ಬುದ್ಧನಾಗುವ ಹೊತ್ತು!

1
ಗೆಳತೀ...
ಕ್ಷಮಿಸು...
ಇ೦ದು ನನಗೆ ಬುದ್ಧನ ಜ್ಞಾನೋದಯದ ಹೊತ್ತು.
ಅ೦ದು
ನಿನ್ನ ಪ್ರೇಮದ ಮಹಾಪೂರದಲ್ಲಿ
ಈ ಜಗತ್ತೇ ಮಾಯೆ
ನಿನ್ನ ಹೊರತು ಜಗವೆಲ್ಲವೂ ಶೂನ್ಯ ನಿಸ್ಸಾರ.
ಹೆಣ್ಣಿನ ಬಿಸಿ ಸ್ಪರ್ಶ ಪ್ರೇಮ ಸನಿಹ ಒ೦ದೇ
ಬದುಕಿನ ಸಾರವೆ೦ದು ತಿಳಿದ
ನನಗೆ ಈಗ ಬುದ್ಧನಾಗುವ ಹೊತ್ತು.
ನಿನ್ನೆಲ್ಲ ಪ್ರೇಮ ಬಿಸಿ ಸುಖವನ್ನೂ ಮೀರಿದ ಸುಖ
ಈ ಜಗತ್ತಿನಲ್ಲಿದೆ ಎ೦ಬ ಅರಿವು
ನನ್ನನ್ನು ದಿಗ್ಭ್ರಮೆ ಮಾಡಿದೆ ಗೆಳತೀ,
ಇದು ಅನಿವಾರ್ಯ
ನೀ ನನ್ನ ತೊರೆದು
ಬೇರೊಬ್ಬನ ಸ೦ಗಕ್ಕೆ ಹಾತೊರೆದು ಹೊರಟಾಗ
ಇದು ನನಗೆ ಅನಿವಾರ್ಯ ಗೆಳತೀ.
ಈಗ ಈ ಬದುಕೆಲ್ಲವೂ ನಿರಾಳ
ಬುದ್ಧ ಅದು ಹೇಗೆ ಅ೦ದು ಮೌನವಾಗಿ ನಕ್ಕಿದ್ದ ಎ೦ಬುದು
ನನಗೆ ಈಗ ಮೆಲ್ಲಗೆ ಅರಿವಾಗುತ್ತಿದೆ.
ಹೋಗು, ಸುಖವಾಗಿರು ಗೆಳತೀ ನೀನು ಹೋದೆಡೆ.
ಹಾಗೆಯೇ ನಾನೂ..

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶುದ್ದೋದನನಿಗೆ ತನ್ನ ಸ್ವಂತ ಕಷ್ಟಗಳು ಮಾನಸಿಕ ವ್ಯಥೆಗಳು ಯಾವುದು ಕಾಡಿರಲಿಲ್ಲ ಜಗತ್ತಿನಲ್ಲಿ ವ್ಯಾಪಿಸಿದ ಅಜ್ಞಾನ ಅವಿದ್ಯೆ ಸಾಂಸಾರೀಕ ವ್ಯಥೆಗಳು ಬುದ್ದನನ್ನಾಗಿಸಿದವು ನಮ್ಮವು ಕೂಪಮಂಡೂಕದ ಕಷ್ಟಗಳು ವ್ಯಥೆಗಳು ಕರೆದರು ಅದನ್ನು ಮಾಯೆಯೆಂದು ಹೆಣ್ಣೊಬ್ಬಳು ನಮ್ಮನ್ನು ತೊರೆದಾಗ ಅದು ಅಭಾವವೈರಾಗ್ಯವಾದಿತು ಅಷ್ಟೆ ಅದು ಮತ್ತೊಂದು ಹೆಣ್ಣು ವರುವ ತನಕ, ಹಾಗಾಗಿಯೆ ನಾವು ಎಂದು ಬುದ್ದನಾಗಲಾರೆವು ಬಹುಷಃ ಶಂಕರರ ಭಜೆ ಗೋವಿಂದಂ ಹೆಚ್ಚು ಪ್ರಸ್ತುತವಾದೀತು ! ಕ್ಷಮಿಸಿ ಇದು ನಿಮ್ಮ ಕವನದ ಟೀಕೆಯಲ್ಲ ಆದರೆ ಹೆಣ್ಣಿನ ಪ್ರೀತಿಯ ದಿಕ್ಕಾರಕ್ಕು ಬುದ್ದನ ಜ್ಞಾನೋದಯಕ್ಕು ಏಕೊ ಸಂಭದವಿಲ್ಲವೇನೊ ಅನ್ನಿಸಿತು ಹಾಗಾಗಿ ಬರೆದೆ -ಪಾರ್ಥಸಾರಥಿ

ಪಾರ್ಥರವರು ತಿಳಸಿರುವಂತೆ ಬುದ್ದ ಎಲ್ಲವೂ ಅವನ ಬಳಿ ಇದ್ದಾಗ ವೈರಾಗ್ಯದಿಂದ ಜ್ಞಾನೋದಯ ಪಡೆಯಲು ಹೊರಟ, ಆದರೆ ಈ ಕವನದಲ್ಲಿ ಗೆಳತಿ ಬೇರೊಬ್ಬರ ಸಂಗ ಬಯಸಿದ ಕಾರಣ ಬುದ್ದನಾಗಲು ಹೊರಟಂತಿದೆ ಇಲ್ಲಿ ಬುದ್ದನಿಗಿಂತ ದೇವದಾಸ ಎಂದರೆ ಸಮಂಜಸ ಎನಿಸುತ್ತದೆ ಅಲ್ಲವೆ ಇದು ನನ್ನ ಅಭಿಪ್ರಾಯ ಅಷ್ಟೆ ಒಟ್ಟಿನಲ್ಲಿ ಕವನ ಚನ್ನಾಗಿದೆ