ಬಿ ಜಿ ಎಲ್ ಸ್ವಾಮಿಯವರ 'ದೌರ್ಗಂಧಿಕಾಪಹರಣ'

Taxonomy upgrade extras: 

ಪ್ರತಿಕ್ರಿಯೆಗಳು

ಹಾ! ಹಾ! ತುಂಬಾ ಚೆನ್ನಾಗಿದೆ ಈ ಒಂದೆರಡು ಸಾಲುಗಳೇ ಇಷ್ಟು ಹಾಸ್ಯಭರಿತವಾಗಿದೆ ಅಂದ್ರೆ ಪೂರ್ಣ ಪುಸ್ತಕ ಹೇಗಿರಬೇಕು? ನಾನು ಕೊಂಡು ಓದೇ ಓದ್ತೀನಿ. ಇದೇ ತರಹ ಚೆನ್ನಾಗಿ ತಿಂದು ಗಬ್ಬು ವಾಸನೆ ಬಿಟ್ಟ ಬಗ್ಗೆ ಸುಧಾದಲ್ಲಿ ಒಂದು ಹಾಸ್ಯ ಓದಿದ್ದೆ. ಯಾವುದು ಅಂತ ಜ್ಞಾಪಕ ಬರ್ತಿಲ್ಲ. ಬಹುಶ: ಅ.ರಾ.ಮಿತ್ರ ಅವರದ್ದಿರಬೇಕು. ಢರ್ರಂ ಭುರ್ರಂ ಝೇಂಕಾರ ಅಂತ ಹೆಸರಿಸಿದ್ದಾರೆ. ಬಿಜಿಎಲ್ ಅವರ ಹಸುರು ಹೊನ್ನು ಕೂಡಾ ಹಾಸ್ಯ ಭರಿತವಾಗಿದೆ ಜೊತೆಗೆ ಸಸ್ಯಶಾಸ್ತ್ರದ ಬಗ್ಗೆ ಒಳ್ಳೆಯ ಮಾಹಿತಿ ಕೊಡುತ್ತದೆ. ಚಿಕ್ಕದಾಗಿ ಚೊಕ್ಕದಾಗಿ ಇಲ್ಲಿ ತಿಳಿಯಪಡಿಸಿದ್ದೀರಿ. ತವಿಶ್ರೀನಿವಾಸ

ಪುಸ್ತಕದ ಬಗ್ಗೆ ಬರೆದಿದ್ದು ಚೆನ್ನಾಗಿದೆ. ನಾನು ದಶಕಗಳ ಹಿಂದೆ ಈ ಪುಸ್ತವನ್ನು ಓದಿದ್ದೆ. ಬಿಜಿಎಲ್ ಸ್ವಾಮಿ ನನಗೆ ತುಂಬ ಇಷ್ಟವಾದ ಲೇಖಕರಲ್ಲೊಬ್ಬರು. ನಾನು ಅವರ ಬಹುತೇಕ ಎಲ್ಲ ಪುಸ್ತಕಗಳನ್ನು ಓದಿದ್ದೇನೆ. ಮೈಸೂರಿನಲ್ಲಿ ಎಂಎಸ್‌ಸಿ ಕಲಿಯುತ್ತಿದ್ದಾಗ ದೊಗಳೆ ಚಡ್ಡಿ ಹಾಕಿಕೊಂಡು ಓಡಾಡುತ್ತಿದ್ದ ಅವರನ್ನು ಹತ್ತಿರದಿಂದ ಕಂಡಿದ್ದೆ. ಆದರೆ ಆಗ ಅವರನ್ನು ಮಾತನಾಡಿಸಲು ಧೈರ್ಯವಿರಲಿಲ್ಲ! ಸಿಗೋಣ, ಪವನಜ

ಸ್ವಾಮಿ ಅವರ ಈ ಪುಸ್ತಕ ಇನ್ನು ಓದಿಲ್ಲ. ನಿಮ್ಮ ವಿಮರ್ಶೆ ಓದಿದ ಮೇಲೆ, ನಾನು ಓದಬೇಕಾಗಿರುವ ಪುಸ್ತಕಗಳ ಪಟ್ಟಿಯಲ್ಲಿ ಇದು ಕೂಡ ಸೇರುತ್ತದೆ :)

ತಪ್ಪದೇ ಓದಿ! ಇವರ ಪುಸ್ತಕಗಳು asterix adventures ಓದಿದ ಹಾಗೆ, ಪ್ರತಿ ಪುಟದಲ್ಲೂ ತಮಾಷೆ ಇರುತ್ತೆ ;)

"ಹಸಿರು ಹೊನ್ನು" ಇವರ ಮೇರು ಕೃತಿ.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಾನು ೧೦ನೆ ಕ್ಲಾಸ್ ಓದುವಾಗ ಹಸಿರು ಹೊನ್ನು ಪುಸ್ತಕದ ಒಂದು ಅಧ್ಯಾಯ ನಮ್ಮ ಪಠ್ಯದಲ್ಲಿ ಇತ್ತು.ಅದಲ್ಲದೆ ಅವರ ಕಾಲೇಜು ರಂಗ, ಪ್ರಾಧ್ಯಾಪಕನ ಪೀಠದಲ್ಲಿ ಓದಿದ್ದೇನೆ. ನನ್ನ "ಪರ್ಸನಲ್ ಫೇವರಿಟ್" ಕಾಲೇಜು ರಂಗ. ತುಂಬ ಇಶ್ಟವಾದ ಕ್ಯಾರಕ್ಟರ್ ಕರಟಕ,ದಮನಕ.

ಅಧ್ಯಾಯದ ಹೆಸರು ನೆನಪಿಲ್ಲ. ಆದರೆ ಅದರಲ್ಲಿ ಸಾರ್ಕೆಂಡ್ರದ ಉಲ್ಲೇಖ ಇದ್ದದ್ದು ನೆನಪಿದೆ.
ಸ್ವಾಮಿಯವರ ವಿಧ್ಯಾರ್ಥಿಗಳಲ್ಲಿ ಕೆಲವರು ಆ ಹೆಸರು (ಸಾರ್ಕೆಂಡ್ರ ಇರ್ವಿಂಗ್ ಬೇಲಿಯೆಯ್)ಹೇಳಲು ಪಡುವ ತಾಪತ್ರಯಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ (ನಾನು ಸರಿಯಾಗಿ ಬರೆದಿದ್ದೇನಂದುಕೊಂಡಿದ್ದೇನೆ :)).