ನನ್ನ ಬಾಲ್ಯದ ನೆನಪುಗಳು

ಬದಲಾವಣೆ..

ಸುಮಾರು ೧೫ ವರ್ಷಗಳೇ ಕಳೆದವು ಅನ್ಸುತ್ತೆ.. ಅದು ನವರಾತ್ರಿ ರಜೆಯ ಸಮಯ, ನಾನು ಏಳನೇ ಕ್ಲಾಸು.. ಮನೆಯಲ್ಲೆಲ್ಲಾ ಸಡಗರ.. ಎಂತ, ಹಬ್ಬ ಅಂತ ಅಂದುಕೊಂಡ್ರಾ? ಅಲ್ಲಾರೀ.. ನಮ್ಮೂರಿಗೆ ಲ್ಯಾಂಡ್ ಲೈನ್ ಫೋನ್ ಕನೆಕ್ಷನ್ ಬಂದಿತ್ತು. ನಮ್ಮ ಮನೆಗೂ ಅವತ್ತೇ ಫೋನ್ ಲೈನ್ ಎಳೆದು ಕನೆಕ್ಷನ್ ಕೊಟ್ಟುಬಿಡುವುದು ಅಂತ ತೀರ್ಮಾನವೂ ಆಗಿತ್ತು. ನಮಗೆಲ್ಲ ಖುಷಿಯೋ ಖುಷಿ.. ಹುಡುಗ್ರಾದ ನಮಗೆ ಎಲ್ಲವೂ ಖುಷಿನೇ.. ಮನೆಗೆ ಎಂತದೇ ಹೊಸತು ಬಂದರೂ ಸಹ ಅದರಲ್ಲೊಂದು ಖುಷಿ ಹುಡುಕುವ ಅಗತ್ಯವೇ ಇರೋದಿಲ್ಲ.. ಅದಾಗಿಯೇ ಖುಷಿ ಆಗುತ್ತೆ. ಆದ್ರೆ ದೊಡ್ಡವರಿಗೂ ಖುಷಿ ಆಗುವಂಥದ್ದು ಎಂತ ಮಾರ್ರೆ ಆ ಫೋನಲ್ಲಿ? ಬೆಳಗ್ಗಿಂದನೇ ಕಾದು ಕಾದು ಟೆಲಿಫೋನ್ ಡಿಪಾರ್ಟ್‌ಮೆಂಟ್ನವರು ಬರಲಿಲ್ಲ ಅಂತ ಎಲ್ಲರೂ ಶಾಪ ಹಾಕುತ್ತಾ ಮಧ್ಯಾನ ಊಟಕ್ಕೂ ಕೂತಾಯಿತು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಅಂದು ಸವಿದ ಆ ನಾಟಿ ಮಾವಿನ ಹಣ್ಣುಗಳು!

ಅಂದು ನಾವು ಚಿಕ್ಕವರಿದ್ದಾಗ ನಮ್ಮೂರಿನ ಮೂಡಣ ದಿಕ್ಕಿನಲ್ಲಿ ನೂರಾರು ಜಾತಿಯ ನಾಟಿ ಮಾವಿನ ಮರಗಳಿದ್ದವು. ಜನವರಿ, ಪೆಬ್ರುವರಿ ತಿಂಗಳು ಮುಗಿಯುವ ಹೊತ್ತಿಗೆ ಮರಗಳೆಲ್ಲ ಹೂ ಬಿಟ್ಟು, ಎಪ್ರಿಲ್, ಮೇ, ಜೂನ್ ತಿಂಗಳುಗಳಲ್ಲಿ ಆ ಹೂವುಗಳೆಲ್ಲ ಕಾಯಾಗಿ, ಹಣ್ಣಾಗುತ್ತಿದ್ದವು. ಆಗ ನಮಗೆಲ್ಲ ಬೇಸಿಗೆಯ ರಜೆ, ಆ ರಜೆ ನಮಗೆ ಮಾವಿನ ಹಣ್ಣನ್ನು ತಿನ್ನಲೆಂಬಂತೇ ಇದ್ದಂತಿತ್ತು. ಒಂದೊಂದು ಮರಕ್ಕು ಒಂದೊಂದು ತರಹದ ಹಣ್ಣುಗಳು, ಕೆಲವು ಅರ್ಧ ಅಂಗುಲದಷ್ಟು ಚಿಕ್ಕದಾಗಿದ್ದರೆ, ಕೆಲವು ಐದಾರು ಅಂಗುಲದಷ್ಟು ದೊಡ್ಡ ಹಣ್ಣುಗಳು. ಐದಾರು ಮರದ ಹಣ್ಣುಗಳು ಹುಳಿ ಎನಿಸಿದರೂ, ಉಳಿದ ಮರಗಳ ಹಣ್ಣುಗಳು ಸಿಹಿಯಾಗಿದ್ದವೂ. ಕೆಲವು ಹಣ್ಣುಗಳು ತುಂಬಾ ರುಚಿಯಿದ್ದರೂ ಆ ಹಣ್ಣುಗಳ ಅರ್ಧದಷ್ಟು ಸೊನೆ ತುಂಬಿರುತಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಗಾಗ ನೆನಪಾಗುವ ನನ್ನ ಬಾಲ್ಯದ ಸೈಕಲ್ ಸವಾರಿಗಳು!

ಎರಡನೆಯ ಮಹಡಿಯಲ್ಲಿರುವ ನನ್ನ ಮನೆಯ ಜಗುಲಿಯಲ್ಲಿ ನಿಂತು, ಪಕ್ಕದ ಮನೆಯ ಬಾಲಕ ಮನೆಯಿಂದ ಸ್ವಲ್ಪ ಹೊರಗೆ ಸೈಕಲ್ ಹೊಡೆಯುತ್ತಾ ಹೋಗಿ ಮತ್ತೆ ಮನೆಗೆ ಬಂದು, ಮತ್ತೆ ಹೋಗಿ ಬರುವುದನ್ನು ಮಾಡುತಿದ್ದ. ಸುಮಾರು ಒಂದು ಗಂಟೆಯಿಂದ ಅದನ್ನೇ ನೋಡುತಿದ್ದ ನನಗೂ ನನ್ನ ಬಾಲ್ಯದ ದಿನಗಳಲ್ಲಿ ನಾನು ನಡೆಸಿದ ಸೈಕಲ್ ಸವಾರಿಗಳು ನೆನಪಿಗೆ ಬರತೊಡಗಿದವು. ಮನುಷ್ಯ ಎಷ್ಟೇ ದೊಡ್ಡವನಾದರೂ, ಹಣಗಳಿಸಿ ಶ್ರೀಮಂತನಾದರೂ, ಇಂದು ಬೈಕು ಕಾರುಗಳಲ್ಲಿ ಓಡಾಡುತಿದ್ದರೂ ಆತನಿಗೆ ತಾನು ಬಾಲ್ಯದಲ್ಲಿ ನಡೆಸಿದ ಸೈಕಲ್ ಸವಾರಿಯನ್ನು ಮಾತ್ರ ಮರೆಯಲಾರ ಅನ್ನಿಸುತ್ತದೆ. ಆ ಸೈಕಲ್ ನೀಡಿದಷ್ಟು ಸುಖ-ಸಂತೋಷ ಇಂದಿನ ಐಷಾರಾಮಿ ಕಾರುಗಳು ನೀಡಲಾರವು ಎನ್ನುವುದು ನನ್ನ ಅನಿಸಿಕೆ. ಬಹುಷಃ ಹಲವರ ಅನಿಸಿಕೆನೂ ಇರಬಹುದೇನೋ ಏನೋ? ನಾನು ಕೂಡ ಅದಕ್ಕೇನು ಹೊರತಾಗಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರೆತೆನೆಂದರೂ ಮರೆಯಲಾರದ ಬೆಲೇಕೇರಿಯ ನೆನಪುಗಳು!

ಬೆಲೇಕೇರಿ ಎಂದ ತಕ್ಷಣ ಇಂದು ಎಲ್ಲರಿಗೂ ನೆನಪಾಗುವುದು ಮ್ಯಾಂಗನೀಸ್ ಹಾಗೂ ಅದರ ಸುತ್ತ ಆವರಿಸಿರುವ ರಾಜಕೀಯ ಹಗರಣಗಳಿರಬಹುದು, ಆದರೆ ನನಗೆ ನೆನಪಾಗುವುದು ನನ್ನ ಬಾಲ್ಯದ ದಿನಗಳಲ್ಲಿ ನಾ ಅಲ್ಲಿ ಕಳೆದ ರಜಾ ದಿನಗಳು, ಅಲ್ಲಿನ ಜನರ ಪ್ರೀತಿ, ಮುಗ್ಧತೆ, ಆ ಊರಿನ ಸುಂದರ ಕಡಲ ತೀರ ಇತ್ಯಾದಿ. ಇತ್ಯಾದಿ.. ಆ ನೆನಪುಗಳೇ ಇಂದಿಗೂ ನನ್ನನ್ನು ಆ ಊರಿಗೆ ಕರೆದುಕೊಂಡು ಹೋಗುತ್ತದೆ ಅಂದರೂ ತಪ್ಪಾಗಲಾರದು. ನನಗೂ ಬೆಲೇಕೇರಿಗೂ ಹುಟ್ಟಿನಿಂದಲೂ ಏನೋ ಒಂದು ರೀತಿಯ ಆತ್ಮೀಯ ಸಂಭಂದ. ಬೆಲೇಕೇರಿ ನನ್ನ ತಾಯಿಯ ತವರು ಮನೆಯ ಊರು ಹಾಗು ನನ್ನಾಕೆಯ ತವರು ಮನೆಯ ಊರು ಕೂಡ. ನನ್ನ ತಾಯಿಯ ತವರು ಮನೆಯ ಊರಾದ್ದರಿಂದ ನಾನು ಆಗಾಗ ಬೆಲೇಕೇರಿಗೆ ಹೋಗಿಬರುತ್ತಿದ್ದೆ. ಚಿಕ್ಕವರಿದ್ದಾಗ ರಜೆ ಬಿದ್ದರೆ ಸಾಕು ನಾನು ಬೆಲೇಕೇರಿಗೆ ಹೊರಟುಬಿಡುತಿದ್ದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಗಾಗ ನೆನಪಾಗುವ ಬೆಳಸೆ ಅಜ್ಜಿ..

ಬೆಳಸೆ ಇದು ರಾಷ್ಟ್ರೀಯ ಹೆದ್ದಾರಿ ೧೭ ಕ್ಕೆ ಹೊಂದಿಕೊಂಡ ಅಂಕೋಲಾ ತಾಲೋಖಿನ ಒಂದು ಹಳ್ಳಿ. ವಿಸ್ತಾರದಲ್ಲಿ ದೊಡ್ಡದಾಗಿದ್ದರೂ ಜನ ಸಾಂದ್ರತೆಯಲ್ಲಿ ಚಿಕ್ಕ ಊರು. ನಮ್ಮ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ನಮ್ಮೂರಿಗೂ,ಬೆಳಸೆ ಊರಿಗೂ ಹಿಂದಿನಿಂದ ಇಂದಿನವರೆಗೂ ಏನೋ ಒಂದು ರೀತಿಯ ಅವಿನವಭಾವ ಸಂಭಂದ. ನಮ್ಮ ಊರಿನಲ್ಲಿ ಹಬ್ಬ ಹ್ರಿದಿನಗಳಿರಲಿ, ಮದುವೆ ಸಮಾರಂಭಗಳಿರಲಿ ಅವರು ನಮ್ಮೂರಿಗೆ ಬರುವುದು, ನಾವು ಸಹಾಯಕ್ಕಾಗಿ ಅಲ್ಲಿಗೆ ಹೋಗುವುದು ಸರ್ವೇ ಸಾಮಾನ್ಯ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದು ಬೆಳಗಿನ ಕಥೆ

ನನ್ನ ಸ್ಕೂಲ್ ಶುರುವಾಗುತ್ತಿದ್ದುದು ಸುಮಾರು 11.45. ಅಂದರೆ, ಚಿಕ್ಕವನಿದ್ದಾಗ, ಪ್ರತಿ ದಿನವೂ ಬೇಗ ಏಳೋ ಪದ್ಧತಿಯಂತೂ ನನಗಿರಲೇ ಇಲ್ಲ. ಇನ್ನು ಮನೆಯಲ್ಲಿ, ಎಲ್ಲರಿಗಿಂತ ನಾನೇ ಚಿಕ್ಕವನು. ಹಾಗಾಗಿ, ಅಕ್ಕನಿಗಿಂತ ನನ್ನ ಮೇಲೆ ಅಮ್ಮನಿಗೆ ಒಂದಿಷ್ಟು ಹೆಚ್ಚೇ ಪ್ರೀತಿ! ನಾನು ಮತ್ತು ನನ್ನ ಅಕ್ಕ, ಒಂದೇ ಸ್ಕೂಲಿಗೆ ಹೋಗುತ್ತಿದ್ದೆವಾದರೂ, ಅವಳು ಮಾತ್ರ ಬೇಗ ಏಳಬೇಕು. ಪಾಪ, ಮೊದಲು ಹುಟ್ಟಿದ್ದೇ ಅವಳು ಮಾಡಿದ ತಪ್ಪು! ನಂತರ ಹುಟ್ಟಿದ್ದು ನನ್ನ ಭಾಗ್ಯ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.1 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಬಾಲ್ಯದ ನೆನಪುಗಳು - ನಾನ್ ಸ್ವಾಮಿ ಕಳ್ಳ !!!

ನನ್ನ ಬಾಲ್ಯದ ನೆನಪುಗಳು -  ನಾನ್ ಸ್ವಾಮಿ ಕಳ್ಳ !!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊಳಲ್ಕೆರೆಯ ಮದುವೆಗಳು !

ನಾನು ಹೇಳುತ್ತಿರುವುದು ೧೯೫೦ ರ ದಶಕದ ನಮ್ಮ ಊರಿನ ಮದುವೆಗಳ ಬಗ್ಗೆ ! ನಮ್ಮ ದೇಶದಲ್ಲಿ ಮದುವೆಗಳು ಯಾವಾಗಲೂ ಅದ್ಧೂರಿಯಿಂದಲೇ ನಡೆಯುತ್ತವೆ. ಹಳ್ಳಿಯಿರಲಿ, ದಿಳ್ಳಿಯಿರಲಿ ; ಜನ, ತಮ್ಮ ಮಕ್ಕಳ ವಿವಾಹವನ್ನು ಸಾಧ್ಯವಾದಷ್ಟು ಮಟ್ಟಿಗೆ ಚೆನ್ನಾಗಿಯೇ ಮಾಡಿಕೊಡುತ್ತಾರೆ. ಈಗಲೂ ಭಾರತದಲ್ಲೇ ಅತಿಹೆಚ್ಚಿನ ಬಂಗಾರದ ಒಡವೆಗಳ ಬಳಕೆಯಾಗುತ್ತಿದೆ. ಸಾಲಮಾಡಿಯಾದರೂ ಅತಿ-ಹೆಚ್ಚು ಖರ್ಚುಮಾಡುವ ಅಭ್ಯಾಸವೂ ಭಾರತದ ಮಧ್ಯಮವರ್ಗದ ಮನೆಗಳಲ್ಲಿ ಇಂದಿಗೂ ಬಳಕೆಯಲ್ಲಿವೆ. ಆದ್ರೂ ಸ್ವಲ್ಪ ಸಣ್ಣ-ಪುಟ್ಟ ತೃಟಿಗಳು ಬರುವುದು ಸಹಜ. ’ಎಷ್ಟು ಗಾಡಿ ನೆಂಟರು’ ಬಂದಿದ್ದರು ಎನ್ನುವುದರಮೇಲೆ, ಮದುವೆಯ ಸಂಭ್ರಮಗಳು, ಏರ್ಪಾಟುಗಳು, ಅವಲಂಬಿಸಿರುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ನನ್ನ ಬಾಲ್ಯದ ನೆನಪುಗಳು