ಕವನ‌

ಜೀವನ‌

ಕಾದುತಲಿ  ಕಲಿತನದಿ        ಕಾಡುತಲಿ ಹಗೆತನದಿ

ಹೊಗಳುತಲಿ  ಸಂತಸದಿ    ತೆಗಳುತಲಿ  ಕುತ್ಸಿತದಿ

ಅರಿಯುತಲಿ  ಉತ್ಸುಕದಿ     ಮರೆಯುತಲಿ  ಮೌಢ್ಯದೊಳು

ಅರಸುತಲಿ ತವಕದೊಳು    ದೂಡುತಲಿ ಬೇಸರದಿ

ಸಂತಸದಿ ನಗುನಗುತ‌      ದುಃಖದೊಳು ಅಳುವಿನಲಿ

ಕುಣಿಕುಣಿದು ಕುಪ್ಪಳಿಸಿ      ಕುಸಿಕುಸಿದು  ಉಮ್ಮಳಿಸಿ

ಬೀಗುತಲಿ ಎದೆಯುಬ್ಬಿ      ಬೊಬ್ಬಿಡುತ ಭೀತಿಯಲಿ

ವಿಜಯದಲಿ ಹೂಂಕರಿಸಿ    ಸೋಲಿನೊಳು ಕನಲುತಲಿ

ಜೀವನವ ಜಯಿಸುತಲಿ     ಅನುಭವದ ಸಿರಿತನದಿ

ಸಾರ್ಥಕತೆಯ ಸದಾಶಯವ ಕರುಣಿಸೆಯಾ ಸದಾಶಿವನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೆಜ್ಜೆ ಹಾಕುವ ಕೈ ಹಿಡಿದು...

ಕಳೆದು ಹೋಗಿದೆ  ಗೆಳೆಯ ,

ಬಚ್ಚಿಟ್ಟ ಹುಚ್ಚು ಹೃದಯವು 

ನೆನಪಿನಂಗಡಿಯ ಸಾಲಿನಲಿ 

ತುಮುಲದಲಿ ನಾನಲೆವಾಗ...

 

ನೀ ನನ್ನೆದುರು ಬಂದಾಗ 

ಎಲ್ಲೆ ಮೀರಿ ಉಲಿಯುತ್ತಿತ್ತು,

ಕಣ್ಣೆವೆಗಳು ಮುಚ್ಚಲಾರದೆ ಮುಚ್ಚಿದಾಗ,

ಜಾರಿ ಹೋಗಿದೆಯೇನೋ ಈ  ಹೃದಯ...

 

ಹೆಚ್ಚು ಹೇಳಲಿ ಏನು?

ಬಚ್ಚಿಟ್ಟುಕೊ ನಿನ್ನೊಳಗೆ.

ಕಾಣದ ಹೊಸಿಲೆಡೆಗೆ 

ಹೆಜ್ಜೆ ಹಾಕುವ ಕೈ ಹಿಡಿದು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಪ್ಪಿಗೆಯ ನಗು ಬೀರಿ...

ಬರಬೇಡ ಗೆಳೆಯ

ನೀ ನನ್ನ ಸನಿಹ,

ನಾ ಕಳೆದುಹೋಗುವೆ ನಿನ್ನೊಳಗೆ...

ಮತ್ತೆ ಸಿಗಲಾರದಂತೆ;

 

ಹುಚ್ಚು ಮನವೀಗ

ಗೆಜ್ಜೆ ಕಟ್ಟಿದೆ ನೋಡು;

ಎದೆಯ ತುಂಬೆಲ್ಲ ಕುಣಿಯುತಿದೆ

ನನಗೆ ಹೇಳದಂತೆ...

 

ನನ್ನ ಮನಕೀಗ ನನ್ನ ಮೇಲೆ ಮುನಿಸು...

ನಿನ್ನ ನಾ ನೂಡಲಿಲ್ಲವೆಂದು

ಹಾರಿ ಹೋಗಿದೆ ನಭಕೆ,

ಕನಸ ರೆಕ್ಕೆಯನೇರಿ.

 

ಕನಸ ತೂರಣವ ಕಟ್ಟಿ

ಕಾಯುತಿರುವೆ ಗೆಳೆಯ

ಬಂದುಬಿಡು ನನ್ನೆದೆಗೆ

ಒಪ್ಪಿಗೆಯ ನಗು ಬೀರಿ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪಂಚ್ಲೈನ್ 'ಪಂಚೆ' ಸಿದ್ರಾಮಣ್ಣ..

ಇತ್ತೀಚೆಗೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಚೀನಾದ ದಾಲಿಯನ್ನಿಗೆ ಹೋಗಿ ಬಂದಿದ್ದೆ ಮಾಧ್ಯಮದಲೆಲ್ಲ ಸುದ್ಧಿ. ಅದರಲ್ಲು ಬಂದ ಮೇಲಿನ ಪತ್ರಿಕಾಗೋಷ್ಠಿ , ಪಂಚೆ ಕಥೆ, 'ಚೀನಾ ನಾಟಿ ಚಿಕನ್' ಕಥೆ, ಬುಲೆಟ್ ಟ್ರೈನು , ದಾಲಿಯನ್ ರಸ್ತೆ, ನಗರಗಳನ್ನು ಕಂಡ ವಿಸ್ಮಯ - ಇತ್ಯಾದಿ ತುಣುಕುಗಳನ್ನು ಓದುತ್ತಿದ್ದ ಹಾಗೆ ಇತರ ಕೆಲವು ಮಂತ್ರಿಗಳಂತೆ ಬರಿ ಟ್ರಿಪ್ಪು ಹೊಡೆದು 'ಅದು ಫಾರಿನ್ನೂ' ಎಂದು ಆರಾಮ ನಿದ್ರಿಸುವ ಜನರ ಮಧ್ಯೆ, ಸಿದ್ರಾಮಯ್ಯನವರು ಬಹುಶಃ ಅಷ್ಟಿಷ್ಟಾದರೂ ಕಾರ್ಯಗತ ಮಾಡುವ ಮಾತಾದರೂ ಆಡುತ್ತಿದ್ದಾರಲ್ಲ ಅನಿಸಿತು. ಆ ಮಾತುಗಳೆಲ್ಲ ನಿಜವಾಗಿಯೂ ಕಾರ್ಯರೂಪಕ್ಕೆ ಬರಲಿ, ಅಡ್ಡಿಗಳಾವುದು ಭಾಧಿಸದಿರಲಿ, ಹೀಗಾದರೂ ಸರಿ ನಾಡು ಪ್ರಗತಿಯತ್ತ ಸಾಗಲಿ ಎಂಬ ಅನಿಸಿಕೆಯೊಡನೆ ಬರೆದ ಸಾಲುಗಳಿವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಿರುಕನ ಕನಸು

 

ಬರೆಯಲೆಂದು ಕುಳಿತೆ ಕವಿತೆಯೊಂದನು,

ಖಾಲಿ ಖಾಲಿ ತಲೆಯೆಲ್ಲ ಮಾಡಲೇನು ನಾನು?

ಓಡದು ಪೆನ್ನು ಸರಾಗವಾಗಿ ತಾನು,

ನೀ ಹೇಳು ಗೆಳೆಯಾ ಇದರಲ್ಲಿ ನನ್ನ ತಪ್ಪೇನು?

 

ಪ್ರಕೃತಿಯ ಕುರಿತು ಬರೆಯೋಣವೆಂದು

ಅಂತೆಣಿಸಿದ ನಾನು ಕಂಡೆ ಕನಸೊಂದು,

ಕನಸಲ್ಲೇ ರಚಿಸಿದೆನು ನೂರಾರು ಕವನವನು

ಕ್ಷಣದಲ್ಲೇ ಗಳಿಸಿದೆನು ಬಹು ಜನಪ್ರಿಯತೆಯನು!

 

ಹೊಗಳುತಿಹರು ಪ್ರತಿಷ್ಠಿತರು, ಸಭಾಸದರೆನ್ನ ಕುರಿತು,

ಕೇಳುತಿಹೆನು ಹೆಮ್ಮೆಯಲಿ ವೇದಿಕೆಯಲಿ ಕುಳಿತು!

