ಛಂದಸ್ಸು

ಪತಿಗಳ್ ಸೀತೆಗದೆಷ್ಟು ಮಂದಿ ?

ರಾಮ ಏಕಪತ್ನೀ ವ್ರತಸ್ಥ ಅಂತ ನಮಗೆಲ್ಲರಿಗೂ ಗೊತ್ತೇಇದೆ. ಅಲ್ಲದೇ ಪತಿವ್ರತೆ ಅಂದ ತಕ್ಷಣ ಹೊಳೆಯೋ ಹೆಸರೇ ಸೀತೆಯದ್ದು. ಅಂತಹದರಲ್ಲಿ ಸೀತೆಗೆ ಅದೆಷ್ಟು ಜನ ಗಂಡಂದಿರು ಅಂತ ಕೇಳಿದ್ರೆ?ಅದೆಂಥಾ ಅಭಾಸ ಅಲ್ಲವೇ?

ಈಗ ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಇದು :

ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯಿರ್ವರೇ?

ದೇವರೇ ಗತಿ!  ಮೊದಲೇ ಸೀತೆಗೆ ಒಂದಕ್ಕಿಂತ ಹೆಚ್ಚು ಗಂಡಂದಿರು ಅಂತ ಹೇಳಿದ್ದೊಂದೇ ಅಲ್ಲ - ಲೆಕ್ಕ ಹಾಕೋಕಾಗದಷ್ಟು ಜನ ಅಂತ ಬೇರೆ ಅಂತಿದ್ದಾರಲ್ಲಪ್ಪ? ರಾಮ ರಾಮಾ! ಇದಕ್ಕಿಂತ ಬೇರೆ ತರಹ ಹೆಸರು ಕೆಡಿಸೋದನ್ನೆಲ್ಲಾದರೂಕಂಡಿದೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಬೇಡತಿಗೆರಡು ಕವಿತೆಗಳು

ಪಂಚಮಾತ್ರೆಯ ಚೌಪದಿಯಲ್ಲಿ:

ಭಿಲ್ಲರಾ ಹೆಣ್ಣೀಕೆ ಬಾಣವನು ಹೂಡಲಿಕೆ

ಬಿಲ್ಲ ಹಿಡಿಯುತ ಹೊಂಚಿಕಾಯ್ವಳೀಕೆ;

ಸಲ್ಲದಿದು! ತನ್ನೆರಡು ಕಣ್ಣಿನಾ ಕೂರಂಬಿ-

ನಲ್ಲೆ ಕೊಲುವುದನೀಕೆ ಮರೆತಳೇಕೆ?

 

 

 

 

 

 

ಭಾಮಿನಿ ಷಟ್ಪದಿಯಲ್ಲಿ:

ಬೇಡ! ಚೆಲುವೆಯೆ ನಿನ್ನ ಕರದ-

ಲ್ಲಾಡುತಿಹ ಶರ ಭಯವ ತರುವುದು!

ಬೇಡತಿಯು ನಾನೆಂದು ಮಿಗಗಳ ಕೊಲ್ಲಬೇಕಿಲ್ಲ;

ಕಾಡ ತೊರೆಯುತ ಹೊರಡು ಬೇಟೆಗೆ

ನಾಡ ಹೊಕ್ಕರೆ ಕಣ್ಣ ನೋಟದೆ

ಹಾಡು ಹಗಲಲೆ ಜನಗಳನ್ನೇ ಕೊಲ್ಲಬಹುದಲ್ಲ!

 

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಚೊಚ್ಚಲ ಬಸಿರು

 ಕನ್ನಡ  ಕವಿತೆಗಳನ್ನು ಬರೆಯುವ ಆಸಕ್ತಿ ಉಳ್ಳವರಿಗೆ,  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಹೊಟ್ಟೆ ತುಂಬಿಸದ ಭಾಷೆ

ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗೆ ಅದು ಕಂಡರಾಗದು. ಒಬ್ಬರಿಗೆ ಸಂಗೀತ ಅಂದ್ರೆ ಆಗದು. ಇನ್ನೊಬ್ಬರಿಗೆ ಹಾಡನ್ನ ಕೇಳ್ದೇ ಇದ್ರೆ ತಲೆನೋವು ಬರುತ್ತೆ. ಈ ಯಾರಿಗೂ ಕ್ರಿಕೆಟ್ಟೇ ಆಗಲೀ, ಹಾಡು ಕೇಳೋದೇ ಆಗಲಿ, ಅನ್ನ ಕೊಡುವ ಕೆಲಸಗಳಲ್ಲ. ಆದರೂ ಅವರವರ ಸಂತೋಷಕ್ಕೆ ಅವರವರು ಮಾಡುವುದಷ್ಟೇ. ಎಷ್ಟೋ ಬ್ಲಾಗರುಗಳ ತುಂಬಾ ಒಳ್ಳೇ ಬರಹಗಳನ್ನ ಓದಿದೀನಿ. ಅದರಲ್ಲಿ ಎಷ್ಟು ಜನಕ್ಕೆ ಬರವಣಿಗೆ ಅನ್ನ ಕೊಡ್ತಿದೆಯೋ ಇಲ್ಲವೋ ನಾ ಕಾಣೆ. ಆದರೆ ನಾನು ಓದಿದಾಗ, ನನಗಂತೂ ಖುಷಿ ಅಂತೂ ಆಗ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಛಂದ ಕವನದ ಚಂದ

   

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಛಂದಸ್ಸು