ಬಿಟ್ಟುಬಿಡಿ ಸಿಗರೇಟು...! (ಬಿಟ್ಟು ಬೀಡಿ ಸಿಗರೇಟು..)

5

ಸಂಪದಿಗ ಮಿತ್ರರೆ, ವಾರದ ಕೊನೆಗೊಂದು ಸಂದೇಶ ಕೊಡುವ ಬಯಕೆಗೆ ಹುಟ್ಟಿದ್ದು ಈ ಸರಳ ಕವನ. ವಾರಾಂತ್ಯದಲಿ ಆಲೋಚನೆಗಿಳಿಸಿ, ಚಿಂತನೆಗೆ ಹಚ್ಚಿಸಿ ಬೇಗನೆ ಒಂದು ನಿರ್ಧಾರಕ್ಕೆ ತಲುಪಿಸಲು ಪ್ರೇರಕವಾಗಲೆಂದು ಆಶಯ :-)

(ಕಾವ್ಯ ಹಾಸ್ಯಮಯವಾಗಿದ್ದರೂ ಸಂದೇಶ ಸೀರಿಯಸ್ಸಾಗಿದೆಯೆಂದು ಕೊಂಡಿದ್ದೇನೆ! ಹಾಗೆಯೆ ಈ ನಿರ್ಧಾರಕ್ಕೆ ತಲುಪಿದವರೆಲ್ಲ ಆ ಮೂಲಕ ಉಳಿಸಿದ ಹಣವನ್ನು 'ಸಂಪದ ' ಫಂಡಿಗೆ ಕಟ್ಟಿಬಿಡಿ - ಸಂಪದದ ಏಳಿಗೆಗೆ ಉಪಯೋಗಿಸಲು ಸಾಧ್ಯವಾಗುವಂತೆ - ಅ ಚಾಳಿ ಬಿಟ್ಟಂತೆಯು ಆಯ್ತು, ಸಮಾಜ ಸೇವೆಯೂ ಆಯ್ತು :-) - ನಾಗೇಶ ಮೈಸೂರು

ಬಿಟ್ಟುಬಿಡಿ ಸಿಗರೇಟು...! (ಬಿಟ್ಟು ಬೀಡಿ ಸಿಗರೇಟು..)
-----------------------------------------------------

ಬಿಟ್ಟುಬಿಡಿ ಸಿಗರೇಟು ಕೊಟ್ಟೇ ಎದುರೇಟು
ಅಪಾಯದ ಬಿಸ್ಕೆಟ್ಟು ಇನ್ನು ಯಾಕಿಷ್ಟು ಲೇಟು ?
ಅಂಟಿಕೊಂಡಷ್ಟು ಬೆನ್ನು ಬಿಡದ ಭೇತಾಳ
ಸತಿ ಸುತ ಪುತ್ರಿ ಕೈಲುಗಿಸಿಕೊಳ್ಳೊ ಮನೆ ಹಾಳ!

ಗಾಂಧಿ ಹೇಳಿದರೆಂದು 'ಕೆಟ್ಟದನೆಲ್ಲಾ ಸುಟ್ಟಾಕಿ'
ಹೀಗೆ ಸುಡುವುದು ಸರಿಯೆ ಸಿಗರೇಟಿನ ಪಟಾಕಿ?
ಅವರೆಂದರು ಸುಡು - ಬರಿ ಕೆಟ್ಟ ವಸ್ತುಗಳಷ್ಟೆ
ಸಿಗರೇಟೇನೊ ಕೆಟ್ಟದು ಸರಿ, ದೇಹಕೇಕೆ ಜಾಗಟೆ!

ಪ್ರಾಯ ಹುಡುಕಾಡುತ ಪ್ರೀತಿ ಏನೆಲ್ಲ ಪಜೀತಿ
ಸಿಗುವತನಕ ಕಾಯಲು ಬೇಕೊಬ್ಬ ಜತೆಗಾತಿ
ಅವಳು ಸಿಕ್ಕಲಿ ಇವಳನು ಬಿಡುವೆನೆಂದ ಸರಕ
ಸಿಕ್ಕಮೇಲಿಬ್ಬರು ಹೆಂಡಿರು, ತೋರರಲ್ಲಾ ಮರುಕ!

ಚಿಕ್ಕ ವಯಸಲಿ ಕದ್ದೂ ಕದ್ದೂ ಸೇದುವ ಚಟಕೆ
ಮೊಳೆತಾಗ ಕಾಸು ಮೀಸೆ ಬಯಲಾಗೆ ಹಠಕೆ
ಅವರಿವರೆಂದರೆಂದು ಬಿಟ್ಟು ಮತ್ತೆ ಹಿಡಿದ ಏಡಿ
ನೀವೆ ಬಿಟ್ಟುಬಿಡಿ ಯಾರೇಕೆ ಹೇಳಬೇಕು ನೋಡಿ!

ಹೇಗೊ ಏನೊ ಸಹವಾಸ ಕಲಿತಿದ್ದಾಯ್ತು ನರಕ
ಸ್ನೇಹದ ಗಂಟೆಗಳೆಲ್ಲ ಉರುಳಿದ್ದು ಕತ್ತಲೆ ಬೆಳಕ
ಯುವ ದೇಹವಲ್ಲ ತಡೆಯದಲ್ಲ ಪ್ರಾಯದ ಕಾಯ
ಅಲ್ಲಸಲ್ಲದ ರೋಗಕೆ ಮೊದಲೆ ಬಿಟ್ಟುಬಿಡೆಯಾ? 

ಬಿಟ್ಟುಬಿಡಿ ಸಿಗರೇಟು ಹೇಗೂ ಬಲು ತುಟ್ಟಿಯ ರೇಟು
ಈಗಿನ ಹೈ ಟೆಕ್ಕಾಸ್ಪತ್ರೆಯ ಚಿಕಿತ್ಸೆಗಳೆ ಎಡವಟ್ಟು
ಕೆಮ್ಮು ಜ್ವರ ಟೆಸ್ಟಿಗೆ ಜೀವ ಹಾರಿ ಸರ್ಜರಿಗಿನ್ನು ಭರ್ಜರಿ
ಜತೆ ಸೇರಿದರೆ ಧೂಮಪಾನ ದಿನ ಆಸ್ಪತ್ರೆಯ ಹಾಜರಿ!

ಹ್ಯಾಬಿಟ್ಟು ಸ್ಟೈಲು ಸ್ಟ್ರೆಸ್ಸು ನೆಪವೆಲ್ಲ ಪಕ್ಕಕಿಡೆ ಸಮಯ
ನೆಗೆದುಬಿದ್ದರು ಹೂಳಲು ಉಳಿತಾಯಕಿಳಿಯೊ ಭಯ
ನಾಳೆ ಗೀಳೆ ಬೇಡ ನೆನೆದುಕೊಂಡೆ ಸಂಸಾರದ ಮಂದಿ
ಬಿಟ್ಟುಬಿಡಿ ಈಗಿನಿಂದೆ ಸಿಗರೇಟ ಸಹವಾಸವಾಗಿ ಶುದ್ಧಿ!

 

