ಬದಲಾವಣೆಯ ಕತೆ

4.25

ಒಂದು ಬದಲಾವಣೆಯ ಕತೆ

ಅಪ್ಪ-ಮಗ ನದಿಯ ದಂಡೆಯ ಮೇಲೆ ನಿಂತಿದ್ದರು.ಸ್ವಲ್ಪ ದೂರದಲ್ಲಿ ಬಂಡೆಯ ಮೇಲೆ ಹುಡುಗನೊಬ್ಬ,'ನನ್ನ ತಮ್ಮ ನದಿಯಲ್ಲಿ ಮುಳುಗುತ್ತಿದ್ದಾನೆ.ಯಾರಾದರೂ ಕಾಪಾಡಿ' ಎಂದು ಕೂಗಿಕೊಳ್ಳುತ್ತಿದ್ದ.ಈ ಕೂಗು 'ಅಪ್ಪ-ಮಗ' ಇಬ್ಬರಿಗೂ ಕೇಳಿಸುತ್ತದೆ.ಮಗ ಸಹಾಯಕ್ಕೆಂದು ಧಾವಿಸಲು ಸಿದ್ಧನಾದ.ಅಷ್ಟೊತ್ತಿಗೆ ಅಪ್ಪ,'ಅ ಹುಡುಗನ ಮೈಬಣ್ಣ ನೋಡಿದರೆ ಅವನು ಕೆಳಜಾತಿಯವನಂತೆ ಕಾಣುತ್ತಾನೆ.ಅವರನ್ನು ನಾವು ಮುಟ್ಟುವುದು ಧರ್ಮವಲ್ಲ ನಮಗದು ನಿಷಿದ್ಧ'ವೆಂದು ಹೇಳುತ್ತಾನೆ.ಆದರೆ ಮಗ ಅದ್ಯಾವುದನ್ನು ಕೇಳಲು ತಯಾರಿರಲಿಲ್ಲ.ಅವನು ಈಗಿನ ಕಾಲದವನಾಗಿದ್ದರಿಂದ ಈ ಮುಟ್ಟದಿರುವುದು-ಮುಟ್ಟಿಸಿಕೊಳ್ಳದಿರುವ ಮನಸ್ಥಿತಿಯಿಂದ ಬಹಳ ದೂರ ಬಂದಿದ್ದ.ಅಂಗಿ ಕಳಚಿದವನೆ ಓಡಿಹೋಗಿ ಬಂಡೆ ಹತ್ತಿ ಅಲ್ಲಿಂದ ಜಿಗಿದು,ಸಾಯಲಿದ್ದ ಹುಡುಗನ ತಮ್ಮನನ್ನು ಬಚಾವು ಮಾಡುತ್ತಾನೆ.ಹೆಗಲ ಮೇಲೆ ಹಾಕಿ ದಡಕ್ಕೆ ಹೊತ್ತೂಕೊಂಡು ಬರುತ್ತಾನೆ.ಆದರೆ ಅಪ್ಪನ ಮುಖದಲ್ಲಿ ಎಂತದ್ದೊ ಅಸಹನೆಯ ಭಾವ.ಮಗ,'ಕಣ್ಣಮುಂದೆ ಹೋಗಲಿದ್ದ ಜೀವವನ್ನು ಉಳಿಸೋದಕ್ಕಿಂತ ದೊಡ್ಡ ಧರ್ಮ ಯಾವುದಿದೆ. .?ಅಪ್ಪ'ಎಂದ.ಅಪ್ಪನ ಬಳಿ ಉತ್ತರವಿರಲಿಲ್ಲ.ಮೌನವಾಗಿದ್ದರು.ಅವರ ಮೌನ ಮಗ ಮಾಡಿದ ಮಹತ್ಕಾರ್ಯವು ನಿಜವಾದ ಧರ್ಮವಾಗಿದೆ ಎಂಬುದನ್ನು ಒಪ್ಪಿರುವಂತೆ ಸೂಚಿಸಿದಂತಿತ್ತು.

ಹಿಂದೂ ಧರ್ಮ ಸದೃಢವಾಗಲು ಜಾತೀಯತೆ ನಮ್ಮ ಪೀಳಿಗೆಗೆ ಅಂತ್ಯವಾಗಲಿ.
#sklines

-@ಯೆಸ್ಕೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಲ್ಲರೂ ಹೀಗಿರುವುದಿಲ್ಲ. ಇಂತಹ ಅಪವಾದಗಳೂ ಇದ್ದಾವು! ಆದರೆ ಪ್ರಮಾಣ ನಗಣ್ಯವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.