ಗುಣ

ಕೊರತೆ ಮರೆಯಿಸುವ ಗುಣಗಳು

ಎಣಿಯಿರದ ರತುನಗಳ ಹೆತ್ತ ಪರ್ವತದ
ಸುತ್ತ ತುಂಬಿರುವ ಭಾರಿ ಹಿಮರಾಶಿಯೂ
ಅದರ ಹಿರಿಮೆಯ ಇನಿತೂ ಕುಂದಿಸದು;

ಒಳಿತಾದ ಗುಣಗಳೇ ತುಂಬಿ ತುಳುಕಿರಲು
ಮರೆಸಿ ಹೋದೀತು ಇರಲೊಂದು ಕುಂದು
ಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!


ಸಂಸ್ಕೃತ ಮೂಲ (ಕಾಳಿದಾಸನ ಕುಮಾರ ಸಂಭವದಿಂದ):

ಅನಂತರತ್ನ ಪ್ರಭವಸ್ಯ ಯಸ್ಯ
ಹಿಮಂ ನ ಸೌಭಾಗ್ಯವಿಲೋಪಿ ಜಾತಂ |
ಏಕೋ ಹಿ ದೋಷೋ ಗುಣಸನ್ನಿಪಾತೇ
ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||

-ಹಂಸಾನಂದಿ
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕ್ಷಮೆ ಎಂಬ ಆಯುಧ

ಮನ್ನಿಸುವ ಗುಣವೆಂಬ ಆಯುಧವು ಕೈಯಲಿರೆ
ಕೆಟ್ಟವರು ಏನ ತಾ ಮಾಡಬಹುದು?
ಹುಲ್ಲು ಗಿಡಗಂಟಿಯಿರದೆಡೆ ಬಿದ್ದ ಉರಿ
ತನ್ನಿಂದಲೇ ತಾ ನಂದಿ ಹೋಗುವುದು!

ಸಂಸ್ಕೃತ ಮೂಲ:

ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |
ಅತೃಣೇ ಪತಿತೋ ವಹ್ನಿಃ ಸ್ವರ್ಯಮೇವೋಪಶಮ್ಯತಿ ||

क्षमा शस्त्रं करे यस्य दुर्जनः किं करिष्यति।
अतृणे पतितो वह्निः स्वयमेवोपशाम्यति॥

-ಹಂಸಾನಂದಿ

(ಇದೇ ತಾನೇ ಫೇಸ್‍ಬುಕ್ ನಲ್ಲಿ ಗೆಳೆಯರೊಬ್ಬರ ಪುಟದಲ್ಲಿ ಓದಿದ ಸುಭಾಷಿತ ಇದು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಯಾರೆದುರು ಹೊಗಳಿಕೊಳ್ಳಬೇಕು?

ಬಲ್ಲವರೆದುರು ಹಿರಿಮೆಯ ಹೇಳದಿರು
ಅರಿತೇ ಅರಿಯುವರು ತಾವಾಗೇ;
ಹೇಳದಿರು ಹಿರಿಮೆಯ ಹುಂಬರೆದುರು
ಅರಿತವರ ನುಡಿಯ ಕೇಳದವರಿಗೆ!

 

ಸಂಸ್ಕೃತ ಮೂಲ:

ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯತಃ ಸ್ವಯಂ
ಮೂರ್ಖಾಗ್ರೇSಪಿ ಚ ನ ಬ್ರೂಯಾತ್ ಬುಧಪ್ರೋಕ್ತಂ ನ ವೇತ್ತಿ ಸಃ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ತಂತಾನೇ ಅರಳುವ ಹಿರಿಮೆ

ಹಿರಿಮೆಯಿರಲು ಮನುಜರಲಿ
ಅರಳುವುವು ಅವು ತಾವಾಗಿ.
ಪರಿಮಳ ಸೂಸಲು ಕತ್ತುರಿಗೆ
ಹೇರಬೇಕೇನು ಒತ್ತಾಯ?

ಸಂಸ್ಕೃತ ಮೂಲ:

ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ
ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹಣವೇ ಗುಣವೆ?

ಹಣವಿಲ್ಲದೇ ಈ ಜಗದಲ್ಲಿ ಬಾಳಲಾರೆವು ಎಂಬುದೇನು ಸುಳ್ಳಲ್ಲ. ಅಂದಹಾಗೆ, ಇದೇನು ಇವತ್ತಿನ ಮಾತೂ ಅಲ್ಲ - ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹದ್ದೇ. ವೇದಗಳಲ್ಲೇ, ಹಣವನ್ನು ಜೂಜಾಡಿ ಕಳೆದುಕೊಂಡ ವ್ಯಕ್ತಿ ಹೇಗೆ ತನ್ನ ಕುಟುಂಬದವರಿಂದಲೇ ಅನಾದರಕ್ಕೆ ಒಳಗಾಗುತ್ತಾನೆ ಅನ್ನುವುದರ ಪ್ರಸ್ತಾಪ ಬಂದಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಗುಣ