ಬದುಕುವುದು ಹೇಗೆ ಮೀನು ನೀರಿಲ್ಲದೆ...

4.333335
ಬದುಕುವುದು ಹೇಗೆ ಮೀನು ನೀರಿಲ್ಲದೆ 
ಅಂತೆಯೇ ನಾ ಇನಿಯ ನೀನಿಲ್ಲದೆ; 
ಪರಿತಪಿಸುವ ಬೇಗೆ 
ಭರಿಸಿ ಬಾಳುವುದು ಹೇಗೆ?
ಬಿರಿದ ಹೂವಿಗೆ ಭ್ರಮರ ಹಾ-
ತೊರೆದು ಹೋಗುವ ಹಾಗೆ 
ಬೆರೆತು ಬಾಳುವ ಬಯಕೆ 
ಬರದೆ ಏತಕೆ ಹೋದೆ? 
ಸರಿದು ಹೋಗುವ ಸಮಯ 
ಮರಳಿ ಬಾರದು ಇನಿಯ!
ಮಳೆ ಬಿಲ್ಲ ಬಗೆ ಬಣ್ಣ ನಿನ್ನಲ್ಲಿದೆ 
ಅದನು ಬೆಳಗುವ ಬಾನು ನನ್ನಲ್ಲಿದೆ! 
-ಮಾಲು 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.