ಪೇಶಾವರ ಘಟನೆ:-ಅಸಲಿಗೆ 'ಇವರು' ಖಂಡಿಸಿದ್ದು ಯಾರನ್ನ..?

4.666665

ಪೇಶಾವರ ಘಟನೆ:

ಅಸಲಿಗೆ 'ಇವರು'ಖಂಡಿಸಿದ್ದು ಯಾರನ್ನ..?

ಅಹಿಂಸೆಗೆ ಹೆಸರಾದ ಬೌದ್ಧ ಧರ್ಮೀಯ ಕುಷಾಣ ದೊರೆ ಕನಿಷ್ಕ ಆಳಿದ ಪೇಶಾವರ (ಪುರುಷಪುರ) ಎರಡು ದಿನದ ಹಿಂದೆ ಅಮಾನವೀಯ ಘಟನೆಯೊಂದಕ್ಕೆ ಸಾಕ್ಷಿಯಾಯಿತು.ಅ ಘಟನೆ ಇಂದಿಗೆ ಇತಿಹಾಸ.ಆದರೆ ಅದು ಜಗತ್ತಿಗೆ ದೀರ್ಘಕಾಲ ನೆನಪಿನಲ್ಲಿರುವಂತಹ ಸಂಗತಿಗಳನ್ನು ಹುಟ್ಟುಹಾಕಿರೋದು ಸುಳ್ಳಲ್ಲ.ಕೃತ್ಯ ಎಸಗಿದವರನ್ನು 'ನರಹಂತಕರು','ಆಧುನಿಕ ರಾಕ್ಷಸರು','ರಕ್ತಪಿಪಾಸುಗಳು','ಮತಾಂಧರು','ಅತಿ ಉಗ್ರಗಾಮಿಗಳು','ಇಸ್ಲಾಂ ಮೂಲಭೂತವಾದಿಗಳು','ಸಾವಿನ ಕಾರ್ಪೊರೇಟರ್ಗಳು'ಹೀಗೆ ಏನೆಲ್ಲಾ ಕರೆದರು ಕಡಿಮೆಯೇ.ಶಬ್ದಕೋಶದಲ್ಲಿ ಅದಕ್ಕೆ ಪದಗಳಿಲ್ಲ.ಘಟನೆ ನಡೆದ ತಕ್ಷಣ ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಅತಿ ಹೆಚ್ಚಿನ ಖಂಡನೆ ವ್ಯಕ್ತವಾಗಿತ್ತು.ವಿಶ್ವಾದ್ಯಂತ #indiawithpakistan ಆಶ್ ಟ್ಯಾಗ್ ಅ ದಿನದ ಟಾಪ್ ಟ್ವಿಟರ್ ಟ್ರೆಂಡಿಗ್ ಗಳಲ್ಲಿ ಒಂದಾಗಿತ್ತು.ನಮ್ಮ ಪ್ರಧಾನಿಗಳು ತಕ್ಷಣ ಸಂತಾಪ ಸೂಚಿಸಿ ಪಾಕಿಸ್ತಾನಕ್ಕೆ ಬೇಕಾದ ಅಗತ್ಯ ನೆರವು ಒದಗಿಸುವುದಾಗಿ ಹೇಳಿದರು.ಅಲ್ಲದೆ ಭಾರತದ ಎಲ್ಲಾ ಶಾಲೆಗಳಲ್ಲಿ ಎರಡು ನಿಮಿಷ ಮೌನ ಪ್ರಾರ್ಥನೆ ನಡೆಸುವಂತೆ ಸೂಚಿಸಿದರು.ಸಂಸತ್ತಿನಲ್ಲು ಅಗಲಿದ ಮಕ್ಕಳ ಆತ್ಮಕ್ಕೆ ಶಾಂತಿ ಕೋರಲಾಯಿತು.ಹಳೆಯ ದ್ವೇಷ ವೈಷಮ್ಯವಿದ್ದರು ಅದನ್ನು ಮರೆತು ಪ್ರಧಾನಿ ಷರೀಫ್ ಗೆ ಕರೆ ಮಾಡಿ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದರು.ಮುಂಬೈ ದಾಳಿಯಾದಾಗ ಅಂದಿನ ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ನಡೆದುಕೊಂಡದ್ದನ್ನು ನೋಡಿದಾಗ ನಮ್ಮ ಪ್ರಧಾನಿಗಳು ಅವರಿಗಿಂತ ಎಷ್ಟೋ ಎತ್ತರದಲ್ಲಿ ನಿಲ್ಲುತ್ತಾರೆ.ಮೋದಿಜಿ ಶತ್ರು ರಾಷ್ಟ್ರವೊಂದು ಸಂಕಟದಲ್ಲಿರುವುದನ್ನು ನೋಡಿ ಅಂದು ಪಾಕಿಗಳು ಸಂತೋಷಪಟ್ಟಂತೆ ಸಂತಸ ಪಡಲಿಲ್ಲ.ಬದಲಿಗೆ ಮಾನವೀಯತೆ ಮೆರೆದರು.ಆದರೆ ಇದಕ್ಕೆ ಕೆಲ ಪಾಕ್ ಪೊರ್ಕಿಗಳು ಟ್ವಿಟರ್ ಮತ್ತು ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿದ್ದು ನೋಡಿ ನಿಜಕ್ಕೂ ವಿಷಾದವಾಯಿತು.ಮೋದಿಯದ್ದು ಮೊಸಳೆ ಕಣ್ಣೀರು,ಭಾರತ ಅಫ್ಘಾನಿಸ್ಥಾನದಲ್ಲಿ ಪಾಕಿಸ್ತಾನದ ಮೇಲೆ ಛೂ ಬಿಡಲು ಟೆರರ್ ಕ್ಯಾಂಪ್ ಗಳನ್ನು ನಡೆಸುತ್ತಿದೆ,ಈ ಘಟನೆಯ ಹಿಂದೆ ಭಾರತದ ಕೈವಾಡವಿದೆ,ಈ ದಾಳಿಗೆ ಪ್ರತೀಕಾರವಾಗಿ ನಾವು ಶೀಘ್ರದಲ್ಲೆ ಭಾರತದ ಮೇಲೆ ಇಂತಹದ್ದೇ ದಾಳಿ ಸಂಘಟಿಸುತ್ತೇವೆ ಎಂಬಂತಹ ಪ್ರತಿಕ್ರಿಯೆಗಳನ್ನು ಬರೆದುಕೊಂಡಿದ್ದರು.ತಾವು ಸಾಕಿ ಬೆಳೆಸಿದ ಸೈತಾನ ತನ್ನವರ ರಕ್ತಕುಡಿಯುತ್ತಿದ್ದರೆ ಅದು ಭಾರತದ ಷಡ್ಯಂತ್ರದಂತೆ ಇವರಿಗೆ ಗೋಚರಿಸಿತಲ್ಲ...? ಏನು ಹೇಳಬೇಕು ಇವರ ಭಾರತ ವಿರೋಧಿ ನಿಲುವಿಗೆ..?ಇದನ್ನು ನೋಡಿ, ಇಂತವರ ಸಹಾಯಕ್ಕೂ ನಾವು ನಿಲ್ಲಬೇಕಾ..?ಪಾಪಿಗಳಿಗೆ ಜನ್ಮದಲ್ಲಿ ಬುದ್ಧಿಯೂ ಬರಲ್ಲ ಸುಧಾರಿಸೋದು ಇಲ್ಲಾ ಅನ್ನಿಸಿಬಿಟ್ಟಿತ್ತು.ಇನ್ನು ಭಾರತದಲ್ಲಿನ ನಮ್ಮ ಮುಸ್ಲಿಂ ಬಾಂಧವರು ಈ ಘಟನೆ ನಡೆದಾಗ ಹೇಗೆ ನಡೆದುಕೊಂಡರು ಅಂತ ನೋಡಿದರೆ ಪಾಕಿಗಳಿಗಿಂತ ಏನು ಭಿನ್ನವಾಗಿರಲಿಲ್ಲ ಅನ್ನಿಸಿತು.ಕೆಲವರು,'ಇವರಿಗೆ ಸ್ವಧರ್ಮದ ಮಕ್ಕಳ ರಕ್ತವೇ ಬೇಕಿತ್ತಾ'(ಅಂದರೆ ಬೇರೆಯವರ ರಕ್ತ ಹರಿಸಿದ್ದರೆ ತಪ್ಪಲ್ಲ) ಅಂತ ತಮ್ಮ ವಾಲ್ ಗಳಲ್ಲಿ ಬರೆದುಕೊಂಡರೆ,ಇನ್ನು ಕೆಲವರು ಇದನ್ನು ಧರ್ಮದ ಜೊತೆ ಬೆಸೆಯಬೇಡಿ,ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬೇಡಿ ಅಂತ ತಾಕಿತು ಮಾಡಿದ್ದರು.ಮತ್ತೆ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮುಂದೊಂದು ದಿನ ಕೇಸರಿ ಸಂಘಟನೆಯವರೂ ಇಂತಹ ದಾಳಿಯನ್ನು ಸಂಘಟಿಸುತ್ತಾರೆ ಅಂತ ಭವಿಷ್ಯ ಹೇಳಿದ್ದರು.ಒಟ್ಟಿನಲ್ಲಿ ಯಾವೊಬ್ಬ ಶಾಂತಿಪ್ರಿಯನೂ ಭಯೋತ್ಪಾದಕ ಕೃತ್ಯವನ್ನು ಉಗ್ರವಾಗಿ ಖಂಡಿಸಲೇ ಇಲ್ಲ.ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇವೆ ಅನ್ನಲಿಲ್ಲ.ನಮ್ಮ ಧರ್ಮೀಯರು ಇಂತಹ ಚಟುವಟಿಕೆಯಲ್ಲಿ ತೊಡಗಿದರೆ ಅವರನ್ನು ನಾವೇ ಹಿಡಿದುಕೊಡುತ್ತೇವೆ ಅನ್ನಲಿಲ್ಲ.ಉಗ್ರಗಾಮಿಗಳಿಗೆ ಧರ್ಮದಿಂದ ಬಹಿಷ್ಕಾರ ಹಾಕುವಂತಹ ಕೆಲಸ ಮಾಡುತ್ತೇವೆ ಎಂದು ಹೇಳಲಿಲ್ಲ.ಫೇಸ್ಬುಕ್ ನಲ್ಲಿ ಯಾವಾಗಲೂ ರಾರಾಜಿಸುವ ಕೆಲವು ಹಸಿರು ಪೇಜ್ ಗಳು ಭಯೋತ್ಪಾದಕರ ಮೇಲೆ ಹಿಂದೂಗಳ ವಿರುದ್ಧ ಕಾರುವಂತಹ ವಿಷ ಕಾರಲೇ ಇಲ್ಲ.ಆಶ್ಚರ್ಯವೆಂದರೆ... ಇವರು ಉಗ್ರರ ಕೃತ್ಯವನ್ನು ಖಂಡಿಸೋದಕ್ಕಿಂತ ಹೆಚ್ಚಾಗಿ ಇಸ್ಲಾಂ ಮೂಲಭೂತ ಸಂಘಟನೆಗಳ ವಿರುದ್ಧ ಸದಾ ಧ್ವನಿ ಎತ್ತುತ್ತಿರುವ ಹಿಂದು ಸಂಘಟನೆಗಳನ್ನು ಮತ್ತು ರಾಜಕೀಯ ಪಕ್ಷವೊಂದನ್ನು ಬಲವಾಗಿ ಖಂಡಿಸಿದ್ದರು.