ಮಲ್ಲೇಶ್ವರ

ಮಾರಮ್ಮನ ಹಿಂದಿರುವ ವಿಜ್ಞಾನ!

ಬೆಂಗಳೂರಿನ ಮಲ್ಲೇಶ್ವರದ ಪರಿಚಯ ನಿಮಗಿದ್ದರೆ, ಇತ್ತೀಚೆಗಷ್ಟೇ ನೂರು ವಸಂತಗಳನ್ನ ಪೂರೈಸಿದ ಭಾರತೀಯ ವಿಜ್ಞಾನ ಮಂದಿರ ಮತ್ತೆ ಅದಕ್ಕೇ ಒತ್ತಿಕೊಂಡಿರುವ ಸರ್ಕಲ್ ಮಾರಮ್ಮನ ದೇವಸ್ಥಾನವನ್ನ  ನೋಡಿರಬಹುದು. ಪ್ರತಿದಿನ ಅದರ ಎದುರಿಗೆ ಹಾದು ಹೋಗ್ವಾಗ ಮನಸ್ಸಿಗೆ ಬರುವ ಲಹರಿಗಳು ಅನೇಕ.


 ಒಂದೇ ಗೋಡೆಯ ಅಕ್ಕ ಪಕ್ಕಕ್ಕಿರುವ ಎರಡು ಕಟ್ಟಡಗಳನ್ನ ಸಂದರ್ಶಿಸುವ ಜನರು ಎರಡು ಪ್ರತ್ಯೇಕ ಪಂಗಡಕ್ಕೆ ಅಂದರೆ ಒಮ್ಮೊಮ್ಮೆ, ಎರಡು ಬೇರೆ ಬೇರೆ ಗ್ರಹಗಳಿಂದ ಬಂದವರೇನೋ ಎಂಬಷ್ಟು ವಿಭಿನ್ನರು J


 ಒಂದು ಕಡೆ ಆಗ್ತಿರೋದಕ್ಕೆಲ್ಲಾ ದೇವರೇ ಕಾರಣ ಅಂತ ಪ್ರತಿಯೊಂದರ ಭಾರವನ್ನೂ ದೇವರ ಮೇಲೇ ಹಾಕುವ ಮಂದಿ; ಇನ್ನೊಂದು ಕಡೆ ಆಗಿದ್ದಕ್ಕೆಲ್ಲಾ ವೈಜ್ಞಾನಿಕ ಕಾರಣ ಹುಡುಕೋ ಮಂದಿ.


 ಚಲನೆಯ ನಿಯಮಗಳನ್ನ ಆಳವಾಗಿ ಅಭ್ಯಸಿಸಿ ಹೊಸ ಹೊಸ ಸಿದ್ಧಾಂತಗಳನ್ನ ಅರಿಯೋ ಪ್ರಯತ್ನದಲ್ಲಿ ಆ ಕಡೆಯವರಾದ್ರೆ… ಮಾರಮ್ಮನ ಆಣತಿಯಿಲ್ಲದೇ ’ತೃಣ ಮಪಿ ನ ಚಲತಿ’ ಅಂತ ನಂಬಿರೋವ್ರು ಈ ಕಡೆ.


 ಆಚೆ ಬದಿಯವ್ರು ವೆಲಾಸಿಟಿ, ಕೈನೆಟಿಚ್ ಎನರ್ಜಿ ಅಂತ ತಲೆ ಕೆಡಿಸಿಕೊಂಡ್ರೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹನ್ನೊಂದು ಅಡಿ ಎತ್ತರದ ತಂಬೂರಿ!

ರಾಡೆಲ್ ಎಲೆಕ್ಟ್ರಾನಿಕ್ಸ್ ದಯದಿಂದ, ಎಲ್ಲ ಸಂಗೀತಗಾರರ ಬಳಿಯಲ್ಲೂ ಎಲೆಕ್ಟ್ರಾನಿಕ್ ತಂಬೂರಿಗಳೇ ರಾರಾಜಿಸುತ್ತಿರುವ  ಈ ಕಾಲದಲ್ಲಿ, ಬೆಂಗಳೂರಿನ ಶಿವ ಮ್ಯೂಸಿಕಲ್ಸ್ ನವರು ೧೧ ಅಡಿ ಎತ್ತರದ, ೧೫೦ ಕೆಜಿ ತೂಕದ ಏಕಾಂಡ ತಂಬೂರಿಯನ್ನು ತಯಾರಿಸಿರುವುದು ಒಂದು ಸೋಜಿಗವೇ!

ಚಿತ್ರ ಹಾಗೂ ಬರಹಕ್ಕೆ ದಟ್ಸ್ ಕನ್ನಡ ದ ಈ ಕೊಂಡಿಯನ್ನು ನೋಡಿ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಮಲ್ಲೇಶ್ವರ