ಸೃಷ್ಟಿ

ಶಿಲ್ಪಿ-ಶಿಲ್ಪ

ಶಿಲ್ಪಿಯು ನೀನೆ ಶಿಲ್ಪವು ನೀನೆ
ವಿಶ್ವವ ಸೃಷ್ಟಿಪ ಶಿಲೆಯೂನೀನೆ
ಶೃತಿಯೂ ನೀನೆ ವೀಣೆಯು ನೀನೆ
ಶೃತಿಯೊಳು ಹೊಮ್ಮಿದ ನಾದವು ನೀನೆ
ಕಾರ್ಯವು ನೀನೆ ಕಾರಣ ನೀನೆ
ಕಾರ್ಯ ಕಾರಣದ ಕರ್ತೃವು ನೀನೆ
ನಿನ್ನೆಯು ನೀನೆ ನಾಳೆಯು ನೀನೆ
ನಿನ್ನೆ ನಾಳೆಗಳ ಸೇತುವೆ ನೀನೆ
ಅವನೂ ನೀನೆ ಅವಳೂ ನೀನೆ
ಇರುವುದೊಂದೆ ಅದು ನೀನೆ
ನಿನ್ನನೆ ಸೃಷ್ಟಿಸಿ ನೀನೇ ಹೊಕ್ಕು
ನಿನ್ನನೆ ಮರೆತವ ನೀನೆ.
ಜೀವವು ನೀನೆ ಜಡವೂ ನೀನೆ
ಜೀವ ಜಗ ಜಂಗಮವೆಲ್ಲವೂ ನೀನೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

೨೧೦. ಲಲಿತಾ ಸಹಸ್ರನಾಮ ೯೯೯ನೇ ನಾಮದ ವಿವರಣೆ

                                                                     ಲಲಿತಾ ಸಹಸ್ರನಾಮ ೯೯೯

Śiva-śakty-aikya-rūpiṇī शिव-शक्त्यैक्य-रूपिणी (999)

೯೯೯. ಶಿವ-ಶಕ್ತೈಕ್ಯ-ರೂಪಿಣೀ

            ದೈವೀ ದಂಪತಿಗಳಾದ, ಶಿವ-ಶಕ್ತಿಯರ ಸಮಾಗಮವಾದ ‘ಶಿವ-ಶಕ್ತೈಕ್ಯ-ರೂಪಿಣೀ’ ಅತ್ಯಂತ ಪೂಜನೀಯ ಭಾವದಿಂದ ಗೌರವಿಸಲ್ಪಡುವ, ಮೆಚ್ಚಲ್ಪಡುವ, ವಿಸ್ಮಯವನ್ನುಂಟು ಮಾಡುವ, ಕಲ್ಪನೆಗೆ ನಿಲುಕದ ಮತ್ತು ರಹಸ್ಯಾತ್ಮಕವಾದ ರೂಪವಾಗಿದೆ. ಈ ಬ್ರಹ್ಮಾಂಡವು ಅವರ ಇಚ್ಛೆಗನುಸಾರವಾಗಿ ಮತ್ತು ಕರ್ಮನಿಯಮಗಳಿಗೆ ಒಳಪಟ್ಟು ಸೃಷ್ಟಿ, ಸ್ಥಿತಿ, ಲಯ, ಮತ್ತು ಪುನಃಸೃಷ್ಟಿಯು ಆಗುತ್ತದೆ.  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಈ ಅಂಡ ಪಿಂಡ ಬ್ರಹ್ಮಾಂಡ ...

ಇದು 2012ರ ಸಾಲಿನ ಸಿಂಗಾಪುರ ಕನ್ನಡ ಸಂಘ ನಡೆಸಿದ ಜಾಗತಿಕ ಕವನ ಸ್ಪರ್ಧೆ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಕವನದ ಭಾಗಾಂಶ. ಒಂದು ಸೂಕ್ಷಾತಿಸೂಕ್ಷ್ಮ ಕಣದಿಂದಿಡಿದು ಅಖಂಡ ಗಾತ್ರದ ಜೀವಿಯವರೆಗು, ಸೃಷ್ಟಿಕ್ರಿಯೆಯ ಪ್ರಕ್ರಿಯೆಯೆ ವಿಸ್ಮಯಕಾರಿ. ಒಂದು ಜತೆ ಸೂಕ್ಷ್ಮಾಕಾರದ ವೀರ್ಯ ಮತ್ತು ಅಂಡಾಣುಗಳ ಮಿಲನವೆ ಮೊತ್ತದಲಿ ಸೃಷ್ಟಿಕ್ರಿಯೆಯ ಸಾರವಾದರೂ, ಅದು ನೈಸರ್ಗಿಕವಾಗಿ, ನಿಯಮಿತವಾಗಿ, ತನ್ನಂತಾನೆ ನಡೆಯಲು ಬೇಕಾದ ಸರಳ ವ್ಯವಸ್ಥೆಯೆ ಅಪ್ರತಿಮ ಅಚ್ಚರಿಯ ಮೇರುಶಿಖರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಮಗು ಮರೆಯಿತು

ಗುವೊಂದು ಬದುಕಿರಲು ಏಕಾಂಗಿಯಾಗಿ
ಜಗದರಿವು ತನಗಾಗಿ ಏಕಾಂತ ಭಯವಾಗಿ
ತಾನಾರು ತನಗಾರು ಸಂಶಯಗಳ ಸೆರೆಯಾಗಿ
ತನ್ನ ತಾನೆ ಸೃಷ್ಟಿಸಿ ನಗತೊಡಗಿತು
ನಗು ನಗುತ ಮಗು ಮನದಿ
ಮಾಯೆಯೊಳಗೂಡಿ ಜಗವ ನಿರ್ಮಿಸಿ
ಮಗು ಮರೆಯಿತು

ಮೂಲವನೆ ತಾ ಮರೆತು ಸೃಷ್ಟಿಯೊಳು ತಾ ಬೆರೆತು
ಗಾಡ ನಿದ್ರೆಗೆ ಜಾರಿ ಜಗದೊಳು ಜಾಗೃತವಾಗಿ
ಕನಸಿನೊಳಗಣ ಕನಸಲ್ಲಿ ಜೀವನ ಬೆಳೆಸಿತು
ಖಗದಲ್ಲಿ ಮಿಗವಾಗಿ ಭುವಿಯೊಳು ಮೃಗವಾಗಿ
ಹಾವಾಗಿ ಹೊವಾಗಿ ಕ್ರಿಮಿ ಕೀಟವು ತಾನಾಗಿ
ಹರಿದಾಡಿ ಈಜಾಡಿ ಹಾರಾಡಿ
ಜಗವೆಲ್ಲ ಜಾಲಾಡಿ ಮಗು ಮರೆಯಿತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
Subscribe to ಸೃಷ್ಟಿ