ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)

4.75

          
 ಆಗಷ್ಟ್ ತಿಂಗಳೆ ಹಾಗೆ ಎಲ್ಲಿ ನೋಡಿದರು ಮಳೆ ಮೋಡಗಳದೆ ಕಾರುಬಾರು,  ಬಿಸಿಲೆ ಇಲ್ಲದ ದಿನಗಳು , ನಗರದಲ್ಲಿ ಹೊರಗೆ ಹೋಗುವದೆಂದರೆ ಒಂದು ಪ್ರಯಾಸ. ದೇಹವೆಲ್ಲ ಎಂತದೊ ಜಡ ಮನಸ್ಸು ಅಷ್ಟೆ ಆಷಾಡದ ಮೋಡಗಳು ತುಂಬಿದ ದಿನದ ಹಾಗೆ ಎಂತದೊ ಬೇಸರ, ಎಲ್ಲದರಲ್ಲು ಕಡೆಗೆ ಸುಪ್ರೀತರ ಬರಹದ ಶೀರ್ಷಕೆಯ ಹಾಗೆ 'ಬರೆಯಲು ಏನೊ ಬೇಜಾರು'. ಸಂಪದದಲ್ಲು ಹಾಗೆ ಮೊದಲ ಅರ್ದತಿಂಗಳು ಮಂದವೆ.ಅಂತಹ ಜಡತ್ವಕ್ಕೆ ಕಚುಗುಳಿ ಇಟ್ಟಿದ್ದು ಅಣ್ಣ ಹಜಾರೆಯವರ ಸಾಮಾಜಿಕ ಕಳಕಳಿಯ ಹೋರಾಟ.
ಇಂತಹ ಹೋರಾಟಗಳಿಗೆ ತಮ್ಮ ನೈತಿಕ, ಹಾಗು ಲೇಖನಿಯ (ಅಥವ ಕೀಬೋರ್ಡ್ನ?) ಬೆಂಬಲ ಸೂಚಿಸುವದರಲ್ಲಿ ಎಂದು ಸಂಪದ ಸದಸ್ಯರು ಹಿಂದಿಲ್ಲ. ಸಾಕಷ್ಟು  ವಿಚಾರ ಪೂರಿತ ಲೇಖನಗಳು,ಕವನಗಳು ಹೊರಹೊಮ್ಮಿದವು, 'ಅಣ್ಣ'ನಿಗೆ ಬೆಂಬಲ ಸೂಚಿಸಲು. "ಅಣ್ಣಾ ಸಂದೇಶ ಸುಸ್ವಶ್ಟ ಸಂದೇಶ ನೀಡುತ್ತಿರುವಂತಿಲ್ಲ -ಆರ್.ಕೆ.ದಿವಾಕರ" ,"ಭ್ರಷ್ಟಾಚಾರವ ಮಟ್ಟ ಹಾಕಲು ? - ಸದಾನಂದ" , "ಬದಲಾವಣೆಯ ಗಾಳಿ ಬೀಸುತ್ತಿದೆಯೇ?- ಶೀಲಾನಾಯಕ್" ,"ಅಣ್ಣಾ ಹಜಾರೆಗೆ ನನ್ನ ನಮಸ್ಕಾರಗಳು-ಸದಾಶಿವ" ,"ಅಣ್ಣಾ ಹಜಾರೆ-ಶ್ರೀಸಾಮಾನ್ಯನ ಮನೆ ಮನಗಳ ದೀಪ- ಮಂಜುನಾಥ", "ವಿಕೀಲೀಕ್ಸ್- ಬಹಿರಂಗಪಡಿಸಿರುವ...-ಗುರು", "ಭಾರತ ಚುನಾವಣ...ಸಂಧೀಪ ಶರ್ಮ" ," ಗೆಲುವು ಅರ್ಧವೆ-ಸೋಮಶೇಖರಯ್ಯನವರು" "ಭ್ರಷ್ಟಾಚಾರ ಹೋರಾಟದ ದಾರಿ ತಪ್ಪಿಸದಿರಿ- ನಿರಂಜನ " ಮುಂತಾದ ಲೇಖನಗಳು ಅಣ್ಣಾ ಹೋರಾಟದ ಹಿನ್ನಲೆಯಲ್ಲಿ ಮೂಡಿಬಂದವು. ಈ ಎಲ್ಲ ಲೇಖನಗಳಿಗೆ ಹಿಮ್ಮೇಳದಂತೆ ತಿಂಗಳ ಕಡೆಯಲ್ಲಿ ಆಸುರವರು ನೇರವಾಗಿ ದೇವರಿಗೆ ಹೇಳಿಬಿಟ್ಟರು "ದೇವರೆ ನೈವೇದ್ಯ ಸಿಗದಿದ್ದರೆ ಬೇಡ ಕೋಪ" ಆಸುರವರೆ ಹಾಗೆಂದ ಮೇಲೆ ನಾನವ ಸಹಾಯ ಮಾಡಲಾರೆ!  ದೇವರೆ 'I PITY YOU'.


   ಬ್ಲಾಗ್ ಬರಹಗಳ ವಿಸ್ತಾರ ಜಾಸ್ತಿ ಈ ತಿಂಗಳು, ಡ್ರೀಮ್ಸ್ ಹೆಸರೆ ಹೇಳುವಂತೆ ಮೌಂಟ್ ಫ್ಯೂಜಿ ಸಿಡಿದರೆ ! ಎಂಬ ಕನಸಿನ ರೀತಿ u-tube ಚಿತ್ರದ ತುಣುಕು ಪ್ರಸನ್ನ ಎಸ್ ಪಿ ರವರ ಲೇಖನ  ತಿಂಗಳ ಮೊದಲ ಬರಹ. ನಂತರ ರಾಮಮೋಹನರು ಯೆಡ್ಡಿ ಪಾಠ ಎಂದು ಯೆಡ್ಡಿಯ ಗಾಳಿಪಟ ಹೇಗೆ ಕೆಳಗಿಳಿಯೆತೆಂದು ನಮಗೆ ನೀತಿ ಹೇಳಿದರು, ನೆನಪಿಡಿ ಯೆಡ್ಡಿಯೇನು ಈ ಪಾಠ ಕಲಿತ ಸುಳಿವಿಲ್ಲ!!, ಜಯಂತರ ಮಾಯಾದ್ವೀಪದ ಕಥೆ ಚಂದಮಾಮವನ್ನು ನೆನಪಿಸಿದವು.  ಸಂತೋಷರು 'ಕಷಿಕೇಷ್ಳ' ಎಂಬ ಸುಂದರ ಹೂವಿನ ಚಿತ್ರ ಸಂಪದದ ಗೋಡೆಗೆ ಮೆತ್ತಿದರೆ, ಪಕ್ಕದಲ್ಲೆ ಕುಂಭ್ಲೆ ಪಕ್ಕದಲ್ಲೆ ಅಕ್ಕನ 'ಚೂಡಿಪೂಜೆ'ಯ ಚಿತ್ರಗಳನ್ನು ಅಂಟಿಸಿದರು.

ಬದುಕಿನ ನಾಳೆಯ ಕನಸಿಗೆ ಯಾವ ಬಣ್ಣಗಳನ್ನು ತುಂಬಲಿ? ಎಂದು ಪ್ರಸನ್ನ ಕೇಳಿದ್ದು "ಕಲಾವಿದನ ಕನಸು" ವಿನಲ್ಲಿ, ಅದು ಪ್ರಸನ್ನರಂತ ಕಲಾವಿದರಿಗೆ ಸಹಜ ಪ್ರಶ್ನೆ. ಮದುವೆಯಲ್ಲಿ ಎಂದೊ ಶಾಸ್ತ್ರಕ್ಕೆ ತೋರಿದ ಅರುಂದತಿ ನಕ್ಷತ್ರವನ್ನು ಹಂಸಾನಂದಿಯವರು ಬರಹ ಚಿತ್ರಗಳ ಮೂಲಕ ಸಂಪದಿಗರಿಗೆಲ್ಲ ಪರಿಚಯಸಿ ನಂತರ ತಿಂಗಳು ಪೂರ್ತಿ ಅವರ ಎಂದಿನ ಸಂಸ್ಕೃತದಿಂದ ಕನ್ನಡಕ್ಕೆ ಪದ್ಯವನ್ನು ಭಾವಾನುವಾದ ಮಾಡುವ ಕೆಲಸ ಮುಂದುವರೆಸಿದರು.

