ಎರಡು ಸಾಲುಗಳು

ಕಿಟಕಿ ಹಾಕಿದರೆ ಕರೆ೦ಟಿಲ್ಲ..!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಎರಡು ಸಾಲುಗಳು - ೫

ಒಂದು ದಿನ ಎಲ್ಲರನ್ನೂ ಗೆದ್ದು ನಿಲ್ಲುತ್ತೇನೆ
ಆಗ ಬಳಿ ಯಾರೂ ಇರಲ್ಲ, ಗೊತ್ತು. ಈಗಲೂ ಯಾರೂ ಇಲ್ಲ

ಅವರವರು ಹೇಳಿದ್ದೆ ಸತ್ಯ, ಎಲ್ಲರೂ ಹೇಳಿದ್ದು
ಸಾರ್ವಕಾಲಿಕ ಸತ್ಯ. ಆದರೆ ಅದು ಸತ್ಯವಾಗಬೇಕಿಲ್ಲ

ನಿನ್ನ ಮೇಲೆ ಕವನ ಬರೆದೂ ಬರೆದೂ ಇಂದು
ಈ ಭಣಗುಟ್ಟುವ ಕವಿತೆಗಳ ಮಧ್ಯೆ ಕಳೆದು ಹೋದವ, ನಾನು!

ಕೆಲವೊಮ್ಮೆ ಪ್ರೀತಿ ಎಂದರೆ ಪ್ರೀತಿ ಕೊಡುವುದು ಮಾತ್ರ
ಎಳ್ಳಷ್ಟು ಪ್ರೀತಿಯ ನಿರೀಕ್ಷಿಸುವುದಲ್ಲ

ಸಾವಿರ ಜನರನ್ನು ಕೊಂದವ ಕೊನೆಗೂ
ಹೇಳಿದ್ದು, ನನಗೆ ನೆನಪಿಲ್ಲ

ಮನುಷ್ಯ ತಪ್ಪು ಮಾಡುತ್ತಾನೆ ನಿಜ
ಆದರೆ ಅರುವತ್ತು ವರ್ಷಗಳಲ್ಲ

ನಿನ್ನ ಮೇಲೆ ಪ್ರೀತಿಯ ಹಾಲಿನ ಧಾರೆಯೆರೆದೆ
ಒಂದು ಹನಿ ಹುಳಿ ಎಲ್ಲವನ್ನು ಕದಡಿತೇಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎರಡು ಸಾಲುಗಳು - 3

ಅವಳು ಖುಷಿಯಾಗಿರಬೇಕು ಎಂದು ಅಸೆ ಪಟ್ಟವನಿಗೆ
ಬೇರೆಯವನ ಜೊತೆ ಅವಳು ಖುಷಿಯಾಗಿರುವುದು ಇಷ್ಟವಾಗಲಿಲ್ಲ.

ಎಲ್ಲರೂ ಅವರವರ ಮಟ್ಟಿಗೆ ಸರಿ;
ಅದ್ದರಿಂದ ಸತ್ಯದ ವ್ಯಾಖ್ಯಾನವೇ 'ಅರ್ಧ ಸತ್ಯ'

ನುಚ್ಚುನೂರಾಗಿದ್ದೇನೆ, ನನ್ನ ಮುಖದ ಹೊಸ
ಅನಾವರಣ ಸಾಧ್ಯ ಎಂಬ ನಂಬಿಕೆ ಗರಿಗೆದರಿದೆ

ಒಂದು ರಾತ್ರಿ ಸತ್ಯದ ಹೊಸ ದೃಷ್ಟಿ ಪಡೆದವ
ಕೇವಲ ಮನುಷ್ಯನಾಗಿ ಉಳಿಯಲಿಲ್ಲ.

ಅವನಿಗೆ ಧರ್ಮ ಅರ್ಥವಾದ ದಿನ ಬರಿಗಾಲಲ್ಲಿ ನಡೆದ
ಸ್ವಾಮಿಯಾಗಿದ್ದವ ಸನ್ಯಾಸಿಯಾದ

ಎಲ್ಲರಿಗೆ ಉತ್ತರ ಕೊಡುವ ಅಗತ್ಯ ನಿನಗಿಲ್ಲ
ನಿನಗೆ ನೀನು ಪ್ರಶ್ನೆಯಾಗದಿದ್ದರೆ ಸಾಕು

ಜಡಿ ಮಳೆಯಲ್ಲಿ ಅವಳು ಇವನ ಮನೆ ಬಾಗಿಲು
ತಟ್ಟಿದ್ದು ಅವನಿಗೆ ಕೇಳಿಸಲೇ ಇಲ್ಲ

ನೀನೆಂದಿಗೂ ಸಾಗರದಂತೆ ಗೆಳತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಎರಡು ಸಾಲುಗಳು