- ನಾಗೇಶ ಮೈಸೂರು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

"ನಾಳೆ ಗೀಳೆ ಬೇಡ ನೆನೆದುಕೊಂಡೆ ಸಂಸಾರದ ಮಂದಿ ಬಿಟ್ಟುಬಿಡಿ ಈಗಿನಿಂದೆ ಸಿಗರೇಟ ಸಹವಾಸವಾಗಿ ಶುದ್ಧಿ!" ಇದೋ ಬಿಟ್ಟೆ .... .! ಸಂದೇಶ ಕಳಕಳಿ ಚೆನ್ನಾಗಿದೆ .. ಏನೋ ಗೀಚಿದೆ ನೋಡಿ , ನಮ ನಮೂನಿ ಸಿಗರೇಟು ಘಾಟು -ಮೋಟು -ಚೋಟು ಬಿಡುತಿದ್ರೆ ಹೀಗೆ ಹೊಗೆ ಒಡಲಲ್ಲಿ ಏಳ್ವದು ಧಗೆ ಕೆಲ ಸಿಗರೆಟ್ ಘಮ ಘಮ ಕರೆಸ್ಕೊಳ್ವನು ಆ ಯಮ..!! ಶುಭವಾಗಲಿ \।/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಗಳೆ ಗೀಚಿದ್ದೆ ಚೆನ್ನಾಗಿದೆ! ಗೀಚಿದ್ದನ್ನ ಸ್ವಲ್ಪ ಆಚೀಚೆ ಎಳೆದು ತಡಕಾಡಿಸಿಬಿಟ್ಟರೆ, ಬೊಂಬೊಟ್ ಕಾವ್ಯವೆ ಆಗಿಬಿಡುತ್ತದೆ! ನಿಮ್ಮೆರಡು ಬೊಂಬೋಟ್ ಸಾಲಿಗೆ ನನ್ನ ಮತ್ತೆರಡು ಸಾಲು ಸೇರಿಸಿದ್ದೇನೆ ನೋಡಿ :-) - ನಾಗೇಶ ಮೈಸೂರು (ನಿಮ್ಮ ಸಾಲು) <<<<<ಕೆಲ ಸಿಗರೆಟ್ ಘಮ ಘಮ ಕರೆಸ್ಕೊಳ್ವನು ಆ ಯಮ..!!>>>>>> ಅದು ಗೊತ್ತಿದ್ದೂ ಏಕೆ ಶ್ರಮ ಬಿಟ್ಟು ಬಿಡುವುದೆ ಒಳ್ಳೆಯ ಕ್ರಮ!! (ನಾನೀಗ ಸೇರಿಸಿದ್ದು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಲ್ಲಿ , ತಿರುಗಿಸಿ ಬಿಡಬೇಡಿ ಅನ್ನುವ ವಾಕ್ಯವನ್ನು ನನ್ನ ಸ್ನೇಹಿತನೊಬ್ಬ ನಲ್ಲಿ ತಿರುಗಿಸಿ, ಬಿಡಬೇಡಿ ಎಂದು ಓದುತ್ತಿದ್ದ ನಿಮ್ಮ ಸಿಗರೇಟ್ .... ಸಹಾ ಹಾಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಾ ಸಾರ್, ಎಲ್ಲಾ ಆ ಕಾಮ ಹಾಕುವುದರಲ್ಲಿದೆಯೆಂದಾಯ್ತು! ಸಿಗರೇಟಿಗು ಅದೆ ರೀತಿ - 'ಕಲಿತುಬಿಡಬೇಕು' ಅನ್ನು ಭಲ್ಲೆಯವರು ಕಲಿತು (ನಂತರ) 'ಬಿಡಬೇಕು' ಅನ್ನುತ್ತಿದ್ದಾರಲ್ಲ ಹಾಗೆ! (ಅವರ ಕಾಮೆಂಟು ಕೆಳಗಿದೆ ನೋಡಿ) - ನಾಗೇಶ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಗೂ ಬಿಟ್ಟುಬಿಡಬೇಕೆಂದಿದೆ .... ಆದರೆ ಬಿಡೋ ಮುನ್ನ ಶುರು ಹಚ್ಚಿಕೊಳ್ಳಬೇಕಲ್ವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಲ್ಲೆಯವರೆ ನಿಮ್ಮದು ಸೂಪರ್ ಎಂಟ್ರಿ! ಪಶ್ಚಾತ್ತಾಪ ನಾಟಕದಲ್ಲಿ ಮಾ.ಹಿರಣ್ಣಯ್ಯನವರು , ಬಳಿದು ಆಚೆ ಹಾಕಿದ ಕಸವನ್ನ ಮತ್ತೆ ಒಳಗೆ ತಂದು ಗುಡಿಸಿ ಹೊರಹಾಕುವ ಐಡಿಯ ಕೊಡುತ್ತಾರಲ್ಲ - ಅದರ ನೆನಪಾಯ್ತು ನಿಮ್ಮ ಮಾತಿಂದ! ಏನೆ ಆಗಲಿ ಈಗ ಹೊಸದಾಗಿ ಕಲಿಯುವುದು ಬೇಡ - ಕಲಿಯಲೆ ಬೇಕೆಂದಿದ್ದರೆ ಸ್ವಲ್ಪ ಆ ಸುಬ್ಬನಿಗೆ ಜಾಡಿಸಿ:-) ಅಂದ ಹಾಗೆ ಸ್ವಲ್ಪ ದಿನದಿಂದ ನಿಮ್ಮ ಬರಹ ಕಾಣಿಸಲಿಲ್ಲ, ಬಿಜಿಯೆಂದು ಕಾಣುತ್ತದೆ. ಫಾದರ್ಸ್ ಡೆ ದಿನ ಸಾಂಧರ್ಭಿಕವಾಗಿ ನಿಮ್ಮ 'ಅಂತ್ಯ ಕ್ರಿಯೆ' ಕಥೆ ನೆನಪಾಗಿತ್ತು...:-) - ನಾಗೇಶ ಮೈಸೂರು ಪಾರ್ಥಾ ಸಾರ್, ಎಲ್ಲಾ ಆ ಕಾಮ ಹಾಕುವುದರಲ್ಲಿದೆಯೆಂದಾಯ್ತು! ಸಿಗರೇಟಿಗು ಅದೆ ರೀತಿ - 'ಕಲಿತುಬಿಡಬೇಕು' ಅನ್ನು ಭಲ್ಲೆಯವರು ಕಲಿತು (ನಂತರ) 'ಬಿಡಬೇಕು' ಅನ್ನುತ್ತಿದ್ದಾರಲ್ಲ ಹಾಗೆ! - ನಾಗೇಶ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಿಗರೇಟಿನ ಸೀಕ್ರೆಟ್ಟು ಸೇದುವವರಿಗೆ ಗೊತ್ತು, ಗತ್ತಿಗಾಗಿ ಶುರು ಹಚ್ಚಿ ಪುಸು ಪುಸು ಹೊಗೆ ಬಿಟ್ಟು ಆಮೇಲೆ ಬುಸು ಬುಸುಗುಡುತ್ತಾ ಡಾಕ್ಟರರ ಬಳಿ ಹೋಗುವುದನ್ನು ನೋಡುವುದೇ ಗಮ್ಮತ್ತು!! ನಾನಂತೂ ಬಿಟ್ಟು 40 ವರ್ಷಗಳಾದವು. ಸೇದಿದ್ದು 1-2 ವರ್ಷಗಳು ಅಷ್ಟೆ!! ಹುಡುಗಾಟದ ಆ ದಿನಗಳನ್ನು ನೆನಪಿಸಿಕೊಂಡೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅಲ್ಲಿಗೆ ಸಿಗರೇಟನ್ನು ಚೆನ್ನಾಗಿ 'ಸೇದಿ' (ಬಿಟ್ಟು) 'ಬಿಟ್ಟಿರಿ' ಅಂತಾಯ್ತು - ನಾಲ್ಕು ದಶಕಗಳಿಂದ ದೂರವಿದ್ದಿದ್ದು ಮಾತ್ರ ಮಹಾನ್ ಸಾಧನೆಯೆ!  - ನಾಗೇಶ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.