ಬತ್ತಿದ ಕೂಡ್ಲಿಗಿ ಕೆರೆ : ಹೊರಬಂದ ಈಶ್ವರ ದೇವಾಲಯ

3.666665

 ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯೂ ಒಂದು. ೯೨.೫೬ ಹೆಕ್ಟೇರ್‌ನಷ್ಟು ನೀರಿನ ಹರವಿನ ಕ್ಷೇತ್ರವಿರುವ ದೊಡ್ಡಕೆರೆ ಮಳೆಗಾಲದಲ್ಲಿ ತುಂಬಿ ಭೋರ್ಗರೆದಾಗ ಪಟ್ಟಣದ ಜನತೆಯೆಲ್ಲ ಸಂತಸಪಡುತ್ತಾರೆ.

ಈ ಕೆರೆಯ ವೈಶಿಷ್ಟ್ಯವೆಂದರೆ ಈ ಕೆರೆಯ್ಲಲಿ ಕಾವಲು ಕಾಯಲೆಂದೇ ಹಿಂದಿನ ಪಾಳೆಗಾರರು ಕಾವಲಿನ ಜನರನ್ನಿಟ್ಟಿದ್ದರು. ಹೀಗಾಗಿ ಕೆರೆ ಕಾವಲು ಕಾಯುವವರು ಕೆರೆಯ ಪಕ್ಕದಲ್ಲಿ ವಾಸ್ತವ್ಯ ಹೂಡಿ, ಅದೇ ಒಂದು ಗ್ರಾಮವಾಗಿ, ಪ್ರಸ್ತುತ ಅದನ್ನು ‘ಕೆರೆ ಕಾವಲರ ಹಟ್ಟಿ’ ಎಂದು ಹೆಸರು ಬಂದಿದೆ. ಕೆರೆಯನ್ನು ಕಾವಲು ಕಾಯುವವರ ಹಟ್ಟಿಯೇ ಮುಂದೆ ಕೆರೆ ಕಾವಲರ ಹಟ್ಟಿಯೆಂಬ ಆಡು ಭಾಷೆಗೆ ರೂಪಾಂತರಗೊಂಡಿದೆ. ಇಂತಹ ಐತಿಹಾಸಿಕ ಹಿನ್ನೆಲೆಯಿರುವ ಕೆರೆಯ ಮಧ್ಯೆ ಈಶ್ವರನ ದೇವಸ್ಥಾನವಿದೆ. ಕೆರೆ ತುಂಬಿದಾಗ ಕೇವಲ ದೇವಸ್ಥಾನದ ಗೋಪುರದ ಭಾಗ ಮಾತ್ರ ಕಂಡು ಉಳಿದೆಲ್ಲವೂ ನೀರಿನಲ್ಲಿ ಮುಳುಗಿರುತ್ತದೆ. ಕೆರೆ ಬತ್ತಿದಾಗ ಮಾತ್ರ ಹೊರಕಾಣುವ ಈಶ್ವರ ದೇವಸ್ಥಾನ ಈಗಾಗಲೇ ಶಿಥಿಲಗೊಂಡಿದೆ. ಕುತೂಹಲದಿಂದ ದೇವಸ್ಥಾನವನ್ನು  ಕಾಣಲು ಹೋದರೆ, ದೇವಸ್ಥಾನದ ಸುತ್ತಲೂ ಪೌಳಿ ಇದ್ದುದು ಕಂಡುಬರುತ್ತದೆ. ನೆಲಮಟ್ಟದಿಂದ ೬ ಅಡಿ ಎತ್ತರವಿರುವ ದೇವಸ್ಥಾನದ ಒಳಗೆ ಕುಳಿತೇ ಒಳಹೋಗಬೇಕು. ದೇವಸ್ಥಾನವನ್ನು ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಮುಂಭಾಗದ್ಲಲಿ ಮೇಲ್ಗಡೆ ಚಕ್ರಾಕಾರದ ಕೆತ್ತನೆಯಿದೆ. ಗರ್ಭಗುಡಿಯ ಮುಂಭಾಗದ ಪ್ರಮುಖ ದ್ವಾರದ ಮೇಲೆ ಗಜಲಕ್ಷ್ಮಿಯ ಕೆತ್ತನೆಯಿದೆ. ದ್ವಾರದ ಕಂಬಗಳೂ ಕೆತ್ತನೆಯಿಂದ ಕೂಡಿವೆ. ದೇವಸ್ಥಾನ ಶಿಥಿಲಗೊಂಡಿರುವುದರಿಂದ, ನೀರಿನಲ್ಲಿ ಹಾಳಾಗಿರುವುದರಿಂದ ಕೆತ್ತನೆಗಳೆಲ್ಲ ಅಸ್ಪಷ್ಟವಾಗಿವೆ. ಗರ್ಭಗುಡಿಯ ಒಳಭಾಗದ್ಲಲಿ ಲಿಂಗುವನ್ನು ಕಾಣಬಹುದಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಶಿಥಿಲಗೊಂಡ ನಂದಿಯ ಮೂರ್ತಿಯಿದೆ. ಕೆರೆಯ ಮಣ್ಣೆಲ್ಲ ದೇವಸ್ಥಾನದ ಹೊರಗೆ, ಒಳಗೆ ನುಗ್ಗಿರುವುದಕ್ಕೇನೋ ದೇವಸ್ಥಾನ ಹೂತುಹೋದಂತಾಗಿದೆ. ದೇವಸ್ಥಾನವು ದೊಡ್ಡ ಬಂಡೆಗಳಿಂದ ಪಟ್ಟಿಕೆಯಾಕಾರದಲ್ಲಿ ನಿರ್ಮಾಣಗೊಂಡಿದೆ. ಶಿಥಿಲಗೊಂಡಿರುವುದರಿಂದಾಗಿ ಗೋಪುರದ ಕಲ್ಲುಗಳ ಜೋಡಣೆ ತಪ್ಪಿದಂತಾಗಿದೆ. 
ಏನೇ ಇರಲಿ ಕೆರೆ ಕಾವಲು ಕಾಯುವವರನ್ನು ನೇಮಕ ಮಾಡಿದ್ದ ಪಾಳೆಗಾರರು ಕೆರೆಯನ್ನು ಪವಿತ್ರ ಸ್ಥಳವೆಂದು ಪೂಜಿಸಲು ಬಹುಶ: ಈಶ್ವರನ ದೇವಸ್ಥಾನವನ್ನು ನಿರ್ಮಿಸಿರಬಹುದೆಂದು ಪಟ್ಟಣದ ಹಿರಿಯರು ಹೇಳುತ್ತಾರೆ. ಐತಿಹಾಸಿಕ ಗುರುತಾಗಿ ಉಳಿದಿರುವ, ಶಿಥಿಲಗೊಂಡಿರುವ ದೊಡ್ಡಕೆರೆಯ ಈಶ್ವರನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದಲ್ಲಿ ಕೆರೆಗೆ ಮತ್ತಷ್ಟು ಪ್ರಾಮುಖ್ಯತೆ ಬರಬಹುದೆಂಬುದು ಜನರ ಆಶಯ. ಕೆರೆ ಸಂಪೂರ್ಣ ಬತ್ತಿದೆ. ಆಸಕ್ತರು ದೇವಸ್ಥಾನವನ್ನು ನೋಡಬಹುದಾಗಿದೆ.
