ಬಾಂದಳದ ಪುಷ್ಪ

5

ನನ್ನೆದೆಯ ಬಾಂದಳದ 
ಓ ನನ್ನ ಪುಷ್ಪವೇ 
ಬಾಡದಿರು  ಎಂದೂ ,
ನಾನೆಂದು ಬಿಡೆನು 
ಬಾಡಲು ನೊಂದು ... 
 
ನಾ ಹೋಗಲಿಲ್ಲ ಅರಸಿ 
ಸಕಲ ಪುಷ್ಪಗಳೊಳಗೆ . 
ನೀನಾಗೆ ಬಂದು ಸೇರಿದೆ,
ನನ್ನ ಮನ ನಿರಾಕರಿಸುವುದೇ 
ಮಲ್ಲಿಗೆಯೇ ತಾನಾಗಿ ಬಂದು ಸೇರಿದೊಡೆ 
 
ನೀ ಬಂದ ಮೇಲೆ ತಿಳಿದಿದು 
ನನಗು ಒಂದು ಮನಸಿದೆಯೆಂದು 
ಮನಸ ತೋರಿದ  ಪ್ರೀತಿಯ ಮನಸಿಗೆಂದು 
ಬಯಸುವೆ ಎಂದೆಂದೂ ನೋವಾಗಬಾರದೆಂದು 
 
                                         ಬೋ. ಕು .ವಿ 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.