ಯುಗಾದಿ

ಯುಗಾದಿ : ಅಂದು-ಇಂದು

ಯುಗಾದಿ - ಚೈತ್ರ ಮಾಸದ ಮೊದಲ ದಿನ . ಹಿಂದೂಗಳಿಗೆ ಹೊಸ ವರುಷದ ಹರುಷ. ಜ್ಯೋತಿಷ್ಯ ಶಾಸ್ತ್ರದ  ಪ್ರಕಾರ ಇಂದು ಅಶ್ವಿನಿ ನಕ್ಷತ್ರಕ್ಕೆ ಸೂರ್ಯ ಪ್ರವೇಶಿಸಿದಾಗ ಭೂಮಿಯ ಮೇಲಿನ ಗಿಡ ಮರಗಳು ಚಿಗುರೊಡೆಯಲಾರಂಭಿಸುತ್ತವೆ. ಹಾಗಾಗಿ ಈ ದಿನವನ್ನು ವರ್ಷಾರಂಭ ಎಂದು ಆಚರಿಸುತ್ತಾರೆ. ಇವೆಲ್ಲ ಮಾಹಿತಿಗಳು , ಯುಗಾದಿಯ ಹಿನ್ನೆಲೆಗಳೆಲ್ಲ ಇತ್ತೀಚೆಗಷ್ಟೇ ತಿಳಿದು ಬಂದದ್ದು. ಬಾಲ್ಯದಲ್ಲಿ ನಮಗೆ ಯುಗಾದಿಯೆಂದರೆ ಹೊಸಬಟ್ಟೆ-ಒಬ್ಬಟ್ಟು ಎಂದಷ್ಟೇ ಗೊತ್ತಿದ್ದುದ್ದು. ಯುಗಾದಿಯೆಂದರೆ ಮನೆಯಲ್ಲಿ ಸಂಭ್ರಮ-ಸಡಗರ. ತಿಂಗಳ ಮುಂಚೆಯೇ ಹಬ್ಬದ ತಯಾರಿ ಶುರುವಾಗುತ್ತಿತ್ತು. ಆಗೆಲ್ಲ ನಮಗೆ ಹೊಸ ಬಟ್ಟೆಯ ಭಾಗ್ಯ ಬರುತ್ತಿದ್ದುದು ವರ್ಷಕ್ಕೆ ಮೂರೇ ಬಾರಿ. ಗಣೇಶ ಹಬ್ಬಕ್ಕೆ, ದೀಪಾವಳಿಗೆ ಮತ್ತು ಯುಗಾದಿಗೆ‌. ಹಾಗಾಗಿ ಈ ಹಬ್ಬ ಅಂದರೆ ಸ್ವಲ್ಪ ಹೆಚ್ಚು ವಿಶೇಷವಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯುಗಾದಿ

ಯುಗಾದಿಯ ದಿನದಂದು ಎರಡು ಪುಟ್ಟ ಕವಿತೆಗಳು:
 
ಹಗಲು ಹೆಚ್ಚುತ ಹೋಗುತಿರುವುದು
ಚಿಗುರು ಎಲ್ಲೆಡೆ ಕಾಣುತಿರುವುದು
ಮುಗಿಲ ಕೆಳೆಯನು ಮರೆತ ಬಾನಿನ ಚೆಲುವು ಹೆಚ್ಚಿಹುದು |
ಮಿಗಿಲು ಬಿರಿದಿಹ ಹೂಗಳೆಲ್ಲೆಡೆ
ನಗುತ ಕಂಪನು ಸೂಸಿ ನಲಿದಿರೆ
ಹಗುರವೆನಿಸದೆ ಮನವು ವರುಷದ ಮೊದಲ ದಿನದಂದು ||
 
ಚಂದದಾ ಕುಡಿಮೇಲಿನಿಬ್ಬನಿ
ಬಿಂದುಗಳ ಸಾಲಂತೆ ಮನದಲಿ 
ನಿಂದ ಬಯಕೆಗಳೆಲ್ಲ ಚಿಗುರುತ ಹಣ್ಣ ನೀಡಿರಲಿ |
ಬಂದಿರಲು ಶೃಂಗಾರ ಮಾಸವು
ನಂದನದ ವತ್ಸರದ ಹೆಸರಲಿ
ತಂದು ಕೊಡಲಿ ಸಂಪದಿಗರಿಗೆ ತುಂಬು ಹರುಷವನು ||
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

“ ಮರಳಿ ಬರಲಿ ಆ ಯುಗಾದಿ..“ !!

 

 ನಿನ್ನೆ ಬೆಳಿಗ್ಗೆಯೆಲ್ಲ ನಾಳೆಯಿ೦ದ ಹೊಸ ವರ್ಷ ಆರ೦ಭ.. ಯುಗಾದಿ.. ಮೊದಲ ಹಬ್ಬ ಎ೦ಬ ನೆನಪಿತ್ತು. ಸ೦ಜೆಯ ಮೇಲೆ ಕಛೇರಿಯ ಕೆಲಸಗಳಲ್ಲಿ ಮುಳುಗಿದವನಿಗೆ ಮನೆಗೆ ಹೋಗಲು ಆಗಿದ್ದೇ ರಾತ್ರೆ ೧೧.೩೦ ರ ನ೦ತರ. ರಾತ್ರಿ ದೇವಸ್ಥಾನದಲ್ಲಿಯೇ ರಾತ್ರಿ ಊಟ ಮಾಡಿದ್ದರಿ೦ದ ಮನೆಯಲ್ಲಿ ಆ ಕೆಲಸವೊ೦ದಿರಲಿಲ್ಲ. ತೀರಾ ದಣಿವಾದ೦ತೆನಿಸಿ ಮಲಗಿ ಬಿಟ್ಟೆ. ಬೆಳಿಗ್ಗೆ ಏಳುವಾಗ ೬.೦೦ ನಿತ್ಯೋಪಕರ್ಮಗಳನ್ನೆಲ್ಲಾ ಮುಗಿಸಿ, ಎ೦ದಿನ೦ತೆ ಚರವಾಣಿ ನೋಡಿದವನಿಗೆ ಯುಗಾದಿ ಸ೦ದೇಶಗಳು ಸ್ವಾಗತ ಕೋರಿದವು. ಸ೦ಪದಿಗರು ಹಾಗೂ ಇನ್ನಿತರ ಗೆಳೆಯರಿ೦ದ ಬ೦ದಿದ್ದ ಶುಭ ಸ೦ದೇಶಗಳು ಚರವಾಣಿ ಒಳಪೆಟ್ಟಿಗೆಯಲ್ಲಿ ಭದ್ರವಾಗಿ ಕುಳಿತಿದ್ದವು. ಆಗ ಮತ್ತೆ ನೆನಪಾಯಿತು ಈದಿನ ಯುಗಾದಿ... ಅ೦ತ!!

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ವಿರೋಧಿಯ ವರ್ಷ

ಚೈತ್ರದ ಚಿಗುರಿಗೆ
ವಸಂತದ ಬರುವಿಗೆ
ಅರಳುವ ಮನದಲಿ
ವಿರೋಧಿಯ ಹೆಸರು

ಸರ್ವರ ಗೆಲಿದು ಸರ್ವರ
ಧರಿಸಿದ ಸಂವತ್ಸರ
ತಿರುಗಲು ಶುರುವಾಯಿತು
ವಿರೋಧಿಯ ವರುಷ

ಹರಡುತ ಬೆಳಕನು, ಪರಿ
ಹರಿಸುತ ತೊಡಕನು, ಮಧು-
ವಿರೋಧಿಯು ಹರಸಲಿ
ಸರ್ವರ ವರುಷವಿಡಿ

ಎಲ್ಲರಿಗೂ ವಿರೋಧಿ ಸಂವತ್ಸರದ ಶುಭಾಶಯಗಳು’

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯುಗ ಯುಗಾದಿ ಕಳೆದರೂ...

ನಮಸ್ಕಾರ. ಯುಗಾದಿಯ ಶುಭಾಶಯಗಳು. ಈ ಯುಗಾದಿಯು ಸಂಪದಿಗರೆಲ್ಲರಿಗೂ "ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯನು ತರಲಿ" ಎಂದು ಹಾರೈಸುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ನವ ಸಂವತ್ಸರ ಭೂಮಿಗೆ ಬಂದು......................

ಬೇಂದ್ರೆಯವರ ಸುಪ್ರಸಿದ್ಧ "ಯುಗ ಯುಗಾದಿ ಕಳೆದರೂ........" ಕವನದ ಜೊತೆಗೆ, ಕುವೆಂಪು ಅವರ ಈ ಕವನವೂ ತುಂಬಾ ಸುಂದರವಾದ (ನನ್ನ ಮೆಚ್ಚಿನ) ಕವಿತೆಯಾಗಿದೆ. ಅದನ್ನು ಹಂಚಿಕೊಳ್ಳುತ್ತಿದ್ದೇನೆ ಸಂಪದಿಗರಲ್ಲಿ.......... ಎಲ್ಲರಿಗೂ ವಿರೋಧಿ ನಾಮ ಸಂವತ್ಸರದ ಯುಗಾದಿಯ ಶುಭಾಶಯಗಳು!!!!!

