ಪ್ರೀತಿ ಎಂದರೆ...

4.5

             ಪ್ರೀತಿ ಎಂದರೆ...
 ಮರ ಸುತ್ತಿ ಕೈ ಹಿಡಿದು ಹಾಡಿ ಕುಣಿಯುವುದಲ್ಲ  ...
ಮನ ಸುತ್ತಿ ಆತ್ಮದ ಜೊತೆಗೂಡಿ ತಿಳಿದು ತಣಿಯುವುದು.
ಚುಚ್ಚಿದ ಮುಳ್ಳನ್ನು ತುಚ್ಚದಿ ಕಾಣುವುದಲ್ಲ ...
ಸುನಗೆಯ ಗುಲಾಬಿಯ ಚೆಂದವನು ಮೆಚ್ಚಿ ಬಣ್ಣಿಸುವುದು.
ಕೊಳಕಿನ ಕೆಸರನ್ನು ತೆಗಳುವುದಲ್ಲ  ...
ಬಳುಕಿನ ನೈದಿಲೆ ಅಂದವನು ಹೊಗಳುವುದು.
ಕತ್ತಲೆಯಲಿ ತಡಕಾಡಿ  ಶಪಿಸುವುದಲ್ಲ ...
ಚಂದಿರನ ತಂಬೆಳಕಲಿ ಶೋಭಿಸುವ ತಾರೆಗಳ ಸ್ಮರಿಸುವುದು
ಕಲ್ಪನೆಯ ಸವಿಯಲಿ ಸುಳ್ಳನು ನಿರೀಕ್ಷಿಸುವುದಲ್ಲ ...
ಅನಿರೀಕ್ಷದ ವಾಸ್ತವತೆಯ ಕಟು ಸತ್ಯವನು ಸ್ವೀಕರಿಸುವುದು.
ತೋರಿಕೆಯ ಆಡಂಭರದ ಆಭರಣ ಉಡುಗೊರೆಯಲ್ಲ ...
ಸೋರಿಕೆ ಇರದ  ಕಾಳಜಿ ಸಹನೆ -ಸಹಕಾರದ ಕಾಣಿಕೆ .
ಸುಖದಲಿ ಜೊತೆಯಾಗಿ ಹಿಗ್ಗಿ ಮೆರೆಯುವುದಲ್ಲ  ...
ದುಃಖದಲಿ ಕುಗ್ಗದೆ ಭಾಗಿಯಾಗಿ ನೋವು ಮರೆಸುವುದು .
ಗೆಲುವನ್ನು ನಲಿವಿನಿಂದ ಆಚರಿಸುವುದಲ್ಲ ...
ಸೋಲನ್ನು ಸಮಪಾಲಾಗಿ ಹಂಚಿಕೊಳ್ಳುವುದು.
ಮೋಹದ ದಾಹದಲಿ ತೇಲುವುದಲ್ಲ ...
ಸ್ನೇಹದ ದೋಣಿಯಲಿ ಸಾಗುವುದು.  
ಬಣ್ಣದ ಒಣ ಮಾತಿನಲಿ ಅಪ್ಪಿಕೊಳ್ಳುವುದಲ್ಲ...
ಮೌನದ ತುಂಬು ಭಾವನೆಗಳನು ಒಪ್ಪಿಸಿಕೊಳುವುದು.
——Rukku 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.