ವೈಷ್ಣವ

ಮಾತುಪಲ್ಲಟ - ೧೬, ವೈಷ್ಣವ ಜನತೋ

ವೈಷ್ಣವ ಬಂಧುವೆಂದವನನೇ ಕರೆವರು

ಪರರ ದುಃಖಗಳನ್ನಱಿತವನ

ದುರ್ಬಲರಿಗೆ ಉಪಕರಿಸುವನವನು

ಮನದೊಳು ಅಭಿಮಾನವ ತಾಳದೆಯೇ

 

ಎಲ್ಲವರೊಡ ಸಹನೆಯಿಂದೇಗುತ್ತ

ಯಾರನ್ನೂ ತೆಗೞದೆ ಜೀವಿಸುವ

ನಡೆನುಡಿಯಿಂ ಸಮಚಿತ್ತನವನು

ಆ ವೈಷ್ಣವನವ್ವೆಯೋ ಧನ್ಯೆಯಲ

 

ನೇರದೃಷ್ಟಿಯವ ದಾಹವ ತೊಱೆದವ

ಪರಸ್ತ್ರೀಯರು ಮಾತೆಯರೆಂಬವ

ನಾಲಗೆಯಿಂದ ಅಸತ್ಯವ ನುಡಿಯನು

ಪರಸ್ವತ್ತುಗಳ ತೊಡದವನು

 

ಮೋಹಮಾಯೆಯೊಳು ಮುಣುಗಿರದವನು

ದೃಢವೈರಾಗ್ಯವ ತಾಳ್ದವನು

ರಾಮನಾಮವೇ ಅಮೃತವವನಿಗೆ

ಧಾಮಂಗಳೆಲ್ಲವ ಧ್ಯಾನಿಸಿರೆ

 

ದುರಾಶೆಯ ತಾಳನು ಕಪಟರಹಿತನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ವೈಷ್ಣವ