ಅಂದರೆ ಪರೋಕ್ಷವಾಗಿ ತಮ್ಮವರು ಮಾಡಿದ ಕೃತ್ಯಕ್ಕೆ ಬೆಂಬಲವಾಗಿ ನಿಂತರೆ..? ಎಂಬ ಅನುಮಾನ ಬಂತು.ಹಾಗೆ ನೋಡಿದರೆ ನಾವೇ ವಾಸಿ.ಸತ್ತದ್ದು ಅನ್ಯಧರ್ಮದವರಾದರು,ಶತ್ರುದೇಶದವರಾದರು ಅ ಕುಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದೆವು.ದೂರದ ಇರಾಕ್ ನಲ್ಲಿ ಸರ್ವಾಧಿಕಾರಿಯೊಬ್ಬನನ್ನು ಗಲ್ಲಿಗೇರಿಸಿದಾಗ ಇಲ್ಲಿ ಬೀದಿಗೆ ಬಂದು ಪ್ರತಿಭಟಿಸಿದವರು ಘಟನೆ ನಡೆದು ಇಂದಿಗೆ ಎರಡು ದಿನವಾದರೂ ಪತ್ತೆ ಇಲ್ಲ.ಇರೋ ಒಂದು ದೇಶ ಇಸ್ರೇಲ್ ಅನ್ನು, ಸುತ್ತಲು ಇರುವ ಏಳು ಮುಸ್ಲಿಂ ರಾಷ್ಟ್ರಗಳಿಂದ ರಕ್ಷಿಸಿಕೊಳ್ಳಲು ಮತ್ತು ಇರೋ ತುಂಡು ಭೂಮಿಯನ್ನು ಉಳಿಸಲು ಹಮಾಸ್ ಉಗ್ರರರ ಮೇಲೆ ಯಹೂದಿಗಳು ಪ್ರತಿದಾಳಿ ಮಾಡಿದಾಗ ನಮ್ಮ'ಗಾಜಾ ಕಾಪಾಡಿ' ಎಂದು ಕ್ಯಾಂಡಲ್ ಹಿಡಿದು ಬೀದಿಗೆ ಬಂದವರು ಇದುವರೆಗೂ ಪತ್ತೆ ಇಲ್ಲ.ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದಾಗ ಅವನನ್ನು ಹುತಾತ್ಮನೆಂದು ಕರೆದು ಕಣ್ಣೀರಿಟ್ಟಿದ್ದ ಕಣ್ಣುಗಳು ಕೂಡ ಕುರುಡಾಗಿ ಹೋದವೇ..? ಇವರಿಗೆಲ್ಲ ಮಿಡಿದ ಹೃದಯ ಮಲಾಲಳಂತಹ ಮಕ್ಕಳಿಗಾಗಿ ಯಾಕೆ ಮಿಡಿಯಲಿಲ್ಲ..? ಹೋಗಲಿ ಮಲಾಲಳ ಮೇಲಾದ ದೌರ್ಜನ್ಯ ಅಥವಾ ನಿನ್ನೆ ಆದ ದೌರ್ಜನ್ಯಕ್ಕೆ ಕನಿಷ್ಠ ಪಕ್ಷ ಭಾರತದಲ್ಲಿರುವ ಪಾಕ್ ರಾಯಭಾರಿ ಕಛೇರಿಯ ಮುಂದೆ ಧರಣಿಯಾದರೂ ಕುಳಿತರಾ..?ಇವರಿಗೆ 'ಮನುಕುಲವನ್ನು ಗೌರವಿಸಿ' ಅಂತ ಕರ್ನಾಟಕ ಯಾತ್ರೆ ಮಾಡಿದ ಹಾಗೆ 'ಭಯೋತ್ಪಾದನೆಯನ್ನು ಕೊನೆಗೊಳಿಸಿ' ಅಂತ ಯಾಕೆ ಒಂದು ಭಾರತ ಯಾತ್ರೆ ಮಾಡಲು ಸಾಧ್ಯವಾಗಲಿಲ್ಲ ...?ಮಾತೆತ್ತಿದ್ದರೆ ಭಯೋತ್ಪಾದನೆಗೆ ಧರ್ಮವನ್ನು ಎಳೆದು ತರಬೇಡಿ ಅನ್ನುತ್ತಾರಲ್ಲ..ಇಷ್ಟಕ್ಕೂ ಭಯೋತ್ಪಾದಕರು ತಮ್ಮ ಉಗ್ರ ಚಟುವಟಿಕೆಗಳನ್ನು ಮಾಡುತ್ತಿರುವುದು ಧರ್ಮದ,ದೇವರ ಹೆಸರಿನಲ್ಲಿ ಅಲ್ಲವೇ..? ನಾವೆಲ್ಲಿ ಸ್ವಾಮಿ ಧರ್ಮವನ್ನು ಎಳೆದು ತರುತ್ತಿದ್ದೇವೆ..? ಸ್ವತಃ ಭಯೋತ್ಪಾದಕರೆ ಅದನ್ನು ತಮ್ಮ ಮೇಲೆ ಎಳೆದುಕೊಂಡಿರಬೇಕಾದರೆ!!.ಇಷ್ಟಕ್ಕೂ ನಿಮ್ಮ ಓಟಿನ ಬುಟ್ಟಿಗೆ ಕೈಹಾಕಲು,ನಿಮ್ಮನ್ನು ಸಮಾಧಾನ ಪಡಿಸಲು ಅಸ್ತಿತ್ವದಲ್ಲಿಯೇ ಇಲ್ಲದ' ಕೇಸರಿ ಭಯೋತ್ಪಾದನೆ'ಎಂಬ ಗುಮ್ಮನನ್ನು ಜಾತ್ಯತೀತ ಪಕ್ಷಗಳು ತೋರಿಸಿದಾಗ ಖುಷಿಪಟ್ಟುಕೊಂಡ ನೀವುಗಳು ಮತ್ತು ಸೋಗಲಾಡಿ ಜಾತ್ಯತೀತರು..ಇಂದು,ಧರ್ಮವನ್ನು ಭಯೋತ್ಪಾದನೆ ಜೊತೆ ಬೆರೆಸಬೇಡಿ ಎಂದು ಬೊಬ್ಬೆ ಹಾಕೋದು ನೋಡಿದಾಗ ಅಯ್ಯೋ ಎನಿಸುತ್ತದೆ.ನಿಮ್ಮ ಧರ್ಮದ ಮೇಲೆ ನಿಜವಾದ ಪ್ರೇಮ ಇದ್ದರೆ ನಿಮ್ಮಲ್ಲಿ ಊರಿಗೊಬ್ಬರು ಧಾರ್ಮಿಕ ಮುಖಂಡರು,ಕೇರಿಗೊಂದು ಧಾರ್ಮಿಕ ಸಂಘಟನೆ ಇದೆಯಲ್ಲವೇ..?ಗಾಂಧಿ ಮಾರ್ಗದಲ್ಲಿ ಭಯೋತ್ಪಾದನೆಯ ವಿರುದ್ಧ ಪ್ರತಿಭಟನೆ ಮಾಡಬಾರದೇಕೆ..? ಗಾಂಧಿ ಮಾರ್ಗ ಹಿಡಿಸಲಿಲ್ಲವಾದರೆ ನಿಮ್ಮ ಜಿನ್ನನ ಮಾದರಿಯಲ್ಲಿ ನೇರ ಕಾರ್ಯಾಚರಣೆಗೆ ಇಳಿಯಿರಿ.ಭಯೋತ್ಪಾದಕರನ್ನು ಇಲ್ಲವಾಗಿಸಿ.ಬೇಕಾದರೆ ನಾವು ಕೂಡ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.ಈ ಮೂಲಕ ಭಯೋತ್ಪಾದನೆಯ ವಿರುದ್ಧ ನಿಮ್ಮ ಬದ್ಧತೆಯನ್ನು ಮೊದಲು ಪ್ರದರ್ಶಿಸಿ.ಅದನ್ನು ಬಿಟ್ಟು ಸುಖಾಸುಮ್ಮನೆ ಧರ್ಮವನ್ನು ಎಳೆದು ತರಬೇಡಿ ಎಂದು ನಮ್ಮ ಕಡೆ ಬೆರಳು ತೋರಿಸದಿರಿ.ಯಾವುದೇ ಮುಲಾಜಿಲ್ಲದೆ ಭಯೋತ್ಪಾದನೆಯನ್ನು ಖಂಡಿಸುವ ಬದಲು ಘಟನೆಯ ಹೊಣೆಯನ್ನು ತೆಹ್ರಿಕ್-ಇ-ತಾಲಿಬಾನ್ ಒಪ್ಪಿಕೊಂಡಿದ್ದರು ಭಾರತವನ್ನು ಖಂಡಿಸಿದ ಪಾಕಿಗಳಂತವರು ಮತ್ತು ಧರ್ಮವನ್ನು ಎಳೆದು ತರುತ್ತಿದ್ದೀರಿ ಎಂದು ಬಲಪಂಥಿಯರನ್ನು ಖಂಡಿಸಿದ ನಮ್ಮವರಂತವರು ಇರೋವರೆಗೆ ಭಯೋತ್ಪಾದಕರು ಸೇಫಾಗಿರುತ್ತಾರೆ.ಇನ್ನು ಪಾಕ್ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಜರುಗಿಸುತ್ತದೆ ಅಂದುಕೊಂಡರೆ ಅದು ನಮ್ಮ ಭ್ರಮೆಯಾಗಲಿದೆ.ಹಫೀಜ್ ನಂತಹ ಭಯೋತ್ಪಾದಕರು ಷರೀಫ್ ಮನೆಮುಂದೆ ಇಷ್ಟು ವರ್ಷದಿಂದ ಓಡಾಡಿಕೊಂಡಿದ್ದರು ಅವನಿಗೆ ಏನು ಮಾಡಲಾಗದೆ ಸುಮ್ಮನಿರುವಾಗ ಇನ್ನು ಏಕಾಏಕಿ ಇಂತಹದ್ದನ್ನು ಮಟ್ಟ ಹಾಕಲು ಸಾಧ್ಯವೇ..?

-@ಯೆಸ್ಕೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾಕಿಸ್ಥಾನ ಈಗೆಲ್ಲಿದೆ. ಅದು ಪಾತಕಿಸ್ಥಾನ. ಭಯೋತ್ಪಾದಕರು ಇಂದು ಯಾವ ಮಟ್ಟಕ್ಕೆ ಮುಟ್ಟಿದ್ದಾರೆ... ಈ ಮತಿಗೇಡಿ ರಾಜಕಾರಣಿಗಳಿಗೆ, ವಿಕಾರವಾದಿಗಳಿಗೆ ಯಾವಾಗ ಬುದ್ಧಿ ಬರುವುದೋ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕೇಸರಿ ಭಯೋತ್ಪಾದನೆ ಎಂದು ಸುಖಾಸುಮ್ಮನೆ ಬೊಬ್ಬೆ ಹೊಡೆಯುವವರಿಗೆ ಉತ್ತರವಾಗಿ ನಿಜವಾಗಿಯೂ ಅಂತಹುದೊಂದು ಉಂಟಾದರೆ ಒಳ್ಳೆಯದೇನೋ ಎಂದು ಅನ್ನಿಸುತ್ತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಪ್ರತಿಕ್ರಿಯೆಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.