ಪಕ್ಷಿನೋಟ - ಸೆಪ್ಟೆಂಬರ (೨೦೧೧) ಮಾಸದಲ್ಲಿ ಸಂಪದ

5

      ಸೆಪ್ಟೆಂಬರ್ ೨೦೧೧ ನಿಜಕ್ಕು ಎಲ್ಲ ಕನ್ನಡಿಗರಂತೆ ಸಂಪದಿಗರಿಗು ಸಂಭ್ರಮ, ಅದಕ್ಕೆ ಕಾರಣ ಕನ್ನಡಕ್ಕೆ ಸಂದ ಎಂಟನೆ ಜ್ಞಾನಪೀಠ ಪ್ರಶಸ್ತಿ. ಹರಿಪ್ರಸಾದ್ ನಾಡಿಗರು ಸಂಪದದಲ್ಲಿ ಶ್ರೀ ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಘೋಷಣೆಯಾದ ಬಗ್ಗೆ ಲೇಖನ "ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ"  ಪ್ರಕಟಿಸಿದಾಗ ಸಹಜವಾಗಿಯೆ ಅದು ಎಲ್ಲ ಸಂಪದಿಗರಲ್ಲು ಸಂಚಲನ ಮೂಡಿಸಿತು. ಸೆಪ್ಟೆಂಬರ್ ತಿಂಗಳ ಪಕ್ಷಿನೋಟದಲ್ಲಿ ಶ್ರೀ ಕಂಬಾರರಿಗೆ ಎಲ್ಲ ಸಂಪದಿಗರ ದ್ವನಿಯಾಗಿ ಅಭಿನಂದನೆ ಸಲ್ಲಿಸಲು ನನಗೆ ಸಂತಸವೆನಿಸುತ್ತಿದೆ.
    ಕನ್ನಡವಲ್ಲದೆ ಬೇರೆ ಯಾವುದೆ ಬಾಷೆಗೆ ಈ ರೀತಿ ಎಂಟು ಪ್ರಶಸ್ತಿಗಳು ದೊರಕಿದ್ದರೆ , ಅವರು ಅದನ್ನು ಜಗಜಾಹಿರುಗೊಳಿಸಿ, ಹೇಗಾದರು ಬಾಷೆಗೆ ರಾಜ್ಯಕ್ಕೆ ಎಲ್ಲ ರೀತಿಯ ಅನುಕೂಲಗಳು ದೊರಕುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಇಲ್ಲಿ ಬೇರೆಯೆ ಬಿಡಿ.

   ಮೊದಲ ದಿನವೆ ಗಣಪತಿಯ ಪೂಜೆಯೊಂದಿಗೆ ಪ್ರಾರಂಬವಾದ ಸೆಪ್ಟೆಂಬರ್ ೨೦೧೧ ಸಂಪದದಲ್ಲಿ ಸಾಕಷ್ಟು ಚಟುವಟಿಕೆಯಾಗಿತ್ತು.  ಈ  ತಿಂಗಳು ಪ್ರತಿಕ್ರಿಯೆಗಳು ಸಾಕಷ್ಟು ಉತ್ತೇಜನಕರವಾಗಿದ್ದು ಎಲ್ಲ ವಿಭಾಗಗಳಲ್ಲು ವೈವಿಧ್ಯವಾದ ಲೇಖನಗಳು ಸಾಲು ಸಾಲಾಗಿ ಬಂದವು. ಸಂಪದದಲ್ಲಿ 'ನೇರವಾಗಿ ಬರೆಯುವ ಸೌಲಭ್ಯ' ಈ ಮಾಸದಿಂದ ಪ್ರಾರಂಬವಾಯಿತು ಅದಕ್ಕಾಗಿ ಸಂಪದ ಬಳಗಕ್ಕೆ ಅಭಿನಂದನೆ ಸಲ್ಲಲೇ ಬೇಕು. ಮತ್ತು ಶ್ರೀಸತ್ಯಚರಣ್ ರವರ ಸಲಹೆಯಂತೆ ಪಕ್ಷಿನೋಟದಲ್ಲಿ ಈ ಬಾರಿ ಕೆಲವು ಬದಲಾವಣೆ ಮಾಡಿಕೊಂಡಿದೆ, ಬರಹಗಳಿಗೆ 'ಲಿಂಕ್ :) ಕೊಂಡಿ' ಯನ್ನು ಅಂಟಿಸಲಾಗಿದೆ.

ಲೇಖನ ವಿಭಾಗ :
    ಮೊದಲ ಬರಹ  "ನೆನಪಿನ ಚಿತ್ರಕಲಾ ಶಾಲೆ"  ಬರಹದ ಹಿನ್ನಲೆಗೆ ಬಳಸಿರುವ ರಚಿತ ಚಿತ್ರವು ಚೆನ್ನಾಗಿದೆ, ಬಹುಷಃ ಈ ಲೇಖನಮಾಲೆಯ ಪುಸ್ತಕರೂಪವು ಇದೆಯ ತಿಳಿದಿಲ್ಲ.  ನಾಗರಾಜರು 'ಕೆಳದಿಯ ಗುಂಡಾಜೋಯಿಸರ' ಬಗ್ಗೆ ಬರೆದಿರುವ ಲೇಖನ ಸಾಕಷ್ಟು ಇತಿಹಾಸದ ವಿವರಗಳ ಅಕರ, ವಸ್ತುಸಂಗ್ರಹಾಲಯದಲ್ಲಿನ ತಾಡಪತ್ರಗಳು, ಆಯುದಗಳ ಸಂಗ್ರಹ ಮುಂತಾದವು ನಮ್ಮಲ್ಲಿ ಸಾಕಷ್ಟು ಕುತೂಹಲ ಕೆರಳಿಸುತ್ತದೆ, ಇದಕ್ಕಾಗಿ ಅವಿರತ ದುಡಿಯುತ್ತಿರವ ಕೆಳದಿಜೋಯಿಸರ ಶ್ರಮ ಸ್ತುತ್ಯಾರ್ಹ.
    ದೀಪು " ಕದ್ದು ತಿನ್ನುವದರಲ್ಲಿ ಇರುವ ಸುಖವೆ ಬೇರೆ " ನಿಜ , ಕೇವಲ ಸೌತೆಕಾಯಿಗಾಗಿ ಎಷ್ಟು ಕಷ್ಟ! ಅಲ್ವ ಆದರೆ ಆ ಮಜ!! ಅಲ್ವ ಮತ್ತೆ !
    ಗುರುಪ್ರಸಾದರಿಂದ  ಅಂತರ್ಜಾಲದಲ್ಲಿ ಮೂರು ಕನ್ನಡ 'ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮದ'ಬಗ್ಗೆ ವಿವರ ಹಾಗು ಅಹ್ವಾನ. ಕೇವಲ ಆಕಸ್ಮಿಕವಲ್ಲ ಆ ಕಾರ್ಯಕ್ರಮದ ಅತಿಥಿಗಳಲ್ಲಿ ಒಬ್ಬರು ಶ್ರೀ ಚಂದ್ರಶೇಖರ ಕಂಬಾರರು.
    ನಮ್ಮ ಸಣ್ಣದೊಂದು ಮಾತು  ಇತರರ ಮನಸ್ಸನ್ನೆ ಮುರಿಯಬಲ್ಲದು ಹಾಗಾಗಿ ನಾವು ಆಡುವ ಪ್ರತಿಮಾತನ್ನು ತೂಗಿನೋಡಿ ಆಡಿದರೆ ಉತ್ತಮವೆನ್ನುತ್ತಾರೆ ಅರುಣಾ ಬದಿಕೋಡಿ "ಮಾತಿನ ಮಹತ್ವ" ದಲ್ಲಿ.
   ಶೋಭರವರು ತಮ್ಮ 'ಆದರ್ಶ ಶಿಕ್ಷಕರಿಗ" ವಂದನೆ ಅರ್ಪಿಸಿದರೆ ರೇಣುಕರವರ ತಮ್ಮ ಮೆಚ್ಚುನ ಗುರುಗಳ ಆಶೀರ್ವಾದದ ಪತ್ರದ ವಿಷಯವನ್ನು  ಪ್ರಸ್ತಾಪಿಸಿದ್ದಾರೆ 'ಪ್ರೀತಿಯ ವಿಧ್ಯಾರ್ಥಿನಿಗೊಂದು' ಪತ್ರದಲ್ಲಿ.
   ಮೈಮೇಲೆ ಹಲ್ಲಿಬಿದ್ದರೆ ಹೆಂಡತಿ ಕಾಲಿಗೆ ನಮಸ್ಕಾರಮಾಡಬೇಕೆ ! ಒಂದು ವಿಡಂಬನೆಯನ್ನು ಓದಿ ಸತೀಶರ "ಹಲ್ಲಿ ಬಿದ್ದ ಫಲದಲ್ಲಿ".
ಬೆಳ್ಳಾಲ ಗೋಪಿನಾಥರು ತಪ್ಪಿಸಿಕೊಂಡಿದ್ದಾರೆ ಅರಮನೆಯ 'ಪುಸ್ತಕ ಮೇಳದಲ್ಲಿ', ಬನ್ನಿ ಅಲ್ಲಿ ಹೋಗಿ ನಾವು ಅವರನ್ನು ಹುಡುಕೋಣ. ಅವರು ಸಿಗದಿದ್ದರೆ ಪುಸ್ತಕವಂತು ಸಿಕ್ಕೀತು.  ಮರಣ ಹೊಂದಿ ನಮ್ಮ ದೇಹವನ್ನು ಕಾಯ್ದಿಟ್ಟು ಮತ್ತೆ ೨೦೦ ಅಥವ ೩೦೦ ವರ್ಷಗಳ ನಂತರ ಜೀವ ಬರುವಂತಾದರೆ!  ನಿಜವೆ ?? ಅನ್ನಬೇಡಿ! ಓದಿ "ಕ್ರಯೋನಿಕ್ಸ್ ಕಾಯುತ್ತಿವೆ ಹೆಣಗಳು" . 'ಸುಮ' ರಿಂದ.
 ಸಂದ್ಯರಾಗ ಪುಸ್ತಕದ ಒಂದು ಕಿರುನೋಟ ಭಾರ್ಗವರಿಂದ ಅನಕೃ ರವರ ಕೃತಿಯ ಬಗ್ಗೆ "ಸಂದ್ಯರಾಗ ಮೌನರಾಗ.."
   ಶ್ಯಾಮಲಾಜನಾರ್ದನನ್ ರವರ "ದಾಸ.....ಪರಂಪರೆ ' ದಾಸಶ್ರೇಷ್ಟರ ಪರಿಚಯ ನೀಡುವ ಲೇಖನ, ಶ್ರೀಪಾದರಾಜರು ಎಂದರೆ ದತ್ತಾತ್ರೇಯರು  ಅಂಶಜರು ಎನ್ನುವ  ಶ್ರೀಪಾದರೊ ಅಥವ ಇವರೆ ಬೇರೆಯೊ ತಿಳಿಯಲಿಲ್ಲ.
    ನಾಗರಾಜರ 'ದೊಂಡಿಯವಾಘನ ನೆನೆಯೋಣ' ಶಿಕಾರಿಪುರದ ಹುಚ್ಚುರಾಯಸ್ವಾಮಿ ದೇವಾಲಯದಲ್ಲಿರುವ ಕತ್ತಿಯ ಇತಿಹಾಸದ ಬಗ್ಗೆ ಲೇಖನ. ನವೀನ  'ಗಣೇಶ ಲೆಫ್ಟ್ ಹ್ಯಾಂಡೊ ರೈಟ " ಗೊತ್ತಿಲ್ಲ ,ಆದರೆ 'four' ಹ್ಯಾಂಡು (ನಾಲಕ್ಕು ಕೈ) ಅಂತ ಮಾತ್ರ ಗೊತ್ತು. ಮತ್ತೆ ನಿನಗೆ  ಇನ್ನೇನು ಗೊತ್ತು ಅನ್ನುವಿರ ?  'ಮಂಗನ ಬಾಷೆ' ಮಾತ್ರ ಗೊತ್ತಿಲ್ಲ ಆದರೆ ಸುಮಂಗಲರವರಿಗೆ ಗೊತ್ತು ನೋಡಿ ಈ ಮಂಗನ ಬಾಷೆ . 
  ಅಣ್ಣ ಹಜಾರೆ ಯವರನ್ನು ಎಲ್ಲರು ಏಕಾಗಿ 'ಅಣ್ಣ" ಅನ್ನಬೇಕು  ಹೀಗೊಂದು ಸಮರ್ಥನೆ ಆಶೋಕ ಸುರಾನರಿಂದ. ಸತ್ಯದ ಹಾದಿ ಎಂದಿಗೂ ಕಠಿಣ ಎನ್ನುವ ಸುದಾಕರ ಚತುರ್ವೇದಿಯವರ ವಿಚಾರದಾರೆಗಳ ದರ್ಶನ,  ಕವಿ ನಾಗರಾಜರಿಂದ 'ವಿಚಾರ ಲಹರಿ' ಎರಡು ಬಾಗಗಳಲ್ಲಿ.
    ಶ್ರೀನಾಥ್ ಬಲ್ಲೆಯವರಿಂದ ಕವನ 'ನೆನಪುಗಳು ನಕ್ಯಾವೆ.." ಹಾಸ್ಯ ಲೇಖನದಿ೦ದ ಕವನಕ್ಕೆ ಜಿಗಿತ. ಮತ್ತೆ ಸೋಮಶೇಖರಯ್ಯನವರಿಂದ 'ಅನನ್ಯ ಅಲ್ಲಮ' ದ ಮುಂದುವರೆದ ಬಾಗ ಪತಾಂಜಲದ ಬಗ್ಗೆ ಹೊಸವ್ಯಾಖ್ಯಾನ.  ಹಾಗೆಯೆ ಸೂರ್ಯೋದಯವನ್ನು ದೇವರ ದಯೆ ಎನ್ನುವ ಕವಿಯೆ  'ಹಾಳು ರವಿ ಉದಯಿಸಿದ'  ಎನ್ನುವ ವಿವರಣೆಯ ಸತ್ಯನಾರಯಣರ ಕವಿ ಕುವೆಂಪುರವರ ಕುರಿತ ಲೇಖನವನ್ನೊಮ್ಮೆ ಓದಿ.  ಕರ್ನಾಟಕವೆ ಸ್ಮರಿಸಬೇಕಾದ ಸರ್ ಎಂ ವಿ ರವರಿಗೆ ಒಂದು ನೆನಪಿನ ಕಾಣಿಕೆ ಶ್ರೀದರ್ ರವರಿಂದ 'ಸರ್ ಎಂ ವಿ ಒಂದು ಸ್ಮರಣೆ' .
    ಸುಪ್ರೀತರ ಈ ಬಾರಿ ಸಾಕಷ್ಟು ಹುರುಪಿನಿಂದ ಸಂಪದದಲ್ಲಿ ಕಾಣಿಸಿಕೊಂಡಿದ್ದಾರೆ 'ಬೆಲೆಯೇರಿಕೆ' ಬಗ್ಗೆ ಒಂದು ಲೇಖನ ಬರೆದು,  'ಲೈಫು ಇಷ್ಟೇನೆ ' ಎಂಬ ಚಿತ್ರ ವಿಮರ್ಷೆಯನ್ನು ಮಾಡಿದ್ದಾರೆ, ವೈಜ್ಞಾನಿಕ ಲೇಖನಗಳು ಅದುನಿಕ 'ಮೊಬೈಲ"  ನ ಬಹುಮುಖಿ ಉಪಯೋಗದ ಬಗ್ಗೆ, ಪಶ್ಚಿಮ ಘಟ್ಟದಲ್ಲಿನ ಹೊಸ ಅವಿಷ್ಕಾರ 'ಹೊಸ ಪ್ರಭೇದದ ಕಪ್ಪೆ" ಗಳ ಬಗ್ಗೆ, ಅದುನಿಕ ತಂತ್ರಜ್ಞಾನದ ನಡುವೆ ಮನುಷ್ಯನ ಬದುಕಿನ ಬಗ್ಗೆ ಹೇಳುತ್ತ 'ನಾವು ಯಂತ್ರ ಜೇಬಲ್ಲಿ, ಮೆದುಳು ತಲೆಯಲ್ಲಿ ಇಟ್ಟುಕೊಂಡಿರುವಷ್ಟು ಕಾಲ ಮನುಷ್ಯರಾಗಿರಬಹುದು!" ಅನ್ನುತ್ತಾರೆ ಅವರ 'ತಂತು ನಿಸ್ತಂತು ಜಂತುಗಳು' ಲೇಖನದಲ್ಲಿ. ಆದರು ನನಗೆ ಅನುಮಾನ ಸುಪ್ರೀತರೆ ,  ಯಂತ್ರ, ಬುದ್ದಿಶಕ್ತಿ ಎರಡು ಜೊತೆಗೂಡಿ ಇರುವ ಈ ಯುಗದಲ್ಲಿ ನಿಜಕ್ಕು ನಾವು 'ಮನುಷ್ಯರಾಗಿದ್ದೀವ ?" . ಹಾಗೆಯೆ ಅವರ 'ಬೆಳಕಿನ ವೇಗವೂ ಮಿತಿಯಲ್ಲ" ಸಹ ಬೌತವಿಜ್ಞಾನ ಕುರಿತ ಲೇಖನ ಬೆಳಕಿನ ವೇಗವನ್ನು ಮೀರಿಸುವ ನ್ಯೂಟ್ರಿನೊಗಳ ಚಲನೆಯನ್ನು ಕುರಿತು. ಆದರೆ ಅದನ್ನು ವಿಶ್ವ ಇನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲ. 
    ಶಶಿದರರವರಿಂದ ಅಧ್ಯಾತ್ಮ ಸಾದಕ 'ಶ್ರೀಮುಕಂದುರು ಸ್ವಾಮಿಗಳ" ಪರಿಚಯ, ಅವರ ಪುಸ್ತಕ 'ಯೆಗ್ದಾಗೆಲ್ಲ ಐತೆ' ಬಗ್ಗೆ ಪ್ರಸ್ತಾಪ ಮಾಡಿದ್ದಾರೆ,( ಈ ಪುಸ್ತಕವನ್ನು ಕಳೆದ ನವೆಂಬರ್ ನಲ್ಲಿ ಅಬ್ದುಲ್ ರವರು ಸಂಪದಿಗರಿಗೆ ಪರಿಚಯಸಿದ್ದರು) . ಹಾಗೆಯೆ 
ಇವರ 'ಅಮ್ಮಮ್ಮನ ಜೊತೆ ಚಾರಣ' ಪ್ರಭಂದ ಮಲೆನಾಡಿನ ಚಿತ್ರಣದ ಜೊತೆ ಸಂಬಂದಗಳ ಮದುರ ಹೆಣೆಗೆಯನ್ನು ನಮ್ಮ ಮನಸಿನ ಮುಂದೆ ಕಟ್ಟಿಡುತ್ತದೆ. ಮಲೆನಾಡಿನ ಚಿತ್ರಗಳನ್ನು ಅಕ್ಷರಗಳಿಗೆ ಇಳಿಸುವುದರಲ್ಲಿ ಹಾಲಾಡಿಯವರು ಸಿದ್ದಹಸ್ತರು. 
   ಶ್ರೀದರ ಬಂಡ್ರಿಯವರಿಗೇನೊ ಸಂಶಯ 'ಕರ್ನಾಟಕದ ದೇವರುಗಳು' ಅಕ್ಕಪಕ್ಕದ ದೇವರುಗಳಿಗಿಂತ ಬಡವರೆ ಎಂದು. ಅಲ್ಲವನ್ನುತ್ತಾರೆ ರಾಜೇಶ್ ನಾಯ್ಕ ನೋಡಿ ಕರ್ನಾಟಕದ ದೇವಾಲಯದ ಕಲಾ ಸಂಪತ್ತನ್ನು ತಮ್ಮ ವರ್ಣಚಿತ್ರಗಳ ಮೂಲಕ ಪ್ರದರ್ಶಿಸುತ್ತಿದ್ದಾರೆ "ಲಕ್ಷ್ಮಿನರಸಿಂಹ ದೇವಾಲಯ ಭದ್ರಾವತಿ" ಯಲ್ಲಿ
    ನರಸಿಂಹಮೂರ್ತಿ ಆನೆಗುಂದಿಯವರು "ಗವಾಯಿಗಳ ಮಹಿಮೆ'  ಪುಟ್ಟಲೇಖನದಲ್ಲಿ ಗದುಗಿನ ವಿರೇಶ್ವರ ಆಶ್ರಮದ ಕುರುಡುಮಕ್ಕಳ ಸಾಧನೆಯ ಬಗ್ಗೆ ಭಾವುಕರಾಗಿ ವರ್ಣಿಸಿದ್ದಾರೆ, ಓದಿನೋಡಿ.  ಗೋಪಿನಾಥರಾಯರ ಗುರುಗಳಾದ ಹೆಚ್ ಎಸ್ ವಿ ಯವರ ಅಭ್ಯಾಸದ ಬಗ್ಗೆ ಮತ್ತೆ 'ವಾಕ್ಪಥ'ದ ಏಳನೆಯ ಹೆಜ್ಜೆಯ ಬಗ್ಗೆ ಉತ್ಸಾಹದಿಂದ ಜಬ್ಬರ್ದಸ್ತ್ ವರದಿಯನ್ನೆ ಕೊಟ್ಟಿದ್ದಾರೆ.

 ನವರಾತ್ರಿಯ ಬಗ್ಗೆ ಲಕ್ಷ್ಮೀಕಾಂತರವರಿಂದ ವಿವರವಾದ  ಅವರ 'ನವರಾತ್ರಿ' ಲೇಖನದಲ್ಲಿ, ಅಷ್ಟೊಂದು ವಿದದ ನವರಾತ್ರಿಗಳಿವೆ ಎಂಬುದು ಈಗಲೆ ತಿಳಿಯಿತು. ನವರಾತ್ರಿಯ ಬಗ್ಗೆ ಹಲವು ಲೇಖನಗಳು ಬಂದವು ಹಾಗೆ ಶ್ಯಾಮಲ ಜನಾರ್ಧನನ್ ರವರು 'ನವರಾತ್ರಿಯ ದೇವಿಯನ್ನು' ಸ್ತುತಿ ಮಾಡುತ್ತಿದ್ದಾರೆ ವಿವಿದ ರೂಪದಲ್ಲಿ

  ಶ್ರೀದರ್ ರವರು 'ಬೀchi' ಯವರನ್ನು ನೆನೆಸಿಕೊಂಡು ಸಾಕಷ್ಟು ಹಾಸ್ಯಚಟಾಕಿಗಳನ್ನು ಸಂಪದಿಗರ ಜೊತೆ ಹಂಚಿಕೊಂಡಿದ್ದಾರೆ. ನೋಡಿ ಅವರ ಜೋಕಿನಲ್ಲಿ ಹಿಂದುಮುಂದಾಗಿ ಶಾಲೆಗೆ ಬರುವ ತಿಂಮನನ್ನು . ನಗುತ್ತಲೆ  ಶ್ರೀದರರು ಏಕೊ ಗಂಬೀರರಾದರು, ಅವರು ಕೇಳುತ್ತಿದ್ದಾರೆ 'ದೇವರ ಬಣ್ಣ ನೀಲಿ'ಯೆ , ದೇವರನ್ನು ಕಂಡವರನ್ನಂತು ನಾ ಕಾಣೆ , ನೀವೆ ಹೇಳಬೇಕು ದೇವರು ನೀಲಿಯೆ??
    ಇಷ್ಟೆಲ್ಲ ಆದರು ನಾವು ಬರಿ ಮನುಷ್ಯರು ಎಂದು ನೆನಪಿಸಿದವರು ಶ್ರೀನಾಥರು 'ಇವರು  ಮನುಜರು ಕಣ್ಲ ಸಿದ್ದಾ"ಎಂಬ ಕವನದಲ್ಲಿ. ಜೊತೆಗೆ ನಾಗರಾಜರು ಹೇಳುತ್ತಾರೆ, ನಾವು ಮನುಷ್ಯರು ನಿಜ ಆದರೆ ನಮ್ಮೊಳಗಿನ  "ಒಲವಿನ ಒರತೆ ಬತ್ತದಿರಲಿ"  ಹೌದು  ಎನ್ನುವ ಶ್ರೀದರ ಮತ್ತೆ ಮನುಷ್ಯತ್ವ ಮುಖ್ಯ ಎನ್ನುತ್ತ "ಸೂರಪ್ಪನ ಮಾನವೀಯತೆ" ಎಂಬ ಲೇಖನ ಬರೆದು ತಿಂಗಳ ಲೆಕ್ಕ ಮುಗಿಸಿದ್ದಾರೆ.

ಬ್ಲಾಗ್ ಬರಹಗಳು:
   ಮೊದಲ ಬ್ಲಾಗ್ ಆಸುರವರಿಂದ "ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!" ಹಿಂದಿ ಚಿತ್ರಗೀತೆಯ ಭಾವನುವಾದ,ಶರಾಬಿ ಚಿತ್ರದಲ್ಲಿ ಕಿಶೋರ್ ಹಾಡಿರುವ ಗೀತೆ, ಅದರಲ್ಲಿ ಒಂದು ಸಾಲು 'ಮುಳುಗುವವಗೆ ಹುಲ್ಲು ಕಡ್ಡೀ ಆಸರೆಯೇ ಬಲು ದೊಡ್ಡದು!' ನಿಜವೆ.
   ಚಿಕ್ಕವಯಸ್ಸಿನಲ್ಲಿ ಕೇಳಿದ 'ಪಾರ್ವತಿ ಮಾಯಯೆ.." ಶಿಶುಗೀತೆಯನ್ನು ನೆನಪಿಸಿಕೊಂಡು ಗಣೇಶ ಹಬ್ಬದದಿನ ಬರೆದಿದ್ದಾರೆ "ಗಣೇಶ ಸೃಷ್ಟಿ" ಯಲ್ಲಿ ಕ್ಯಾಲಿಪೋರ್ನಿಯದಿಂದ ಡಾ!ಮೀನಸುಬ್ಬರಾವ ರವರು.  'ಯಾರ ವ್ಯಕ್ತಿತ್ವವನ್ನು ಅವರ ಲೋಪದಿಂದ ನಿರ್ಣಯಿಸಬಾರದು' ನಿಜಕ್ಕು ಎಂತಹ ಸುಂದರ ವಾಕ್ಯ ವಿವೇಕನಂದರದು, ಇಂದಿನ ಪರಸ್ಪರ ಕೆಸರೆಸೆಯುವ ಆಟದಲ್ಲಿ ಇದನ್ನು ನಮಗಾಗಿ ಸಂಗ್ರಹಿಸಿದ್ದಾರೆ ನಾವಡರು ತಮ್ಮ 'ಯೋಚಿಸಲೊಂದಿಷ್ಟು'ವಿನಲ್ಲಿ.
   ನಮ್ಮ ದೇಹವೆಂದರೆ ಕಾಮಕ್ರೋದಮೋಹಗಳೆಲ್ಲ ಹೊತ್ತಿಉರಿಯುತ್ತಿರುವ ಒಲೆ ಎನ್ನುತ್ತಾರೆ ರಾಮಮೋಹನರು ತಮ್ಮ 'ದೇಹವೆಂಬ ಒಲೆಯಲ್ಲಿ', ಕುಜರರೊಡನೆ ಆಡುತ್ತ, ವಂಚನೆಮಾಡುತ್ತ ಇರುವವ ಅಸುರನೆಂದು ಹೇಳುತ್ತಾರೆ ಕವಿನಾಗರಾಜರು ತಮ್ಮ 'ಮೂಡ' ಕವನದಲ್ಲಿ  ಅವರ ಮೂಡ ಕವನ ಸಾಲುಗಳು ಉತ್ತಮ ಸಂದೇಶಹೊತ್ತು ಸಾಗುತ್ತಿವೆ ನಿರಂತರ,  ಸಂಪದದ ಅಂಗಳದಲ್ಲೀಗ ವೇದಾಂತದ ವೈರಾಗ್ಯದ ಭಾವ ಲಹರಿಯದು ಒಂದು ಹಿಡಿತ, ಕವಿನಾಗರಾಜರ ಮೂಡದ ಜೊತೆಜೊತೆಗೆ ಹೊಸ ಸದಸ್ಯ ಸತೀಶರಿಂದ ಶ್ರೀನರಸಿಂಹನನ್ನು ನೆನೆಯುತ್ತ ರಚಿಸುವ ಪದ್ಯಗಳು ನಮ್ಮನ್ನು ಚಿಂತನೆಗೆ ತಳ್ಳುತ್ತವೆ.
    ಒಂಟಿಯಾಗಿ ಹೊರಟ ಗೆಳತಿಯನ್ನು ಕಂಡವಳಿಗೆ ಆತಂಕ ಅವರಿಬ್ಬರ ಮಾತು ಗಮನಿಸಿ "ಒಬ್ಬಂಟಿ ತೆರಳಲಂಜಿಕೆಯಾಗದೇನೆ ಹೇಳೆ ಗೆಳತಿ?"  ಉತ್ತರ.. "ಒತ್ತಾಸೆಗುಂಟಲ್ಲೆ ಕಮ್ಮಗೋಲನ ಐದು ಅಂಬುಗಳೇ!" ಮನ್ಮಥನ ಶರಗಳೆ ತನಗೆ ಒತ್ತಾಸೆ ಅನ್ನುತ್ತಾಳೆ,  ಹಂಸಾನಂದಿಯವರ 'ಒತ್ತಾಸೆ' ಅವರ ಎಂದಿನ ಶೈಲಿಯ ಭಾವನುವಾದ.
   "ಗುರುವೇ ನಮಃ" ಶಿಕ್ಷಕರದಿನದಂದು ತಮ್ಮ ಗುರುಗಳನ್ನು ನೆನೆಯುತ್ತ ಅವರಿಗೆ ತಾವು ರಚಿಸಿದ ವರ್ಣಚಿತ್ರವೊಂದನ್ನು ಸಮರ್ಪಿಸಿದ್ದಾರೆ ಶೀಲಾನಾಯಕರು.
 
    ಮತ್ತೆ ನಾವಡರ ಕಾಲದಕನ್ನಡಿಯ ಬೆಚ್ಚಿಬೀಳಿಸುವ ಸುದ್ದಿ "ಕಮ್ಯೂನಿಸಂ ಎಂದರೆ ನರಮೇದವೆ", ಪಶ್ಚಿಮ ಬಂಗಾಳದ ರಕ್ತಪಿಪಾಸು ಕಾಮ್ರೇಡ್ ಗಳ ಸುದ್ದಿ, ಆದರೆ ಭಾರತದ ಪತ್ರಿಕೆಗಳಿಗೇಕೊ ಅದು ಸುದ್ದಿಯೆ ಅಲ್ಲ. ಯಾವ ಬೇಸರವೊ ನಾವಡರು ಇದ್ದಕಿದ್ದಂತೆ 'ಕಾಲದ ಕನ್ನಡಿ' ಒಡೆಯಿತೆ ಅಂತ ಹೇಳಿ ಎಲ್ಲ ಕಾಲದ ಕನ್ನಡಿ ಓದುಗರಲ್ಲಿ ಆತಂಕ ಮೂಡಿಸಿದರು. 
    ನರಸಬೈರಯ್ಯನವರಿಂದ "ಕರ್ನಾಟಕ ಗೆಜಿಟಿಯರ್ " ಬಗ್ಗೆ ಲೇಖನ ನಿಜ ಇದು ಅಂತರ್ಜಾಲಪುಟದಲ್ಲಿ ಸಿಗುವಂತಾದಲ್ಲಿ ಎಲ್ಲರಿಗು ಉಪಯೋಗವಾಗಬಹುದಾದ, ಅಂಕೆಸಂಖ್ಯೆ ಹಾಗು ದಾಖಲೆಗಳು.  ಪ್ರಸನ್ನರ "ಮನುಷ್ಯ= ಸಸ್ಯ" ಲೇಖನದಲ್ಲಿ ಉತ್ತಮ ಚಿತ್ರಗಳು ಹಾಗು ಪ್ರಶ್ನೆ ಸಸ್ಯಗಳು ಹೇಗೊ ಬದುಕುತ್ತಾವಾಗಲಿ ಮನುಷ್ಯನಿಗೆ ಇದು ಏಕೆ ಅಸಾದ್ಯ? , ಬಹುಷಃ ಅದೇ ಲೇಖನದ ಪ್ರತಿಕ್ರಿಯೆಯಲ್ಲಿ ಆಚಾರ್ಯರು ಸರಿಯಾದ ಉತ್ತರ ನೀಡಿದ್ದಾರೆ ಮನುಷ್ಯನು ಸಹ ಹಾಗೆ ಬದುಕಬಲ್ಲ.
    ಸಂಪದಿಗರೆ ನೀವು ಎಂದು ಮುಂಬಯಿ ನಗರ ನೋಡಿಲ್ಲವೆ ಹಾಗಿದ್ದಲ್ಲಿ ಹೊಳೆನರಸಿಪುರದ ಮಂಜುನಾಥರ ಲೇಖನ "ಮು೦ಬೈ ಎ೦ಬ ನಿತ್ಯಸು೦ದರಿ" ಲೇಖನವನ್ನು ಓದಿಬಿಡಿ ಸಾಕು ಇಲ್ಲಿಂದಲ್ಲೆ ನೇರ ದರ್ಶನ.   ಮತ್ತೆ ಮಾದ್ಯಮದವರ ವೃತ್ತಿ ನಿರ್ಲಕ್ಷವನ್ನು ಕಂಡು ಕೆಂಡಾಮಂಡಲ ನಮ್ಮ ಜಯಂತ್ ಅವರ ಲೇಖನ "ಸಾವಿನ ಜೊತೆ ಮಾಧ್ಯಮದವರ ಆಟ.." . ನಿಮ್ಮ 'ಆರೋಗ್ಯ'ದಲ್ಲಿ ಏನಾದರು ಸ್ವಲ್ಪ ಏರುಪೇರೆ ಶ್ರೀಲಕ್ಶ್ಮಿಯವರಿಂದ ಸ್ವಲ್ಪ 'ಟಿಪ್ಸ್' ಏಕೆ ತೆಗೆದುಕೊಳ್ಳಬಾರದು. "ನಿಲ್ಲದು ಅಮಾಯಕರ ಸಾವು ನೋವು "ಮತ್ತೆ ಮತ್ತೆ ಅದೇ ದುರಂತ ಪಾಪಿ ಭಯೋತ್ಪಾದಕರ ದುರಳತನ ಆದರೇನು ಏಕೊ ಅದನ್ನು ಹುಟ್ಟಡಿಗುಸುವ ಗಂಡಸುತನವಿಲ್ಲ ಭಾರತ ಸರ್ಕಾರಕ್ಕೆ ಜಯಂತ್  ನಿಮ್ಮಂತೆಯೆ ಬೇಸರ ನಮಗು.
  ಸವಿತೃರವರ "ಗಣಪ್ಪನ ಗಳಾಟೆ " ಕನ್ನಡದ ವ್ಯಾಕರಣದ ಬಗ್ಗೆ ಉತ್ತಮ ಚರ್ಚೆಯವಸ್ತು, ಈ ರೀತಿಯ ಚರ್ಚೆಗಳು ಸಂಪದದಲ್ಲಿ ಅಗಾಗ್ಯೆ ನಡೆದರೆ ನಮ್ಮ ನೆನಪಿನ ಮೇಲೆ ಕುಳಿತಿರುವ ದೂಳನ್ನು ಕೊಡವಿಕೊಂಡು ನಾವು ವ್ಯಾಕರಣ ಸನ್ನದರಾಗಬಹುದು.
   "ಇನ್ನೇನು ಅವಳು ಬರುವ..." ನಾವಡರ ಕವನ ತಮ್ಮ ಹೆಂಡತಿಯನ್ನು ಕಾಯುತ್ತಿರುವ ಪತಿಯೊಬ್ಬನ ಮನಸಿನ ಚಿತ್ರಣ. ಹಾಗೆಯೆ 'ನೆನಪುಂಟೇನೆ..." ಅದೆ ಸಂಸಾರದ ರಸನಿಮಿಷದ ಚಿತ್ರ.
  'ಆಸುಮನ'ದಿಂದ ಮೂಡುವ ಆತ್ರಾಡಿಸುರೇಶರ ಕವನಗಳೆಂದರೆ ಅದರದು ಬೇರೆಯೆ ಆದ ಚಾಪು, ಹಾಗಾಗಿಯೆ ಅವರ ಕವನಗಳು "ಸದ್ದಿಲ್ಲದೆ" ನಮ್ಮ ಮನಗಳಲ್ಲಿ ನೆಲೆಯೂರಿಬಿಡುತ್ತವೆ. ಆಸುರವರು ಹೀಗಾದರೆ ಪಾಪ ಕುಂಭ್ಳೆಯವರನ್ನು ನೋಡಿ "ಪ್ಯಾರ್ ಕಿ ಎಬಿಸಿಡಿ.. " ಕಲಿಯಬೇಕಿದೆ ಕರುಣೆ ತೋರಿಸಿ ಅಂತಾರೆ ಶಿಶುವಿಹಾರದ ಕಂದನಂತೆ ಆದರೆ ಅದರಲ್ಲಿ ಮಾಸ್ಟರ ಪದವಿ ಹೊಡೆದುಬಿಟ್ಟಿದ್ದಾರೆ ಎಚ್ಚರ ಏಕೆಂದರೆ ಮತ್ತೆ ಅವರೆ ರಚಿಸಿದ್ದಾರೆ 'ಆವರಿಸಿದೆ ನಿನ್ಯಾಕೆ ನನ ಎಲ್ಲ ಅಲೋಚನೆಯಲಿ' ಎಂದು.
   ಜಯಂತರಿಗೆ ಅನುಮಾನ 'ಸೀರೆ ಉಡುವುದು ತಪ್ಪೆ" ಅಂತಾರೆ ಇವರಿಗ್ಯಾಕೆ ಈ " ಆಸೆ"    ಪ್ಯಾಂಟು ಹಾಕುವ ಹೆಣ್ಣುಮಕ್ಕಳ ನಡುವೆ ಅಂತ ಚಿಂತಿಸಿದರೆ,  ಅವರು ಸೀರೆ ಉಡುವ ಬಗ್ಗೆಯಲ್ಲ ಲೇಖನ, ಅದು ಬೇರೆಯೆ.  ಪ್ರಸನ್ನರು ಅವರ ಸಖಿಯ ಚಿಂತೆಯಲ್ಲಿ "ಬಾ ಸಖಿ.." ಅನ್ನುತ್ತಿದ್ದರೆ ಅವರ ಕವನದಲ್ಲಿ.
  ರವಿಯವರೆ ನೀವೆನೊ  "ಭಯಂಕರ ಜೋಕ್ " ಮಾಡಿದಿರಿ  ಅದನ್ನು ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟವೆ ಹುಲಿ ನಮ್ಮನ್ನು ತಿನ್ನುತ್ತದೆ ಎಂದು ಕಾಪಾಡಲು ಕಿರುಬನನ್ನು ಕರೆಯಲು ಸಾದ್ಯವೆ. ನಡುವೆ ಬರಿ ಕಾಫಿಕುಡಿಯುವ ಚೇತನ್ಗೆಂತದೊ ಕಿಕ್ಕು ಅವರ 'ಸ್ವಲ್ಪ ಕಿಕ್" ನಲ್ಲಿ.
    ಮೀಸೆ ಎಂದರೆ ಗಂಡಸಿಗಷ್ಟೆ ಅಲ್ಲರಿ, ಮೀಸೆಯ ಒಡೆಯನ ಹೆಂಡತಿಗು ಅದರ ಮೇಲೆ ಎಂತದೊ ವಾಂಛೆ! ಇಲ್ಲಿ ನೋಡಿ "ನನ್ನವನ ಮೀಸೆ" ಯಲ್ಲಿ, ಕವನಗಳ ತಮ್ಮ ಮೊದಲ ಹೆಜ್ಜೆಗಳಲ್ಲಿಯೆ ತಮ್ಮ ಚಾಪು ಮೂಡಿಸುತ್ತಿದ್ದಾರೆ ಗಂಡುನೆಲ ಧಾರವಾಡದ ಹೆಣ್ಣುಮಗಳು ಸುಮಂಗಲ.
   ಮಾಗೋಡು ಜಲಪಾತದ ಸುಂದರ ಚಿತ್ರಗಳ ಅನಾವರಣ ಮಂಜುನಾಥರಿಂದ 'ಜಲಲ ಜಲಲ ಜಲದಾರೆ" ಲೇಖನದಲ್ಲಿ.    ನಮ್ಮ ಮಾತುಗಳು ಹೇಗಿರಬೇಕು ಎಲ್ಲರ ಚಿಂತೆ, ಆದರೆ ಅದಕ್ಕೊಂದು ಉತ್ತರ ಆಸುರವರ ಕವನ "ಮಾತುಗಳು ಹೇಗಿರಬೇಕು ಅನ್ನುವಿರ"
   ಮಾಟ ಮಂತ್ರ ಇವೆಲ್ಲ ಸುಳ್ಳು ಮೂಡನಂಬಿಕೆ ಎಂದೆಲ್ಲ ಹೇಳುವಿರ ?. ಅಥವ ಅದರ ಬಗ್ಗೆ ನಮಗೇನು ಅನುಭವವಿಲ್ಲ ಅನ್ನುವಿರ . ಇಲ್ಲಿದೆ ನೋಡಿ ಭಯದ ರುದ್ರ ನರ್ತನ, ಹೆಚ್ಚು ಕಡಿಮೆ ಘಟನ ಸ್ಥಳದಿಂದಲೆ ನೇರ ನಿರೂಪಣೆ , ಮಂಜುನಾಥರ ಸ್ವಂತ ಅನುಭವ "ಮಾಟ ಮಂತ್ರ ಮಾಯೆ.."  ಗಟ್ಟಿಎದೆಯಿಂದ ಓದಿ. ಮಂಜುರವರವ ಮಾಟ ಮಂತ್ರದ  ಲೇಖನದ ಪ್ರಭಾವವೊ ಎಂಬಂತೆ ದೆವ್ವ ಮಾಟ ಮಂತ್ರಗಳ ಬಗ್ಗೆ ಸಾಕಷ್ಟು ಲೇಖನಗಳು ಈ ತಿಂಗಳು ಮೂಡಿ ಬಂದವು
       ಗಣೇಶರ ಕಲ್ಪನೆಯ  ಹಲವು ಸಂಪದಿಗರ ಕೈಸೇರಿಸಿದ ವಿಶಿಷ್ಟ ಲೇಖನಮಾಲೆ "ಚಲೊ ಮಲ್ಲೇಶ್ವರ"  ಸಹ ಸಂಪದದಲ್ಲಿ ಹೊಸ ಹೆಜ್ಜೆ , ಹೊಸ ಪ್ರಯತ್ನ.
 
    "ಶಿಖಿರಸೂರ್ಯ" ಕಂಬಾರರಿಗೆ ಅಭಿನಂದನೆ ಅರ್ಪಿಸುವ ಶಶಿಕುಮಾರರ ಲೇಖನ, ನಿಜ ಕನ್ನಡಿಗರಿಗೆ ಒಮ್ಮೆ ಬರುವ ಗೌರವಕ್ಕೆ ನಾವು ಆನಂದಿಸಬೇಕು, ನಾವೆ ಅದನ್ನು ಪ್ರಶ್ನಿಸುತ್ತ ಅದರ ಮೌಲ್ಯ ಕಳೆಯಬಾರದು, ಮತ್ತೆ ಪ್ರತಿಬಾರಿ ಪ್ರಶಸ್ತಿ ಬಂದಾಗಲು, ಪ್ರಶಸ್ತಿ ಸ್ವೀಕರಿಸುವರನ್ನು ಪ್ರಶಸ್ತಿ ಬಾರದವರ ಜೊತೆ ಅನಗತ್ಯ ತುಲನೆ ಮಾಡುವ ನಮ್ಮ ವಾದಗಳನ್ನು ನಿಲ್ಲಿಸಿ ವಿಶಾಲ ದೃಷ್ಟಿ ಬೆಳಸಿಕೊಂಡಲ್ಲಿ, ಕನ್ನಡದ ಕಿರೀಟಕ್ಕೆ ಮತ್ತಷ್ಟು ಹೊಳಪು ಬಂದೀತು.
   ಅಳಿವಿನ ನಂತರ ಉಳಿಯುವುದೇನು ಎನ್ನುವಾಗ ನಮ್ಮ ಸಾಧನೆಗೆಲ್ಲ ಏನು ಬೆಲೆ ಎನ್ನುವ ಜಿಜ್ಞಾಸೆ ರಾಮಮೋಹನರ 'ಶೂನ್ಯ-ಸಾಧನೆ'ಯಲ್ಲಿ.
  ಎಲ್ಲ ಸಂಪದಿಗರಿಗು ಒಮ್ಮೆ ಸಂಪದದ ಬಗ್ಗೆ ಒಂದು ಕವನ ಬರೆದರೆ ತೃಪ್ತಿ ಹಾಗಾಗಿ ಸುಮಂಗಲ    ಬರೆದಿದ್ದಾರೆ "ಸಂಪದ"  ನಂತರ 'ನಲ್ಲನ ತಲ್ಲಣ' ರಚಿಸಿದರು ತಿಂಗಳು ಪೂರ್ತಿ ಚಟುವಟಿಕೆಯಾಗಿದ್ದು ಹಲವು ಕವನ ಬರಹ ದಾಖಲಿಸಿದರು.
   'ನೀನಿಟ್ಟ ರಂಗೋಲಿ'ಯಲ್ಲಿ ಮುಂಜುನಾಥ್ ರವರೆ ಕಲ್ಪನೆ ಹಾಗು ಚಿತ್ರ ಎರಡು ಅಮೋಘ. ಅಪ್ಪ ಅಮ್ಮನಿಗೆ ಮುಪ್ಪಿರಬಹುದು ಆದರೆ 'ಅಪ್ಪ ಅಮ್ಮ'ನ ಪ್ರೀತಿಗೆ ಎಂದಿಗು ಮುಪ್ಪಿಲ್ಲ ನೀವನ್ನುವುದು ನಿಜ ಪ್ರಸನ್ನ.
   ಹರೀಶರ 'ದೇವಜಲ' ಒಂದು ಸಾರಿ ಓದಿದರೆ ಆಗಲ್ಲ ಎನಿಸಿ ಮತ್ತೆ ಮತ್ತೆ ಓದುತ್ತಿದ್ದೆ, ಅರ್ಥವಾಗಲಿ ಅಂತಲ್ಲ ಅರ್ಥ ಮನದಾಳದಲ್ಲಿಳಿಯಲಿ ಎಂದು, ದೇವಗಂಗೆಯಂತೆ.  ಪ್ರಸನ್ನರ 'ನೀನು ನಾನು'  ಒಬ್ಬರಿಗೊಬ್ಬರು ಹೇಳದೆ ಅರ್ಥಮಾಡಿಕೊಳ್ಳುವ ಸಂಬಂದವೆ ಪ್ರಿಯ ಪ್ರಿಯತಮೆಯರ ನಡುವಿನ ಲಹರಿ.
  ಪುಸ್ತಕ ಎಂದರೆ ಅಪರೂಪದ ವಸ್ತುವಾಗುತ್ತಿರುವ ಸಮಯ 'ಪುಸ್ತಕ ಪರಿಷೆ' ಬಗ್ಗೆ ಹರೀಶರಿ೦ದ ಲೇಖನ, ಹಳೆಯ ಪುಸ್ತಕಗಳಿಗಾಗಿ ಸಂಪದಿಗರು ತಡಕಾಡಲು ಒಂದು ಅವಕಾಶ. ಕ್ಲಿಷ್ಟವಾದ ಕನ್ನಡ ಪದಗಳ ಅರ್ಥಬೇಕೆ ಕನ್ನಡ ನಿಘಂಟಿನ ಬಗ್ಗೆ ಅರಿಯಿರಿ, ಶಶಿದರರವರೆ ಸಂಪಾದಕ ಮಂಡಲಿಯಲ್ಲಿದ್ದು ಬರುತ್ತಿರುವ ನಿಘಂಟು 'ಲಾಂಗ್ ಮನ್ -ಸಿಐಐಎಲ್.." . ದಾರವಾಡದ ಹುಡುಗಿ ರಚಿಸಿರುವ ಕವನ 'ಹುಬ್ಬಳಿಳಿ ಹುಡುಗಿ' ತಿಂಗಳ ಕಡೆಯ ಬ್ಲಾಗ್ ಬರಹ ಓದಿ ಅವರಿಗೊಂದು ಶುಭಾಷಯ ತಲುಪಿಸಿಬಿಡಿ ಅಷ್ಟೆ !! ಏಕೆಂದರೆ ಮದುವೆ ಊಟಕ್ಕೆ ಕರೀತಿನಿ ಅಂತ ಅಶ್ವಾಸನೆ ಕೊಡ್ತಿದ್ದಾರೆ.
 

ಕವನಗಳು
   ಗಣಪತಿಯನ್ನು ಪ್ರಾರ್ಥನೆ ಮಾಡುತ್ತಲೆ ಕವನ ವಿಭಾಗ ಪ್ರಾರಂಬ ಅರುಣರವರ 'ಪ್ರಾರ್ಥನೆ'ಯೊಡನೆ. ಮತ್ತೆ ಸುಮನ  'ಸಂಬದ'ಗಳ ಬಗ್ಗೆ ಬರೆಯುತ್ತ ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಪತಿ-ಪತ್ನಿ ಈ ಎಲ್ಲವು ದೇವ ತೊಡಸಿಹ ಸಂಕೋಲೆಗಳೆನ್ನುತ್ತಾರೆ, ಸುಮನರೆ ಇವೆಲ್ಲ ಸಂಕೋಲೆಗಳಲ್ಲ, ಹಿತವಾದ ಬಂದನಗಳು ಇವೆಲ್ಲ ತೊರೆದರೆ ಜೀವನಕ್ಕೆ ಅರ್ಥವೆ ಇಲ್ಲ ಅಲ್ಲವೆ.
   ಸದಾನಂದರೆ 'ಸಹಸ್ರಮಾನದ ಕೊನೆಯಲ್ಲಿ' ಭಾರತ ಹೀಗಿತ್ತು ಅಂತ ಬರೆದಿದ್ದೀರಿ , ಧನ್ಯವಾದ , ಆದರೆ ಈಗ ನೀವು ಹೇಳಿರುವದಕ್ಕಿಂತ ಹೇಗೆ ಬಿನ್ನವಾಗಿದೆ? ಎಲ್ಲವು ಹಾಗೆಯೆ ಇದೆ.
  ಪ್ರತಿಯೊಂದರಲ್ಲು ಇರುವುದ ಬಿಟ್ಟು ಇಲ್ಲದನ್ನೆ ಹುಡುಕುತ್ತಾ  'ಅಂತರಂಗದ ಅನ್ವೇಷಣೆಯಲ್ಲಿ'  ಸಾಗುವ ಕವನ ಏಕೆ ಕಡೆ ಮುಟ್ಟಲಿಲ್ಲ ಅನ್ನಿಸುತ್ತೆ ಮಾನಸ ರವರೆ, ಕಡೆಯಲ್ಲಿ ಅಪೂರ್ಣವೆಂದು ಭಾಸವಾಗುತ್ತೆ.
   ಒಮ್ಮೆಮ್ಮೆ ಭರದಿಂದ ಅಪ್ಪಳಿಸುವ, ಮತ್ತೊಮ್ಮೆ ಜಡವೆಂದು ಭಾಸವಾಗುವ ಚೇತನರವರ 'ನೆನಪುಗಳ' ಸುನಾಮಿ, ಮನುಷ್ಯನ ಮನಸಿನ ಚಿತ್ರಣ.   ಏರಿದವ ಇಳೆಯಲೆ ಬೇಕು ಜೀವನ ನೀತಿ ಆದರೆ ಅದು 'ಚಿನ್ನ'ಕ್ಕಲ್ಲ, ಸಪ್ತಗಿರಿಯವರ ಚಿನ್ನದ ವಿಶ್ಲೇಷಣೆ.

 'ಮಾತೆಯ ಮಮತೆಯ ಮರೆಯಲೆಂಗ' ಧಾರವಾಡದ ಸುಮಂಗಲ ರವರ ತೊಳಲಾಟ, ಅದರೇನು ಮಾಡುವುದು ಅವಳ ಮಮತೆ ನಮಗೆಷ್ಟು ಲಭ್ಯತೆಯೊ ಅಷ್ಟೆ ಅಲ್ಲವ? ನಿಮ್ಮ ಭಾವನೆಯ ಜೊತೆ ನಾವೆಲ್ಲ ಇದ್ದೇವೆ ಸುಮಂಗಲರವರೆ,   ತುಂಬಾ ಸುಂದರವಾದ ಚಿತ್ರವನ್ನು ಆಯ್ದು ಕೊಂಡಿದ್ದೀರಿ.ಹಾಗೆ ನಿಮ್ಮ 'ಬಾಲ್ಯದ ದಿನಗಳು' ಅದ್ಭುತವಾದ ಚಿತ್ರ,  
   ನಂದೀಶ ಬಂಕೇನಹಳ್ಳಿಯವರೆ ನಿಮ್ಮ' ಕವನದ ಬೇಟೆ' ಸಕ್ಕತ್ , ಮತ್ತೆ ಏನಾದರು ದೊಡ್ಡ ಮೀನು ಬಿತ್ತಾ?.
 ಜೇಬಿನಲ್ಲಿ ಹಣವಿಟ್ಟು ಸಿಟಿಬಸ್ ಹತ್ತಿದರೆ ಏನಾಗುತ್ತೆ 'ಬೆ.ನಾ.ಸ' ಓದಿ ಬಹಳ ಜನರಿಗೆ ಆಗಿರಬಹುದಾದ ಅನುಭವ.  ಚಂದ್ರಶೇಖರರ 'ನಿನ್ನ ಋಣಂ ' ತುಂಬಾ ಸುಂದರ ಭಾವ,ತನ್ನನ್ನು ಬೆಳೆಸಿ ಪೋಷಿಸಿದ ತಂದೆಗೆ ಇಳಿವಯಸ್ಸಿನಲ್ಲಿ ಮಗ ಕೊಡುವ ಆಶ್ವಾಸನೆ ಇಂದಿನ ಕಾಲಕ್ಕೆ ಪ್ರಸ್ತುತ   'ನಿನ್ನ ಪೋಷಣೆಯೆನಗೆ ಭಾರವಲ್ಲ ಭಾಗ್ಯಂ....ನೀನಿಂದು ನನಗೆ ಪಿತೃಶಿಶು" ಎನ್ನುವ ಭಾವವಂತು ಮನ ಮುಟ್ಟುತ್ತದೆ. ಆದರು ಒಂದು ಸಂಶಯ "ಋಣ" ವನ್ನು "ಋಣಂ" ಎಂದರೆ ಹಳೆಗನ್ನಡವೆ? 'ಡ' ಸೇರಿದರೆ ತಮಿಳು ಎಂಬಂತೆ!! ಸುಮ್ಮನ್ನೆ ತಮಾಷಿಗೆ ಅಂದೆ ಚಂದ್ರಶೇಖರರೆ. 
  ಚೇತನ್ 'ನಿರೀಕ್ಷೆಯ ಕಂಗಳಲ್ಲಿ' ಸುಂದರ ಕವನವನ್ನು ಸಪ್ಪೆ ಮಾಡಿರುವುದು ನಿಮ್ಮದೆ ಮನಸೆಳೆಯುವ ಚಿತ್ರ. ಈಗಲೊ ಆಗಲೊ ನೀರ ಬಿಂದು ಕೆಳಗೆ ಬಿತ್ತೆ ಅನ್ನಿಸುವ ಚಿತ್ರ.     
   ಪಾಟೀಲರೆ ನಾವು 'ಸಿಡಿಯಲಾರದ' ಸ್ಪೋಟಕಗಳು ನಿಜ ಆದರೆ ರಮೇಶ್ ರವರು ಹೇಳುವುದನ್ನೆ ನಾನು ಹೇಳುತ್ತೇನೆ, ಯಾರಾದರು ಕಡ್ಡಿಗೀರಿದರೆ? ದೀಪಾವಳಿ!!.
   ಅಂತು ಭಾಮಿನಿಪ್ರಿಯ ರಘುರವರು ಮತ್ತೆ  ಸಂಪದ ಅಂಗಳದಲ್ಲಿಳಿದರು,'ಕಾಯಕದ ಪರಿ'ಯಲ್ಲಿ  ಫಲದಪೇಕ್ಷೆಯ ದೂರವಿರಿಸುತ ತಲಹು ಇಹುದೆನಗೆ೦ಬ ಛಲದಲಿಕಲಿಲವಿರದಿಹ ಅಲಘ ತಪವನು ಗೈವೆನನವರತ ಎನ್ನುವ ಶ್ರಮಜೀವಿಯ ವ್ಯಾಖ್ಯಾನ ಅದ್ಭುತ ಹಾಗೆ ಆರಿಸಿರುವ ವರ್ಣಚಿತ್ರವು ಸಹ.
  ಜಯಂತರೆ ನೀವು ಕೈಆಡಿಸದ ವಿಭಾಗವೆ ಇಲ್ಲವೆ? ಭಕ್ತಿಗೀತೆಯನ್ನು ಸಹ ಸುಂದರವಾಗಿ ಬರೆದಿದ್ದೀರಿ 'ಕಂಡೆ ನಾಗೋವಿಂದ' ಪದ್ಯದಲ್ಲಿ, ಹಾಗೆ ನೀವು ಕಂಡ ಗೋವಿಂದ ದರ್ಶನ ಎಲ್ಲರಿಗು ಮಾಡಿಸಿದ್ದೀರಿ.
  ನಿನ್ನೆ ಮೊನ್ನೆ ಸಂಪದದ ಅಂಗಳದಲ್ಲಿ ಓಡಾಡುತ್ತಿದ್ದ ಕವನವೆಂಬ ಬಾಲೆ ಈಗ ಬೆಳೆದು ಪ್ರಶ್ನೆಯಾಗಿದ್ದಾಳೆ 'ಕಾವ್ಯದ ಪ್ರಶ್ನೆ' ಬಾಗ್ವತರ ರಚನೆಯಲ್ಲಿ.   ಮಾನು ನಿಮ್ಮ ಕಳಕಳಿ ಹಾಗು ಸತ್ ಸಂಕಲ್ಪವೆ ಸಾಕು ಭಾರತಮಾತೆ ಧನ್ಯಳಾಗುತ್ತಾಳೆ ನಿಮ್ಮ 'ದೇಶಕ್ಕೆ ಸತ್ಪ್ರಜೆಯಾಗುವೆ' ಕವನ ಓದಿದ್ದಲ್ಲಿ.  ಗೋಪಾಲಕೃಷ್ಣರೆ 'ಜಗನ್ಮಾತೆಗೆ ನಮನ' ಗೀತೆಯು ಈ ದಸರಾ ನವರಾತ್ರಿ ಸಮಯದಲ್ಲಿ ಪ್ರಸ್ತುತ , ಅವಳಿಗೆ ಮುಟ್ಟಿದೆ ಬಿಡಿ ನಿಮ್ಮ ನಮನ.
   ಶ್ರೀನಿವಾಸರೆ 'ನಮ್ಮಾ ಬೆಳಗಾಂ' ಕವನ ಹೆಚ್ಚು ಶೌರ್ಯಭರಿತವಾಗಿದೆ, ನಾಡಿನ ರಕ್ಷಣೆಗೆ ಸ್ಪೂರ್ತಿ ಕೊಡೊ ಕವನದಲ್ಲಿ , 'ತೆಗಿತೀವಿ ಮಾನ ಪ್ರಾಣ' ಅನ್ನೊ ಸಾಲು ಮಾತ್ರ ಶೋಬಿಸೋದಿಲ್ಲ ಅನ್ನಿಸುತ್ತೆ ಅಲ್ಲವೆ, ಕನ್ನಡಿಗರು ಎಂದಿಗೂ ನಡತೆಯಲ್ಲಿ ಶ್ರೀಮಂತರು.
   ನಾರಯಣರ 'ಎನನ್ನಾದರು ಪ್ರತಿಕ್ರಿಯಿಸು' ಉತ್ತಮ ಅಂತರ್ಜಾಲ ಚಿತ್ರ, ಬಹುಷಃ ಕವನ ಚಿತ್ರಕ್ಕಾಗಿಯೆ ಬರೆದಂತೆ ಅನ್ನಿಸುತ್ತೆ. ಮುಂಗಾರುಮಳೆ ಪ್ರೇರಿತರಾಗಿ ಜಯಂತರು ಲಾಲಬಾಗಿನಲ್ಲಿ ಕಂಡ 'ಹೈಹೀಲ್ಡ್ ಚೆಲುವೆ'ಯ ಅನುಭವ ನೋಡಿ,ಪಾಪ ನೆಲಕ್ಕೆ ಬಿದ್ದು ಮೆತ್ತಿದ ಕೆಸರಿನ್ನು ಆರಿಲ್ಲ ಆಗಲೆ "ಭಗತ್ ಸಿಂಗ್ ಅಮರ್ ರಹೆ" ಎನ್ನುತ್ತಿದ್ದಾರೆ.
   ನಂದೀಶರೆ ಮನಸ್ಸು ಮತ್ತು ಪ್ರಕೃತಿಯನ್ನು ಸಮನ್ವಯಗೊಳಿಸುತ್ತ ಸಾಗುವ ಪ್ರಯತ್ನ ನಮ್ಮ ಮನ ಮುಟ್ಟುತ್ತದೆ "ಮನಸು ಮತ್ತು ನದಿ" ಕವನದಲ್ಲಿ. ಪ್ರೀತಿ ಬರಿದಾದಗ ಮತ್ತೊಂದು ಪ್ರೀತಿಗಾಗಿ ಹುಡುಕಾಟ ನರಸಿಂಹ ಮೂರ್ತಿಯವರಿಂದ "ಪ್ರೀತಿ ಬರಿದಾದಗ'ಕವನದಲ್ಲಿ. ನಿಜ ರಘುರವರೆ ಪ್ರಕೃತಿಯೆ ತ್ಯಾಗದ ನೀತಿಯ ಭೋದನೆ ಮಾಡುತ್ತಿದ್ದರು ನಾವು ಅರ್ಥಮಾಡಿಕೊಳ್ಳೂತ್ತಿಲ್ಲ ನಿಜ ತ್ಯಾಗಿಗಳು ನೀರಮೇಲಣ ನೀರ ಬಿಂದುವಿನಂತೆ ಏನನ್ನು ಅಂಟಿಸಿಕೊಳ್ಳದೆ ಇರುವರು ಎನ್ನುವ ನಿಮ್ಮ ಕವನ"ತ್ಯಾಗದಡೆಗೆ ದೃಷ್ಟಿಹರಿದು" ಅದ್ಭುತ.
  ಅನೂಪ್ 'ಉತ್ತಿಷ್ಠ ಭಾರತಿ' ಉತ್ತಮ ದೇಶಭಕ್ತಿಗೀತೆ, ಉತ್ತಮ ಪ್ರಯತ್ನ. ನಿಜ ನಾಗೇಂದ್ರಕುಮಾರರೆ ದೇವರನ್ನು ಎಚ್ಚರಿಸಲು ಶಂಕು ಗಂಟೆಗಳ ಅವಶ್ಯಕತೆ ಇದೆಯೆ "ಪ್ರಣತಿ" ಯ ಪ್ರಶ್ನೆ ಸರಿ ಇದೆ. ಹಾಗೆ ತೇಜಸ್ಗೆ ಸಚಿವೆ ಶೋಭರೆ ಹೇಳಬೇಕು 'ಕರಡಿಗೆ ಜಾಮುನ್ ತಿನ್ನಿಸಲು" ಕರೆಂಟು ಯಾವಾಗ ಬರುತ್ತೆ ಎಂದು.
  ತಿಂಗಳ ಕಡೆಯ ಕವನ ಪಾಟೀಲರ "ವಿಷವೃಕ್ಷ" ಆದರೆ ನಮ್ಮೆಲ್ಲ ಚಾನಲ್ ಗಳ ಕತೆಯು ಏಕೊ ಧರ್ಮಬಾಹಿರ ಸಂಬಂದಗಳನ್ನೆ ವೈಭವೀಕರಿಸುವದಲ್ಲ!
 
ಚಿತ್ರವಿಭಾಗ :

ಜಮದಗ್ನಿಯವರ  'ಅರಸಿಕೆರೆ ಶ್ರೀಪ್ರಸನ್ನ ಗಣಪತಿ"  ಆಕರ್ಷಕ  ಚಿತ್ರದೊಂದಿಗೆ ಪ್ರಾರಂಬ. ನಂತರ ವಿಧ್ಯಾದರ ಚಿಪ್ಪಳಿಯವರು ಕಂಪ್ಯೂಟರ್ ಉಪಯೋಗಿಸಿ ರಚಿಸಿದ  ಹಲವು ಚಿತ್ರಗಳು. ಗಣೇಶರ 'ನಾಚುರಲ್ ಕಸೆಟ್ಟಾ' ಹಾಗು ನೇತ್ರದಾನದ ಚಿತ್ರಗಳು. ರಮೇಶರ ಕಣಜೇರಿಯ ಗೂಡಿನ 'ಮುಟ್ಟದಿರಿ ಜೋಕೆ' ಅದ್ಬುತ ಚಿತ್ರ. ನಂದೀಶರ 'ಬೆರಗು' ಚಿತ್ರದ ವರ್ಣವಿನ್ಯಾಸ, ದೃಷ್ಯ ಸಂಯೋಜನೆ ನಿಜಕ್ಕು ನಮ್ಮಲ್ಲಿ ಬೆರಗು ಹುಟ್ಟಿಸುತ್ತದೆ.

ಮನಸೆಳೆಯುವ ಕಪ್ಪುಬಿಳುಪು ಚಿತ್ರ 'ಬಾವಿ ನೀರು.."  ಬಾವಿಯಲ್ಲಿ ನೀರು ಸೇದೋಣ ಎನ್ನುವಾಗಲೆ ಪ್ಲಾಷ್ಟಿಕ್ ಬಿಂದಿಗೆಗಳನ್ನು ಹಿಡಿದು ಹೊರಟೆಬಿಟ್ಟಿದೆ ನೋಡಿ ಸೋಮಶೇಖರಯ್ಯನವರ ಮನೆಯಲ್ಲೊಂದು ಮಗು "ನೀರಿಗೆ ಹೋಗೋಣ' ಎನ್ನುತ್ತ.  ಹಾಗೆ 'ಸುಂದರ ಸಂಜೆ' ವರ್ಣಚಿತ್ರದ ಬಣ್ಣಗಳು ಚೆನ್ನಾಗಿವೆ ಹಾಕಿದವರಾರು ತಿಳಿಯುತ್ತಿಲ್ಲ.

   ನಂದೀಶರೆ ಎಲ್ಲಿ ಹುಡುಕುತ್ತೀರಿ ಇಂತ ದೃಷ್ಯಗಳನ್ನು 'ಕಲ್ಲು ಕರಗುವ ಸಮಯ' ಚಿತ್ರ ಹಾಗು ಕಲ್ಪನೆ ಎರಡು ಸೂಪರ್ !!!  ದೇವರು ಆರ್ ಬಟ್ಟರ ಹೂ ಚಿತ್ರ ಚೆನ್ನಾಗಿದೆ ಅದರೆ ಅದು ಯಾವುದು 'ಅಪರೂಪದ್ದು' ಅನ್ನುವುದು ನನಗು ತಿಳಿದಿಲ್ಲ, ಸದ್ಯಕ್ಕೆ ಕ್ಯಾಕ್ಟಸ್ ಹೂ ಅನ್ನೋಣವೆ.  ಮತ್ತೆ ಕಡೆಯಲ್ಲಿ ಗಣೇಶರು ತಂಬುಳಿಗೆ ಸೂಪರ್ ಎನ್ನುತ್ತ 'ವಿಟಮೀನ್' ಸೊಪ್ಪಿನ ಚಿತ್ರ ಹಾಕಿದ್ದಾರೆ ಆದರೆ ಅದರೆ ಹೆಸರೇನು ಸಾರ್ ?
--------------------------------------------------------------------------------------------------
ಮಳೆಯ ನಂತರದ ಹನಿ : ಪ್ರತಿಬಾರಿ ಪಕ್ಷಿನೋಟ ಬರೆದಾಗಲು ಒಂದು ಆಕ್ಷೇಪಣೆಯಿತ್ತು, ಬರಿ ಜನಪ್ರಿಯವಾದ ಲೇಖನವನ್ನಷ್ಟೆ ಇದರಲ್ಲಿ ತೋರಿಸಲಾಗುತ್ತೆ, ಆದರೆ ಸಂಪದಿಗರಿಗೆ ತೊಂದರೆಕೊಡುವ ಕೆಟ್ಟ ಲೇಖನ ಕತೆಗಳನ್ನು ಏಕೆ ಬಿಡುತ್ತೀರಿ ಎಂದು, ಅಂತಹುದೆ ಒಂದು ಕತೆ ಪಾರ್ಥಸಾರಥಿಯವರ ತಿಂಗಳಿಗೊಂದು ದೆವ್ವದ ಕಥೆ : "ಬುರುಡೆಯ ನಾಟಿ"

 

 
 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೌದು ಸಾರ್, ಬುರುಡೇ ನಾಟಿ ಸ0ಪದಿಗರಿಗೆ ತೊ0ದರೆ ಕೊಟ್ಟ ಕಥೆ. ಅದರ ಸ್ಪೂರ್ತಿಯಿ0ದಲೇ ಅನೇಕ ಕಥೆಗಳು ಹುಟ್ಟಿಕೊ0ಡು ಸ0ಪದಿಗರು ಹೆಚ್ಚು ಕತೆಗಳನ್ನು ಓದುವ ತೊ0ದರೆಗೊಳಗಾಗಿದ್ದು. ಯಾವ ಒ0ದು ಲೇಖನ, ಕವನ, ಬ್ಲಾಗ್ ಮತ್ತು ಚಿತ್ರವನ್ನೂ ಬಿಡದೆ ಅದರ ಸಾರವನ್ನು ಉಣಬಡಿಸಿದ್ದೀರ ನಿಜಕ್ಕೂ ಇದೊ0ದು ಅದ್ಭುತವೇ ಸರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀದರ್ ನಿಮ್ಮ ಪ್ರತಿಕ್ರಿಯೆ ಹಾಗು ಮೆಚ್ಚುಗೆಗೆ ವಂದನೆಗಳು ಮತ್ತೆ 'ಸಾರ್' ಎಲ್ಲ ಬೇಡ, ಇಲ್ಲಿ ನಾವು ನೀವು ಎಲ್ಲ ಸ್ನೇಹಿತರು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿಗೆ ವಂದನೆಗಳು. ಸೆಪ್ಟೆಂಬರ್ ಮಾಸಾಂತ್ಯದ ಪಕ್ಷಿನೋಟದಲ್ಲಿ ಸಂಪದ ತಾಣವನ್ನು ಸೊಂಪಾಗಿ ಜಾಲಾಡಿದ್ದೀರಿ.ಭೂರಿ ಭೋಜನದ ತರುವಾಯ ತಾಂಬುಲ ಮೆಲ್ಲುವಾಗ ಉಣಬಡಿಸಿದ ಐಟಂ ಗಳನ್ನು ಜಾಲಾಡಿದ ಹಾಗೆ! ಹಹಾ..(((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟಿಲರಿಗೆ ನಮಸ್ಕಾರ ನಿಮ್ಮೆ ಪ್ರತಿಕ್ರಿಯೆಗೆ ವಂದನೆಗಳು ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ, 'ಸಿ0ಹಾವಲೋಕನ'ಕ್ಕೆ ಮನಸೋತೆ. ನಿಮ್ಮ ಕಥೆಯ ಗುಣಮಟ್ಟ ಎಷ್ಟು ಕೆಟ್ಟದಿತ್ತೆ0ದರೇ....ಮು0ದಿನ ಕಥೆಗೆ ಕಾಯುತ್ತಿದ್ದೇನೆ..!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಘು ಮುಂದಿನ ಕತೆ ಇನ್ನು ಕೆಟ್ಟದಾಗಿ ಬರೆಯಲು ಪ್ರಯತ್ನಿಸುವೆ ನಿಮ್ಮೆಲರ ಸಲಹೆ ಸಹಕಾರವಿದ್ದರೆ. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) :) ಪಾರ್ಥಸಾರಥಿಯವರೆ, ನಿಮ್ಮ ಈ ಪ್ರಯತ್ನಕ್ಕೆ(ಕೆಟ್ಟದಾಗಿ ...-ಅದಕ್ಕಲ್ಲ :) ) ಪ್ರಥಮ ಬಾರಿಗೆ.. .... ... ... ... .... ಸ್ಟ್ಯಾಂಡಿಂಗ್ ಒವೇಶನ್. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶರೆ ತು0ಬಾ ದೊಡ್ಡ ಮಾತಾಯಿತು ನಾವೆಲ್ಲ ನಿಮ್ಮ0ತವರ ಸಹಕಾರ ಮಾರ್ಗದರ್ಶನದಲ್ಲಿ ಸಾಗುತ್ತಿರುವರು ನಿಮ್ಮದೆ ದಾರಿಯಲ್ಲಿ.... ತಮ್ಮೆ ಮೆಚ್ಚುಗೆಗೆ ನನ್ನ ನಮನ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಕ್ಷಿನೋಟ ಕಳೆದ ತಿಂಗಳ ಸಂಪದದ ಸಂಪತ್ತನ್ನು ಸೊಗಸಾಗಿ ಬಿಂಬಿಸಿದೆ. ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ 'ಬುರುಡೆ' ಸಾಮಾನ್ಯದ್ದಲ್ಲ! ಹ್ಯಾಟ್ಸಾಫ್!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>> ನಿಮ್ಮ 'ಬುರುಡೆ' ಸಾಮಾನ್ಯದ್ದಲ್ಲ << ಅದಕ್ಕೆ ಅಣ್ಣಿಗೇರಿಯಲ್ಲಿ ಮುದುಕನ ಕೈಗೆ ಸಿಗದೆ ತಪ್ಪಿಸಿಕೊಂಡು ಬಂದೆ ತಲೆಉಳಿಸಿಕೊಂಡು :))) ನಿಮ್ಮ ಮೂಡನಿಗು ನಮ್ಮ ಬುರುಡೆಯ ನಮನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆಗಸ್ಟ್ ಮಾಸದ ಪಕ್ಷಿನೋಟ ಬರೆಯುತ್ತ ಮಲ್ಲೇಶ್ವರದ ೯, ೧೩, ಹಾಗೂ ೧೬ನೆ ರಸ್ತೆಯಲ್ಲಿ ನಮ್ಮನ್ನು ಓಡಾಡಿಸಿ ಹಾಗೆ ಸಿ.ಇ.ಟಿ ಎಂಬ ಮಾಯಾಜಿಂಕೆಯ ಬೆನ್ನನ್ನು ಹತ್ತಿಸಿ, ಪಕ್ಕದಲ್ಲೇ ಬುರುಡೆ ನಾಟಿ ಮಾಡುವುದು ಹೀಗೆಂದು ಹೇಳಿಕೊಟ್ಟು ಸಂಪದದಲ್ಲಿ ಒಂದು ವರ್ಷ ಹುಟ್ಟು ಹಬ್ಬ ಆಚರಿಸಿದ ಪಾರ್ಥಸಾರಥಿಯವರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚರ್ಚೆಗಳ ವಿವಾದದ ಹುತ್ತಕ್ಕೆ ಕೈಯಿಕ್ಕುವುದು ಬೇಡ ಎಂದು, ಬಹುಶಃ ಬಿಟ್ಟುಬಿಟ್ಟಿದ್ದಾರೇನೋ?! ಈಚೀಚೆಗೆ ಚರ್ಚೆಗಳು ಸಹ ಸಂಪದಕ್ಕೆ ಮೊನಚಿನ ಅಂಚು ಒದಗಿಸುತ್ತಿವೆ. ಸೆಪ್ಟಂಬರ್ ಸಿಂಹಾವಲೋಕನದಲ್ಲಿ ಪಾರ್ಥಸಾರಥಿಗಳು ಇದರ ಬಗ್ಗೆಯೂ ಸ್ವಲ್ಪ ಸಾರಥ್ಯ ವಹಿಸಬಹುದಾಗಿತ್ತೇನೋ! ಅದರಲಿ, ವಿಮರ್ಶೆಯಂತೂ ವಸ್ತುನಿಷ್ಠವಾಗಿದೆ; ಬರೆಯುವವರಿಗೆ ಪ್ರೋತ್ಸಾಹದಾಯಕವಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ದಿವಾಕರರಿಗೆ ವಂದನೆಗಳು ತಾವು ಹೇಳಿದಂತೆ ಚರ್ಚಾವಿಭಾಗವನ್ನು ಸೇರಿಸಿಕೊಳ್ಳಲು ಪ್ರಯತ್ನಿಸಿದೆ ಕಷ್ಟ ೧. ಇಲ್ಲಿ ಸೆಪ್ಟೆಂಬರ ಮಾಸದ ಚರ್ಚೆ ಮಾತ್ರವಲ್ಲ ಕೆಲವು ಕಳೆದ ತಿಂಗಳುಗಳ ವಿಷಯವು ಮೇಲೆ ಬಂದಿರುತ್ತೆ ಉದಾಹರಣೆ ಕನ್ನಡದಲ್ಲಿ ಟವೆಲ್ ಗೆ ಏನಂತಾರೆ (ಮೇ ತಿಂಗಳಿನದು) ೨. ಇಲ್ಲಿ ಬರಹದ ವಿಷಯವನ್ನು ಮಾತ್ರ ನೋಡಿದರೆ ಅಪೂರ್ಣವಾಗುತ್ತದೆ, ಪ್ರತಿಕ್ರಿಯೆಗಳನ್ನು ಗಮನಿಸ ಬೇಕಾಗುತ್ತೆ ಏಕೆಂದರೆ ಇದು ಚರ್ಚೆ ಹಾಗಾಗಿ ಯೋಚಿಸುತ್ತಿದ್ದೆ, ವಂದನೆಗಳೊಡನೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಜಯಂತ್ ವಂದನೆಗಳು ಒಟ್ಟಿಗೆ ಸಂಪದಕ್ಕೆ ಬಂದವರು ನಾವಿಬ್ಬರು ಒಟ್ಟಿಗೆ ವರ್ಷವ ಹರುಷವ ಆಚರಿಸಿದೆವು ಜೋಡೆತ್ತಿನ ಹಾಗೆ ನೊಗಕ್ಕೆ ಕುತ್ತಿಗೆ ಕೊಟ್ಟು ಎಳೆಯುವೆವು ಸಂಪದದ ಗಾಡಿ. ನಿದಾನವಾದರೆ ಚಾಟಿ ಬೀಸುವರು ಗಣೇ'ಸಣ್ಣಾ' ಸುಮ್ಮನೆ ನಿಂತರೆ ಬಾಲು ತಿರುವುವರು ಮಂಜಣ್ಣ ಸುಮ್ಮನೆ ಕಡ್ಡಿಗೆ ಹುಲ್ಲನು ಕಟ್ಟಿ ಬಾಯ ಬಳಿ ಹಿಡಿದಿಹರು ಚಿಕ್ಕು ಎಂಬ ಮಾಯವಿ ತಿನ್ನಲ್ಲು ಹೋದರೆ ಹುಲ್ಲು ಮುಂದೆ ಗಾಡಿಯು ಮುಂದೆ ಓಡಿ ಜಯಂತ್ ಮುಂದೆ ಮುಂದೆ ನಾನಿರುವೆ ನಿಮ್ಮಯ ಹಿಂದೆ ತಮಾಶಿಗೆ ಬರೆದೆ ಹೇಗಿದೆ ಪದ್ಯ ???
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿಯವರೇ ನಿಮ್ಮ ಮಾತು ನಿಜ. ಸ೦ಪದಿಗರ ಪ್ರೋತ್ಸಾಹವೇ ನನ್ನ ಹಾಗೂ ನಿಮ್ಮ ಸ೦ಪದ ಪಯಣ ಯಶಸ್ವಿಯಾಗುವ೦ತೆ ಮಾಡಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ ಸಾರಥಿ ಅವ್ರೆ ಈ ತಿಂಗಳಲ್ಲಿ ನೀವ್ ನಮಗೆ ಬಹು ವಿಶೇಷವಾದ 'ವಿಮರ್ಷೆಯನ್ನ' ------ಮಾಸದಲ್ಲಿ ಸಂಪದದ ಮೂಲಕ ಕೊಟ್ಟಿದ್ದೀರ. ಈ ಸಲದ ಮಾಸದಲ್ಲಿ ಸಂಪದ 'ಬಹು ವಿಶೇಷಗಳ ' ಆಗರವಾಗಿದೆ. ಈ ಸಾರಿಯ ನಿಮ್ಮ ವಿಮರ್ಶೆಯ ವಿಶೇಷತೆಯೆಂದರೆ 'ತರೆಹವರಿ ಬರಹಗಳ ವರ್ಗೀಕರಣ' ಮಾಡಿ (ಕಥೆ-ಕವನ-ಬ್ಲಾಗ್-ಚಿತ್ರ ಹೀಗೆ..) ವಸ್ತುನಿಷ್ಟವಾಗಿ-ನಿಸ್ಪಕ್ಷಪಾತಿಯಾಗಿ ವಿಮರ್ಶಿಸಿದ್ದು. ಮತ್ತು ಅವೆಲ್ಲದರ ಲಿಂಕ್ ಸಹ ನಿಮ್ಮ ವಿಮರ್ಶೆಯಲ್ಲಿ ಕೊಟ್ಟಿರುವುದು. ಇನ್ನೊಂದು ವಿಶೇಷತೆ , ವಿಮರ್ಶೆಯ ಕೊನೆಯಲ್ಲಿ ನಿಮ್ಮದೇ ಬರಹದ ಬಗ್ಗೆ 'ಹಾಸ್ಯಯುಕ್ತವಾಗಿ' ಹೇಳಿಕೊಂಡದ್ದು!! ನಿಮ್ಮದೇ ಬರಹಗಳ ಬಗ್ಗೆ ಪ್ರಸ್ತಾಪಿಸಿ ಎಂಬ ಸಮಸ್ತ ಸಂಪದಿಗರ ಕೋರಿಕೆಯನ್ನ ಮನ್ನಿಸಿದ್ದೀರ... 'ತರೆಹವಾರಿ ' ಬರಹ ಬರೆಯುತ್ತ ಪ್ರತಿಕ್ರಿಯುಸುತ್ತ, ತಿಂಗಳಿಡೀ ಬಂದ ಬರಹಗಳ ಬಗ್ಗೆ ತುಲನಾತ್ಮಕ -ಮನ ನೋಯಿಸದ ಆದರೆ ವಸ್ತುನಿಸ್ಟವಾದ- ನಿಸ್ಪಕ್ಷಪಾತ ವಿಮರ್ಶೆ ನಿಮ್ಮ ವಿಶೇಷ. ತಿಂಗಳಿಡೀ 'ಆ ಪರಿ'!! ಚಟುವಟಿಕೆಯಿಂದಿರುವ ನಿಮ್ಮ ಗುಟ್ಟು ಏನು!! ವೈವಿಧ್ಯಮಯ ಬರಹ ಬರೆಯುತ್ತ ,ಸಮಸ್ತ ಸಂಪದಿಗರ ಮನ ಗೆದ್ದ್ದು 'ಸಮಸ್ತ ಸಂಪದಿಗರ ಕಣ್ಮಣಿಯಾಗಿರುವ' ನಿಮ್ಮ ಬಗ್ಗೆ ನನಗೆ ವಯುಕ್ತಿಕವಾಗಿ 'ಅಸೂಯೆಯಾಗುತ್ತಿದೆ'!! ನಿಮ್ಮ 'ಬುರುಡೆ ನಾಟಿ' ,ಪತ್ರಿಕ್ಯೊಂದರ ವರಧಿಯನ್ನ 'ಆ ರೀತಿಯೂ' ಉಪಯೋಗಿಸಿಕೊಂಡು ಭಯಾನಕ -ರೋಚಕ ಬರಹ ಬರೆಯಬಹುದು ಎಂದು ತೋರಿಸಿಕೊಟ್ಟಿದೆ.... ಈ ತಿಂಗಳು ತಾವ್ ನಮ್ಮನ್ನ 'ಅದೆಲ್ಲಿ'? ಕರೆದುಕೊಂಡು ಹೋಗಬಹುದೋ ಎಂಬ ಕುತೂಹಲ ಇದೆ!!!!!!!!! ಸಂಪದದಲ್ಲಿ ಬರುವ ವೈವಿಧ್ಯಮಯ ಬರಹ ಓದುತ್ತ , ಈಗೀಗ 'ಸಂಪದ' ನನ್ನ ದಿನ ನಿತ್ಯದ ಒಂದು ಭಾಗವೇ ಆಗ್ ಹೋಗಿದೆ... ಸಂಪದ ಸೇರಿದ್ದಕ್ಕೆ ಹೆಮ್ಮೆ ಎನ್ನಿಸುತ್ತಿದೆ.... 'ಅತ್ತುತ್ತಮ' ವಿಮರ್ಶೆಯನ್ನು ಬಹು ಪ್ರಯಾಸ ಪಟ್ಟು ಈ ತಿಂಗಳಲ್ಲಿ ನೀಡಿದ ನಿಮಗೆ ನನ್ನ ಸಲಾಂ.................. ಶುಭವಾಗಲಿ... ಧನ್ಯವಾದಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಯವರೆ ನಿಮ್ಮ ಮೆಚ್ಚುಗೆ ನನಗೆ ಸಂತಸ ತಂದಿದೆ ಮತ್ತೆ ಚಟುವಟಿಕೆ ಕಣ್ಮಣಿ ಎನ್ನುವ ನಿಮ್ಮ ಉತ್ಸಾಹ ನನಗೆ ಕೊಂಚ ಮುಜುಗರ ಎನಿಸುತ್ತಿದೆ. ಏನೊ ಮನಸಿಗೆ ಸಂತೋಷ ಅನಿಸಿದ್ದು ಇಲ್ಲಿ ದಾಖಲಿಸುತ್ತ ಹೋಗುತ್ತಿದ್ದೆವೆ ಸಂಪದದಂಗಳದಲ್ಲಿ ನಾನು ನೀವು ಎಲ್ಲ. ನನಗೆ ಖುಷಿ ಕೊಟ್ಟಿದ್ದು ನಿಮಗು ಸಂತಸ ತಂದರೆ ಸರಿ , ಸಾರ್ಥಕ ಅಷ್ಟೆ ನಮಗೆಲ್ಲ ಸ್ಪೂರ್ತಿಯಾಗಿ ಹಲವು ಹಿರಿಯ ಸಂಪದಿಗರಿದ್ದಾರೆ ಅದೆ ದಾರಿಯಲ್ಲಿ ನಾವು ಸಾಗುವುದು. ನಿಮಗು ಶುಭಾಷಯಗಳು ವಂದನೆಗಳೊಡನೆ ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ ಸಾರಥಿ ಸಾರ್ ನಿಮ್ಮ ವಿನಯವಂತಿಕೆ ನಂಗೆ ಹಿಡಿಸ್ತು. ಆದರೆ ಒಳ್ಳೆಯದನ್ನ-ಅದಕ್ಕೆ ಕಾರಣರಾದವರನ್ನ - ಮೆಚ್ಚಿದಾಗ ,ಮನಸ್ಪೂರ್ವಕವಾಗಿ ಅಭಿನಂದಿಸಲೇಬೇಕು.. ನಿಮ್ಮ ಮುಜುಗರದ ಕಾರಣಕ್ಕಾಗಿ ನನ್ನ ಆ ಕಣ್ಮಣಿ ಮತ್ತು ಇನ್ನಿತರ ಪದಗಳ ಬದಲಾವಣೆ ಮಾಡಲು ನಾ ಪ್ರಯತ್ನಿಸಿದರೂ ಆಗುತ್ತಿಲ್ಲ.. ನನ್ನ ಪ್ರಕಾರ ಆ ವಾಕ್ಯ ಪ್ರಯೋಗ ಸರಿಯಾದ ಸಮಯದಲ್ಲಿ- ಸರಿಯಾದವರಿಗೆ -ಅದಕ್ಕೊಪ್ಪುವವರಿಗೆ ಆಗಿದೆ... ನೀವೇಳಿದ್ದು ದಿಟ ಈ ಸಂಪದ ಕಡಲಲ್ಲಿ ನಾವ್ ಚಿಕ್ಕ ಮೀನುಗಳೇ ಸರಿ , ನಮಗಿಂತ ಸಹೃದಯ ಹಿರಿಯರು ಅದೆಸ್ಟೋ ಜನ ಇದ್ದಾರೆ ಮತ್ತು ಅವರು ಎಲೆ ಮರೆ ಕಾಯಿಯಂತೆ ಸುಪ್ತವಾಗಿದ್ದು ಆಗಾಗ ದಿಡೀರನೆ ಪ್ರತ್ಯಕ್ಷವಾಗಿ ನಮಗೆ ಮಾರ್ಗ ದರ್ಶನ ಮಾಡುತ್ತಾರೆ.. ಒಟ್ಟಿನಲ್ಲಿ ಸಂಪದ ಜೊತೆಗೆ ನಾವೂ ಬೆಳೆಯುತ್ತಿದ್ದೇವೆ. ಇಲಿ ಬರ್ವ ಅದೆಸ್ಟೋ ಲೇಖನ- ಬರಹಗಳು ಯಾವ್ಯಾವ ಹೆಸರಾಂತ ಪತ್ರಿಕೆ ಯಲ್ಲಿ ಬರ್ವ ಬರಹಗಳಿಗಿಂತ ಕಡಿಮೆ ಏನಲ್ಲ. ನನಗದೆ ಆಶ್ಚರ್ಯ!! ಇಲ್ಲಿ ಹೆಸರಾಗಿರುವ ಅದೆಸ್ಟೋ ಲೇಖಕರ ಬರಹಗಳು ಇದ್ವರ್ಗೆ ಆ ಹೆಸರಾಂತ ಪತ್ರಿಕೆಗಳಲ್ಲಿ ಬರದೆ ,ನಾವ್ ಅವರನ್ನ-ಅವ್ರ ಬರಹಗಳನ್ನ್ನ ಅದೆಸ್ಟ್ ಮಿಸ್ ಮಾಡ್ಕೊಂದ್ವಿ ಅಂತ.. ಸಮಸ್ತ ಕನ್ನಡಿಗರು ಸಂಪದ ಓದದೆ ಇರಬಹುದು, ಆದರೆ ಪತ್ರಿಕೆ-ಪುಸ್ತಕ ಖಂಡಿತ ಓದುತ್ತಾರೆ, ಹೀಗಾಗಿ ನಾ ಮೇಲಿನ ಸಾಲು ಹೇಳಬೇಕಾಯ್ತು. ಸಂಪದ ಸೇರಿ ಒಂದು ವರ್ಷ ಪೂರೈಸಿ ಹಲ ಬರಹಗಳ ಮೂಲಕ 'ಸಂಪದ ಸಾಹಿತ್ಯ ಭಂಡಾರಕ್ಕೆ' ಸೇವೆ ಸಲ್ಲಿಸಿದ ನಿಮಗೆ ಹಾರ್ದಿಕ ಶುಭಾಶಯಗಳು -ಧನ್ಯವಾದಗಳು. ನಿಮ್ಮ ಇನ್ನಸ್ಟು-ಮತ್ತಷ್ಟು-ಮಗದಸ್ಟು ಬರಹಗಳ ನಿರೀಕ್ಷೆಯೊಂದಿಗೆ...... ನಿಮಗೂ ಮತ್ತು ಸಮಸ್ತ ಸಂಪದಿಗರಿಗೂ ದಸರಾ ಹಬ್ಬದ ಶುಭಾಶಯಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ, ನಿಜಕ್ಕೂ ತು೦ಬಾ ಉತ್ಸಾಹದಿ೦ದ ಹಾಗೂ ಜತನದಿ೦ದ ಈ ಬಾರಿಯ ಸಿ೦ಹಾವಲೋಕನ ಮಾಡಿದ್ದೀರಿ, ನಿಮ್ಮಲ್ಲಿನ ಈ ವಿಶಿಷ್ಟ ವಿಮರ್ಶಾ ಶಕ್ತಿಗೆ ನನ್ನದೊ೦ದು ಸಲಾ೦. ಸ೦ಪದದ ಅ೦ದ ಮತ್ತಷ್ಟು ಹೆಚ್ಚಿಸಿದೆ ನಿಮ್ಮ ಈ ವರದಿ. ಅಭಿನ೦ದನೆಗಳು ಹಾಗೂ ಮು೦ದೆಯೂ ಹೀಗೆಯೇ ಮು೦ದುವರಿಸಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮ0ಜು ನಿಮ್ಮ ಮೆಚ್ಛುಗೆಗೆ ವ0ದನೆಗಳು , ನಿಮ್ಮ ಮು0ಬೈ ಎ0ಬ ನಿತ್ಯ ಸು0ದರಿ ಉತ್ತಮ ಪರಿಚಯದ ಲೇಕನ ನನಗೆ ನಿಜಕ್ಕು ಮೆಚ್ಚುಗೆಯಾಯ್ತು ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿಯವರೆ, ಅಚ್ಚು....cut ಆಗದೇ ಇಡೀ ಮಾಸದ ಬರಹಗಳ ಸಾರೀಕರಿಸಿದ ಅಚ್ಚುಕಟ್ಟಾದ ಜೋಡಣೆ.ಅಭಿನಂದನೆಗಳು ನಿಮಗೆ. -ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಾಗ್ವತರೆ ವ0ದನೆಗಳು ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಮ್ಪದವು ತಡವಾಗೆ ನನಗೆ ಪರಿಚಯ ವಾಗಿದ್ದಕ್ಕೆ ತು0ಬಾ ಬೇಸರ ವಾಗಿದೆ. ಸೆಪ್ಟೆಂಬರ (೨೦೧೧) ಮಾಸದಲ್ಲಿನ ಪಕ್ಷಿನೋಟವೇ ಚೆನ್ನಾಗಿತೆ0ದರೆ ಪ್ರಾರ0ಬದಿ0ದ ಓದಬೇಕೆನಿಸಿದೆ. ತಮಗೆಲ್ಲ ರಿಗೂ ಹೃತ್ಪೂರ್ವಕ ನಮನಗಳು ‍‍‍‍ ನೀಳಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅಬ್ಬಾ!!!! ನಿಮ್ಮ ತಾಳ್ಮೆಗೆ ನನ್ನ ನಮನಗಳು ಸರ್. ಎಷ್ಟು ಸು0ದರವಾಗಿ ಈ ಪಕ್ಷಿನೋಟದ ಹೋವಿನ ಮಾಲೆಯನ್ನ ಹೆನೆದಿದ್ದೀರಿ! ತು0ಬಾ ಹಿಡಿಸಿತು. ಅದ್ರಲ್ಲಿ, ನನ್ನ ಮೇಲಿರುವ ನಿಮ್ಮೆಲ್ಲರ ಪ್ರೀತಿಗೆ ಚಿರರುಣಿ !!!!!! ನಿಮ್ಮೆಲ್ಲರ ಹಾರೈಕೆಗಳಿ0ದ ಮನಸ್ಸು ತು0ಬಿ ಬರ್ತಿದೆ. ಏನ್ ಹೇಳ್ಬೇಕು ಅ0ತಾ ಅರ್ಥ ಆಗ್ತಿಲ್ಲಾ ಸರ್!! ನಿಮ್ಮನ್ನೆಲ್ಲ ನನಗೆ ಕರುಣಿಸಿದ ಸ0ಪದಕ್ಕೆ ಮತ್ತು ತ0ಡದವರಿಗೆ ನಾನು ಆಭಾರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವ0ದನೆಗಳು ಸುಮ0ಗಲಾರವರಿಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ ನೀಳಾರವರೆ ಸ0ಪದ ಸ0ಪದ್ಬರಿತ‌ ತಡವಾದರು ಚಿ0ತೆಯಿಲ್ಲ ಪ್ರಾರ0ಬದಿಮ್ದ ಓದಿ , ಕೆಲವು ವರ್ಷ ಹಳೆಯ ಲೇಕನಗಳನ್ನು ತೆಗೆದು ನೋಡಿ ಚೆನ್ನಾಗಿದೆ ನಾನು ಸಮಯವಾದಗ ಓದುತ್ತಿರುತ್ತೇನೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿಯವರೆ ಸೆಪ್ಟಂಬರ್ 2011 ರ ಪಕ್ಷಿನೋಟವನ್ನು ನೋಡಿದೆ. ಬಹಳ ಅದ್ಭುತವಾಗಿ ಬರೆದಿದ್ದೀರಿ. ನಾನು ಕಳಿಸಿದ ಕಣಜೀರಿಗೆ ಹುಳದ ಗೂಡಿನ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದೀರಿ. ಈ ಮೆಚ್ಚುಗೆ ನನ್ನನ್ನು ಇನ್ನಷ್ಟು ಉತ್ಸುಕನನ್ನಾಗಿ ಮಾಡಿದೆ. ಮುಂಬರುವ ಪಕ್ಷಿನೋಟಗಳು ಎಲ್ಲ ಬರಹಗಳನ್ನು ಒಳಗೊಳ್ಳಲಿ.ಅವು ವಸ್ತು ನಿಷ್ಟ ವಿಮರ್ಶೆಯ ಮೂಸೆಯನ್ನು ಹಾದು ಬರಲಿ.ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಮೇಶ ಕಾಮತರೆ ವ0ದನೆಗಳು ಆದಷ್ಟು ಎಲ್ಲ ಬರಹಗಳನ್ನು ಸೇರಿಸಲು ಪ್ರಯತ್ನಿಪಡುತ್ತೇನೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

" ಕೊಂಡಿ " ಗಳೊಂದಿಗೆ ಮೂಡಿಬಂದಿರುವ "ಸುಂದರ" ವಾದ ಪಕ್ಷಿನೋಟ...... ಅಲ್ಲ ....... "ಸಿಂಹಾವಲೋಕನ" ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>> "ಸಿಂಹಾವಲೋಕನ" ಅದು ಏನಿದ್ದರು ನರಸಿ0ಹನ ಭಕ್ತರದು ನಮ್ಮದು ಬರಿ ಪಕ್ಷಿನೋಟವಷ್ಟೆ !! ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥವ್ರೆ ಪಕ್ಷಿನೋಟ ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚಿಕ್ಕು ಬೈನಾಕ್ಯುಲರ್ ನಲ್ಲಿ ಸದಾ ಪಕ್ಷಿ ನೋಡುವರು ಪಕ್ಷಿನೋಟ ಮೆಚ್ಚಿದ್ದು !! ಅಹಾ ಸಾರ್ಥಕ ! ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) ನನ್ನ ಕ್ಯಾಮೆರಾ ಕಿತ್ಕೊಂಡು ಬೈನಾಕ್ಯುಲರ್ ಕೊಡ್ಸಿ ಮೋಸ ಮಾಡಿ ಮತ್ತೆ ಡೈಲಾಗ್ ಹೊಡೀತೀರಾ??!!!!, ಆಗಬಹುದು ನೀವು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಗೆ ನಿಮ್ಮ ಲೇಖನವನ್ನು ನೋಡಿದ ಕೂಡಲೇ ವಾರ್ಷಿಕ ವರದಿ ಅಥವಾ ಮೀಟಿ0ಗ್ ಕುರಿತ ವಿವರಣಾತ್ಮಕ ವರದಿ ನೆನಪಾಗುತ್ತದೆ. ಅವುಗಳಲ್ಲಿಯಾದರೂ ಭಾಗಶಹ ಅರೆಕೊರೆಗಳು ಕ0ಡು ಬರಬಹುದೆನೋ ಆದರೆ ನಿಮ್ಮ ಈ ಲೇಖನದಲ್ಲಿ ಸಾಧ್ಯವೇ ಇಲ್ಲ. ನನ್ನ ಕಣ್ಣ ತಪ್ಪಿನಿ0ದಾಗಿ ಯಾವುದಾದರೂ ಲೇಖನ ಬಿಟ್ಟು ಹೋಗಿದ್ದರೆ ನಿಮ್ಮ ಈ ಲೇಖನದ ಮೂಲಕ ಓದಿಕೊಳ್ಳ ಬಹುದು. ಒ0ದು ಲೇಖನವನ್ನೂ ಬಿಡದ0ತೆ ಪರಿಚಯಿಸಿರುತ್ತೀರಿ. ಧನ್ಯವಾದಗಳು. ಅ0ಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಗೊ0ದು ಅನುಮಾನ ಸಹ ಇದೆ. ಎಚ್ ಪಿ ಎನ್ ಅವರೇನಾದರೂ ತಮ್ಮನ್ನು ವರದಿಗಾರನನ್ನಾಗಿ ನೇಮಿಸಿಕೊ0ಡಿರಬಹುದೇ ? ಎ0ದು. :‍)‍ ವ0ದನೆಗಳು ಅ0ಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅ0ಬಿಕಾರವರೆ ಎಲ್ಲ ಬರಹಗಳನ್ನು ಸೇರಿಸಲಾಗಿಲ್ಲ ಎಚ್ ಪಿ ಎನ್ ರವರನ್ನು ಒಮ್ಮೆ ಮುಖತ: ನೋಡಲು ನನಗು ಕಾತುರ . ಅ0ತಹ ಸ0ದರ್ಭ ಬ0ದಿಲ್ಲ ನಿಮ್ಮ ಮೆಚ್ಚುಗೆಗೆ ವ0ದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ಪಾರ್ಥ ಸಾರ್ ನೀವು ಸಂಪದದ ಸಾರಥಿಯಾಗಿ ವಿಮರ್ಶೆ ಮಾಡಿದ ಸೆಪ್ಟೆಂಬರ್ ತಿಂಗಳಿನ ಪಕ್ಷಿನೋಟ ಅದ್ಭುತ. ತುಂಬಾ ತಡವಾಗಿ ಸಂಪದಕ್ಕೆ ಸೇರಿದರೂ ಬೇಸರವಿಲ್ಲ, ಸೇರಿದೆನೆಂಬ ಸಂತಸವಿದೆ ನನಗೆ. ಅಭಿನಂದನೆಗಳೊಂದಿಗೆ ಧನ್ಯವಾದಗಳು. ಭಾರ್ಗವ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ಬಾರ್ಗವ ಸಾರ್ ಎ0ದು ಸೇರದೆ ಇರುವದಕ್ಕಿ0ತ ತಡವಾಗಿ ಸೇರಿದರು ಉತ್ತಮವೆ ಅಲ್ಲವೆ ! ನಿಮ್ಮ ಅಭಿನ0ದನೆಗೆ ನನ್ನ ವ0ದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ ಸಾರಥಿ ಯವರೇ...ಸೂಪರ್ !!! ಒಂದು ತಿಂಗಳ ಸಂಪೂರ್ಣ ಚಿತ್ರಣ ಚೆನ್ನಾಗಿ ಮೂಡಿದೆ.ಆದರೆ ಕೊನೆಯ ಉಪಸಂಹಾರಕ್ಕೆ ನನ್ನ ಅಸಮ್ಮತಿ ಇದೆ. :P :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕು0ಬ್ಳೆಯವರೆ ಏನು ಮಾಡುವುದು ಉಪಸ0ಹಾರವನ್ನು ಉಪಸ0ಹರಿಸಲು ಆಗುತ್ತಿಲ್ಲವೆ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರೀ.. ಸಂಪದ ಸಾರಥೀ.. ಕ್ಷಮಿಸಿ.. ಪಾರ್ಥಸಾರಥೀ..!! ಎಂತಹಾ ಕೆಲಸ ಮಾಡಿದ್ದೀರಿ..! ಛೇ.. ಛೇ..! ಬೈಯ್ಯತ್ತಾ ಇಲ್ಲ ಪಾರ್ಥರವರೇ..! ಅಬ್ಬಬ್ಬಾ.. ಎನ್ರೀ ಇದು? ಈ ಮಟ್ಟಿಗೆ ಬರಹ..! ಎನಿಲ್ಲಾ ಅಂದ್ರೂ.. ಕಡಿಮೆ ಕಡಿಮೆ ಅಂದ್ರೂ, ಒಂದು 20 ಗಂಟೆ ಬೇಕು, ಈ ಬರಹ ತಯಾರಿ ಮಾಡೋಕ್ಕೆ ಅನ್ನಿಸುತ್ತಾ ಇದೆ, ನನಗೆ.. ! ಅದ್ಭುತ.. ತಡವಾಗಿ ನೋಡಿದೆ..! ಆಗಲೇ 40 ಪ್ರತಿಕ್ರಿಯೆ..! ನಿಜವಾಗಿಯೂ ಹೇಳಬೇಕೆಂದರೆ, ನೀವು ಈ ತರಹದಲ್ಲಿ ಬರೀತಾ ಹೋದರೆ, ಜನ ಎಲ್ಲಾ ತಿಂಗಳ ಮೊದಲ ದಿನಕ್ಕೆ ಕಾಯ್ತಾ ಕೂರ‍್ತಾರೆ, ನಿಮ್ಮ ಪಕ್ಷಿನೋಟಕ್ಕೆ.. "ಹೇ..ಮಿಸ್ ಆದರೆ.. ಪಕ್ಷಿನೋಟದಲ್ಲಿ ಬರುತ್ತಲ್ಲಾ.. ಅಲ್ಲೇ ಲಿಂಕೂ ಇರುತ್ತೆ..!" ಅಂತ. ನಿಜವಾಗಿಯೂ ನಿಮ್ಮ ತಾಳ್ಮೆಗೆ ನನ್ನ ದೀರ್ಘದಂಡ ನಮಸ್ಕಾರಗಳು. ಹಾಗೇ, ಒಂದು ಕೊರತೆ.. ಬಹಳಷ್ಟು ಮುದ್ರಾರಾಕ್ಷಸನ ಹಾವಳಿ, ವ್ಯಾಕರಣ ದೋಷ. ಮತ್ತೊಮ್ಮೆ ಸಮಯ ತೆಗೆದುಕೊಂಡು, ಒಂದೊಂದಾಗಿ ತಿದ್ದುತ್ತಾ ಬನ್ನಿ..:) ಮತ್ತೊಮ್ಮೆ ನಮಸ್ಕಾರಗಳೊಂದಿಗೆ.. ನಿಮ್ಮೊಲವಿನ, ಸತ್ಯ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ ಸತ್ಯರವರೆ ಸಮಯ ತೆಗೆದುಕೊಳ್ಳುತ್ತೆ ! ಶನಿವಾರ ರಾತ್ರಿ ಲಿ0ಕ್ ಅ0ಟಿಸುವ ಕೆಲಸ ಅರ್ದ ಮುಗಿಸಿ ರಾತ್ರಿ ತಡವಾಯಿತು ಅ0ತ ಮಲಗಿಬಿಟ್ಟೆ ಪುನ: ಬಾನುವಾರ ಮಧ್ಯಾನ ಕುಳಿತು ಮು0ದುವರೆಸಿದೆ ಶ್ರಮವಿದ್ದರು ಎಲ್ಲರಿಗು ಖುಷಿ ಕೊಡುತ್ತದೆ ಎ0ಬ ಸಮಾದಾನವಿರುತ್ತದೆ ಮತ್ತೆ ಪ್ರತಿಕ್ರಿಯೆಯ ಸ0ಖ್ಯೆಯನ್ನು 2 ರಿ0ದ ಬಾಗಿಸಿ ಅದರಲ್ಲಿ ನನ್ನ ಉತ್ತರವು ಸೇರಿದೆ ! :))) ಕಾಗುಣಿದ ತಪ್ಪನ್ನು ಹುಡುಕಿ ಸರಿಪಡಿಸುವೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥರವರೇ..!

[quote] ಪ್ರತಿಕ್ರಿಯೆಯ ಸ0ಖ್ಯೆಯನ್ನು 2 ರಿ0ದ ಬಾಗಿಸಿ ಅದರಲ್ಲಿ ನನ್ನ ಉತ್ತರವು ಸೇರಿದೆ ! :))) [/quote]

ನೀವು ಹೀಗೆ ಹೇಳ್ತೀರಾ ಅಂತ ಮೊದಲೇ ನನಗೆ ಗೊತ್ತಿತ್ತು.. ಅದನ್ನ ಯೋಚಿಸಿದೆ. ಆದರೆ, ನಿಮ್ಮ ಪ್ರತಿಕ್ರಿಯೆಗಿಂತ ಇತರರ ಒಟ್ಟು ಪ್ರತಿಕ್ರಿಯೆ ಒಂದೆರೆಡು ಹೆಚ್ಚಿದೆ ಅನ್ನಿಸಿತು. ಹಾಗೇ, ನಿಮ್ಮ ಸಂಖ್ಯೆಯನ್ನೂ ಏಕೆ ಬಿಡಬೇಕು ಅನ್ನಿಸಿತು. ಅದಕ್ಕೆ ಸೇರಿಸಿದೆ.

ಹಾಗೇ.. ಇನ್ನೊಂದು ಮಾತು..!

ಸಂಪದದಲ್ಲಿ ಒಳ್ಳೆ ಡಿಮಾಂಡ್ ಮಾಡ್ಕೋತಾ ಇರೋ ಹಾಗಿದೆ. ತಮ್ಮದು. ಇನ್ನು ಮುಂದೆ ಬರಹ ಬರೆದ ಪ್ರತಿಯೊಬ್ಬರೂ.. ತಮ್ಮ ಬರಹ ಪಾರ್ಥರ ಪಕ್ಷಿನೋಟದಲ್ಲಿ ಬರೋ ಹಾಗೆ ಏನಪ್ಪಾ ಮಾಡಬೇಕು? ಅಂತ ಯೋಚಿಸುತ್ತಾ, ಒಂದೋ ಅಷ್ಟು ಉತ್ತಮವಾಗಿ ಬಂದು, ಪ್ರತಿಕ್ರಿಯೆ ಹೆಚ್ಚಾಗಿ ಬರೋ ಹಾಗಿರಬೇಕು ಅಂತ ಅನ್ಕೊಂಡರೆ ಪರ‍್ವಾಗಿಲ್ಲ..! ಅದಲ್ಲದೇ, ಪಾರ್ಥರವರನ್ನೇ ಒಳಹಾಕಿಕೊಳ್ಳೋ ಸಂಚು ಮಾಡಿದಲ್ಲಿ..!..:) ಹ..ಹ...!

 

ನಿಮ್ಮೊಲವಿನ,

ಸತ್ಯ..:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸತ್ಯ ಚರಣ್ ಶ್ರೀನಾಥ್ ರವರಿಗೆ ಕೊಟ್ಟ ಉತ್ತರವೆ ನಿಮಗೂ ಕೊಡಲು ಬಯಸುತ್ತೇನೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎ0ಬ0ತೆ ಸ0ಪದದಲ್ಲಿರುವ ಬರಹಗಳನ್ನೆ ಒ0ದುಗೂಡಿಸಿ ನಿಮ್ಮೆಲ್ಲರ ಮೆಚ್ಚುಗೆ ಪಡೆಯುತ್ತಿರುವೆ ನಾನು ಮತ್ತು ಡಿಮ್ಯಾ0ಡು ಇದರಲ್ಲೆಲ್ಲ ನನಗೆ ನ0ಬಿಕೆಯಿಲ್ಲ ಎಲ್ಲರೊಳಗೊ0ದಾಗು ಮ0ಕುತಿಮ್ಮ ನನ್ನ ಮೆಚ್ಚಿನ ತಿಮ್ಮನ ಸಾಲು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿಯವರಿಗೆ, ನನ್ನ ’ನೆನಪಿನ ಚಿತ್ರಕಲಾ ಶಾಲೆ’ಯನ್ನು ನಿಮ್ಮ ಲೇಖನದಲ್ಲಿ ನೆನಸಿಕೊಂಡದ್ದಕ್ಕೆ ಮತ್ತು ಚಿತ್ರಗಳಿಗೆ ಪ್ರೋತ್ಸಾಹಕವಾಗಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನ ಮಾಲೆಯು (ನನ್ನ ಮುಂಚಿನ ಬರಹವಾದ ’ಲಂಡನ್ ಪ್ರವಾಸಕಥನ’ವನ್ನೂ ಇದರೊಳಗೇ ಅಡಕಗೊಂಡಂತೆ) ಇನ್ನೂ ಪುಸ್ತಕ ರೂಪದಲ್ಲಿ ಬಂದಿಲ್ಲ, ಮುಂದೆ ಖಂಡಿತ ಬರಲಿದೆ. ಸಂಪದದಲ್ಲಿ ಮೊದಲು ಲೇಖನಮಾಲೆಯಾಗಿ ಪ್ರಕಟಗೊಂಡ ’ಫಿನ್ಲೆಂಡ್ ಪ್ರವಾಸಕಥನ’ ಹಾಗೂ ’ಶಾಂತಿನಿಕೇತನ ಆತ್ಮಕಥನ’ಗಳು ನಂತರ ಪುಸ್ತಕ ರೂಪದಲ್ಲಿ (ಈಗಾಗಲೇ) ಪ್ರಕಟವಾಗಿರುವಂತೆ ಇದು. ಧನ್ಯವಾದ ಅನಿಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅನಿಲ್ ಕುಮಾರರೆ ವ0ದನೆಗಳು 'ಶಾ0ತಿನಿಕೇತನ ಆತ್ಮಕಥನ' ಓದಿರುವೆ, ಪಿನ್ಲೆ0ಡ್ ಪ್ರವಾಸಕಥನ , ನಾನು ಸ0ಪದ ಸೇರುವದಕ್ಕೆ ಮು0ಚೆಯದು ಅನ್ನಿಸುತ್ತೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥರೇ 'ಮಧುಕರ ವ್ಱುತ್ತಿ ನನ್ನದು' ಎ0ಬ ಮಾತು ನಿಮಗೆ ಸಲ್ಲುತ್ತದೆ ... ಎಲ್ಲ ವಿಭಾಗಗಳಿ0ದ ಬರಹಗಳೆ0ಬ ಮಧುವನ್ನು ಹೀರಿ ಪಕ್ಶಿನೋಟವೆ0ಬ ಜೇನುಗೂಡನ್ನು ಕಟ್ಟಿದ್ದೀರಿ .... ಗೂಡು ಹಿರಿದಾಗಲಿ, ಸವಿ ಹೆಚ್ಛಾಗಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತು0ಬಾ ನಿಜವಾದ ಮಾತು ಶ್ರೀನಾಥ್ ಪ್ರತಿಬರಹದಲ್ಲಿರುವ ಮಧುವೆ ಪಕ್ಷಿನೋಟವೆ0ಬ ಜೇನುಗೂಡಿಗೆ ಸ0ಗ್ರಹ ಕೆರೆಯ ನೀರನು ಕೆರೆಗೆ ಚೆಲ್ಲಿ ಎ0ದರು ಸರಿಯೆ ಮದ್ಯೆ ನಿಮ್ಮೆಲರ ಮೆಚ್ಚುಗೆ ಎ0ಬ ವರವು ನನಗೆ ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

Pages