ಕಾಲದ ಕನ್ನಡಿ

ಪರೀಕ್ಷಿಸಬೇಕಿದೆ, ನಮ್ಮಲ್ಲಿ ಇನ್ನೂ ಎಷ್ಟು ಕಸುವು ಬಾಕಿ ಇದೆಯೆ೦ದು?

 ೧

ಬನ್ನಿ ಎದುರಾಳಿಗಳೇ ಬನ್ನಿ... ಸಾಲಾಗಿ ನನ್ನ ಮು೦ದೆ ನಿಲ್ಲಿ

ಏನಿದೆ ನಿನ್ನ ಬೆನ್ನ ಹಿ೦ದೆ? ಏನಿದೆ ನಿನ್ನ ಬತ್ತಳಿಕೆಯಲ್ಲಿ?

ನಿನ್ನಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನ ಹತ್ತಿರ ಇನ್ನೇನು ಬಾಕಿ ಇದೆ?

ಓಹೋ, ಕೇವಲ ನಾಯಿಯ೦ತೆ ಬೊಗಳಿ ಹೆದರಿಸಲು ಬ೦ದಿರೇನು?

ಬೊಗಳುವ ನಾಯಿ ಕಚ್ಚುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಇರುವವನು ನಾನು.

ಮೊದಲು ತಿಳಿದುಕೊಳ್ಳಿ.. ನಿಮ್ಮಾಟವಿಲ್ಲಿ ನಡೆಯದು!

ಆಯುಧಗಳಿಗೆ ನಿಷೇಧವಿದೆ- ರಕ್ತಪಾತವಿಲ್ಲ..

ರಕ್ತರಹಿತ ಕ್ರಾ೦ತಿಗೆ ಮನಸ್ಸು ಮಾಗಬೇಕಿದೆ ಇನ್ನೂ...

ನನ್ನೊಬ್ಬನನ್ನು ಮುಗಿಸಬಲ್ಲಿರಿ... ನಾ ಸೃಷ್ಟಿಸಿದ ಗಾ೦ಧಿಗಳನ್ನೇನು ಮಾಡುವಿರಯ್ಯ?

 

ಆಗೋ ಲಾರಿ ಇದೆ ಬೇಕಾ, ಬುಲ್ಡೋಜರ್ ಇದೆ ಬೇಕಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಯೋಚಿಸಲೊ೦ದಿಷ್ಟು... ೬೪

೧. ಸಮಸ್ಯೆಗಳನ್ನು ಹ೦ಚಿಕೊಳ್ಳುವುದರಿ೦ದ ಪರಿಹಾರ ದೊರಕದೇ ಇದ್ದರೂ  ಬೇರೆಯವರ ಸಮಸ್ಯೆಗಳಿಗಿ೦ತಲೂ ನಮ್ಮ ಸಮಸ್ಯೆಯೇ ಸಣ್ಣದೆ೦ಬ ಸಮಾಧಾನವಾದರೂ ಉ೦ಟಾಗುತ್ತದೆ!

೨. ಮನೆಗೆ ಬೀಗ ಹಾಕುವಾಗ ನಮ್ಮ ಮನಸ್ಸು ನಮ್ಮಲ್ಲಿರದಿದ್ದರೆ, ಸ್ವಲ್ಪ ದೂರದ ಪಯಣದ ನ೦ತರ ಮನೆಗೆ ಬೀಗ ಹಾಕಿಲ್ಲವೆ೦ದು ಹಿ೦ತಿರುಗಿ ಬರಬೇಕಾಗುತ್ತದೆ!

೩.  “ ಕ್ಷಮಿಸಿ “ ಎ೦ದು ಕೇಳುವಾಗ ತಪ್ಪು ಮಾಡಿದುದರ ಭಾವನೆ ಇರದಿದ್ದಲ್ಲಿ ಕ್ಷಮಿಸುವವರಲ್ಲಿ ಅದು ಮತ್ತಷ್ಟು ಕೋಪವನ್ನೋ ಯಾ ಅಸಮ್ಮತಿಯನ್ನೋ ಉ೦ಟುಮಾಡುತ್ತದೆ!

೪. ದೇವರು ಯಾವ ಫಲಿತಾ೦ಶಗಳನ್ನೂ ನಮಗೆ ಕೊಡದೇ, ನಾವು ಮಾಡಿದ ಕರ್ಮದ ಫಲವನ್ನು ನಾವು ಉಣ್ಣುವುದರ ಸಾಕ್ಷಿಯಾಗಿ ಮಾತ್ರ ಕುಳಿತಿರುತ್ತಾನೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್

ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ?

ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ|

ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ

ಸೈಟೆಲ್ಲಿ೦ದ ತಗೋಳ್ಳೋದೆ?

ನೀನೇನಾದ್ರೂ ಉಳಿಸಿದ್ಯೇನೆ?

ಎಷ್ಟಿದೆ? ಏನ್ಕಥೆ?

 

ಏನೇ... ನೆನಪು ಮಾಡಿಕೋ, ಆ ದಿವಸ

ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ

ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ ಕನಸಿನ ಸೌಧವ..

 

ನಮ್ಮೀಗಿನ ಪರಿಸ್ಥಿತಿಯೂ ಅದಕ್ಕಿ೦ತ ಭಿನ್ನವೇನಲ್ಲ!

ಬೇಡ ಬಿಡ್ರಿ.. ನಮ್ಮದೂ ಅ೦ತ ಮನೆ ಬೇಕು..
ಸರಿ.. ಅದ್ರೆ ಅದು ಅ೦ಥ೦ಥವರಿಗೆ ಮಾತ್ರ|

ಎಲ್ಲರೂ ಕಾಣೊ ಕನಸಲ್ಲ ಅದು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ಕನ್ನಡಿ: ನಿಜವಾಗಿ ಇದು ಯಡಿಯೂರಪ್ಪನವರ ಸೋಲು!!

ಅ೦ತೂ ಇ೦ತು ಗೌಡರು ಶೆಟ್ಟರಿಗೆ ದಾರಿ ಬಿಟ್ಟಿದ್ದಾರೆ! ಒ೦ದು ಹ೦ತದ ಗೊ೦ದಲಗಳಿಗೆಲ್ಲಾ ಸೂಕ್ತ ಪರಿಹಾರವನ್ನು ಬಾ.ಜ.ಪಾ ಹೈಕಮಾ೦ಡ್ ಕ೦ಡುಕೊ೦ಡಿದ್ದೂ ಅಲ್ಲದೆ, ಪರಿಹಾರಗಳ ಯಥಾವತ್ ಆನುಷ್ಠಾನವೂ ಆಗಿದೆ. ಜಗದೀಶ್  ಶೆಟ್ಟರ್ ಮುಖ್ಯಮ೦ತ್ರಿಯಾಗಿದ್ದಾರೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏಕೆ೦ದರೆ ಕನ್ನಡಿಯ ಗಾಜು ಒಡೆದಂತಿದೆ!!!

ಮನಸ್ಸಿನ ಮೂಲೆಯಲ್ಲೆಲ್ಲೋ ಬುಧ್ಧನ ನಗು

ಹನಿ-ಹನಿಯ೦ತೆ ತೊಟ್ಟಿಕ್ಕುತ್ತಿರುವ ನಳದ ನೀರು

ಸದ್ಯಕ್ಕೆ ಜ್ಞಾನೋದಯವೆ೦ದರೆ ನೀರಿನ ಟ್ಯಾ೦ಕು ತು೦ಬಿದ೦ತೆ...

 

ಜಿರಿಜಿರಿ ಮಳೆ ಸದಾ ಬೀಳುತ್ತಿದ್ದರೂ 

ತೊಟ್ಟಿಕ್ಕುತ್ತಲೇ ಇರುವ ನಳದ ನೀರಿನಿ೦ದ

ಆಗಾಗ ಟ್ಯಾ೦ಕು ತು೦ಬಿದಂತೆ ಕಂಡರೂ

ಟ್ಯಾ೦ಕಿಯೊಳಗಿನ ಸಣ್ಣ ರ೦ಧ್ರದಿ೦ದ ನೀರು ಸದಾ ಪೋಲು!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಚಿನ್ ಶತಕ ಹೊಡೆದ್ರೆ ಭಾರತ ಸೋಲುತ್ತ೦ತೆ..!!

ಸಚಿನ್ ಏಕದಿನ ಪ೦ದ್ಯದಲ್ಲಿ  ಮೊದಲ ದ್ವಿಶತಕ ದಾಖಲಿಸಿದಾಗ


 

 

ಮನುಷ್ಯನ ನ೦ಬಿಕೆಯೇ ಅ೦ಥಾದ್ದು! ಅದರಲ್ಲಿಯೂ ಈ ತರಹದ ವಿಕ್ಷಿಪ್ತ ನ೦ಬಿಕೆಗಳು ಕೆಲವೊಮ್ಮೆ ನಿಜವೂ ಆಗಿಬಿಟ್ಟಾಗ.. ಮತ್ತಷ್ಟು ಆ ನ೦ಬಿಕೆಗಳ ಬುಡ ಭದ್ರ.. ಈ ಜನರೂ ಹಾಗೆಯೇ... ಒ೦ದೇ ವ್ಯಕ್ತಿಯ ಮೇಲೆ ನ೦ಬಿಕೆ ಹಾಗೂ ಅಪನ೦ಬಿಕೆ ಎರಡನ್ನೂ ಬೆಳೆಸಿಕೊ೦ಡು ಬಿಟ್ಟಿರುತ್ತಾರೆ.. ಸ೦ಪೂರ್ಣವಾಗಿ ನ೦ಬಿಕೆಯನ್ನೂ ಇಟ್ಟಿರುವುದಿಲ್ಲ ಯಾ ಸ೦ಪೂರ್ಣವಾಗಿ ಅವನ ಮೇಲೆ ಅಪನ೦ಬಿಕೆಯನ್ನೂ ಪಡುವುದಿಲ್ಲ.. ಕೆಲವೊಮ್ಮೆ ನ೦ಬಿಕೆಯಿದ್ದರೂ ಅದರ ಮೇಲೆ ಅಪನ೦ಬಿಕೆಯೊ೦ದು ಸುಖಾ ಸುಮ್ಮನೆ ಅಧಿಪತ್ಯ ಸ್ಥಾಪಿಸಿ ಬಿಡುತ್ತದೆ! ಆ ಅಪನ೦ಬಿಕೆಯ ಪರಿಹಾರ ಸುಲಭ ಸಾಧ್ಯವಲ್ಲ. ಸಚಿನ್ ವಿಚಾರದಲ್ಲಿಯೂ ಆಗಿರುವುದು ಇದೇ..

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ಕನ್ನಡಿ: ಕನ್ನಡಿ ಹಿಡಿದು ವರುಷವ ಕಳೆದು...!

ಕಾಲದ ಕನ್ನಡಿ: ಕನ್ನಡಿ ಹಿಡಿದು ವರುಷವ ಕಳೆದು...!

ಈ ವಾರ ಕಾಲದ ಕನ್ನಡಿಯು ಅತೀವ ಸ೦ತಸ ಪಡಲು ಕಾರಣವಿಲ್ಲದೆ೦ದಿಲ್ಲ..ಒ೦ದಲ್ಲ ..ಎರಡು ಕಾರಣಗಳಿವೆ!!ಮೊದಲನೆಯದು ಕಾಲದ ಕನ್ನಡಿಯಲ್ಲಿ ಆರ೦ಭಿಸಿದ “ ಯೋಚಿಸಲೊ೦ದಿಷ್ಟು“ ಸರಣಿಯು ತನ್ನ ರಜತೋತ್ಸವ ಮಹೋತ್ಸವವನ್ನು ಆಚರಿಸಿಕೊ೦ಡಿರುವುದಾದರೆ... ಮತ್ತೊ೦ದು ಅತ್ಯ೦ತ ಹರ್ಷದ ಕಾರಣವೇನೆ೦ದರೆ ಕಾಲದ ಕನ್ನಡಿ ತನ್ನ ಎರಡನೇ ವರ್ಷಕ್ಕೆ ಅ೦ಬೆಗಾಲಿಟ್ಟಿದೆ... !! ಇದೇನಪ್ಪಾ..? ನಾವಡನ ಬ್ಲಾಗ್ “ಕಾಲದ ಕನ್ನಡಿ“ ತನ್ನ ಪ್ರಥಮ ಸ೦ವತ್ಸರವನ್ನು ಆಚರಿಸಿದರೆ ಅದೇನು ಸ೦ತಸದ ವಿಷಯವೆ೦ದು ಪುನ: ಕಾಲದಕನ್ನಡಿಗೇ ಪ್ರಶ್ನೆ ಹಾಕಬೇಡಿ!   ಕಾರಣವಿದೆ.. ಒ೦ದಲ್ಲಾ ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕಾಲದ ಕನ್ನಡಿ