ಬಟರ್ ಸ್ಕ್ವಾಷ್ ಹಲ್ವಾ!!!

5
ಬೇಕಿರುವ ಸಾಮಗ್ರಿ: 

ಬಟರ್ ಸ್ಕ್ವಾಷ್ ಹಲ್ವಾ!!!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ...

ಬೇಕಾಗುವ ಸಾಮಾಗ್ರಿ...

ಬಟರ್ ಸ್ಕ್ವಾಷ್ ...೧
ಬೆಣ್ಣೆ ಅಥವಾ ತುಪ್ಪ...೧/೨  - ೧ ಕಪ್
ಏಲಕ್ಕಿ...೫-೬
ಗೋಡಂಬಿ...೧೦ -೧೫
ಸಕ್ಕರೆ... ಬಟರ್ ಸ್ಕ್ವಾಷ್ ತುರಿಯಷ್ಟೇ ಅಥವಾ ಸ್ವಲ್ಪ ಕಡಿಮೆ.(೧:೧)

ತಯಾರಿಸುವ ವಿಧಾನ......

ಬಟರ್ ಸ್ಕ್ವಾಷ್ ಅನ್ನು ಸಿಪ್ಪೇ ತೆಗೆದು ಚೆನ್ನಾಗಿ ತುರಿದು ಕೊಳ್ಳಿ ( ಕ್ಯಾರಟ್ ಹಲ್ವಾ ಗೆ ತುರಿಯುವ ಹಾಗೆ). ಅದನ್ನು ಅಳತೆ ಮಾಡಿ, ಅದರಷ್ಟೇ ಸಕ್ಕರೆಯನ್ನು ಒಂದು ಕಪ್ ನಲ್ಲಿ ತೆಗೆದಿಡಿ. ಈಗ ಒಂದು ಬಾಣಲೆಯಲ್ಲಿ ೨-೩ ಚಮಚ ತುಪ್ಪ/ ಅಥವಾ ಬೆಣ್ಣೆ ಹಾಕಿ, ಗೋಡಂಬಿಯನ್ನು ಕರಿದಿಡಿ. ಗೋಡಂಬಿಯನ್ನು ಹೊರಕ್ಕೆ ತೆಗೆದಿಟ್ಟು, ಬಾಣಲೆಗೆ ಬಟರ್ ಸ್ಕ್ವಾಷ್ ತುರಿಯನ್ನು ಹಾಕಿ, ಸ್ವಲ್ಪ ತುಪ್ಪವನ್ನು ಹಾಕಿ (೩-೪ ಚಮಚ) ಚೆನ್ನಾಗಿ ತುಪ್ಪದಲ್ಲಿ ಹುರಿಯಿರಿ. ಸ್ಕ್ವಾಷಿನ ಹಸಿ ವಾಸನೆ ಹೋಗೋವರೆಗೂ ಹುರಿಯಬೇಕು. ಸ್ವಲ್ಪ ಏಲಕ್ಕಿ ಪುಡಿಯನ್ನೂ ಹಾಕಬಹುದು. ಮೇಲೆ ಸ್ವಲ್ಪ ತುಪ್ಪ ಬೇಕಾದಲ್ಲಿ ಹಾಕಿಕೊಳ್ಳಿ. ತುರಿ ಸ್ವಲ್ಪ ತುಪ್ಪದಲ್ಲಿ ಬೆಂದಮೇಲೆ, ಸಕ್ಕರೆಯನ್ನು ಸ್ವಲ್ಪ ಸ್ವಲ್ಪ ಹಾಕಿ ಕೂಡಿಸಿ. ಹಾಗೇ ಸ್ವಲ್ಪ ತುಪ್ಪವನ್ನೂ ಸೇರಿಸಿಕೊಳ್ಳಿ. ಎಲ್ಲವನ್ನೂ ಚೆನ್ನಾಗಿ ಕೂಡಿಸಿ. ಸಕ್ಕರೆ, ತುರಿಗಳಿಗೆ ಸೇರಿ ಈಗ ಹಲ್ವ ತರಹ ಆಗುತ್ತೆ. ಸ್ವಲ್ಪ ರುಚಿ ನೋಡಿ, ಸಿಹಿ ಬೇಕಾದಲ್ಲಿ ಮತ್ತೆ ಸಕ್ಕರೆಯನ್ನು ಹಾಕಿ ಒಂದೆರಡು ನಿಮಿಷ ಚೆನ್ನಾಗಿ ಕೂಡಿಸಿ. ಸಕ್ಕರೆ ಚೆನ್ನಾಗಿ ಕರಗಿ ತುರಿಗಳೊಡನೆ ಹೊಂದಿಕೊಳ್ಳತ್ತೆ. ಕೇಸರಿ ಮತ್ತು ಏಲಕ್ಕಿ ಪುಡಿಯನ್ನು ಸಕ್ಕರೆ ಹಾಕಿ ಕೂಡಿಸುವಾಗ ಹಾಕಿ, ಏಲಕ್ಕಿ ಘಮ ಘಮ ಚೆನ್ನಾಗಿ ಕೂಡಿಕೊಳ್ಳುತ್ತೆ. ಹಲ್ವಾ ಎಲ್ಲ ಆದಮೇಲೆ, ಗೋಡಂಬಿಯನ್ನು ಮೇಲೆ ಸಿಂಪಡಿಸಿ. ಈಗ ನಿಮ್ಮ ರುಚಿ ರುಚಿಯಾದ ಬಟರ್ ಸ್ಕ್ವಾಷ್ ಹಲ್ವಾ ರೆಡಿ!!!

