ವಿಂಡೋಸ್

My Documents ಫೋಲ್ಡರಿನ target ಬದಲಿಸುವುದು

ವಿಂಡೋಸ್ ಉಪಯೋಗಿಸುವ ಕೆಲವರಿಗೆ ತಮ್ಮ ದಾಖಲೆಗಳನ್ನು "My Documents" ಫೋಲ್ಡರಿನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಈ "My Documents" ಫೋಲ್ಡರ್‍ ವಿಂಡೋಸ್ ಇರುವ ಡ್ರೈವ್‌ನಲ್ಲೇ ಇರುವುದರಿಂದ ವಿಂಡೋಸ್‌ಗೆ ಏನಾದರೂ ಹಾನಿಯಾದರೆ "My Documents" ಫೋಲ್ಡರಿನರುವ ದಾಖಲೆಗಳನ್ನೂ ಕಳೆದುಕೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ನಿಮಗೆ "My Documents"ನಲ್ಲಿ ದಾಖಲೆಗಳನ್ನು ಉಳಿಸಿಕೊಳ್ಳುವ ಅಭ್ಯಾಸವಿದ್ದರೆ, ಅದರ Target ಬದಲಾಯಿಸಿಕೊಳ್ಳುವುದು ಒಳ್ಳೆಯದು.

ಅದಕ್ಕಾಗಿ ಮೊದಲು "My Documents" ಮೇಲೆ ರೈಟ್ ಕ್ಲಿಕ್ ಮಾಡಿ, Properties ಆರಿಸಿ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲಿನಕ್ಸ್ ವೆಬ್ಸೈಟ್‌ನಲ್ಲಿ ವಿಂಡೋಸ್ ಜಾಹೀರಾತು!

ಇವತ್ತು ಹಾಗೇ ಲಿನಕ್ಸಿನ ಬಗ್ಗೆ ಜಾಸ್ತಿ ತಿಳಿದುಕೊಳ್ಳೋಣ ಎಂದು ಗೂಗಲ್‌ನಲ್ಲಿ ಹುಡುಕುತ್ತಿದ್ದೆ. ಹಾಗೆಯೇ ಲಿನಕ್ಸಿನ ಅಧಿಕೃತ ವೆಬ್ಸೈಟನ್ನೂ ತೆಗೆದೆ. ಅದರಲ್ಲಿ ನೋಡಿದರೆ ಒಂದು ಆಶ್ಚರ್ಯ ಕಾದಿತ್ತು. ಲಿನಕ್ಸ್ ವೆಬ್ಸೈಟ್‌ನಲ್ಲಿ ವಿಂಡೋಸಿನ ಜಾಹೀರಾತು! ದುಡ್ಡು ಕೊಟ್ಟು ಕೊಳ್ಳುವ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಪ್ರಮುಖ ಸ್ವತಂತ್ರ ತಂತ್ರಾಂಶವಾದ ಲಿನಕ್ಸಿನ ಅಧಿಕೃತ (http://linux.org) ತಾಣದಲ್ಲಿ ಅದೇ ದುಡ್ಡು ಕೊಟ್ಟು ಕೊಳ್ಳುವ ವಿಂಡೋಸಿನ ಜಾಹೀರಾತು. ಅದೂ ಅಲ್ಲದೇ ವಿಂಡೋಸ್7ನ ವರ್ಣನೆ ಬೇರೆ! ಎಂತಹಾ ವಿಪರ್ಯಾಸ ಅಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲಿನಕ್ಸ್ ಮತ್ತು ವಿಂಡೋಸ್ dual bootಗೆ ನನ್ನ ವಿಧಾನ