ಹಾಕಿದರೊಂದು ಶ್ರೀಗಂಧದ ಹಾರ ಕೊರಳಿಗೆ,

ನೀಡಿದರು ಸುಂದರ ಬೊಕೆಯೊಂದ ಕೈಗೆ!

 

ಬಂದಿಹರು ನೂರಾರು ಜನ ಸಮಾರಂಭಕೆ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊರಹೊಮ್ಮಬಾರದೇ !? ಕವಿತಾರ್ಥ!

ತಪವನಾಚರಿಸಿದಳು ಪದಪ್ರಕೃತಿ ಅರ್ಥಸಂಸರ್ಗಕೆ... ಸುಸಂಸ್ಕೃತವಸ್ತ್ರಧಾರಿಣಿಯಾಗಿ... ತತ್ಪುರುಷನ ಸುಳಿವಿಲ್ಲ. *** ವಿವಸ್ತ್ರಳಾದಳು, ಪುರುಷತ್ವ ಕೆರಳಿಸಲು....ವ್ಯರ್ಥರಸವೂ ಸ್ರವಿಸಲಿಲ್ಲ. *** ಅಸಮವಸ್ತ್ರ ಧರಿಸಿದಳು, ಮೈಸೊಬಗು ಕಾಣುವಂತೆ ! ಕಾಣದಂತೆ....! ಅನಿಸಿತು ಅರ್ಥ ಬಂದಂತೆ...ಬರಲಿಲ್ಲ... ಸಾರ್ಥಕವಾಗಲಿಲ್ಲ. **** ಅದೆಂಥ ಅರ್ಥಪುರುಷ...! ಅದೆಂಥ ಪುರುಷಾರ್ಥ....! ರಸಸ್ರವಿಸಿ ಮನ ತಣಿಸಬಾರದೇ !? ಪದಪ್ರಕೃತಿ ಮೈದುಂಬುವಂತೆ. ನವಮಾಸ ತುಂಬುವಂತೆ. ಕವಿತಾರ್ಥ ಹೊರಹೊಮ್ಮುವಂತೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು

ಮಗುವ ನಗುವೇ ಜಗನಗುವು ಮಗುವ ಮೊಗವೇ ಜಗಮೊಗವು | ಮಗುವ ನಗುವೇ ಶಿವನಗುವು ಮಗುವ ಮೊಗವೇ ಶಿವಮೊಗವು || ಮಗುವ ಅಳಲೇ ಮಧುವಳಲು ಮಗುವ ಅಳಲೇ ಜಗದಳಲು | ಶಿವನ ಅಳಲೇ ಮಗುವಳಲು ಮಗುವ ಅಳಲೇ ಶಿವನಳಲು || ನಗುವ ಮೊಗದಲೆ ಆ ಜಗವು ಮಗುವ ಮೊಗದಲೇ ಆ ಶಿವವು ||
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತುಡಿವ ಮನಕೆ ಜೀವನವೇ ನಿಬ್ಬೆರಗು....!!!

 

               ಜಾಣನಿಗೆ ಕಲಿಕೆಯ ಮೆರಗು 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಳೆ ವಾಸನೆ ಮತ್ತು ಟಾರ್ ರೋಡು

ಎಸಿ ರೂಮಿನ ಹೊರಗೆ
ಮಳೆ ಹನಿ ಬಿದ್ದಾಗ ಎ೦ಥದೋ ನೆನಪು,
ಕವಿತೆಗೆ ನೆನಪೇ ವಸ್ತು ಮತ್ತು ಒನಪು.
ಆಳವಾದ ಉಸಿರ ಒಳಗೆ
ಮಳೆ ವಾಸನೆ ಹೋಗಲೊಲ್ಲದು.
ಅದೇ ಜುಯ್ಗುಡುವ ಎಸಿ ಸದ್ದಿಗೆ
ಕಿವಿಯಾಗಿ ಕೂತು ಹನಿಗಣ್ಣಾಗುತ್ತೇನೆ,
ಹೊರಗೆ ಹನಿ ಹೆಚ್ಚಾದ೦ತೆ
... ನವಿರ್ಗ೦ಪಿಗೆ ಮೂಗು ತಾನೇ ಅರಳಿ
ಸಿಗದ ವಾಸನೆಗೆ
ಥೂ! ಎ೦ದುಗುಳುತ್ತದೆ.
ಹೊರ ಬ೦ದವನಿಗೆ
ಕಾದ ರೋಡಿನ ಮೇಲೆ
ಬಿದ್ದ ಹನಿ ವಾಸನೆ ಬೀರಿ ಕಾಡುತ್ತದೆ.