ಇದು ಬೂದುಗುಂಬಳಕಾಯಿಯ "ದಂರೋಟ್" ತರಹನೇ, ಇಲ್ಲಿ ಬಟರ್ ಸ್ಕ್ವಾಷನ್ನು ಉಪಯೋಗಿಸುತ್ತೇವೆ. ಬಟರ್ ಸ್ಕ್ವಾಷ್ ತಿನ್ನಲು ಸ್ವಲ್ಪ ಸಿಹಿಯಾಗಿರುತ್ತೆ (ಗುಣದಲ್ಲಿ) ಸ್ವಾಭಾವಿಕವಾಗಿ.

ತಯಾರಿಸುವ ವಿಧಾನ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದು ನೀವೇ ಮಾಡಿದ ತಿಂಡಿಯ ಚಿತ್ರವೇ?

ಅಥವಾ ನೆಟ್ ನಲ್ಲಿ ಹುಡುಕಿ ಸೇರಿಸಿದ್ದ?

ಒಟ್ನಲ್ಲಿ ನೋಡಿದ್ ಕೂಡಲೇ  ನಾಲಗೆ ನೀರೂರಿ ..................... !!!

 ಸರಳ ತಿಂಡಿ ತಯಾರಿ ವಿಧಾನ .

ನನ್ನಿ

ಶುಭವಾಗಲಿ
\|/

ವೆಂಕಟೇಶ್ ಅವರೆ, ಧನ್ಯವಾದಗಳು!
ಹೌದು, ಇದು ನಾನೇ ಮಾಡಿದ ಹಲ್ವಾ ದ ಚಿತ್ರ. ನಿಮ್ಮ ಈ- ಅಂಚೆ ಕಳಿಸಿ, ಎಲ್ಲ ಚಿತ್ರಗಳನ್ನು ಕಳಿಸುವೆ, ನಿಜವಾಗಲೂ ಈ ಹಲ್ವಾ ಮಾಡಲು ತುಂಬಾ ಸುಲಭ ಮತ್ತು ತುಂಬಾ ರುಚಿ ಕೂಡಾ. ನೀವೂ ಮಾಡಿ ನೋಡಿ...:)

ಮೀನಾ!