ಪಾರ್ಥನ ಸಣ್ಣಕತೆಗಳು 2014

ಕತೆ : ಮೃದುಲ

 

ಸಣ್ಣ ಕತೆ : ಮೃದುಲ

ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋಮಾರಿತನವೆ !. ಎಂತಹುದೋ ಮಾಯಕದ ನೆನಪಿನಲ್ಲಿ ನಕ್ಕಳು ಮೃದುಲ. ಕಾಲೇಜಿಗೆ ಹೋಗುವ ಬಸ್ಸು ಎಂಟಕ್ಕೆ  ಮುಖ್ಯರಸ್ತೆಗೆ ಬಂದುಬಿಡುತ್ತದೆ ಅಷ್ಟರೊಳಗೆ ಸಿದ್ದವಾಗಿ ಹೋಗದಿದ್ದರೆ ಬಸ್ಸು ತಪ್ಪಿಸಿಕೊಂಡಂತೆ ಮತ್ತೆ ಸಿಟಿ ಬಸ್ ಹಿಡಿದು ಹೋಗುವದೆಂದರೆ ರೇಜಿಗೆ ಎನ್ನುವ ಭಾವ ತುಂಬಿದಂತೆ ಪೂರ್ಣ ಎಚ್ಚರಗೊಂಡು ಎದ್ದು ಕುಳಿತಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ: ಒಂದು ಹನಿ ಕಣ್ಣೀರು

ಒಂದು ಹನಿ ಕಣ್ಣೀರು:
==============

ಎಲ್ಲವೂ ಅನಿರೀಕ್ಷಿತ ಅನ್ನಿಸುವಂತೆ ಮುಗಿದುಹೋಯಿತು.
ಬೆಳಗಿನ ಜಾವ ನಾಲಕ್ಕು ಗಂಟೆ ಇರಬಹುದು ರೂಮಿನಲ್ಲಿ ಮಲಗಿದ್ದ ಅಮ್ಮ ತುಂಬಾನೆ ಕೆಮ್ಮುತ್ತಿದ್ದಳು, ಇದೇನು ಎಂದು ಎದ್ದುಹೋದೆ.
"ಏನಮ್ಮ ತುಂಬಾ ಕೆಮ್ಮು ಇರುವ ಹಾಗಿದೆ , ಕುಡಿಯಲು ನೀರು ಕೊಡಲಾ? " ಎಂದೆ, ದೀಪ ಹಾಕುತ್ತ.
ಅವಳಿಗೆ ಉತ್ತರಿಸಲು ಆಗಲಿಲ್ಲ ಅನ್ನಿಸುತ್ತೆ,
"ಕೊಡು" ಅನ್ನುವಂತೆ ತಲೆ ಆಡಿಸಿದಳು. ಹೋಗಿ ನೀರು ತಂದೆ. ಎದ್ದು ಕುಳಿತು ಕುಡಿಯಲು ಪ್ರಯತ್ನಿದಳು, ಆದರೆ ಪೂರ್ತಿ ನೀರು ಕುಡಿಯಲೇ ಇಲ್ಲ. ತಲೆ ಪಕ್ಕಕ್ಕೆ ವಾಲಿಸಿ ಹಾಗೆ ಹಿಂದಕ್ಕೆ ಒರಗಿಬಿಟ್ಟಳು.
ನನಗೆ ಸ್ವಲ್ಪ ಗಾಭರಿ ಅನ್ನಿಸಿತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ

 

ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು)  

[ ಕಡೆಯ ಬಾಗ ]

 

ವಿಶ್ವನು ಪ್ರಕಾಶ ಹೇಳಿದ ವಿವರವನ್ನೆಲ್ಲ ಕೇಳಿದ. ಬಸವರಾಜುವಿನ ದ್ವೇಶದ ಹಿನ್ನಲೆ ಸ್ವಲ್ಪ ಅರ್ಥವಾದಂತೆ ಅನ್ನಿಸಿತು. ಪ್ರಪಂಚದಲ್ಲಿ  ಹೊನ್ನು ಮಣ್ಣು ಯಾರ ನಡುವೆ ಆದರೂ ದ್ವೇಶ ಹುಟ್ಟಿಸಬಲ್ಲದು ಅನ್ನಿಸಿತು. ನಂತರ ಕೇಳಿದ