ಕಾದ ರೋಡಿನ ಮೇಲೆ
ಬಿದ್ದ ಹನಿಯ ಶೋಕಗೀತೆ
ಕೇಳಿಸಿತೇ?
ಒಲ್ಲದೆ ಬಿದ್ದ ಹನಿ
ಕೆ೦ಡಕ್ಕಾಹುತಿ ಆತ್ಮಾಹುತಿ
ನೆಲವಾದರೂ ಸಿಗಬಾರದೇ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೊ೦ಬೆ ಮದುವೆ...

ಹೂ ಮುಡಿಸಿ, ಬಳೆ ಇಡಿಸಿ,
ಜರಿಸೀರೆಯುಡಿಸಿ,
ಇದ್ದ ಹೆಣ್ಣು ಗೊ೦ಬೆಗಳಿಗೆಲ್ಲ
ಒಪ್ಪವಾಗಿ ಸಿ೦ಗರಿಸಿ,
ಯೋಗ್ಯ ಗ೦ಡು ಗೊ೦ಬೆಗಳ ಹುಡುಕಿ,
ಜೋಡಿ ಮಾಡಿ,
ಅಕ್ಷತೆಯೆರೆದಾಗ,
ಈ ಗ೦ಡು ಗೊ೦ಬೆಯ ಹಗಲು ರಾತ್ರಿಗಳು
ಲೆಕ್ಕವಿಲ್ಲದ೦ತೆ ಕಳೆದು ಹೋದವು...


 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಜೀವನ ನನ್ನದು...


ನನ್ನ ಜೀವನವೆ೦ದರೇ...,

ಎಲ್ಲರ೦ತಯೇ ಉಬ್ಬು ತಗ್ಗುಗಳಿರುವ ದಾರಿ...

ನನ್ನ ಜೀವನ ನನ್ನದೇ,

ಸಾಗುವುದೆಲ್ಲಿಗೊ ಸವಾರಿ...?


 

ಕೆಲವೇ ಕೆಲ ಕಣ್ಗಳೊಳಗೆ

ಒಲವ ಕ೦ಡು ಹರಿವುದು ಜೀವನ...

ಗಟ್ಟಿಯಾಗುವುದೇ ಬ೦ಧನ...?

ಸುಟ್ಟು ಹೋಗುವುದೇ ವೇದನ...?


 

ಬಾಳ ಗುರಿಯೆಡೆಗಿನ ನಡುಗೆಯಲ್ಲಿ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೀಗೊ೦ದಿಷ್ಟು ಆಶಯಗಳು...

ಹೊಸ ಮರ್ಸಿಡೀಸ್ ನ ಗಾಲಿಗಳಿಗೆ
ತಗ್ಗು ದಿಣ್ಣೆಗಳ ದಾರಿ ಸಿಗದೇ ಇರಲಿ...
ಅಕ್ಕ ಪಕ್ಕದ ಗಾಡಿಗಳ ನಡುವೆ ಸುರಕ್ಷಿತ ಅ೦ತರವಿರಲಿ,
ಮೈಗೆ ಡೆ೦ಟು, ಸ್ಕ್ರ್ಯಾಚು ಆಗದ೦ತಿರಲಿ...

 

ಕೂಗಿ, ರೋಗಿಯ ಕೊ೦ಡೊಯ್ಯುವ ಆ೦ಬುಲನ್ಸ್ ಗೆ
ಟ್ರಾಫಿಕ್ ಜಾಮ್ ಅಡತಡೆಯಾಗದಿರಲಿ...
ಖಾಲಿ ಸಾಗುವ ಆ೦ಬುಲನ್ಸ್ ಕೂಗದಿರಲಿ,
ರಸ್ತೆಯಲ್ಲಿ ಇತರರಿಗೆ ಸಮಸ್ಯೆಯಾಗದಿರಲಿ...

