ಬೇಸನ್ ಲಾಡು

4.5
ಬೇಕಿರುವ ಸಾಮಗ್ರಿ: 

ಕಡಲೆ ಹಿಟ್ಟು – 3 ಕಪ್, ತುಪ್ಪ – ¾ ಕಪ್, ಸಕ್ಕರೆ – 1 ½ ಕಪ್, ಗೋಡಂಬಿ – 10, ಬಾದಾಮಿ – 10, ಏಲಕ್ಕಿ – 2

ತಯಾರಿಸುವ ವಿಧಾನ: 

ಗೋಡಂಬಿಯನ್ನು ಹದವಾಗಿ ಹುರಿಯಿರಿ. ಗೋಡಂಬಿ ಮತ್ತು ಬಾದಾಮಿಯನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳಿ. ಏಲಕ್ಕಿಯನ್ನು ಪುಡಿ ಮಾಡಿಟ್ಟುಕೊಳ್ಳಿ. ಸಕ್ಕರೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಬಿಸಿಯಾದ ನಂತರ ಏಲಕ್ಕಿ ಪುಡಿಯನ್ನು ಮತ್ತು ಕಡಲೆ ಹಿಟ್ಟನ್ನು ಹಾಕಿ ಹುರಿಯಿರಿ. ಹುರಿದ ಪರಿಮಳ ಬಂದ ಮೇಲೆ ಕೆಳಗಿಸಿ (ಕಡಲೆ ಹಿಟ್ಟಿನ ಹಳದಿ ಬಣ್ಣವು ಹೊಂಬಣ್ಣಕ್ಕೆ ತಿರುಗಿರುತ್ತದೆ). ತಣ್ಣಗಾದ ನಂತರ ಸಕ್ಕರೆ ಪುಡಿ, ಗೋಡಂಬಿ ಮತ್ತು ಬಾದಾಮಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಗಟ್ಟಿಯಾದ ನಂತರ ಉಂಡೆ ಕಟ್ಟಿ. ಬೇಸನ್ ಲಾಡುವನ್ನು ಸವಿಯಲು ಸಿದ್ಧರಾಗಿ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

“ಅತಿ ಮಧುರ” ಎಂತ ಒಂದು ಬಗೆಯ ಸಿಹಿ ಗ್ರಂಧಿಗೆ ಅಂಗಡಿಗಳಲ್ಲಿ ಸಿಗುತ್ತದಂತೆ, ಸಕ್ಕರೆ ಬದಲಿಗೆ ಅದರ ಪ್ರಯೋಗ ಮಾಡಿ ನೋಡಿ! ಆಮೇಲೆ ನನ್ನನ್ನು ಬೈದುಕೊಳ್ಳ ಬೇಡಿ! ಒಬ್ಬರು ಡಯಾಬೆಟಿಕ್ ನನಗೆ ಈ ಸಲಹೆ ನೀಡಿದ್ದು

ಬೇಸನ್ ಲಾಡು ನನಗೂ ಇಷ್ಟ. ಇನ್ನು ಅತಿಮಧುರದ ಸಿಹಿಯ ಬಗ್ಗೆ- http://www.fountainmagazine.com/Issue/detail/Sweeter-Than-Sugar-Black-as... ಹಾಗೂ http://ayurvedaconsultants.com/caseshow.aspx?ivalue=engoogle896 ಈ ಲೇಖನದಲ್ಲಿ ಕೆಲ ವಿವರಗಳಿವೆ.