ಗ್ನು/ಲಿನಕ್ಸ್ ಹಬ್ಬ

ನವರಾತ್ರಿಯ ದಿನಗಳು ಮತ್ತು ಸಂಗೀತ ನವರಾತ್ರಿ

 ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ ಹಾಕಿದ್ದೇನೆ. 

 

ನವರಾತ್ರಿಯ ದಿನಗಳು: http://sampada.net/books/5976

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

ಮೈಸೂರಿನಲ್ಲವತ್ತು ಗ್ನು/ಲಿನಕ್ಸ್ ಹಬ್ಬ. ಕನ್ನಡದಲ್ಲಿ passionate ಆಗಿ ಬರೆಯಬೇಕೆಂದರೆ [:user/aravinda|ಅರವಿಂದನಿಗಿಂತ] ಉತ್ತಮ ಬೇರೆ ಯಾರೂ ಇರಲಿಕ್ಕಿಲ್ಲ. ಕನ್ನಡ ಅಂದ ಕೂಡ್ಲೆ ಇವನಿಗೆ ಶ್ರದ್ಧೆ, ಆಸಕ್ತಿ ದುಪ್ಪಟ್ಟು ಆಗುವುದು ಅಂತ ಹೇಳಿದರೂ ಉತ್ಪ್ರೇಕ್ಷೆಯಲ್ಲ! ನೀವೇ ನೋಡಿ. :-)
ಅವನಿಗೂ ತಿಳಿಸದೆ ಈ ಚಿತ್ರಗಳ ಸಿರೀಸ್ ಇರುವ ಅನಿಮೇಶನ್ ಹಾಕುತ್ತಿದ್ದೇವೆ ಇಲ್ಲಿ. :-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭಾನುವಾರದ ಹಬ್ಬ

ಸರಿಯಾಗಿ ನಿದ್ರೆಯಿಲ್ಲದೆ, ಕಣ್ಣು ಸ್ಟ್ರೇಯ್ನ್ ಮಾಡಿಕೊಂಡು - ಇನ್ನು ಗ್ನು/ಲಿನಕ್ಸ್ ಹಬ್ಬ ಮಾಡೋದೇನೆ ಎಂದುಕೊಂಡು ಕುಳಿತಿದ್ದೆ. ಮುಂಜಾನೆ ನಾಲಕ್ಕಾಗಿತ್ತು. ಇನ್ನು ನಿದ್ರೆ ಮಾಡಲಾಗದೆಂದು LHC shutdown ಆದದ್ದರ ಬಗ್ಗೆ ಓದುತ್ತ ಕುಳಿತಿದ್ದೆ. ಒರಿಸ್ಸಾ ಪ್ರವಾಹದ ಬಗ್ಗೆ ಓದುತ್ತ ಕುಳಿತಿದ್ದೆ. ಸರಿಯಾಗಿ ಐದಕ್ಕೆ ಫೋನು ಬಂತು:
"ಎದ್ದಿದೀಯಾ ಹರಿ?"
"ಹೂಂ ಕಣೋ"
"ಸರಿ, ಈಗ ಹೊರಟೆ. ಕಾರು ತಗೊಂಡು ಇನರ್ಧ ಗಂಟೆಯಲ್ಲಿ ಅಲ್ಲಿರ್ತೀನಿ"

