ಅಡ್ವಾಣಿ

ಕಾಲದ ಕನ್ನಡಿ: ೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!

ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ  ಕಾಲದ ಕನ್ನಡಿಗೆ  ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಗೆ ಗೈರುಹಾಜರಾದಾಗಲೇ ಕಾಲದ ಕನ್ನಡಿ ಏನೋ ಮಹತ್ತರವಾದುದು  ನಡೆಯುತ್ತದೆ ಎ೦ಬುದನ್ನು ಊಹೆ ಮಾಡಿತ್ತು! ಆದರೆ ಅಡ್ವಾಣಿಯ ಈ ನಡೆಯನ್ನಲ್ಲ!  ಮೋದಿಯ ಮೇಲಿನ ಅಡ್ವಾಣಿಯವರ ವಿರೋಧದ ಅ೦ತ್ಯ ಹೇಗಾಗಬಹುದೆ೦ದು ಯೋಚಿಸುತ್ತಿದ್ದೆ.. ಮೋದಿಯ ಪದೋನ್ನತಿಯನ್ನು ಕಾಲದಕನ್ನಡಿ ಊಹಿಸಿತ್ತು! ಅದಕ್ಕಿದ್ದ ಅಡ್ವಾಣಿಯವರ ವಿರೋಧವನ್ನೂ ಅರ್ಥೈಸಿಕೊ೦ಡಿತ್ತು! ಆದರೆ ಅಡ್ವಾಣಿಯವರ ಈ ನಡೆ ಪಕ್ಷವನ್ನಷ್ಟೇ ಅಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಂತರ್ಜಾಲದಲ್ಲಿ ಅಡ್ವಾಣಿ

ಒಬಾಮಾ ಅಂತರ್ಜಾಲದಿಂದ ಪಡೆದುಕೊಂಡ ಯಶಸ್ಸು ಬಹುಶಃ ಭಾರತೀಯ ರಾಜಕಾರಣಿಗಳ ಗಮನಕ್ಕೂ ಬಂದಿರದೇ ಇರಲಿಕ್ಕಿಲ್ಲ. ಭಾರತೀಯ ಜನತಾ ಪಾರ್ಟಿಯ ಪ್ರಧಾನಮಂತ್ರಿ ಕ್ಯಾಂಡಿಡೇಟ್ ಅಡ್ವಾಣಿಯವರಿಗೂ ಈಗ ಅಂತರ್ಜಾಲದಲ್ಲಿ 'homepage', ಈಗ ಅವರೂ ಅಂತರ್ಜಾಲಕ್ಕೆ ಕಾಲಿಟ್ಟಿದ್ದಾರೆ.

ನಿತ್ಯ ವೆಬ್ಸೈಟುಗಳ, ವೆಬ್ ಪ್ರೋಗ್ರಾಮಿಂಗ್ ಲೋಕದಲ್ಲೇ ಮುಳುಗಿರುವ ನನ್ನ ಗಮನಕ್ಕೆ ನೋಡಿದ ಕೂಡಲೆ ಬಂದದ್ದು ಇಷ್ಟು: ಸಿಕ್ಕಾಪಟ್ಟೆ ಮಾಹಿತಿ ತುರುಕಿ ಪುಟವನ್ನು ದೊಡ್ಡದಾಗಿಸಿದ್ದಾರೆಯೇ ವಿನಃ ಅದರಲ್ಲಿರುವ effectiveness ಸೊನ್ನೆ. ಇನ್ನು ಸ್ವಲ್ಪ ತಲೆಗೆ ಹೇರುವ ವಿಷಯಗಳಿರುವುದು ಬಿಡಿ. ಅಲ್ಲೊಂದು ಶೀರ್ಷಿಕೆ "ಅಡ್ವಾಣಿಯವರು ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಅಭಿನಂದನೆ ಕಳುಹಿಸಿದರು" ಎಂಬುದು. ಮತ್ತೊಂದು ಶೀರ್ಷಿಕೆ "ಪ್ರಧಾನ ಮಂತ್ರಿಯ ಕಾರ್ಯಕಾಲ ೧೦೦ ದಿನ ಉಳಿದಿದ್ದಾಗ ೧೦೦ ದಿನ ಪ್ರೋಗ್ರಾಮ್, ಉಗ್ರರನ್ನು ಹತ್ತಿಕ್ಕುವ ದಿಶೆಯಲ್ಲಿ - ಇದು ಇವರ ವಿಫಲತೆ ತೋರಿಸುತ್ತದೆ" ಎಂಬುದು. ಇದನ್ನೆಲ್ಲ ಓದುವವರಿಗೆ ಯಾರು ನಿಜವಾಗಲೂ ವಿಫಲರಾಗಿದ್ದಾರೆ ಎಂಬುದು ಖಚಿತವಾಗುತ್ತದೋ ಗೊತ್ತಿಲ್ಲ, ಆದರೆ ಖಂಡಿತ ಅಡ್ವಾಣಿಯವರ ಕ್ಯಾಂಪೇಯ್ನ್ ನಡೆಸುತ್ತಿರುವವರ ವಿಫಲತೆ ಮಾತ್ರ ನೇರ ಗೊತ್ತಾಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಅಡ್ವಾಣಿ