ಬೆಳಕು ಬಂದಿದೆ ಬಾಗಿಲಿಗೆ

3.5

ಬೆಳಕು ಬಂದಿದೆ ಬಾಗಿಲಿಗೆ
----------------------------------
ಬೆಳಕು ಬಂದಿದೆ ಬಾಗಿಲಿಗೆ
ಬರಮಾಡಿಕೊಳ್ಳಿರಿ ಒಳಗೆ|
ಹೃದಯ ಬಾಗಿಲತೆರೆದು
ಮನಸೆಂಬ ಕಿಟಕಿಗಳ ಒಳತೆರೆದು||

ಬೆಳಕೆಂದರೆ ಬರೀಯ ಬೆಳಕಲ್ಲ
ಇದುವೆ ಮಹಾಬೆಳಕು |
ನಮ್ಮಬದುಕ ಬದಲಿಸುವ ಬೆಳಕು
ನಮ್ಮಬಾಳ ಬೆಳಗುವಾ ಬೆಳಕು||

ಕೋಟಿ ಸೂರ್ಯ ಸಮವೀಬೆಳಕು
ಸರ್ವಕಾಲಿಕ ಸತ್ಯವೀಬೆಳಕು|
ಸರ್ವರನುದ್ದರಿಸೊ ಈ ಬೆಳಕು|
ಅದುವೆ ನಮ್ಮ ಕೃಷ್ಣನೆಂಬಾ ಬೆಳಕು||

ಯುಗಯುಗಳಿಂದಲಿ ಅನೇಕರನು
ಉದ್ಧರಿಸಿದಾ ಬೆಳಕು|
ಕಲಿಯುಗದಲಿ ಕಾಮಧೇನು,
ಕಲ್ಪವೃಕ್ಷವೀಬೆಳಕು|
ಅಲ್ಪ ಸಮಯದಿ ನೆನೆದರೂ ಸಾಕು
ಜನ್ಮ ಪಾವನವಾಗಿಸುವ ಬೆಳಕು
ಅದುವೆ ನಮ್ಮ ಕೃಷ್ಣನೆಂಬಾ ಬೆಳಕು||

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.