ಸರಿ, ರೆಡಿಯಾಗಿ ಬ್ಯಾನರ್ ಕೆಳಗಿಳಿಸಿ ಲ್ಯಾಪ್ಟಾಪ್ ಪ್ಯಾಕ್ ಮಾಡಿ ಹೊರಟೆ. ಕಾರಿನ ಸ್ಪೀಡು, ಡೆಕ್ ನ ವೂಫರ್ ಸದ್ದು ನಿದ್ರೆಯಿಲ್ಲದ ಮನಸ್ಸಿಗೆ ಸವಾಲೆಸೆದಿತ್ತು. ಈ ನಡುವೆ ಮುಂಜಾನೆಯ ಮಂಜಿನಲ್ಲಿ ರೋಡು ಮಿಸ್ ಆಗಿ ಕಳಕೊಂಡ ಕೆಲವು ಘಳಿಗೆಗಳು. ಅಂಕುಡೊಂಕಿನ ಮೈಸೂರು ರಸ್ತೆಯಲ್ಲಿ ರಾಮನಗರದ ಲೋಕರುಚಿ ತಲುಪುವಷ್ಟರಲ್ಲಿ ಎಂಟಾಗಿತ್ತು. ಸುತ್ತ ಹುಸಿ ಜನಪದ ಓಡಾಡಿಕೊಂಡಿದ್ದ ಹೋಟೆಲಿನಲ್ಲಿ ಕಡುಬು, ರಾಗಿ ರೊಟ್ಟಿ (ಅಷ್ಟೊತ್ತಿಗೇ) ನಮ್ಮ ತಿಂಡಿ. ಅತ್ತಿತ್ತ ಕಂಡ ಮೈಸೂರು-ಬೆಂಗಳೂರು ಹುಡುಗಿಯರ ಮುಖಗಳು ನಮ್ಮ ದಂಡಯಾತ್ರೆಯ ಸಿಪಾಯಿಗಳ ಕಣ್ಣುಗಳನ್ನು busy ಇಟ್ಟಿತ್ತು.

ಫ್ಯೂಶನ್, ಭಾವಗೀತೆ, ಹಿಂದಿ ಸಿನೆಮಾ ಹಾಡು, ಮೆಟಲ್, ರಾಕ್ - ಹೀಗೆ ಎಲ್ಲ ಹಾಡುಗಳ ಕಲಸುಮೇಲೋಗರದೊಡನೆ ಮೈಸೂರು ವಿ.ವಿ. ತಲುಪಿದ್ದು ಸರಿಯಾಗಿ ೧೦ಕ್ಕೆ. ಆಡಿಟೋರಿಯಮ್ ಆಗಲೇ ಭರ್ತಿಯಾಗಿತ್ತು!
ಹಲವರು ನಿಂತುಕೊಂಡು ಕೇಳುತ್ತಿದ್ದದ್ದು ಕಾಣಿಸಿತು.

ಗ್ನು/ಲಿನಕ್ಸ್ ಟಿ-ಶರ್ಟ್ ಹಾಕಿಕೊಂಡು ಒಂದೆರಡು ಕೆಲಸಗಳನ್ನು ಕೈಗೆತ್ತಿಕೊಂಡು ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ (Physics) ಡಿಪಾರ್ಟ್ಮೆಂಟ್ ಲ್ಯಾಬಿಗೆ ಹೋದಾಗ ಅಲ್ಲಿರುವ ಹಲವು ಸಿಸ್ಟಮುಗಳಲ್ಲಿ ಗ್ನು/ಲಿನಕ್ಸ್ ಇದ್ದದ್ದು, ಜೊತೆಗೆ ಕನ್ನಡಕ್ಕೆ ಬೇಕಾದ ಸಕಲ ತಂತ್ರಾಂಶಗಳೂ ಅದರಲ್ಲಿದ್ದದ್ದು ನೋಡಿ ಖುಷಿಯಾಯ್ತು.

