ಪಕ್ಷಿನೋಟ - ಅಕ್ಟೋಬರ್(೨೦೧೧) ಮಾಸದಲ್ಲಿ ಸಂಪದ

5


ಪಕ್ಷಿನೋಟ -  ಅಕ್ಟೋಬರ್(೨೦೧೧)  ಮಾಸದಲ್ಲಿ ಸಂಪದ


ದಸರಾ ಮತ್ತು ದೀಪಾವಳಿ ನಡುವೆ ಕಳೆದ ಅಕ್ಟೋಬರ್ ಮಾಸ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ತಿಂಗಳ ಮೊದಲರ್ಧದಲ್ಲಿ  ಘಝಲ್ ಕಿಂಗ್ ಎಂದು ಹೆಸರಾದ ಜಗಜಿತ್ ಸಿಂಗ್ ರಂತ ಖ್ಯಾತನಾಮರು ಮರಣಹೊಂದಿದರು , ಸರ್ವಾಧಿಕಾರಿ ಗಡಾಫಿಯನ್ನು ಅವನ  ದೇಶದಲ್ಲೆ ಬೇಟೆ ಆಡಲಾಯಿತು.  ಯಡಿಯೂರಪ್ಪನವರು ಸೇರಿದಂತೆ ಪ್ರಮುಖರು ಜೈಲು ಸೇರಿದರು. ಕರ್ನಾಟಕದ ಇಪ್ಪತ್ತಾರು ವರ್ಷಗಳ ಕನಸು " ಮೆಟ್ರೋ"  ರೈಲು ಆಕಾಶದಲ್ಲಿ ಓಡಾಡಿತು, ಮಾಸದ ಕಡೆಗೆ ಬಂದಂತೆ ಅಧ್ವಾಣಿಯವರ ಕಾರುಗಳು ಕರ್ನಾಟಕದಲ್ಲಿ ದೂಳೆಬ್ಬಿಸಿ ಹೋದವು. ಆದರೇನು ಏನು ಕಾರಣವೊ ಇದ್ಯಾವುದು ಸಂಪದ ಬರಹಗಾರರ, ಓದುಗರ ಗಮನ ಹೆಚ್ಚಾಗಿ ಸೆಳೆಯುವಲ್ಲಿ ವಿಫಲವಾಯಿತು.  ಅದೇ ಆಶ್ಚರ್ಯವೆಂದರೆ ನೋಡಿ ಕನ್ನಡ ಚಲನಚಿತ್ರ "ಪರಮಾತ್ಮ"  ಹಲವು ಬರಹಗಾರರನ್ನು ಆಕರ್ಷಿಸಿತು. ಆದರ ಬಗ್ಗೆ ಬಂದ ವಿಮರ್ಷಲೇಖನ ಹಾಗು ಅಣಕು ಹಾಡುಗಳನ್ನು ಗಮನಿಸಿ .
ಪರಮಾತ್ಮ :ಬೆಂಚೇಶ್ವರ - ಕುಂಭ್ಳೆ,   ಕತ್ಲಲ್ಲಿ ಕರಡಿಗೆ- ಜಯಂತ್  ,  ವೆಂಕಟೇಶ್ವರ - ಸುಮಂಗಲಾ ,  ಪರಮಾತ್ಮ - ಇಂಚರ ,   ಪರಮಾತ್ಮ - ಅಂತರಂಗದ.. ಸಪ್ತಗಿರಿವಾಸಿ ,  ಯೋಗರಾಜರ ಪರಮಾತ್ಮ - ಗೋಪಿನಾಥರು  , ಪರಮಾತ್ಮನ ಸನ್ನಿದಿಯಿಂದ- ರವೀಶ್ ಕುಮಾರ್ ... ಮತ್ತೆ ಯಾವುದಾದರು ಮರತಿದ್ದರೆ ಕ್ಷಮಿಸಿ. :)))

ಪ್ರತಿತಿಂಗಳು ಸಂಪದಿಗರಿಗೆ ಏನಾದರು ಹೊಸದೊಂದನ್ನು ಕೊಡುಗೆಯಾಗಿ ಕೊಡುವ ಹವ್ಯಾಸ ಸಂಪದ ನಿರ್ವಹಣೆ ತಂಡದ್ದು.  ಈ ಸಾರಿ ಸಂಪದದಲ್ಲಿನ ದ್ವನಿಮುದ್ರಿತ ಸಂದರ್ಷನಗಳನ್ನು ಮೊಬೈಲ್ನಲ್ಲಿಯೆ ಕೇಳಲು 'ಕನ್ನಡದಲ್ಲಿಯೆ ಪ್ರಥಮ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ '  ತಂತ್ರಾಂಶವನ್ನು ಕಟ್ಟಿಕೊಡಲಾಗಿದೆ. ಮತ್ತು ಇದನ್ನು ಉಚಿತವಾಗಿಯೆ 'ಇಳಿಸಿಕೊಳ್ಳಲು' [download]   ಅವಕಾಶವಿದೆ.ಬ್ಲಾಗ್ ಬರಹಗಳ ವಿಭಾಗ:
"ಏನ್ರಿ ದಿನದ ಜೀವನ ನಡೆಸೋಕೆ ೩೨ ರೂಪಾಯಿ ಸಾಲಲ್ವ?"  ಶಶಿಕುಮಾರ್ ಮೈಸೂರು ಇವರ ಬರಹದಿಂದ ಪ್ರಾರಂಬ, ಕೇಂದ್ರ ಸರ್ಕಾರದ ಅಂಗ ಸಂಸ್ಥೆ  ಯೋಜನಆಯೋಗ ಸುಪ್ರಿಂಕೋರ್ಟ್ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ನಗರದಲ್ಲಿ ದಿನಕ್ಕೆ ೩೨ ರೂಗಳಿಗಿಂತ ಹೆಚ್ಚು ಖರ್ಚು ಮಾಡುವರನ್ನು ಬಡತನದ ರೇಖೆಯ ಮೇಲಿರುವವರು ಎಂದಿತು ಹಾಗು ಯಾವುದೆ ಸೌಲಭ್ಯ ಕೊಡಬೇಕಿಲ್ಲ ಎಂದಿತು!, ಇದನ್ನು ಒಪ್ಪಲು ಸಾದ್ಯವೆ ? . ಈ ಲೇಖನಕ್ಕೆ ದ್ವನಿಸೇರಿಸಿ ರವಿಯವರು ಹೇಳುತ್ತಿದ್ದಾರೆ "ಸರ್ಕಾರಿ ಬಸ್ಸಿನ ದಿನದ ಪಾಸಿನ ಬೆಲೆ ಇದಕ್ಕಿಂತ ಜಾಸ್ತಿ ೪೦/೪೫ ರೂಗಳು ಎಂದು" , ಎರಡು ಉತ್ತಮ ಜನಜಾಗೃತಿ ಮೂಡಿಸುವ ಲೇಖನಗಳು. 
   ಕಥೆಗಳಲ್ಲಿ ಪ್ರಾಣಿಗಳ ಪಾತ್ರಗಳನ್ನು ಉಪಯೋಗಿಸಿ ಕೊಳ್ಳುವ ಪ್ರಯತ್ನ ತುಂಬಾ ಕಡಿಮೆ ಆದರೆ ಅದರಲ್ಲಿ ಗೆದ್ದಿರುವರು "ಕರಿ ಮಲೆಯ ಕಗ್ಗತ್ತಲಿನಲಿ" ಯ ಲೇಖಕರು ಚೇತನ್ ಕೋಡುವಳ್ಳಿ. ಮತ್ತೆ ಅವರ ಮಲೆನಾಡಿನ ಚಿತ್ರಗಳು ಹಾಗು ಚರ್ಮುರಿ ಸಹ ಎಲ್ಲರು ಚಪ್ಪರಿಸಿದ್ದಾರೆ . ಕವಿನಾಗರಾಜರ "ಮೂಡ ಉವಾಚ"  ಎಂದಿನಂತೆ ನಿರಂತರವಾಗಿ ಸಾಗಿದೆ.
   "ಅನ್ನದಾತ"  ಸುಮಂಗಲಾರವರು ಭೂಮಿಯನ್ನು ನಂಬಿ ಬದುಕುವ ರೈತರ ಬದುಕನ್ನು ಹಾಡಾಗಿಸಿದ್ದಾರೆ, ಆದರೆ ಗಂಡನಿಗೆ ಸಜ್ಜೆ ರೊಟ್ಟಿ ಒಯ್ಯುವ ರೈತ ಮಹಿಳೆ "ಜರತಾರಿ ಸೀರೆ" ಉಡುವಷ್ಟು ಸ್ಥಿಥಿವಂತರ? ಪದ್ಯಕ್ಕೆ ಸೀಮಿತವಾಗಿ ಸಾಲುಗಳಂತು ಸುಂದರ. ಮತ್ತೆ ಅವರು ಇನ್ನೋದು ಪ್ರಯತ್ನ "ಬರಿದಾದ ತೊಟ್ಟಿಲು" ಮಾತೆಯ ಆಕ್ರಂದನ. ಹಾಗೆಯೆ ಅವರ "ಒಲವಿನ ಒಡಲು"  ಕವನ ಪದಗಳಷ್ಟೆ ಸುಂದರ ಆರಿಸಿರುವ ಚಿತ್ರ, ಕಥೆ ಹೇಳುತ್ತಿದೆ ನೂರೆಂಟು.
ವೈಷ್ಣವ ಜನತೋ .. ಹಾಡನ್ನು ಬಹಳ ವರ್ಷಗಳಿಂದ ಕೇಳುತ್ತಿದ್ದೇವೆ ಆದರೆ ಅದರ ಭಾವಾರ್ಥವನ್ನು ನಮಗೆ ತಿಳಿಸಿಕೊಡುತ್ತಿದ್ದಾರೆ ಕೃಷ್ಣಪ್ರಕಾಶ ಬೊಳುಂಬು ರವರು ತಮ್ಮ "ಮಾತು ಪಲ್ಲಟ" ದಲ್ಲಿ.
"ದಸರಾ:ಅಂದು ಇಂದು"  ಸಾಮಾನ್ಯವಾಗಿ ಪ್ರತಿದಸರಾದಲ್ಲಿ ಲೇಖಕರ ಆಯ್ಕೆಯ ಬರಹವಿದು ಆದರೆ ಶಶಿಕುಮಾರರು ಅದನ್ನು ವಿಶಿಷ್ಟ ರೀತಿಯಲ್ಲಿ ಪೌರಾಣಿಕ ಹಿನ್ನಲೆ ಐತಿಹಾಸಿಕ ಹಿನ್ನಲೆಯೊಂದಿಗೆ ಮನಮುಟ್ಟುವಂತೆ ಚಿತ್ರಿಸಿದ್ದಾರೆ ದಸರಾ ಮಹತ್ವವನ್ನು. ಹಾಗೆಯೆ ತಮ್ಮ ಭ್ರಷ್ಟಚಾರಿ ವಿರೋದಿ ಲೇಖನಗಳನ್ನು ಮುಂದುವರೆಸಿದ್ದಾರೆ ಶಶಿಕುಮಾರರು.  ಅವರ "ಯಡ್ಡಿಯಿಂದ ಜೈಲುಬರೊ.." ಲೇಖನ ಟಿಪ್ಪಣಿಯ ಅಗತ್ಯವೆ ಇಲ್ಲ ಅನ್ನಿಸುತ್ತೆ.
  ಸದಾನಂದರ ಪರಿಸರ ಕಾಳಜಿ "ಉಳಿಸಿರೊ ಪರಿಸರ" ಕವನದಲ್ಲಿ.    ಕವಿನಾಗರಾಜರು ಏಳರಂದು ಹುಟ್ಟುಹಬ್ಬ ಆಚರಿಸಿದ್ದನ್ನು ನಮ್ಮೆಲ್ಲರ ಜೊತೆ ಹಂಚಿಕೊಂಡಿದ್ದಾರೆ ಮಂಜುನಾಥ್ ರವರು.

ನೇರವಾಗಿರಬೇಕೆಂದರು ಏಕೆ ನಾವು ಡೊಂಕಾಗಿಬಿಡುತ್ತೇವೆ ಶಿವರಾಮರ ಸ್ವಗತ  "ನಾನೇಕೆ ಹೀಗಾದೆ?"  ,  ಜೊತೆಗೆ  ಕನ್ನಡದಲ್ಲಿ ಐದು ಸಾಲುಗಳ "ಮೊದಲ ಲಿಮರಿಕ್ಕನ್ನು" ರಚಿಸಿಸಿದ್ದಾರೆ ನಮಗಾಗಿ .  ಪುನಃ ಅವರಿಗೆ  ಎಂತದೊ  "ಖುಷಿ"  ರಾತ್ರಿ ಮಲಗಿದರೆ ಬೆಳಗ್ಗೆ ಏಳುವದರಲ್ಲಿ ಬೇರು ಬಿಟ್ಟಿದಾರಂತೆ.


    " ಗಝಲ್ ಕಿಂಗ್"  ಎಂದು ಪ್ರಖ್ಯಾತರಾಗಿದ್ದ   ಜಗಜೀತ್ ಸಿಂಗ ಅವರ ದಿವ್ಯಾತ್ಮಕ್ಕೆ,    ಶಾಂತಿ ಕೋರುತ್ತ ಆಸುರವರು "ಹೀಗೇಕೆ ಮುಗುಳ್ನಗುತ್ತಿರುವೆ" ಎಂಬ ಭಾವಾನುವಾದವನ್ನು ಸಂಪದಿಗರಿಗೆ ಉಣಿಸಿದ್ದಾರೆ!.  ಹಾಗೆಯೆ ಕಾರ್ತಿಕ್ ಎನ್ ರಾವ್ ರವರು ಸಹ ಸಿಂಗರನ್ನ ನೆನೆಸಿದ್ದಾರೆ " ಚಿಟ್ಟಿ ನಾ ಕೋಯಿ ಸಂದೇಶ್" ಬರಹದಲ್ಲಿ.

ಕನ್ನಡವನ್ನು ಕಡೆಗಾಣಿಸಿ ಹಿಂದಿಯನ್ನು ರಾಷ್ಟಭಾಷೆ ಎಂಬ ಹುಸಿ ಸುಳ್ಳು ಹೇರುತ್ತಲಿರುವ ಕೇಂದ್ರದ ದೋರಣೆಯ ಬಗ್ಗೆ ಲೇಖನ ನಾಗೇಂದ್ರಕುಮಾರರಿಂದ "ಭಾರತೀಯ..ಕೇಂದ್ರ ಸರ್ಕಾರದ ಭಾಷಸೂತ್ರ"..    ವಾಕ್ಪಥಕ್ಕೆ ಬೇಟಿ ನೀಡಿದ ಸತ್ಯಚರಣ್ ಕೆಳಗೆ ಪೂಳಿಯೋಗರೆ ಪಾಯಿಂಟಿಗು ಬೇಟಿನೀಡಿ ಬಂದರಂತೆ, ಯಾವುದು ಚೆನ್ನಾಗಿತ್ತು ಅಂದ್ರೆ ಹೇಳ್ತಾರೆ "ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್" ಅಂತ.
  ಮತ್ತೆ ಗಣೇಶರ ಕ್ಯಾಪ್ಟನ್ಸಿಯಲ್ಲಿ ಮುಂದುವರೆದಿದೆ ಮಲ್ಲೇಶ್ವರ ಚಲೋ ಸರಣಿ, ಮಂಜುನಾಥರಂತು "ಮಾರಿ ಹಬ್ಬ" ಮುಗಿಸಿದ್ದಾರೆ, ಮುಂದೆ ನೋಡಬೇಕು, ಗಣೇಶ ವೈಭವವನ್ನು. ಭಾರತದ ಕೆಲವು ಪ್ರಮುಖ ಸ್ಥಳಗಳ ಚಿತ್ರದರ್ಶನದ ಸರಣಿ ಪ್ರಾರಂಬಿಸಿದ್ದಾರೆ ಸುಮಂಗಲ, ಅಮೃತಸರದ ಸ್ವರ್ಣ ದೇವಾಲಯದೊಂದಿಗೆ.
  ಬೆಂಗಳುರಿನಲ್ಲಿ ಜ್ವಾಲಮುಖಿ ಸಿಡಿಯಿತೆ ಛೇ! ಅಲ್ಲ ಅದು ಬರಿ ಮೋಡಗಳ ಕಾರುಬಾರು ಚೇತನ್ ಕೋಡುವಳ್ಳಿಯವರ "ಮುಸಂಜೆಯಲ್ಲಿ ಮೇಘಗಳು" ಚಿತ್ರಬರಹದಲ್ಲಿ.
  ಬದುಕಿನ ಬಗ್ಗೆ ತಾವು ನಡೆದು ಬಂದ ಹಾದಿ ನಡೆಯಬೇಕಾದ ಹಾದಿ ಇವುಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಭಾವನ ಜೀವಿ ಆಚಾರ್ಯರಿಂದ ಕವನ  "ಕವಲು".  ಪುರಾಣದ ಕಥೆಗಳತ್ತ ಗಮನ ಹರಿಸಿರುವ ಭಾಗ್ವತರು, ಮಹಾಭಾರತದ "ಶಕುನಿ"ಯ ತಂತ್ರದಬಗ್ಗೆ ಒಂದು ಬರಹ  ಬರೆದಿದ್ದಾರೆ.
ಶ್ರೀದರ್ ಬಂಡ್ರಿಯವರ "ಅವಕಾಶ ಲಭ್ಯ ಪ್ರಾಪ್ತಿ.." , "ನಾಯಿಂದ ಶಬ್ದಕ್ಕೆಪರ್ಯಾಯ ಪದಗಳು"   ರೀತಿಯ ಪುಟ್ಟ ಪುಟ್ಟ ಲೇಖನ ಗಳು ಸಂಪದಿಗರಿಗೆ ತುಂಬಾ ಇಷ್ಟವಾಗುತ್ತಿವೆ, ಅನಿಸುತ್ತಿದೆ.

 ಕುಂಭ್ಳೆಯವರು "ಅ ಕಪ್ ಆಫ್ ಕಾಫಿ ಅ ಸಿಪ್ ಆಫ್ ಪ್ರೀತಿ" ಎನ್ನುವ ಹೋಸ ರೀತಿಯ ಪ್ರಯೋಗದ ಕಥಾಸರಣಿ ಪ್ರಾರಂಬಿಸಿದ್ದಾರೆ. ಬಹಳ ಸಂಪದಿಗರಿಗೆ ಆಶ್ಚರ್ಯವಾಗಿದೆಯಂತೆ ಪ್ರಸನ್ನರು ಪದಗಳಲ್ಲಿ ಕವನ ಕಟ್ಟಿರುವ ರೀತಿ "ಆಶ್ಚರ್ಯವಾ.." ಕವನದಲ್ಲಿ.

 "ಇಂಗ್ಲೀಷ್ ಬರಲ್ಲವೆ ಆತ್ಮಹತ್ಯೆ ಮಾಡಿಕೊಳ್ಳಿ" ಶಶಿಕುಮಾರ್ ನಿಮಗೆ ಕೊಡುತ್ತಿರುವ ಸಲಹೆಯಲ್ಲ , ಮೈಸೂರಿನ ಕಾಲೇಜೊಂದರ ಹುಡುಗಿಯ ಆತ್ಮ ಹತ್ಯೆ ಹಿಂದಿನ ಘಟನೆ, ಮನ ಕಲಕುತ್ತದೆ.
 ಹರೀಶ್ ಆತ್ರೇಯರ ಅಪರೂಪದ ಪತ್ರ "ನನ್ನ ಪ್ರತಿಬಿಂಬಕ್ಕೆ"  ಇಷ್ಟು ದಿನವಾದರು ಆ ಪ್ರಜ್ಞ ಯಾರು ನನಗಿನ್ನು ತಿಳಿದಿಲ್ಲ.   ಸತೀಶರ "ಶ್ರೀನರಸಿಂಹ" ದ ಹೊಸ ಪದ್ಯದಲ್ಲಿ ನನ್ನದಲ್ಲದ ಹಣಕ್ಕೆ, ನೆಲಕ್ಕೆ ಆಸೆಪಡಬಾರದು ಎನ್ನುತ್ತಾರೆ, ಆದರೆ ಈಗಿನ ಸಮಸ್ಯೆ ಎಲ್ಲವನ್ನು "ನನ್ನದು" ಮಾಡಿಕೊಳ್ಳಲಿಕ್ಕೆ ಹೊರಟಿರುವುದೆ ಆಗಿದೆ.

   ಹುಡುಗಿಯೊಬ್ಬಳ ಹುಡುಗಾಟ ಆಕೆಯ ಗೆಳತಿಯ ಪ್ರಾಣಕ್ಕೆ ಎರವಾದ ಕಥೆ  ಜಯಂತರ "ಸಾವಿನ ಜೊತೆ ಹುಡುಗಾಟ"
  ದೇವರು ಆರ್ ಭಟ "ಮೂಡಬಿದರೆಯ ರಂಗ ಚಟುವಟಿಕೆ" ಬಗ್ಗೆ ಲೇಖನ ಬರಿದಿದ್ದಾರೆ, ಅವರ ಲೇಖನದ ಮೊದಲ ಸಾಲುಗಳನ್ನು ಗಮನಿಸಿ "ಬೆಂಗಳೂರು ಅಥವ ನಗರಪ್ರದೇಶದಲ್ಲಿ ನಡೆಯುವ ರಂಗ ಚಟುವಟಿಕೆಗಳು ಮಾತ್ರ ಮಾಧ್ಯಮದವರನ್ನು ಸೆಳೆಯುತ್ತವೆ, ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷ ಮಾಡಲಾಗುತ್ತೆ "  ನಿಜ ದೇವರೆ ಅದೆ ಪತ್ರಿಕೆಗಳು ಟಾಂಟಾಂ ಮಾಡುತ್ತವೆ ಸರ್ಕಾರಿ ನೌಕರರು, ಡಾಕ್ಟರಗಳು ಹಳ್ಳಿಗಳಿಗೆ ಹೋಗುವದೆ ಇಲ್ಲ ನಗರಕ್ಕೆ ಸೀಮಿತವಾಗಿರ್ತಾರೆ ಅಂತ.
    ಭಾಗ್ವತರ ಪುರಾಣದ ಕಥೆಗಳ ಮಾಲಿಕೆಯಲ್ಲಿ "ಸೀತೆಯಾದಳು ವೇದವತಿ"  ಆಸಕ್ತಿದಾಯಕವಾಗಿದೆ, ಪುರಾಣದ ಕತೆಗಳಿಗೆ ನಂಬಿಕೆಯಷ್ಟೆ ಬುನಾದಿ ಹೊರತು ತರ್ಕವಲ್ಲ ಅನ್ನುತ್ತಾರೆ ಅವರು ತಮ್ಮ ಪ್ರತಿಕ್ರಿಯೆಗಳಲ್ಲಿ ಉತ್ತರಿಸುತ್ತ.
   ಗಣೇಶರು ಪತ್ನಿ ಸಮೇತ "ಸದಾಶಿವನಗರದ ಪಾರ್ಕಿಗ"  ಹೋಗಿ ಅಮೇರಿಕನ್ ಕಾರ್ನ್ ತಿಂದರು ನಿಮಗೆಲ್ಲ ಪಾರ್ಕಿನ ಚಿತ್ರಗಳನ್ನು ತೋರಿಸುತ್ತಿದ್ದಾರೆ.  ಡಾಕ್ಟರ್ ಹೇಳೊ ಪಥ್ಯ ಮಾಡಲು ಬೇಸರಿಸುವ ರೋಗಿಯೊಬ್ಬನಿಗೆ ಉಪದೇಶ "ಮೂರು ಪ್ರಯೋಜನಗಳು" ಶೀದರ್ ಬಂಡ್ರಿಯವರಿಂದ.  ನಿಮ್ಮ ಮನೆಯ ಹತ್ತಿರ ಯಾವುದೊ ರಸ್ತೆ ಹದಗೆಟ್ಟಿದೆ ಅಲ್ಲವೆ ಅದನು ಸರಿ ಪಡಿಸಲು ಕವಿ ನಾಗರಾಜರು "ಸಂಬಾವ್ಯ ಐದು ಪರಿಹಾರ" ಹೇಳಿದ್ದಾರೆ ನೋಡಿ, ನನಗಂತು ಕಡೆಯದೆ ಸರಿ ಅನ್ನಿಸಿತು.
ಬಂತು ಬಂತು ಮೆಟ್ರೊ ಬಂತು ಬೆಂಗಳೂರಿಗೆ ,  ಅದರ "ಮೊದಲ ದಿನದ ಅನುಭವ" ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದಾರೆ, *ರವೀ*.  ’ತುಂಗೆ ಭದ್ರೆ"  ಯರ ನಡುವಿನ ಮಂಡಗದ್ದೆ,ತೀರ್ಥಹಳ್ಳಿ,ಕುಪ್ಪಳಿಯಲ್ಲಿನ ಮನಮೋಹಕ ದೃಷ್ಯಗಳನ್ನು ನಮಗಾಗಿ ನೀಡುತ್ತಿದ್ದಾರೆ ಮಂಜುನಾಥ್

 ಬಟ್ಟೆ ಹರಿದಿದ್ದರೇನು ಚಪ್ಪಲಿ ಕಿತ್ತಿದ್ದರೇನು "ಮೊಬೈಲ್ " ಅಂತು ರೀಚಾರ್ಚ್ ಆಗಲೆಬೇಕು, "ತಾಂತ್ರಿಕತೆ"  ಎಂಬುದು ನಮ್ಮ ಜೀವನವನ್ನು ಆಕ್ರಮಿಸಿರುವ ಪರಿಯನ್ನು ತಿಳಿಯಲು ಸತೀಶರ ಕವನ ಓದಿ.    "ಬೆಂಗಳೂರು ಎಂಬ ಹೆಸರು" ಹೇಗೆ ಬಂದಿತು, ಬಹಳಷ್ಟು ಶೋದನೆ ಗೋಷ್ಠಿಗಳಾಗಿದೆ ಆದರೆ ಶ್ರೀದರ್ ಏರ್ಪಡಿಸಿದ್ದ  ಗೋಷ್ಠಿಯ ವಿವರಗಳು ಬಹಳಷ್ಟೆ ಸಂಪದಿಗರಿಗೆ ಇಷ್ಟವಾಯಿತು, ಸಾಕಷ್ಟು ಪ್ರತಿಕ್ರಿಯೆಗಳು ಬಂದು ಎಲ್ಲರಿಗು ಮೆಚ್ಚಿಗೆಯಾಯಿತು, ಓದಿ ನಗೆ ಬರಹ.
   ಯಡಿಯೂರಪ್ಪನವರು ಜೈಲಿಗೆ ಹೋದ ಹಿನ್ನಲೆಯಲ್ಲಿನ ರಾಜಕೀಯದ ವಿಷ್ಲೇಶಣೆ "ಕಾಲದ ಕನ್ನಡಿಯಲ್ಲಿ" ನಾವುಡರಿಂದ.   ಮಾರ್ಕೆಟ್ಟಿನಲ್ಲಿ ಕಳಪೆಮಾಲು ಹೆಚ್ಚಾಗಲು ಸರ್ಕಾರದ ದೋರಣೆ ಕಾರಣವೆ ಛೇ! ಛೆ! ಖಂಡೀತ ಅಲ್ಲ ಅದಕ್ಕೆ ಕಾರಣ "ನೆಪೊಲಿಯನ್" ಎನ್ನುತ್ತಾರೆ ಶಿವರಾಮರು ತಮ್ಮ ಲಿಮರಿಕ್ಸ್ ನಲ್ಲಿ.

 " ಅಹಂಕಾರದ ಸೋಲು " ನೀತಿಪಾಠದ ಸಣ್ಣ ಕಥೆ ನಾಗೇಂದ್ರಕುಮಾರರಿಂದ.   ರಶ್ಮಿಪೈ ರವರ ಬರಹ "ಈ ಹೆಣ್ಮಗಳ ಹೋರಾಟಕ್ಕೆ.." ಓದುವಾಗ ಕರುಳು ಚುರ್ ಎನಿಸುತ್ತದೆ,  ತನ್ನವರಲ್ಲ ಯಾರೊ ಅನಾಮದೇಯ ನಾಗರೀಕರ ಮರಣಹೋಮವನ್ನು ವಿರೋದಿಸಿ ಹನ್ನೊಂದು ವರುಷಗಳಿಂದ ಉಪವಾಸ ನಡೆಸುತ್ತ ವ್ಯವಸ್ಥೆಯ ವಿರುದ್ದ ಹೋರಾಡುತ್ತಿರುವ ಮಹಿಳೆ ಚಾನು ಶರ್ಮಿಳಾ , ಆದರೆ ಮಾಧ್ಯಮಗಳಿಗೆ ಈಕೆಯ ಹೋರಾಟ ಮುಖ್ಯವೆ ಅಲ್ಲ ಅವರಿಗೆ ಕ್ರಿಕೇಟ್ ದೇವರು ಕೆಮ್ಮಿದ್ದು, ಐಶ್ವರ್ಯಗೆ ಮಗು ಆಗುವುದೆ ಮುಖ್ಯ ಎನ್ನುತ್ತಾರೆ.
     ಹಂಸಾನಂದಿಯವರು ಎಂದಿನಂತೆ ತಮ್ಮ ಸಂಸ್ಕೃತದಿಂದ ಕನ್ನಡಕ್ಕೆ ಶ್ಲೋಕಗಳನ್ನು ಅನುವಾದಿಸುತ್ತಿದ್ದಾರೆ "ಮಳೆಗಾಲದ ಅಗಲಿಕೆ" ಮತ್ತು "ಆಸೆ" ಯಲ್ಲಿ.  ಎಲ್ಲಡೆ ಪ್ಲಾಷ್ಟಿಕ್ ವಿರೋದವಿರುವಲ್ಲಿ ಏಕೊ ಅನನ್ಯರೆನ್ನುತ್ತಾರೆ "ಬಾಳೆದಿಂಡನ್ನು ಅಲಂಕಾರಕ್ಕಾಗಿ " ಪ್ಲಾಷ್ಟಿಕನದನ್ನೆ ಬಳಸಿ.
ಆಸುಹೆಗ್ಡೆಯವರು ಎಲ್ಲರಿಗು "ದೀಪಾವಳಿ ಶುಭ" ಕೋರುತ್ತ  ಅವಳ ನಿಜವಾದ "ಹೂರಣ"  ವನ್ನು ಬಯಲಿಗೆಳೆದಿದ್ದಾರೆ.    ವಾಕಿಂಗ್ ಹೋಗುವಾಗ ಸದಾ ಹಿಂದೆ ಬರುತ್ತಿದ್ದ ನಾಯಿಯನ್ನು ನೆನೆಯುತ್ತ ಕವಿನಾಗರಾಜರು "ಮರೆಯಲಾರೆ ಕರಿಯ ನಿನ್ನ" ಬರೆದಿದ್ದಾರೆ. ಮದುವೆಯ ನಂತರ ಜಯಂತ್ ಗೆ ಮಂತ್ರಾಲಯದ ನಂಟು ಜಾಸ್ತಿ ಹಾಗೆ ನಮಗು ಅಲ್ಲಿ ಸುತ್ತ ಮುತ್ತಲ ವಿಷ್ಯಗಳ ಹೂರಣ  ರಾಯರು ವಾಸಿಸುತ್ತಿದ್ದ ಜಾಗ "ಬಿಚ್ಚಾಲಿ" ಬಗ್ಗೆ ಸಚಿತ್ರ ವರದಿ.  ಪುರುಷರು ಸಂಸಾರದಲ್ಲಿ ಹೇಗಿದ್ದರೆ ಮಹಿಳೆಯರು ಮೆಚ್ಚುವರು ಮೆಚ್ಚಿ " ನಮ್ಮ ಹಾರೈಕೆ ನಿಮಗೆ ಶ್ರೀರಕ್ಷೆ"  ಎನ್ನುವರು ಪದ್ಮರವರ ಕವನ ಓದಿ.
 ಪುಟ್ಟ ಹುಡುಗಿ ಶೃತಿ "ಅಶ್ಟಿಯೊ ಸರ್ಕೋಮ"  ಹೆಸರಿನ ಕ್ಯಾನ್ಸರ್ ಗೆ ತುತ್ತಾಗಿ ಹೋರಾಟದಿಂದ ಅದನ್ನು ಜಯಿಸಿ ನಿಂತ ಮನೋಜ್ಞ ನಿರೂಪಣೆ ವಿಷ್ಣುಪ್ರಿಯರಿಂದ "ಮೃತ್ಯು ವೀಣೆಯಲ್ಲಿ ಮಿಡಿದ ಬಾಳ ಶ್ರುತಿ".
 
"celtx' ಎಂಬ ತಂತ್ರಾಂಶದಲ್ಲಿ ಕನ್ನಡ ಬರಹಗಳನ್ನು ದಾಖಲಿಸುವ ವಿದಾನಗಳ ವಿವರ ಅನಿವಾಸಿಯವರಿಂದ ಇದರಲ್ಲಿ ನಾಟಕ ಸಿನಿಮಾಗಳ ಕಥೆಯನ್ನು ನಿರೂಪಿಸಬಹುದು ಎನ್ನುತ್ತಾರೆ.
ಗರ್ಭಿಣಿ ಸ್ತ್ರೀಯರು ಆಲ್ಕೋಹಾಲ್ ಸೇವಿಸುವದರಿಂದ ಮಗುವಿನ ಮೇಲೆ ಆಗುವ ಪರಿಣಾಮದ ಬಗೆಗಿನ ಲೇಖನ "ಪೀಟಲ್ ಆಲ್ಕೋಹಾಲ್ ಸಿಂಡ್ರೋಮ್"  ಡಾ! ಮೀನಸುಬ್ಬರಾವ್ ರವರಿಂದ.
ಸಂಪದಕ್ಕು ಭೂತದ ಕತೆಗು ಅದ್ಯಾವ ಸಂಭಂದವೊ ರಾಮ ಮೋಹನರಿಗೆ  ಕಾಡುತ್ತಿದೆ "ಬೆಂಬಿಡದ ಭೂತ"  , ಓದಿ ಲಘುಹಾಸ್ಯ ಬರಹ ದೀಪಾವಳಿಗಾಗಿ ಬರೆದಿದ್ದು.  "ನಿದ್ದೆ ಬರ್ತಿಲ್ಲ ನಂಗೆ"  ಜಯಂತರು ಜೈಲು ಸೇರಿರುವ ಮಾ.ಮು. ಯಡಿಯೂರಪ್ಪನವರನ್ನು ಕುರಿತು ಬರೆದಿರುವ ಅಣಕು ಕವನ. 

 ಮದ್ಯಮ ವರ್ಗದ ಹೆಣ್ಣು ಮಕ್ಕಳ ಮನೋಭಾವದ ಪ್ರತಿಬಿಂಬ " ಅಣ್ಣನಿಗೊಂದು ಪತ್ರ"   ಮದುಗಿರಿಯ ಉಮಾರಿಂದ.
         "ಪುಸ್ತಕ ಪರಿಷೆಗೆ ಬನ್ನಿ"   ಎನ್ನುವ ಮುಂಜುರವರ  ಕಡೆಯ  ಕಳಕಳಿಯ  ಮನವಿ   ಆದರೆ ಗಣೇಶರೇನು ಅಲ್ಲಾಡುವಂತಿಲ್ಲ ನಾನು ಮಲ್ಲೇಶ್ವರವನ್ನು ಬಿಡುವದಿಲ್ಲ   ಅನ್ನುತ್ತಿದ್ದಾರೆ   "ಚಲೊ ಮಲ್ಲೇಶ್ವರಂ-೨೧"  ರಲ್ಲಿ. ಈ ಬಾರಿ ಪದ್ಮರವರು ಜೊತೆಗೂಡಿದ್ದಾರೆ ಮಲ್ಲೇಶ್ವರ ದರ್ಶನಕ್ಕೆ,  ಪ್ರಸನ್ನರಿಂದ ಹೊಸಬಗೆಯ ಕವನ "ನಿರಾಂತಕ ದೀಪ" ದೀಪಾವಳಿಯ ಹಿನ್ನಲೆಯೊಂದಿಗೆ. ಅವರು ದೀಪದ ಬೆಳಕು ಕಾಣುತ್ತಿರುವುದು ಅವರಾಕೆಯ ಕಣ್ಣುಗಳಲ್ಲಿ.
 ಪುಸ್ತಕ ಪರಿಷೆಯ ಯಶಸ್ಸಿನ ಹಿನ್ನಲೆಯಲ್ಲಿ ಜಯಂತರ ಮಾತುಗಳು "ಪುಸ್ತಕ ಪರಿಷೆಯ ಹಿನ್ನಲೆಯಲ್ಲಿ ವಾಕ್ಪಥಿಕರ ಪಾತ್ರಗಳು" ಬರಹದಲ್ಲಿ.  ಬ್ಲಾಗ ಬರಹಗಳ ಕಡೆಗೆ ಬಂದರೆ ತಿಂಗಳ ಪಿರಿಯೆಡ್ ಮುಗಿದ ಬೆಲ್ಲನ್ನು ಅರಿವಿಲ್ಲದೆ ನಾನೆ ಬಾರಿಸಿಬಿಟ್ಟಿದ್ದೆ , ತಿಂಗಳ ಕಡೆಯ ಲೇಖನ "ತುಂತುರು ಇಲ್ಲಿ ಪುಸ್ತಕ ರಾಗ..".

 

ಲೇಖನಗಳು

ಶ್ಯಾಮಲ ಜನಾರ್ದನನ್ ರವರ "ನವರಾತ್ರಿಯ ನಾಲ್ಕನೆಯ ದಿನ" ದೊಂದಿಗೆ ಪ್ರಾರಂಬ, ತಾಯಿ ದುರ್ಗೆಯನ್ನು ನವರಾತ್ರಿಯ ದಿನಗಳಲ್ಲಿ ಕಾಣುವ ವಿವಿದ ರೂಪದಿಂದ ಸ್ತುತಿಸಿದ್ದಾರೆ, ಅವರು ತಮ್ಮ ನವರಾತ್ರಿಯ ಬರಹಗಳಲ್ಲಿ.   ಬೀಚಿಯವರು ಹೇಳಿದ ಜೋಕುಗಳನ್ನೆಲ್ಲ ನೆನಪಿಸುತ್ತ ನಮ್ಮನ್ನು ಅಹ್ಲಾದಗೊಳಿಸುತ್ತಿದ್ದಾರೆ, ಶ್ರೀದರ್ ಬಂಡ್ರಿಯವರು ತಮ್ಮ ಬೀchi ಜೋಕುಗಳ ಮುಂದುವರೆದ ಬಾಗಗಳಲ್ಲಿ.    ಇಂದನ ದುಬಾರಿಯಾದಲ್ಲಿ ಹೇಗೆ ಎಂಬ ಯೋಚನೆಯೆ ?ಕಾಂತು ಬಾಗಲವಾಡಿಯವರ ಪರಿಹಾರ "... ಎತ್ತಿನ ಕಾರು" .
  "ಕಛೇರಿಗಳಲ್ಲಿ ಆತ್ಮಜ್ಞಾನಿಗಳು"  ಶ್ರೀಕಾಂತ ರವರ ವಿಡಂಬನಾತ್ಮಕ ಬರಹ , ಅವರು ಅದನ್ನು ನಗೆ ಬರಹವೆಂದು ಕರೆದಿದ್ದಾರೆ. ಗಾಂಧಿಯವರನ್ನು ಎಲ್ಲರು ಮರೆತು ಬಿಟ್ಟರು ನೆನೆಯುವರಿಲ್ಲ ಅನ್ನುವಹಾಗಿಲ್ಲ, ಶ್ರೀದರ್ ಬಂಡ್ರಿಯವರು ತಮ್ಮ "ವೈಷ್ಣವೊ ಜನತೊ.."   ಹಾಡಿನ ಮೂಲಕ ಗಾಂಧಿಜಯಂತಿಯಂದು ಗಾಂಧಿತಾತನನ್ನು ನೆನೆಯುತ್ತಿದ್ದಾರೆ.   "ಸುಬ್ಬು ಸಿಕ್ಕಿದ್ದ"ನಂತೆ ಶ್ರೀನಾಥರಿಗೆ, "ರೀ ಸಿಕ್ಕಿದ್ದ ಅಂದರೆ ಹಾಗಲ್ಲ .. " ಎನ್ನುತ್ತಿದ್ದಾರೆ ತಮ್ಮ ನಗೆಬರಹದಲ್ಲಿ ಓದಿನೋಡಿ.   ಅಡ್ಡೂರು ಕೃಷ್ಣರಾವರವರು ತಮ್ಮ ವಿಧ್ಯಾರ್ಥಿದಸೆಯ ಗುರುಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ "ಪ್ರೊ.ತೆಕ್ಕುಂಜದವರ ನೆನಪು" ಲೇಖನದಲ್ಲಿ. 

"ಕಾಜಾಣ= ಇದೊಂದು ಜಾತಿಯ ಕ್ರಿಮಿ" ಯಾವುದೊ ಪ್ರಕೃತಿಗೆ ಸಂಬಂದಿಸಿದ ಲೇಖನವೆನ್ನಬೇಡಿ, ಸತ್ಯನಾರಯಣರು ಕುವೆಂಪುರವರ ಬಗ್ಗೆ ತಮ್ಮ ಲೇಖನ ಮುಂದುವರೆಸಿದ್ದಾರೆ, 'ದೋಣಿಸಾಗಲಿ...'   ಕನ್ನಡ ಭಾವಗೀತೆ/ಚಿತ್ರಗೀತೆಯನ್ನು ಕೇಳದ ಕನ್ನಡಿಗರೆ ಇಲ್ಲ ಅನ್ನಬಹುದು ಆದರೆ ಆ ಹಾಡಿಗು ಮೈಸೂರಿನ 'ಕುಕ್ಕನಹಳ್ಳಿಯ ಕೆರೆಗು'  ಕುವೆಂಪುರವರಿಗು ಇರುವ ಮದುರ ಭಾಂದವ್ಯವನ್ನು ವಿವರಿಸಿದ್ದಾರೆ "ನಾವು ಲೀಲ ಮಾತ್ರ ಜೀವರು.." ಬರಹದಲ್ಲಿ. 

     ಕರ್ನಾಟಕ ಸಂಗೀತಕ್ಕು ದೇವಿಯಮೇಳಲಿನ ಭಕ್ತಿಭಾವ ಸದಾ ಬಿಡಿಸಲಾರದ ಬಂಧ, ದೇವಿಯನ್ನು ಆರಾದಿಸುವ ಒಂದು ಮಾರ್ಗವೆ ಸಂಗೀತ ಓದಿನೋಡಿ ಶ್ಯಾಮಲ
ಜನಾರ್ದನನ್ ರವರ "ಸಂಗೀತದಲ್ಲಿ ದೇವಿಯ ಆರಾದನೆ".

  ಸ೦ಪದ ಬರಹಗಾರರು ತಿಳಿಯದ ಒಂದೆ ಪದ "ಕಸದ ಬುಟ್ಟಿ"  ಆದರೆ ಅದನ್ನು ನೆನಪಿಸಿಕೊಳ್ಳುತ್ತಿರುವವರು ಕಾಂತು ಬಾಗಲವಾಡ.  ಜಯಂತರವರು ಮಂಡ್ಯಶೈಲಿಯ ಕನ್ನಡದಲ್ಲಿ ಬರೆದ ತಿಳಿಹಾಸ್ಯ "ಗೌಡಪ್ಪನ ಹುಡುಗರು"   , ಆಡು ಮುಟ್ಟದ ಸೊಪ್ಪಿಲ್ಲವಂತೆ ಹಾಗೆ ಜಯಂತ್ ಪ್ರಯತ್ನ ಪಡದ ಸಾಹಿತ್ಯ ಪ್ರಕಾರವಿಲ್ಲವೇನೊ.  ದಾರಿಯಲ್ಲಿ ಗಾಡಿ ಓಡಿಸುವಾಗ ನೀವು ಯಾವುದೊ ಕುರಿಗೆ ಗುದ್ದಿಬಿಟ್ರಿ ! ಅಂದುಕೊಳ್ಳಿ! ಏನು ಮಾಡುವುದು ಅಂತ ಗಾಭರಿಯಾದಿರ ಸುಮ್ಮನೆ ಒಮ್ಮೆ ಕಣ್ಣು  ಹಾಯಿಸಿ  ಬಾಲಸುಬ್ರಮಣ್ಯರ   "... ಆಕ್ಸಿಡೆಂಟ್ ಪುರಾಣ" . 
"ಅವನ ಸಹವಾಸ ಮಾಡಿ ನೀನು ಹಾಳಾದೆ"  ತಮ್ಮ ಮಕ್ಕಳಿಗೆ ಅನ್ನುವುದು ಸರಿ ಆದರೆ ಅದು ನಿಜವೆ ಒಬ್ಬರ ಸಹವಾಸದಿಂದ ಮತ್ತೊಬ್ಬರು ಹಾಳಾಗುವರೆ ? , ನಾಗರಾಜರು ತಮ್ಮ  "ಸಹವಾಸದ ದೋಷದ ತಪ್ಪಲ್ಲ"   ಲೇಖನದಲ್ಲಿ ಹೇಳುತ್ತಾರೆ ಅಲ್ಲವೆಂದು.

  'ಆಪಲ್ ನ ಸ್ಟೀವ್' ನಿದನದ ಹಿನ್ನಲೆಯಲ್ಲಿ ಅಬ್ದುಲ್ ರವರಿಂದ ಒಂದು ಹಿನ್ನೋಟ ಸ್ಟೀವ್ ಸಾದನೆಗಳ ಬಗ್ಗೆ ಹಾಗೆಯೆ ಅವರಿಂದ ಗಡಾಫಿ ಸತ್ತ ಹಿನ್ನಲೆಯಲ್ಲಿ ಒಂದು ಲೇಖನ ನಿರೀಕ್ಷಿಸಿದ್ದೆ ಏಕೊ ಬರಲಿಲ್ಲ .  ಕಡಲ ಭಾರ್ಗವರೆಂದು ಹೆಸರಾದ ಕಾರಂತರನ್ನು ಅವರ ಜನ್ಮದಿನದಂದು ನೆನೆಯುತ್ತಿದ್ದಾರೆ ಶೋಭ ಅರಸ್ "ಕಾರಂತಜ್ಜನ ನೆನಪುಗಳು" ಲೇಖನದಲ್ಲಿ.  ಲೂಯಿ ಎಂಬ ನಾಯಿಮರಿಯ ಬಾಂದವ್ಯದ ಬಗ್ಗೆ ಓದುತ್ತ ಬಂದಂತೆ, ಕಡೆಗೆ ಅದರ ಗತಿ ಏನಾಯಿತು ಎಂಬ  ಮರುಕಬರಿತ ಆತಂಕ ಎಲ್ಲರನ್ನು ಕಾಡಿಸಿತು ಗೋಪಿನಾಥರ "ಶ್ವಾನ ಪುರಾಣಂ" ಬರಹದಲ್ಲಿ.

