ಬೆಂಗಳೂರಿನ ಒಂದು ಉಪನಗರ ಬಿಟಿಎಮ್ ಲೆ ಔಟ್ ಬಳಿಯ ಉದ್ಯಾನವನಗಳು !

3.5

ಅಂದವಾದ ಹುಲ್ಲುಗಾವಲು, ಬೆಳಕಿನ ವ್ಯವಸ್ಥೆ, ಹಾಗೂ ಜವಾಬ್ದಾರಿಯುತ ನಗರಿಕರನ್ನು ಇಲ್ಲಿ ಕಾಣಬಹುದು.

 

ಮಕ್ಕಳಿಗೆ  ಮುದಕೊಡುವ ಪ್ರಾಣಿಗಳ ಪುಥಳಿಗಳು.

 

 ರಾತ್ರಿರಾಣಿ ಗಿಡದಲ್ಲಿ ಅರಳಿ ಹೊರಸುವ ಹೂಗಳ  ಸುಗಂಧ, ಅದೆಷ್ಟು ಮುದಕೊಡುತ್ತವೆ !

 

ಇದು, ಐ.ಎ.ಎಸ್.ಅಧಿಕಾರಿಗಳ ಕ್ವಾರ್ಟರ್ಸ್ ಗೆ ಸೇರಿದ ಉದ್ಯಾನವನ...

 

ದಕ್ಷಿಣ ಬೆಂಗಳೂರಿನ ಬಿ.ಟಿ.ಎಂ. ಬಡಾವಣೆಯಲ್ಲಿ ಹಲವಾರು ಉದ್ಯಾನಗಳಿವೆ. ಅತ್ಯಂತ ಸುವ್ಯವಸ್ಥಿತವಾಗಿ ನಗರದ ಬೆಳವಣಿಗೆಯನ್ನು ಈ ಭಾಗದಲ್ಲಿ ನಾವು ಕಾಣಬಹುದು. ಐ.ಎ.ಎಸ್.ಅಧಿಕಾರಿಗಳ ಕಾಲೊನಿಯಲ್ಲಿರುವ ಉದ್ಯಾನವನ,  ಮತ್ತು ಮೈಕೊ ಕಾರ್ಖಾನೆಯವರು ಸ್ಥಳವನ್ನು ಒದಗಿಸಿ ನಡೆಸುತ್ತಿರುವ ಸುಂದರ ಉದ್ಯಾನ, ಎಲ್ಲರ ಕಣ್ಮನಗಳನ್ನು ಸೆಳೆಯುತ್ತಿದೆ. ಮುಂಜಾನೆ, ಬೆಳಗಿನ ವೇಳೆ ಇಲ್ಲಿಗೆ ಬರುವ ಕ್ರೀಡಾಪಟುಗಳು ತಮ್ಮ ಮೈಕಟ್ಟನ್ನು ಸರಿಪಡಿಸಿಕೊಳ್ಳಲು ಆಸಕ್ತರಾದ ವೃದ್ಧರು, ಹೆಂಗಸರು, ಮಕ್ಕಳು, ಆಫೀಸ್ ಗೆ ಹೋಗುವ ಎಲ್ಲರಿಗೂ ಇದು ಒಂದು ಸೊಗಸಾದ ತಾಣ.

ಇಲ್ಲಿ ಯೋಗಾಭ್ಯಾಸಮಾಡುವವರಿಗೆ ಕೊರತೆಯಿಲ್ಲ. ಟೆನ್ನಿಸ್, ಆಟ, ಶೆಟಲ್ ಕಾಕ್ ಆಡುವವರು ಇಲ್ಲಿ ಮೈಮರೆತು ಆಟದಲ್ಲಿ ತೊಡಗಿರುತ್ತಾರೆ. ಸುಂದರವಾದ ಹುಲ್ಲುಗಾವಲಿನ ಹತ್ತಿರದ ಕಲ್ಲುಬೆಂಚುಗಳಮೇಲೆ ಕುಳಿತು ದಿನಪತ್ರಿಕೆಗಳನ್ನು ಓದುತ್ತಾ ಹರಟೆಹೊಡೆಯುವ ಜನರನ್ನು ನೋಡಿ ನಾವೂ ಅವರ ಜೊತೆ ಸೇರಬಹುದು. ಅಗೋ ಹೊರಗಡೆಯ ಫುಟ್ ಪಾತ್ ಮೇಲೆ ಒಬ್ಬ ಹುಡುಗ ಅನೇಕ ತರಹಗಳ ಹಣ್ಣುಗಳ, ತರಕಾರಿಗಳ ರಸವನ್ನು ತಯಾರಿಸಿ ಮಾರುತ್ತಿದ್ದಾನೆ.  ಬನ್ನಿ;  ಅಲ್ಲಿ ನಾವು  ಕಶಾಯ, ಹಾಗಲಕಾಯಿನ ರಸ, ಮತ್ತು ಸೌತೆಕಾಯಿನ, ಮಾವಿನಕಾಯಿನ ರಸಗಳನ್ನು ಸೇವಿಸಬಹುದು.

ಒಂದು ಗಮನಿಸಬೇಕಾದ ವಿಷಯವೇನೆಂದರೆ, ದಾರಿಯಲ್ಲಿ ಅಲ್ಪಸ್ವಲ್ಪವೂ ಕೊಳೆ, ಪೇಪರ್ಸ್ ತುಂಡುಗಳು ಕಾಣಿಸಿದರೆ, ತಕ್ಷಣ ಅವನ್ನು  ಎತ್ತಿ ಹತ್ತಿರದ ಕಸದ ಬುಟ್ಟಿ,  ಅಥವಾ ಡ್ರಮ್ ನಲ್ಲಿ ಹಾಕುತ್ತಾರೆ. ಸಾಮಾನ್ಯವಾಗಿ  ಇಂತಹ ಪರಿವರ್ತನೆಯನ್ನು ನಮ್ಮ ಜನರಿಂದ ನಿರಿಕ್ಷಿಸಲು ಸಾಧ್ಯವಿಲ್ಲ !

ಆಲ್ಲವೇ ! ಏನಂತಿರಾ ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):