ಚಂದನ

ಎರಡು ಸುಭಾಷಿತಗಳು

ಅದೇನೋ ಕೆಲವು ಅನುವಾದಗನ್ನು ಮಾಡತೊಡಗಿದಾಗ ಯಾವುದೋ ಒಂದು ಪದ ಹಿಡಿಸದೇ ಹೋದರೆ,  ಪ್ರಕಟಿಸದೇ ಹಾಗೇ ಕರಡಾಗೇ ಇಟ್ಟುಬಿಡುವುದು ನನ್ನ ರೂಢಿ. ಇವತ್ತು ಹಿಂದಿನ ಕರಡುಗಳನ್ನೆಲ್ಲ ನೋಡುವಾಗ ಒಂದೆರಡನ್ನ ಸರಿಮಾಡಿದ್ದಾಯ್ತು. ಅದನ್ನ ಒಟ್ಟಿಗೇ ಹಾಕಿದ್ದೇನೆ.


ಹೆಜ್ಜೆ ಇಡುವ ಮೊದಲು..

 

ಗಟ್ಟಿ ನೆಲದ ಮೇಲೆ ಮುಂಗಾಲಿಟ್ಟೇ
ಎತ್ತುವರು ಹಿಂಗಾಲನು ಜಾಣರು;
ಮತ್ತೆ ಮುಂಬರುವುದ ನೋಡದೆಲೆ
ಇದ್ದೆಡೆಯನು ನೀ ತೊರೆಯದಿರು!

ಸಂಸ್ಕೃತ ಮೂಲ:

ಚಲತ್ಯೇಕೇನ ಪಾದೇನ ತಿಷ್ಠತ್ಯೇಕೇನ ಪಂಡಿತಃ |
ನಾಸಮೀಕ್ಷ್ಯಾಪರಂ ಸ್ಥಾನಂ ಪೂರ್ವಮಾಯಾತನಂ ತ್ಯಜೇತ್ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಸರಣಿ: 

ಸಲಿಗೆ ತಂದೀತು ಅನಾದರ!

ಸಲಿಗೆ ಹೆಚ್ಚಿದರೆ ಮೂಡುವುದಸಡ್ಡೆ;
ಹಲವು ಬಾರಿ ಹೋದರೆ ಉದಾಸೀನ.
ಮಲೆಯ ಮೇಲಿರುವ ಬೇಡತಿ ಮನೆಯಲಿ
ಒಲೆಯ ಉರಿಸಲು ಗಂಧದ ಕಟ್ಟಿಗೆ!

ಸಂಸ್ಕೃತ ಮೂಲ:

ಅತಿ ಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|
ಮಲಯೇ ಭಿಲ್ಲ ಪುರಂಧ್ರೀ ಚಂದನತರು ಕಾಷ್ಟಂ ಇಂಧನಂ ಕುರುತೇ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಥಟ್ ಅಂತ ಕೇಳಿದ ತಪ್ಪುಗಳು!

ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರತಿರಾತ್ರಿ ಪ್ರಸಾರವಾಗುವ "ಥಟ್ ಅಂತ ಹೇಳಿ" ತುಂಬಾ ಜನಪ್ರಿಯ ಕಾರ್ಯಕ್ರಮ. ಕಳೆದ ಕೆಲವು ವಾರಗಳಿಂದ ಈ ಕಾರ್ಯಕ್ರಮವನ್ನು ನೋಡಲು ಶುರು ಮಾಡಿದ್ದೇನೆ. ಇಲ್ಲಿ ಕೇಳುವ ಕೆಲವು ಪ್ರಶ್ನೆಗಳು ತಪ್ಪುಗಳಿಂದ ಕೂಡಿದ್ದರೆ, ಸ್ಪರ್ಧಿಗಳ ಉತ್ತರಗಳು ಕೆಲವೊಮ್ಮೆ ಹಾಸ್ಯಾಸ್ಪದವಾಗಿರುತ್ತವೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಚಂದನ ಮತ್ತು ಸಾವು

ನಾನಾಗ ಒಂಬತ್ತನೆ ಇಯತ್ತಿನಲ್ಲಿದ್ದೆ, (ಆಗ ದೇಹ ಬೆಳ್ದಿತ್ತಷ್ಟೆ ಬುದ್ದಿ ಬೆಳ್ದಿರ್ಲಿಲ್ಲ ಅಂತ ಈಗನ್ಸುತ್ತೆ.) ಚಂದನ ಅಂತ ಒಬ್ಬಳು ಹೊಸ ಹುಡುಗಿ ನಮ್ಮ ಶಾಲೆಗೆ ನಮ್ಮ ವಿಭಾಗಕ್ಕೆ ಸೇರಿದಳು ನಾವೆಲ್ಲ ಬೇಗ ಸ್ನೇಹಿತರಾದೆವು..........ಆದರೆ ಅವಳ ಸ್ನೇಹಿತರ ಗುಂಪು ಮಾತು ಕಥೆ ಬೇರೆಯೆ ಆಗಿತ್ತು ಅವಳು ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವಳಾಗಿದ್ದಳು............ಆದರೆ ಎಲ್ಲರೊಂದಿಗು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಚಂದನ