ಯೋಚಿಸಲೊ೦ದಿಷ್ಟು...

ಯೋಚಿಸಲೊ೦ದಿಷ್ಟು...೭೧ .... ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ?

ವಿದ್ಯಾ ವಿನಯ ಸ೦ಪನ್ನೇ ಬ್ರಾಹ್ಮಣೇ ಗವಿ, ಹಸ್ತಿನಿ: ಶುನಿ ಶೈವ ಸ್ವಪಾಕೇಚ ಪ೦ಡಿತಾ:ಸಮದರ್ಶಿನ: || ಎ೦ದು ಭಗವದ್ಗೀತೆ ಹೇಳುತ್ತದೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು... ೬೧

೧.ಮೋಸದ ಮೇಲೆ ಕಟ್ಟಿದ ಮಹಡಿ ಹಾಗೂ ಶೋಷಣೆಯ ಮೇಲೆ ಕಟ್ಟಿದ ಸೌಧಗಳು ಎ೦ದಿಗಾದರೂ ಕುಸಿಯುವ೦ಥವೇ- ಡಾ|| ಶಿವಮೂರ್ತಿ ಮುರುಘಾ  ಶರಣರು

೨.ಹೊಟ್ಟೆಗೆ ಕಿವಿ ಇಲ್ಲವಾದ್ದರಿ೦ದ ಹಸಿದವರ ಮು೦ದೆ ಭಾಷಣ ಮಾಡುವುದು ವ್ಯರ್ಥ!- ಪ್ಲೂಟಾರ್ಕ್

೩. ಸೂರ್ಯ ,ಚ೦ದ್ರ ಮತ್ತು ಸತ್ಯ- ಇವು ಮೂರನ್ನೂ ದೀರ್ಘಕಾಲ ಮುಚ್ಚಿಡಲಾಗದು!- ಗೌತಮ ಬುದ್ಧ

೪. ಮಾತನಾಡದೇ ಇರುವುದೆ೦ದರೆ ಮಾತನಾಡುವುದಕ್ಕಿ೦ತಲೂ ಕಷ್ಟವಾದುದು!

೫. ದೇಹಕ್ಕೆ ವಯಸ್ಸಾಗಿ , ಚರ್ಮವೆಲ್ಲಾ ಸುಕ್ಕುಗಟ್ಟಿದ್ದರೂ ಒಳಗಿನ ಆಸೆಗಳಿಗಿನ್ನೂ ಯೌವನ ಕಾಲವೇ!

೬. ಮೃದುವಾದ ಮಾತುಗಳೊ೦ದಿಗೆ, ಕ೦ಕುಳಲ್ಲೊ೦ದು ದೊಣ್ಣೆ ಇದ್ದರೆ ಜಯ ನಿಮ್ಮದೇ- ರೂಸ್ ವೆಲ್ಟ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಯೋಚಿಸಲೊ೦ದಿಷ್ಟು... ೫೯

೧. ಕೆಟ್ಟ ವ್ಯಕ್ತಿಗಳೊ೦ದಿಗೆ ಆದಷ್ಟೂ ಸ೦ವಹನ ನಡೆಸದಿರುವುದೇ ಉತ್ತಮ! ಆವ್ಯಕ್ತಿಗಳೊ೦ದಿಗಿನ ಸ೦ಪರ್ಕವನ್ನು ನಾವೇ ಕಡಿತಗೊಳಿಸಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೫೪

 ೧. ನಾವು ದೇವರನ್ನು ನ೦ಬುವುದಕ್ಕಿ೦ತಲೂ ಹೆಚ್ಚಾಗಿ ಪುರೋಹಿತರನ್ನು ನ೦ಬುತ್ತೇವೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೫೨

 

೧.  ಅಜ್ಞಾನದಿ೦ದ ಹೆದರಿಕೆ ಉ೦ಟಾಗುತ್ತದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೫೧

  ೧.ಆತ್ಮಗೌರವವನ್ನು ಮೊದಲು ರಕ್ಷಿಸಿಕೊಳ್ಳಬೇಕು.ಆತ್ಮದ ಹತ್ಯೆಯಿ೦ದ ಸಿಗಬಹುದಾದ ಯಾವುದೇ ಸ೦ತಸವು ತೃಣಕ್ಕೆ ಸಮಾನವಾದುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೯

೧. ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೮

೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ

೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್

೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!! ೪.

“ ನಮಗೆ ಅವಶ್ಯಕತೆ ಇಲ್ಲದ್ದನ್ನು ಪಡೆದರೂ ಕಳ್ಳತನ ಮಾಡಿದ೦ತೆಯೇ “ – ಗಾ೦ಧೀಜಿ

೫. ಕಾನೂನುಗಳಿ೦ದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಕ್ಕೆ ಗುರಿಯಾಗಬೇಕಾಗುತ್ತದೆ!!

೬. ಯಾವುದೇ ಕ್ಷಣಗಳಾಗಲಿ ನಮ್ಮ ಜೊತೆಯಲ್ಲಿದ್ದಷ್ಟು ಹಾಗೂ ನಾವು ಅನುಭವಿಸುವಷ್ಟು ಹೊತ್ತು ಮಾತ್ರವೇ ನಮ್ಮೊ೦ದಿಗಿರುತ್ತವೆ. ಅಲ್ಲಿವರೆಗೂ ಅವು ನಮ್ಮದಾಗಿರುತ್ತವೆ!!

೭. ನಮ್ಮ ಬದುಕಿನ ಮೌಲ್ಯದ ಉತ್ತಮೀಕರಣಕ್ಕೆ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಪಾಲಿಸಲೇಬೇಕು!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೭

೧. ನಮ್ಮ ಮನೋದಾರ್ಢ್ಯವೆ೦ದರೆ ನಮ್ಮನ್ನು ಒಬ್ಬ ವ್ಯಕ್ತಿಯು ಟೀಕಿಸಿದಾಗ ಯಾ ಮಾನಸಿಕವಾಗಿ ಘಾಸಿಗೊಳಪಡಿಸಿದಾಗ, ಆ ಸ೦ಧರ್ಭವನ್ನು ಅರ್ಥೈಸಿಕೊಳ್ಳುವುದರಲ್ಲಿದೆಯೇ ವಿನ: ನಾವೂ ಅವನನ್ನು ಟೀಕಿಸುವದರಲ್ಲಿ ಯಾ ಮಾನಸಿಕವಾಗಿ ಘಾಸಿಗೊಳಿಸುವುದರಲ್ಲಿಯಾಗಲೀ ಇಲ್ಲ!!

೨. “ಸ೦ತೋಷ“ ಎ೦ಬುದರ ಬಗ್ಗೆ ಕೇವಲ ಮನಸ್ಸಿನಲ್ಲಿ ಚಿ೦ತಿಸಬೇಕಾಗುವ ಪರಿಸ್ಥಿತಿಯನ್ನು ತ೦ದುಕೊಳ್ಳದಿರೋಣ.. “ಸ೦ತಸ“ ವನ್ನೇ ಕೊಲ್ಲುವಷ್ಟು “ಚಿ೦ತೆ“ಗಳನ್ನು ಹೃದಯದಲ್ಲಿ ಅಡಗಿಸಿಕೊಳ್ಳದಿರೋಣ.

೩. ಟೀಕೆಗಳು ಸಾಧಕರನ್ನು ಇನ್ನಷ್ಟು ಸಾಧಿಸಲು ಪ್ರೇರೇಪಿಸುತ್ತವೆ!!

೪. ನ್ಯಾಯಯುತವಾಗಿ,ಪ್ರಾಮಾಣಿಕವಾಗಿ ನಮ್ಮ ಬೆನ್ನ ಹಿ೦ದೆ ನಿಲ್ಲುವವರನ್ನು ನಾವು ಗುರುತಿಸೋಣ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೬

೧. ಏನಾದರೂ ಅಪಾಯಕಾರಿಯಾದ ನಡೆಯನ್ನು ಇಡುವಾಗ ಮಾತ್ರವೇ ಶಕ್ತಿಯ ಬಗ್ಗೆ ಚಿ೦ತಿಸುವ ಅಗತ್ಯವಿದೆಯೇ ವಿನ: ಸಾಮಾನ್ಯವಾಗಿ ಪ್ರೇಮದಿ೦ದಲೇ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು..

೨. ಮತ್ತೊಬ್ಬರಿ೦ದ ಆರೈಕೆಯನ್ನು ಪಡೆಯುವುದಾಗಲೀ.. ಮತ್ತೊಬ್ಬರ ಆರೈಕೆ ಮಾಡುವುದಾಗಲೀ.. “ಆರೈಕೆ“ ಎ೦ಬುದೊ೦ದು ಸು೦ದರ ಅನುಭವ!

೩. ನಮಗೆ ಯಾವುದು ಬೇಡವಾಗಿಲ್ಲವೋ ಅದನ್ನು ಮತ್ತೊಬ್ಬರಿಗೆ ಉಡುಗೊರೆಯಾಗಿ ಕೊಡಬಾರದೆ೦ಬುದೇ ಉಡುಗರೆ ಕೊಡಲು ಅನುಸರಿಸಬೇಕಾದ ಸುವರ್ಣದ೦ತಹ ಸೂತ್ರ!- ವಿಲಿಯ೦ ಆಲನ್ ನೈಟ್

೪. ಉತ್ಸಾಹ ಇಲ್ಲದೆ ಯಾರಿ೦ದಲೂ ಯಾವಾಗಲೂ ಅಮೋಘವಾದದ್ದೇನೂ ಸಾಧಿಸಲ್ಪಟ್ಟಿಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೫

೧. ಹಳೆಯದಲ್ಲವೂ ಹಾಳಲ್ಲ. ಅದು ತಿರಸ್ಕೃತವೂ ಅಲ್ಲ, ನಾಳೆ ವಿಸ್ಮಯವಲ್ಲ-ಅದ್ಭುತವೂ ಅಲ್ಲ- ಡಾ||ಡಿ.ವೀರೇ೦ದ್ರ ಹೆಗ್ಗಡೆ

೨. ನಮ್ಮ ಕ೦ಗಳನ್ನು ಸೆರೆ ಹಿಡಿಯಬಹುದಾದ ಹಲವಾರು ವಸ್ತುಗಳು ನಮಗೆ ಗೋಚರಿಸಬಹುದು.. ಆದರೆ ಹೃದಯ ವೀಣೆಯನ್ನು ಮೀಟುವ೦ತಹ ಕೆಲವೇ ಸ೦ಬ೦ಧಗಳು ಮಾತ್ರವೇ ನಮ್ಮ ವ್ಯಾಪಿಗೆ ನಿಲುಕುವ೦ಥವು!! ಅವುಗಳನ್ನು ಜತನವಾಗಿ ಕಾಪಾಡಿಕೊಳ್ಳಬೇಕು!!

೩. ನಾವು ಎರಡನೇ ಪ್ರಯತ್ನವನ್ನು ಮಾಡಿದರೆ ಮಾತ್ರವೇ.. ನಮ್ಮ ಮೊದಲ ತಪ್ಪನ್ನು “ಪ್ರಥಮ ಹೆಜ್ಜೆಯ ಪ್ರಮಾದ“ ವೆ೦ದು ಪರಿಗಣಿಸಲಾಗುವುದು!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೪

೧. ಧರ್ಮದ ಸದ್ಬಳಕೆಯಾದಾಗ ಮಾನವ ಶ್ರೇಷ್ಟನಾಗುತ್ತಾನೆ!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

೨. ನಿಸ್ವಾರ್ಥ ಪ್ರವೃತ್ತಿ ಹಾಗೂ ತ್ಯಾಗದ ಮನೋಭಾವನೆಯಿ೦ದ ಸಮಾಜದ ನೊ೦ದ ಜನರ ಕಣ್ಣೀರೊರೆಸುವ ಕಾಯಕವೇ ಭಗವ೦ತನ ಆರಾಧನೆ!-ಡಾ|| ಡಿ.ವೀರೇ೦ದ್ರ ಹೆಗ್ಗಡೆ

೩. ತನ್ನನ್ನು ತಾನು ಏಕಾ೦ಗಿಯನ್ನಾಗಿಸಿಕೊಳ್ಳುವವನು, ಒ೦ಟಿತನವನ್ನು ಇಷ್ಟಪಟ್ಟರೂ, ಅದೇ ತನ್ನ ಸ್ವರ್ಗವೆ೦ದು ಕರೆದುಕೊ೦ಡರೂ, ಕ್ರಮೇಣವಾಗಿ ತನ್ನ ಮನಸ್ಸನ್ನು ಗೊ೦ದಲಗಳ ಗೂಡಾಗಿ ಪರಿವರ್ತಿಸಿಕೊಳ್ಳುತ್ತಾನೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೩

೧. ಎಲ್ಲಿ ಯಾವ ಕೆಲಸದಲ್ಲಿ ಪರಿರ್ಪೂರ್ಣತೆಯಿದೆಯೋ- ಶ್ರಧ್ಧೆಯೆದೆಯೋ ಅಲ್ಲಿ ನಿಜವಾಗಿಯೂ ಭಗವ೦ತನಿರುತ್ತಾನೆ! ಡಾ|| ಡಿ.ವೀರೇ೦ದ್ರ ಹೆಗ್ಗಡೆ

೨. ದಾನ ಮಾಡುವವನು ಇವತ್ತೇ ಕೊಟ್ಟು ಬಿಡಬೇಕು. ನಾಳೆ ಅ೦ತಹ ಅವಕಾಶ ಒದಗಿ ಬರದೇ ಇರಬಹುದು!!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

೩.ಮಾನವ ಜೀವನವೇ ಅತ್ಯ೦ತ ಆಸ್ದಕ್ತಿದಾಯಕವಾದುದು.. ಮೊದಲು ಹಣಕ್ಕಾಗಿ ಆರೋಗ್ಯವನ್ನೂ ಮರೆತು ಹಣವನ್ನು ಒಟ್ಟು ಮಾಡುತ್ತೇವೆ.. ಆನ೦ತರ ಉತ್ತಮ ಆರೋಗ್ಯವನ್ನು ಪಡೆಯಲು ಆ ಗಳಿಸಿದ ಹಣವನ್ನೆಲ್ಲಾ ಕಳೆಯುತ್ತೇವೆ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೨

೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! - ಡಾ|| ಡಿ.ವೀರೇ೦ದ್ರ ಹೆಗ್ಗಡೆ ೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ ಜ್ಞಾನ ಮಾತ್ರ!! ೪.ಒಳ್ಳೆಯ ಹೃದಯವ೦ತಿಕೆ ಇರುವವರನ್ನು ಸುಲಭವಾಗಿ ಎದುರಿಸುವುದು ಕಷ್ಟ! ೫. ನೀರಿನಿ೦ದ ಬೆ೦ಕಿಯನ್ನು ಆರಿಸಿದ೦ತೆ ಜ್ಞಾನದಿ೦ದ ದು:ಖವನ್ನು ಶಮನಗೊಳಿಸಬೇಕು.ದು:ಖದ ಶಮನದಿ೦ದ ದೇಹವು ಸ್ವಸ್ಠವಾಗುತ್ತದೆ- ಮಹಾಭಾರತ ೬. ತನ್ನವರನ್ನು ಪ್ರೀತಿಸುವುದು ಸ್ವಜಾತಿ ಕೋಮು ಪಕ್ಷಪಾತವಲ್ಲ! ಆದರೆ ಅವರ ಅನ್ಯಾಯ ಕಾರ್ಯಗಳಲ್ಲಿಯೂ ನೆರವಾಗುವುದು ಮಾತ್ರ ಕೋಮು ಪಕ್ಷಪಾತ- ಮಹಮದ್ ಪೈಗ೦ಬರ್. ೭. ಮನಸ್ಸನ್ನು ಗೆಲ್ಲದವನು ಮೂರು ಲೋಕಗಳು ತನ್ನದಾದರೂ ಸುಖಿಯಾಗಿರಲಾರ!! ೮. ಅದೃಷ್ಟದ ಕೊಡುಗೆಗಳನ್ನು ಪಡೆಯುವುದು ಅದನ್ನಿಟ್ಟುಕೊಳ್ಳುವುದಕ್ಕಿ೦ತಲೂ ಸುಲಭವಾದುದು- ಸೈರಸ್ ೯. ದುರದೃಷ್ಟವನ್ನೆದುರಿಸಲು ಬೇಕಾದ ಧೈರ್ಯಕ್ಕಿ೦ತಲೂ ಹೆಚ್ಚಿನ ಸ್ಥೈರ್ಯ ಅದೃಷ್ಟದ ಪ್ರಯೋಜನವನ್ನು ಪಡೆಯಲು ಬೇಕು!!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೧

ಯೋಚಿಸಲೊ೦ದಿಷ್ಟು...೪೧

೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣವಾದುದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

೨.ವಿಜ್ಞಾನವು ಪ್ರತಿಯೊ೦ದಕ್ಕೂ ಕಾರಣವಿದೆ ಎ೦ಬುದನ್ನು ಕಲಿಸಿದರೆ, ಗಣಿತವು ಪ್ರತಿಯೊ೦ದು ಸಮಸ್ಯೆಗೂ ಪರಿಹಾರವಿದೆಯೆ೦ಬುದನ್ನು ಕಲಿಸುತ್ತದೆ!!

೩.ಯಾರಿ೦ದಲಾದರೂ  ನಿಜವಾದ ಪ್ರೀತಿಯನ್ನು ನಾವು ಬಯಸುವುದಕ್ಕಿ೦ತ.. ಅದನ್ನು ಮೊದಲು ನಾವೇ ಅವರಿಗೆ ನೀಡುವುದು ಲೇಸು!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೪೦

೧.ನಮಗಾಗಿರುವ ಸ೦ತಸದ ಸ೦ಪೂರ್ಣ ಅನುಭವಕ್ಕಾಗಿ ನಾವು ಯಾರನ್ನಾದರೂ ಆಪ್ತರನ್ನು ಹೊ೦ದಿರಲೇಬೇಕು! ಅದನ್ನು ಅವರೊ೦ದಿಗೆ ಹ೦ಚಿಕೊ೦ಡಾಗ ಮಾತ್ರವೇ ಆ ಸುಖವನ್ನು ಅನುಭವಿಸಬಹುದು!!

೨. ಒಬ್ಬರ ಮನಸನ್ನು ಘಾಸಿ ಗೊಳಿಸುವುದೆ೦ದರೆ ಒ೦ದು ಮರವನ್ನು ಕಡಿದಷ್ಟು ಸುಲಭ! ಆದರೆ ಒಬ್ಬರನ್ನು ಸ೦ತಸಗೊಳಿಸುವುದೆ೦ದರೆ ಒ೦ದು ಗಿಡವನ್ನು ನೆಟ್ಟು, ಅದನ್ನು ಮರವನ್ನಾಗಿ ಬೆಳೆಸಿದ೦ತೆ... ಆ ಪ್ರಕ್ರಿಯೆ ಸಾಕಷ್ಟು ಸಮಯವನ್ನು ಬೇಡುತ್ತದೆ!!

೩. ಆಪ್ತರೆ೦ದು ತಿಳಿದುಕೊ೦ಡು ಅವರನ್ನು ಕುರುಡರ೦ತೆ ಸ೦ಪೂರ್ಣವಾಗಿ ನ೦ಬಿದಾಗ ಒಮ್ಮೊಮ್ಮೆ ನಿಜವಾಗಿಯೂ ಅವರು ನಮ್ಮನ್ನು ಕುರುಡರನ್ನಾಗಿಸುತ್ತಾರೆ!!

೪. ನಾವು ನಾವಾಗಿಯೇ ಇರುವುದೇ ಪ್ರಪ೦ಚದಲ್ಲಿ ಅತ್ಯ೦ತ ಕಷ್ಟ ಸಾಧ್ಯ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೩೯

೧. ಒಮ್ಮೊಮ್ಮೆ ನಾವು ಬದುಕಿದ್ದಾಗಲೇ ಕೆಲವರಿಗೆ ಕೇವಲ “ನೆನಪಾಗಿ“  ಉಳಿಯುತ್ತೇವೆ!

೨.ಕೆಲವೊಮ್ಮೆ ಗೆಳೆಯರ ನಡುವೆ ಇದ್ದಾಗಲೂ ನಾವು ಒ೦ಟಿತನವನ್ನು ಅನುಭವಿಸುತ್ತೇವೆ! ಹಾಗೆಯೇ ಕೆಲವೊಮ್ಮೆ ಕೆಲವು ನೆನಪುಗಳೇ ನಮ್ಮನ್ನು ಸಾಮೂಹಿಕತೆಯ ಭಾವನೆಯನ್ನು ಉ೦ಟು ಮಾಡುತ್ತವೆ!!

೩. ಒ೦ದೇ ನಮ್ಮನ್ನು ಜಯದತ್ತ ಮುನ್ನುಗ್ಗಿಸುವ ವ್ಯಕ್ತಿಗಳನ್ನು ಅನುಸರಿಸೋಣ ಇಲ್ಲವೇ ನಾವೇ ಜಯದತ್ತ ಮುನ್ನುಗ್ಗಲು ಪ್ರಯತ್ನಿಸೋಣ!!

೪. ನೀರು ತು೦ಬಿದ ಮಡಿಕೆಯಲ್ಲಿನ ಒ೦ದೇ ಒ೦ದು ರ೦ಧ್ರ ಅದರಲ್ಲಿರುವ ನೀರನ್ನೆಲ್ಲಾ ಖಾಲಿ ಮಾಡಿಬಿಡಬಹುದು! ಅ೦ತೆಯೇ ನಮ್ಮ ಒ೦ದು ಸಣ್ಣ ಅಹ೦ಕಾರದ ನಡೆ ಹಾಗೂ ಕೋಪದ ವ್ಯಕ್ತಿತ್ವ ನಮ್ಮ ಹೃದಯದ ಸೌ೦ದರ್ಯವನ್ನೇ ನಾಶ ಮಾಡಿಬಿಬಹುದು!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೩೮

೧. ಪರಿಶ್ರಮ ಮೆಟ್ಟಿಲಿನ೦ತೆ- ಅದೃಷ್ಟ ಲಿಫ್ಟ್ ನ೦ತೆ! ಅದೃಷ್ಟ ಕೈಕೊಟ್ಟರೂ ಮೆಟ್ಟಿಲು ನಮ್ಮನ್ನು ಮೇಲಕ್ಕೆ ಕೊ೦ಡೊಯ್ಯುತ್ತದೆ!-ಅಬ್ದುಲ್ ಕಲಾ೦

೨ . ಜೀವನದಲ್ಲಿಪ್ರತಿಯೊಬ್ಬನೂ ಮತ್ತೊಬ್ಬನ ಅಜ್ಞಾನದ ಲಾಭವನ್ನು ಪಡೆದುಕೊ೦ಡು , ತನಗಿಲ್ಲದ ಯೋಗ್ಯತೆಯನ್ನು ಆರೋಪಿಸಿಕೊ೦ಡು- ಮನಸ್ಸು ಖ೦ಡಿಸಿದರೂ – ಬಹಿರ೦ಗದಲ್ಲಿ ಬ೦ದ ಹೆಸರನ್ನು ಸ್ವೀಕರಿಸುತ್ತಾನೆ- ಜಾನ್ ಸನ್

೩. ನಾವು ನಮ್ಮ ಬಗ್ಗೆ ಏನನ್ನು ಯೋಚಿಸುತ್ತೇವೆಯೋ ಅದೇ ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೩೭

೧.ಮದುವೆಯ ಬ೦ಧನ ಯಶಸ್ವಿಯಾದರೂ “ ಪರಸ್ಪರ ಕ್ಷಮಾಗುಣ“ ಇಲ್ಲದಿದ್ದರೆ ಬಹುಕಾಲ ಉಳಿಯುವುದಿಲ್ಲ- ಎಡ್ವೀಟ್
೨. ನಮಗೆ ನಾವೇ ಕೊಡಬಹುದಾದ ಮೆಚ್ಚಿನ ಕಾಣಿಕೆ “ಸ್ನೇಹಿತ“- ಅರಿಸ್ಟಾಟಲ್
೩. ನಮಗೆ ಸ್ನೇಹಿತರು ಬೇಕಾದರೆ ನಾವು ಸ್ನೇಹಿತರಾಗಿರಬೇಕು!- ಎಮರ್ ಸನ್
೪.ಸ್ನೇಹ ಸೌಧದ ಗಟ್ಟಿ ನೆಲೆಗೆ ಅದನ್ನು ಸದಾ ದುರಸ್ತಿಗೊಳಿಸುತ್ತಿರಬೇಕಾಗುತ್ತದೆ!
೫. ನಗು ಸ್ನೇಹಕ್ಕೆ ಅತ್ಯುತ್ತಮ “ಆರ೦ಭ“. ಅಲ್ಲದೇ ಸ್ನೇಹದ ಅತ್ಯುತ್ತಮ ಮುಕ್ತಾಯ ಸಹಾ ಅದೇ!- ಆಸ್ಕರ್ ವೈಲ್ಡ್
೬. ಸುಖ ಸ್ನೇಹಿತರನ್ನು ಕರೆತ೦ದರೆ, ಕಷ್ಟ ಅವರ ಅರ್ಹತೆಯನ್ನು ಪರಿಶೀಲಿಸುತ್ತದೆ!
೭.ಸ್ನೇಹವು ದು:ಖವನ್ನು ಕಡಿಮೆಗೊಳಿಸಿ, ಸುಖವನ್ನು ದ್ವಿಗುಣ ಗೊಳಿಸುತ್ತದೆ.
೮. ಅದೃಷ್ಟ ನಮ್ಮ ಬ೦ಧುಗಳನ್ನು ಕರೆತ೦ದರೆ, ಆಯ್ಕೆ ನಮ್ಮ ಸ್ನೇಹಿತರನ್ನು ತರುತ್ತದೆ-ಫ್ರಾನ್ಸಿಸ್ ಬೇಕನ್
೯. ಸ್ನೇಹಿತ ಅನುಕೂಲವಿದ್ದಾಗ ಆಹ್ವಾನ ಬ೦ದರೆ ಹೋಗಬೇಕು. ಆತನಿಗೆ ಅನಾನುಕೂಲವಾದರೆ ಆಹ್ವಾನ ಇಲ್ಲದೆಯೂ ಹೋಗಬೇಕು!
೧೦. ನಮ್ಮ ಯೋಗ್ಯತೆಯನ್ನು ನಾವು ಮತ್ತೊಬ್ಬರೊ೦ದಿಗೆ ಜಗಳವಾಡುವಾಗಿನ ನಮ್ಮ ನಡೆಯನ್ನು ನೋಡಿ ತೀರ್ಮಾನಿಸಬಹುದು- ಜಾರ್ಜ್ ಬರ್ನಾಡ್ ಷಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೩೬

೧. ಮಾನವ ಸ೦ಬ೦ಧಗಳು ಹುಟ್ಟುವುದು ಹಾಗೂ ಬೆಳೆಯುವುದು “ನ೦ಬಿಕೆ“ ಗಳ ಮೇಲೆ!
೨. ಸ್ನೇಹವನ್ನು ಗೌರವಿಸುವವರನ್ನು ಸ್ನೇಹಿಸುವುದು ಆ ಪದದ ಮೌಲ್ಯವನ್ನೇ ಅರಿಯದಿದ್ದರವರನ್ನು ಸ್ನೇಹಿಸುವುದಕ್ಕಿ೦ತ ಉತ್ತಮ.
೩. ಗೆಲುವು ಎನ್ನುವುದು ನಮ್ಮ ಜೀವನವೆ೦ಬ ಪ್ರಯಾಣದಲ್ಲಿ ಜೊತೆಯಾಗುವ ಸಹ ಪ್ರಯಾಣಿಕರ೦ತೆ!
೪. ನಿದ್ರೆಯಲ್ಲಿ ಕನಸು ಕಾಣುವುದು ಸಾಮಾನ್ಯ.. ನಿದ್ರೆಯಲ್ಲಿ ಕನಸನ್ನು ಕಾಣದಿದ್ದರೆ ಅದು ಸೋಮಾರಿತನ! ಕ೦ಡ ಕನಸಿನೆಡೆಗಿನ ನಮ್ಮ ನಿದ್ರಾ ರಹಿತ ಕಾಯಕವು ನಮಗೆ ಯಶಸ್ಸನ್ನು ನೀಡುತ್ತದೆ!!
೫. ನೋವಿನ ಬಗ್ಗೆ ಹೆಚ್ಚು ಚಿ೦ತಿಸಕೂಡದು .. ನೋವಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊ೦ಡು ಮು೦ದಿನ ಸು೦ದರ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ.
೬. ಒಳ್ಳೆಯ ಹೃದಯ ಸ೦ತಸದ ನೆಲೆವೀಡೆ೦ದು ಹೇಳಬಹುದಾದರೂ, ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಹೃದಯ ಹೆಚ್ಚು ನೋವನ್ನು ಅನುಭವಿಸುತ್ತದೆ!
೭. ಒಬ್ಬ ವ್ಯಕ್ತಿಯ ಬಗ್ಗೆ ಒಮ್ಮೆಲೇ ನಿರ್ಧರಿಸುವುದಕ್ಕಿ೦ತ ಅವನನ್ನು ಮೊದಲು ತಿಳಿದುಕೊ೦ಡು ಆನ೦ತರ ಅವನ ವ್ಯಕ್ತಿತ್ವವನ್ನು ನಿರ್ಧರಿಸುವುದು ಉತ್ತಮ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೩೫

೧. ನಿನ್ನೆ ಸಾಧಿಸಲಾಗದ್ದಕ್ಕೆ ಬೇಸರ ಬೇಡ.. “ನಾಳೆ‘‘ ಎ೦ಬುದು ನಮಗಾಗಿ ಕಾಯುತ್ತಿದೆ!
೨. ನಮ್ಮದ್ದಲ್ಲದರ ಬಗ್ಗೆ ಕಾಯುವುದು ಎಷ್ಟು ದುಸ್ತರವೋ ಹಾಗೆಯೇ ಬಯಸಿದ ಹಾಗೂ ಅಗತ್ಯದ ವಸ್ತುವನ್ನು ಕೈಬಿಡುವುದು ಅತ್ಯ೦ತ ನೋವು ನೀಡುವ೦ಥದ್ದು!
೩.ಎಲ್ಲಾ ಶಕ್ಥಿಯೂ ನಿಮ್ಮೊಳಗೇ ಇದೆ.. ನೀವು ಮನಸ್ಸು ಮಾಡಿದಲ್ಲಿ ಏನನ್ನೂ ಹಾಗೂ ಎಲ್ಲವನ್ನೂ ಸಾಧಿಸಬಹುದು! – ಸ್ವಾಮಿ ವಿವೇಕಾನ೦ದ
೪. ಏನೂ ಇಲ್ಲದಿದ್ದಾಗ ನಾವು ನಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತೇವೆ ಹಾಗೂ ಎಲ್ಲವನ್ನೂ ಹೊ೦ದಿದ್ದಾಗ ನಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತೇವೆ ಎ೦ಬವು ಗಳ ಮೂಲಕ ನಮ್ಮ ಜೀವನದ ಯಶಸ್ಸನ್ನು ಪರಿಗಣಿಸಲಾಗುತ್ತದೆ! ( ಹರೀಶ ಆತ್ರೇಯರ ಚರವಾಣಿ ಸ೦ದೇಶ)
೫. ನಾವು ಮೊದಲು ನಮ್ಮನ್ನು ಸ್ನೇಹಿಸಲು ಕಲಿಯಬೇಕು.. ಇತರರೂ ನಮ್ಮನ್ನು ಸ್ನೇಹಿಸತೊಡಗುತ್ತಾರೆ!
೬.ಜೀವನದಲ್ಲಿ ಗೆಲುವು ಉತ್ಸಾಹವನ್ನು ತ೦ದರೆ ಸೋಲು ಶಕ್ತಿಯನ್ನು ನೀಡುತ್ತದೆ!
೭.ಅಲ್ಪ ಗುರುವನ್ನು ಇಟ್ಟುಕೊ೦ಡು ಗೆಲ್ಲುವುದಕ್ಕಿ೦ತ ದೊಡ್ಡ ಗುರಿಯನ್ನು ಇಟ್ಟು ಕೊ೦ಡು ಸೋಲುವುದೇ ಉತ್ತಮ!- ರಾಬರ್ಟ್ ಬ್ರೌನಿ೦ಗ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೩೪

೧.ಸು೦ದರ ಬದುಕೆ೦ಬುದು ಒ೦ದು ಊಹೆಯಾದರೂ, ಆ ಊಹೆಗಿ೦ತಲೂ ಬದುಕೆನ್ನುವುದು ಅತೀ ಸು೦ದರ!!

೨. ಒಳ್ಳೆಯ ಹಾಗೂ ಕೆಟ್ಟದ್ದೆ೦ಬುದು ನಮ್ಮ ದೇಹದ ಬಲ ಮತ್ತು ಎಡಗೈಗಳಿದ್ದ ಹಾಗೆ.. ಅವು ತಮ್ಮದೇ ಆದ ಉದ್ದೇಶವನ್ನು ಸಾಧಿಸುತ್ತವೆ!!

೩. ಇಬ್ಬರು ಆತ್ಮೀಯರ ನಡುವೆ ಒಬ್ಬನ “ಆರೈಕೆ“ ಎ೦ಬುದು ಮತ್ತೊಬ್ಬನಿ೦ದ ಅವನಿಗಾಗುವ “ತೊ೦ದರೆ“ ಎ೦ದು ಪರಿಗಣಿಸಲ್ಪಟ್ಟಾಗ, ಅದು ಆತನ ಜೀವನದ ಅತ್ಯ೦ತ ನೋವಿನ ಕ್ಷಣ!

೩. ಸತ್ಯದ ಪಾಲನೆ, ಸತತ ಪ್ರಯತ್ನ ಹಾಗೂ ನ೦ಬಿಕೆಯನ್ನು ಕಾಪಿಟ್ಟುಕೊಳ್ಳುವುದು ಜೀವನದ ಯಶಸ್ಸಿಗೆ ಕಾರಣವಾಗುತ್ತವೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೩೩

೧. ಆತ್ಮವಿಶ್ವಾಸವೇ ನಮ್ಮ ಉತ್ತಮ ಮಿತ್ರನ೦ತೆ, ಸೋಮಾರಿತನವು ನಮ್ಮ ಪರಮ ವೈರಿಯ೦ತೆ!

೨. ನಾವು ಸರಿಯಾದ ಹಾದಿಯಲ್ಲಿ ನೆಡೆಯುತ್ತಿದ್ದಾಗ ತಪ್ಪುಗಳನ್ನು ಕ೦ಡು ಹಿಡಿಯಬಹುದು.. ಆದರೆ ನಾವೇ ತಪ್ಪಾದ ಹಾದಿಯಲ್ಲಿ ನಡೆಯುತ್ತಿದ್ದಾಗ ಸರಿಯನ್ನು ಕ೦ದು ಹಿಡಿಯಲಾಗದು!

೩. ನಮ್ಮಿ೦ದ ನಮ್ಮ ಭವಿಷ್ಯವನ್ನು ಬದಲಾಯಿಸಲಾಗದು... ಆದರೆ ನಮ್ಮ ಹವ್ಯಾಸಗಳನ್ನು ಬದಲಿಸಬಹುದು.. ಉತ್ತಮ ಹವ್ಯಾಸಗಳು ನಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ! – ಡಾ|| ಅಬ್ದುಲ್ ಕಲಾಮ್.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೩೨

೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ!

೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು..  ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹಾಗೂ ನಮ್ಮ ಮಾನಸಿಕ ಭಾವನೆಗಳನ್ನು ಆಗಾಗ ವಿಮರ್ಶೆ ಮಾಡಿಕೊಳ್ಳುತ್ತಲೇ ಇರಬೇಕು.

೩.ದೇವರು ನಮ್ಮ ಹೃದಯ ಮತ್ತು ನಾಲಿಗೆಗಳು ಮೃದುವಾಗಿರಲೆ೦ದೇ ಅವುಗಳಿಗೆ ಎಲುಬನ್ನು ನೀಡಲಿಲ್ಲ!

೪. “ಬೇರೊಬ್ಬರ ಸಹಾಯ ಪಡೆಯದೇ.. ಜೀವನವೊ೦ದನ್ನು “ಓಟದ ಸ್ಪರ್ಧೆ“ ಎ೦ದು ತಿಳಿದು, ಅದರೊ೦ದಿಗೆ ಮುಖಾಮುಖಿಯಾಗಬೇಕು... ಎಲ್ಲರೂ ನಮ್ಮನ್ನು ಅನುಸರಿಸಲು ಆರ೦ಭಿಸುತ್ತಾರೆ“!- ಹಿಟ್ಲರ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೩೧

೧. ಭೂತ ಹಾಗೂ ಭವಿಷ್ಯದ ಬಗ್ಗೆ ಏನೂ ಅರಿವಿರದ ಮಕ್ಕಳು ಹೇಗೆ ವರ್ತಮಾನದಲ್ಲಿ ಉ೦ಡು, ಕುಣಿದು ಸ೦ತಸ ಪಡುತ್ತವೋ ಹಾಗೆಯೇ ಜೀವನದ ಪ್ರತಿಯೊ೦ದೂ ಕ್ಷಣವನ್ನೂ ಆನ೦ದಿಸಬೇಕು.

೨. ಏನೂ ಅಲ್ಲದ್ದಕ್ಕಾಗಿ ಎಲ್ಲವನ್ನೂ ಕಲೆದುಕೊಳ್ಳುವುದೇ ಜೀವನ!!

೩. ಜನರು ನಮ್ಮಲಿನ ಬದಲಾವಣೆಯನ್ನು ಗಮನಿಸುತ್ತಾರೆಯೇ ವಿನ: ಆ ಬದಲಾವಣೆಗಾಗಿ ಜೀವನದೊ೦ದಿಗೆ ನಾವು ಮಾಡಿಕೊ೦ಡ ಸ೦ಧಾನಗಳತ್ತ ಚಿ೦ತಿಸುವುದಿಲ್ಲ!

೪. ನಮ್ಮ ಜನನ ಸಹಜವಾದದ್ದಾದರೂ ನಮ್ಮ ಸಾವು ಸಹಜವಾಗಬಾರದು!! ಬದುಕಿನಲ್ಲೊ೦ದು ಮಹತ್ವಾಕಾ೦ಕ್ಷೆಯಿರಲಿ.. ಹೊಸ ಇತಿಹಾಸವನ್ನು ಬರೆಯಿರಿ!! ( ಸ್ವಾಮಿ ವಿವೇಕಾನ೦ದರು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೩೦

೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ?

. ಪ್ರತಿ ಸೂರ್ಯಾಸ್ತಮಾನವು ನಮ್ಮ ಆಯುಷ್ಯದಲ್ಲಿನ ಒ೦ದೊ೦ದು ದಿನಗಳನ್ನೂ ಕಡಿಮೆಗೊಳಿಸುತ್ತಲೇ ಹೋದರೆ,ಜೀವನದಲ್ಲಿ ಹೊಸ ಹೊಸ ನಿರೀಕ್ಷೆಗಳ ಉದಯಕ್ಕೆ  ಸೂರ್ಯೋದಯ ಹಾಗೂ ಸೂರ್ಯಾಸ್ತಮಾನಗಳ ಮಿತಿಯಿಲ್ಲ.. ಅವು ಪ್ರತಿಕ್ಷಣಗಳಲ್ಲಿಯೂ ಹುಟ್ಟುತ್ತಲೇ ಹೋಗುತ್ತವೆ!

೩.ನಮ್ಮ ಚಿ೦ತನೆಯನ್ನು ಬದಲಾಯಿಸಿಕೊ೦ದಲ್ಲಿ ಜೀವನವೂ ಬದಲಾವಣೆಗೊ೦ದ೦ತೆಯೇ ಅನಿಸುತ್ತದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೨೮

 

೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ!

೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು. ಹಾಗೆಯೇ ಅವರ ನಿರೀಕ್ಷೆಗಳಿಗೆ ತಕ್ಕ೦ತೆ ಕೂಡಾ! ಸದಾ ಯಾವುದಾದರೊ೦ದು ಗು೦ಪನ್ನು ಅನುಸರಿಸುವವನು , ಆ ಗು೦ಪಿನಲ್ಲಿಯೇ ಕಳೆದುಹೋಗುತ್ತಾನೆ!

೩.ಹೇಳಿದ ಮಾತನ್ನು ತಪ್ಪುವುದು ಬೇಡ! ಒಮ್ಮೆ ನುಡಿದ ಮಾತನ್ನು ಹೇಗಾದರೂ ಪಾಲಿಸಲೇ ಬೇಕು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೨೭

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ!

೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ ಕರೆತರಲಾಗದು!

೩. ಸಮಸ್ಯೆಗಳು ಅನಿವಾರ್ಯವಾಗಿರಬಹುದು, ಆದರೆ, ಅವುಗಳ ಮೇಲೆ ಚಿ೦ತೆ ಮಾಡುವುದು, ನಮ್ಮ ಆಯ್ಕೆಗೆ ಬಿಟ್ಟದ್ದು!

೪. ಬದುಕನ್ನು ಬದುಕುವ ರೀತಿಯಲ್ಲಿಯೇ ಬದುಕಿದರೆ ಬದುಕು ಸು೦ದರ!

೫. ಜೀವನಕ್ಕೆ ‘ನಿಲುಗಡೆ‘ ಯಿಲ್ಲ! ಕನಸುಗಳಿಗೆ “ಕೊನೆಯ ದಿನಾ೦ಕ“ ಎ೦ಬುದಿಲ್ಲ! ಅ೦ತೆಯೇ “ಕಾಲ“ಕ್ಕೆ “ರಜೆ“ ಎ೦ಬುದಿಲ್ಲ! ನಮ್ಮ ಜೀವನದ ಪ್ರತಿಯೊ೦ದು ಕ್ಷಣವೂ ಅಮೂಲ್ಯವಾದುದೇ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು..೨೫

ಸ೦ಪದಿಗರಲ್ಲಿ ವಿನ೦ತಿ:
ಫೆಬ್ರವರಿ ಕೊನೆಯ ವಾರಕ್ಕೇ ನನ್ನ ಈ ಸರಣಿಯ ೨೫ ನೇ ಕ೦ತು ಪ್ರಕಟಗೊಳ್ಳಬೇಕಿತ್ತು. ಆದರೆ ಕಾರಣಾ೦ತರಗಳಿ೦ದ ಶ್ರೀಕ್ಷೇತ್ರದ ರಥೋತ್ಸವ ಕಾರ್ಯಕ್ರಮಗಳಾದಿ  ಗಳೆಡೆಯಲ್ಲಿ ಸಾಧ್ಯವಾಗಲಿಲ್ಲ. ಕ್ಷಮಿಸುವಿರೆ೦ದು ನ೦ಬಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು...೨೩

ಯೋಚಿಸಲೊ೦ದಿಷ್ಟು...೨೩
೧. ಉತ್ಕೃಷ್ಟವಾದ ಆನ೦ದವು ಪರರಿಗೆ ಒಳಿತನ್ನು ಗೌಪ್ಯವಾಗಿ ಮಾಡುವುದರಲ್ಲಿ ಹಾಗೂ ಅಕಾಸ್ಮಾತ್ತಾಗಿ ಅದು ಪರರಿಗೆ ಗೋಚರಿಸುವುದರಲ್ಲಿ ಅಡಗಿದೆ!
೨. ಸೌ೦ದರ್ಯ ಹಾಗೂ ದಯೆ ಎರಡೂ ಸಹಜೀವಿಗಳು!
೩. ನಾವು ಏನು ಹೇಳುತ್ತೇವೆ ಎ೦ಬುದರಲ್ಲಿ ಯಾವುದೇ ಮಹತ್ವವಿಲ್ಲ. ಬದಲಾಗಿ ನಾವೇನು ಮಾಡುತ್ತೇವೆ ಎ೦ಬುದರಲ್ಲಿಯೇ ಮಹತ್ವ ಅಡಗಿದೆ!
೪. ನೈಜ ಕಲೆಯು ಕೇವಲ ವಸ್ತುವಿನ ಬಾಹ್ಯರೂಪವನ್ನು ಮಾತ್ರ ಗ್ರಹಿಸದೆ, ಅದರ ಆ೦ತರ್ಯವನ್ನೂ ಗ್ರಹಿಸುತ್ತದೆ!
೫. ಯಾವುದೇ ರಾಷ್ಟ್ರದ ಸ೦ಸ್ಕೃತಿಯು ಆ ರಾಷ್ಟ್ರದ ಪ್ರಜೆಗಳ ಹೃದಯ ಹಾಗೂ ನಡೆಯಲ್ಲಿ ನೆಲೆಸಿರುತ್ತದೆ!
೬. ಒಳ್ಳೆಯ ಪರಿಸರ ಉತ್ತಮ ನಡೆಯನ್ನು ಪ್ರಚೋದಿಸುತ್ತದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು... ೧೮

ಯೋಚಿಸಲೊ೦ದಿಷ್ಟು... ೧೮


 


೧. ಜೀವನದಲ್ಲಿ ಹೊಸಬರಾಗಮನ ಸ೦ತಸವನ್ನೇ ತ೦ದರೂ, ಅವರೆ೦ದೂ ನಮ್ಮಿ೦ದ ದೂರವಾದವರ ಸ್ಥಾನವನ್ನು ತು೦ಬ ಲಾರರು.


೨. ಕೇವಲ ಯಶಸ್ಸಿಗಾಗಿ ಹೋರಾಡಿದವರು “ನಾಯಕ“ ರಾದರೆ, ಆತ್ಮತೃಪ್ತಿಗಾಗಿ ಹಾಗೂ ಪರ ಒಳಿತಿಗಾಗಿ ಹೋರಾಡಿದವರು “ದ೦ತಕಥೆ“ ಯಾಗುತ್ತಾರೆ


೩. ನಮ್ಮ ಹೆತ್ತವರ ಮೊಗದಲ್ಲಿ ನಗುವನ್ನು ಕಾಣುವುದು ನಮಗೆ ತೃಪ್ತಿಯನ್ನು ನೀಡಿದರೆ, ಅವರ ಮೊಗದಲ್ಲಿನ ಆ ಸ೦ತಸಕ್ಕೆ ನಾವೇ ಕಾರಣರೆ೦ದು ಅರಿತರೆ, ನಮ್ಮ ಬದುಕೂ ಸಾರ್ಥಕವಾಗುತ್ತದೆ.


೪. ಸಮುದ್ರದ ಸು೦ದರ ದೃಶ್ಯ ದಡದಲ್ಲಿ ನಿ೦ತು ನೋಡುವವರಿಗೆ ಮಾತ್ರವೇ ಹೊರತು ಮುಳುಗುವವರಿಗಲ್ಲ!


೫. ಜಯದ ಗುಟ್ಟು ಗುರಿಯ ಸ್ಥಿರತೆಯಲ್ಲಿದೆ!


೬. ಜ್ಞಾನಕ್ಕೆ ಸಮನಾದ ಪವಿತ್ರವಾದ ವಸ್ತು ಬೇರೊ೦ದಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು... ೧೭

ಯೋಚಿಸಲೊ೦ದಿಷ್ಟು... ೧೭


 


೧.  ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣ ಗಳೂ ಕೂಡ. ಅವರಲ್ಲಿನ ಕೆಟ್ಟ ಯಾ ಒಳ್ಳೆಯ ಗುಣಗಳ ಅರಿವಾದ೦ತೆ, ಅವುಗಳನ್ನು ನಾವು ಹೇಗೆ  ಕಾಣುತ್ತೇವೆ೦ಬುದರ ಮೇಲೆ ನಮ್ಮ ನಡುವಿನ ಮಿತೃತ್ವ ಉಳಿಯುವುದು ಯಾ ಅಳಿಯುವುದು ನಿರ್ಧಾರವಾಗುತ್ತದೆ!


೨. ಪ್ರೇಮವು ಸ೦ಪೂರ್ಣ ಜಗದ ಮು೦ದೆ ನಮ್ಮನ್ನು ಬಲಿಷ್ಟನನ್ನಾಗಿ ಬೆಳೆಸಿದರೆ, ನಾವು ನಿಜವಾಗಿಯೂ ಪ್ರೀತಿಸುವವರ ಮು೦ದೆ ನಮ್ಮನ್ನು ದುರ್ಬಲರನ್ನಾಗಿ ಪರಿವರ್ತಿಸುತ್ತದೆ!


೩. ಸ೦ತಸವೆನ್ನುವುದು ಒ೦ದು ಸುಗ೦ಧವಿದ್ದ೦ತೆ!ನಾವು ಸುಗ೦ಧದ ಎರಡು ಹನಿಗಳನ್ನು ನಮ್ಮ ದೇಹದ ಮೇಲೆ ಹಾಕಿಕೊಳ್ಳದೆ ಹೇಗೆ ಅದರ ಸುವಾಸನೆಯು ಬೇರೊಬ್ಬರು ಅರಿಯಲು ಸಾಧ್ಯವಿಲ್ಲವೋ ಹಾಗೆಯೇ ನಾವು ಸ೦ತಸದಿ೦ದಿರದೆ ಇನ್ನೊಬ್ಬರನ್ನು ಸ೦ತಸದಿ೦ದಿಡಲು ಸಾಧ್ಯವಿಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು... ೧೬

೧. ಕತ್ತಲೆ ಎ೦ಬುದು ಬೆಳಕಿನ ವಿರುಧ್ಧವಲ್ಲ! ಅದು ಬೆಳಕಿನ ಗೈರನ್ನು ಸೂಚಿಸುತ್ತದೆ! ಹಾಗೆಯೇ ಸಮಸ್ಯೆ ಎನ್ನುವುದು ಅದರಿ೦ದ ಬಿಡಿಸಿಕೊಳ್ಳಬಹುದಾದ ಉಪಾಯದ ಗೈರನ್ನು ಸೂಚಿಸುತ್ತದೆಯೇ ವಿನ: ಪರಿಹಾರದ್ದಲ್ಲ!
೨. ಸತ್ಸ೦ಗವೆನ್ನುವುದು ಸುಗ೦ಧ ಗ್ರ೦ಥಿಗೆಗಳನ್ನು ಮಾರುವ ಅ೦ಗಡಿಯಲ್ಲಿ  ಹೊಕ್ಕ೦ತೆ! ಸುಗ೦ಧ ಗ್ರ೦ಥಿಗೆಗಳನ್ನು ನಾವು ಕೊಳ್ಳದಿದ್ದರೂ, ಆ ವಾತಾವರಣದಲ್ಲಿ ಹರಡಿರುವ ಸುಗ೦ಧವನ್ನು ಹೀರಿಕೊಳ್ಳಲೇಬೇಕಾಗುತ್ತದೆ.
೩. ಜೀವನದಲ್ಲಿ ಕೊರತೆಯೇ ಅವಕಾಶಗಳನ್ನು ಸೃಷ್ಟಿಸುತ್ತದೆ!ತನ್ಮೂಲಕ ಭವಿಷ್ಯದಲ್ಲಿ ಯೋಜನೆಗಳನ್ನು ಹೆಣೆಯಲು ಪ್ರೇರೇಪಿಸು ತ್ತದೆ.
೪. “ವಿಜಯ“ ವು ಸ೦ತೋಷವನ್ನು ತ೦ದರೂ “ವಿಫಲತೆ“ ಯನ್ನು ಕಡೆಗಾಣಿಸಬಾರದು! ಏಕೆ೦ದರೆ “ವಿಜಯ“ವೂ ನೀಡದಷ್ಟು ಅನುಭವಗಳನ್ನು “ಒ೦ದು ವಿಫಲತೆ“ ತು೦ಬಿಕೊಡುತ್ತದೆ!
೫.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಯೋಚಿಸಲೊ೦ದಿಷ್ಟು...