ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ಪ್ರವಾಸ ಕಥನ )....

5

 ಎಲ್ಲದಕ್ಕೂ ಕಾಲ ಕೂಡಿ ಬರಬೇಕು...!!
 
ಇದು ನಾವ್ ಅವಾಗವಾಗ ಹೇಳಿಕೊಳ್ಳುವ-ಹೇಳುವ ಮಾತು..
ಕೆಲ ತಿಂಗಳ ಹಿಂದೆ ಸಂಪದದಲ್ಲಿ 'ಅಪ್ರಮೇಯ ದೇವಸ್ಥಾನದ' ಬಗ್ಗೆ ವಿಸ್ತೃತ ಮಾಹಿತಿ-ಚಿತ್ರ ಬರಹ  ಪ್ರಕಟವಾಗಿತ್ತು..

ಅಪ್ರಮೇಯ ಸ್ವಾಮಿ ದೇವಸ್ಥಾನ

 

ಅಪ್ರಮೇಯ ಸ್ವಾಮಿಯ ಜಾತ್ರೆಯು  ಮೇ ೦೩ ರಂದು  ಇದ್ದಿದ್ದರೂ ಮತ್ತು ಅದು ನನಗೆ ಗೊತ್ತ್ತಿದ್ದರೂ  ಜಾತ್ರೆಗೆ ನನ್ನ ಪರೀಕ್ಷಾ ನಿಮಿತ್ಯ ಹೋಗಲು ಆಗಿರಲಿಲ್ಲ, ಆದರೆ ಇವತ್ತು ಬೆಳಗ್ಗೆ 'ಧಿಡೀರನೆ'  ಬೇರೆ ಒಂದು ಕೆಲಸದ ಮೇಲೆ  ಚನ್ನಪಟ್ಟಣಕ್ಕೆ ಹೋಗುವ ಪ್ರಸಂಗ ಬಂತು..

ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ  ಮೈಸೂರಿಗೆ ಹೋಗುವ ರೈಲಿನಲ್ಲಿ (ಪ್ಯಾಸೆಂಜರ್) ಪ್ರಯಾಣಿಸಲು ತಲಾ ಹತ್ತು ರುಪಯೀ ಪಾವತಿಸಿ  ಟಿಕೆಟ್ ಪಡೆದು ನಮ್ಮ ಚನ್ನ ಪಟ್ಟಣಕ್ಕೆ ಪ್ರವಾಸ ಆರಂಭಿಸಿದೆವು.. ಬೆಂಗಳೂರಿಂದ ಸುಮಾರು ೬೦ ಕಿಲೋ ಮೀಟರ್ ದೂರದಲ್ಲಿರುವ ಈ ಚನ್ನಪಟ್ಟಣಕ್ಕೆ  ಹೋಗುವಾಗ ದಾರಿಯಲ್ಲಿ ಬೆಂಗಳೂರು ಸಿಟಿ ದಾಟುವವರೆಗೆ  ಏನೂ ವಿಶೇಷತೆಯಿಲ್ಲ, ಆದರೆ ಬಿಡದಿ-ರಾಮನಗರ  ಚನ್ನಪಟ್ಟಣ ದಾರಿಯಲ್ಲಿ  ಸುತ್ತ ಮುತ್ತಲಿನ 'ಹಸಿರು' ಪರಿಸರ  ಮನ ಆಹ್ಲಾದಕರಗೊಳಿಸುತ್ತದೆ..

೪೦ ನಿಮಿಷಗಳಲ್ಲೇ ಚನ್ನಪಟ್ಟಣ ಮುಟ್ಟಿ ಅಲ್ಲಿಯ ರೈಲು ನಿಲ್ದಾಣದಿಂದ ಆಚೆ ಬಂದ ಕೂಡಲೇ  ಎದುರಿಗೆ ಚಿಕ್ಕ ಬೋರ್ಡ್- 'ಅಪ್ರಮೇಯ ದೇವಸ್ಥಾನಕ್ಕೆ ಮತ್ತು ಅಂಜನೇಯ ದೇವಸ್ಥಾನಕ್ಕೆ  ೩ ಕಿಲೋ ಮೀಟರ್' ..
ರೈಲಿನಲ್ಲಿ ಬರುವಾಗಲೇ  ಸಹ ಪ್ರಯಾಣಿಕರಲ್ಲಿ  ಬಸ್ ಸ್ಟಾಂಡ್  ಹತ್ತಿರವೋ ದೂರವೋ? ಎಂದಾಗ ನಡೆದೇ ಹೋಗಬಹುದು  ಎಂದಿದ್ದು ಕೇಳಿ, ನಡೆದುಕೊಂಡು  ಹತ್ತೇ ನಿಮಿಷದಲ್ಲಿ  ಚನ್ನ ಪಟ್ಟಣ ಬಸ್ ಸ್ಟ್ಯಾಂಡ್ ತಲುಪಿದೆವು....

ಅಲ್ಲಿ ನಮ್ಮ ವಯುಕ್ತಿಕ ಕೆಲಸವೊಂದನ್ನು ಮುಗಿಸಿಕೊಂಡು, ಆಟೋದವರಲ್ಲಿ ಅಪ್ರಮೇಯ ದೇವಸ್ಥಾನಕ್ಕೆ  ಬರಲು ಎಷ್ಟು ಕೊಡಬೇಕು ಎಂದಾಗ , ತಲಾ ೨೦ ರುಪಯೀ ಕೊಡಿ ಎಂದರು, ೪೦ ರುಪಾಯೀ ಕೊಟ್ಟು  ಹತ್ತೇ ನಿಮಿಷದಲ್ಲಿ  ಬೆಂಗಳೂರು  ಮೈಸೂರು ಹೆದ್ದಾರಿಯಲ್ಲಿ ಇರುವ 'ದೊಡ್ಡ ಮಳೂರು'  ಎಂಬಲ್ಲಿ ಶ್ರೀ 'ರಾಮಾ ಅಪ್ರಮೇಯ ಸ್ವಾಮಿಯ'  ದೇವಸ್ಥಾನದ  ಸ್ವಾಗತ ಕಮಾನಿನ ಹತ್ತಿರ ಇಳಿದೆವು..
 
 
 
 
 

ದೇವಸ್ಥಾನವನ್ನು ನಾವ್ ಪ್ರವೇಶಿಸಿದಾಗ ಸಮಯ   ಮಧ್ಯಾಹ್ನ ೧೨:೩೫ , ದೇವಸ್ಥಾನ ಪ್ರವೇಶಿಸುವಲ್ಲಿ  ಹೊರಗಡೆ ಬೋರ್ಡ್ ನೋಡಿದಾಗ ಅಲ್ಲಿ 
 
 
 
ದರ್ಶನ  ಸಮಯ  ಬೆಳಗ್ಗೆ ೦೭:೩೦ ಇಂದ ಮಧ್ಯಾಹ್ನ ೧೨:೩೦ ವರೆಗೆ
ಆಮೇಲೆ ಸಂಜೆ ೦೪ ರಿಂದ ರಾತ್ರಿ ೦೮:೩೦ ವರೆಗೆ (ವಾರದ ದಿನಗಳಲ್ಲಿ )

ವಾರಾಂತ್ಯ(ಶನಿವಾರ-ಭಾನುವಾರ-ಮತ್ತು ಸರಕಾರೀ ರಜಾ ದಿನಗಳಲ್ಲಿ)
  ಬೆಳಗ್ಗೆ ೦೭ ರಿಂದ ಮಧ್ಯಾಹ್ನ ೦೧ ಘಂಟೆವರೆಗೆ
ಸಂಜೆ ೦೪ ರಿಂದ ರಾತ್ರಿ ೦೮:೩೦ ವರೆಗೆ ದರ್ಶನ ಲಭ್ಯ ಎಂದು ಇತ್ತು..

ಆಗಲೇ ಸಮಯವಾಗುತ್ತಿದ್ದುದರಿಂದ  ತರಾತುರಿಯಲ್ಲಿ ದೇವಸ್ಥಾನವನ್ನ ಯಾವುದೇ ಹೂವು ಹಣ್ಣು ಕಾಯಿ ಇಲ್ಲದೆ ಪ್ರವೇಶಿಸಿ..!!
 
 
 
 
ಅಪ್ರಮೇಯ ಸ್ವಾಮಿಗೆ ನಮಿಸಿ, ಅರ್ಚಕರು ಕೊಟ್ಟ ಆರತಿಗೆ ನಮಿಸಿ ,ಕಾಣಿಕೆ ಹಾಕಿ, ಅರ್ಚಕರಿಗೆ  ಅಪ್ರಮೇಯ ಸ್ವಾಮಿಯ ಫೋಟೋ ತೆಗೆಯಬಹುದೇ? ಎಂದು  ಕೇಳಿದಾಗ, ಅವರು ಫೋಟೋ ತೆಗೆಯುವುದು ಬೇಡ ಎಂದರು..:(

ಅಪ್ರಮೇಯ ಸ್ವಾಮಿಯ ಫೋಟೋ ತೆಗೆಯಲು ಅನುಮತಿ ಸಿಗದ ಕಾರಣ ,ಆ ಫೋಟೋ ಹಾಕಲು ಆಗಲಿಲ್ಲ..
 
 ಆ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..

ಲೇಖಕಿ : ಪವಿತ್ರ -
 
ಹೀಗಾಗಿ ಒಳಗಡೆ ಯಾವುದೇ ಫೋಟೋ ತೆಗೆಯದೆ  ಬರೀ ಕಣ್ಣುಗಳಲ್ಲೇ ದೇವಸ್ಥಾನದ ಒಳಗಿನ ಕಲ್ಲು ಕಂಬ ಅವುಗಳ ಕೆತ್ತನೆ ಇತ್ಯಾದಿ ನೋಡಿದೆ.. ದೇವಸ್ಥಾನ ಒಳಗಡೆ ವಿಶಾಲವಾಗಿದೆ, (ಇಸ್ಟೇ ವಿಶಾಲವಾದ ಇನ್ನೊಂದು ದೇವಸ್ಥಾನವನ್ನ   ನಾ ನೋಡಿದ್ದು ನಂಜನಗೂಡಿನಲ್ಲಿ -ಅದು ಶ್ರೀ ಕಂಥೆಶ್ವರ ಸ್ವಾಮೀ ದೇವಸ್ಥಾನ.. ) ಹೊರಗಡೆ ಬಂದು  ಅಲ್ಲಿಯ ಕೆಲವು ಫೋಟೋಗಳನ್ನು  ತೆಗೆದೇ..
 
 
 
 
 
 
ಹಾಗೆಯೇ ಸುತ್ತ ಮುತ್ತ ನೋಡುವಾಗ, ಕರ್ನಾಟಕ ಸರಕಾರ ಈ ದೇವಸ್ಥಾನವನ್ನು  ಸಂರಕ್ಷಿಸಲ್ಪಟ್ಟ  ಪ್ರಾಚೀನ ಸ್ಥಳ ವಸ್ತು ಎಂದು ಘೋಷಣೆ ಮಾಡಿ ಆ ಬಗ್ಗೆ ಹಾಕಿದ ಬೋರ್ಡ್ ಕಾಣಿಸಿತು..

 ದೇವಸ್ಥಾನದ ಹೊರಗಡೆ ಅಪ್ರಮೇಯನ  'ಅಂಬೆಗಾಲು'  ಚಿಕ್ಕ ವಿಗ್ರಹ ಖರೀದಿಸಿದೆ..
 
 
 
ಮೊನ್ನೆ ತಾನೇ ಮುಗಿದಿದ್ದ ಜಾತ್ರೆ(ಮೇ ೦೩-೨೦೧೨)ಯ  ಕಾರಣವಾಗಿ ಅಲ್ಲಿ  ನಿಲ್ಲಿಸಿದ್ದ ರಥ ವರ್ಣಮಯವಾಗಿ ಮಿನುಗುತ್ತಿತ್ತು..
 
