ಕೃಷಿ

ಮಳೆನೀರು ಸಂಗ್ರಹಿಸಿದರೆ ವರ್ಷಪೂರ್ತಿ ನೀರು

 ಮಳೆಗಾಲ ಕಳೆದಂತೆ ಆಸುಪಾಸಿನ ರೈತರು ಬೋಳುಗುಡ್ಡದ ಮೇಲಿನ ತೋಟಕ್ಕೆ ನೀರುಣಿಸಲು ಹರಸಾಹಸ ಪಟ್ಟರೆ, ಇವರು ತೋಟದ ಮಳೆ ಹೊಂಡದಲ್ಲಿ ಮೀನುಸಾಕಣೆ ಆರಂಭಿಸಿದ್ದಾರೆ. 

 

 ಧಾರವಾಡ ಜಿಲ್ಲೆಯ ದಡ್ಡಿ ಕಮಲಾಪುರದ ಸುತ್ತಮುತ್ತ ಕಾಣಿಸುವುದು ಬೋಳು ಗುಡ್ಡ, ವಿಶಾಲವಾದ ಬಯಲು. ಆದರೆ ಡಾ|| ಸಂಜೀವ ಕುಲಕರ್ಣಿಯವರ ’ಸುಮನ ಸಂಗಮ’ ಹೊಕ್ಕಾಗ, ಬಯಲು ಸೀಮೆಯ ಈ ನೋಟಕ್ಕೆ ತೆರೆ. ಇವರ ತೋಟ ಸುತ್ತಾಡಿದರೆ, ಮಲೆನಾಡ ಕಾಡು ಹೊಕ್ಕ ಅನುಭವ. 1996ರಲ್ಲಿ 17 ಎಕರೆ ಜಾಗ ಕೊಂಡಾಗ ಪರಿಸ್ಥಿತಿ ಆಸುಪಾಸಿನ ನೋಟಕ್ಕಿಂತ ಭಿನ್ನವಾಗಿರಲಿಲ್ಲ. ಸಂಗಮ ಆಗಬೇಕು ಸುಮಂಗಳ, ಸು-ಮನಗಳ ಸಂಗಮ ಎಂಬ ಆಶಯದಲ್ಲಿ 15 ವರ್ಷಗಳ ಹಿಂದೆ ಕೈಗೊಂಡ ಪ್ರಯೋಗದ ಫಲ ಇದು.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (13 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೆಸುವಿನ ಎಲೆಯರಳಿದಾಗ

ಕೆಸುವಿನ ಎಲೆಯ ಗೊಜ್ಜು, ಪತ್ರೊಡೆ ಮಾಡಿ ಬಾಯಿ ಚಪ್ಪರಿಸಿದ್ದೇವೆ. ಉದ್ಯಾನವನದಲ್ಲೋ, ಮನೆಯಂಗಳದ ಬಣ್ಣ ಬಣ್ಣದ ಕೆಸುವಿನೆಲೆ ನೋಡಿ ಕಾಣಲು ಚೆಂದವಿದ್ದರೂ ತಿನ್ನಲು ಬರುವುದಿಲ್ಲವಲ್ಲ ಎಂದು ಮರುಗಿದ್ದೇವೆ. ಆದರೆ ತಿನ್ನುವ ಬದಲು ಬೇರೆ ಯಾವುದಕ್ಕೆ ಉಪಯೋಗಕ್ಕೆ ಬರಬಹುದು ಎಂದು ಯೋಚಿಸಿದವರು ಕೆಲವರಷ್ಟೇ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬದಲಾಗುತ್ತಿರುವ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣ

      ಮಲೆನಾಡಿನ   ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ.  ಈಗಾಗಲೇ  ಬಹುಶ:  ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ ಕಳೆಯುವುದರ ಒಳಗೆ ಈ ಅಡಿಕೆ ಕೊಯ್ಲಿನ ಚಟುವಟಿಕೆಗಳು ಆರಂಭಗೊಳುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಸಿಕ್ಸ್ ಪ್ಯಾಕ್ ಆಬ್ಸ್ ಹೊಂದಲು ಸಹಜ ವಿಧಾನ

 

 

Agriculture3

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ ಎನ್ನುವ ಸಾಹಿತಿ!!

ಹೀಗೆ ಅಶೋಕ್ ಅವರ ಓ.ಕೇ.ನೋ. ನೊಡ್ತಾ ಇರ್ಬೇಕಾದ್ರೆ ಕಾಣಿಸಿದ ಕೊಂಡಿ ಮಾನ್ಯ ಯು.ಆರ್. ಅನಂತಮೂರ್ತಿಯವರ ಪ್ರಜಾವಾಣಿ ಅಂಕಣ ಬರಹ. ಸಗಣಿಯನ್ನು ಗೊಬ್ಬರವಾಗಿ ಚಿಕ್ಕಂದಿನಿಂದ, ಇಂದಿನವರೆಗೂ ಉಪಯೋಗಿಸಿ, ಉಪಯೊಗಿಸಿದ್ದನ್ನು ನೋಡಿ (ಅದರಲ್ಲೂ ರಾಸಾಯನಿಕ ರಹಿತ ಜೈವಿಕ ಗೊಬ್ಬರ ಆಧಾರಿತ ಮಿತ್ರರ ಕೆಲವು ತೋಟಗಳು) ಹಲವಾರು ಕೃಷಿ ಬರಹಗಳಲ್ಲಿ ಗೊಬ್ಬರದಲ್ಲಿ ಸಗಣಿಯ ಪ್ರಸ್ತಾಪ ನೋಡಿದ ಮೇಲೆ, ಬರಹಗಾರರ "ಸಗಣಿಗೆ ಕೃಷಿಯಲ್ಲಿ ಮಹತ್ವವಿಲ್ಲ" ಎಂಬ ಮಾತು ಆಶ್ಚರ್ಯ ತಂದಿತು. ಓದಿದರೆ ನಿಮಗೂ ಅನ್ನಿಸಬಹುದು! 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಿಟಿ ಬದನೆ: ಸೂಕ್ತ ತೀರ್ಮಾನ

ಭಾರತ ಸರ್ಕಾರದ ಪರಿಸರ ಖಾತೆ ಸಚಿವರು ಬಿಟಿ ಬದನೆ ವಾಣಿಜ್ಯೀಕರಣದ ವಿಚಾರದಲ್ಲಿ ಸೂಕ್ತವಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ನಾನೊಬ್ಬ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವನಾಗಿ ಮತ್ತು ರೈತರ ಮಧ್ಯೆ ಸುಸ್ಥಿರ ಸಾವಯವ ಕೃಷಿ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿದ ಅನುಭವದಲ್ಲಿ ಹೇಳುವುದಾದರೆ ಬಿಟಿ ಬದನೆ ರೀತಿಯ ಸಂಶೋಧನೆಗಳು ಬಹುತೇಕ ಬಹುರಾಷ್ಟ್ರೀಯ ಕಂಪನಿಗಳ ಉಪಯೋಗಕ್ಕಾಗಿ ಆಗುತ್ತಿರುವ ಸಂಶೋಧನೆಗಳಾಗಿವೆ. ಇಂತವುಗಳಿಂದ ಸಾಮಾನ್ಯ ರೈತರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಈ ರೀತಿಯ ಸಂಶೋಧನೆಗಳನ್ನು ಕೈಬಿಟ್ಟು ರೈತರು ಸ್ವಾವಲಂಬಿ ಸುಸ್ಥಿರ ಕೃಷಿ ಮಾಡಲು ಸಹಾಯಕವಾದ ಸಂಶೋಧನೆಗಳು ಮತ್ತು ವಿಸ್ತರಣಾ ಕಾರ್ಯಗಳು ಹೆಚ್ಚಬೇಕಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೋಡಾ..ಇಲ್ಲಿ ನೋಡಾ

ಆ ಬಾನ ನೀಲಂಗಳದ ಕೆಳಗಾss
ಬಣ್ಣ ಬಣ್ಣದಾ ಮೋಡಗಳ ಬಳಗಾss
ಓಡುತ್ತಿವೆ ಓಡುತ್ತಿವೆ ಒಂದೊಂದು ಒಂದೊಂದರ ಒಳಗಾss

ಅಪ್ಪಿಕೊಳ್ಳಲವು ತಬ್ಬಿಕೊಳ್ಳಲವು
ಎಂಬ ತವಕ ಪುಳಕ ಈ ರೈತಗಾss
ಅದಕ್ಕೆಂದೆ ಮಾಡವ್ನೆ ಮುಗಿಲತ್ತ ಮೊಗss

ಹೇ ಮೋಡ ಇಲ್ಲಿ ನೋಡ
ನಾವಾಗುವಾ ಬಾರ ಗೆಳೆಯಾ
ನಿನ್ನ ಕರೆತಂದು ನಮ್ಮಟ್ಟಿಗೆ
ಹಸಿರಾಗಿಸಿಕೊಳ್ತೀನಿ ಇಳೆಯಾ

ನಮ್ಮಪ್ಪ ಸೂರ್ಯಪ್ಪ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕೃಷಿ