ಪಟಾಕಿ ಅನಾಹುತಗಳು ಎಚ್ಚರವಹಿಸಿ.

3.333335
ಪ್ರತಿ ದೀಪಾವಳಿಯೂ ಬೆಳಕಿನ ಹಬ್ಬವಾಗಲಿ, ಪರಿಸರ ಕಾಳಜಿಯೊಂದಿಗೆ ಹಬ್ಬವನ್ನು ಸಂಭ್ರಮಿಸೋಣ, ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನಾಂಧಕಾರದಿಂದ ಜ್ಞಾನದೆಡೆಗೆ, ದ್ವೇಷ, ಹಿಂಸೆಗಳನ್ನು ತೊರೆದು ಪ್ರೀತಿಯನ್ನು ಸಾರುವ ದೀಪಗಳ ಸಾಲುಗಳನ್ನು ಬೆಳಗಿಸಿ ಹಬ್ಬವನ್ನು ಆಚರಿಸೋಣ.
ಪಟಾಕಿ ಸಿಡಿತದಿಂದ ಬೆಂಕಿ ಅನಾಹುತಗಳಾಗುವ ಸಾಧ್ಯತೆಗಳಿವೆ :
ಪಟಾಕಿಗಳು ಆಟಿಕೆಗಳಲ್ಲ. ಸಿಡಿಮದ್ದು, ಗುಂಡಿನಷ್ಟೇ ಭಯಾನಕ! ದೇಹದ ಯಾವುದೇ ಭಾಗದ ಚರ್ಮ ಸುಡುವುದರಿಂದ ಹಿಡಿದು ದೃಷ್ಠಿ ಹೀನತೆ, ಸಾವು ಸಹಾ ಸಂಭವಿಸುವುದುಂಟು.
ಪಟಾಕಿಗಳನ್ನು ಸಿಡಿಸುವುದರಿಂದ ಹಾನಿಕಾರಕ ಅನಿಲಗಳಿಂದ ವಾಯುಮಾಲಿನ್ಯವಾಗುತ್ತದೆ.
ವಾಯುವಿನ ಧೂಳಿನ ಕಣಗಳ ಪ್ರಮಾಣ ಅತಿಯಾಗಿ ಕಣ್ಣು, ಮೂಗು, ಗಂಟಲಿನ ತೊಂದರೆಗಳಿಗೆ ಕಾರಣವಾಗುವುದು. ನಂತರ ತಲೆನೋವು, ಮಿದುಳಿನ ಕಾರ್ಯದಲ್ಲಿ ತೊಂದರೆ. ಇದರ ತೀವ್ರತೆ ಸಣ್ಣ ಮಕ್ಕಳು ಹಾಗೂ ವಯಸ್ಸಾದವರಲ್ಲಿ ಹೆಚ್ಚು. 
ಪಟಾಕಿಯನ್ನು ಸುಡುವುದರಿಂದ ಹೊರಬರುವ ವಿಷಾನಿಲಗಳು ಅನೇಕ. ಸಲ್ಫರ್ ಡೈ ಆಕ್ಸೈಡ್, ನೈಟ್ರೋಜನ್ ಆಕ್ಸೈಡ್, ಕಾರ್ಬನ್ಮಾನಾಕ್ಸೈಡ್, ಫಾಸ್ಫರಸ್ ಮುಂತಾದುವುಗಳು ಶ್ವಾಸಕೋಶದ ಖಾಯಿಲೆಗಳಾದ ಅಲರ್ಜಿಕ್ ಬ್ರಾಂಕೈಟಿಸ್, ಆಸ್ತಮ ಮುಂತಾದುವುಗಳನ್ನುಂಟು ಮಾಡುತ್ತವೆ.

Àಂ ಢಂ ಪಟಾಕಿಗಳಿಂದ ಶಬ್ದ ಮಾಲಿನ್ಯ :
ಕಿವಿಗಳಿಗಪ್ಪಳಿಸುವಂಥಹ ಶಬ್ದ, ಗಾಬರಿ, ಹೆದರಿಕೆ, ಭಯದ ಜೊತೆಗೆ ಕಿವಿಯ ತಮಟೆಯನ್ನು ತೂತಾಗಿಸುವುದು. 60 ಡೆಸಿ ಬೆಲ್ ನಷ್ಟು ಶಬ್ದ ಕಿವಿಗೆ ಹಿತವಾಗಿದ್ದರೆ ನಂತರ ಶಬ್ದ ಹೆಚ್ಚಾದಷ್ಟು, ಕಿವಿಯ ತಮಟೆಗಳಿಗೆ ಅಪಾಯ. ಸಣ್ಣ ಮಕ್ಕಳು ಹಾಗೂ ವಯಸ್ಸಾದವರಿಗೆ ಇದರ ತೀವ್ರತೆ ಹೆಚ್ಚು. ಪಟಾಕಿಗಳು ಹೊರಗೆಡಹುವ ಶಬ್ದ 100 ಅಥವಾ 120 ಡೆಸಿಬೆಲ್ ಗಿಂತಲೂ ಹೆಚ್ಚು. ಇದರಿಂದ ತಲೆನೋವು, ರಕ್ತದೊತ್ತಡ ಹೆಚ್ಚುವುದು, ಮಾನಸಿಕ ಕಿರಿಕಿರಿಯ ಜೊತೆಗೆ ಅನೇಕ ಜಾನುವಾರುಗಳು, ಪಕ್ಷಿ ಪ್ರಾಣಿಗಳಿಗೂ ಅಂಜಿಕೆಯನ್ನುಂಟುಮಾಡುವುದು. ನಾಯಿಗಳಾದರೋ ಹೆದರಿ ಮೂಲೆ ಸೇರುವುವು.
್ಢ ದೀಪಾವಳಿಯ ನಂತರ ಆಸ್ತಮಾ ರೋಗಿಗಳ ಸಂಖ್ಯೆ ಶೇ. 25ರಷ್ಟು ಹೆಚ್ಚುವುದೆಂದು ಅಂದಾಜಿಸಲಾಗಿದೆ. 
್ಢ ಪರಿಸರವನ್ನು (ಗಾಳಿ) ಹೊಕ್ಕುವ ಮಾಲಿನ್ಯ ಕಣಗಳು (ಅಲ್ಯುಮಿನಿಯಂ, ಸೋಡಿಯಂ, ಜಿಂಕ್, ತಾಮ್ರ, ಲೆಡ್ ಹಾಗೂ ಪೆÇಟ್ಯಾಸಿಯಂ) ಅಂಶಗಳನ್ನು ಹೊಂದಿದ್ದು, ಸುದೀರ್ಘ ಕಾಲ ಗಾಳಿಯಲ್ಲಿಯೇ ಉಳಿದು, ಶ್ವಾಸಕೋಶದ ತೊಂದರೆಗೆ ಎಡೆ ಮಾಡಿಕೊಡುತ್ತದೆ. 
್ಢ ಕೇವಲ ಶಬ್ದ ಹಾಗೂ ಹೊಗೆ ಉಗುಳುವ ಪಟಾಕಿಗಳಷ್ಟೇ ಅಲ್ಲ ಬೆಳಕನ್ನು ಚೆಲ್ಲುವ ಪಟಾಕಿಗಳೂ ಸಹ ದೃಷ್ಠಿದೋಷವನ್ನುಂಟು ಮಾಡುವುವು. ಬೆಳ್ಳಂಬೆಳಗಿನ ಬೆಳಕಿಗೆ ಪಟಾಕಿಗಳಲ್ಲಿರುವ ಅಲ್ಯುಮಿನಿಯಂ ಹಾಗೂ ಹಸಿರು ಬಣ್ಣಕ್ಕೆ ತಾಮ್ರ ಕಾರಣ. ಪಟಾಕಿಗಳಿಂದ ಪರಿಸರ ಸೇರುವ ಸೀಸ (ಲೆಡ್)ದ ಅಂಶ, ದೀರ್ಘಕಾಲ ಅಲ್ಲುಳಿದು ರಸಾಯನಿಕ ಪ್ರಕ್ರಿಯೆಗೊಳಗಾಗಿ ನಾವು ಸೇವಿಸುವ ತರಕಾರಿ, ಮೀನು ಮುಂತಾದ ಆಹಾರ ಪದಾರ್ಥಗಳಲ್ಲಿ ಸೇರುವುವು. ಇದರಿಂದ ನರ ಮಂಡಲಕ್ಕೆ ಅಪಾಯ ಸಂಭವಿಸುವುದು. 