"ಮಳೆ ಬಂದರೇನು ಬಾ" ಪ್ರಿಯತಮೆಗೆ ಆಸುವರವರ ಕರೆ ಜೊತೆಗೆ ಮೋಡದ ಮೇಲೆ ಪುಕ್ಕಟ್ಟೆ ಸವಾರಿಯ ಆಕರ್ಷಣೆ, ಪುಣ್ಯವತಿ ಆಕೆ ಬಂದಳೊ ಇಲ್ಲವೊ ತಿಳಿಯಲಿಲ್ಲ. ಆದರೆ ಮಲೆನಾಡಿನ ಮಳೆಗಾಲದ ಸೊಭಗನ್ನು ಸವಿಯಲು ನಮ್ಮನ್ನು "ಬಾಳೆಬರೆ" ಕರೆಯುತ್ತಿದ್ದಾರೆ ಶಶಿಧರ ತಮ್ಮ ಪ್ರಭಂದದಲ್ಲಿ, ದೃಷ್ಯಗಳು ಕಣ್ಣೆದುರು ಕಟ್ಟುತ್ತವೆ.ಮತ್ತೆ ಅವರದೆ ಇನ್ನೊಂದು ಪ್ರಭಂದ 'ಮಳೆಗಾಲದಲ್ಲಿ ಒಂದು ಸಂಜೆ'
 
ಚೇತನ್ ಕೋಡುವಳ್ಳಿಯವರ ಬರಹಗಳು ಒಮ್ಮೆಮ್ಮೆ ನಮ್ಮಲ್ಲಿ ಎಂತದೊ ಹೆಸರಿಸಲಾಗದ ಭಾವನೆ ಕೆಣಕಿಬಿಡುತ್ತವೆ ಉದಾಹರಣೆ "ಏನಮ್ಮ ಆವನು ಕೊಟ್ಟಿದ್ದನು ಲೆಕ್ಕ ಹಾಕುತ್ತಿಯಲ್ಲ" ,

ಕಳೆದಬಾರಿ ಕಥೆಯ ಗುಟ್ಟನ್ನೆ ಮುಚ್ಚಿಟ್ಟು ಕಥೆಯನ್ನು ಮುಗಿಸಿದ್ದ 'ಸೌಭಾಗ್ಯ.." ಕಥೆಗೆ ಪುನಃ ಉತ್ತಮ್ಮ ಅಂತ್ಯ ಕೊಟ್ಟು ತಾವು ಒಳ್ಳೆ ಕಥೆಗಾರರೆಂದು 'ಕಾಲರ್' ಸರಿಮಾಡಿಕೊಂಡ ರಾಮಮೋಹನರಿಗೆ ಅದೇನು ಗ್ರಹಚಾರ ಈ ಕಥೆಯ ಪ್ರಚಾರದಿಂದಾಗಿ ಅವರನ್ನು ಅಪಹರಣ ಮಾಡಿಬಿಟ್ಟಿದ್ದರು "ಸಿನಿಮಾ ಕಥೆಗಾರ" ದಲ್ಲಿ.

'ಅವರಿಬ್ಬರ ನಡುವೆ ಏನು ನಡೆಯಿತೊ ತಿಳಿಯಲಿಲ್ಲ" ಹಣಕಿದರೆ ಪಾರಿವಾಳ ಜೋಡಿಯ ಕಥೆ ಜಯಂತರಿಂದ ಕವನ. "ಕನಸು ನನಸಿನ ಹಾದಿ ದಾಟಿ ಬರಬಾರದೆ ಮನಸು ಮನಸಿನ ನಡುವಿನ ಕಿಟಕಿಯ ತೆರೆಯಬಾರದೆ" ಎಂತಹ ಸುಂದರ ಸಾಲುಗಳಲ್ಲವೆ? ಎಲ್ಲಿ ಅನ್ನುವಿರ ? ಕುಂಭ್ಳೆಯವರ ಕವನ "ಕನಸು ನನಸಿನ.." ದಲ್ಲಿ, ಆದರೆ ಇಲ್ಲಿ ಎಚ್ಚರದಲ್ಲಿದ್ದು ಏನೊ ಗಡಿಬಿಡಿ ಗೋಪಾಲರಿಗೆ ಅವರ 'ಬೀಮನ ಅಮಾವಾಸ್ಯೆಯಲ್ಲಿ"

ಸಾಲು ಸಾಲು ದೇವತೆಗಳ ಸಾಲು ಆದರೆ ನಮಗೆ ಅವರನ್ನೆಲ್ಲ ತೋರುವರು ಯಾರು? ಚಿಂತೆಬೇಡ "ರವಿವಾರ ಸಂಜೆ" ಹೊರಟುಬಿಡಿ ಗಣೇಶರ ಜೊತೆ. ಅಷ್ಟೆ ಏನೊ ಎನ್ನಬೇಡಿ ಅವರು ಇದ್ದಕ್ಕಿದ್ದಂತೆ ಮತ್ತೊಂದು ಮ್ಯಾಜಿಕ್ ಶುರು ಮಾಡಿದ್ದಾರೆ "ಚಲೋ ಮಲ್ಲೇಶ್ವರಮ್" ಅದಕ್ಕೆ ಹಿಂದೆ ದಂಡು ಹಾಸ್ಯ ಕೇಕೆಗಳಿಗೆ ಬರವೆ ಮಂಜು, ಪ್ರಭು, ರಾಮಮೋಹನ ಚಿಕ್ಕು ಎಲ್ಲ ಕೈಸೇರಿಸಿದ್ದಾರೆ ಗಾಳಿಪಟ ಹಾರಿಸಲು ನೋಡೋಣ ಸೇರುವ ಎತ್ತರವ.

. "ಆಸೆಯೆಂದಿಗು ತುಂಬದಿಹ ಪಾತ್ರೆ" ಸತೀಶರ ಶ್ರೀನರಸಿಂಹನನ್ನು ನೆನೆಯುತ್ತ ಸಾಗುತ್ತಿರುವ ವೇದಾಂತದ ಪದ್ಯ ಚಿಂತನೆಗಳು.  ಹಾಗೆಯೆ ಗುರಿಯ ತಲುಪಲು ಕುಟಿಲೋಪಾಯ ಮಾಡಿ ಬಿತ್ತಿದಂತೆ ಬೆಳೆಪಡೆವರು ಎನ್ನುವ ನಾಗರಾಜರ "ಮೂಡ ಉವಾಚ" ಪದ್ಯಗಳು ಸೆಂಚುರು ಹೊಡೆದರು ಸುಸ್ತಾಗದ ಸಚಿನ್ ರಂತೆ ಅವರು.

ಆಚಾರ್ಯರು ಈ ಮಾಸ ಪೂರ್ಣ ಸಕ್ರೀಯರು , ವಿಶಿಷ್ಟ ಕವನ 'ಏಕೊ.. ಇಂದು ಪುನಃ ಅನಿಸುತ್ತಿದೆ" ಏನನ್ನೊ ಕಾಯುತ್ತಿರುವ ಮನಸ್ಸು ಯಾವುದೊ ಕನಸ್ಸು ಇವುಗಳಿಗೆ ಕಿವುಡಾದ ಕಿವಿ ಇದು ಅವರ ಮನಸಿನ ಸ್ಥಿಥಿ ಕವನದಲ್ಲಿ.ಮತ್ತೆ ಆಚಾರ್ಯರು ಹೇಳೂತ್ತಾರೆ 'ಸೋಲನೊಪ್ಪ ಬೇಡ ಇಷ್ಟು ಬೇಗ" ಏಕೆಂದರೆ ಸೋಲನೊಪ್ಪುವುದೆ ನಿಜವಾದ ಸೋಲು . ಚೇತನರೇನೊ ತಮ್ಮ ಚರ್ಮುರಿಯಲ್ಲಿ ಬಾಳು ಅಂದರೆ ಇಷ್ಟೆ ಅಂತ ತಿಳಿಸಿದ ಮೇಲು ಅದೇ ಬದುಕಿನ ಕೌತುಕದ ಬಗ್ಗೆ ಉಮಾರವರ ಪ್ರಶ್ನೇ 'ಬದುಕು ಅಂದರೆ ಇದೇನಾ?", ಹೌದು ಉಮಾರವರೆ ಬದುಕು ಎಂದರೆ ಇಷ್ಟೆ.ಇದೆ.

 ಜಯಂತರೇನೊ ಹೊಸ ವಾಸ್ತು ದೋಷಹುಡುಕಿದ್ದಾರೆ ಯಾರಿಗೊ 'ಅಪ್ಪನ ಹೆಸರೆ ಆಗಿಬರಲ್ಲವಂತೆ" ಮತ್ತೇನು ಅಪ್ಪನ ಹೆಸರೆ ಬದಲಾಯಿಸಿ ಬಿಟ್ಟರಾಯಿತೆ ಸಮಸ್ಯೆ ಪರಿಹಾರ. ಮತ್ತೆ ಅವರೆ ಪ್ರಶ್ನಿಸುತ್ತರೆ "ಆತ್ಮಸ್ಥೈರ್ಯ ಎಂದರೆ ಇದೇನ" ಸಮಾಜದಲ್ಲಿನ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯ ಪರಿಚಯ. 

ಸುರಿವ ಮಳೆಗಾಲದ ಈ ದಿನಗಳಲ್ಲಿ ಮಂಜುರವರಿಗೆ ಹೃದಯದ ಆಳದಲ್ಲಿ ಅಡಗಿರುವ ಗೆಳತಿಯ ನೆನಪು 'ಸುರಿವ ಮಳೆಯಲ್ಲಿ' ಕವನದಲ್ಲಿ.

"ಆಕಾರ ಹಾಗು ಕಲೆ" ಎಂತಹದೊ ಲೇಖನವಿರಬೇಕೆಂದು ಇಣಕಿದರೆ ಇದೇನು ಸುಪ್ರೀತ್ ನೀವು ತಿನ್ನಲು ಮಾಡಿಕೊಂಡ "ಚಪಾತಿಯ" ಚಿತ್ರಗಳು, ನಾನು ಮೋಸಹೋದನೆ ನಾನು ಕಲಾಕಾರನಾಗಬಹುದಿತ್ತಲ್ಲ ಅನ್ನಿಸಿತು. ಮತ್ತೆ ನಿಮ್ಮ ಮದುವೆಯಾಗುವ ಹುಡುಗಿಗೆ ಸ್ವಲ್ಪ ಕಷ್ಟವೆ ಬಿಡಿ. "ನಮ್ಮ ಭಾವನೆ ವ್ಯಕ್ತಪಡಿಸಲು ಕಣ್ಣೀರನ್ನು ಕೋಪ ವ್ಯಕ್ತಪಡಿಸಲು ಪದಗಳನ್ನು ಬಳೆಸಬಾರದು" ಇದು ನಾವಡರ ಯೋಚಿಸಲೊಂದಿಷ್ಟು ಕಂತುಗಳ ಸಾಲು.ಉತ್ತಮ ಸಂಗ್ರಹ ವಾಕ್ಯಗಳು.