 
 
ನಮ್ ಕಡೆ(ಉತ್ತರ ಕರ್ನಾಟಕ) ಬರೀ ತೇರುಗಳನ್ನೇ ಜಾತ್ರೆಯ ಸಮಯದಲ್ಲಿ  ಕಾಣುತ್ತಿದ್ದ ನಮಗೆ ಈ   ಭವ್ಯ-ಎತ್ತರವಾದ  ರಥವನ್ನು ನೋಡಿ ಅಚ್ಚರಿ ಆಯ್ತು..

ಕ್ರಿಷ್ಣನ್ನು ಮಾತ್ರ ನೋಡಿಕೊಂಡು ಹಾಗೆ ಬಂದರೆ ಅಲ್ಲೇ ಪಕ್ಕದಲ್ಲಿ ಇರುವ ಅಂಜನೇಯ ಸುಮ್ಮನೆ ಇದ್ದಾನೆಯೇ?...:())
 
 
 
 
 
 
ಹೀಗಾಗಿ ಪಕ್ಕದಲ್ಲೇ ಇರುವ  ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿಯ ಸನ್ನಿಧಿಗೆ ಹೋಗಿ ನಮಿಸಿ, ಬಾಗಿಲನ್ನು ಹಾಕಿದ್ದರಿಂದ ಆ ಬಾಗಿಲ ಮೂಲಕವೇ ನಮ್ಮ ಕ್ಯಾಮೆರ ಮೊಬೈಲು  ಇರಿಸಿ ಒಂದು ಫೋಟೋ ತೆಗೆದದ್ದು ಆಯ್ತು..
 
ಇಲ್ಲಿರುವ ಅಂಜನೇಯ  ಮಾಮೂಲಿ ಅಂಜನೆಯಗಿಂತ ಭಿನ್ನ...
ಹೇಗೆ ಅಂದಿರಾ?
ಆಂಜನೇಯನ ಕಣ್ಣು ಧೃಸ್ಟಿ  ಭಲೇ ಭಯಂಕರವಾಗಿತ್ತು..
ಅದ್ಕೆ ಏನೋ 
ಮುಖದಲ್ಲಿ ಕೊಂಚ ರೌದ್ರಾಕಾರದ ಛಾಯೆ /ಭಾವ ಕಂಡು ಬಂತು..!! 

ಅಲ್ಲಿಂದ ಅಲ್ಲಿಯೇ ಹೊರಗೆ ನಿಂತು ದೇವಸ್ಥಾನದ ಹೊರ ಭಾಗವನ್ನು ಗೋಪುರ ಸಮೇತ ಕ್ಲಿಕ್ಕಿಸಿದೆ...
 
 
 
ಅಪ್ರಮೇಯ ದೇವಸ್ಥಾನ -ಮದ್ಯ್ಹದಲ್ಲಿ  -ಶೌಚಾಲಯ ..!! ನಂತರ ಕಾಣಿಸುವುದು  .ಪ್ರಸನ್ನ ಅಂಜನೇಯ ದೇವಸ್ಥಾನ....

 
ಒಂದಷ್ಟು ಹೊತ್ತು ಅಲ್ಲಿ ಕುಳಿತಿದ್ದು ತರುವಾಯ ಮತ್ತೆ ಆಟೋ ಹತ್ತಿ ೩೦ ರುಪಾಯೀ ಕೊಟ್ಟು  ಚನ್ನ ಪಟ್ಟಣ ರೈಲ್ವೆ  ಸ್ಟೇಶನ್ ತಲುಪಿದೆವು , ಟಿಕೆಟ್ ಖರೀದಿಸಿ ರೈಲು ಹತ್ತಿ ಬೆಂಗಳೂರಿಗೆ ವಾಪಾಸ್..

ನಾ ಹೋದ ಸಮಯದಲ್ಲೇ ದೇವಸ್ಥಾನದ ಬಾಗಿಲು ಹಾಕುತ್ತಿದ್ದುದರಿಂದ ಅವಸರವಸರವಾಗಿ ದರ್ಶನ ಮುಗಿಸಿ  ಒಳಗಿನ ಯಾವುದೇ ಕೆತ್ತನೆ-ಕುಸುರಿ ಇತ್ಯಾದಿ ಫೋಟೋ ಹೊಡೆಯಲು ಆಗದೆ ಬರೀ ಕಣ್ಣಲ್ಲೇ  ನೋಡಿ- ಮನದಲ್ಲಿ ಅದನ್ನು ಶೇಖರಿಸಿ  ಇಟ್ಟೆವು ..!!
 
 
 
ಚನ್ನಪಟ್ಟಣದಲ್ಲಿ ಹೆಸರುವಾಸಿಯಾದ (ಬೊಂಬೆ ಕೆತ್ತನೆಯಿಂದಾಗಿ  ಚನ್ನ ಪಟ್ಟಣ   -ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ) ಬೊಂಬೆ ಕೆತ್ತನೆಯ ಕೆಲ ಬೊಂಬೆಗಳನ್ನು ಖರೀದಿಸುವ ಮನಸ್ಸು ಇತ್ತು, ಆದರೆ  ಅವುಗಳನ್ನ ಬರೀ ಕಣ್ಣಲ್ಲೇ ನೋಡಿ ಅವುಗಳ ಅಂದ ಸವಿದು ಬಂದೆವು...!!
 

ಅದಕ್ಕೆ ಕಾರಣ ನಾವ್ ವಾಪಾಸು ಹೊರಡುವ ಟ್ರೈನ್ ಗೆ ಟೈಮ್ ಆದದ್ದು..
ಹೀಗಾಗಿ ಇನ್ನೊಮ್ಮೆ ಬಂದಾಗ ಗೊಂಬೆ  ತೆಗೆದುಕೊಂಡು ಹೋಗೋಣ  ಅಂತ ಅಂದುಕೊಂಡು ವಾಪಸ್ಸು ಬಂದೆವು..

ಒಟ್ಟಿನಲ್ಲಿ ಅರ್ಧ ದಿನದಲ್ಲೇ  ದೇವಸ್ಥಾನ ಸಂದರ್ಶಿಸಿ  ವಾಪಾಸು ಬೆಂಗಳೂರಿಗೆ ಬಂದಿದ್ದಾಯ್ತು..... ಮುಂದಿನ ಸಾರಿ ಜಾತ್ರೆಗೆ ಹೋಗುವ ಯೋಚನೆ ಇದೆ...ನೋಡುವ..

