ ಎಸ್ ಎನ್ ಎಲ್ ಗೆ ಹೊಸತೊಂದು ಅರ್ಜಿ ಹಾಕಿದೆ. ಅರ್ಜಿ ಹಾಕಿ ಒಂದು ತಿಂಗಳಾದರೂ ಏನೂ ಇಲ್ಲ.

ಈ ಮಧ್ಯೆ ಅನಿಲ್ ಅಂಬಾನಿ ಸಾರಥಿಯಾಗಿ ನಡೆಸುತ್ತಿರುವ ರಿಲಯನ್ಸ್ ನ (ವಿ)ಭಾಗ ಬೆಂಗಳೂರಿನಲ್ಲಿ [:http://en.wikipedia.org/wiki/Wimax|Wimax] ಹೊರತಂದಿದೆಯೆಂದು ಕೇಳಿದೆ. ಆ ದಿನವೇ ಹೋಗಿ ಅವರಿಗೊಂದು ಚೆಕ್ ಕೊಟ್ಟು, ಸಾಧ್ಯವಾದಷ್ಟು ಬೇಗ ಹಾಕಿಸಿಕೊಡಿ ಎಂದು ಕೇಳಿದೆ. ದುಡ್ಡು ಪಡೆದದ್ದಕ್ಕೆ ಚೀಟಿಯಿಲ್ಲ, ಪತ್ರವಿಲ್ಲ. ಒಂದು ವಾರದಲ್ಲೇ ಯಾವುದೋ ಕಂಪೆನಿಯ ಇಬ್ಬರು ನಾವು ರಿಲಯನ್ಸ್ ಕಂಪೆನಿಗೆ ಕಾಂಟ್ರಾಕ್ಟ್ ಮೇಲೆ ಕೆಲಸ ಮಾಡುವವರು ಎಂದು ಹೇಳಿಕೊಂಡು ಲ್ಯಾಪ್ ಟಾಪ್ ಹಿಡಿದು ಬಂದರು. ಬಂದವರು ಮೇಲೆ ಕೆಳಗೆ ಓಡಾಡುತ್ತ ಮಹಡಿಯ ಮೇಲೆ ಒಂದು ರಿಸೀವರ್ ಕುಳ್ಳಿರಿಸಿದರು. ಆ ರಿಸೀವರಿನಿಂದ ವೈರು ಕೆಳಗೆ ಎಳೆದು ತಂದು "ಸಿಗ್ನಲ್ ಸಿಗ್ತು, ಇಂಟರ್ನೆಟ್ ಬಂತು, ಹೋ" ಎಂದು ಕುಣಿದಾಡಿದರು. ರಿಲಯನ್ಸಿನ ಟವರ್ ಹತ್ತಿರವೇ ಇರೋದರಿಂದ ಬಹಳ ಒಳ್ಳೆಯ ಸಿಗ್ನಲ್ ಸಿಕ್ಕಿತ್ತಂತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
Subscribe to ಏರ್ಟೆಲ್

ಆಯ್ದ ಬರಹಗಳು

Sampada is a community of people passionate about literary activities in Kannada. Sampada is one of the largest Kannada communities on the Internet. ಸಂಪದ ಕನ್ನಡ ನಾಡು, ನುಡಿ, ಓದು ಸುತ್ತ ಆಸಕ್ತಿ ಇಟ್ಟುಕೊಂಡಿರುವವರ ಆನ್ಲೈನ್ ಸಮುದಾಯ ಹಾಗು ಕನ್ನಡದ ಮೊತ್ತ ಮೊದಲ ಆನ್ಲೈನ್ ಸಮುದಾಯಗಳಲ್ಲೊಂದು.

Powered by Drupal. Technology support by : Saaranga Infotech