ರೇಖ ಹೆರಾಂಜಲ್ ರವರ ಲೇಖನ ಶ್ರಾವಣದಲ್ಲಿ ಸಾರಸತ್ವರ ಚೂಡಿಪೂಜೆ ಉತ್ತಮ ಚಿತ್ರ ಹಾಗು ವಿಶಿಷ್ಟ ಆಚರಣೆಗಳ ಸಮಗ್ರ ವಿವರ ಒಳಗೊಂಡಿದೆ."ಆದರ್ಶ ತಾಯಿ" ತಾಯಿಯೆಂದರೆ ಹೇಗಿರಬಹುದು ನುಡಿ ನಡೆ ನಡುವೆ ಅಂತರವಿಲ್ಲದ ನಡತೆ ಹೇಗಿರಬೇಕೆಂದು  ಮಕ್ಕಳ ನಡತೆ ರೂಪಿಸುವ ತಾಯಿಯ ಚಿತ್ರ ಅರೆಬೈಲಿನ ಶೋಬರಿಂದ. " ನಿಮ್ಮ ಚರ್ಮ ಹೊಳೆಯಲು ಏನು ಮಾಡಬೇಕು?"  ಚಿಂತೆ ಏಕೆ ? ಶ್ರೀಲಕ್ಷ್ಮೀಸುದೀಂದ್ರರವರ ಪುಟ್ಟ ಲೇಖನ ಓದಿ ಸಾಕು.

ತಮ್ಮ ಜೀವನದ ನಿಜಘಟನೆಗಳ ನಿರೂಪಣೆ "ನೆನಪಿನಾಳದಿಂದ...." ಮಂಜುರವರ ಲೇಖನದಲ್ಲಿ ಹೃದಯ ಕಲಕುವ ಸಂದರ್ಭಗಳು. ಈ ಬಾರಿ ವಾಕ್ಪಥದ ವಿಶೇಷ ಏನೆಂದು ಪುನಃ ಅವರನ್ನೆ ಕೇಳಿ , ಹೇಳುತ್ತಾರೆ "ಸಪ್ತ ಸಮುದ್ರ ದಾಟಿ ಬಂದ ಮೆಚ್ಚಿನ "ಬಲ್ಲೆ" ಯವರನ್ನು ಬೇಟಿಮಾಡಿದ ಬಗ್ಗೆ ಅವರ ಲೇಖನದಲ್ಲಿ.

ಪ್ರಸನ್ನರೇಕೊ ಸ್ವಲ್ಪ ಬಸವಳಿದಿದ್ದಾರೆ, 'ನಾನು ಮತ್ತು ಕೆಟ್ಟ ಸಮಯ" ಜೀವನ ಹೋರಾಟದ ಒಂದು ಸ್ವಗತ, "ನಿನ್ನ ಅಟ್ಟಹಾಸಕ್ಕೆ ನನ್ನ ತಾಳ್ಮೆಯೆ ಉತ್ತರ" ನಿಜವಾದ ಕೆಚ್ಚು ಪ್ರಸನ್ನ, ಶುಭವಾಗಲಿ ನಿಮ್ಮ ಜೊತೆಗಿದೆ ನಮ್ಮೆಲ್ಲರ ಹಾರೈಕೆ.

ಸಮಾಜದ ದುಷ್ಟತನದ ಮುಖಕ್ಕೆ ಭ್ರಷ್ಟವ್ಯವಸ್ಥೆಗೆ ಮೂಗುದಾರ ಹಾಕಲು ಸಾದ್ಯವೆ? "ಸಾದ್ಯ" ಎನ್ನುತ್ತಾರೆ ಹರೀಶರು ತಮ್ಮ ಕವನದಲ್ಲಿ. "ಕಾಮನ ಬಿಲ್ಲು ಕಮಾನು ಕಟ್ಟಿದೆ" ಮಂಜುರವರೆ ಸುಂದರ ಚಿತ್ರಗಳ ಅನಾವರಣ.ಆದರೆ ಅಲ್ಲಿ ನೋಡಿ ಕಾಯರವರ ಕವನಕ್ಕೆ ಕಾಲು ಬಂದು ಹೊರಟಿತು, ಹುಡುಕಿದರೆ ಮೂರನೆ ತರಗತಿಯ ಪಠ್ಯದಲ್ಲಿ, ಮತ್ತೆ ಸಿನಿಮಾದಲ್ಲಿ ಅಯ್ಯಯ್ಯೋ ಅದಕ್ಕೆ ಏನೊ ಹಿಂದೆ ಬುದ್ದಿ ಬೆಳೆಯದ ಚಿಕ್ಕ ಮಕ್ಕಳಿಗೆ ದೊಡ್ಡವರು ಗದರಿಸುತ್ತಿದ್ದರು "ಹೊರಗೆ ಹೋದರೆ ನೋಡು ಕಾಲು ಮುರಿದುಬಿಡ್ತೇನೆ" ಎಂದು.

ಅಶಾಮಹೇಶಬಟ್ಟರಿಮ್ದ ಗೆಳತಿಯ ಅಗಲಿಕೆಯ ನೆನಪು "ನಿನ್ನ ಪ್ರೀತಿಗೆ..." ಆದರು ಇಂತಹ ಬರಹಗಳಿಗೆ ಚಿತ್ರವನ್ನು ಅಂಟಿಸದಿದ್ದಲ್ಲಿ ಚೆನ್ನವೇನೊ ಬರಹ ನೇರವಾಗಿ ಮನಸಿಗೆ ತಟ್ಟುತ್ತದೆ.

ಮತ್ತೊಮ್ಮೆ ಕಾಲದ ಕನ್ನಡಿಯ ನೆನಪು ನಾವಡರ "ಹೌದು ಹಾಗಿದ್ದರು ಹೆಗಡೇಜಿ" ನೆನಪುಗಳಲ್ಲಿ, ಆದರು ಕಡೆಯಲ್ಲಿ ಹೆಗಡೆಯವರ ಸುತ್ತಲು ಸಾಕಷ್ಟು ರಾಜಕೀಯ ಗೊಂದಲುಗಳೆ ತುಂಬಿದ್ದವು ಮತ್ತು ಅವು ಈಗಲು ಹಾಗೆ ಇವೆ ಅವರ ನಂತರವು. ಮತ್ತೆ ಜಯಂತರ ವಿಶಿಷ್ಟ ಲೇಖನ "ಕದಳಿ ವಿವಾಹ" ಹಿಂದಿನ ಸಂಪ್ರದಾಯವೊಂದರ ಮೆಲ್ನೋಟ. ಮತ್ತೆ ಸಾಲು ಸಾಲು ಅನುವಾದದಳನ್ನು ಮಾಡಿ ನಮ್ಮನ್ನೆಲ ಹಳೆಯ ಹಿಂದಿ ಹಾಡುಗಳ ನೆನಪಿನ ಲೋಕಕ್ಕೆ ಕರೆದೊಯ್ಯುವ ಆಸುರವರಿಂದ "ನನ್ನೊಲವೆ..." ಮತ್ತೊಂದು ಭಾವಾನುವಾದ ಪತ್ಥರ್ ಕೇ ಸನಮ್ ಚಿತ್ರದ ಹಾಡು "ಮಹೂಬೂಬ್ ಮೇರೆ.." , ಮತ್ತೆ ಆಗಷ್ಟ್ ಮಾಸದ ಮುಕ್ತಾಯ

ಲೇಖನ ವಿಭಾಗದಲ್ಲಿ ಆಕಸ್ಮಿಕ ವೆಂಬತೆ "ಪಕ್ಷಿನೋಟ..." ವೆಪ್ರಥಮ ಲೇಖನ. ನಂತರ ಸಂಪದಿಗರು ಸ್ಪಂದಿಸಿದರೆ ಮಾತ್ರ ಮುಂದುವರೆಸುವದಾಗಿ ತಿಳಿಸಿ ಪ್ರಾರಂಬಿಸಿದ "ಮೇರಿ ಲಯನ್..." ವೈಜ್ಞಾನಿಕ ಲೇಖನವನ್ನು ಸುಭ್ರಮಣ್ಯರು ಏಕೊ ನಿಲ್ಲಿಸಿಬಿಟ್ಟರು ಉತ್ತಮ ಪ್ರತಿಕ್ರಿಯೆಯ ನಂತರವು. ವಾಣಿಯವರ "ಶ್ರಾವಣ ಮಾಸ ಬಂದಾಗ" ಮಾಸದ ಆಚರಣೆಗಳ ಬಗ್ಗೆ ನಿಜಕ್ಕು ಉತ್ತಮ ವಿಷಯ ನಿರೂಪಣೆ. "ಇಂತವರು ಇರುತ್ತಾರೆ" ನಾಗರಾಜರಿಂದ ಅಪರೂಪದ ರೈತ ದಂಪತಿಗಳ ಪರಿಚಯ.

"ಛೇ ಇದೇನಿದು" ಶ್ರಾವಣಮಾಸದಲ್ಲಿ ವಡೆಯ ಚಿಂತೆ, ಎಲ್ಲಿ ಶ್ರೀನಾಥರಿಂದ "ಒಡೆಯನ ವಡೆ" ಯಲ್ಲಿ ಅದು ಅವರು ತಿಳಿ ಹಾಸ್ಯ ತೆಗೆದು ಹಾಕಿದ್ದಾರಂತೆ. "ಶ್ರೀನಾಥರೆ ನರಸಿಂಹರಾಜು ನಾನು ಯಾರನ್ನು ನಗಿಸಲ್ಲ "ಎಂದಂತೆ ಆಯಿತು ನಿಮ್ಮ ನುಡಿ. 
"ನೀವು ಯಾರು?" ಪ್ರಶ್ನೆ ನನ್ನದಲ್ಲ ನಾಗರಾಜರದು "ಉತ್ತರ ಸಿಕ್ಕೀತೆ" ಲೇಖನದಲ್ಲಿ. ಕೆಳದಿ ಮನೆತನದವರ ಬಗ್ಗೆ ಶೋದದ ಬಗ್ಗೆ ಸವಿವರ ನೀಡಿದ್ದಾರೆ ನಾಗರಾಜರು ಅವರ ಆಸಕ್ತಿದಾಯಕ "ಕೆಳದಿ ಮನೆತನದವರ " ಲೇಖನದಲ್ಲಿ.
ಮತ್ತೆ ಭಾರತದ ಕೋರ್ಟಗಳ ನೈಜ ಸ್ಥಿಥಿ ಚೇತನರ ಬರಹ  "ಈಗಲೆ ಮರಣ ಪತ್ರಕೊಂದು .."
ನೀರಿನಲ್ಲಿ ನಡೆಯುವ ರೋಬಟ ಹಾಗು ವೈಜ್ಞಾನಿಕ ಅವಿಷ್ಕಾರಗಳ ಪರಿಚಯ ಅಶೋಕಕುಮಾರರಿಂದ

ಮತ್ತೆ ಶ್ರಾವಣದ ಪ್ರಯುಕ್ತ ಸಾಕಷ್ಟು ಲೇಖನಗಳು ಕಥೆಗಳು ಮಂತ್ರಾಲಯದ ಶ್ರೀ ರಾಘವೇಂದ್ರರನ್ನು ಅವರ ಜೀವನವನ್ನು ಕುರಿತು ಪ್ರಕಟಗೊಂಡವು. ಜಯಂತರು ಮಂತ್ರಾಲಯದ ನೋಟದ ನೇರ ನಿರೂಪಣೆಯನ್ನೆ ಒದಗಿಸಿದರು. ಹಾಗೆಯೆ  "ಅನನ್ಯ ಅಲ್ಲಮ"ದ ಕಂತುಗಳಲ್ಲಿ  ಅಲ್ಲಮಪ್ರಬುವಿನ ಜೀವನ ಸಾದನೆಯ ನಿರೂಪಣೆ ಸಾಗುತ್ತಿವೆಸಿ.ಸೋಮಶೇಖರಯ್ಯನವರ ಲೇಖನದಲ್ಲಿ .

ನನಗೆ facebook request ಕಳಿಸುತ್ತೀರ ಸಂಪದಿಗರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದ ಶ್ರೀನಾಥರ ಒಂದು ಲೇಖನ.ನಾಗರಪಂಚಮಿ ಪರಿಸರ ಪಂಚಮಿಯಾಗಲಿ ನಾಗರಾಜರ ಕಳಕಳಿ, ಸೋಂದಾಕ್ಷೇತ್ರಕ್ಕೆ ಹೊಗೋಣ ಬನ್ನಿ ಜಯಂತರಿಂದ ಅಹ್ವಾನ. ಸಪ್ತಗಿರಿಯವರ "೬೫ ನೇ ಸ್ವಾತಂತ್ರೋತ್ಸವ ೧೯೪೭-೨೦೧೧" ಸ್ವಾತಂತ್ರ್ಯನಂತರ ಬಾರತೀಯರು ನಡೆದು ಬಂದ ಹಾದಿಯ ಒಂದು ಸಮಗ್ರ ನೋಟ,ಕೆಲವೆ ಪದಗಳಲ್ಲಿ ಅತ್ಯುತ್ತಮವಾಗಿ ಹಿಡಿದಿಟ್ಟಿದ್ದಾರೆ.ಅಂತೆಯೆ ನಾರಯಣರ "ಬೂಟ್ ಪಾಲಿಶ್ ಹುಡುಗ..." ಅದೆ ಬಾರತದ ಒಂದು ಚಿತ್ರ.

"ದೋಡಿಯ ವಾಘನ ಖಡ್ಗ" ನಾಗರಾಜರಿಂದ ಶಿಕಾರಿಪುರದ ಹುಚ್ಚುರಾಯಸ್ವಾಮಿಯ ಬಳಿಯಿರುವ ಖಡ್ದದ ಪರಿಚಯ ನೀಡಿದರು. ಸದಾಶಿವರಿಂದ ವಿಶಿಷ್ಟ ಲೇಖನ "ದೋರೆಸಾನಿ ..." ದೇವರಾಜು ಅರಸರ ಕಾಳಜಿ ಸ್ವಭಾವದ ಬಗ್ಗೆ.

"ತುಟಿಗೊಂದು ಆಭರಣ" ಲೇಖನ, ಮೌಸ್ ಅದುಮಿದರೆ ಇದೆಂತದು ಮೈ ಜುಂ ಎನಿಸುವಂತ ಪೋಟೊ, ಎಂತೆಂತಹ ಸಂಸ್ಕೃತಿಗಳೊ ಎಂಬ ವಿಸ್ಮಯ, ಉತ್ತಮ ಲೇಖನ ಬಸವರಾಜರೆ. ಗೋಪಿನಾಥರಿಂದ ಸೆಟೆದೋಸೆ ರೀತಿಯ ಜೊತೆ ಜೊತೆ ಲೇಖನಗಳು ಸಾಕುನಾಯಿಯ ಬಗೆಗಿನ "ಶ್ವಾನಪುರಾಣಮ್" ಒಂದಾದರೆ , ಗೋಪಿನಾಥರ ಮತ್ತೊಂದು ಮುಖ "ಕನ್ನಡಿಯ ಸೂರ್ಯ..." ಗುರುಗಳಾದ ಶ್ರೀ ಹೆಚ್ ಎಸ್ ವಿ ರವರ ಕವನ ಸಂಕಲನದ ಪರಿಚಯಾತ್ಮಕ ಲೇಖನ.

ನಾವು ತಿಂದ ಕ್ಯಾಪ್ಸೂಲ್ .."  ಹೀಗೆಲ್ಲ ಆಗುತ್ತಾ ! , ಪ್ರಶಸ್ತಿಯವರ ನಿರೂಪಣೆ. ಅಪರೂಪದ ಲೇಖಕರು ಐನಂಡ ಪ್ರಭುಕುಮಾರರು , ಹಾಗೆ ಅವರ ಲೇಖನವು ನಿಜಕ್ಕು ಅಪರೂಪದ್ದೆ, "ಮುಕೇಶ್...ಹಿಂದಿ ಚಲನಚಿತ್ರದ."  ಅಪಾರ ಶ್ರಮ ಹಾಗು ಅತ್ಯುತ್ತಮ ನಿರೂಪಣೆ ಒಟ್ಟಿಗೆ ಕಾಣುವ ಲೇಖನ. ಆದರು ಕಡೆಯಲ್ಲಿ ಒಂದೆ spelling doubt ಅದು "ಮುಖೇಶ್" ಎಂದಾಗಬೇಕ ಅಂತ. "ಯಾರು ಹುಚ್ಚೆಂದರು.." ಸತ್ಯನಾರಾಯಣರ ಲೇಖನ ನಾನು ಮದ್ಯದಲ್ಲಿ ತಲೆ ಹಾಕಿದೆ ಅನ್ನಿಸುತ್ತೆ, ಕುವೆಂಪು ಪದ್ಯ ಹಾಗು ಜೀವನ ಘಟನೆಗಳ ನಿರೂಪಣ ಸಂಗ್ರಹ, ಈಗ ಮೊದಲ ಬಾಗ ಎಲ್ಲಿ ಹುಡುಕಿ ಓದಬೇಕು.
ಸಪ್ತಗಿರಿಯವರೆ ನಿಮ್ಮ ಕಥೆ "ಅವನು ಅವಳು ಮತ್ತು ನಾವು" ಸಹಜವಾಗಿಯೆ ಚೆನ್ನಾಗಿದೆ, ಇಂತ ಹೊಸದೃಷ್ಟಿಯ ನಿರೂಪಣೆ ದಾಟಿ ಹೊಸಬರಿಂದಲೆ ಸಾದ್ಯ ಏಕೆಂದರೆ ಹಳಬರೆಲ್ಲ ಸಾಮಾನ್ಯವಾಗಿ ಬಂದಿಗಳು "ಅವರದೆ ಆದ ಶೈಲಿಗೆ ಅವರದೆ ಆದ ನಿರೂಪಣೆಗೆ" , ನಿಮ್ಮ ಕಥೆ ಪಕ್ಶಿನೋಟದಲ್ಲಿ ಸೇರಿದರೆ ನಿಮಗಷ್ಟೆ ಅಲ್ಲ ನನಗು ಹೆಮ್ಮೆಯೆ ಎಲ್ಲ ಲೇಖನವನ್ನು ಸೇರಿಸುವಾಸೆ, ಆದರೆ ಓದುಗರಿಗೆ ಕಷ್ಟ. ಮತ್ತೆ ಕಡೆಗೊಂದು ಪ್ರಶ್ನೆ "ನೀವು ಅದಾರಕ್ಕಾಗಿ ಅಧಾರ್ ಕಾರ್ಡ್ ಮಾಡಿಸಿದ್ದೀರ??" ಪ್ರಶ್ನೆ ನನ್ನದಲ್ಲ, ಗೋಪಿನಾಥರದು ಮತ್ತು ಅದೆ ತಿಂಗಳ ಕಡೆಯ ಲೇಖನ.

ಕವನ ಹಾಗು ಚಿತ್ರಗಳು : ಸಂಪದದಲ್ಲಿ ಪ್ರಕಟವಾಗುವ ಕವನಗಳು ಸದಾ ಮನ ತೋಯ್ಯುಸುತ್ತವೆ. ಪ್ರಕೃತಿ ಕಲೆ ಪ್ರೀತಿ ಕಾವ್ಯ ಅಲ್ಲದೆ ಎದುರಿನ ಪ್ರತಿಯೊಂದು ವಸ್ತುವೆ!
"ನಲ್ಲಳಿಲ್ಲದೆ ಬಳಿಯಲ್ಲಿ" ಕವನದೊಂದಿಗೆ ಪ್ರಾರಂಬ , ಹತ್ತಿರ ನಲ್ಲೆ ಇರದಿದ್ದರೆ ನೇಸರ ಹಕ್ಕಿಗಳು ತಾರೆ ಯಾವುದರಲ್ಲು ಸೊಗಸಿಲ್ಲ ನಗುವಿಲ್ಲ ನಿಜ ಜಯಪ್ರಕಾಶರೆ. ನಂದೀಶರು ಸದಾ ಸಕ್ರಿಯರು, ಜೊತೆಗೆ ಉತ್ತಮ ಚಿತ್ರಗಳನ್ನು ಕವನದ ಹಿನ್ನಲೆಗೆ ಬಳಸುತ್ತಾರೆ. ಅವರ 'ಸಂಪದದಂಗಳದಲ್ಲಿ ನನ್ನ ಕವಿತೆ" ಎಲ್ಲರು ಕೆನ್ನೆಹಿಂಡಿ ಖುಷಿ ಬಿದ್ದ ಕವನ. "ದೇವರು ಮತ್ತು ಮಗು"ವಿನಲ್ಲಿಯ ಚಿತ್ರವಂತು ವಾಹ್!. ಅಂತೆಯೆ ಪ್ರೀತಮರ ಮೈತ್ರಿ ಚೆನ್ನಾಗಿದೆ. ಕವನ ಬರೆಯುವದರಲ್ಲಿ ಮೊದಲಲ್ಲಿ ಆಶಾ ಮಹೇಶ್ ಮತ್ತು ಪ್ರಶಸ್ತಿ ಯವರಿಗೆ ಪಂದ್ಯದಂತಿದೆ, "ನೀನ್ಯಾಕೆ ಬರೆಯಲ್ಲ ಗಂಭೀರ ಕವಿತೆ ಕಾಮೆಂಟು ಲೈಕು ಕುಕ್ಕೊದ್ರಲ್ಲೆನೈತೆ" , ಯುವಜನತೆಗೆ ಪ್ರಶ್ನೆ ಉತ್ತರವನ್ನು ಪ್ರಶಸ್ತಿಯೆ  ಕೊಡಬಲ್ಲರು ಕೊಟ್ಟಿದ್ದಾರೆ. ಅಶಾ ಸದ ಪ್ರಕೃತಿ ಮಳೆಯಲ್ಲಿ ಮಗ್ನರು.ಅರ್ಪಿತಾರಾವ್ ರವರಿಗೆ ಲಂಡನ್ ನಲ್ಲಿದ್ದರು ಕನ್ನಡ ಅಕ್ಷರದ ಮೇಲೆ ಅಕ್ಕರೆ "ಕಡಲ" ತಡಿಯಲ್ಲಿದ್ದರು ಅವರದು ಎಕೊ "ಏಕಾಂಗಿ" ಎಂಬ ಭಾವ.

ಅಲ್ಲ ಮಕ್ಕಳಾಟವನ್ನು ತಾಯಿ ಆಡಿದರೆ ಮಕ್ಕಳು ನೋಡಿ ನಗದಿರರೆ? ಖುಶಿ ಕೊಟ್ಟ ಕವನ "ಮಳೆ ಮತ್ತು ನಾನು" ಅರುಣ ಬದಿಕೋಡಿಯವರೆ. ಸದಾನಂದರು ಮಕ್ಕಳಿಗಾಗಿ ಕವನ ಹೊಸೆಯುವದರಲ್ಲಿ ಸದಾ ಸಿದ್ದಹಸ್ತರು, ಅದು ದೇಶ ಭಕ್ತಿಯಾಗಿರಬಹುದು , ಪುಟ್ಟ ಕೃಷ್ಣನ ಮೇಲಾಗಿರಬಹುದು, " ಚೋರ ಕಿಶೋರ", ನಮ್ಮ ಗಣಪತಿಯಂತು ಮನಸೆಳೆಯಿತು ಸರಳ ಪದಗಳ ಸುಂದರ ಕವನಗಳು. ಜಯಂತ್ ನೀವು ಕವನಗಳಲ್ಲು ಸಿದ್ದಹಸ್ತರೆ "ಮೇಘ ವರ್ಷಿಣಿ"ಯ ವರ್ಣನೆ ಚೆನ್ನಾಗಿದೆ.ಸದಾಶಿವರೆ ನಿಮ್ಮ ಕವನ_ಕುರಿತು ಚೆನ್ನಾಗಿದೆ ಆದರೆ ಅದೆ ಆನೆ ಇನ್ನೆಲ್ಲೊ ನಿಂತಿತ್ತಲ್ಲ.

ಪ್ರಸ್ಸನರೆ " ಅವಘಡ"ಗಳಿರುವುದೆ ನಮಗಾಗಿ . ನಾವು ಅದಕ್ಕೆ ಹೊಂದಿಕೊಳಲ್ಲೇ ಬೇಕಲ್ಲವೆ. ಅಪೂರ್ವ "ಪದ-ಬಂದನ" ಮಾಡಿ ಅಕ್ಕನಿಗೆ ರಾಗಹಾಕಲು ಕೊಟ್ಟ ನಿಮ್ಮ ಜಾಣ್ಮೆ ಚೆನ್ನಾಗಿದೆ. ಶೀಲಾನಾಯಕರೆ ಕೊಳಲು ಹಿಡಿದ ರಾದ-ಕೃಷ್ಣರ ಕೈಗಳ ಹಿಂದಿನ ನವಿಲುಗರಿಯ ವರ್ಣಚಿತ್ರ ನಿಮ್ಮ ಕವನದಷ್ಟೆ ಚೆನ್ನಾಗಿದೆ.
 ಬಸವರಾಜ್ ನೀವು ಹೇಳಿದಂತೆ ಬೋದಿಲೈರ್ ಪ್ರೇರಣೆಯ "ಕೊನೆಯ ಪ್ರೇಮ ನಿವೇದನೆ" ಓದುಗರನ್ನು ಬೆಚ್ಚಿಬೀಳಿಸಬಹುದು ಆದರು ಅದಕ್ಕೆ ರಾದಕೃಷ್ಣರ ಪ್ರೇಮ ಕಾವ್ಯದ ವಿಶಾಲ ಹರವು ಸಿಗುವುದು ಕಷ್ಟವೆ ಆದರು ಒಂದು ವಿಬಿನ್ನ ಪ್ರಯೋಗ ಎಂದು ಒಪ್ಪಬಹುದು. ವಿರೂಪಾಕ್ಷಪ್ಪನವರೆ ಅಣ್ಣಗೆ ಜೈಅನ್ನಲು ನಿಮ್ಮ "ಮತ್ತೆ ಹೋರಾಟ"ಕ್ಕೆ ಕೈಜೋಡಿಸಲು ದೇಶವೆ ಸಿದ್ದವಿದೆ ಬಿಡಿ. "ಮಳೆ ಬಂದರು ಭುವಿ ನೆನೆದರು" ನೀನಿಲ್ಲದೆ ಸ್ಪೂರ್ತಿಯಿಲ್ಲ  "ಹೀಗೇಕೆ ಗೆಳತಿ" ಕವನದಲ್ಲಿ ಅನ್ನುತ್ತಾರೆ  ನರಸಿಂಹಮೂರ್ತಿಗಳು.

 ಚಿತ್ರ ವಿಭಾಗದಲ್ಲಿ ಸೋಮಶೇಖರಯ್ಯನವರ ಚಿತ್ರಗಳಲ್ಲಿ "ಮುರಿದುಬಿದ್ದ ಹಳೆ ಆಡಳಿತ" ಮನ ತಟ್ಟುತ್ತದೆ., "ಅರುಂದತಿ ದರ್ಶನ" ಪಡೆವ ದಂಪತಿಗಳ ಚಿತ್ರ ಅತ್ಯುತ್ತಮ ಸಂಯೋಜನೆಯದು, ಹಂಸಾನಂದಿಯವರು ಇದನ್ನು ನೋಡಿದರೊ ಇಲ್ಲವೊ ತಿಳಿಯದು. ಅಂತೆಯೆ "ಭ್ರಹ್ಮಕಮಲ" ಗಳ ಸರಣಿ ಚಿತ್ರ ಅಮೋಘ , ಅಭಿನಂದನೆಗಳು ಸೋಮಶೇಖರಯ್ಯನವರೆ.

ಚಿಕ್ಕು ನಿಮ್ಮ ಹಕ್ಕಿಯ ಚಿತ್ರ ಸುಂದರ, ಗಣೇಶರಿಗೆ ಸುಮ್ಮನಿರಲು ಹೇಳಿ ಅವರ ಗಲಾಟೆಗೆ ಹಕ್ಕಿ ಹಾರೀತು. ಸುಮಾರವರ "ಬೆಕ್ಕಿನ ಮರಿಯ" ಚಿತ್ರ ಅತಿ ಸುಂದರ ಆದರೆ  ಅದರ ಬಾಷೆ ಯಾವುದೆಂದು ನಿರ್ದಾರವಾಗಲಿಲ್ಲ. ಶಶಿದರರವರ ಬೆಕ್ಕಿನ ಕಣ್ಣು ನೋಡಲು ಭಯ ಎನಿಸಿದರು, ಚೆನ್ನಾಗಿದೆ.
ಶೋಭಾಅರಸ್ ರವರೆ ನಿಮ್ಮ ಹೂವು ಮುಡಿದ ಹೆಣ್ಣಿನ ಚಿತ್ರ ಹಾಗು ಕಲ್ಪನೆ ಎರಡು ಮನಮೋಹಕ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪಾರ್ಥಸಾರಥಿಯವರ ಪಕ್ಷಿನೋಟ ಫಸ್ಟ್‌ಕ್ಲಾಸ್.. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶರು ನನ್ನ ಕೈಹಿಡಿದಿರುವಾಗ(ಎಳೆಯುವಾಗ) ಅದು ಸಹಜವಲ್ಲವೆ ! ಮೆಚ್ಚುಗೆಗೆ ಧನ್ಯ! -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥರವರೆ.. ನಮೋನಮಃ ನಿಮ್ಮ ಪ್ರಯತ್ನಕ್ಕೆ..!