ಚನ್ನ ಪಟ್ಟಣಕ್ಕೆ ರೈಲು(ಮೈಸೂರಿಗೆ ಹೋಗುವ ಎಲ್ಲ  ಪ್ಯಾಸೆಂಜರ್/ ಎಕ್ಸ್ಪ್ರೆಸ್ಸ್ ರೈಲುಗಳು) ಬಸ್ಸಿನ ವ್ಯವಸ್ಥೆ ಇದೆ..
ರೈಲು ನಿಲ್ದಾಣ ಬಸ್ಸು ನಿಲ್ದಾಣ ತಲುಪಿ ಆಟೋ ಕೇಳಿದರೆ
ರೈಲು ನಿಲ್ದಾಣದಿಂದ  ೩೦ ರಿಂದ ೪೦ ರುಪಾಯೀ 
ಬಸ್ಸು ನಿಲ್ದಾಣದಿಂದ ಒಬ್ಬರಿಗೆ  ೧೦  ರುಪಾಯೀ ..
ಆಟೋದವರ ನಯ-ವಿನಯ ಹಿಡಿಸಿತು (ಬೆಂಗಳೂರಿನ ಕಹಿ ಅನುಭವಗಳು ಸಾಮಿ..!!)
ದೇವಸ್ಥಾನದ ಹೊರಗೆ (ಅಂಜನೇಯ ಸಾಮಿ- ಅಪ್ರಮೇಯ ದೇವಸ್ಥಾನ ಮಧ್ಯ ) ದರ್ಶನಾರ್ಥಿ(ಭಕ್ತಾದಿ)ಗಳಿಗಾಗಿ ಪಾವತಿಸಿ ಉಪಯೋಗಿಸುವ ಶೌಚಾಲಯ ವ್ಯವಸ್ಥೆಯೂ ಇದೆ.. ದೇವಸ್ಥಾನದಿಂದ ವಾಪಾಸ್ಸು ಬಸ್ಸು ನಿಲ್ದಾಣ-ರೈಲು ನಿಲ್ದಾಣಕ್ಕೆ ಆಟೋ ಸಹಾ ಸಿಗುವುವು...
ಮನೆ ಮಂದಿ ಸಮೇತ   ಹೋಗಿ ನೋಡಿ ಬರಲು ಹತ್ತಿರ ಇರುವ  ಸ್ಥಳ..

ಚಿತ್ರ ಮೂಲಗಳು: 

 
ದೇವಸ್ಥಾನ-ರಥ-ಇತ್ಯಾದಿ  :    ಸಪ್ತಗಿರಿವಾಸಿ
ಚನ್ನ  ಪಟ್ಟಣ ಬೊಂಬೆಗಳು :
 
 
 
