ಬೆಂಬಿಡದ ಭಾವಗಳ ವಿನಿಮಯಕೆ ಸಾಕ್ಷಿಯಾಗೊಮ್ಮೆ

0
ಮನದ ಬಾಗಿಲಿಗೆ ತೋರಣವಾದವಳೇ ತುಂತುರು ಮಳೆಗೆ ಕೊಡೆಯಾದವಳೇ ನಿಲ್ಲದ ನೆನಪುಗಳಿಗೆ ಚಿಲುಮೆಯಾದವಳೇ ಸುಂದರ ಪಯಣಕೆ ಸಾಕ್ಷಿಯಾದವಳೇ ಸುಮಧುರ ಸಂಜೆಗಳಿಗೆ ಸವಿನೆನಪಾದವಳೇ ಕಾಡುವ ಕವನಕೆ ಪದವಾದವಳೇ ಕನಸಿನ ಕಾಗದಕೆ ಲೇಖನಿಯಾದವಳೇ ಕಲ್ಪನೆಯ ರಥಕೆ ಸಾರಥಿಯಾದವಳೇ ಮೌನ ಸಂಭಾಷಣೆಗೆ ಕಣ್ಣಾದವಳೇ ಒಲವಿನ ಓಲೆಯ ಕೊಡಲು ಕಾತರಿಸುತ್ತಿರುವೆನು ಬೆಂಬಿಡದ ಭಾವಗಳ ವಿನಿಮಯಕೆ ಸಾಕ್ಷಿಯಾಗೊಮ್ಮೆ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಣ್ಣ ... ಚಿಕ್ಕಣ್ಣ... ಯಾವ್ದಾದ್ರೂ ಫಿಕ್ಸ್ ಆಯ್ತಾ ಅಣ್ಣಾ...? ಅಥವಾ “ಮೊದಲನೇ ನೋಟಕೆ ನಿನ್ನ ಮೇಲೆ ನನಗೆ ಮನಸ್ಸಾಯ್ತು...ಮನಸಾಗಿ... ಅಷ್ಟೇನಾ... ಅವಳು ಚೆನ್ನಾಗಿದ್ದಾಳೆ... ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ..

ಆದವಳೇ ಅನ್ನುವವಳು ಎಲ್ಲಿದ್ದಾಳೋ ಹ್ಯಾಗಿದ್ದಾಳೋ ಇನ್ನೂ ಗೊತ್ತಿಲ್ಲ, ಸಿಕ್ಕಿದ್ರೆ ಖಂಡಿತ ತಿಳಿಸ್ತೀನಿ ಸತೀಶವ್ರೆ ಮೆಚ್ಚಿದ್ದಕ್ಕೆ ಧನ್ಯವಾದ

ನಮಗೆಲ್ಲ ಒ0ದು ಕಲ್ಯಾಣ ಕ್ಱುಷ್ಣನಿಗೆ 1008 ಕಲ್ಯಾಣವಾದರೆ ಚಿಕ್ಕುವಿಗೆ 2012 ಕಲ್ಯಾಣವೆ?????? ಚಿಕ್ಕು ಜಯ0ತ್ ಬಗ್ಗೆ ಎಚ್ಚರವಾಗಿರಿ ಪಾರ್ಥಸಾರಥಿ

ಚೇತನ ಕೋಡುವಳ್ಳಿಯವರೆ ವಂದನೆಗಳು ನಿಮ್ಮ ಕವನ ' ಬೆಂಬಿಡದ ಭಾವಗಳ ವಿನಿಮಯಕೆ ಸಾಕ್ಷಿಯಾಗೊಮ್ಮೆ ' ಓದಿದೆ. ದ್ವಿಪದಿಯಲ್ಲಿ ಕವನವನ್ನು ಸುಂದರವಾಗಿ ರಚಿಸಿದ್ದೀರಿ. ಕವನ ಸರಳವಾಗಿದೆ, ಸುಂದರವಾಗಿದೆ ಮತ್ತು ಬಹಳ ಅರ್ಥಗರ್ಭಿತವಾಗಿದೆ.ಧನ್ಯವಾದಗಳು.