ಅದ್ಭುತ..! ನಿಜವಾಗಿ ಶ್ಲಾಘನೀಯ..!

ಹಾಗೇ.. ನನ್ನ ತಂತ್ರಜ್ಞಾನ ತಲೆ(ತಲೆಹರಟೆ)ಗೆ ಹೊರಟ ಯೋಚನೆ ನಿಮ್ಮ ಬಳಿ ಹಂಚಿಕೊಳ್ಳಲೇಬೇಕು ಅನ್ನಿಸುತ್ತಿದೆ.. (ಈ ತಂತ್ರಜ್ಞಾನ ಅನ್ನೋದು ಹುಟ್ಟೋದಕ್ಕೆ/ಬೆಳೆಯೋದಕ್ಕೆ ಸೋಮಾರಿತನ ಅತಿ ಮುಖ್ಯ ಕಾರಣ ಅಂತ ನನ್ನ ಬಲವಾದ ನಂಬಿಕೆ....!)

ಎಷ್ಟೊಂದು ಬರಹಗಳ ಬಗ್ಗೆ ಬರೆದಿದ್ದೀರಿ.. ಅಲ್ಲೆಲ್ಲಾ ಅವು ಕೊಂಡಿಗಳೊಂದಿಗೆ(with link) ಇದ್ದಿದ್ದರೆ.. ತುಂಬಾ ಉಪಯೋಗ ಆಗುತ್ತಿತ್ತು..!.. :)

ತುಂಬಾ ಕಷ್ಟದ..ಅನ್ನೋಕ್ಕಿಂತ ಸಮಯ ತೆಗೆದುಕೊಳ್ಳೋ ಕೆಲಸ ಅಂತ ನನಗೆ ಗೊತ್ತಿದೆ. ಆದರೂ ಮೇಲೆ ಹೇಳಿದ್ನಲ್ಲಾ.. ತಂತ್ರಜ್ಞಾನದ ತಲೆ(ತಲೆಹರಟೆ).. ಅದಕ್ಕೆ ಸೋಮಾರಿತನ ಹೇಗೆ ಕಾರಣ ಅಂತ ನಿಮಗೆ ಈಗ ತಿಳಿದು ಬಂದಿರಬಹುದು ಅನ್ಕೋತೀನಿ... ನಮಗೆ ಅವನ್ನ ಹುಡುಕಿಕೊಂಡು ಹೋಗೋ ಪ್ರಯತ್ನ ತಪ್ಪುತ್ತಿತ್ತು ಅಂತ..!

ಆದರೆ.. ಅದರ ಉಪಯೋಗ ಕೂಡ ಬಹಳವಿದೆ..! ಅದನ್ನ ಸಂಪದಿಗರು ಗಮನಿಸಬಹುದು.. :)

ಸ್ವಲ್ಪ ಸಮಯ ವ್ಯಯ ಮಾಡಿಯಾದರೂ ಈ ಪ್ರಯತ್ನ ಮಾಡಬಹುದೇ.. ಈಗಲೂ ಈ ಬರಹ ತಿದ್ದಲು ನಿಮಗೆ ಅವಕಾಶವಿದೆ.. ಇಲ್ಲವೇ.. ಕೊಂಡಿಗಳನ್ನ ಒಂದಾದ ಮೇಲೆ ಒಂದು ಪಟ್ಟಿ ಮಾಡಿ.. ನನ್ನೊನ್ನೊಮ್ಮೆ ಸಂಪರ್ಕಿಸಿ(ದೂರವಾಣಿಯ ಮೂಲಕ).. ನನ್ನಿಂದಾಗುವ ಸಂಪದ ಸೇವೆ ಮಾಡುವ... ಅಷ್ಟಾದರೂ ಸಮಾಧಾನ ನನಗಿರಲಿ.. :)

ನಿಮ್ಮೊಲವಿನ,

ಸತ್ಯ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸತ್ಯರವರೆ ನಿಮ್ಮ ಸಲಹೆ ತುಂಬಾ ಅಮೂಲ್ಯ ನಾನು ಅದರ ಬಗ್ಗೆ ಚಿಂತಿಸಿದ್ದೆ ಆದರೆ ನೀವೆ ಹೇಳಿದಂತೆ ಅಷ್ಟೊಂದು ಕೊಂಡಿಗಳನ್ನು ಒಂದೆ ಪುಟದಲ್ಲಿ ಸೇರಿಸುವದಾದರ ಹೇಗೆ ಸಮಯ! ಅದೆ ಕಷ್ಟದ್ದು! ಈಗಲೆ ನಾನು ಎರಡು ಮೂರು ರಾತ್ರಿಗಳು ಕುಳಿತು ಕೊಳ್ಳ ಬೇಕಾಗುತ್ತೆ, ಮತ್ತೆ ಲಿಂಕ್ಸ್ ಸೇರಿಸಲು! ಅಲ್ಲದೆ ಅಷ್ಟು ಕಾಲವು ಸಂಪದದ ಪುಟದಲ್ಲಿಯೆ ಇರಬೇಕಾಗುತ್ತೆ , ಮತ್ತು ಒಂದು ಬಾರಿಗೆ ಒಂದು ಲಿಂಕ್ ಸೇರಿಸಲು ಮಾತ್ರ ಸಂಪದದಲ್ಲಿ ಅವಕಾಶವಾದವಿದೆ ! ಇದಕ್ಕೆ ನೀವು ಹೇಳಿದಂತೆ ಯಾವುದಾದರು ಸುಲುಬೋಪಾಯ(ಸೋಮಾರಿ ಮಾರ್ಗ) ಇರಬಹುದೆ ಅಥವ ಸಂಪದದ ಹೊರಗೆ ಮಾಡಿ ಇಲ್ಲಿ ತಂದು ಕತ್ತರಿಸಿ ಅಂಟಿಸುವ ಮಾರ್ಗ ? ನಿಮ್ಮನ್ನು ಸಂಪರ್ಕಿಸುತ್ತೇನೆ! ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥರವರೇ..! ನೀವೆಲ್ರೀ ಸೋಮಾರಿ..? ಆಗಲೇ ಎಲ್ಲಾ ಹಾಕಿಬಿಟ್ಟಿದ್ದೀರಾ.. :) ಆದರೂ ಅದರ ಬಗ್ಗೆ ಹೆಚ್ಚಿನ ಮಾಹಿತಿಗೆ ನನ್ನ ಸಂಪರ್ಕಿಸಬಹುದು.. ಒಂದು ಸಂದೇಶ ಕಳುಹಿಸಿ (ಹೆಸರಿನ ಜೊತೆ) ನಂತರ ಕರೆ ಮಾಡಿ.. ಇಲ್ಲವಾದಲ್ಲಿ, ನಾನೇ ಕರೆ ಮಾಡುವೆ.. ನಿಮ್ಮ ಸಂದೇಶ ಒಮ್ಮೆ ನೋಡಿದಲ್ಲಿ.. :) ಒಂದು ಬಾರಿಗೆ ಒಂದು ಲಿಂಕ್ ಮಾತ್ರ ಅನ್ನೋದು ಅರ್ಥ ಆಗಲಿಲ್ಲ..! ನಿಮ್ಮೊಲವಿನ, ಸತ್ಯ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸತ್ಯ ರವರೆ ನಿಮಗೆ ಕರೆಮಾಡಾಬೇಕೆಂದುಕೊಂಡೆ ಆದರೆ ಈ ದಿನ ಪೂರ್ತಿ C.E.T ಸಂಬ್ರಮವೆ ಆಗಿಹೋಯಿತು, ನಾಳೆ ಕಾಲೇಜಿನ ಹತ್ತಿರ ಹೋಗಬೇಕು ಮಗಳ ಜೊತೆ, ನಿಮಗೆ ನಾಳೆ ಸಂಜೆ ಅಥವ ನಾಡಿದ್ದು ಕರೆ ಮಾಡುತ್ತೇನೆ ನಿದಾನವಾಗಿ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸತ್ಯ ಚರಣ ಅವರು ನಿನ್ನೆಯಷ್ಟೇ ಕೊಂಡಿ ಸೇರಿಸುವ ಬಗ್ಗೆ ಸಲಹೆ ನೀಡಿದ್ದರು. ಒಂದು ದಿನದ ಒಳಗಾಗಿ ಕೊಂಡಿಗಳು ಪ್ರತ್ಯಕ್ಷವಾಗಿದ್ದು ನೋಡಿ ಖುಷಿಯಾಯಿತು! ಸತ್ಯ ಚರಣ ಅವರಿಗೆ ಮತ್ತು ಪಾರ್ಥಸಾರಥಿ ಅವರಿಗೆ ಧನ್ಯವಾದಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನವೀನ ಕೃಷ್ಣರಿಗೂ ಧನ್ಯವಾದಗಳು ಪ್ರತಿಕ್ರಿಯೆ ಹಾಗು ಮೆಚ್ಚುಗೆಗಾಗಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎ೦ದಿಗಿ೦ತ ಭಿನ್ನ.. ಸರಾಗವಾಗಿ ಓದಿಸಿಕೊ೦ಡು..ಆಗಾಗ ಕಚಗುಳಿಯಿಡುತ್ತಾ.. ಇಷ್ಟವಾಗಿಸಿಕೊ೦ಡ ಲೇಖನ.. ನಿಮ್ಮ ಪ್ರಯತ್ನಕ್ಕೆ ನನ್ನದೊ೦ದು ಹ್ಯಾಟ್ಸಾಫ್.. ಧನ್ಯವಾದಗಳು ಪಾರ್ಥರೇ.. ವಿಶ್ಲೇಷಣೆ ಮು೦ದುವರೆಯಲಿ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಪ್ರಸನ್ನರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

++1..:-)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಗೋಪಾಲರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಮಗೆ ಇಷ್ಟವಾಗಿದ್ದು ನನಗೆ ಸಂತಸ ತಂದಿದೆ, ನಮಸ್ಕಾರಗಳೊಡನೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆಗಸ್ಟ್ ನ ಪಕ್ಷಿನೋಟ ಸೊಗಸಾಗಿದೆ ತಮ್ಮ ಲೇಖನಗಳ ಬಗ್ಗೆ ಪ್ರಸ್ತಾಪಿಸದೆ ಇರುವುದೆ ಕೊರತೆ. ತಮ್ಮಿಂದ ಮೂಡಿ ಬಂದ ' ಸರ್ಪಸುತ್ತು ' ' ಕೂಗುಮಾರಿ ' .ಮತ್ತು ' ಕಾಲ ಕೆಟ್ಟು ಹೋಯ್ತು ಕಣ್ರಿ ' ಉತ್ತಮವಾದ ಲೇಖನಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅಬ್ಬಬ್ಬ ನಿಮ್ಮ ತಾಳ್ಮೆಯೇ !!!! ಶುರು ಸಕತ್ತಾಗಿದೆ (ಬೇರೆ ಚೆನ್ನಾಗಿಲ್ವಾ ಅಂತ ಕೇಳಬೇಡಿ ಮತ್ತೆ!). ಎಲ್ಲವನ್ನೂ ಚೆನ್ನಾಗಿ ಹೇಳಿದ್ದೀರಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಚಿಕ್ಕು !!! ತಾಳಿದವನು ಬಾಳಿಯಾನು ಅಂತಾರಲ್ವೆ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ, ನೀವಿದನ್ನು ಪಕ್ಷಿನೋಟ ಎ೦ದರೂ ಇದು "ಸಿ೦ಹಾವಲೋಕನ"! ಸು೦ದರ ವಿಶ್ಲೇಷಣೆಯನ್ನು ನೀಡಿದ ನಿಮಗೆ ಹಾರ್ದಿಕ ಅಭಿನ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ತಮ್ಮ ಅಭಿಮಾನದ ಪ್ರತಿಕ್ರಿಯೆಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎಲ್ಲಾ ಬರಹಗಳನ್ನು ಪಟ್ಟಿ ಮಾಡಿ ಅದನ್ನು ಒಂದು ಲೇಖನದಲ್ಲಿ ಕಟ್ಟಿಡುವುದು ಇದೆಯಲ್ಲ, ನಿಜಕ್ಕೂ ಉತ್ತಮ ಪ್ರಯತ್ನ. ಅಂದ ಹಾಗೆ ಸದ್ಯಕ್ಕೆ ನಾವು ಸಕ್ರಿಯರು, ಯಾವಾಗ ನಿಷ್ಕ್ರಿಯರಾಗುತ್ತೇವೋ ನಮಗೇ ಗೊತ್ತಿಲ್ಲ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸದಾ ಸಕ್ರಿಯರಾಗಿರಿ ಎಂದ ಹಾರೈಸುತ್ತ ವಂದನೆಗಳೊಡನೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥರವರೇ ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ. ಸತ್ಯ ರವರು ಹೇಳಿದಂತೆ ಲೇಖನಗಳ ಲಿಂಕ್ ಕೊಟ್ಟರೆ, ಬಿಟ್ಟು ಹೋದ ಲೇಖನಗಳನ್ನು ಓದಲು ಸುಲಭ ವಾಗುತ್ತದೆ. ಹಿಂದಿನ ತಿಂಗಳ ಹಲವು ಲೇಖನಗಳನ್ನು ಓದಲಾಗಲಿಲ್ಲ, ನಿಮ್ಮ ವಿಮರ್ಶೆಯಲ್ಲಿ ನಮೂದಿಸಿದ ಲೇಖನಗಳನ್ನು ಮೊದಲು ಓದ ಬೇಕೆಂದಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 :))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಶೀಲಾ ನಾಯಕ್ ರವರೆ ತಮ್ಮ ಮೆಚ್ಚುಗೆಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಕುಂಭ್ಳೆಯವರೆ ನಿಮ್ಮ ಸಲಹೆಯನ್ನು ಕೃತಿಗಿಳಿಸುವ ದಾರಿಯ ಬಗ್ಗೆ ಚಿಂತಿಸುತ್ತೆದ್ದೀನಿ -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಿಂದಿನ ಪಕ್ಷಿನೋಟಗಳಿಗಿಂತ ವಿಭಿನ್ನ ಹಾಗು ಪ್ರತ್ಯೇಕವಾಗಿ ಉಳಿಯುವ ನೋಟ, ಚೆನ್ನಾಗಿದೆ -ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಒಂದು ಸಲಹೆ, ಪಾರ್ಥರೇ. ನಿಮ್ಮ ಬರಹಗಳನ್ನು ವಿಮರ್ಶಿಸುವುದು ನಿಮಗೆ ಮುಜುಗರವೆನಿಸಿದರೆ ಕನಿಷ್ಠ ನಿಮ್ಮ ತಿಂಗಳ ಬರಹಗಳ ಪಟ್ಟಿಯನ್ನಾದರೂ ಸೇರಿಸಿ, ನಿಮ್ಮ ಲೇಖನ ಪೂರ್ಣಗೊಳಿಸಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಮ್ಮ ಅಭಿಮಾನಕ್ಕೆ ನಮನ ನಾಗರಾಜರೆ ನಿಮ್ಮ ಸಲಹೆ ನನಗೆ ಸ್ವಿಕೃತ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸರ್ಪಸುತ್ತು, ಗಣೇಶ ವಿಸರ್ಜನ ಸಂಪ್ರದಾಯ, ಕಾಲ ಕೆಟ್ಟೋಯ್ತು ಬಿಡಿ ಸರ್ ಕೂಗುಮಾರಿ ಒಂದಾ, ಎರಡಾ ಎಲ್ಲಾ ಸೂಪರ್ ಹಿಟ್ ನಮ್ಮ ಪಾರ್ಥಸಾರಥಿಯವರದ್ದು. -ಗಣೇಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

<ಒಂದಾ, ಎರಡಾ ಎಲ್ಲಾ > ಗಣೇಶರೆ ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ ಸಾರಥಿ ಅವ್ರೆ ನಿಮ್ಮ ಆಗಸ್ಟ್ ಮಾಸದಲ್ಲಿ ಸಂಪದ ನನಗಿಸ್ತ್ವಾಯ್ತು. ಬರಹಗಾರನಾದವನಿಗೆ, ಹೊಗಳಿಕೆ-ಪ್ರೋತ್ಸಾಹ, ಮುಖ್ಯ (ಹಾಡು ಹಕ್ಕಿಗೆ ಬೇಕೇ ಬಿರುದು-ಸನ್ಮಾನ!!) ಸಂಪದದಲ್ಲಿ ಬರೆಯುತ್ತ ಬರೆಯುತ್ತ ನನಗೀಗ ಸಂಪದದಿಂದಲೇ ಹೊಸ 'ಐಡೆಂಟಿಟಿ' ಸಿಕ್ಕಿದೆ ಅಂದ್ರೆ ನೀವ್ ನಂಬಲೇಬೇಕು. ಇನ್ನು ನಿಮ್ಮ ವಸ್ತುನಿಸ್ಟವೂ ನೆರವೂ-ಸರಳವೂ ಆದ ವಿಶ್ಲೇಷಣೆ ಸೂಪರ್. ಆದ್ರೆ ಕೆಲ ಸಂಪದಿಗರು ಹೇಳಿದ ಹಾಗೆ ನಿಮ್ಮದೇ ಅತ್ಯುತ್ತಮ ಲೇಖನ-ಬರಹಗಳನ್ನ ನೀವ್ ಈ ಸಲವೂ ಕೈ-ಬಿಟ್ಟಿದ್ದೀರ.. ಸಂಪದದಲ್ಲಿ (ಅದೊಂದು ಮಹಾ ಸಾಗರ) ಬಂದ ಲೇಖನ-ಬರಹಗಳನ್ನ ಓದಿ ಅರ್ಥೈಸಿಕೊಂಡು ಅದೆಲ್ಲದರ ಬಗ್ಗೆಯೇ ವಸ್ತುನಿಸ್ತವೂ ಸರಳವೂ ಸಂಗ್ರಹ ಯೋಗ್ಯವೂ ಅದ ವಿಮರ್ಶೆ ಮಾಡುವುದು ಸಾಮಾನ್ಯ ಕೆಲಸವಲ್ಲ. ನೀವ್ ಖಂಡಿತ ಅಭಿನಂದನೆಗೆ ಅರ್ಹರೆ. ನಿಮ್ಮ 'ಎನರ್ಜಿ' ನನಗೆ ಆಶ್ಚರ್ಯ ಹುಟ್ಟಿಸುತ್ತಿದೆ. ಸಂಪದದಲ್ಲಿ ಬರುವ ಬಹು ಪಾಲು ಎಲ್ಲ ಲೇಖನ-ಬರಹಗಳಿಗೆ ಪ್ರತಿಕ್ರಿಯ್ಸುತ್ತ , ಲೇಖನ -ಬರಹ ಬರೆಯುವ ನಿಮಗೆ ಮತ್ತು ತಿಂಗಳಿಡೀ ಬಂದ ಸಂಪದ ಲೇಖನಗಳನ್ನ ಜರಡಿ ಹಿಡಿದು '---ಮಾಸದಲ್ಲಿ ಸಂಪದ' ವಿಮರ್ಶೆ ಬರೆಯುವ ನಿಮಗೆ ಅದೆಲ್ಲಿ ಇದಕ್ಕೆಲ ಸಮಯ ಸಿಗುತ್ತೆ?(ನಿತ್ಯ ಜೀವನದ ಜಂಜಾಟದಲ್ಲಿ!) ನೀವ್ ಸಾಮಾನ್ಯರಲ್ಲ ಬಿಡೀ ಪಾ!!!! .. ನಮ್ಮ ಬೆನ್ನಂನ್ ನಾವೇ ತಟ್ ಕೊಂಡರೆ ಹೆಂಗೆ? , ನಿಮ್ಮ ಲೇಖನ-ಬರಹಗಳ ಬಗ್ಗೆ ನೀವ್ ಉದ್ದೆಶಪೂರ್ವಕವಗ್ಯೆ ಪ್ರಸ್ತಾಪಿಸಿಲ್ಲ, ಆದರೂ ಆ ಲೇಖನ-ಬರಹಗಳಿಗೆ ಸಿಕ್ಕ ಪ್ರತಿಕ್ರಿಯೆಗಳೇ ಹೇಳ್ತವೆ, ಆ ನಿಮ್ಮೆಲ್ಲ ಲೇಖನ ಬರಹಗಳು ಎಷ್ಟು 'ಸತ್ವಯುತ'; ಅಂತ. ನಿಮ್ಮಿಂದ ಇನ್ನಸ್ಟು 'ಸಾಹಿತ್ಯ ಮೃಷ್ಟಾನ್ನ ಭೋಜನ' ನಿರೀಕ್ಷಿಸುತ್ತ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆ ಹಾಗು ಮೆಚ್ಚುಗೆಗೆ ವಂದನೆಗಳು ಸಪ್ತಗಿರಿವಾಸರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಿತ್ರ ಪಾರ್ಥಸಾರಥಿಯವರೇ, ನಾನು ನೋಡಿರುವೆಡೆಗಳಲ್ಲೆಲ್ಲಾ ಅವರ ಹೆಸರು ‘ಮುಕೇಶ್’ ಎಂದೇ ಇದೆ. ನನ್ನಲ್ಲಿರುವ ಫಿರೋಜ್ ರಂಗೂನ್ ವಾಲಾ ಮತ್ತು ಅಶೋಕ್ ಗ್ರೋವರ್ ಅವರ ಪುಸ್ತಕಗಳಲ್ಲದೆ, ಅವರ ಹಾಡುಗಳ ಕೆಸೆಟ್‍ಗಳಲ್ಲಿ ದೇವನಾಗರಿಯಲ್ಲಿ ಮುಕೇಶ್ ಎಂದೇ ಇದೆ. ಹಿಂದಿ ಭಾಷೆಯಲ್ಲಿ ಗೂಗ್‍ಲ್‍ನಲ್ಲಿ ಹುಡುಕಿದರೂ ಅಲ್ಲೂ ಮುಕೇಶ್ ಎಂದೇ ಇದೆ. ಈ ಕಾರಣದಿಂದಾಗಿ ಮುಖೇಶ್ ಎನ್ನುವದು ತಪ್ಪಾದೀತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಭು ನೀವಂದದೆ ಸರಿ ಇರಬಹುದು ನನ್ನದು ಕೇವಲ ಅನುಮಾನವಷ್ಟೆ ಮತ್ತುಆ ಪದದ ಅರ್ಥ ಏನಿರಬಹುದು ಅಂತ ಯೋಚನೆಯಷ್ಟೆ, ಈಶ್ವರನ, ಬ್ರಹ್ಮನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಭು ಕುತೂಹಲಕ್ಕೊಮ್ಮೆ ಕಣ್ಣು ಹಾಯಿಸಿ http://search.condui...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

Very interesting, ಪಾರ್ಥಸಾರಥಿಯವರೇ! ಆದರೆ ಹಿಂದಿ ಭಾಷೆಯ ಯಾವದೇ ಬರೆಹ - ಪುಸ್ತಕದಲ್ಲಾಗಲೀ, ಪತ್ರಿಕೆಯಲ್ಲಾಗಲೀ ಅಥವಾ netನಲ್ಲಾಗಲೀ - मुकेश ಎಂದೇ ಇದೆ. ಮುಕೇಶ್ ಎಂದರೆ ಅರ್ಥವೇನೆಂದು ನಾನೂ ಬಹಳ ಹುಡುಕಿದ್ದೇನೆ. ಎಲ್ಲಿಯೂ ಸಿಗಲಿಲ್ಲ. ಮಾಥುರ್ ಎಂಬ ಸಹೋದ್ಯೋಗಿಯನ್ನೊಮ್ಮೆ (ಮುಕೇಶ್ ಚಂದ್ರ ಮಾಥುರರಂತೆ ಅವನೂ ಕಾಯಸ್ಥನಾದದ್ದರಿಂದ ಅವನಿಗೆ ಗೊತ್ತಿರಬಹುದು ಎಂಬ ಅಸಮರ್ಪಕ ತರ್ಕದಿಂದ) ಕೇಳಿದಾಗ, ‘ಅದು ಬಹುಶಃ ಶಿವನ ಹೆಸರಿರಬಹುದು’, ಎಂದವನು ‘ನಿಜವಾಗೂ ನನಗೆ ಗೊತ್ತಿಲ್ಲ’, ಎಂದು defense modeಗೆ ಹೋಗಿಬಿಟ್ಟಿದ್ದ! ಅಂದ ಹಾಗೆ, ಪಾರ್ಥಸಾರಥಿಯವರೇ, ನಿಮ್ಮ ಪಕ್ಷಿನೋಟದ ಲೇಖನಕ್ಕೆ ನೀವು ತೆಗೆದುಕೊಂಡಿರುವ ಆಸಕ್ತಿ, ಮುತುವರ್ಜಿ, ಇತ್ಯಾದಿಗಳನ್ನು ಗಮನಿಸಿ, ನಿಜವಾಗೂ ಮೆಚ್ಚುಗೆಯಾಗಿದೆ. ನನ್ನಿಂದಂತೂ ಈ ಶ್ರಮ ಸಾಧ್ಯವಿಲ್ಲವೆಂದು ಖಚಿತ. ಮನಪೂರ್ವಕ ಅಭಿನಂದನೆಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಭು ಅರ್ಥ ನನಗು ತಿಳಿಯಲಿಲ್ಲ ನನ್ನ ಕಲ್ಪನೆಯಂತೆ ಬ್ರಹ್ಮನ ಮುಖ (ಕಪಾಲ) ಹಿಡಿದವ ಮುಖೇಶ ಈಶ್ವರನೆಂದು ಅಥವ ನಾಲ್ಕು ದಿಕ್ಕಿನಲ್ಲಲ್ಲದೆ ಐದನೆಯ ತಲೆ (ಮುಖ) ದವನಾದ ಬ್ರಹ್ಮನೆಂದು ಅಥವ ಕಟ್ಮಂಡುವಿನಲ್ಲಿಹ ಪಶುಪತಿನಾಥನಂತೆ ಮುಖ ರೂಪಿಯಾದ ಲಿಂಗ ಮುಖೇಶ ನಿರಬಹುದೆಂದು ಅಂದುಕೊಂಡೆ -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಹಾಭಾರತದಲ್ಲಿ ಬರುವ ಅರ್ಜುನ ಮತ್ತು ಶಿವನ(ಕಿರಾತ) ನಡುವಿನ ಯುದ್ಧಕ್ಕೆ ಕಾರಣವಾದ ಕರಡಿ ರೂಪಿ ರಾಕ್ಷಸನ ಹೆಸರು 'ಮುಕ'. ಹೇಗೆ ಮೂಕಾಸುರನನ್ನು ಕೊಂದ ದೇವಿ ಮೂಕಾಂಬಿಕೆಯಾದಳೋ ಹಾಗೆ ಮುಕ ಅಸುರನನ್ನು ಕೊಂದ ಶಿವ ಮುಕೇಶ ಆದನಿರಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿಯವರೇ ಎಂದಿನಂತೆ ಉತ್ತಮ ನಿರೂಪಣೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಜಯಂತ್ ಎಂದಿನಂತೆ ನಿಮ್ಮ ಆತ್ಮೀಯ ಪ್ರತಿಕ್ರಿಯೆ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ ಅವರೇ ಸೊಗಸಾದ ಪಕ್ಷಿನೋಟ ... ಜೊತೆಗೆ ’ಒಡೆಯನ ವಡೆ’ ಬಗೆಗಿನ ಮಾತು ಬಹಳ ದೊಡ್ಡದು ... ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಶ್ರೀನಾಥ್ ನಿಮ್ಮನ್ನು ನಿರೀಕ್ಷಿಸಿದ್ದೆ, ಇದ್ದೀರೊ ಹೊರಟುಬಿಟ್ಟಿರೊ ? ತಿಳಿಯಲಿಲ್ಲ ವಿದೇಶಕ್ಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ ಅವರೇ ಇದ್ದ ಮೂರು ವಾರಗಳಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆ ... ನಿಮ್ಮನ್ನು, ರಾಮಮೋಹನ್, ಮಂಜಣ್ಣನವರನ್ನು ಮತ್ತೊಮ್ಮೆ ಭೇಟಿಯಾಗುವ ಇಚ್ಚೆ ಇತ್ತು ... ಕಾಲಾವಕಾಶವಾಗಲಿಲ್ಲ :-( ಕ್ಷಮಿಸಿ .. ನಾನು ಈಗ ಅಮೇರಿಕಕ್ಕೆ ವಾಪಸಾಗಿದ್ದೇನೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೆಂದದ ಪಕ್ಷಿನೋಟ.ಪ್ರತಿತಿಂಗಳ ಸಂಪದವಲೋಕನವು ಹೊಸಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.