 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಪ್ತಗಿರಿವಾಸಿಯವರೆ, ನಿಮ್ಮ "ಸೃಷ್ಟಿ"ಕತೆ ಹಾಕಿದ್ದೀರಾ ಎಂದು ಹುಡುಕಿದರೆ ಈ ಪ್ರವಾಸ ಕಥನ ಸಿಕ್ಕಿತು. ಚೆನ್ನಾಗಿದೆ. ಪ್ರವಾಸ ಹೋಗುವವರಿಗೆ ಅನುಕೂಲವಾಗುವಂತೆ ಎಲ್ಲಾ ವಿವರ ಹಾಕಿರುವಿರಿ. >>>ಅಪ್ರಮೇಯ ಸ್ವಾಮಿಗೆ ನಮಿಸಿ, ಅರ್ಚಕರು ಕೊಟ್ಟ ಆರತಿಗೆ ನಮಿಸಿ ,ಕಾಣಿಕೆ ಹಾಕಿ, ಅರ್ಚಕರಿಗೆ ಅಪ್ರಮೇಯ ಸ್ವಾಮಿಯ ಫೋಟೋ ತೆಗೆಯಬಹುದೇ? ಎಂದು ಕೇಳಿದಾಗ, ಅವರು ಫೋಟೋ ತೆಗೆಯುವುದು ಬೇಡ ಎಂದರು..:( -ಕಾಣಿಕೆ ಕಮ್ಮಿಯಾಗಿರಬಹುದು:) ಹೊಳೆನೀರಿಗೆ ದೊಣೆನಾಯಕನ ಅಪ್ಪಣೆ ಎಂದ ಹಾಗೆ ನಮ್ಮ ದೇವರ ಫೋಟೋ ತೆಗೆಯಲು ಅವರ ಅಪ್ಪಣೆ ಯಾಕೆ ಕೇಳುವಿರಿ. ಅದೇ ಟಿ.ವಿಯವರು ಬಂದು ಕೇಳಿದರೆ ಬೇಡ ಹೇಳುತ್ತಿದ್ದರಾ? ಮೊಬೈಲ್ ಕ್ಯಾಮರಾ ಸೌಂಡ್ ಮ್ಯೂಟ್ ಮಾಡಿ ಪ್ಲ್ಯಾಶ್ ಇಲ್ಲದೇ ಫೋಟೋ ತೆಗೆಯಬೇಕಿತ್ತು.(ಪೂಜೆ ನಡೆಯುತ್ತಿರುವಾಗ ಜನಗಳು ತುಂಬಿರುವಾಗ ಜನರಿಗೆ ತೊಂದರೆ ಆಗುವಂತೆ ತೆಗೆಯಬಾರದು.) >>> ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿಯ ಸನ್ನಿಧಿಗೆ ಹೋಗಿ ನಮಿಸಿ, ಬಾಗಿಲನ್ನು ಹಾಕಿದ್ದರಿಂದ ಆ ಬಾಗಿಲ ಮೂಲಕವೇ ನಮ್ಮ ಕ್ಯಾಮೆರ ಮೊಬೈಲು ಇರಿಸಿ ಒಂದು ಫೋಟೋ ತೆಗೆದದ್ದು ಆಯ್ತು..>> ಆಂಜನೇಯನ ಕಣ್ಣು ಧೃಸ್ಟಿ ಭಲೇ ಭಯಂಕರವಾಗಿತ್ತು.. -ಕದ್ದು ಫೋಟೋ ತೆಗೆದಾಗ ಕೋಪ ಬರದೇ ಇರುವುದಾ?೧೦೮ ಬಾರಿ ಜಪ ಮಾಡಿ ಇನ್ನೊಮ್ಮೆ ಹೋಗಿ ನೋಡಿ. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶ್ ಅಣ್ಣ - ಮೊದಲನೆಯದಾಗಿ ತಡ ಮಧ್ಯ ರಾತ್ರಿಯ ನಿಮ್ಮ ಈ ಪ್ರತಿಕ್ರಿಯೆಗೆ ನನ್ನಿ ಇನ್ನು ಫೋಟೋ ಬಗ್ಗೆ- ನಾ ಹೋಗುವಾಗಲೇ ದೇವಸ್ಥಾನದ ಬಾಗಿಲು ಹಾಕುವ ಸಮಯ...:(( ಅಲ್ಲಿ ‍ಅರ್ಚಕರು ಆರತಿ ತಟ್ಟೆ ಇಟ್ಟು ಕೈ ಕಟ್ಟಿ ನಿಂತಿದ್ದರು, ನಾ ಹೋಗಿ ನಮಿಸಿ ‍‍‍‍‍‍‍ ‍‍‍‍,ತಟ್ಟೆಗೆ...........???? ೩ ರುಪಯೀ ಹಾಕಿದೆ...:()) ಅದರಲ್ಲಿ ನನ್ ತಪ್ಪೇನೂ ಇರಲಿಲ್ಲ ಅನ್ನಿಸುತ್ತೆ..???? ನಾ ಆ ತಟ್ಟೆ ಕಡೆ ಗಮನ ಹರಿಸಿದಾಗ- ಅಲ್ಲಿ ಬರೀ ೧-೨- ೫ ರುಪಯೀಗಳ ನಾಣ್ಯಗಳೇ ತುಂಬಿದ್ದವು, ನಾ ಸಹಾ ಹತ್ತರಲ್ಲಿ ಹನ್ನೊಂದನೆಯವನು(ಗುಂಪಲ್ಲಿ ಗೋವಿಂದ ಎಂಬಂತೆ..!!) ಅವರೇನೂ ಅದನ್ನು ನೋಡಲಿಲ್ಲ ಬಿಡಿ(ಆದರೆ ನಾ ಪರ್ಸ್ ತೆಗೆವಾಗ ನೋಟುಗಳ ಕಡೆ ಅವರ ಗಮನ ಇತ್ತು ಆದರೆ ನಾ ಈ ಎಳೆದು ಜ್ಯಣ ಜ್ಯಣ ಕಾಯಿನ್ ತೆಗೆದು ಹಾಕಿದಾಗ,...!!!) ನನ್ನ ಫೋನ್ ಗೆ ಫ್ಲಾಶ್ ಇಲ್ಲ, ಸೌಂಡ್ ಮೊದಲೇ ಮ್ಯೂಟ್ ಇಟ್ಟಿರುವೆ..!! ಆ ಅರ್ಚಕರು ನನ್ನನ್ನೇ ನೋಡುತ್ತಾ ಇರುವಾಗ ಅವರಿಗೆ ಕಾಣದಂತೆ ಫೋಟೋ ತೆಗೆಯಲು ಸಾಧ್ಯವೇ??? ಈಗ ನಂಗೆ ಅದೇ ಅಚ್ಚರಿ 'ಪವಿತ್ರ' ಅವರು ಆ ಫೋಟೋ ಹೇಗೆ ತೆಗೆದರು ಅಂತ?... !!! ಇನ್ನು 'ನವ ಜೀವಿಯ ರಹಸ್ಯ ಸೃಸ್ಟಿ ' ಕಥೆ ಕಥೆ ಬಗ್ಗೆ- http://sampada.net/b... ಅದನ್ನು ಬರೆದು ಇಷ್ಟು ಹೊತ್ತಿಗೆ ಹಾಕಬೇಕಿತ್ತು ಮಧ್ಯದಲ್ಲಿ ಅಪ್ರಮೇಯ..... !! ನಾಳೆ ಸಹಾ ಸಂಶಯ...!! ನಾಡಿದ್ದು ಖಂಡಿತ ಮುಂದಿನ ಭಾಗ(ಕೊನೆಯ ಭಾಗ ಅಂತ ಹೇಳಿದ್ದೆ..!!) ಬರಲಿದೆ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾನು ಯೋಚಿಸಿದಂತೆಯೇ ಕಾಣಿಕೆ ಕಮ್ಮಿ ಹಾಕಿದಿರಿ. :) ಬಾಗಿಲು ಹಾಕುವ ಸಮಯದಲ್ಲಿ ಹೋದಾಗ ಕಾಣಿಕೆ- ನೋಟನ್ನೇ ಹಾಕಬೇಕು. ಅವರಿಗೆ ತುಂಬಾ ಧನ್ಯವಾದಗಳನ್ನು ಹೇಳುತ್ತಾ, ಪರಿಚಯ ಮಾಡಿ, ನಂತರ ಫೋಟೋ ಸುದ್ದಿಗೆ ಹೋಗಬೇಕು (ಮುಂದಿನ ಸಲಕ್ಕೆ ನೆನಪಿರಲಿ :) ) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೇಖನ ಓದಿದ ಮೇಲೆ ಅಲ್ಲಿಗೊಮ್ಮೆ ಹೋಗಬೇಕೆನಿಸುತ್ತಿದೆ " ಕೊಂಡಿ " ಯೊಂದಿಗೆ ಪೂರ್ಣ ಮಾತಿಯುಕ್ತ ಲೇಖನಕ್ಕೆ ಧನ್ಯವಾದಗಳು ವೆಂಕಟೇಶ್ ರವರೇ. >> ಈಗ ನಂಗೆ ಅದೇ ಅಚ್ಚರಿ 'ಪವಿತ್ರ' ಅವರು ಆ ಫೋಟೋ ಹೇಗೆ ತೆಗೆದರು ಅಂತ?...<< ಬಹುಶಃ ಗಣೇಶ್ ರವರು ಹೇಳಿದಂತೆ ದಕ್ಷಿಣೆ ಹಾಕುವಾಗ " ಶಬ್ದ " ಆಗದಂತೆ ಹಾಕಿದ್ದರೆ ನಿಮಗೂ ಫೋಟೋ ತೆಗೆಯುವ ಅವಕಾಶ ಸಿಗುತ್ತಿತ್ತು ಅನ್ನಿಸುತ್ತೆ....!! ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸತೀಶ್ ಅವ್ರೆ- ಖಂಡಿತವಾಗಿಯೂ ದೊಡ್ಡ ಮಳೂರಿಗೆ ಹೋಗಿ ಅಪ್ರಮೇಯನ ದರ್ಶನ ಮಾಡಿಕೊಂಡು ಬನ್ನಿ-- ಆ ಫೋಟೋ ಹೇಗೆ ತೆಗೆದರು? ಅಂತ ಪವಿತ್ರ ಅವ್ರೆ ಉತ್ತರಿಸಬಹುದು... ನೋಡುವ... ನಮ ಹಳ್ಳಿಯಲ್ಲಿ ಇರುವ ಬಸವಣ್ಣ ದೇವರು(ಅಣ್ಣ ಬಸವಣ್ಣ ಅಲ್ಲ- ಮಲಗಿದ ಹೋರಿಯ ರೂಪದಲ್ಲಿರುವ ಮೂರ್ತಿ) ಫೋಟೋ ತೆಗೆಯುವಾಗಲೂ ನಮ್ ಅರ್ಚಕರು ಹಾಗೆಯೇ ಹೇಳಿದ್ದರು, ಹಾಗೊಮ್ಮೆ ನಾವ್ ನಿರ್ಲಕ್ಷಿಸಿ ತೆಗೆಯಬಹುದಿತ್ತು, ಆದರೂ ಅವರವರ ನಂಬಿಕೆ -ಕಟ್ತಾಚಾರ -ನಂಬಿಕೆ- ಆಚಾರ-ವಿಚಾರ ಇತ್ಯಾದಿ ಮತ್ತು ದೇವರನ್ನೇ ಕೆಣಕುವ ದುಸ್ಸಾಹಸ ಯಾಕೆ ಅಂತ.....!! ನಿಮ್ಮ ಪ್ರತಿಕ್ರಿಯೆಗೆ ನನ್ನಿ ಶುಭವಾಗಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಗಳೆ, <<ಅಪ್ರಮೇಯ ದೇವಸ್ಥಾನ -ಮದ್ಯ್ಹದಲ್ಲಿ -ಶೌಚಾಲಯ ..!!>> ದೇವರಿಗೂ ಅಟ್ಯಾಚ್ಡ್ ಬಾತ್‍ರೂಮ್! <<ಇಲ್ಲಿರುವ ಅಂಜನೇಯ ಮಾಮೂಲಿ ಅಂಜನೆಯಗಿಂತ ಭಿನ್ನ... ಹೇಗೆ ಅಂದಿರಾ? (ಏಕೆಂದರೆ ಹೆಸರೇನೋ ಪ್ರಸನ್ನಾಂಜನೇಯ.....ಆದರೆ...ಆದರೆ).........ಆಂಜನೇಯನ ಕಣ್ಣು ಧೃಸ್ಟಿ ಭಲೇ ಭಯಂಕರವಾಗಿತ್ತು..>> ಆದ್ದರಿಂದ. ನಮ್ಮೂರಿನಲ್ಲಿ ಆಂಜನೇಯ ಸ್ವಾಮಿಯ ಮೂತಿ ಒಂದು ಪಕ್ಕಕ್ಕೆ ವಾಲಿರುತ್ತದೆ. ಏಕೆಂದರೆ ಹಿಂದೆ ಯಾರೋ ಕಲಬೆರೆಕೆಯ ತುಪ್ಪದಿಂದ ಆಂಜನೇಯ ಸ್ವಾಮಿಗೆ ತೈಲಾಭಿಷೇಕ ಮಾಡಿಸಿದ್ದರಿಂದ ಅದರ ವಾಸನೆ ತಾಳಲಾರದೆ ಮೂತಿಯನ್ನು ಪಕ್ಕಕ್ಕೆ ತಿರುವಿದ್ದಾನಂತೆ. - ಬೀchiಯವರ ಲೇಖನವೊಂದರ ಪ್ರಭಾವದಿಂದ. ಈ ದೃಷ್ಟಿಯಿಂದ ಇಲ್ಲಿಯ ಆಂಜನೇಯ ಭಿನ್ನವಾಗಿ ನೇರ ನೋಟವಿಟ್ಟುಕೊಂಡಿದ್ದಾನೆ ಆದ್ದರಿಂದ ವಿಭಿನ್ನನೆಂದುಕೊಂಡಿದ್ದೆ :)) ಒಟ್ಟಾರೆಯಾಗಿ ಫೋಟೋಗಳು ಮತ್ತು ನಿಮ್ಮ ವಿವರಣೆ ಚೆನ್ನಾಗಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ್ ಜೀ - ಸಂಪದದಲ್ಲಿ ಕೆಲ ದಿನಗಳಿಂದ ನಿಮ್ಮನ್ನು