ಸುಟ್ಟಗಾಯಗಳಿಗೆ ಕಾರಣ ಅನೇಕ. ಬೆಂಕಿ, ವಿದ್ಯುಚ್ಛಕ್ತಿ, ಆಸಿಡ್ಗಳು, ಅತಿಯಾದ ಬಿಸಿಲಿನ ತಾಪ, ಕೆಲ ರಸಾಯನಿಕ ವಸ್ತುಗಳು, ಕುದಿಯುವ ನೀರು ಅಥವಾ ಇತರೇ ವಸ್ತುಗಳು, ರೇಡಿಯೇಶನ್ ಮುಂತಾದುವು.
ಸುದೀರ್ಘಕಾಲ ಹಿಮ, ಮಂಜುಗಡ್ಡೆಗಳು, ಕೊರೆಯುವ ಚಳಿಯಲ್ಲಿದ್ದರೂ ಸಹ ವಿಶೇಷ ರೀತಿಯ ಚರ್ಮ ಸುಡುವಿಕೆಯುಂಟಾಗುತ್ತದೆ. 
ಸುಟ್ಟಗಾಯಗಳ ತೀವ್ರತೆಯನ್ನನುಸರಿಸಿ, ಗಾಯಗಳನ್ನು ವಿವಿಧ ರೀತಿಯಲ್ಲಿ ವಿಂಗಡಿಸಲಾಗಿದೆ. ಚಿಕಿತ್ಸೆ ಸಹಾ ಇದನ್ನಾಧರಿಸಿದೆ.
ವೊದಲನೇ ಡಿಗ್ರಿಯ ಸುಟ್ಟ ಗಾಯಗಳೆಂದರೆ ಚರ್ಮ ಕೆಂಪಾಗುವುದು, ನೋವು. ಇದು ಚರ್ಮದ ಮೇಲ್ಪದರಕ್ಕಷ್ಟೇ ಸೀಮಿತ.
ಎರಡನೇ ಡಿಗ್ರಿಯ ಸುಟ್ಟಗಾಯಗಳೆಂದರೆ, ಚರ್ಮದ ಕೆಳಪದರದವರೆಗೂ ಸುಟ್ಟ ಗಾಯಗಳು.
ಇದೇ ರೀತಿ ಮುಂದುವರಿದಂತೆ, ಆರನೇ ಡಿಗ್ರಿಯ ಸುಟ್ಟಗಾಯಗಳು ಮೂಳೆಯವರೆಗೂ ಹಬ್ಬಿದ್ದು ಮೂಳೆಕಪ್ಪಾಗಿ, ಮೂಳೆಯೊಳಗಿರುವ ರಕ್ತ ಉತ್ಪತ್ತಿಮಾಡುವ ಕಣಗಳೂ ಸುಟ್ಟಿರುವುವು, ಇದು ತೀವ್ರತೆರನಾದ ಸುಟ್ಟಗಾಯವಾಗಿದ್ದು, ಪ್ರಾಣಕ್ಕೆ ಹಾನಿ ಹಾಗೂ ಈ ರೀತಿಯಾದ ದೇಹದ ಅಂಗವನ್ನು ಬೇರ್ಪಡಿಸಲೇಬೇಕಾಗುವುದು. 
ಸುಟ್ಟಗಾಯಗಳಿಗೆ ಪ್ರಥಮ ಚಿಕಿತ್ಸೆ :
್ಢ ಚರ್ಮ ಸ್ವಲ್ಪ ಸುಟ್ಟಿದ್ದರೆ (ವೊದಲ ಹಾಗೂ ಎರಡನೇ ಡಿಗ್ರಿ ಸುಟ್ಟ ಗಾಯಗಳು) ತಕ್ಷಣ ಗಾಯದ ಮೇಲೆ ತಣ್ಣನೆಯ ನೀರನ್ನು ಸುರಿಯಿರಿ, ಕನಿಷ್ಠ ಪಕ್ಷ 5 ನಿಮಿಷ ಗಾಯದ ಮೇಲೆ ತಣ್ಣೀರು ಬೀಳುವಂತಾಗಲಿ. ಗಾಯದ ಭಾಗವನ್ನು ನಲ್ಲಿಯಿಂದ ಹರಿಯುವ ನೀರಿಗೂ ಒಡ್ಡ ಬಹುದು. (ಅಂದರೆ ನೋವು ನಿವಾರಣೆಯಾಗುವವರೆಗೂ ಕೆಲ ನಿಮಿಷಗಳವರೆಗೆ)
್ಢ ಗಾಯದ ಮೇಲೆ ಮಂಜುಗಡ್ಡೆ ಅಥವಾ ಐಸ್ ಇಡುವುದು ನಿಷಿದ್ಧ. ಗಾಯವನ್ನು ಹತ್ತಿಯಿಂದ ಮುಚ್ಚಬೇಡಿ. ಗಾಯದ ಚಿಕಿತ್ಸೆಗೆ ಬ್ಯಾಂಡೇಜ್ ಹಾಕಿಸಲು ವೈದ್ಯರ ಬಳಿ ಹೋಗುವುದು ಸೂಕ್ತ.
್ಢ ನೋವು ನಿವಾರಣೆಗೆ ನೀವು ಮುಂಚೆ ಉಪಯೋಗಿಸಿದಂತಹ ನೋವು ನಿವಾರಕ ಯಾವುದಾದರೊಂದು ಗುಳಿಗೆಯನ್ನು ಸೇವಿಸಬಹುದು (ಆಸ್ಪಿರಿನ್, ಬ್ರೂಫೆನ್, ಪಾರಾಸಿಟಮಾಲ್)
್ಢ ಬೊಬ್ಬೆಗಳನ್ನು ಪಿನ್ ತೆಗೆದುಕೊಂಡು ಚುಚ್ಚಿ ಒಡೆಯದಿರಿ. ಇದರಿಂದ ಸೋಂಕು ಸಂಭವಿಸುವುದು. 
್ಢ ಎಣ್ಣೆ, ಬೆಣ್ಣೆ, ತುಪ್ಪ, ಅರಿಶಿನ ಎಂಬಂತೆ ಯಾವುದೇ ಲೇಪನಗಳೂ ಸಹ ಗಾಯಕ್ಕೆ ನಿಷಿದ್ಧ. ತೀವ್ರತೆರನಾದ ಸುಟ್ಟ ಗಾಯಗಳನ್ನು ನೀರಿನಲ್ಲಿ ಅದ್ದ ಬೇಡಿ, ಹತ್ತಿರವಿರುವ ವೈದ್ಯರನ್ನು ತಕ್ಷಣ ಸಂಪರ್ಕಿಸಿ.
ಸುಟ್ಟಗಾಯಗಳ ಜಾಗದಲ್ಲಿರುವ ಬಟ್ಟೆಯನ್ನು ತೆಗೆಯಿರಿ. ತೀವ್ರತೆರನಾದ ಗಾಯಗಳಿಗೆ ಬಟ್ಟೆ ಅಂಟಿದ್ದರೆ, ಅದನ್ನು ಬಿಡಿಸಲು ಪ್ರಯತ್ನಿಸದಿರಿ.
್ಢ ಪಟಾಕಿ ಹಚ್ಚುವ ಮಕ್ಕಳೊಂದಿಗೆ, ತಂದೆ ತಾಯಿಗಳು ಪೆÇೀಷಕರು ಇದ್ದು, ಅನಾಹುತ ಸಂಭವಿಸದಂತೆ ನಿಗಾವಹಿಸುವುದು ಅಗತ್ಯ.
್ಢ ಕೈಗೆಟುಕುವಂತೆ ಒಂದು ಬಕೆಟ್ ನೀರನ್ನು ಪಟಾಕಿ ಹಚ್ಚುವ ಜಾಗದಲ್ಲಿರಿಸಿರಿ.
್ಢ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಸ್ವಚ್ಛವಾದ ಹತ್ತಿಯ ಬೆಡ್ಶೀಟ್ನಿಂದ ಸುಟ್ಟ ಗಾಯಗಳನ್ನು ಹಗುರವಾಗಿ ಮುಚ್ಚಿ ಕರೆದೊಯ್ಯಿರಿ.
್ಢ ಅಂಥಹ ವ್ಯಕ್ತಿಗೆ ಧೈರ್ಯ ಸ್ಥೆ ೈರ್ಯ ತುಂಬುವಂಥಹ ವಿಶ್ವಾಸಾರ್ಹ ನುಡಿಗಳನ್ನಾಡಿ.
್ಢ ಕಣ್ಣಿಗೆ ಕಿಡಿ ಹಾರಿದಲ್ಲಿ, ತಕ್ಷಣ ತಣ್ಣನೆಯ ನೀರಿನಿಂದ ತೊಳೆದು ಕಣ್ಣಿನ ವೈದ್ಯರ ವೊರೆ ಹೋಗುಬೇಕು.
್ಢ ದೇಹದ ಎಷ್ಟು ಭಾಗ ಸುಟ್ಟಿದೆ ಎಂಬುದನ್ನು ಚಿತ್ರದಲ್ಲಿ ತೋರಿಸಿರುವಂತೆ `ರೂಲ್ ಆಫ್ ನೈನ್'ನ ಪ್ರಕಾರ ನಿರ್ಧರಿಸಲಾಗುವುದು.
್ಢ ದೇಹದ ಶೇ. 30ಕ್ಕಿಂತ ಹೆಚ್ಚು ಭಾಗ ಸುಟ್ಟಿದ್ದರೆ, ಆತನನ್ನು ಆಸ್ಪತ್ರೆಗೆ ದಾಖಲಿಸಬೇಕು.
್ಢ 2.5 ಸೆಂ.ಮಿ. ಗಿಂತ ಜಾಸ್ತಿಯಾದ ಸುಟ್ಟಗಾಯಕ್ಕೆ ಚಿಕಿತ್ಸೆ ಬೇಕು.
್ಢ ವ್ಯಕ್ತಿಯ ಬಟ್ಟೆಗೆ ಬೆಂಕಿ ಹತ್ತಿಕೊಂಡರೆ, ಕೈಯಲ್ಲಿ ರಗ್ಗು, ಬ್ಲಾ ್ಯಂಕೆಟ್ ಅಥವಾ ಟೇಬಲ್ ಕ್ಲಾತ್ನ ಹಿಡಿದುಕೊಂಡು ಆತನ ಬಳಿ ಹೋಗಿ, ಅದರಿಂದ ಆತನನ್ನು ಸುತ್ತಿ, ನೆಲದ ಮೇಲೆ ಮಲಗಿಸಿ ಬೆಂಕಿ ಆರಿಸಬೇಕು.
್ಢ ಬೆಂಕಿ ಹತ್ತಿದ ವ್ಯಕ್ತಿ ಹೆದರಿ ಓಡಬಾರದು. ಗಾಳಿಯಿಂದ ಬೆಂಕಿಯ ತೀವ್ರತೆ ಹೆಚ್ಚುವುದು. ಹೆದರದೆ ನೆಲದ ಮೇಲೆ ಉರುಳಾಡಲು ಪ್ರಯತ್ನಿಸಬೇಕು.
್ಢ ಪಟಾಕಿ ಅನಾಹುತದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದನ್ನರಿಯುವುದು ಪ್ರತಿಯೊಬ್ಬರ ಕರ್ತವ್ಯ !
 
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.