  ತೊಟ್ಟಿಕುವ ರಕ್ತದ ಹನಿ... ರಕ್ತ ಮೆತ್ತಿದ ಮಚ್ಚು... ತಲೆ ಇಲ್ಲದ ದೇಹಗಳು ... ಅಬ್ಬಬ್ಬಾ ಎಷ್ಟೊಂದು ಭಯಂಕರ ಸನ್ನಿವೇಶ .. ಜಯಂತರ "ಭಯ" ಕಥೆಯಲ್ಲಿ.  ಸಾಹಿತ್ಯದ ರಸಗಳಲ್ಲಿ ಎಷ್ಟುವಿದವೆಂದರೆ ನವರಸ ಎನ್ನುತ್ತಾರೆ ಮಹಾಭಾರತ ರಚಿಸಿದ ವ್ಯಾಸರಿಂದ .. ಕುವೆಂಪು ವರೆಗು ಆದರೆ ಅದರೆ ಮೇಲೆ ಇನ್ನೊಂದು ರಸವಿದೆ ಎಂದು ನಮ್ಮನೆಲ್ಲ "ಪೆದ್ದ" ರನ್ನಾಗಿ ಮಾಡಿದ್ದಾರೆ ಶ್ರೀನಾಥ್ .
   ಕವಿಮನದ  ಸಂಬಂಧಗಳು ಮನಸಿನ ತಾಕಲಾಟಗಳು ಹೇಗಿರುತ್ತವೆ ಅಂತ ತಿಳಿಸುತ್ತಿದ್ದಾರೆ ಶ್ರೀಹರ್ಷಸಾಲಿಮಠರವರು, ಬೇಂದ್ರೆ ಹಾಗು ಜಾನಕಮ್ಮ ನವರ ನಡುವಿನ ಮನದ ಬಾಂದವ್ಯವೆ "ಕವಿ ಸಂಭಾಷಣೆ"
ಅರನಿದ್ದೆಯಲ್ಲಿ ಪಕ್ಕದವನಿಗೆ ಒದ್ದು ಗೋಲು ಹಾಕಿ ಕನವರಿಸುತ್ತಿದ್ದಾರೆ "ಅರೆನಿದ್ದೆ ನೇತ್ರದಲಿ" ಪ್ರಶಸ್ತಿ.ಪಿ.   ಹಾಗೆಯೆ ತಮ್ಮ ಕವಿಮನೆತನದ ಕುಟುಂಬಗಳ ಸಂಗಮ ಸಂಭ್ರಮವನ್ನು ನಮ್ಮೊಡನೆ ಹಂಚಿಕೊಳ್ಳುತ್ತಿದ್ದಾರೆ ಕವಿನಾಗರಾಜರು "ಕೆಳದಿ ಕವಿಮನೆತನದ..." ಲೇಖನದಲ್ಲಿ.  ನಮಗೆ ಅವಕಾಶವಿರಬಹುದು ಲಭ್ಯತೆ ಇರಬಹುದು ಆದರೆ ಪ್ರಾಪ್ತಿ ಇದೆಯೆ ಓದಿ ಸತೀಶರ "ಅವಕಾಶ ಲಭ್ಯತೆ ಪ್ರಾಪ್ತಿ..". 
   ಕವಿತೆಯನ್ನು ಬರಹವನ್ನಾಗಿಸಿದ ಲೇಖನ ಗೋಪಾಲಕೃಷ್ಣ ಬಟ್ಟರ ಪ್ರಥಮ ಬರಹ ಸಂಪದದಲ್ಲಿ "ಮಾಯಂಗನೆ".  ಬದುಕುಕಟ್ಟಿಕೊಳ್ಳಲಿಕ್ಕಾಗಿ ತಮ್ಮ ನೆಲೆಯನ್ನು ಬದಲಿಸುತ್ತಾ ಸಾಗುವ ಮನುಜನ ಮನೋಭಾವವೆ ಲೇಖನದ ವಸ್ತುವಾಗಿರುವ "ಇರುವದೆಲ್ಲವ ಬಿಟ್ಟು.."  ಮುಂಜುನಾಥರ ಮನತಟ್ಟುವ ಬರಹ.
    ಒಮ್ಮೆ ಕಣ್ಣನ್ನು ಹಾಗೆಂದರೆ ಹೆಣ್ಣು ಬಲೆಗೆ ಬಿದ್ದುಬಿಡಬೇಕೆ ನಮ್ಮ ಶ್ರೀನಾಥರಿಗೆ "ಕಣ್ ಮಣ್ ಪೆಣ್"  ಹಾಸ್ಯದ ಕವನದಲ್ಲಿ.  ತಾನು ಕೊಟ್ಟವರ ಪರಶಿವನನ್ನೆ ಹೆದರಿಸಿತು ಭಸ್ಮಾಸುರ ಪ್ರಸಂಗದಲ್ಲಿ, ತಾನೆ ತಂದ ಮಾಹಿತಿ ಹಕ್ಕಿನ ಕಾನೂನು ತನಗೆ ಉರುಳಾದಗ ಅದನ್ನು ಕಿತ್ತೆಸೆಯಲ್ಲು ಸನ್ನಾಹ ನಡಿಸುತ್ತಿದೆಯೆ ಸರ್ಕಾರ "ಮಾಹಿತಿ ಹಕ್ಕು ದುರ್ಬಲಗೊಳಿಸುವ ಯತ್ನ"  ಅಡ್ಡೂರು ಕೃಷ್ಣರಾವ್ ರವರ ಲೇಖನ. 

   ರಾಜಲಕ್ಷ್ಮಿಯವರ ಆರೋಗ್ಯದ ಕೈಪಿಡಿ ಓದಿ "ಮನೆ ಮದ್ದು-ಅಮೃತಬಳ್ಳಿ"    ಲೇಖನದಲ್ಲಿ.  ಕಾಡಿನ ಪ್ರಾಣಿಗಳೆಲ್ಲ ಬೆಂಗಳೂರಿಗೆ ಬಂದು ವಿಧಾನಸೌಧದತ್ತ ಹೊರಟಿವೆ "ವಿದಾನಸೌಧ ಚಲೊ" ಮಾಡಲು  ,ಮುಂದೆ ಏನು ಮಾಡುತ್ತವೆ ತಿಳಿದಿಲ್ಲ,  ಇವುಗಳಿಗೆ ಪ್ರೇರಣೆ ಗಣೇಶರ "ಮಲ್ಲೇಶ್ವರ ಚಲೋ"  ಇದ್ದೀತ ? ಸಪ್ತಗಿರಿಯವರು ಹೇಳಬೇಕು. ಶಿವಮೊಗ್ಗದಲ್ಲಿ ಕೂಡಲಿ ಜಗನ್ನಾಥರಾಯರು ತಮ್ಮ ಸಹಸ್ರಚಂದ್ರದರ್ಶನ ಆಚರಿಸಿಕೊಂಡ ವರದಿಯನ್ನು ವಿವರವಾಗಿ ಮಂಜುಳದೇವಿಯವರು ಕೊಟ್ಟಿದ್ದಾರೆ "ಸಹಸ್ರ ಚಂದ್ರ ದರ್ಶನದ...ಲ್ಲಿ".
  ಮಾಸ್ತರರು "ಶಿಕ್ಷಕ ದಿನಾಚರಣೆಯಂದೆ"  ಪ್ರತಿಭಟನೆ ನಡಿಸಿದ್ದು ಸರಿಯೆ ಅನ್ನುವ ಚರ್ಚೆ ಸುಮಾಕಲಕರ್ಣಿಯವರ "ಮಾದರಿ ಮಾಸ್ತರರು ಮೌಲ್ಯ ಮರೆತರೆ" ಲೇಖನದಲ್ಲಿ.      "ಸೋಲು" ಅಂದರೆ ಜೀವನ ಮುಗಿದಂತೇನಲ್ಲ ಸೋಲಿಗು ಗೆಲುವಿಗು ಅಂತರ ತುಂಬಾ ಕಡಿಮೆ ಎನ್ನುತ್ತಿದ್ದಾರೆ ಪ್ರಶಸ್ತಿ.  

'ಶ್ರೀಕೃಷ್ಣ ಕನ್ನಡಿಗನೆ?"   ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದ ಲೇಖನ ಸಾಲಿಮಠರವರದು, ಪುರಾಣಗಳನ್ನು ಇತಿಹಾಸದ ಚೌಕಟ್ಟಿಗೆ ತರುವುದು ಅಷ್ಟು ಸುಲುಬವಲ್ಲ ಅನ್ನಿಸುತ್ತೆ,  ಏಕೆಂದರೆ ಯದುವಂಶದಲ್ಲಿ ಎಷ್ಟು ಕೃಷ್ಣರಿದ್ದರೊ ಅವರ ಕಾಲಗಳಾವುದೊ, ಮೂಲಯಾವುದು ತಿಳಿದವರಾರು. ಅವರಲ್ಲಿ ಗೀತೆ ಭೋದಿಸಿದ ಕೃಷ್ಣನ ಬಗ್ಗೆ ಮಾತ್ರ ನಮ್ಮ ಆಸಕ್ತಿ.

  "ಅನನ್ಯ ಅಲ್ಲಮ ದ ೧೧(೮) "    ಬಾಗದಲ್ಲಿ ಸೋಮಶೇಖರಯ್ಯನವರು ಸಿದ್ದಾರ್ಥನು ಗೌತಮಬುದ್ದನಾದ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ.  ಪತ್ನಿ ಯಶೋಧರೆಯು ಹಾಗು ಮಗ ರಾಹುಲನು ಬುದ್ದ ಪರಂಪರೆಯಲ್ಲಿ ಸೇರಿದ್ದು ತಿಳಿದಿರಲಿಲ್ಲ.
 

  ’ಬದುಕಿದ್ದರೆ ಎಂಬತ್ತು ವಸಂತ ಪೂರೈಸಲಿದ್ದ ಶಮ್ಮಿ"  ಹನುಮಂತಪಾಟೀಲರ ಲೇಖನದ ಶೀರ್ಷಿಕೆ ಓದುವಾಗಲೆ ಅನ್ನಿಸುತ್ತೆ ,  ಸ್ವಾಮಿ ಶಮ್ಮಿ ಬದುಕಿಲ್ಲ ಅಂದವರಾರು, ಅವರೆಲ್ಲ ಚಿರಾಯುಗಳು ಜನಮನದಲ್ಲಿ ಸದಾ ಇರುವವರು.    ಅಡಿಗೆಮನೆಯಲ್ಲಿ ಒಗ್ಗರಣೆ ಹಾಕುತ್ತಿದ್ದ ಸುಂದರಮ್ಮನವರಿಗೆ ಆ ಒಗ್ಗರಣೆಯನ್ನು ಮೀರಿದ ವಾಸನೆ ನೋಡಿಯೆ ಅಳಿಯಬಂದ ಎಂದು ನಿರ್ದರಿಸಬೇಕಾದರೆ ಆ ಸುಬ್ಬ ಇನ್ನು ಹೇಗಿರಬಹುದು, ಓದಿ ನೋಡಿ ದೀಪಾವಳಿ ವಿಷೇಶ ಶ್ರೀನಾಥರಿಂದ "ಸುಬ್ಬನು ಬಂದ ರಾಯರ ಮನೆಗೆ"  .
   " ಬೆಳಗಬೇಕಾದ ಮನಸ್ಸುಗಳೆ ಕೊಳತುಹೋದರೆ"  ಪಾಪ ಜಗತ್ತಿನ ಒಂದು ಹಿನ್ನಲೆಯ ಬರಹ ಚೇತನ್ ರವರಿಂದ.    "ಕತ್ತಲೆ ಕಳೆಯಿತ"  ಗಣೇಶಕುಮಾರರ ಉತ್ತಮ ಕಲ್ಪನೆಯ ಕಥೆ , ಮನುಷ್ಯನನ್ನು ಸೃಜಿಸಿದ ದೇವರೆ ಅವನ ಮೃಗೀಯ ವರ್ತನೆಗೆ ಬೆಚ್ಚಿಬಿದ್ದ, ಕಡೆಗೆ ಮಾನವತೆಯ ಬೆಳಕನ್ನು ಅವನ ಹೃದಯದಲ್ಲಿ ಇಟ್ಟ. ನಾವೆಲ್ಲ ಆ ಬೆಳಕನ್ನು ಅನುದಿನ ಅಹ್ವಾನಿಸಿ ಉತ್ತೇಜನಗೊಳಿಸಬೇಕಾಗಿದೆ ಅಷ್ಟೆ. 
 ಬೆಳ್ಳಾಲ ಗೋಪಿನಾಥರು ವರದಿ ಕೊಡುವದರಲ್ಲಿ ನಿಪುಣರು ಅವರ "ಸಾರ್ಥಕ ವಾರಂತ್ಯ"  ವರದಿ ಓದಿ ಗುರುಗಳು ನಡೆಸಿದ ಅಭ್ಯಾಸ ೧೬ ರರಲ್ಲಿ.
   ಶ್ರೀದರ ಬಂಡ್ರಿಯವರು ನಮ್ಮ ತಲೆಯೊಳಗೆ ಕೈತೂರಿಸಿ ನಗಿಸುತ್ತಿದಾರೆ ಅವರ ವೈಜ್ಞಾನಿಕ ವಿಡಂಬನ ಲೇಖನ "s=1/2gt2" ದಲ್ಲಿ .  ಮಂಜುನಾಥ್ ರವರ 'ಮೋಹನ ವೀಣಾ ವಿಲಾಸ' ಕರ್ತವ್ಯ ಹಾಗು ಪ್ರೀತಿ ಎರಡನ್ನು ಬೆರೆಸಿದ ಕತೆ,  ಓದುವಾಗ ಸ್ವಲ್ಪ ಸಿನಿಮಾ ಶಾಟ್ ಗಳ ರೀತಿ ಜೋಡಿಸಿದ್ದಾರೆ ಅನ್ನುವಂತೆ ಬಾಸವಾಗುವ ಕತೆ, ಸಿನಿಮಾಗೆ ಹೇಳಿ ಮಾಡಿಸಿದಂತಿದೆ.

ಸಿದ್ದರಾಮ ಹಿರೆಮಠರ ಲೇಖನ 'ಕೂಡ್ಲಗಿ  ತಾಲೋಕಿನ...ವಲಸೆ' ನಿಜಕ್ಕು ವಿಶಿಷ್ಟ ಸಂಪ್ರದಾಯಗಳ ಗ್ರಾಮ. ಅಲ್ಲಿ ವಾಹನಗಳಲ್ಲಿ ಓಡಾಡುವಂತಿಲ್ಲವಂತೆ, ಅಹಾ! ಬೆಂಗಳೂರಿಗು ಅದೆ ಸಂಪ್ರದಾಯಬರಬಾರದ, ನೆಮ್ಮದಿ ಶಾಂತಿ ಅನ್ನುವುದು ನೆಲಸಿಬಿಡುತ್ತೆ. 
  ಅಬ್ದುಲ್ ಲತೀಫ್ ರವರು ಹುಟ್ಟಲಿರುವ ೭೦೦ ಕೋಟಿ+ ೧ ರ ಮಗುವಿನ ಬಗ್ಗೆ ಹೇಳಿದ್ದಾರೆ 'ವಿಶ್ವದ ೭೦೦ ಕೋಟಿಯ ಮಗುವಿಗೆ .." , ಅದಾಗಲೆ ಪತ್ರಿಕೆಯಲ್ಲಿ ಹುಟ್ಟಿದ ಸುದ್ದಿ ಬಂದಾಯ್ತು, ಒಂದಲ್ಲ ಎರಡು ಮೂರು ಬೇರೆ ಬೇರೆ ದೇಶಗಳಲ್ಲಿ ಆ ಮಗು ಜನಿಸಿದೆ !!!

  ಕನ್ನಡ ರಾಜ್ಯೋತ್ಸವಕ್ಕೆ ಮೊದಲೆ ಕನ್ನಡ ಹಬ್ಬ ಆಚರಿಸಿಲಾಯಿತು ಬಸವನಗುಡಿಯ 'ಪುಸ್ತಕ ಪರಿಷೆ-೪' ರಲ್ಲಿ ವರದಿ ಗೋಪಿನಾಥರಿಂದ 'ಬಸವನ ಗುಡಿಯಲ್ಲಿ ನಡೆದ ೩೦.೧೦.೨೦೧೧ ರ ನಾಲ್ಕನೆಯ ಪುಸ್ತಕ ಪರಿಷೆಯ ಚಿತ್ರಗಳು ಸೃಷ್ಟಿ ವೆಂಚರ್ಸ್ ಹಾಗು ವಾಕ್ಪಥ' ಉತ್ತಮ ಚಿತ್ರಗಳೊಂದಿಗೆ ಸಂಪದಿಗರಿಗಾಗಿ. ಹಾಗೆಯೆ ಎರಡು ವಿಮರ್ಷೆಗಳು ಪ್ರಕಟವಾದವು ತಿಂಗಳ ಕಡೆಯಲ್ಲಿ , 'ಬೆಟ್ಟದ ಜೀವ' ಸಿನಿಮಾ ಬಗ್ಗೆ ರೋಹಿತ್ ರವರಿಂದ ಮತ್ತು 'ಶಿಖರ ಸೂರ್ಯ'  ಕಾದಂಬರಿಯ ಬಗ್ಗೆ  ಮಾ.ಕೃ ಮಂಜುರವರಿಂದ. 

ತಿಂಗಳ ಕಡೆಯ ಬರಹ  ಲೇಖನ ವಿಭಾದಲ್ಲಿ 'ಅಂದಿನ ಆಂದ್ರ' , ಅಡ್ಡೂರು ಕೃಷ್ಣರಾವ್ ರವರಿಂದ, ಆಂದ್ರದ ಗುಂಟೂರು ಎಂಬ ಪಟ್ಟಣಕ್ಕೆ ಹೋಗಿ ಅಲ್ಲಿನ ಉರಿಗಾರದ ಬಗ್ಗೆ, ಬಿಸಿಲಿನ ಬಗ್ಗೆ, ಜನಜೀವನ ವಿಧಾನಗಳ ಬಗ್ಗೆ ವಿವರಗಳನ್ನು ಕೊಟ್ಟಿರುವ ಲೇಖನ.


 
ಕವನ ವಿಭಾಗ:

ಸದಾ ಪೌರುಷ ಭಾವದ ಕವನಗಳನ್ನು ಹೆಚ್ಚು ರಚಿಸುವ ವಿ.ಶ್ರೀನಿವಾಸರು ಅಕ್ಕರೆಯ ಸೌಮ್ಯಭಾವದ "ಅಣ್ಣಾ ಮತ್ತೊಮ್ಮೆ ಹುಟ್ಟಿ ಬಾ" ಕವನ ಬರೆದಿದ್ದಾರೆ ಕನ್ನಡ ಜನ ಎಂದು ಮರೆಯದ "ಡಾ.ರಾಜಕುಮಾರ್" ಬಗ್ಗೆ.
ಪ್ರೀತಿಯೆಂಬ ಲೇಖನಿಗೆ ಪ್ರೇಮದ ಶಾಯಿಯನ್ನುತುಂಬಿ ತನ್ಮಯನಾಗಿ ಬರೆದಿರುವ ಹಾಡು ಜಯಂತರಿಂದ "ಒಮ್ಮೆಯಾದರು ಕೇಳುವೆಯ ಗೆಳತಿ".   ಮೂಲಿಮನೆರವರ ಕವನ "ಕಥೆಗಾರ" , ಮನದಲ್ಲಿ ಸ್ವಲ್ಪ  ಗಲಿಬಿಲಿ ಮೂಡಿಸುವ ಕವನ, ಕಥೆಯಲ್ಲಿನ ಭಾವನೆಯಿಂದ ಕಥೆಗಾರನಿಗೆ ಹೆಸರೆ ಹೊರತು, ಕತೆಗಾರನಿಂದ ಕಥೆಗೆ ಬೆಲೆಯಿಲ್ಲ, ಅನ್ನುವಾಗ ಕಥೆಯಲ್ಲಿರುವ ಭಾವನೆ ಕಥೆಗಾರನದೆ ಅಲ್ಲವೆ ಅನಿಸುತ್ತದೆ, ಇರಲಿ , ಏನೊ ಕವನ ಎಂದರೆ ಚೂರುಪಾರು ಪ್ರಾಸ, ಸ್ವಲ್ಪ ಲಯ ಮತ್ತು ಪದ್ಯದ ಗತಿಯಿದ್ದಲಿ ಚೆಂದ ಇಲ್ಲದಿದ್ದಲ್ಲಿ, ಅದೇನೊ ವಾಕ್ಯಗಳನ್ನೆ ತುಂಡರಿಸಿ ಜೋಡಿಸಿದಂತೆ ಅನ್ನಿಸಿಬಿಡುತ್ತೆ ಆದರೆ ಈಗಿನ ಕವಿತೆಗಳ ಲಕ್ಷಣವೆ ಹಾಗೆ. ಇವರ ಇನ್ನೊಂದು ಪದ್ಯದಲ್ಲಿ "ಮುಟ್ಟುಗೋಲು" ಎಂಬ ಪದವನ್ನು ಚಮತ್ಕಾರಿಕವಾಗಿ ಬಳಸಿ, ಬೇರೆ ಬೇರೆ ಸಂದರ್ಭಕ್ಕು ಹೊಂದಿಸಿರುವುದು ಮೆಚ್ಚುಗೆ ತರುತ್ತದೆ.  ಪ್ರೀತಮರವರು ಅಂತರಂಗದ ದಾರಿಯಲ್ಲಿ ಮಿಡಿಯುವ 'ಆತ್ಮಗೀತೆ' ಸುಂದರ ಕವನ ಹಾಗೆಯೆ ಆ ಕವನವನ್ನು ಅವರು ಕಲಾತ್ಮಕವಾಗಿ 'ಪ್ರೆಸೆಂಟ್' ಮಾಡಲು ತೆಗೆದುಕೊಂಡಿರುವ ಶ್ರಮ ಸಹ ಗಮನ ಸೆಳೆಯುತ್ತದೆ.
 ಹಾಗೆಯೆ ಪಾಟೀಲರು ನಮ್ಮ ಸಮಾಜ ಉಪಾಯವಾಗಿ ಹೆಣ್ಣಿಗೆ ತೊಡಿಸಿರುವ 'ಚಿನ್ನದ ಸಂಕೋಲೆ' ಎಂಬ ಸಂಪ್ರದಾಯಗಳ ಬಗ್ಗೆ ರಚಿಸಿರುವ ಕವನ ಸಹ ಸಮಾಜಕೊಂದು ನೀತಿಪಾಟ. ಮತ್ತೆ ಮೃತ್ಯುಂಜಯರ 'ಕಾಮನ ಬಿಲ್ಲು' ಕವನ ಗೆಳತಿಯ ನೆನೆಪಿಸುವಾಗ ಕಡೆಯಲ್ಲೇಕೊ ವಿಷಾದದ ದ್ವನಿಯಿದೆ. ಈಗಿನ ಸಮಾಜಕ್ಕೆ ಜರೂರಾಗಿ ಬೇಕಾದ ಆದರೆ ಈಗ ಪ್ರಸ್ತುತತೆಯನ್ನೆ ಕಳೆದುಕೊಂಡಿರುವ 'ಪ್ರಿಯ ಗಾಂದಿ' ಬಗ್ಗೆಗೊಂದು ವಿಡಂಭನೆಯ ಕವನ ಸಿಂಹ ಮತ್ತು simha ರಿಂದ. ಹಾಗೆಯೆ ಸದಾನಂದರು ಎಲ್ಲರಿಗು ವಿಜಯದಶಮಿಯ ಶುಭ ಹಾರೈಸಿದ್ದಾರೆ.
'ತನ್ನ ತಾ ತಿಳಿಯುವಿಕೆ" ಹನುಮಂತ ಪಾಟಿಲರ ಕವನ, ಚಿಂತನೆಗೆ ಹಚ್ಚಿದ್ದು, ದಿಗ್ಗಜಗಳ ನಡುವಿನ ಚರ್ಚೆಗೆ ಕಾರಣವಾಗಿದೆ, ಇಲ್ಲಿ ಮೂರು ಕೋನಗಳ ತ್ರಿಕೋನವಿದ್ದು 'ಆಕಾರ' 'ನಿರಾಕರ' ಪೂಜೆ ಮತ್ತು 'ನಾನು' ಒಂದಕ್ಕೊಂದು ತಾಕಲಾಟವಾಡಿದ್ದು, ಮೂರರ ನಡುವಿನ ಸಂಬಂಧ ವಿವರಿಸುವಲ್ಲಿ ಸ್ವಲ್ಪ ಗೊಂದಲ ಮೂಡುತ್ತದೆ ಬಹುಷಃ ನಿರಾಕಾರ ಪದಕ್ಕೆ ಬದಲಾಗಿ ಅಮೂರ್ತ ಪದ ಬಳಸಿರುವುದು ಗೊಂದಲಕ್ಕೆ ಕಾರಣವ ಎನ್ನಿಸುತ್ತದೆ, . 'ನೋವು-ನಲಿವು' ಎಂಬ ಕವನದಲ್ಲಿ ಸರ್ವೇಶ್ ಕುಮಾರರು ಜೀವನದ ಪ್ರತಿ ನೋವಿನ ಪರಿಣಾಮವು ನಲಿವೆ ಆಗಿರುತ್ತದೆ ಎನ್ನುತ್ತಾರೆ, ಜೀವನದಡೆಗೆ ಅದ್ಬುತವಾದ ಆಶದಾಯಕ ದೃಷ್ಟಿ. . 'ಅವನ ಪರೀಕ್ಷೆ ನನ್ನ ನಿರೀಕ್ಷೆ' ಎಂಬ ಕವನದಲ್ಲಿ ನಾಗರತ್ನರವರು ತಾಯಿಯೊಬ್ಬಳ ಮನಸಿನ ಸ್ವಗತವನ್ನು ಉತ್ತಮವಾಗಿ ಬಿಂಬಿಸಿದ್ದಾರೆ. 'ನೆನಪು ನಯನ ಹಾಗು ನಿರೀಕ್ಷೆ' ಗಳನ್ನು ಕ್ರಮವಾಗಿ ಭೂತ,ವರ್ತಮಾನ ಭವಿಷ್ಯದ ಸಾಕ್ಷ್ಗಗಳೆಂದು ತಮ್ಮ ಮೂರು ದ್ವಿಪದಿಗಳ ಮೂಲಕ ಹೇಳಿದ್ದಾರೆ ಚೇತನ್.

ಮಾನು ಅವರ 'ಧರೆ ಧರೆಯಲಿ ಈ ವಸುಂದರೆ' ಕನ್ನಡ ಅಭಿಮಾನವನ್ನು ಎತ್ತಿ ತೋರಿಸುವ ಕವನ ನಿಮ್ಮಿಂದ ಈ ರೀತಿಯ ಕನ್ನಡ ಪ್ರೇಮದ ಕವನಗಳು ಹೆಚ್ಚೆಚ್ಚು ಬರಲಿ. ಸುದಾಕರಕೃಷ್ಣರು ಚುಟುಕಗಳ ರೀತಿಯಲ್ಲಿ ಚಿಕ್ಕಚಿಕ್ಕ ಕವನಗಳನ್ನು ಹಲವು ರಚಿಸಿದ್ದಾರೆ ಮನದಾಳ, ಕಿಟ್ಟ, ನೀ, ಕವನ ಮುಂತಾದವು , ಅದರಲ್ಲಿ 'ಕವನ' ಹೇಳುತ್ತದೆ, ಬೆಳದಿಂಗಳು ನಿನ್ನ ಪತ್ರ ಓದಲು ಸನಿಹ ಬಂದಿತು ಆಗ ಮನ ಅದಲು ಬದಲಾಯಿತು ನಂತರ ಮಾತು ತೊದಲಾಯಿತು ಎಂದು ಭಾವನೆಗಳು ಮತ್ತಷ್ಟು ಸ್ವಷ್ಟವಾಗಿದ್ದಲ್ಲಿ ಚೆಂದ ಸುದಾಕರಕೃಷ್ಣರೆ. ಜಯಪ್ರಕಾಶರವರು 'ಗಂಗಾವತರಣ' ಎಂಬ ಕವನ ರಚಿಸಿದ್ದಾರೆ ಮಳೆಯನ್ನು ಶಿವ ಗಂಗೆಯ ಪ್ರೇಮ ಪ್ರಲಾಪಕ್ಕೆ ಹೋಲಿಸುತ್ತ, ಪ್ರತಿ ಸಾಲಿನ ಕೊನೆಯ ಪದ, ಮುಂದಿನ ಸಾಲಿನ ಮೊದಲ ಪದ, ಈ ರೀತಿಯ ಛಂದಸ್ಸನು ಏನೆಂದು ಕರೆಯುತ್ತಾರೆ ಏನಾದರು ಹೆಸರಿದೆಯ ಅಥವ ಸ್ವಯಂ ಕಲ್ಪನೆಯ ಜಯಪ್ರಕಾಶರೆ, ತಿಳಿಸಿಕೊಡಿ.
    ಜಯಂತರ "ನೀನುಸಿರಾಡುವ ಪ್ರತಿ ಶ್ವಾಸದಲ್ಲು" ಉತ್ತಮ ಶೃಂಗಾರದ ಕವನ , ತುಂಬಾ ಹಿಂದೆ ಕನ್ನಡ ಹಾಡೊಂದು ಬಂದಿತ್ತು, ಪಿ.ಬಿ. ಹಾಡಿದ್ದು "ನಿನ್ನಯ ಮೊಗದಲ್ಲಿ ನಸುನಗೆಯಾಗಿಹೆ ನನಗಿನ್ನೊಂದಾಸೆ ನಿನ್ನ ಮುಡುಯಲಿ ಹೂವಾಗಿರುವುದೆ ನನಗಿನೊಂದಾಸೆ..." ಪೂರ್ಣ ಸಾಹಿತ್ಯ ತಿಳಿದಿಲ್ಲ, ಚಿತ್ರವು ಗೊತ್ತಿಲ್ಲ ಗೊತ್ತಿದ್ದವರಿದ್ದರೆ ತಿಳಿಸಬಹುದು. ಜಯಂತರ ಕಲ್ಪನೆ ಹೆಚ್ಚು ಕಡಿಮೆ ಅದೆ ಆದರೆ ಸಾಹಿತ್ಯ ತುಂಬಾ ಚೆನ್ನಾಗಿದೆ. ನಂದೀಶರು ಪಾಪ ಮಲೆನಾಡಿನ ಹುಡುಗಿಯನ್ನ ಕವನದಲ್ಲಿ ತಂದಿದ್ದರು, ಶ್ರೀನಾಥರು ಪ್ಲಾನ್ ಮಾಡಿ ಓಡಿಸಿಬಿಟ್ಟರು, 'ಮಲೆನಾಡಹುಡುಗಿಯರು' ಕವನದಲ್ಲಿ ಇಬ್ಬರು ಒಂದು ಹಾಡು ಮರೆತುಬಿಟ್ರು !!!!... "ಯಾವ ತಾಯಿಯು ಪಡೆದ ಮಗಳಾದರೇನು.. ಕನ್ನಡಾಂಭೆಯು ಮುಡಿದ ಹೂವಾದೆ ನೀನು" .
  'ನನ್ನ ಕವನಗಳೆ ಹೀಗೆ' ನಿಂತ ನೀರಲ್ಲ ಎನ್ನುವ ಡಾ.ಉಷರಾಣಿಯವರು,'ಬದಲಾವಣೆ' ಯಲ್ಲಿ ಗಂಡಸು ಎಂದಿದ್ದರು ಕಾಲ ಬದಲಾದರು ಹೆಣ್ಣನ್ನು ಮೆಚ್ಚಿಸುವದಕ್ಕಷ್ಟೆ ಅವನ ಹೋರಾಟ ಎಂದು ಸೂಚ್ಯವಾಗಿ ಹೇಳಿದ್ದಾರೆ. ಮತ್ತೆ 'ದೌರ್ಬಾಗ್ಯಸುಮಿತ್ರೆ'ಯಲ್ಲಿ ಲಕ್ಷಣನು ಹೆಂಡತಿಗಷ್ಟೆ ಅಲ್ಲ ತಾಯಿಗು ನಿರಾಸೆ ಮೂಡಿಸಿದನಾ ಅನ್ನಿಸಿಬಿಡುತ್ತೆ.

   ಶ್ರೀನಿವಾಸರೆ ಕನ್ನಡದ ಬಗ್ಗೆ ನಿಮ್ಮ ಕಳಕಳಿ ಮೆಚ್ಚುಗೆಯಾಗುತ್ತೆ ಆದರೆ ಅದೇಕೆ ಅಷ್ಟೊಂದು ರೋಷ 'ಕನ್ನಡ ವಿರೋದಿಗಳ ಗುಂಡಿಗೆಗೆ ಗುಂಡಿಕ್ಕಿ ಕೊಲ್ಲುವ ರೋಷ" ನಿಮ್ಮ "ಕನ್ನಡದ ದ್ವನಿ"ಯಲ್ಲಿ, ನಮ್ಮದು ಸಾತ್ವಿಕ ಹೋರಾಟವಾಗಿರಲಿ ಅಂತ ನಿಮ್ಮಲ್ಲಿ ಪ್ರಾರ್ಥನೆ. 'ಹೈದರಾಭಾದಿನ ಕನ್ನಡಿಗರ" ಬಗ್ಗೆ ಶ್ರೀದರರು ಬರೆದಿರುವ ಕವನ ನಾನು ಬೆಂಗಳೂರಿನವರ ಬಗೆಗೆ ಅಂದುಕೊಂಡುಬಿಟ್ಟೆ !!!.
  "ಕೋವಿದರ ಗುಣ" ಇದು ಷಟ್ಪದಿರಘು ರವರ ರಚಿತ ಕವಿತೆ, ಶ್ರೀದರ್ ಅಂದಂತೆ ಕವನದ ಪೂರ್ಣ ಭಾವದ ಗ್ರಹಿಕೆ ಕಷ್ಟವಾಗಿಬಿಡುತ್ತೆ, ಇನ್ನು ಮೇಲೆ ರಘುರವರು ತಮ್ಮ ಕವನವನ್ನು ಪಾಠಮಾಡಿ ನಮಗೆಲ್ಲ ಪಾಠ ಮಾಡುವ ಜವಾಬ್ದಾರಿ
 ಹೊರಬೇಕಾಗುತ್ತೆ, ನಿಜಕ್ಕು ರಘು ನಿಮ್ಮ ಕವಿತಾಶಕ್ತಿಗೆ ನನ್ನದೊಂದು ನಮನ.

   ಪದ್ಮರವರು ಉತ್ಸಾಹದಿಂದ ಹೆಚ್ಚು ಹೆಚ್ಚು ಕವನಗಳನ್ನು ರಚಿಸಿದ್ದಾರೆ ಎಲ್ಲ ಹಿರಿಯರಂತೆ ಅವರದು ಅಳಲು 'ಇಂದಿನ ಬದುಕು' ಕವನದಲ್ಲಿ ಎಲ್ಲವು ಬದಲಾಗಿ ಹೋಗುತ್ತಿದೆ, ಹೊಸದು ಬಂದು ಹಳೆಯದೆಲ್ಲ ಕಣ್ಮರೆಯಾಗುತ್ತಿದೆ, ಹೊಸನೀರು ಹಳೆಯದನ್ನೆಲ್ಲ ಕೊಚ್ಚಿಹೋಗುತ್ತಿದೆ ಎಂದು, ಆದರೇನು ಅದು ಪ್ರಕೃತಿ ನೀತಿಯಲ್ಲವೆ, ಅದನ್ನೆಲ ಅರಗಿಸಿಕೊಳ್ಳುವುದು ಅನಿವಾರ್ಯ ಪದ್ಮರವರೆ. ಉಮೇಶರೆ ಕಾಲೇಜಿನಲ್ಲಿ ಕಂಡು ಕಣ್ಮರೆಯಾದ ಹೆಣ್ಣನ್ನು ಹುಡುಕುವುದೇನೊ ಸರಿಯೆ ನಿಮ್ಮ 'ಗೆಳತಿ ಯಾರೆ ನೀ' ಕವನದಲ್ಲಿ, ಆದರೆ ಗಡ್ಡಬಿಡುವುದು ಏಕೆ ಅರ್ಥವಾಗುತ್ತಿಲ್ಲ, ಅದೆಲ್ಲ ಈಗಿನ ಹುಡುಗಿಯರಿಗೆ ಹಿಡಿಸುವದಿಲ್ಲ.
  ಜಯಂತರದೇನೊ ದುಗುಡ ಪರಿಹಾರ ಕಾಣದೆ ತಲೆಚೂರುಚೂರಾಗುವಷ್ಟು ಆದರೆ ಅವರಿಗೆ 'ದಾರಿ ಕಾಣದಾಗಿದೆ'.  ಹನುಮಂತ ಪಾಟಿಲರೆ 'ಪುರಾಣೆತಿಹಾಸಗಳ ಯುಗ' ಮಾತ್ರವಲ್ಲ ಮನುಜ ಜನಾಂಗದ ನಡೆನುಡಿಗಳೆ ಸದಾ ಹಾಗೆ ತ್ಯಾಗ, ಬೋಗ, ಕಾಮ, ಎಲ್ಲವನ್ನು ತಿರಸ್ಕರಿಸುವ ಸನ್ಯಾಸ, ಮೋಹ, ಕರ್ತವ್ಯ ಎಲ್ಲ ಭಾವಗಳ ಸಂಕೀರ್ಣ. ನಂದೀಶರೆ ನಿಮ್ಮ 'ಯಥಾ ದೃಷ್ಟಿ ತಥಾ ಸೃಷ್ಟಿ' ಯ ಭಾವ ನಿಜ ಪ್ರಕೃತಿಯಲ್ಲಿ ಸೌಂದರ್ಯವಿದೆ, ಆದರೆ ಅದನ್ನು ನೋಡಲು ಬೇಕಾದ ಕಣ್ಣು ನಮ್ಮಲಿದೆ ,ನಡುವೆ ಸೌಂದರ್ಯವನ್ನು ನಮ್ಮ ಕಣ್ಣಿಗೆ ತೋರಿಸುವ ಬೆಳಕಿದೆ!!.
ಫೆರ್ನಾಂಡಿಸ್ ಹತ್ತು ವರುಷದ ಹಿಂದೆ ಬರೆದ ಕವನ ಪ್ರಕಟಿಸಿ, 'ರಾಜಕಾರಣಿಗಳು'ಬದಲಾಗಲೆ ಇಲ್ಲ ಅಂದಿದ್ದರೆ,  ನಿಜ ಅವರು ಬದಲಾಗುವುದು ಇಲ್ಲ .  ಹಾಗೆ ಜೈಕಿಸಾನ್ ರವರು 'ಸಂಪದದ ಇಂಪದ'ದ ಬಗ್ಗೆ ತಿಳಿಸಿದ್ದಾರೆ. ಪ್ರಶಸ್ತಿ ಮನೆಯಲ್ಲಿ ಕಳುವಾಯ್ತಂತೆ 'ಕಳುವಾಯ್ತು ಮನೆಯಲ್ಲಿ' ಕವನದಲ್ಲಿ, ಆದರೆ ಅದೇಕೊ ಕಂಪ್ಯೂಟರ ಮಾತ್ರ ಮುಟ್ಟಲಿಲ್ಲ, ಬಹುಷಃ ಸಂಪದದಲ್ಲಿ ಕವನ ಬರೆಯಲೆಂದೆನೊ?.
   ಅಪೂರ್ವ ಚಂದ್ರರವರು ಸಾವಿನ ಬಗ್ಗೆ ಗಂಭೀರ ಕವನವೊಂದನ್ನು ರಚಿಸಿದ್ದಾರೆ, ಸತ್ತಿದ್ದಂತು ನಿಜ ಆದರೆ ಹೋದದ್ದು ಎಲ್ಲಿಗೆ ಎನ್ನುತ್ತರೆ ಅವರು "ಹೀಗೊಂದು ಸಾವು" ಕವನದಲ್ಲಿ.
   ಉಮೇಶ್ ಏನ್ರಿ ಪಾಪ ದೇವರನ್ನು 'ಮೋಸಗಾರ' ಅಂತೀರಿ, ನೀವೆ ಹೇಳಿದ್ರಿ ಅವನು ಪ್ರೀತಿ ಕೊಟ್ಟಿರುವ, ದೈರ್ಯ ಕೊಟ್ಟಿರುವ, ಸಂದರ್ಭವನ್ನು ಕೊಟ್ಟ ಮಾತನಾಡಲು ನೀವು ಮಾತನಾಡದೆ ಅವನನ್ನು ಅನ್ನುವುದೆ ತರವಲ್ಲ ಇನ್ನೊಮ್ಮೆ ಪ್ರಯತ್ನಿಸಿ.  'ನನ್ನ ಗೆಳೆಯರು' ಕವನ ಓದಿದೆ ನಾಗೇಂದ್ರರೆ ಆದರೆ ಅಪಹಾಸ್ಯ ಕುಹಕ ಎಲ್ಲ ಇರುವ ಕಡೆ ಸ್ನೇಹ ಹೇಗೆ ಇದ್ದೀತು ಅರ್ಥವಾಗದು, ಆದರು ನೀವು ಸ್ನೇಹ ಬಯಸಿದ್ದೀರಿ, ಒಮ್ಮುಖ ಪ್ರೀತಿಯಂತೆ ಒಮ್ಮುಖ ಗೆಳೆತನವ?.     ಜೀವನವನ್ನು ನಿರಾಶಾವಾದದ ಹಿನ್ನಲೆಯಲ್ಲಿ ಗುರುತಿಸಲಾಗಿದೆ  ಎನಿಸುವ ಕವನ ಜೈಕಿಸಾನರ 'ಇಷ್ಟಾದಮೇಲು..'

 'ಬನ್ನಿರೆಲ್ಲ ಕೂಡಿ ಜಗವಬೆಳಗುವ" ನಂದೀಶರ ಕವನ ದೀಪಾವಳಿಯ ಹಿನ್ನಲೆಯಲ್ಲಿ ಮೂಡಿಬಂದಿದೆ, ಸಣ್ಣದೊಂದು ನಗುವಬೀರಿ ಜಗವಬೆಳಗುವ ಎನ್ನುತಾರೆ ಅವರು ನಿಜ ಒಂದು ಸಣ್ಣ ನಗು ಸಾಕು ಎದುರಿಗಿರುವವರ ಮನ ತಣಿಸಿ ಹರುಷ ಪಡುವಂತೆ ಮಾಡಲು. ಮತ್ತೆ ಅದೇ ದೀಪಾವಳಿ ಸದಾನಂದರನ್ನು 'ಬೆಳಗಲಿ ದೀಪಾವಳಿ' ಬರೆಯಲು ಪ್ರೇರೆಪಿಸಿದೆ. ಮತ್ತೆ ಜಯಪ್ರಕಾಶರೆ ನಿಮ್ಮ 'ದೀಪಾವಳಿ' ಕವನ ಪ್ರಾರಂಬ ಮಾಡಿ ಎಲ್ಲಿ ನಿಲ್ಲಿಸುವುದು ಮುಗಿಸುವುದು ಅನ್ನುವುದೆ ಗೊತ್ತಾಗಲ್ಲ ನಿಲುಗಡೆರಹಿತ ಪದ್ಯದ ಶೈಲಿಯ ಏನು ತಿಳಿಯುತ್ತಿಲ್ಲ. ಕೊಳ್ಳೆಗಾಲ ಮುಂಜುನಾಥರೆ ನಿಮ್ಮ 'ದೀಪಾವಳಿಯ ಪದ್ಯಗಳ' ಕಲ್ಪನೆಯೆ ಅದ್ಭುತ , ಪದ್ಯಗಳ ವಿವಿದ ಪ್ರಕಾರಗಳಾದ ವೃತ್ತ, ಚೌಪದಿ, ಕಂದ, ಷಟ್ಪದಿಗಳಲ್ಲಿ ದೀಪಾವಳಿಯನ್ನು ವರ್ಣಿಸಿರುವ ನಿಮ್ಮ ಜಾಣ್ಮೆ ನಿಜಕ್ಕು ಸಂತೋಷಗೊಳಿಸುತ್ತದೆ, ಇನ್ನೊಮ್ಮೆ ಸಾದ್ಯವಾದಲ್ಲಿ ಸಾಹಿತ್ಯದ ನವರಸಗಳನ್ನು ಉಪಯೋಗಿಸಿ ಯಾವುದಾದದರು ಒಂದೆ ಪ್ರಕಾರದಲ್ಲಿ ಒಂಬತ್ತು ಪದ್ಯಗಳನ್ನು ರಚಿಸುವಿರಾ??

ನಾಗೇಂದ್ರರವರೆ ಚೆನ್ನಾಗಿದೆ 'ಪಟಾಕಿಸದ್ದಡಾಗಿದ ಮೇಲೆ '  ಉಳಿಯುವದೆಲ್ಲ ಕಸದ ರಾಶಿಯೆ! ಆದರೆ ಪ್ರತಿ ಹಬ್ಬದ ಸಂಭ್ರಮದ ನಂತರವು ಉಳಿಯುವುದು ಅಷ್ಟೆ ಅಲ್ಲವೆ! ಅದಕ್ಕೆ ನಾವು ಮಕ್ಕಳ ಸಂತಸ ತಡೆಗಟ್ಟಲಾರೆವು,

ಸಂಪದದಲ್ಲಿ ಲೇಖನ, ಬ್ಲಾಗ್ ವಿಭಾದದಲ್ಲಿ ಕವನ ಕಾಣಬಹುದು ಆದರೆ ಕವನ ವಿಭಾಗದಲ್ಲಿ ಲೇಖನದಂತಹ ಬರಹ 'ನಿಶ್ಯಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗಿಯುವ ಕವಿ', ತೊಮಸ್ ತ್ರಾನ್ಸ್ತ್ರೋಮರ್‌ರವರ ಕಾವ್ಯದ ಬಗ್ಗೆ ಹೇಳುತ್ತಾ ಬರೆದಿದ್ದಾರೆ ಲೇಖಕ ಬಾಲಕೃಷ್ಣ.ಜೆ.  ಕೆಲವು ಸಾಲು ಗಮನಿಸಿ 'ದಟ್ಟಾರಣ್ಯಕ್ಕೆ ಪದಗಳೇ ಇಲ್ಲ-ನಿಜ ಆದರೆ ಅಲ್ಲಿ ಇರುವ ನಿಸ್ಯಬ್ದವೆ ಶಬ್ದರೂಪದಲ್ಲಿರುತ್ತವೆ, ಹಾಗೆಯೆ ಜಿಂಕೆಯ ಹೆಜ್ಜೆಯ ಗುರುತು ಮಾತನಾಡುತ್ತವೆ ಎನ್ನುತ್ತಾರೆ.
ಧೋ ಎಂದು ಸುರಿಯುವ ಮಳೆಯಲ್ಲಿ ಮರವೊಂದು ನಡೆದಾಡುತ್ತಿದೆ, ನಮ್ಮನ್ನೂ ಲೆಕ್ಕಿಸದೆ ಬಿರಬಿರನೆ ಮುಂದೆ ನಡೆದುಹೋಯಿತು. ಅದಕ್ಕೇನೋ ತುರ್ತು ಕೆಲಸವಿರಬೇಕು, ಎನ್ನುತ್ತ ವಿಚಿತ್ರ ಕಲ್ಪನೆನೆಯೊಂದನ್ನು ಮೂಡಿಸುತ್ತಾರೆ. ೨೦೧೧ ರ ನೊಬೆಲ್ ಪಡೆದ ಕವಿಯ ಕವನಗಳು ಅಂಗ್ಲಕ್ಕೆ ಭಾಷಾಂತರವಾಗಿದೆ ಬಹುಷಃ ಅಂಗ್ಲದಿಂದ ಕನ್ನಡಕ್ಕೆ.

'ರಾಜ್ಯೋತ್ಸವ ನಿತ್ಯೋತ್ಸವ' ಆಗಲಿ  ಎಂದು ಹರಸುತ್ತಿದ್ದಾರೆ ಜಯಂತ್ ತಮ್ಮ ಕವನದಲ್ಲಿ, ಸಂಪದದಲ್ಲಂತು ಅದು ನಿಜವಾಗಿದೆ!!.   ನಾಗೇಂದ್ರಕುಮಾರರ 'ಅಸಹಾಯಕತೆ' ಕಡೆಯ ಕವನ ಈ ತಿಂಗಳಿಗೆ, ನಾಗೇಂದ್ರವೆ ಸೋತ ವ್ಯಕ್ತಿಯ ಅಸಹಾಯಕತೆ ಚೆನ್ನಾಗಿ ವರ್ಣಿಸಿದ್ದೀರಿ ಆದರೆ ಆಗ ಬೇಕಾಗಿರುವುದು ಸ್ವಲ್ಪ ಸಹನೆಯಷ್ಟೆ ಮತ್ತೆ ಎಲ್ಲವು ತಾನಾಗೆ ಸರಿಹೋಗುತ್ತದೆ.

 
ಚಿತ್ರವಿಭಾಗ :

ದಸರಾ ಹಬ್ಬದ ವೈಭವದ ಸಾಗರದ ನಗರೇಶ್ವರ ದೇವಾಲಯದಲ್ಲಿ "ಶಕ್ತಿ ಮಾತೆಗೆ ಪೂಗಿ ಫಲ ಅಲಂಕಾರ" ದೇವರು ಆರ್ ಭಟ್ ರವರ ವರ್ಣಚಿತ್ರದೊಂದಿಗೆ ಪ್ರಾರಂಬ ಚಿತ್ರ ವಿಭಾಗ, ನಂತರ ಅದೇ ದೇವಿಗೆ ಮಾಡಿರುವ 'ಪುಷ್ಪಾಂಲಕಾರ'ದ ಚಿತ್ರ ಪ್ರಕಟಿಸಿ, ಚೆಂದದ ಹೂವುಗಳ ಚಿತ್ರ ಹಾಕಿದ್ದಾರೆ. ಜೇಡ ತನ್ನ ಬಲೆಯನ್ನು ಎತ್ತರದಲ್ಲಿ ಕಟ್ಟಿ ಹಾರಾಡುವ ಕೀಟಗಳನ್ನು ಹಿಡಿಯಲು ಹೊಂಚು ಹಾಕುತ್ತದೆ ಆದರೆ 'ಹುಲ್ಲಿನ ಮೇಲೆ' ನೆಲದಲ್ಲಿ ಕಟ್ಟಿರುವ ಜೇಡದ ಚಿತ್ರ ಚೆನ್ನಾಗಿದೆ, ದೇವರ್ ಆರ್ ಭಟ್ ರವರು ಪ್ರಕಟಿಸುವ ಚಿತ್ರಗಳು ಆಕರ್ಷಕ. ಒಂದರ ಹಿಂದೆ ಒಂದರಂತೆ "ಕಾಲೇಜು ಹುಡುಗಿ', 'ಹೇಗಿದೆ ನಂರೂಪ' 'ನಾಚಿಕೆ','ಸಬಲೆ' 'ಯೋಗಿಗೆ ಸವಾಲು' ಮುಂತಾದ ಚಿತ್ರಗಳನ್ನು ಪ್ರಕಟಿಸಿದ್ದಾರೆ.
 ರಮೇಶ ಕಾಮತರು 'ಗುಲಾಬಿಯ ಗೊಂಚಲು' ಒಂದನ್ನು ಸಂಪದಿಗರಿಗಾಗಿ ಪ್ರೆಸೆಂಟ್ ಮಾಡಿದ್ದಾರೆ, ಎಲ್ಲರು ಸ್ವೀಕರಿಸಿ. ಪ್ರಸನ್ನ ಕಾಕುಂಜೆಯವರು 'ಶೀರ್ಷೆಕೆ ಕೊಡಿ' ಯಲ್ಲಿ ಪ್ರಕಟಿಸಿರುವ ಸೂರ್ಯಾಸ್ತದ ಹಿನ್ನಲೆಯ ನೀರಿನ ಚಿತ್ರವು ಆಕರ್ಷಕ.

 ನಂತರ 'ಏನೆಂದು ಕರೆಯಲಿ ಪುಟ್ಪಾಚ್ಚಿ" ಚಿತ್ರ ಮನದಲ್ಲಿ ನೂರೆಂಟು ಭಾವನೆ ಕೆಣಕುವ ಚಿತ್ರ. ನಂದೀಶರ 'ಚಾರ್ಮುಡಿಯ ಚಿತ್ರಗಳು' ಒಂದಕ್ಕಿಂತ ಒಂದು ಸುಂದರ. 
 
ಪದ್ಮರವರು ಪ್ರಕಟಿಸಿರುವ 'ಚಿಟ್ಟಾಸನ' ಚಿತ್ರ ಚೆನ್ನಾಗಿದೆ, ಎಲ್ಲಿಯದು ಈ ರೀತಿಯ ಬೆಂಚಿರುವ ಪಾರ್ಕ ಎಂದು ತಿಳಿಸಿದರೆ ಚೆನ್ನಾಗಿರುತ್ತಿತ್ತು. ಹಾಗೆಯೆ 'ಪ್ರಕೃತಿಯ ಮಡಿಲಲ್ಲಿ ' ಚಿತ್ರವು  ತುಂಬಾ ಚೆನ್ನಾಗಿದೆ.  ಉಳಿದಂತೆ ಚಿತ್ರ ವಿಭಾಗವೇಕೊ ಸೊರಗಿದೆ ಹೆಚ್ಚು ಚಿತ್ರಗಳಿಲ್ಲದೆ
------------------------------------------------------------------------

    ಈ ಮಾಸದ ಅಂತ್ಯದಲ್ಲಿ ಹಬ್ಬಗಳ ಪ್ರಭಾವವೊ ರಜಾಗಳ ಮಹತ್ವವೊ ಅದೇನೊ ಒಟ್ಟಿನಲ್ಲಿ ಪ್ರತಿಕ್ರಿಯೆಗಳ ಸಂಖ್ಯೆಯಂತು ಗಣನೀಯವಾಗಿ ಕುಸಿದಿತ್ತು. ಬರಹಗಳಲ್ಲಿ ವಿಷಯಗಳ ಹಾಗು ವಿಷಯದಲ್ಲಿ ವೈವಿದ್ಯತೆಯ ಕೊರತೆ ಕಾಣಿಸುತ್ತಿದೆ ಅನ್ನಿಸುತ್ತಿತ್ತು.  ಕನ್ನಡ ರಾಜ್ಯೋತ್ಸ್ವದೊಂದಿಗೆ  ಪ್ರಾರಂಬವಾಗುತ್ತಿರುವ ನವೆಂಬರ್ ಮಾಸ ಸಂಪದಿಗರಿಗೆ ಉಲ್ಲಾಸ ತರಲಿ ಹೆಚ್ಚು ಹೆಚ್ಚು ವೈವಿದ್ಯಮಯ ಲೇಖನಗಳು ಹೊರಬರಲಿ, ಹೆಚ್ಚು ಉತ್ಸಾಹದಿಂದ ಎಲ್ಲರು ಬಾಗವಹಿಸಲಿ ಎಂದು ಆಶಿಸುತ್ತ ಅಕ್ಟೋಬರ್ ಪಕ್ಷಿನೋಟಕ್ಕೊಂದು ಮುಕ್ತಾಯ ಹಾಡುತ್ತಿದ್ದೇನೆ

ಕರ್ನಾಟಕ ರಾಜ್ಯೋತ್ಸವದ ಶುಭಾಷಯಗಳು.