ಸುರಲೋಕದ ಸುರನದಿಯಲಿ ಮಿಂದು
ಸುರಲೋಕದ ಸಂಪದವನು ತಂದು
ನವ ಸಂವತ್ಸರ ಭೂಮಿಗೆ ಬಂದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಯುಗಾದಿ ಹಬ್ಬದ ಶುಭಾಷಯಗಳು


ಯುಗಾದಿ ಎಂಬುದು ಚೈತ್ರ ಮಾಸದ ಮೊದಲನೆಯ ದಿನ (ಹಿಂದು ಪಂಚಾಂಗದ ಪ್ರಥಮ ದಿವಸ) 
ಕನ್ನಡಿಗರಿಗೆ ಸಂಭ್ರಮೋತ್ಸವದ ಹಬ್ಬ. ಹೊಸ ವರ್ಷದ ಆರಂಭೋತ್ಸವ. ಮನೆ ಮನೆಯಲ್ಲಿ ಸಡಗರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯುಗಾದಿಯ ಶುಭಾಶಯಗಳು!!!!!

ಎಲ್ಲಾ ಸಂಪದಿಗರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು!!!

ವಿರೋಧಿ ನಾಮ ಸಂವತ್ಸರ ಎಲ್ಲರಿಗೂ ಶುಭವನ್ನುಂಟುಮಾಡಲಿ ಅಂತ ಹಾರೈಸುತ್ತೇನೆ.

ನಾಳೆ ಎಲ್ರೂ (ಎಟ್ ಲೀಸ್ಟ್ ಕೆಲವರಾದ್ರೂ) ಹಬ್ಬದ ತಯಾರಿಯಲ್ಲಿರಬಹುದು/ ಗಡಿಬಿಡಿಯಲ್ಲಿರಬಹುದು,

ಅದಕ್ಕೆ ಮುಂಚಿತವಾಗೇ ಶುಭಾಶಯ ಹೇಳ್ತಾ ಇದ್ದೀನಿ.

:-) :-) :-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯುಗ ಯುಗಾದಿ ಕಳೆದರೂ

ಜಗಳ ಮರಳಿ ಬರುತಿದೆ
ಹೊಸ ವರುಷಕೆ ಹಳೆ ವಿರಸವ ಕೆದಕಿ ಕಲಕಿ ತರುತಿದೆ, ಕೆದಕಿ ಕಲಕಿ ತರುತಿದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು

ಯುಗಾದಿ ಮರಳಿ ಬರುತಿದೆ...................

ಕತ್ತಲು ಸರಿದು..
ಬೆಳಕು ಹರಿದು
ಕನಸು ಮುಗಿದು
ಮನಸು ಜಿಗಿದು
ನೋವು ಮಂಜಿನ ಹಾಗೆ ಕರಗಿ
ನಲಿವು ಬೆಳಕಿನ ಹಾಗೆ ಹರಿದು
ಈ ಯುಗಾದಿಯು ನಿಮಗೆಲ್ಲಾ ವರ್ಷಪೂರ್ತಿ ಹರ್ಷ ತರಲೆಂದು ಆ ದೇವರನ್ನು ಪ್ರಾರ್ತಿಸುವೆ!!!!!!

ನಿಮಗೆಲ್ಲಾ ಯುಗಾದಿ ಹಬ್ಬದ ಹಾರ್ಥಿಕ ಶುಭಾಶಯಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯುಗಾದಿ

ಯುಗಾದಿ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಅಹುದು ಬಂದೀತು, ಬಂದರೇನು? ಅದು ತಂದದ್ದಾರೂ ಏನು?
ಮೈತುಂಬ ಚಿಗುರು ಹೂಗಳ ಹೊತ್ತ ಮರಗಳು??
ಅದ ಕಂಡು ಕುಣಿದು ಹಾಡುವ ಕೋಗಿಲೆಯು?
ಪಡೆದೆವೇನು ಹೊಸತನು? ಎಲ್ಲವೂ ಹಳೆಯದೆ.
ಇದು ಮತ್ತದೇ ವಸಂತವೋ ಗೆಳೆಯ.
ಮತ್ತೆ ಯುಗಗಳ ಯುಗಾದಿ ತಂದದ್ದಾದರೂ ಏನು?

ತರುವುದಿಲ್ಲ ಅದು ಏನನ್ನೂ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಯುಗಾದಿ