ಪಿಬಿಎಸ್ : ಅಚ್ಚರಿ ಕಾದಿದೆ

0

ಪಿ.ಬಿ.ಶ್ರೀನಿವಾಸ್ ಅವರು ಮೊನ್ನೆ ಸಿಂಗಪುರದಲ್ಲಿ ’ವಿಶ್ವಮಾನ್ಯ ಸುವರ್ಣ’ ಪ್ರಶಸ್ತಿ ಸ್ವೀಕರಿಸಿದ ಸುದ್ದಿಯನ್ನು ಇದೀಗಷ್ಟೇ ಮಾಧ್ಯಮದಲ್ಲಿ ಓದಿದೆ. ಪಿಬಿಎಸ್‌ರೊಡನೆ ಮಾತುಕತೆಯಾಡಿದವ, ಅವರ ಗಾಯನವನ್ನು ಎದುರು ಕುಳಿತು ಕೇಳಿದವ ನಾನು.

ಪಿಬಿಎಸ್ ನಿಜಕ್ಕೂ ವಿಶ್ವಮಾನ್ಯ ಸುವರ್ಣನಿಧಿಯೇ. "ರಾಜ್‌ಕುಮಾರ್ ಅವರು ತಮ್ಮ ಪಾತ್ರಗಳಿಗೆ ಮೊದಲಿನಿಂದಲೂ ತಾವೇ ಹಾಡಬಹುದಿತ್ತು, ಆದಾಗ್ಗ್ಯೂ ತನಗೆ ಹಾಡಲು ವಿಪುಲ ಅವಕಾಶ ನೀಡಿದ ರಾಜ್ ಹೃದಯವಂತರು", ಹೀಗೆಂದು ಹೇಳಿದ ವಿನಯಶೀಲ ಈ ನಮ್ಮ ಪಿಬಿಎಸ್. ಪಿಬಿಎಸ್‌ ಕುರಿತಂತೆ ನಮಗೆಲ್ಲ ಒಂದು ಅಚ್ಚರಿಯ ಬೃಹತ್ ಕಾಣಿಕೆ ದೊರಕಲಿದೆ. ಅದೇನೆಂದು ಈಗಲೇ ನಾನು ಹೇಳುವುದಿಲ್ಲ, ಕಾದು ನೋಡಿ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಂಗೀತ ಲೋಕದಲ್ಲಿ ತಮ್ಮದೇ ಆದ ಒಂದು ಛಾಪು ಮೂಡಿಸಿದವರಲ್ಲಿ, ಶ್ರೀ ಪಿ. ಬಿ. ಶ್ರೀನಿವಾಸ್ ಓರ್ವರು. ಆವರ ಯಾವ ಹಾಡೂ ನೀರಸವೆನಿಸಿದ್ದೇ ಇಲ್ಲ. ನಾನೂ ಕಾಯುತ್ತೇನೆ... ಆ ಅಚ್ಚರಿಯ ಕಾಣಿಕೆಗಾಗಿ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯರೆ, ಇದು ನಿಜಕ್ಕೂ ಬಹಳ ಸಂತೋಷ್ದ ಸುದ್ದಿ, ಪಿಬಿಎಸ್ ಈ ಉನ್ನತ ಪ್ರಶಸ್ತಿಗೆ ಅತ್ಯಂತ ಅರ್ಹರು ಹಾಗೊ ಅಭಿನಂದನಾರ್ಹರು. ಪಿಬಿಎಸ್ ಅವರ ಸುಮಧುರ ಕಂಠ ಎಂದೆಂದಿಗೂ ಬೇಕು ಎನಿಸುವಂತದ್ದು. ಅಚ್ಚರಿಯ ಕಾಣಿಕೆಗಾಗಿ ಕುತೂಹಲದಿಂದ ಕಾಯುತ್ತೇನೆ. ನಮ್ಮೆಲ್ಲರ ಪರವಾಗಿ ಪಿಬಿಎಸ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ. ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅರ್ಹತೆಗೆ ಮಾನ್ಯತೆ ದೊರೆತರೆ ಸಂತೋಷವಾಗದಿದ್ದೀತೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.