ಕಾಣದೆ(ಪ್ರತಿಕ್ರಿಯೆ ಕಾಣಿಸದೆ) ನಿರಾಶೆ ಆಗಿತ್ತು..:(( ಈಗ ಮರಳಿರುವಿರಿ.. ಮರಳುತ್ತಲೇ ಹಲವು ಬರಹಗಳಿಗೆ ಪ್ರತಿಕ್ರಿಯೆಯ ಪ್ರವಾಹ ಹರಿಸಿದ್ದೀರ...!! ಸೊಟ್ಟ ಮೂತಿ ಹನುಮ ನ ಬಗೆಗಿನ ನಿಮ್ಮ ಪ್ರತಿಕ್ರಿಯೆಗೆ :())) ಬಂತು... ಇದ್ದೀತು... ಯಾಕೆಂದರೆ ನಮ್ ಅಡುಗೆಗೆ ಒಳ್ಳೊಳ್ಳೆಯ ಅಡುಗೆ ಎಣ್ಣೆ ಬಳಸುವ ನಾವು ದೇವರ ಆರತಿ ಹಣತೆ ವಿಷಯದಲ್ಲಿ ಜುಗ್ಗರು---!! ಉಪಯೋಗಿಸೋದು .................ಎಣ್ಣೆ..!! ಶುಭವಾಗಲಿ... ನಿಮ್ಮ ಮೆಚ್ಚುಗೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿವಾಸಿ ಅವರೆ, ನೀವು ಸಂಪದದಲ್ಲಿ ಬಹಳಷ್ಟು ಸಕ್ರಿಯರಾಗಿದ್ದೀರಿ. ನಿಮ್ಮ ಲೇಖನಗಳು ಚೆನ್ನಾಗಿ ಮೂಡಿ ಬರುತ್ತಿವೆ. ನಿಮ್ಮಲ್ಲಿ ಒಂದು ವಿನಂತಿ: ದಯವಿಟ್ಟು blog/ MS Word ನಿಂದ ಸಂಪದಕ್ಕೆ ನೇರ copy-paste ಮಾಡದಿರಿ. ಇಡೀ ಪುಟದ ವಿನ್ಯಾಸ ಹಾಳಾಗುತ್ತದೆ. ನೀವು MS Word ಬಳಸುತ್ತೀರಿ ಎಂಬುದಾದಲ್ಲಿ ಈ ಕೋಡಿಯಲ್ಲಿರುವ ಮಾಹಿತಿಯಂತೆ ನಿಮ್ಮ ಲೇಖನಗಳನ್ನು ಪ್ರಕಟಿಸಿ http://sampada.net/a... ನಿಮಗೆ ಮಾಹಿತಿ ಬೇಕಾದಲ್ಲಿ mail@sampada.net ಗೆ ಈ-ಅಂಚೆ ಕಳುಹಿಸಿ. ಚಿತ್ರಗಳನ್ನು ಸಂಪದದಲ್ಲಿ ಚಿತ್ರ ಸೇರಿಸಲು ಇರುವ ಮಾರ್ಗವನ್ನು ಬಳಸಿ. ಅದರ ಮಾಹಿತಿ ಇಲ್ಲಿದೆ: http://sampada.net/%... ಕೆಲವು ದಿನಗಳಿಂದ ಚಿತ್ರಗಳನ್ನು ಸೇರಿಸಲು ಕಷ್ಟವಾಗುತ್ತಿತ್ತು. ಈ ತೊಂದರೆಯನ್ನೀಗ ಸರಿಪಡಿಸಲಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಂಪದಿಗರಿಗೆಲ್ಲ ಇದರ ಬಗ್ಗೆ ಮಾಹಿತಿ ಇದೆ ಎಂದು ಭಾವಿಸಿದ್ದೇನೆ. ಹೊಸ ಓದುಗರಿಗಾಗಿ ಮತೊಮ್ಮೆ ಪ್ರಕಟಿಸಬಯಸುತ್ತೇನೆ: ನಿಮ್ಮ ಬರಹಗಳು Unicode ನಲ್ಲಿ ಇಲ್ಲ್ ವಾದಲ್ಲಿ, SEO (Search Engine Optimization) ಗೆ ಅಂದರೆ ನೀವು ಇಂಟರ್ನೆಟ್ ನಲ್ಲಿ ನಿಮ್ಮ ಬರಹಗಳನ್ನು/ ಲೇಖನಗಳನ್ನು ಹುಡುಕುವುದು ಕಷ್ಟವಾಗುತ್ತದೆ. ಆದುದರಿಂದ ಸಾಧ್ಯವಾದಷ್ಟು Unicode ಬಳಸುವ ಪ್ರಯತ್ನ ಮಾಡಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಮ ನಾಡಿಗ್ ಅವ್ರೆ- ನಿಮ್ಮ ಮೆಚ್ಚುಗೆಗೆ ನನ್ನಿ... ನಾ ಯಾವುದೇ ಬರಹವನ್ನು ಗೂಗಲ್ ಟ್ರಾನ್ಸಿಟ್(http://www.google.co... ) ನಲ್ಲಿ ಟೈಪಿಸಿ ಅದನ್ನೇ 'ಬರಹ ಪ್ಯಾಡ್ನಲ್ಲಿ' ಸೇವ್ ಮಾಡಿ ಅದನ್ನು ನೇರವಾಗಿ ಸಂಪದಕ್ಕೆ ಸೇರಿಸುವೆ- ಹಾಗೆ ಸೇರಿಸುವಾಗಲೇ ಸಾಲುಗಳ ಮಧ್ಯೆ 'ಅಂತರ' ಇದ್ದರೆ ಚೆನ್ನ ಅಂತ ನಾನೇ ಎಂಟರ್ ಹೊಡೆಯುತ್ತ 'ಅಂತರ' ಕೊಡುವೆ..!! ಇನ್ನು ಈ ಬರಹದಲ್ಲಿ ಚಿತ್ರಗಳನ್ನು ಸೇರಿಸುವಾಗ ಆ ಚಿತ್ರಗಳ ಕೆಳಗೆ ಇಲ್ಲವೇ ಮೇಲೆ ಆ ಚಿತ್ರಕ್ಕೆ ಸಂಬಂಧಿಸಿದ ಮಾಹಿತಿ/ವಿಷ್ಯ ಇದ್ದಾರೆ ಚೆನ್ನ ಅಂತ (ಫುಲ್ ಎಚ್ ಟೀ ಎಂ ಎಲ್ ನಲ್ಲಿನ ಎಡಿಟ್-ಇನ್ಸರ್ಟ್ ಫೋಟೋ) ಉಪಯೋಗಿಸಿ ಹಾಕಿದೆ..... ನಿಮ್ಮ ಅಭಿಪ್ರಾಯದಂತೆ /ಸಲಹೆಯಂತೆ ಈಗ ಆ ಫೋಟೋಗಳನ್ನು ಸಂಪದದಲ್ಲಿ ಮುಂಚಿನಂತೆ(ನಾ ಉಪಯೋಗಿಸುತ್ತಿದ್ದ ಹಾಗೆ) ಹಾಕುವೆ.. ಶುಭವಾಗಲಿ..... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗೂಗಲ್ ಟ್ರಾನ್ಸ್ಲೇಟ್ ಬಳಸುತ್ತಿದ್ದಲ್ಲಿ, ಬರಹ ಪಾಡ್ ಗೆ ಕಾಪಿ ಮಾಡಿದ ನಂತರ, ಮತೊಮ್ಮೆ ನೋಟ್ ಪ್ಯಾಡ್ ಗೆ ಕಾಪಿ ಮಾಡಿ, ಆನಂತರ ಸಂಪದಕ್ಕೆ ಸೇರಿಸಿ. ಇದು ಎಲ್ಲ ತೊಂದರೆಗಳನ್ನು ಸರಿಪಡಿಸುತ್ತದೆ. ಗಮನಿಸಿ: ನೋಟ್ ಪ್ಯಾಡ್ ನಲ್ಲಿ ಚಿತ್ರಗಳನ್ನು ಸೇರಿಸಲು ಸಾಧ್ಯವಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಮ ನಾಡಿಗ್ ಅವ್ರೆ- ನಿಮ್ಮ ಸಲಹೆಗಳನ್ನು ,ಇನ್ನು ಮುಂದಿನ ಬರಹಗಳಲ್ಲಿ ಅಳವಡಿಸಿಕೊಳ್ಳುವೆ.. ಚಿತ್ರಗಳನ್ನು ಮಾಮೂಲಾಗಿ ಅಪ್ಲೋಡ್ ಮಾಡುವೆ.. ಹಾಗೆಯೇ ಫುಲ್ ಎಚ್ ಟೀ ಎಂ ಎಲ್ ನಲ್ಲಿನ ಎಡಿಟ್ /ಇನ್ಸರ್ಟ್ ಪಿಕ್ಚರ್ ಆಯ್ಕೆ ಬಳಸುವೆ.. ಮಾಹಿತಿಗೆ ನನ್ನಿ ಶುಭವಾಗಲಿ.... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿವಾಸಿಗಳೇ, ನೀವು ಸಂದರ್ಶಿಸಿ ಬಂದ ದೇವಸ್ಥಾನದ ಬಗ್ಗೆ ಉತ್ತಮವಾಗಿ ವರದಿ ಮಾಡಿರುತ್ತೀರಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಂಜುಂಡ ಅವ್ರೆ- ಮೆಚ್ಚುಗೆಗೆ ನನ್ನಿ ಶುಭವಾಗಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಾಗೆ ವಾಪಸ್ ಬರುತ್ತ ನಾಯಂಡನ ಹಳ್ಳಿ ಸರ್ಕಲ್ ಬಳಿ ನಿಂತು ಜೋರಾಗಿ ಕೂಗಿದ್ದರೆ ನಾನು ಹೊಸಕೆರೆಹಳ್ಳಿಯಲ್ಲಿದ್ದೆ ಒಮ್ಮೆ ಬಂದು ಹೋಗಬಹುದಿತ್ತು. ಬರಹ ಚೆನ್ನಾಗಿದೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗುರುಗಳೇ - ನನ್ನ ಜೊತೆ ದೊಡ್ಡ ಮಳೂರಿಗೆ ದೇವಸ್ಥಾನ ನೋಡಲು ಬಂದಿದ್ದ ಸ್ನೇಹಿತನ ಸಂಬಂಧಿಕರು ಇರುವುದು ಹೊಸ ಕೆರೆ ಹಳ್ಳಿಯಲ್ಲೇ...!! ಇವತ್ತು ಅವನನ್ನು ಬಿಡಲು ಮಾರ್ಕೆಟ್ ಗೆ ಹೋದಾಗ(ಅವನು ಹೊಸ ಕೆರೆ ಹಳ್ಳಿ ಗೆ ಹೋಗುವುದಿತ್ತು-೪೩ ಎ/ಬೀ/ಸೀ ಬಸ್ಸಿನಲ್ಲಿ ) ಅವನು ಅಲ್ಲಿಗೆ ಬಾ ಎಂದರೂ ನಾ ರೂಮಿಗೆ ಹೋಗುವೆ ಅಂತ ಬಂದೆ...:(( >>>>ನನಗೆ ಅಚ್ಚರಿಯೂ+ ವಿಷಾಧವೂ(ವ್ಯಥೆಯೂ ) ಆಗುತ್ತಿದೆ...!!??? ಅದಕ್ಕೆ ಕಾರಣ ನೀವು 'ಹೊಸ ಕೆರೆ ಹಳ್ಳಿಯಲ್ಲಿ' ಇರುವಿರಿ ಎಂಬುದು.. ಆ ನಾಯಂದ ಹಳ್ಳಿ ಹತ್ತಿರವೇ ಟ್ರೇನ್ ಯಾಕೋ? ಹತ್ತು ನಿಮಿಷ ನಿಂತಿತ್ತು(ಬರುವಾಗ)... ನಿಮ್ಮ ನನ್ನ ಸ್ಥಿರ-ಸಂಚಾರಿ ದೂರವಾಣಿ ನಂಬರ್ ಇಲ್ಲದೆ ಒಬ್ಬರನ್ನೊಬ್ಬರು ಸ0ಪರ್ಕಿಸೋದು ....ತು ಬಿಡಿ...!! ಪರವಾಗಿಲ್ಲ ಬಿಡಿ .. ಯಾಕೆಂದರೆ ಈ ಬರಹದ ಮೊದಲಲ್ಲೇ ನಾ ಹೇಳಿರುವೆ- ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಂತ...! ಮುಂದೊಮ್ಮೆ ವಾಕ್ ಪಥಕ್ಕೆ ನಾ ಬಂದಾಗ(ಬಂದರೆ) ನಿಮ್ಮನ್ನು ಭೆಟ್ಟಿ ಮಾಡುವೆ... ಶುಭವಾಗಲಿ.. ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಒಳ್ಳೆಯ ಬರಹ, ಉಪಯುಕ್ತ ಮಾಹಿತಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೇತನ್ ತಮ್ಮ ಲೇಟ ಎಸ್ಟ್ ಪ್ರತಿಕ್ರಿಯೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.