ಲಿನಕ್ಸ್ ಹಾಗೂ ವಿಂಡೋಸ್‌ನ್ನು ಒಟ್ಟಿಗೆ (dual boot) ಬಳಸುವಾಗ ಕೆಲವೊಮ್ಮೆ ಸಮಸ್ಯೆ ಉಂಟಾಗುತ್ತಿತ್ತು. ಲಿನಕ್ಸಿನಲ್ಲಿ ಏನೋ ಪ್ರಯೋಗ ಮಾಡುವುದಕ್ಕೆ ಹೋಗಿ grub ಹಾಳಾಗಿಬಿಟ್ಟರೆ ಅದನ್ನು ಸರಿಪಡಿಸುವ ತನಕ ಲಿನಕ್ಸೂ ಉಪಯೋಗಿಸುವುದಕ್ಕೆ ಆಗುತ್ತಿರಲಿಲ್ಲ, ವಿಂಡೋಸೂ ಬೂಟಾಗುತ್ತಿರಲಿಲ್ಲ. ಕೆಲವು ಸಲ ಈ ರೀತಿ ಕಿತಾಪತಿ ಮಾಡಿಟ್ಟು ಅಪ್ಪನಿಂದ ಬೈಸಿಕೊಳ್ಳುತ್ತಿದ್ದೆ. ಇದಕ್ಕೇನಾದರೂ ಪರಿಹಾರ ಇದೆಯೇ ಎಂದು ಯೋಚಿಸುತ್ತಿದ್ದಾಗ ಹೊಳೆಯಿತು ನೋಡಿ ಒಂದು ಐಡಿಯಾ! ನನ್ನ ಹತ್ತಿರ ಒಂದು ಹಳೆಯ ಹಾರ್ಡ್‌ಡಿಸ್ಕ್ ಇತ್ತು. ಆದರೆ ಅದರ ಜಂಪರ್‍ ಎಲ್ಲೋ ಕಳೆದು ಹೋಗಿತ್ತು. ಆಮೇಲೆ ಹಳೆಯ ಸಿಡಿ ಡ್ರೈವ್ ಒಂದರಿಂದ ಜಂಪರ್‍ ತೆಗೆದು ಇದಕ್ಕೆ ಹಾಕಿ ಮಾಸ್ಟರ್‍ ಡಿಸ್ಕ್ ಮಾಡಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಿಂಡೋಸ್ ಮತ್ತು ಯೂಸರ್‍ ಅಕೌಂಟ್

ವಿಂಡೋಸ್ (ಎಕ್ಸ್‌ಪಿ) ಬಳಕೆದಾರರು ಅಡ್ಮಿನಿಸ್ಟ್ರೇಟರ್‍ ಹೆಸರಿನ (Administrator) ಯೂಸರ್‍ ಅಕೌಂಟ್‌ ಉಪಯೊಗಿಸುತ್ತಿದ್ದಾಗ, ಕಂಟ್ರೋಲ್ ಪ್ಯಾನಲ್‌ನ User accounts ಮೂಲಕ ಹೊಸ ಅಕೌಂಟ್ ಸೃಷ್ಠಿ ಮಾಡಿದರೆ, ಮುಂದಿನ ಬಾರಿ ವಿಂಡೋಸ್ ಪ್ರಾರಂಭವಾಗುವಾಗ ವೆಲ್‌ಕಮ್ ಸ್ಕ್ರೀನ್‌ನಲ್ಲಿ ಅಡ್ಮಿನಿಸ್ಟ್ರೇಟರ್‍ ಹೆಸರಿನ ಯೂಸರ್‍ ಅಕೌಂಟ್‌ ತೋರಿಸುವುದಿಲ್ಲ. ಬದಲಾಗಿ ನೀವು ಹೊಸದಾಗಿ ಸೃಷ್ಠಿಸಿದ ಯೂಸರ್‍ ಅಕೌಂಟನ್ನು ತೋರಿಸುತ್ತದೆ ಹಾಗೂ ಅದಕ್ಕೆ ಪಾಸ್‌ವರ್ಡ್ ನೀಡಿರದಿದ್ದರೆ ತಾನಾಗಿಯೇ ಲಾಗಿನ್ ಆಗುತ್ತದೆ. ನೀವು ಮತ್ತೆ ಅಡ್ಮಿನಿಸ್ಟ್ರೇಟರ್‍ ಅಕೌಂಟಿಗೆ ಲಾಗಿನ್ ಆಗಬೇಕಾದರೆ ಕಂಟ್ರೋಲ್ ಪ್ಯಾನಲ್‌ನಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಿಂಡೋಸ್ ಬೂಟ್‌‌ನಲ್ಲಿ ತೊಂದರೆ

ನಿನ್ನೆ ನನ್ನ ಕಂಪ್ಯೂಟರ್‍ ಚಾಲನೆ ಮಾಡಿದರೆ ವಿಂಡೋಸ್(ಎಕ್ಸ್‌‌ಪಿ) ಬೂಟ್ ಆಗುತ್ತಿರಲಿಲ್ಲ. ಬದಲಿಗೆ,

"Windows could not start because of an error in the software.

Please report this problem as,
load needed DLLs for kernel.

Please contact your support person to report this problem"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕರ್ನಲ್ ಪ್ಯಾನಿಕ್

ನೀವು ವಿಂಡೋಸ್ OS use ಮಾಡ್ತೀರಾ? ಹಾಗಿದ್ದ್ರೆ ನಿಮಗೆ ವಿಂಡೋಸ್ ನ famous BSOD ಬಗ್ಗೆ ಗೊತ್ತಿರಲೇಬೇಕು. ನೀವು ಲಿನಕ್ಸ OS ನು use ಮಾಡ್ತೀರಾ? ಲಿನಕ್ಸ ನ BSOD ಯಾವುದು ಗೊತ್ತಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಫಾರಿಯಲ್ಲಿ ಕನ್ನಡ

ಕೆಲವು ತಿಂಗಳ ಹಿಂದೆ ಆಪಲ್ ಕಂಪೆನಿಯ ದೊರೆ ಸ್ಟೀವ್ ಜಾಬ್ಸ್ ಮೈಕ್ರೋಸಾಫ್ಟಿನ ವಿಂಡೋಸ್ ಆಪರೇಟಿಂಗ್ ಸಿಸ್ಟಮಿಗೆ ತಮ್ಮ "ಸಫಾರಿ" ಬ್ರೌಸರಿನ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದಾಗ ಹಲವರು ಹುಬ್ಬೇರಿಸಿದ್ದರು. ಮೈಕ್ರೊಸಾಫ್ಟಿನ ವಿಂಡೋಸ್ ಬಳಸುವವರಲ್ಲೂ ಹಲವರು ಐ-ಪಾಡ್ ಮತ್ತು ಐ-ಟ್ಯೂನ್ಸ್ ಇಷ್ಟಪಡುವವರು ಇರುವುದರಿಂದ 'ಸಫಾರಿ'ಯೂ ವಿಂಡೋಸ್ ಬಳಸುವವರಲ್ಲಿ ತನ್ನ ನೆಲೆ ಕಂಡುಕೊಳ್ಳಬಹುದು ಎಂಬ ಉದ್ದೇಶದಿಂದ ಅದನ್ನು ಹೊರತಂದದ್ದಂತೆ. ಮ್ಯಾಕ್ ಬಳಸುವವರೂ ಹೆಚ್ಚಾಗಿ ಬಳಸದ ಬ್ರೌಸರ್ರು ಇದು ಎಂದು ಕೇಳಿಬರುತ್ತದಾದರೂ "ಸಫಾರಿ" ಬಹಳ ಚೆಂದವಾದ, ಹೆಚ್ಚು ತಲೆನೋವಿಲ್ಲದ ಬ್ರೌಸರ್ರು.

ಕೆಲ ತಿಂಗಳ ಹಿಂದೆ ಇದರ ಮೊದಲ ಬೀಟ ಆವೃತ್ತಿ ಹೊರಬಂದಾಗ ನನ್ನ ಲ್ಯಾಪ್ಟಾಪಿನಲ್ಲಿ ಪ್ರಯೋಗಾರ್ಥ ಹಾಕಿಕೊಂಡು ನೋಡಿದ್ದೆ. ಆಗ ಕನ್ನಡ ರೆಂಡರಿಂಗ್ ಮುರಿದು ಹೋಗಿತ್ತು. ಹೀಗಾಗಿದೆ ಎಂದು ಒಂದು 'ಬಗ್' ಫೈಲ್ ಮಾಡಿದ್ದೆ. ಈಗ ಸಫಾರಿಯ ಮೂರನೇ ಬೀಟ ಆವೃತ್ತಿ ಹೊರಬಂದಿದ್ದು ಅದರಲ್ಲಿ ಕನ್ನಡ (ಇಂಡಿಕ್) ರೆಂಡರಿಂಗ್ ಸರಿಪಡಿಸಿದ್ದಾರೆ! ಸ್ಕ್ರೀನ್ ಶಾಟ್ ಕೆಳಗಿದೆ ನೋಡಿ:

ಸಫಾರಿ ಬ್ರೌಸರಿನಲ್ಲಿ ಕನ್ನಡ

ಸಫಾರಿಯಲ್ಲಿ ಕನ್ನಡ

(ಪೂರ್ಣ ಗಾತ್ರದ ಚಿತ್ರ ವೀಕ್ಷಿಸಲು ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ವಿಂಡೋಸ್