ಅತ್ತ ಗ್ನು/ಲಿನಕ್ಸ್ ಪರಿಚಯ ಜೋರಾಗಿ ನಡೆದಿತ್ತು. ದಣಿವಾಗಿದ್ದ ಕಾರಣ ಸ್ಟೇಜು ಬಿಟ್ಟು ಸ್ವಲ್ಪ ದೂರ ಉಳಿದೆ. ಒಂದೆರಡು ಬಾರಿ ಮಾತ್ರ ಇಂಗ್ಲಿಷ್ ಬಳಕೆ ಜೋರಾದಾಗ "ಸಂಪೂರ್ಣ ಇಂಗ್ಲೀಷ್ ಬೇಡ, ಕನ್ನಡ ಹೆಚ್ಚಾಗಿ ಇರಲಿ" ಎಂದು ಹೇಳಿ ಬಂದೆ. ಮೈಸೂರಿಗರಲ್ಲಿ ಸ್ವಚ್ಛ ಭಾರತೀಯ ಇಂಗ್ಲೀಷಿಗಿರುವ ಒಲವು ಅಚ್ಚರಿ ಮೂಡಿಸಿತು. ಈ ಬಾರಿ ಮೈಸೂರಿನ ತಂಡದವರ ಬಯಕೆಯಂತೆ ಗ್ನು/ಲಿನಕ್ಸ್ ಹಬ್ಬದ ನಕ್ಷೆ ಸ್ವಲ್ಪ ಬದಲಾಗಿತ್ತು. ಮೊದಲರ್ಧ ದಿನ ಗ್ನು/ಲಿನಕ್ಸಿನಲ್ಲಿರುವ ದಿನನಿತ್ಯದ ಬಳಕೆಯ ತಂತ್ರಾಂಶಗಳನ್ನು ಬಳಸುವುದು ಹೇಗೆ ಎಂಬುದರ ದೃಶ್ಯಾವಳಿ, ಮಾತುಕತೆ. ಉಳಿದರ್ಧ ದಿನ ಗ್ನು/ಲಿನಕ್ಸ್ installationಉ - ಗ್ನು/ಲಿನಕ್ಸ್ ಹಾಕಿಕೊಂಡು ಪ್ರಯತ್ನಿಸುವಲ್ಲಿ ಸಹಾಯ ಮಾಡುವ ಸಮಯ.

ನೂರಾರು ಜನ ಭಾಗವಹಿಸಿ ಗ್ನು/ಲಿನಕ್ಸ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರಿದ್ದು ಖುಷಿ ತಂದಿತು. ಕನ್ನಡದ ಸುತ್ತ ಕೆಲಸ ಮಾಡುತ್ತಿರುವ ಕೆಲವು ಹಿರಿಯರ ಪರಿಚಯ ಮುಖತಃ ಆದದ್ದು ಮತ್ತಷ್ಟು ಖುಷಿ ಕೊಟ್ಟಿತು.
ಪರಿಸರದ ಸುತ್ತ ಕಾಳಜಿವಹಿಸಿ ಕೆಲವು ಚಿಕ್ಕಪುಟ್ಟ ಸಂಶೋಧನೆಗಳನ್ನು ಮಾಡುತ್ತಿರುವ ಹಿರಿಯರೊಬ್ಬರು ಸ್ವತಃ ಮಾತನಾಡಿಸಲೆಂದು ಬಂದು ತಾವು ಮಾಡುತ್ತಿರುವ ಕೆಲಸದ ಬಗ್ಗೆ ತಿಳಿಸಿದರು. ಆಸಕ್ತಿ ಹುಟ್ಟಿಸಿತು.
ಬಂದವರಲ್ಲೊಬ್ಬರು ನನ್ನ ಮುಖ ಗುರುತಿಸಿ ನೀನು ಮೈಸೂರಿನಲ್ಲಿ ನಮ್ಮ ಸ್ಕೂಲಿನಲ್ಲೇ ಓದ್ತಾ ಇದ್ದಿ, ನಮ್ಮ ಜೂನಿಯರ್. ನಾವೆಲ್ಲ ಒಟ್ಟಿಗೇ ಕ್ರಿಕೆಟ್ ಆಡ್ತಾ ಇದ್ವಿ, ನೆನಪಿದೆಯಾ ಎಂದು ಕೇಳಿದ್ದು ನೆನಪಿನ ಪುಟಗಳನ್ನು ಮತ್ತೊಮ್ಮೆ ತಿರುವಿ ಹಾಕುವಂತೆ ಮಾಡಿತು. ನೆನಪು ಮಾತ್ರ ಆಗಲಿಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಾಳೆ ಹಬ್ಬ!