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಏನೇ ಇರಲಿ ಕೆರೆ ಕಾವಲು ಕಾಯುವವರನ್ನು ನೇಮಕ ಮಾಡಿದ್ದ ಪಾಳೆಗಾರರು ಕೆರೆಯನ್ನು ಪವಿತ್ರ ಸ್ಥಳವೆಂದು ಪೂಜಿಸಲು ಬಹುಶ: ಈಶ್ವರನ ದೇವಸ್ಥಾನವನ್ನು ನಿರ್ಮಿಸಿರಬಹುದೆಂದು ಪಟ್ಟಣದ ಹಿರಿಯರು ಹೇಳುತ್ತಾರೆ. ----------------------------------------------------------------------------- >>> ನಮ್ಮ ಕಡೆ ರಾಯಚೂರು ಜಿಲ್ಲೆ- ಸಿರವಾರ ಪಟ್ಟಣದಲ್ಲೂ ಒಂದು ಈಶ್ವರ ಗುಡಿ ಇದ್ದು ಗೋಡೆ ಮತ್ತು ಚತ್ತು ಬಹುತೇಕ ದೊಡ್ಡ ದೊಡ್ಡ ಕಲ್ಲುಗಳನ ಉಪಯೋಗಿಸಿ ಕಟ್ಟಿರುವರು, ಈಗ ನೀವು ಹೇಳಿದ್ದು ಕೇಳಿದ ಮೇಲೆ ನನಗೆ ಎಲ್ಲ ಈಶ್ವರ ಗುಡಿಗಳನನ ದೊಡ್ಡ ದೊಡ್ಡ ಕಲ್ಲುಗಳನ್ನ ಉಪಯೋಗಿಸಿ ಕಟ್ಟಿರುವರೇನೋ? ಅನಿಸುತ್ತಿದೆ... ಐತಿಹಾಸಿಕ ಗುರುತಾಗಿ ಉಳಿದಿರುವ, ಶಿಥಿಲಗೊಂಡಿರುವ ದೊಡ್ಡಕೆರೆಯ ಈಶ್ವರನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದಲ್ಲಿ ಕೆರೆಗೆ ಮತ್ತಷ್ಟು ಪ್ರಾಮುಖ್ಯತೆ ಬರಬಹುದೆಂಬುದು ಜನರ ಆಶಯ. >>> ಜನರ ಮನಾದಾಸೆ ಬೇಗ ಈಡೇರಲೀ ಜನ ಪ್ರತಿನಿಧಿಗ್ಲೂ ಈ ನಿಟ್ಟಿನಲ್ಲಿ ಗಮನ ಹಾರಿಸಲಿ.. ಸಿದ್ಧರಾಮ ಅವ್ರೆ ಒಂದು ಅಪರೂಪದ ದೇವಸ್ಥಾನದ ಬಗ್ಗೆ ಒಳ್ಳೆಯ ಬರಹ ಬರೆದು ನಮ್ಮ ಗಮನ ಸೆಳೆದಿದ್ದೀರ.. ಚಿತ್ರದಲ್ಲಿ ನೋಡಿದಾಗ ದೊಡ್ಡ ದೊಡ್ಡ ಕಲ್ಲುಗಳನ್ನ ಉಪಯೋಗಿಸಿ ಗೋಡೆ ಮತ್ತು ಚತ್ತು ಕಟ್ಟಿದ ಹಾಗೆ ಕಾಣಿಸುತ್ತಿದೆ.. ಮತ್ತೆ ಮಳೆ ಬಂದು ಕೆರೆಯಲ್ಲಿ ನೀರು ತುಂಬಿದರೆ ಮತ್ತೆ ದೇವಸ್ಥಾನ ಜಲ ಗರ್ಭ ಸೇರುವುದು!!... ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಿದ್ದರಾಮಯ್ಯನವರೆ, ಕೂಡ್ಲಿಗಿ ಮತ್ತು ಕೂಡ್ಲಿಗಿ ತಾಲೂಕಿನ ಬಗ್ಗೆ ಬರೆಯುವ ನಿಮ್ಮ ಲೇಖನಗಳಿಂದ ಬಹಳ ಸಂತಸವಾಗುತ್ತಿದೆ. ಏಕೆಂದರೆ ಕೂಡ್ಲಿಗಿಯ ಬಗ್ಗೆ ಕನ್ನಡ ಜನತೆಗೆ ತಿಳಿದಿರುವುದು ಬಹಳ ಕಡಿಮೆ, ನಿಮ್ಮ ಮೂಲಕ ಈ ಕೊರತೆ ನೀಗುತ್ತಿರುವುದು ಶ್ಲಾಘನೀಯ. ನೀವು ತಿಳಿಸಿರುವಂತೆ ಈ ದೇವಸ್ಥಾನ ನೆಲದಿಂದ ಆರು ಅಡಿ ಮೇಲೆ ಇದು ಎಂದು ತಿಳಿಸಿದ್ದೀರಿ ಮತ್ತು ಇದನ್ನು ಕೆರೆಯನ್ನು ಪವಿತ್ರ ಸ್ಥಳವೆಂದು ತಿಳಿದು ಪೂಜಿಸಲು ಅನುಕೂಲವಾಗಲೆಂದು ಇಲ್ಲಿಯ ಪಾಳೇಗಾರರು ಕಟ್ಟಿಸಿದರು ಎನ್ನುವುದನ್ನು ತಿಳಿಸಿದ್ದೀರ. ಅದೇ ರೀತಿ ಕೆರೆ ಕಾವಲರ ಹಟ್ಟಿಯ ಪ್ರಸ್ತಾಪಿಸಿದ್ದೀರ. ಇವೆಲ್ಲ ಮಾಹಿತಿಗೆ ಪೂರಕವಾಗಿ ನನಗೆ ತಿಳಿದದ್ದಷ್ಟನ್ನು ಸ್ವಲ್ಪ ಹೇಳುತ್ತೇನೆ. ನಮ್ಮ ತಂದೆಯವರು ಹೇಳುತ್ತಿದ್ದೇನೆಂದರೆ ಕೂಡ್ಲಿಗಿ ಕೆರೆ ಬಹಳ ದೊಡ್ಡದು ಮತ್ತು ಬಹಳ ಆಳವಾದದ್ದೆಂದು. ಕೆರೆಯ ಅಂಗಳದಲ್ಲಿ ಬಹುದೊಡ್ಡ ಬಂಡೆಯಿತ್ತೆಂದು ಮತ್ತು ಅದರ ಕೆಳಗೆ ಕುರಿಕಾಯುವವರು ತಮ್ಮ ಮಂದೆಯನ್ನು ಮೇಯಿಸಿಕೊಂಡು ಬಿಸಿಲಿನಲ್ಲಿ ಅದರ ಕೆಳಗೆ ಮಲಗುತ್ತಿರನ್ನೆವುದು. ಅದರಲ್ಲಿ ಸಾಕಷ್ಟು ಹೂಳು ತುಂಬಿ ನೀರಿನ ಮಟ್ಟ ಮೇಲಕ್ಕೆ ಬಂದು ಈ ಗುಡಿಯೂ ಸಹ ಮುಳುಗುವಂತಾಗಿರಬೇಕು. ಪೂಜಿಸುವ ಉದ್ದೇಶದಿಂದ ಕಟ್ಟಿದ ಈ ಗುಡಿಯನ್ನು ಯಾರಾದರೂ ನೀರಿನ ಒಳಗಡೆ ಕಟ್ಟುತ್ತಾರೆಯೇ? ಆದ್ದರಿಂದ ನಮ್ಮ ತಂದೆಯವರು ತಿಳಿಸುತ್ತಿದ್ದ ವಿಷಯ ನಿಜವಿರಬಹುದು. ಇದರ ಬಗ್ಗೆ ನಿಮಗೆ ಏನಾದರೂ ಮಾಹಿತಿ ಇದ್ದರೆ ವಿಶದಪಡಿಸಿ. ಇನ್ನು ಕೆರೆ ಕಾಯುವವರ/ಕಾವಲರ ಹಟ್ಟಿ (ಕಾವಲು=ಕಾಯುವುದು) ಆದ್ದರಿಂದ ಅದು ಕೆರೆ ಕಾವಲರ ಹಟ್ಟಿಯೇ ಅದು ಜನರ ಬಾಯಲ್ಲಿ ಕಲ್ಲಾರಟ್ಟಿ ಮುಂತಾದ ಅಪಭ್ರಂಶಗಳನ್ನು ಪಡೆದದ್ದು ನಿಜ. ಯುದ್ಧದ ಸಮಯದಲ್ಲಿ ಕೆರೆ ನೀರಿಗೆ ವಿಷವನ್ನು ಬೆರೆಸಬಹುದೆನ್ನುವ ಭಯ ಮತ್ತು ಯಾರೆಂದರೆ ಅವರು ಕರೆಯ ತೂಬನ್ನು ಎತ್ತಿ ನೀರು ಪೋಲಾಗದಂತೆ ನೋಡಿಕೊಳ್ಳುವುದು ಅವರನ್ನು ನಿಯಮಿಸಿರುವ ಉದ್ದೇಶವಿರಬಹುದು. ನಿಮ್ಮ ಮಾಹಿತಿಯುಕ್ತ ಬರಹಕ್ಕೆ ಮತ್ತೊಮ್ಮೆ ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಮಾಹಿತಿ. ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ್ ಅವರೆ, ತಾವು ತಿಳಿಸಿರುವ ಅಥವಾ ತಮ್ಮ ತಂದೆಯವರು ಹೇಳಿದ ಮಾಹಿತಿ ನಿಜವಿರಬಹುದೆಂದೆನಿಸುತ್ತದೆ. ಏಕೆಂದರೆ ದೇವಸ್ಥಾನವು ಕೆರೆಯ ಮಧ್ಯದಲ್ಲಿ ಅಲ್ಲದೆ, ಕೊಂಚ ದಂಡೆಯ ಬದಿಗಿದೆ. ಕೆರೆಯನ್ನು ಪವಿತ್ರ ಭಾವನೆಯಿಂದ, ಪೂಜನೀಯ ಭಾವನೆಯಿಂದ ಕಾಣುವುದಕ್ಕಾಗಿಯೇ ನಮ್ಮ ಪೂರ್ವಿಕರು ಅಲ್ಲಿ ದೇವಸ್ಥಾನ ಕಟ್ಟಿರುವ ಸಾಧ್ಯತೆಯಿದೆ. ಅಲ್ಲದೆ ಇದು ಜನರಲ್ಲ್ಲೂ ಕೆರೆಯನ್ನು ಅಪವಿತ್ರಗೊಳಿಸಬಾರದೆಂಬ ಭಾವನೆಯನ್ನು ಮೂಡಿಸುತ್ತದೆ. ಹೀಗಾಗಿ ನೀವೆಂದಂತೆ, ದೇವಸ್ಥಾನ ಕೆರೆಯ ಕೊಂಚ ದಂಡೆಗಿದೆ. ಬಹುಶ: ಕೆರೆಯಲ್ಲಿ ಹೂಳು ತುಂಬಿ ದೇವಸ್ಥಾನ ಮುಳುಗಿರಬಹುದಾದ ಸಾಧ್ಯತೆಯಿದೆ. ನೀರು ಬಂದಾಗ ದೇವಸ್ಥಾನದ ಗೋಪುರ ಮಾತ್ರ ಕಾಣುತ್ತದೆ. ಈ ಬಾರಿ ಕೆರೆ ತುಂಬಿದಾಗ ಅದನ್ನೂ ಫೋಟೊ ತೆಗೆದು ಸಂಪದಕ್ಕೆ ಹಾಕುವೆ. ಪ್ರತಿಕ್ರಿಯೆ ನೀಡಿರುವ ಸಪ್ತಗಿರಿವಾಸಿ ಹಾಗೂ ಕವಿನಾಗರಾಜ್ ಎಲ್ಲರಿಗೂ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೊಳಲ್ಕೆರೆಯಲ್ಲಿ ಈಶ್ವರದೇವರ ದೇವಸ್ಥಾನ ಹೀರೆಕೆರೆ ದಡದಮೇಲೆ ಇದೆ. ಪಕ್ಕದಲ್ಲಿ ಛಾಯಾಪತಿಯವರ ತೆಂಗಿನತೋಟವಿತ್ತು. ೧೨ ವರ್ಷಕ್ಕೊಮ್ಮೆ ಕೆರೆ ತುಂಬಿ ಕೋಡಿಹರಿದಾಗ ನಮ್ಮ ಈಶ್ವರದೇವರ ಗುಡಿ ನೀರ್ನಿಂದ ಆವೃತವಾಗುತ್ತದೆ. ಶಿವದೇವಾಲಯ ನೆಲದಮಟ್ಟದಿಂದ ಕೆಳಗಿದ್. ಇದೂ ಸಹಿತ ಕಾಣಿಸಲಾರದಷ್ಟು ನೀರಿನಿಂದ ತುಂಬಿರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.