ಸ್ವಾಸ್ಥ್ಯ

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

ಪ್ರಿಯರೇ,


ಅಂದು ನನ್ನ ವೆಲ್ನೆಸ್ ಟುಡೆ ಆನ್ಲೈನ್ ಪತ್ರಿಕೆಯನ್ನು ಹೊರತಂದ ವಿಷಯ ನಿಮ್ಮಲ್ಲಿ ಹಂಚಿಕೊಂಡಿದ್ದೆ. ಈಗ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಹೇಳೋಣ ಅಂತ ಬಂದೆ.


ನನ್ನ ತಾಣದ ಅಂಕಿ-ಅಂಶಗಳಲ್ಲಿ ನನಗೆ ಖುಶಿಯಾದ ವಿಷಯವೇನು ಗೊತ್ತಾ? ಅತಿ ಹೆಚ್ಚು ಓದುಗರು ಭಾರತದಿಂದ ಬಂದಿದ್ದಾರೆ, ಅದರಲ್ಲೂ ಕನ್ನಡಿಗರು, ಅದರಲ್ಲೂ ಸಂಪದಿಗರ ಕೊಡುಗೆ ತುಂಬಾ ಇದೆ. ಸುಮಾರು ೬೦೦ ಓದುಗರಲ್ಲಿ ೨೫೦ ಭಾರತೀಯರು, ಅದರಲ್ಲಿ ೭೫ ಜನ ಸಂಪದದಿಂದ ಬಂದಿದ್ದಾರೆ, ಬಹಳ ಸಂತೋಷವಾಯ್ತು. ಸ್ನೇಹಿತರೇ, ನಿಮ್ಮ ಅಭಿಮಾನ ಸಂತಸ ತಂದಿದೆ. ನಿಮ್ಮಿಂದ ಬರುವ ಸಲಹೆ ಮತ್ತು ಪ್ರಶ್ನೆಗಳಿಗೂ ನನ್ನ ಸ್ವಾಗತವಿದೆ.


ಇನ್ನೊಂದು ಮುಖ್ಯ ವಿಚಾರವೆಂದರೆ, ನನ್ನ ಕೆಲಸವನ್ನು ಮೆಚ್ಚಿ ಸಂಪದಿಗ ವಿಜಯ್ ಪೈ ರವರು ಒಂದು ಸುಂದರವಾದ ಲೋಗೊ ಮತ್ತು ಬ್ಯಾನರ್ ಮಾಡಿಕೊಟ್ಟಿದ್ದಾರೆ, ಉಚಿತವಾಗಿ! ನನ್ನ ಮನಸ್ಸಿಗೆ ಬಲು ಖುಶಿಯಾಯ್ತು :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
Subscribe to ಸ್ವಾಸ್ಥ್ಯ