ನನಗೂ ಮರೆತು "ನಾಳೆ ಹಬ್ಬ ಅಲ್ವ?" ಅಂತ ಮಾತ್ರ ಹೇಳಿದೆ, ಪರಿಚಯದವರೊಬ್ಬರೊಂದಿಗೆ ಫೋನಿನಲ್ಲಿ ಮಾತನಾಡುವಾಗ. "ನಾಳೆ ಯಾವ ಹಬ್ಬಾರಿ?" ಎಂದು ಒಂದು ಕ್ಷಣ ತಲೆಕೆಡಿಸಿಕೊಂಡರು "ನಾಳೆ ಯಾವುದೂ ಇದ್ದ ಹಾಗಿಲ್ವಲ್ಲ?"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗ್ನು/ಲಿನಕ್ಸ್ ಹಬ್ಬ ವಾಲಂಟೀರ್ಸ್ ಬಳಗ

ಗ್ನು/ಲಿನಕ್ಸ್ ಹಬ್ಬ ಹೇಗಾಯಿತು ಎಂದು ಎಲ್ಲರೂ ಕೇಳುತ್ತಿದ್ದೀರಿ. ಸವಿವರವಾಗಿ ಬರೆಯಲು ಬಿಡುವಾಗಿಲ್ಲ.

ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯಿತು. ಮೊದಲ ಪ್ರಯತ್ನಕ್ಕೆ ಅಂದುಕೊಂಡದ್ದಕ್ಕಿಂತ ಯಶಸ್ವಿಯಾಯಿತು ಎಂದೇ ಹೇಳಬಹುದು.

ಎಂದಿನ ಕೆಲಸದ ನಡುವೆ ಇನ್ನೂ ಕಾರ್ಯಕ್ರಮ ನಂತರದ ಅಳಿದುಳಿದ ಕೆಲವು ಜವಾಬ್ದಾರಿಗಳು ಇನ್ನೂ ಮುಗಿಯದೆ ಹಾಗೇ ಇರುವುದರಿಂದ ಸದ್ಯಕ್ಕೆ ಈ ಚಿತ್ರ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆ ಮುಗಿಲು ಮುಟ್ಟಿದಾಗ...


ನಾವಂದುಕೊಂಡದ್ದು ೫೦ ಜನ. ವಾರವೊಂದರಲ್ಲೇ ನೂರಾಯ್ತು. ನಮಗೆಲ್ಲ ಆಶ್ವರ್ಯವಾಗಿತ್ತು. ಬಹಳ ಖುಷಿಯಾಗಿತ್ತು! ಎರಡು ಸೆಶ್ಶನ್ ಇಟ್ಟುಕೊಳ್ಳೋಣ ಅಂತ ಮಾತನಾಡಿಕೊಂಡಿದ್ದೆವು.

ಇವತ್ತು ನೂರಾರು ನೋಂದಣಿಗಳು. ನಮಗೆಲ್ಲ ಒಮ್ಮೆ ಭಯವಾಯ್ತು. ಗ್ನು/ಲಿನಕ್ಸ್ ಬಗ್ಗೆ ಇಷ್ಟೊಂದು ಜನ ಆಸಕ್ತಿ ವಹಿಸುವರೆಂಬುದನ್ನು ಕನಸು ಮನಸ್ಸಿನಲ್ಲೂ ನಾವುಗಳು ಎಣಿಸಿರಲಿಲ್ಲ.

ಇಂದು ಬೆಳಿಗ್ಗೆ ವಿ.ಕ ಹಾಗೂ ಕನ್ನಡಪ್ರಭದಲ್ಲಿ ಕಾರ್ಯಕ್ರಮದ ಕುರಿತು ಬಂದ ಲೇಖನಗಳಿಂದ ಕೆಲವೇ ಘಂಟೆಗಳಲ್ಲಿ ನೋಂದಣಿ ಇಮ್ಮಡಿಯಾಗಿ ೩೦೦ ದಾಟಿ ಹೋಯ್ತು!

ಆದರೆ ಕಾರ್ಯಕ್ರಮ ಇಟ್ಟುಕೊಂಡಿರುವ ಜಾಗದಲ್ಲಿ ಹೆಚ್ಚು ಜನರಿಗೆ ಅನುವು ಮಾಡಿಕೊಡುವುದಕ್ಕೆ ಅನುಮತಿ ನಮಗಿಲ್ಲ. ನಮ್ಮೆಲರ ದುಗುಡ ಹೇಳತೀರದು! ಹೀಗಾಗಿ ನಿಜವಾಗಲೂ installationನಲ್ಲಿ ಭಾಗವಹಿಸುವವರು ಮಾತ್ರ ಬನ್ನಿ ಎಂದು ಎಲ್ಲರಿಗೂ ಕೊನೆ ಘಳಿಗೆಯಲ್ಲಿ ತಿಳಿಸಿದೆವು.

