ತಂತ್ರಾಂಶ

ಜೀವನ ಮಂತ್ರ

ನಿಸರ್ಗ ನಿರ್ಮಿಸಿತು ಯಂತ್ರ [machine, body] ಬೊಮ್ಮ ತುಂಬಿದನದಕೆ ತಂತ್ರ [software, brain] [creation: Brahma] ತಂತ್ರದಲ್ಲಿರಲು ಕುತಂತ್ರ [virus, evil thoughts] ವಿಷ್ಣು ಬರೆದ ಕುತಂತ್ರಕ್ಕೊಂದು ತಂತ್ರ [antivirus] [sustenance: Vishnu] ಯಂತ್ರದ ತುಂಬೆಲ್ಲ ಹರಡಲು ಕುತಂತ್ರ [virus attack, material thoughts] ಶಿವನಳಿಸಿದ ಯಂತ್ರದ ತಂತ್ರ [format, death] [destruction: Shiva] ಇದುವೆ ಜೀವನ ಮಂತ್ರ [formula of life, software development]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೊಟೊರೊಲ ಮೊಟೊಮಿಂಗ್ ನಲ್ಲಿ ಕನ್ನಡ

 ನನ್ನ ಮೊಟೊರೊಲಾ ಮೊಟೊಮಿಂಗ್ ಏ೧೨೦೦ ಫೋನಿನಲ್ಲಿ ಈಗ ಸಂಪದ ಓದ್ಲಿಕ್ಕೆ ಸಾಧ್ಯ (ಕೆಲವೊಂದು ಸಣ್ಣ ಪುಟ್ಟ ತೊಂದರೆಗಳನ್ನು ನಿವಾರಿಸಿದ ಬಳಿಕ).. ಇದರಲ್ಲಿ ಈಗ ಕನ್ನಡ ಫಾಂಟ್ ಇನ್ಸ್ಟಾಲ್ ಮಾಡಿಕೊಂಡಾಯ್ತು.

kannada

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಈ ತಂತ್ರಾಂಶ ಯಾವುದು ಎಂದು ಹೇಳುವಿರಾ?

ಇದು ನನಗಿಷ್ಟವಾದ ತಂತ್ರಾಂಶ, ನನ್ನ ಎಲ್ಲಾ  ಕೋಡಿಂಗ್, ನೋಟ್ ಟೇಕಿಂಗ್   ಇದನ್ನೇ ಉಪಯೋಗಿಸಿನೇ ಮಾಡೋದು... ಇದು ಯಾವ ತಂತ್ರಾಂಶ(software) ಎಂದು ಊಹಿಸಬಲ್ಲಿರಾ?

ಯಾವ ಎಡಿಟರ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಿಂತಾ ತಂತ್ರಾಂಶ ಮಾಡಿದ್ರ ಹೆಂಗಿರ್ತದ??

ಸಾಮಾನ್ಯವಾಗಿ ಈss ಗಣಕ ಯಂತ್ರಗಳ ಉದ್ಘ್ಹಾಟನೆ ಒಳಗ ಗಣ್ಯರು ರಿಬ್ಬನ ಕತ್ತರಿಸಿ ಗಣಕ ಯಂತ್ರವನ್ನ ಉದ್ಘ್ಹಾಟನೆ ಮಾಡ್ತಾರ್ ಆದರ ಅದರ ಬದಲಿ ಉದ್ಘ್ಹಾಟನೆಕ ಅಂತsss ಒಂದು ತಂತ್ರಾಂಶ ಮಾಡಿ ಕರ್ಸರ್ಅನ್ನss ಜ್ಯೋತಿ (ದೀಪ) ಮಾಡಿ, ಕೆಳಗ ಒಂದು ಪ್ರಣತಿ ಇಟ್ರ ಹೆಂಗssss. ಉಪಯೋಗಿಸೋರು ಕರ್ಸರ್ಅನ್ನss ಒಯ್ದು ಆ ಪ್ರಣತಿ ಮ್ಯಾಲ ಇಟ್ಟಾಗ ದೀಪಾ ಹತ್ತಬೇಕು.....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಫಾರಿಯಲ್ಲಿ ಕನ್ನಡ

ಕೆಲವು ತಿಂಗಳ ಹಿಂದೆ ಆಪಲ್ ಕಂಪೆನಿಯ ದೊರೆ ಸ್ಟೀವ್ ಜಾಬ್ಸ್ ಮೈಕ್ರೋಸಾಫ್ಟಿನ ವಿಂಡೋಸ್ ಆಪರೇಟಿಂಗ್ ಸಿಸ್ಟಮಿಗೆ ತಮ್ಮ "ಸಫಾರಿ" ಬ್ರೌಸರಿನ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದಾಗ ಹಲವರು ಹುಬ್ಬೇರಿಸಿದ್ದರು. ಮೈಕ್ರೊಸಾಫ್ಟಿನ ವಿಂಡೋಸ್ ಬಳಸುವವರಲ್ಲೂ ಹಲವರು ಐ-ಪಾಡ್ ಮತ್ತು ಐ-ಟ್ಯೂನ್ಸ್ ಇಷ್ಟಪಡುವವರು ಇರುವುದರಿಂದ 'ಸಫಾರಿ'ಯೂ ವಿಂಡೋಸ್ ಬಳಸುವವರಲ್ಲಿ ತನ್ನ ನೆಲೆ ಕಂಡುಕೊಳ್ಳಬಹುದು ಎಂಬ ಉದ್ದೇಶದಿಂದ ಅದನ್ನು ಹೊರತಂದದ್ದಂತೆ. ಮ್ಯಾಕ್ ಬಳಸುವವರೂ ಹೆಚ್ಚಾಗಿ ಬಳಸದ ಬ್ರೌಸರ್ರು ಇದು ಎಂದು ಕೇಳಿಬರುತ್ತದಾದರೂ "ಸಫಾರಿ" ಬಹಳ ಚೆಂದವಾದ, ಹೆಚ್ಚು ತಲೆನೋವಿಲ್ಲದ ಬ್ರೌಸರ್ರು.

ಕೆಲ ತಿಂಗಳ ಹಿಂದೆ ಇದರ ಮೊದಲ ಬೀಟ ಆವೃತ್ತಿ ಹೊರಬಂದಾಗ ನನ್ನ ಲ್ಯಾಪ್ಟಾಪಿನಲ್ಲಿ ಪ್ರಯೋಗಾರ್ಥ ಹಾಕಿಕೊಂಡು ನೋಡಿದ್ದೆ. ಆಗ ಕನ್ನಡ ರೆಂಡರಿಂಗ್ ಮುರಿದು ಹೋಗಿತ್ತು. ಹೀಗಾಗಿದೆ ಎಂದು ಒಂದು 'ಬಗ್' ಫೈಲ್ ಮಾಡಿದ್ದೆ. ಈಗ ಸಫಾರಿಯ ಮೂರನೇ ಬೀಟ ಆವೃತ್ತಿ ಹೊರಬಂದಿದ್ದು ಅದರಲ್ಲಿ ಕನ್ನಡ (ಇಂಡಿಕ್) ರೆಂಡರಿಂಗ್ ಸರಿಪಡಿಸಿದ್ದಾರೆ! ಸ್ಕ್ರೀನ್ ಶಾಟ್ ಕೆಳಗಿದೆ ನೋಡಿ:

ಸಫಾರಿ ಬ್ರೌಸರಿನಲ್ಲಿ ಕನ್ನಡ

ಸಫಾರಿಯಲ್ಲಿ ಕನ್ನಡ

(ಪೂರ್ಣ ಗಾತ್ರದ ಚಿತ್ರ ವೀಕ್ಷಿಸಲು ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ತಂತ್ರಾಂಶ