ಬಾಣಂತನ ಅಥವಾ ಬಾಣಂತಿ ಆರೈಕೆ

2.958335
ಓದುಗರ ಗಮನಕ್ಕೆ: ಈ ಬರಹ ನನ್ನದಲ್ಲ, ಇದು ಒಂದು ಮಾಹಿತಿ ಸಂಗ್ರಹ. ಹಲವಾರು ಲೇಖನ ಹಾಗು ವೆಬ್ಸೈಟ್  ಗಳಿಂದ ಸಂಗ್ರಹಿಸಿದ್ದು.
 
ಬಾಣಂತನ ಅಥವಾ ಬಾಣಂತಿ ಆರೈಕೆ - ಈ ಲೇಖನದ ಉದ್ದೇಶ - ಓದುಗರಿಗೆ ಬಾಣಂತನದ ಹಳೆಯ ಪದ್ಧತಿಗಳ ಒಂದು ಪಟ್ಟಿ ಒದಗಿಸುವ ಪ್ರಯತ್ನ. ವೈಜ್ಞಾನಿಕ / ಅವೈಜ್ಞಾನಿಕ ಸರಿ/ತಪ್ಪು ಎಂಬುದರ ಬಗ್ಗೆ ಚರ್ಚೆ ಇಲ್ಲಿ ಬೇಡವೆಂದು ವಿನಂತಿಸುತ್ತೇನೆ.
 
೧. ನವಜಾತ ಶಿಶುವನ್ನು ಬೆಳಗಿನ ಬಿಸಿಲಿಗೆ ಹಿಡಿಯುವುದು - ಮಗುವಿನ ಚರ್ಮಕ್ಕೆ ಹಾಗು ತ್ವಚೆಗೆ ಒಳ್ಳೆಯದು ಎಂಬ ಕಾರಣದಿಂದ.  
೨. ಬಾಣಂತಿಯರು  ಹೆರಿಗೆಯಾದ ೨೦ / ೩೦ ದಿನ ನೀರನ್ನು ಕುಡಿಯಬಾರದು, ಆತಿ ಹೆಚ್ಚು ಎಂದರೆ ದಿನಕ್ಕೆ ಒಂದು ಲೋಟಕ್ಕೆ ಸೀಮಿತಗೊಳಿಸಬೇಕು 
೩.  ಬಾಣಂತಿಯರು  ಹಾಸಿಗೆಯ / ದಿಂಬಿನ ಅಡಿಯಲ್ಲಿ ಪೊರಕೆ ಕಡ್ಡಿ ಇಟ್ಟರೆ ದುಷ್ಟಶಕ್ತಿಗಳಿಂದ ರಕ್ಷೆ ಎಂಬ ನಂಬಿಕೆ
೪. ಮಗುವಿಗೆ ದೊಡ್ಡದಾಗಿ ಅಥವಾ ವಿಕಾರವಾಗಿ ಕಾಡಿಗೆ ಬೊಟ್ಟು ಇಟ್ಟರೆ ದೃಷ್ಟಿ ಆಗುವುದಿಲ್ಲ ಎಂಬ ನಂಬಿಕೆ
೫. ಹಸಿ ಬಾಣಂತಿ ತಿಂಗಳವರೆಗೆ ನೆಲದ ಮೇಲೆ ಕೂರುವಾಗ ಸುಖಾಸನದಲ್ಲಿ (ಚಕ್ಕ್ಲಮ್ಬಕ್ಲು) ಕೂರಬಾರದು
೬. ಬಾಣಂತಿ ಓದಬಾರದು, ಬರೆಯಬಾರದು, ಹೊಲಿಯಬಾರದು, ಯಾವುದೇ ಕಸೂತಿ ಕೆಲಸ ಮಾಡಬಾರದು - ಕಣ್ಣಿಗೆ ಹಾಗು ಮನಸ್ಸಿಗೆ ವಿಶ್ರಾಂತಿ ಬೇಕೆಂಬ ಕಾರಣದಿಂದ
೭. ಹೆರಿಗೆಯಾಗಿ ಎರಡು / ಮೂರು ವಾರಗಳ ವರೆಗೆ ಬಾಣಂತಿ ಅವಶ್ಯಕ ಕೆಲಸಗಳಿಗೆ ಹೊರತಾಗಿ, ಜಾಸ್ತಿ ನಡೆದಾಡಬಾರದು
೮. ಮಗುವಿಗೆ ಹಾಲುಡಿಸುವ ಸಮಯವಲ್ಲದೆ ಜಾಸ್ತಿ ಕೂತಿರಬಾರದು, ಮಲಗಿರುವುದು ಉತ್ತಮ ( ಬೆನ್ನು ನೋವು ಬರಬಹುದೆಂಬ ಕಾರಣದಿಂದ)
೯. ಬಾಣಂತಿ ಕೋಣೆಯಲ್ಲಿ ಬೆಳಕು ಕಮ್ಮಿ ಇರುವ ಹಾಗೆ ವ್ಯವಸ್ತೆ ಮಾಡಿದರೆ ಒಳಿತು - ವಿಶ್ರಾಂತಿಗೆ ಅನುಕೂಲ ಅನ್ನುವುದು ಕಾರಣ 
೧೦. ಬಾಣಂತಿಯರು ಸುಮಾರು ಒಂದೂವರೆ  ತಿಂಗಳ ತನಕ ಉಪ್ಪುಖಾರ ಗಳನ್ನು ಸೇವಿಸಬಾರದು 
೧೧. ಬಾಣಂತಿಯರು ತೆಂಗಿನಕಾಯಿ ತಿನ್ನಬಾರದು 
೧೨. ಬಾಣಂತಿಯರು ಹೊಟ್ಟೆ ಕಟ್ಟಿಕೊಳ್ಳಬೇಕು - ಹೊಟ್ಟೆ ಉಬ್ಬಿರುವುದನ್ನು ಕಡಿಮೆ ಮಾಡಲು ಸಹಾಯವಾಗುವುದು ( ಹಳೆಯ ಸೀರೆ ಯನ್ನು ಸುತ್ತಿಕೊಳ್ಳಬಹುದು, ಇಲ್ಲದಿದ್ದರೆ ಇಗ BELT ಕೂಡ ದೊರೆಯುವುದು )
೧೩. ತುಂಬಾ ಮುಖ್ಯ - ಬೆಂಡೇಕಾಯಿ ತಿನ್ನಬಾರದು  - ಶೀತ ಆಗಬಹುದೆಂದು
೧೪.   ಹೆರಿಗೆಯಾಗಿ ೩೦ ದಿನ ತರಕಾರಿ ಬಳಕೆ ಮಾಡಬಾರದು - ಮೆಣಸಿನ ಸಾರು, ಸೊಪ್ಪಿನ ಸಾರು ( ದೊಡ್ದಿಪತ್ರೆ, ವಂದಲಗ ಇಂತ ಹಲವಾರು ಸೊಪ್ಪು ಒಳ್ಳೆಯದು)
೧೫. ಬಾಣಂತಿಯರಿಗೆ ಹೆಚ್ಚು ಕರಿಬೇವಿನ ಉಪಯೋಗ ಒಳ್ಳೆಯದು - ಕರಿಬೇವು ಚಟ್ನಿಪುಡಿ, ಕರಿಬೇವು ಚಟ್ನಿ ....
೧೬. ಬಾಣಂತಿ ಹಸಿಮೆಣಸಿನಕಾಯಿ ಹಾಕಿ ಮಾಡಿದ ಯಾವುದೇ ಆಹಾರ ಉಪಯೋಗಿಸಬಾರದು 
 
ಸ್ನೇಹಿತರೇ, ಇವುಗಳಲ್ಲದೆ ನಿಮಗೆ ತಿಳಿದಿರುವ - ನೀವು ಕೇಳಿರುವ ಬಾಣಂತಿ ಆರೈಕೆಯ ವಿಷಯಗಳನ್ನು ಈ ಪಟ್ಟಿ ಗೆ ಸೇರಿಸಿ ! 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ದೂರದ ದೇಶದಲ್ಲಿ ಹೊಸದಾಗಿ ತಾಯಿಯಗಿರುವ ನನ್ನ ತಂಗಿಗೆ ಈ ಪಟ್ಟಿ ಕಳುಹಿಸಲು ಗೂಗಲ್ ಸಹಾಯ ಮಹತ್ವದ್ದು. ಕನ್ನಡದಲ್ಲಿರುವ ಈ ಪಟ್ಟಿಯನ್ನು GOOGLE ಸರ್ಚ್ ಮೂಲಕ ಸುಲಭವಾಗಿ ಒಂದೇ ಕಡೆ ಲಭ್ಯ ಮಾಡುವ ಪ್ರಯತ್ನ ನನ್ನ ಈ ಪ್ರಕಟಣೆಯ ಮೂಲಕ ! - ನಂದೀಶ್ ಬಸವರಾಜು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಂದೀಶ್ ನನಗೆ ಆಶ್ಚರ್ಯ ಮೂಡಿಸಿರುವುದು ನೀವು ಈ ವಿಷಯ ಆರಿಸಿರುವುದು ಆದರೆ ಮನೆಯಲ್ಲಿರುವ ಅಜ್ಜಿಯರನ್ನು ಕೇಳಿದರೆ (ಕೆಲವು ಕಾಲದ ನಂತರ ಅದು ಅಸಾದ್ಯ) ಇನ್ನು ಉತ್ತಮ ಮಾಹಿತಿ ಒದಗಿಸಬಲ್ಲರು, ನಿಜಕ್ಕು ಅದನ್ನೆಲ್ಲ ಅವರಿಂದ ಅರಿತು ಸಂಗ್ರಹಿಸಬೇಕಾದ ಕೆಲಸವಾಗಬೇಕಾಗಿದೆ (ಇಲ್ಲದಿದ್ದಲ್ಲಿ ಅದಕ್ಕು ಅಮೇರಿಕದ ಕಾಪಿರೈಟ್ ಆಗಿಬಿಟ್ಟರೆ ಕಷ್ಟ) -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿ ರವರೆ, ಎಲ್ಲರಿಗೂ ಅಜ್ಜಿ ಜೀವಂತ ಇರುವ ಸೌಬಾಗ್ಯ ಇರಬೇಕಲ್ಲವೇ ? ಇಂದಿನ ನಾಗರೀಕ ಸಮಾಜದಲ್ಲಿ ಎಷ್ಟೋ ಜನರಿಗೆ ನಮ್ಮ ಬೆಂಗಳೂರಿನಂತಹ ಊರಿನಲ್ಲಿಯೇ ಹಳೆಯ ವಿಷಯಗಳ ಖಚಿತ ಮಾಹಿತಿ ಇರುವುದಿಲ್ಲ. ಹೊರದೆಶದಲ್ಲಿರುವಾಗ ಕೇಳುವುದೇ ಬೇಡ , ಇಂಟರ್ನೆಟ್ ನ ಉಪಯೋಗ ಅಲ್ಲಿ ಅವರ್ಣನೀಯ ! ...ಕನ್ನಡಲ್ಲೇ ಈ ಮಾಹಿತಿ ಇಂಟರ್ನೆಟ್ ನ ಸರ್ಚ್ ಮೂಲಕ ಲಭ್ಯ ಮಾಡುವ ನಿಟ್ಟಿನಲ್ಲಿ ನನ್ನ ಈ ಪ್ರಯತ್ನ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.