ಈ ಬಗ್ಗೆ ನಮ್ಮೆಲ್ಲರ ಪರಿಸ್ಥಿತಿ ಅರಿತು ಸ್ಪಂದಿಸಿದ ಎಲ್ಲರಿಗೂ ಅನಂತ ವಂದನೆಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗ್ನು/ಲಿನಕ್ಸ್ ಹಬ್ಬಕ್ಕೊಂದು ತನ್ನದೇ ವೆಬ್ಸೈಟ್

ಗ್ನು/ಲಿನಕ್ಸ್ ಹಬ್ಬಕ್ಕೆ ಇಗ ತನ್ನದೇ ಆದ ಒಂದು ವೆಬ್ಸೈಟ್. ಭೇಟಿ ಕೊಡಿ:

http://habba.in

ಹೊಸ ವೆಬ್ಸೈಟು ಈ ರೀತಿಯ ಇನ್ನೂ ಹಲವು ಕಾರ್ಯಕ್ರಮಗಳಿಗೆ ನಾಂದಿ ಹಾಡಲಿ ಎಂಬ ಕನಸು ಹೊತ್ತು, ಈ ರೀತಿಯ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಎಲ್ಲಿ ನಡೆದರೂ ಈ ವೆಬ್ಸೈಟಿನಲ್ಲಿ ಆ ಕಾರ್ಯಕ್ರಮಕ್ಕೆ ಅಂತರ್ಜಾಲದಲ್ಲಿ ಬೇಕಾಗುವ ಜಾಗವನ್ನೂ, ಚಟುವಟಿಕೆಗೆ ಬೇಕಾದ ಸರಕನ್ನೂ ಒದಗಿಸುತ್ತ ಹೋಗುವ ಉದ್ದೇಶದಿಂದ ಈ ಹೊಸ ತಾಣ ಪ್ರಾರಂಭಿಸಿದ್ದೇವೆ. ಸದುಪಯೋಗವಾಗಬಹುದೆಂಬ ಆಶೆ ನಮ್ಮದು.

ಇಲ್ಲಿಯವರೆಗೂ ವಾಲಂಟೀರ್ಸ್ ಸಂಖ್ಯೆ ಸುಮಾರು ೧೫, ಕಾರ್ಯಕ್ರಮಕ್ಕೆ ನೋಂದಾಯಿಸಿದವರ ಸಂಖ್ಯೆ ಸುಮಾರು ೧೧೦ಕ್ಕೂ ಹೆಚ್ಚು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗ್ನು/ಲಿನಕ್ಸ್ ಹಬ್ಬ - Volunteers meet ಫೋಟೋಗಳು

GNU/Linux Habba Volunteers meet

ನಿನ್ನೆ (ಭಾನುವಾರ) ನಾವುಗಳು ಇಟ್ಟುಕೊಂಡಿದ್ದ Volunteers meetನಲ್ಲಿ ನನ್ನ ಕ್ಯಾಮೆರಾದಿಂದ ತೆಗೆದ [:image/tid/1118|ಫೋಟೋಗಳು ಇಲ್ಲಿವೆ.]

ನಾವು ಮಾತನಾಡಿಕೊಂಡ ವಿಷಯಗಳು ಹಾಗೂ ಇದೇ ತಿಂಗಳು ೨೬ನೇ ತಾರೀಖು ಇರುವ "ಗ್ನು/ಲಿನಕ್ಸ್ ಹಬ್ಬ"ದ ಕುರಿತು ಮತ್ತಷ್ಟು ವಿವರ ಮುಂದಿನ ಬ್ಲಾಗ್ ಪೋಸ್ಟಿನಲ್ಲಿ. ನಿರೀಕ್ಷಿಸಿ! :-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಗ್ನು/ಲಿನಕ್ಸ್ ಹಬ್ಬ