"ಸರಿಯಪ್ಪ ಈಗ ಮುಂದೆ ಏನು ಮಾಡೋದು. ಅಲ್ಲಿ ನೋಡಿದರೆ ಶೇಖರನು ಅಡುಗೆ ಮಾಡಿಸಿರುವೆ ಊಟಕ್ಕೆ ಬಾ ಎಂದು ಕರೆದಿದ್ದಾನೆ , ಅಲ್ಲಿಗೆ ಹೋಗುವುದಾ , ನೀನು ಜೊತೆಗೆ ಬರುವೆಯಾ?" .

 

ಪ್ರಕಾಶ ಶಾಂತವಾಗಿ ಕುಳಿತಿದ್ದವನು ನುಡಿದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ: ಕನಸಿನ ಮಾಯಾಜಿಂಕೆ [ ಜನನಿ ಜನ್ಮ ಭೂಮಿಶ್ಚ]

ಕತೆ: ಕನಸಿನ ಮಾಯಾಜಿಂಕೆ [ ಜನನಿ ಜನ್ಮ ಭೂಮಿಶ್ಚ]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಣ್ಣಕತೆ : ನೆನಪು

ನೆನಪು
=====

ಅಪ್ಪ ಈ ಜಾಗ ಅದೆಷ್ಟು ಸುಂದರ ಅಲ್ವಾ? 
’ 
ಅಪ್ಪ  ಮೌನವಾಗಿ ಸುತ್ತಲೂ ನೊಡುತ್ತಿದ್ದ.
ಅಪ್ಪನ ಮೌನದಲ್ಲಿ ನಿರ್ಧಾರವಿತ್ತು

ಜುಳು ಜುಳು ಶಬ್ದ ಮಾಡುತ್ತ ಹರಿಯುತ್ತಿರುವ ನದಿ. ಸುತ್ತಲೂ ಸುಂದರ ಕಾನನ. ಪಕ್ಷಿಗಳ ಕಲರವ. ಬೆಟ್ಟಗುಡ್ಡಗಳ ಮೋಹಕ ದೃಷ್ಯ. ನೋಡಿದಷ್ಟು ನೋಡಲೇ ಬೇಕೆನಿಸುವ ಪರಿಸರ. 

ಅಪ್ಪ ಈ ನದಿಯನ್ನು ನೋಡು ಅದೆಷ್ಟು ಮನಮೋಹಕ. ನಾವು ಇರುವ ಸ್ಥಳದಲ್ಲಿಯಾದರೆ ಕುಡಿಯುವ ನೀರಿಗೂ ಎಂತದೋ ಕಾಟ. ಅಲ್ಲಿರುವ ಅಷ್ಟು ಜನರಿಗೂ ಅದೇ ಜೀವ. ಬೇಸಿಗೆ ಬಂತೆಂದರೆ ಅಷ್ಟೆ, ಹನಿ ಹನಿ ನೀರಿಗೂ ಪರದಾಟ. ಹಾಗೆ ನೋಡಿದರೆ ನಾವಿರುವ ಜಾಗದಿಂದ ಬಲು ದೂರವೇನು ಇಲ್ಲ. ಇಲ್ಲಿಯ ನದಿ ನೋಡಿದರೆ ಸಂತೋಷ ಮೈದುಂಬುತ್ತದೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : ನಿಯತ್ತಿನ ಘರ್ಷಣೆ

ಕಥೆ : ನಿಯತ್ತಿನ ಘರ್ಷಣೆ
ಗುರು ಕೈಗೆ ಕಟ್ಟಿದ್ದ ಗಡಿಯಾರ ನೋಡಿಕೊಂಡ. ಸಂಜೆ ಆರುಘಂಟೆ ದಾಟುತ್ತಿತ್ತು. ಅವನ ಮನಸ್ಸು ಅಯಾಚಿತವಾಗಿ ನೆನೆಯಿತು. ಬೆಂಗಳೂರಿನಲ್ಲಿ ಈಗ ಸಮಯ ರಾತ್ರಿ ಹತ್ತುವರೆ ಅಗಿರುತ್ತದೆ.  ಮನೆಯಲ್ಲಿ ಅಪ್ಪ ಅಮ್ಮ ಮಲಗಿರುತ್ತಾರೆ,ತಂಗಿ ಓದುತ್ತ ಕುಳಿತಿರಬಹುದು. ಆದಿನದ ಮಟ್ಟಿಗೆ ಕೆಲಸವೇನು ಬಾಕಿ ಇರಲಿಲ್ಲ. ಸರಿ ಹೊರಡೋಣವೆಂದು ಎದ್ದು ನಿಂತ. ಅವನ ಸ್ನೇಹಿತ ಶ್ರೀನಾಥ ಇವನತ್ತ ನೋಡಿದ, ಏನು ಹೊರಟೆ ಅನ್ನುವಂತೆ. ಇಬ್ಬರೂ ಸೇರಿ ದೂರದ ಆ ನಾಡಿನಲ್ಲಿ ಮನೆ ಮಾಡಿದ್ದರು. 
"ನಾನು ಹೊರಟಿರುತ್ತೇನೆ"  ಗುರು ನುಡಿದ,  ಶ್ರೀನಾಥನತ್ತ ನೋಡುತ್ತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಣ್ಣಕತೆ : ಮನೆಗೆ ಬಂದ ಮೋಹಿನಿ

ಅದೇನೊ ಈ ಟೀವಿಗಳ ಹಾವಳಿ ಜಾಸ್ತಿಯಾದನಂತರ ಎಲ್ಲರ ಮನೆಗಳಲ್ಲಿ ರಾತ್ರಿ ಮಲಗುವ ಸಮಯವೆ ಹೆಚ್ಚು ಕಡಿಮೆ ಆಗಿಹೋಗಿದೆ. ಮೊದಲೆಲ್ಲ ರಾತ್ರಿ ಹತ್ತು ದಾಟಿತು ಅಂದರೆ ಸಾಕು ಎಲ್ಲರ ಮನೆಯ ದೀಪಗಳು ಆರುತ್ತಿದ್ದವು. ಈಗಲಾದರೆ ಅರ್ಧರಾತ್ರಿ ದಾಟಿದರು ಯಾವುದೊ ಚಾನಲ್ ನೋಡುತ್ತ ತೂಕಡಿಸುತ್ತ ಕುಳಿತಿರುವವರೆ ಜಾಸ್ತಿ. 

ಕಳೆದ ವಾರ ಹೀಗೆ ಆಯಿತು. ಮನೆಯಲ್ಲಿ ಹೆಂಡತಿ ಹಾಗು ಮಗಳು ರಾತ್ರಿ ಹತ್ತೂವರೆ ಆಯಿತೆಂದು ಹೋಗಿ ಮಲಗಿಬಿಟ್ಟರು, ನಾನು ವಿದೇಶಿ ಚಾನಲ್ ನ ಹಾರರ್ ಸಿನಿಮಾ ನೋಡುತ್ತ ಕುಳಿತಿದ್ದವನು, ಟೀವಿ ಆರಿಸಿ ಏಳುವಾಗ ಹನ್ನೆರಡು ರಾತ್ರಿ ದಾಟಿಯಾಗಿತ್ತು. 

ಟೀವಿ ಆರಿಸಿದೊಡನೆ  ಇದ್ದಕ್ಕಿದಂತೆ ಕವಿದ ಮೌನವನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 
Subscribe to ಪಾರ್ಥನ ಸಣ್ಣಕತೆಗಳು 2014