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾವ್ಯಧಾರೆ

  ಕಾವ್ಯಧಾರೆ 
 
  ಒಮ್ಮೆ ಎಚ್ಚೆತ್ತು ಹುಡುಕಲಾರಂಭಿಸಿದೆ ನನ್ನೊಳಗಿನ ಕವಿಯ
  ಒಳಗಿನ ಸೃಜನತೆಯ ಬಳಸಿ ನೀಡುತ್ತಿದ್ದ ಭಾಷೆಯ ಸವಿಯ
 
  ಆ ಸವಿ ರುಚಿಯ ಅನುಭವಿಸುವ ಚಪಲ ಮತ್ತೆ ಶುರುವಾಗಿದೆ
  ಅನುಭವದ ಮಾಧುರ್ಯವ ಮೆಲ್ಲುವ ಆಸೆ ಗರಿಗೆದರಿದೆ
 
  ಮನದೊಡಲಿನ ಲೋಕಕೆ ಬೆಳೆಸುವೆ ನನ್ನ ಪಯಣವ
  ಹಲವು ಅನುಭವಗಳೊಂದಿಗೆ ನಾ ಪಡೆವೆ ಮುದವ
 
  ನನ್ನೊಳಗಿನ ಮಾಧುರ್ಯವೇ ಮಾತಾಗಿ ಉಲಿಯಲಿ
  ಅನುಭವದ ಸವಿಯನು ಭಾಷೆಯ ರೂಪದಲಿ ಹರಡಲಿ
 
  ಕಾವ್ಯದ ಮಾಧುರ್ಯವೇ ನಿನ್ನ ಅಭಿಮಾನಿ ನಾನು
  ನಿನ್ನ ಕಂಪನು ಪಸರಿಸಿ ಮನವ ತಿಳಿಗೊಳುಸುವೆನು
 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀನು ನಾನು

 

ಹೇಳೋದು ಏನಿಲ್ಲ,

ತಿಳಕೊ೦ಡಿ ನೀ ಎಲ್ಲ,

ನಾ ತಳ ಕಾಣೋ ತಿಳಿ ನೀರಿನ ಕೊಳ...

ನನಗ ನೀ ಹೇಳಬೇಕ೦ತಿಲ್ಲ,

ನನಗ ನೀ ಗೊತ್ತೆಲ್ಲ,

ನೀ ನನ್ನ ಸುತ್ತ ನಿ೦ತಕೊ೦ಡ ಗಟ್ಟಿ ನೆಲ...

 

ನಾ ಮಾತಾಡಿದಾಗೆಲ್ಲ,

ತೆರಿ ತೆರಿಗಳು ಎದ್ದಾವು,

ಸುಳಿದಾವು ನೀ ಎ೦ಬೋ ದಡದ ಕಡೆಗೆ...

ಇಟ್ಟುಕೋ ಬೇಕಾದರ,

ಬಿಟ್ಟುಕೋ ಬಿಟ್ಟರ,

ನಿ೦ತದ ಭಾವ, ಮಾತು ಮರೆಗೆ...

 

ದಡದ ಪಚ್ಚ ಹಸಿರ,

ಸುಳಿದ ಮರ ನೆರಳ,

ನೀನಾಗಿ ಸುತ್ತಲ ಆವರಿಸಿ...

ತೂಗುತ್ತ ಬಳಕುತ್ತ,

ನೀ ಬಗ್ಗಿ ನೋಡ ಒಳಗ,

ನಿನ್ನನ್ನ ತೋರೇನು ನನ್ನ ಅರಸಿ...

 

ಕೊಳದಿ೦ದಲೇ ದಡ,

ದಡವಿದ್ದದ್ದಕ್ಕ ಕೊಳ,

ಹೊಳೆವ ಕನ್ನಡಿ ಹಾ೦ಗ ಈ ಕಾಡಿನ್ಯಾಗ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕವನ‌