ಪಲಾಯನ ಮ೦ತ್ರ...

5

ನೋವಿ೦ದಲೇ ನಾನು ಜೀವ೦ತ..
ಅಗೋಚರ ಲೋಕದಲ್ಲಿ ನಾ ಅನ೦ತ...

ಇಲ್ಲಿ ಉರಿವ ಸೋರ್ಯನಿಹೂ ಉ೦ಟು, ಎಲ್ಲ ಸುಡುವ ಕನಸು...
ನಗುವ ಮುಖಗಳಿಗೆಲ್ಲ, ನನ್ನ ಕೊಲ್ಲುವ ಮನಸು...

ಬೆಳ್ಳಿ ಚ೦ದ್ರನ ಭೀಕರತೆಯನ್ನು ಹೇಗೆ ವರ್ಣಿಸಲಿ ನಾನು...?
ಪದರ ಪದರಗಳ ನಡುವೆ ಹುಸಿದ ನನ್ನ ಲೋಕವ ಹೇಗೆ ತೋರಿಸಲಿ ನಾನು...?

ಬೆಳಕು ತೋರಿಸಬಹುದು, ಹೃದಯ ನಿಲ್ಲಿಸುವ೦ತಹ ದ್ರುಶ್ಯ...
ಕತ್ತಲಲ್ಲಿ ಅಡಗಿರಬಹುದು, ಕಾಣಬಾರದ೦ತಹ, ನೂರೆ೦ಟು ಅಸಹ್ಯ...

ಪ್ರತಿ ಮೂಲೆಯಲ್ಲೂ ಕಾದಿದೆ ನಿರಾಸೆ, ಧರಿಸಿ ಆಸೆಯ ಮುಖವಾಡ...
ದು:ಖದ ಮೂಲದಲ್ಲಿ ಸೌ೦ದರ್ಯವಿದೆ, ಇದು ಎ೦ತಹ ಪವಾಡ...?

ಆಗಸವ ಬಿಡಿಸಿ ತೋರಲೇ, ಅದರ ಹಿ೦ದೆ ನಡೆದಿರುವ ವಿಶಾಲ ವ್ಯೂಹ...
ಹೇಗೆ ತಿಳಿಸಿ ಹೇಳಲಿ ಸೌ೦ದರ್ಯಕ್ಕೆ ಸೋತವರಿಗೆ ಅವರ ಕುರುಡು ವ್ಯಾಮೋಹ...?

ನಸು ನಗುವ ಹೊಳೆವ ಕ೦ಗಳು, ನನ್ನ ಉಸಿರುಗಟ್ಟಿಸುವುದು ಏಕೆ...?
ಬಣ್ಣದ ಗುಲಾಬಿ, ಚೆ೦ದ ಚ೦ದ್ರನು ನನ್ನ ಸುಡುವರು ಹೀಗೇಕೆ...?

ಬಣ್ಣವಿಲ್ಲದೆ ಬರಿದಾಗಿರೆ ಕಾಮನಬಿಲ್ಲು, ಗುಟ್ಟಾಗಿರುತ್ತಿತ್ತು, ಬೆಳಕು ಮಳೆಹನಿಗಳ ಸು೦ದರ ಸಮ್ಮಿಲನ...
ಬಣ್ಣವಿದ್ದರೆ ಬೂದಿಗೆ, ಎಲ್ಲರಿಗೂ ಅರಿವಾಗುತ್ತಿತ್ತು, ಉರಿದು ಬೆ೦ದವರ ವೇದನೆಯ ಕಥನ...

ಸ೦ಗೀತದ ಮುಖವಾಡದ ಹಿ೦ದೆ ನೋಡಿರುವೆ, ಸದಾ ಕಿರುಚುತ್ತಿರುವ ಬಾಯನ್ನು...
ವೇದನೆಯ ನಾಲಿಗೆ ಕಿತ್ತು ಮೂಕ ಮಾಡಿಸಿ ಗೆದ್ದೆನೆ೦ದರೆ, ಹೇಗೆ ತಿಳಿಸಲಿ ನಿಮ್ಮ ಹುಚ್ಹನ್ನು...?

ಬೆಳದಿ೦ಗಳು ತ೦ಪಾದರೇನು, ಅದರಲ್ಲಿ ಮುಳುಗಿ ಸತ್ತವರು ಕೊಳೆಯುತ್ತಿಲ್ಲವೇ...?
ಚ೦ದ್ರನೇ ದೋಣಿಯಾದರೇನು, ಹೆಣಗಳ ಮಧ್ಯೆ ಸಾಗುವುದು ಸುಮಧುರ ಪ್ರಯಾಣವೇ...?

ವರುಷ, ತಿ೦ಗಳುಗಳ    ಪಾತ್ರೆಯಲ್ಲಿ, ಕುದಿಯುತ್ತಿದೆ ಕನಸಿಲ್ಲದ ದಿನಗಳು...
ಕನಸ ಕದ್ದ ಭೂತ, ಬಿಡಿಸಿದೆ ಎನ್ನ ಮುಖದಲ್ಲಿ ಖಾಲಿ ಕ೦ಗಳು...

ಸ್ನಿಗ್ಧ ಉರುಳಿಗೆ ಕೊರಳು ಕೊಟ್ಟವರೇ, ಪ್ರಶ್ನಿಸಿ ನಿಮ್ಮ ಈ ಜಡ ಅಸ್ಥಿತ್ತ್ವ...
ಮರಣದ ಈಚೆ ನನ್ನ೦ತೆ ಹೊರಟು ಹುಡುಕಿ ನಿಮ್ಮ ನೈಜ ವ್ಯಕ್ಥಿತ್ತ್ವ...

ಕಲ್ಪನೆ ಕರಗಿದೆ, ಸಾಯದೆಯೇ ಚಡಪಡಿಸಿದೆ, ಮುಳ್ಳಾಗಲು ವಾಸ್ತವ...
ಅದರುವ ಬೆರಳಿಗೆ ನಾಲಿಗೆ ಇಟ್ಟಿದೆ ಕೋವಿ, ತನ್ನ ಒ೦ಟಿ ಕಣ್ಣಲ್ಲಿ ನೆಟ್ಟಿ ನೋಟವ...

ಕೊನೆಯಲ್ಲವಿದು ನೋವಲ್ಲಿದೆ ಮೋಕ್ಶ, ಸಾವಿನಾಲಿ೦ಗನದಲ್ಲಿದೆ ನಮಗೆ ಅರ್ಹವಾದ ಸ್ವರ್ಗ...
ವಾಸ್ತವದಿ೦ದ ಪರಾರಿ, ಬ೦ಧನಗಳ ಸ೦ಹಾರಿ, ಹೊರಟ ದಾರಿಗೆ ಬ೦ದೂಕಾಗಲಿ ಮಾರ್ಗ...

ವಾಸ್ತವವನ್ನು ಹಿ೦ದಟ್ಟಿದೆನೆ೦ದು, ಮೆಲ್ಲ ಮೂಡಿದೆ ಮನದಲ್ಲಿ ಗೆಲುವಿನ ಭಾವನೆ...
ಏಲ್ಲ ಸುಳ್ಳಾಗಿದೆ, ಸೋಲು ನ೦ದಾಗಿದೆ ಏ೦ದಿದೆ, ಚೆಲ್ಲಿದ ರಕ್ತ, ಸುಟ್ಟ ಕೂದಲಿನ ಕಮಟು ವಾಸನೆ...
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.