ಭಾವಾನುವಾದ

ನಾನಾರಿಗೆ ಕೃತಜ್ಞನಾಗಿರಲಿ...?

(ಮಲೆಯಾಳ ಚಿತ್ರಗೀತೆಯೊ೦ದರ ಭಾವಾನುವಾದ ಪ್ರಯತ್ನ)

 

 ನಾನಾರಿಗೆ ಕೃತಜ್ಞನಾಗಿರಲಿ...? 

ನಾನಾರಿಗೆ  ಕೃತಜ್ಞನಾಗಿರಲಿ...? 

ನಾನಾರಿಗೆ  ಕೃತಜ್ಞನಾಗಿರಲಿ...? 

 

ಈ ಭುವಿಯಲ್ಲಿ ಅವತಾರವೆತ್ತಿಸಿದ  

ಎನ್ನರ್ಧ ದೇಹವಾದ ತ೦ದೆಗೋ

ಉಳಿದರ್ಧ ದೇಹವಾದ ಆ ಮಾತೆಗೋ

ಹತ್ತು ಮಾಸಗಳೂ ಸುಮ್ಮನೆ ನನ್ನನ್ನು ಹೊತ್ತಿದ್ದ ಗರ್ಭಪಾತ್ರೆಗೋ

ನಾನಾರಿಗೆ ಕೃತಜ್ಞನಾಗಿರಲಿ...?

 

ಕೈಕಾಲು ಬಡಿದು ಅಳುತ್ತಲೇ ಭುವಿಗೆ

ನಾ ಬಿದ್ದ ಆ ಶುಭಘಳಿಗೆಗೋ

ಕೈಕಾಲು ಬಡಿದು ಅಳುತ್ತಲೇ ಭುವಿಗೆ

ನಾ ಬಿದ್ದ ಆ ಶುಭಘಳಿಗೆಗೋ

ರಕ್ತಬ೦ಧಗಳನೆ ಸರಿಸಿ ದೂರಾಗಲು  

ತಾಯಿ೦ದ ಅಗಲಿಸಿದ ಆ ಹೊಕ್ಕುಳ ಬಳ್ಳಿಗೋ

ನಾನಾರಿಗೆ ಕೃತಜ್ಞನಾಗಿರಲಿ...? 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಿಷದ ಗಿಡ

ಗೆಳೆಯನ ಮೇಲೆ ಏಕೋ ಮುನಿಸಾಯ್ತು
ಅವನೆದುರು ಹೇಳಿಕೊಂಡೆ, ಮುನಿಸು ಕರಗಿತು
ಶತ್ರವಿನ ಮೇಲೇಕೋ ಮುನಿಸಾಯ್ತು
ಅವನೆದುರು ಹೇಳಲಿಲ್ಲ, ಮುನಿಸು ಬೆಳೆಯಿತು

ಅವನ ಮೇಲಿನ ಭಯದ ನೀರುಣಿಸಿದೆ
ಹಗಲು-ರಾತ್ರಿ ಕಣ್ಣೀರು ಹನಿಸಿದೆ
ಹುಸಿ ನಗೆ ಹಾಗೂ ಕುತಂತ್ರಗಳ
ಬಿಸಿಲುಣಿಸಿ ಮುನಿಸು ಬೆಳೆಸಿದೆ

ದ್ವೇಷದ ಗಿಡ ಹಗಲು-ರಾತ್ರಿ ಬೆಳೆಯಿತು
ಕೊನೆಗೆ ಸುಂದರ ವಿಷ ಫಲ ಬಿಟ್ಟಿತು
ಅದು ಬೆಳಗುವುದನ್ನು ನನ್ನ ಶತ್ರು ನೋಡಿದ್ದ
ಆ ಫಲ ನನ್ನದೆನ್ನುವುದನ್ನು ಅವ ಅರಿತಿದ್ದ

ಕತ್ತಲಾವರಿಸಿದಾಗ, ಏನೂ ಕಾಣದಾದಾಗ
ಸದ್ದಿಲ್ಲದೇ ಬಂದ, ವಿಷ ಫಲವ ಕದ್ದು ಮೆದ್ದ
ಬೆಳಗಾದಾಗ ನನ್ನ ಹೃದಯ ಪುಟಿಯಿತು
ಮರದಡಿ ಅವ ಸತ್ತಿದ್ದ ಕಂಡು ನಲಿಯಿತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (5 votes)
To prevent automated spam submissions leave this field empty.

ಹೆಸರುವಾಸಿ ಆಗೋದು ಹೇಗೆ?

ಮಡಿಕೆ ಒಡೀತೀಯಾ?
ಪರ್ವಾಗಿಲ್ಲ.
ಬಟ್ಟೆ ಹರ್ರ್ಕೊಳ್ತೀಯಾ?
ಚಿಂತೇ ಇಲ್ಲ!
ಕತ್ತೆ ಸವಾರಿ ಮಾಡುವೆಯಾ?
ಅದಿನ್ನೂ ಒಳ್ಳೇದೇ.
ಹೆಸರುವಾಸಿ ಆಗ್ಬೇಕಿದ್ರೆ
ಮಾಡ್ತಿರ್ಬೇಕು ಸದ್ದು ಗದ್ಲ! 

ಸಂಸ್ಕೃತ ಮೂಲ:

ಘಟಮ್ ಭಿಂದ್ಯಾತ್ ಪಟಮ್ ಛಿಂದ್ಯಾತ್ ಕುರ್ಯಾತ್ ರಾಸಭಾರೋಹಣಮ್|
ಯೇನಕೇನ ಪ್ರಕಾರೇಣ  ಪ್ರಸಿದ್ಧ ಪುರುಷೋ ಭವೇತ್ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

(ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಕೇಳಿ, ಒಂದು ಸಾವಿರ ವರ್ಷಗಳ ಹಿಂದೆ, ಈ ಪದ್ಯವನ್ನು ಕಲ್ಲಿನಲಿ ಕೆತ್ತಿಸಿದ ನಮ್ಮೂರ ಅರಸರನ್ನು ನೆನೆಯದೇ ಇರಲಾಗಲಿಲ್ಲ - ಹಂಸಾನಂದಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಭಾವಾನುವಾದ