ಬದುಕಲಿಕ್ಕೇ ಬಣ್ಣ

ರಾಜ ಯೋಗ!

“Dude, Shall we go?” ಸಹೋದ್ಯೋಗಿಯೊಬ್ಬ ಪ್ರತಿ 2 ಘಂಟೆಗೊಂದು ಬಾರಿ ನನ್ನನ್ನು ಕೆಲಸದ ಗುಂಗಿನಿಂದ ಎಚ್ಚರಿಸೋದು ಹೀಗೆ. ಈ ಐ ಟಿ ಉದ್ಯೋಗಿಗಳು ಕೆಲ್ಸ ಮಾಡಿ ದಬಾಕೋದು ಅಷ್ಟರಲ್ಲೇ ಇದ್ದರೂ, ವಿರಾಮ ಮಾತ್ರ ಎಗ್ಗಿಲ್ದೆ ತಗೋತಾರೆ. ಹೀಗೊಂದು ವಿರಾಮಕ್ಕೆ ಸಾಕ್ಷಿ ನಮ್ಮ ಮಾಮೂಲಿ ಅಡ್ಡಾ , ಮುಖ್ಯ ದ್ವಾರದ ಬಳಿ ಇರೋ ಟೀ ಅಂಗಡಿ. ಅಲ್ಲಿ ಆ ಜನರ ನಡುವೆ ಎರಡು ವಡೆ ಗಿಟ್ಟಿಸೋದು ಅಷ್ಟು ಸುಲಭದ ಮಾತಲ್ಲ. 3×7 ಅಡಿಯ ತಗಡಿನ ಅಂಗಡಿಯೊಳಗೆ ಈ ಮಟ್ಟಕ್ಕೆ ಗಿರಾಕಿಗಳನ್ನ ಕಲೆ ಹಾಕೋ ವಿಶೇಷತೆ ಏನಿದೆ ಅನ್ನೋದು ಗೊತ್ತಾಗಿದ್ದು ಅಲ್ಲಿ ವಡೆ ತಿಂದ ಮೇಲೇನೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಂಗಳು ಬದುಕಿನ ಮಳೆ

ರಾಷ್ಟ್ರಕವಿಯೊಬ್ಬರನ್ನು ಹೋಲುವ ತಲೆಗೂದಲು,ಹೋತದ ಗಡ್ಡ ಆತನಿಗಿತ್ತು. ವಿಚಿತ್ರ ಬಣ್ಣಗಳಿರುವ ಬಟ್ಟೆ ಅವನ ಇಷ್ಟವಾಗಿತ್ತು. ಅವನ ಬಟ್ಟೆ, ಹೆಗಲ ಚೀಲ, ತನಗೆ ಸಮಾನರಿಲ್ಲದ ನಿಲುವು ಗಮನ ಸೆಳೆಯುತ್ತಿದ್ದವು. ಬ್ಯಾಂಕರ್ ವ್ರತ್ತಿಯಿಂದ ನಿವ್ರತ್ತನಾಗಿದ್ದ. ಪೆನ್ ಷನ್ ಜಾರಿಯಾಗಿತ್ತು. ಸ್ವಲ್ಪ ದುಡ್ಡು ಬ್ಯಾಂಕಲ್ಲಿ ಡೆಪೋಸಿಟ್ ಆಗಿಯೂ ಇತ್ತು. ಬ್ಯಾಂಕರ್ ವ್ರತ್ತಿಯಲ್ಲಿ ಹಲವು ರಾಜ್ಯ ಸುತ್ತಿದ್ದ. ಬ್ಯಾಂಕಿನಿಂದ ಸಿಗುವ ನ್ಯಾಯಬದ್ದ ಸವಲತ್ತನ್ನು ಪೂರಾ ಬಳಸಿದ್ದ. ವ್ರತ್ತಿಯಲ್ಲಿ ಎಲ್ಲೂ ಸಂಕಷ್ಟಕ್ಕೆ ಸಿಗದ ಹಾಗೇ ನೋಡಿಕೊಂಡಿದ್ದ. ಅಧಿಕಾರಿವಲಯದಲ್ಲಿ ಇತರ ಅಧಿಕಾರಿಗಳು ಅವನ ಎದುರು ಚಪ್ಪೆ ಅನಿಸುತ್ತಿದ್ದರು.ವಿಸ್ಕಿ, ಸೀಗರೇಟು ಬಳಸುತ್ತಿದ್ದ. ಈಗ ಒಂದು ಹನಿಯೂ ಮುಟ್ಟುವುದಿಲ್ಲ. ಸಿಗರೇಟು ಸೇದುವುದಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಬದುಕಲಿಕ್ಕೇ ಬಣ್ಣ