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸೂಪರ್ರೋ ಸೂಪರ್ರು... ನಿಮ್ಮ ಛಲ ಮತ್ತು ತಾಳ್ಮೆಗೆ ನನ್ನ ಅನ0ತ ನಮಸ್ಕಾರಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಸನ್ನ ಹೇಗಿದ್ದೀರಿ ? ಈಗೀಗ ತುಂಬಾ ಅಪರೂಪವಾಗುತ್ತಿದ್ದೀರಿ ಎಷ್ಟು ದಿನ ವಿಶ್ರಾಂತಿ ?? ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಕ್ಷಿ ಕಡೆಗೆ "ಗಜನೋಟ"- ತಿಂಗಳ ಮೊದಲಿಗೆ ಸೆಪ್ಟೆಂಬರ್‌ನೆಡೆಗೆ "ಪಕ್ಷಿನೋಟ" ಹರಿಸಿ, "ಹೆಂಡತಿಗೆ ಹೊಡೆಯಬೇಡ" ಎಂದು ದೆವ್ವಕ್ಕೆ ಬುದ್ದಿಹೇಳಿ, ಸ್ವಯಂವೈದ್ಯ ಎಂಬ "ಪೆದ್ರಸಕ್ಕೆ ಪಶ್ಚಾತಾಪ" ಪಟ್ಟು, ಪರಿಹಾರಕ್ಕೆ "ದೇವರಾಯನದುರ್ಗಕ್ಕೆ ಚಾರಣ" ಮಾಡಿದ ಪಾರ್ಥಸಾರಥಿಯವರಿಗೆ ಕಾಡುತ್ತಾ ಇರುವ ಪ್ರಶ್ನೆ..."ಹುಡುಗಿಯರೆ ನೀವೇಕೆ ಹೀಗೆ?" ದೇವರನ್ನು "ನಂಬಿದರೆ"....ಒಳ್ಳೆಯದು ಎಂದರು. ರಾಮನ ಹಿಂದೆ ನಂಬಿ ಹೋದ ಲಕ್ಷ್ಮಣನ ಪತ್ನಿ"ಊರ್ಮಿಳೆಯ ಮೌನರಾಗ"ದ ಬಗ್ಗೆ ಕಣ್ಣೀರು ಹಾಕಿದರು. ಕೊನೆಯಲ್ಲಿ ತುಂತುರು ರಾಗನಾ ಸಿಕ್ಸರು(ಏಟಿನ)ರಾಗನಾ ಗೊತ್ತಾಗಲಿಲ್ಲ. :) http://sampada.net/m... -ಗಣೇಶ. ಪಾರ್ಥಸಾರಥಿಯವರೆ, ಪಕ್ಷಿನೋಟ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಜನೋಟಕ್ಕೆ ಬೆರಗಾದೆ. ಪಕ್ಷಿನೋಟದಲ್ಲಿ ಪಾರ್ಥರ ಬರಹಗಳ ಉಲ್ಲೇಖವಿಲ್ಲದಿರುವುದು ಲೋಪವೇ ಸರಿ. ಅವರಿಗೆ ಮತ್ತೊಮ್ಮೆ ನೆನಪಿಸುವೆ. ಪಾರ್ಥರೆ, ನಿಮ್ಮ ಲೇಖನಗಳನ್ನು ನೀವೇ ವಿಮರ್ಶಿಸುವುದು ಹೇಗೆಂದು ಸಂಕೋಚವಿದ್ದರೆ ಕನಿಷ್ಠ ಬರಹಗಳ ಪಟ್ಟಿಯನ್ನಾದರೂ ಸೇರಿಸಿ ಪಕ್ಷಿನೋಟ ಪೂರ್ಣಗೊಳಿಸಿ. ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ, ಪಾರ್ಥರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಾಗೇನು ಇಲ್ಲ ನಾಗರಾಜ ಸರ್ ಏಕೊ '... ಊರ್ಮಿಳ' ಸಂಪದಿಗರಿಗೆ ಮೆಚ್ಚುಗೆಯಾಗಲಿಲ್ಲ ಅನ್ನಿಸಿತು ಹಾಗಾಗಿ ಅದನ್ನು ಸೇರಿಸಲಿಲ್ಲ -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅದು ಹೇಗೆ ಮತ್ತು ಏಕೆ “ಊರ್ಮಿಳೆ“ ಸ೦ಪದಿಗರಿಗೆ ಇಷ್ಟವಾಗಲಿಲ್ಲವೆ೦ದು ನಿಮಗೆ ಅನ್ನಿಸಿತು ಪಾರ್ಥರೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೊದಲ ಮೂರು ದಿನ ಸೇರಿ ಅದನ್ನು ಓದಿದ ಸಂಪದಿಗರ ಸಂಖ್ಯೆ ೨೦ ಮೀರಲಿಲ್ಲ ಹಾಗಾಗಿ ಈರೀತಿ ಬರಹ ಓದಲು ಆಸಕ್ತರಲ್ಲವೇನೊ ಅಂದು ಕೊಂಡೆ ನಂತರ ನೆನ್ನೆಯಿಂದ ಅದನ್ನು ಕೆಲವರು ಗಮನಿಸಿ ಓದಿದಾಗ ಸಮಾದಾನವಾಯಿತು. ನಾವಡರೆ ನನಗೆ ಪ್ರತಿಕ್ರಿಯೆ ನಿರೀಕ್ಷೆಯೇನು ಇರಲಿಲ್ಲ ಏಕೆಂದರೆ ಕೆಲವೊಮ್ಮೆ ಕೆಲವರಿಗೆ ಅಷ್ಟು ಸಮಯ ದೊರೆಯುವುದು ಸಹ ಕಷ್ಟ ಅಂತ ತಿಳಿದಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಊರ್ಮಿಳೆಗೆ ಕೇವಲ ಮೂರೇ ದಿನಗಳಲ್ಲಿ ನೆಮ್ಮದಿ ದೊರೆಯಿತು ... ಪಾಪ ನಿಜ ಊರ್ಮಿಳೆಗೆ ವರುಷ‌ ಹದಿನಾಲ್ಕು ಕಳೆದರೂ ಹರುಷ ತರಲಿಲ್ಲವೇ :‍(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶರೆ ನಿಜ ಅದು ಏಟಿನ ರಾಗವೆ :))) ನೀವು ನನ್ನ ಎಲ್ಲ ಬರಹವನ್ನು ನಮೂದಿಸಿರುವದಕ್ಕೆ ವಂದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೇಖನ, ಲೇಖಕರ ಬಗ್ಗೆ ನಿಮ್ಮದೇ ವ್ಯಾಖ್ಯಾನ ನೀಡುತ್ತ ಬಲು ಸೊಗಸಾಗಿ ಮೆಗಾ ಪಕ್ಶ್ಹಿನೋಟವನ್ನು ನೀಡಿದ್ದೀರ ... ತು0ಬಾ ಖುಷಿ ಕೊಟ್ಟಿತು ಪಾರ್ಥ‌ರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಗೂ ಖುಷಿಯೆ ಶ್ರೀನಾಥರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿಯವರೇ ಕಳೆದ ಬಾರಿ ಭೇಟಿಯಾದಾಗ ನೀವು ಕೆಲಸದ ಒತ್ತಡ ಜಾಸ್ತಿ ಇದೆ. ಈ ಬಾರಿ ಪಕ್ಷಿನೋಟ ಬರೆಯಲು ಸಾಧ್ಯವೋ ಇಲ್ಲವೋ ಎ೦ದು. ನಿಮ್ಮ ಒತ್ತಡದ ನಡುವೆಯೂ ಉತ್ತಮ ವರದಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಜಯಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರತಿ ತಿ೦ಗಳ ಅ೦ತ್ಯಕ್ಕೆ ಸೊಗಸಾದ ಸ೦ಪೂರ್ಣ ಸ೦ಪದವನ್ನೇ ಲೇಖನದಲ್ಲಿ ತು೦ಬುವ ನಿಮ್ಮ ತಾಳ್ಮೆ ಹಾಗೂ ಶೈಲಿಗೆ ನಮೋನಮ: ಪಾರ್ಥರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾವಡರೆ ಹಾಗು ಕುಂಬ್ಳೆಯವರೆ ತಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ ನಿಮ್ಮ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸೊಗಸಾದ ಪಕ್ಷಿನೋಟ , ಗಣೇಶ್ ರವರು ನೀಡಿರುವ ತುಣುಕುಗಳು ಸೇರಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಾವ್ರೆ ನಿಮಗೊಂದು ಹ್ಯಾಟ್ಸಾಫ್!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಚೇತನ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇದೇನು ಪಕ್ಷಿ ನೋಟವಾ....? ಇಲ್ಲ ಇಲ್ಲ ಪೂರ್ಣ ನೋಟ. ಹೆಚ್ಚು ಕಡಿಮೆ ಸಂಪೂರ್ಣ ಮಾಹಿತಿ. ಒಳ್ಳೆಯ ಪರಿ ಕಲ್ಪನೆ. - ಧನ್ಯವಾದಗಳು -ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಕ್ಷಿನೋಟವೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮತ್ತೊಮ್ಮೆ ಪಾರ್ಥಸಾರಥಿ ಯವರಿಗೆ ನನ್ನ ವಂದನೆಗಳು. ಸಂಪದಿಗರಿಗಾಗಿ ತಾವು ನೀಡುವ ಸಮಯ ವ್ಯವಧಾನಕ್ಕೆ ನಾವೆಲ್ಲರೂ ಋಣಿಯಾಗಿರಲೇಬೇಕು. ಅಕ್ಟೋಬರ್ ತಿಂಗಳ ಪಕ್ಷಿನೋಟ ಚನ್ನಾಗಿ ಮೂಡಿಬಂದಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಮೇಶರೆ ತಮಗೆ ನನ್ನ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿ ಅವ್ರೆ ------ಮಾಸದಲ್ಲಿ ಸಂಪದ ಎಂದಿನಂತೆ ನಮ್ಮ ನಿರೀಕ್ಷೆ ಹುಸಿ ಮಾಡದೆ ತಿಂಗಳ ಮೊದಲ ವಾರದಲ್ಲೇ ಬಂದಿದ್ದು ಖುಷಿಯಾಯ್ತು. ಬಲು ಜಾಗರೂಕತೆಯಿಂದ ಬೇರೆ ಕೆಲಸದೊತಡದ ಮಧ್ಯೆಯೂ ಬಿಡುವು ಮಾಡಿಕೊಂಡು ನೀವ್ ಬರೆಯುವ ಮಾಸದಲ್ಲಿ ಸಂಪದದ 'ವಿಶೇಷವೆಂದರೆ' 'ಹಂಸಕ್ಷೀರ ನ್ಯಾಯ'ವನ್ನು ನನಗದು ನೆನಪಿಸುತ್ತದೆ... ವಿಶ್ಲೇಷಣೆಯ ತಕ್ಕಡಿಯನ್ನು ಸಮದೂಗಿ- ಅಳೆದು ತೂಗಿ ನೀವ್ ಬರೆಯೋ --ಮಾಸದಲ್ಲಿ ಸಂಪದ , ನಿಮ್ಮ ತಾಳ್ಮೆ,ಏಕಾಗ್ರತೆ,ಚಟುವಟಿಕೆಗೆ ನಿದರ್ಶನ. ಅದರಲ್ಲೂ ಲೇಖನ-ಬರಹ-ಕಥೆ-ಕವನ ತಿಂಗಳು ಪೂರ್ತಿ ಒಂದರ ಮೆಲೊಂದರಂತೆ ಸಂಪದಕ್ಕೆ ಸೇರಿಸುತ್ತಾ ತಿಂಗಳ ಕೊನೆಯಲ್ಲಿ --ಮಾಸದಲ್ಲಿ ಸಂಪದ ಕ್ಕೆ ಸಜ್ಜಾಗಿ ಅದನ್ನು ತಿಂಗಳ ಮೊದಲ ವಾರದಲ್ಲೇ ಕೊಡುವ ನಿಮಗೆ ನನ್ನ ಧನ್ಯವಾದಗಳು. ನಾ ಊಹಿಸಿದ್ದೆ ಖಚಿತವಾಗಿಯೂ ಈ ಸಾರಿ ನೀವ್ 'ಪರಮಾತ್ಮ'ನ ಬಗ್ಗೆ ಸಂಪದಿಗರು ಬರೆದ ಚಿತ್ರ ವಿಮರ್ಶೆ-ಕವನಗಳ ಬಗ್ಗೆ ಖಂಡಿತ ಪ್ರಸ್ತಾಪಿಸುತ್ತೀರಾ ಅಂತ!! ಕಥೆ-ಕವನ-ಲೇಖನ-ಬ್ಲಾಗ್ ಗಳ ಬಗ್ಗೆ 'ಸವಿವರ -ಸಮತೂಕದ ವಿಶ್ಲೇಷಣೆಯನ್ನ' ಕೆಲವೇ ಶಬ್ದಗಳಲ್ಲ್ಲಿ ಹಿಡಿದಿಟ್ಟಿದ್ದೀರ ಅದೇ ನಿಮ್ಮ 'ವಿಶೇಷತೆ'... ನಾನಂತೂ ಕಳೆದ ಎರಡು ದಿನಗಳಿಂದ ---ಮಾಸದಲ್ಲಿ ಸಂಪದಕ್ಕಾಗಿ ಎದುರು ನೋಡುತ್ತಿದ್ದೆ.. ಆದ್ರೆ ಒಂದೇ ಬೇಜಾರು ಮಾರಾಯ್ರೇ- ನಿಮ್ಮ ಬರಹಗಳ ಬಗ್ಗೆ 'ಪ್ರಸ್ತಾಪಿಸುವುದನ್ನ' ನೀವ್ ಈ ಸಾರಿ 'ಮಿಸ್' ಮಾಡಿದ್ದು. 'ಸ್ವಯಂ ಬೆನ್ನು ತಟ್ಟಿ ಕೊಳ್ಳುವಿಕೆ' ಸರಿಯಲ್ಲ ಆದರೂ ............. ನಿಮಗೂ ಸಮಸ್ತ ಸಂಪದಿಗರಿಗೂ 'ಕರುನಾಡಿನ ರಾಜ್ಯೋತ್ಸವದ ' ಶುಭಾಶಯಗಳು........ ನಮ್ಮ ಕನ್ನಡ ನಾಡಿನ ಏಕೀಕರಣಕ್ಕಾಗಿ ಹೋರಾಡಿ ಇಂದಿನ ನಮ್ಮ ಈ 'ಸಂತೋಷಕ್ಕೆ, ವಿಶೇಷತೆಗೆ-ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರುನಾಡಿನ ಉದಯಕ್ಕೆ -ಕಾರಣರಾದ ನಮ್ಮೆಲ್ಲ 'ಹಿರಿಯ ಚೇತನಗಳಿಗೆ' ನಾವ್ ಕೃತಜ್ಞರು.. ಅವರೆಲ್ಲ 'ಪ್ರಾಥ: ಸ್ಮರಣೀಯರು'... ನಿಮ್ಮ ---ಮಾಸದಲ್ಲಿ ಸಂಪದ ನಿರ್ವಿಘ್ನವಾಗಿ ಸಾಗಲಿ..... 'ದಾಖಲೆ ಸೃಸ್ಟಿಸಲಿ' ಎಂಬ ಹರಕೆ-ಹಾರೈಕೆ ನಮ್ಮದು ........... ಶುಭವಾಗಲಿ ಅನಂತ ಧನ್ಯವಾದಗಳು.......... ಸಪ್ತಗಿರಿವಾಸಿ(ವೆಂಕಟೇಶ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಯವರೆ ವಂದನೆಗಳು 'ಊರ್ಮಿಳಾ' ಓದಿದಿರಾ? ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ ಸಾರಥಿ ಅವ್ರೆ ನಿಮ್ಮ ಮನದಿಂಗಿತ ನನಗರ್ಥವಾಯ್ತು. ಬರಹವೊಂದನ್ನು ಬರೆದಾದಮೇಲೆ ಅದು ಓದುಗರನ್ನ ಆಕರ್ಷಿಸಿ ಅಭಿಪ್ರಾಯ-ಅನಿಸಿಕೆ-ಸಲಹೆ-ಸೂಚನೆ ಬರೆಯಲು ಪ್ರೇರೇಪಿಸಬೇಕು... ಅದರಲ್ಲೂ ಒಂದು ಹಂತದವರೆಗೆ 'ಸಮಸ್ತ ಸಂಪದಿಗರ ನಿರೀಕ್ಷೆಯ-ಕುತೂಹಲದ ಕಾಯುವಿಕೆಯ ಹೊರೆ ಹೊತ್ತು' ಅವರ ನಿರೀಕ್ಷೆ ಮುಟ್ಟದೇ ಹೋದರೆ? ಹಾಗಂತ ನಿಮಗನ್ನಿಸಿದ್ದರಲ್ಲಿ ತಪ್ಪೇನಿಲ್ಲ.. . ನಿಮ್ಮ ಮಾತು ಸತ್ಯ 'ಕೆಲಸದೊತ್ತಡದ ಮಧ್ಯೆ ನನಗೆ(ಇತರರಿಗೂ ಸಹ ಇರಬಹುದು) 'ಉರ್ಮಿಳೆಯನ್ನು' ಅರ್ಧಂಬರ್ಧ ಓದಿ, ಅದು ಸರಿಯಾಗಿ 'ಗ್ರಹಿಕೆ' ಆಗದೆ ಅದರ ಬಗ್ಗೆ ಪ್ರತಿಕ್ರಿಯಿಸಿದರೆ ಸರಿಯಾಗಿರದು ಅನ್ನಿಸಿತು ಅದಕ್ಕೆ ಈಗ ಬಿಡುವು ಮಾಡಿಕೊಂಡು ಪಟ್ಟಾಗಿ ಕುಳಿತು ಓದಿ ಮುಗಿಸಿ , 'ಊರ್ಮಿಳೆಯ' ಬಗ್ಗೆ ನೀವ್ ಬರೆದ ಬರಹಕ್ಕೆ ಪ್ರತಿಕ್ರಿಯಿಸಿದ್ದೇನೆ.. ಶುಭವಾಗಲಿ ಧನ್ಯವಾದಗಳು.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ ಅವರೆ, ಕೆಲವು ವರ್ಷಗಳ ಹಿಂದೆ ಒಂದು ಮಾತಿತ್ತು. ಭಾರತ ಸರ್ಕಾರದ ಬಜೆಟ್ಟನ್ನು ಏಕೆ ಮಂಡಿಸುತ್ತಾರೆ ಎಂದರೆ; ಅದರ ಬಗ್ಗೆ "ನಾನಿ ಪಾಲ್ಕಿ ವಾಲಾ"ರವರ ವಿಶ್ಲೇಷಣೆ ಕೇಳಲು ಎನ್ನುವುದು. ಇದೇ ಮಾತನ್ನು ನಾವು ಕೂಡ ಇಲ್ಲಿ ಅಳವಡಿಸಿಕೊಳ್ಳಬಹುದೆನಿಸುತ್ತದೆ. ಸಂಪದದಲ್ಲಿ ಲೇಖಕರು ಬರೆಯುವುದೇಕೆಂದರೆ ಪಾರ್ಥರ ಪಕ್ಷಿನೋಟ ಓದಲು :)) ಈ ಸಾರಿ ಗಜನೋಟವನ್ನೂ ನಿಮ್ಮ ಲೇಖನಕ್ಕೆ ಸೇರಿಸಿಕೊಂಡರೆ ಆಗ ಮಾಸದ ಪಕ್ಷಿನೋಟ ಪರಿಪೂರ್ಣವಾಗುತ್ತದೆ. ಕೆಲವು ಲೇಖನಗಳು ಅದು ಹೇಗೋ ನನ್ನ ಕಣ್ಣಿಗೆ ಬಿದ್ದಿರಲಿಲ್ಲ; ನಿಮ್ಮ ಲೇಖನ ಆ ಕೊರತೆಯನ್ನು ನೀಗಿಸಿತು. ಒಳ್ಳೆಯ ವಿಮರ್ಶಾತ್ಮಕ ಲೇಖನ ಮತ್ತು ಮಾಹಿತಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ್ ನೋಡೋಣ ಅಂತ ಪ್ರಯತ್ನ ಪಡುತ್ತಿದ್ದೇನೆ ಅಷ್ಟೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರ್ ಅವ್ರ ಸಾಲುಗಳನ್ನ ಅವರ ಗಮನಕ್ಕೆ ತಾರದೆ ಉಪಯೋಗಿಸಿಕೊಳ್ತಾ ಅವರ ಕ್ಷಮೆ ಕೋರಿ............ ಕೆಲವು ವರ್ಷಗಳ ಹಿಂದೆ ಒಂದು ಮಾತಿತ್ತು. ಭಾರತ ಸರ್ಕಾರದ ಬಜೆಟ್ಟನ್ನು ಏಕೆ ಮಂಡಿಸುತ್ತಾರೆ ಎಂದರೆ; ಅದರ ಬಗ್ಗೆ "ನಾನಿ ಪಾಲ್ಕಿ ವಾಲಾ"ರವರ ವಿಶ್ಲೇಷಣೆ ಕೇಳಲು ಎನ್ನುವುದು. ಇದೇ ಮಾತನ್ನು ನಾವು ಕೂಡ ಇಲ್ಲಿ ಅಳವಡಿಸಿಕೊಳ್ಳಬಹುದೆನಿಸುತ್ತದೆ. ಸಂಪದದಲ್ಲಿ ಲೇಖಕರು ಬರೆಯುವುದೇಕೆಂದರೆ ಪಾರ್ಥರ ಪಕ್ಷಿನೋಟ ಓದಲು :)) ಈ ಸಾರಿ ಗಜನೋಟವನ್ನೂ ನಿಮ್ಮ ಲೇಖನಕ್ಕೆ ಸೇರಿಸಿಕೊಂಡರೆ ಆಗ ಮಾಸದ ಪಕ್ಷಿನೋಟ ಪರಿಪೂರ್ಣವಾಗುತ್ತದೆ. ಕೆಲವು ಲೇಖನಗಳು ಅದು ಹೇಗೋ ನನ್ನ ಕಣ್ಣಿಗೆ ಬಿದ್ದಿರಲಿಲ್ಲ; ನಿಮ್ಮ ಲೇಖನ ಆ ಕೊರತೆಯನ್ನು ನೀಗಿಸಿತು. +1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿಯವರೇ, ನಿಮ್ಮ ತಾಳ್ಮೆಗೆ ನಮೋನ್ನಮ: ದಯವಿಟ್ಟು ನಿಮ್ಮ ಲೇಖನಗಳನ್ನೂ ಪಕ್ಷಿನೋಟಕ್ಕೆ ಸೇರಿಸಿ. ನನ್ನ ಬರಹಗಳನ್ನೂ ಉಲ್ಲೇಖಿಸಿದ್ದಕ್ಕೆ ಧನ್ಯವಾದಗಳು. ನನ್ನ ಹೆಸರು 'ಶಿವರಾಮಕೃಷ್ಣ' ಅಲ್ಲ; 'ಶಿವರಾಮ'. :‍)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಿವರಾಮರೆ ನಿಮ್ಮ ಹೆಸರು ತಪ್ಪಾಗಿ ಬರೆದಿರುವುದಕ್ಕೆ ಕ್ಷಮೆ ಇರಲಿ ನಾವು ಓದುವಾಗ ಕಾಲೇಜಿನಲ್ಲಿ ಚಿಕ್ಕಣ್ಣಯ್ಯಪ್ಪ ಅ0ತ ಒಬ್ಬರಿದ್ದರು ಗೆಳೆಯರೆಲ್ಲ ಅಣ್ಣ ಅಯ್ಯ ಅಪ್ಪ ಎಲ್ಲವನ್ನು ಒಬ್ಬರೆ ಹಿಡಿದರೆ ಎಲ್ಲರು ಏನು ಮಾಡುವುದು ಅ0ತ ತಮಾಶ್ಹಿ ಮಾಡುತ್ತಿದ್ದರು ನಿಮ್ಮ ಹೆಸರು ಬರೆಯುವಾಗ ಏಕೊ ಅದನ್ನು ಯೋಚಿಸುತ್ತಿದ್ದೆ ಹಾಗಾಗಿ ಕೃಷ್ಣ ಸೇರಿಬಿಟ್ಟಿದೆ ಅನ್ನಿಸುತ್ತೆ :))) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಾನ್ಯರೆ ವಂದನೆಗಳು ಪಕ್ಷಿನೋಟ ಅಕ್ಟೋಬರ 2011 ನ್ನು ಓದಿದೆ.ಬಹಳ ಚೆನ್ನಾಗಿ ವಿಮರ್ಶಿಸಿದ್ದೀರಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರತಿಕ್ರಿಯೆ ಪುನಃ ಬರೆದಿದೆ,.ಕ್ಷಮಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಮೇಶರೆ ಕ್ಷಮಿಸಿ ಇವೆಲ್ಲ ಏತಕ್ಕೆ, ಕೆಲವೊಮ್ಮೆ ನಾವು ಒಮ್ಮೆ 'save' ಒತ್ತಿದರು ಎರಡು ಬಾರಿ ತೆಗೆದುಕೊಳ್ಳುತ್ತೆ, ಹಾಗಾಗಿ ಸಂಕೋಚಪಡಬೇಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಪಕ್ಷಿನೋಟ ಬಹಳ ಚೆನ್ನಾಗಿದೆ. ನಮ್ಮಂಥವರು ಅಂದರೆ ಅಪರೂಪಕ್ಕೆ ಕಂಪ್ಯೋಟರ್ ಮುಂದೆ ಕೂರುವವರಿಗೆ ಒಂದೇಸಾರಿ ಎಲ್ಲಾ ಲೇಖನಗಳ ಪರಿಚಯ ನಿಮ್ಮ ಪಕ್ಷಿನೋಟದಿಂದ ಸಿಗುತ್ತದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಮ್ಮ ಪ್ರತಿಕ್ರಿಯೆಗೆ ವ0ದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸರ್, ಈ ತರದ "ಹಕ್ಕಿನೋಟ" ನೀಡುವುದು ನಿಜಕ್ಕೂ ದೊಡ್ಡ ಕೆಲಸ. ಸಂಪದದಲ್ಲಿ ಎಶ್ಟು ಮಂದಿ ಬರೆಯುತ್ತಾರೆ. ಅವರೆಲ್ಲರ ಬರೆಹಗಳನ್ನು ಓದುವುದು, ನೆನಪಿನಲ್ಲಿಟ್ಟುಕೊಳ್ಳುವುದು ಅಶ್ಟು ಸುಲಭದ ಕೆಲಸ ಅಲ್ಲ. ಅಪಾರವಾದ ತಾಳ್ಮೆಯನ್ನು ಬೇಡುವ ಕೆಲಸ ಇದು. ತಮ್ಮ ತಾಳ್ಮೆಗೆ ಶರಣು. ಇನ್ನು, "ಈ ಮಾಸದ ಅಂತ್ಯದಲ್ಲಿ ಹಬ್ಬಗಳ ಪ್ರಭಾವವೊ ರಜಾಗಳ ಮಹತ್ವವೊ ಅದೇನೊ ಒಟ್ಟಿನಲ್ಲಿ ಪ್ರತಿಕ್ರಿಯೆಗಳ ಸಂಖ್ಯೆಯಂತು ಗಣನೀಯವಾಗಿ ಕುಸಿದಿತ್ತು. ಬರಹಗಳಲ್ಲಿ ವಿಷಯಗಳ ಹಾಗು ವಿಷಯದಲ್ಲಿ ವೈವಿದ್ಯತೆಯ ಕೊರತೆ ಕಾಣಿಸುತ್ತಿದೆ ಅನ್ನಿಸುತ್ತಿತ್ತು." ಎಂಬ ನಿಮ್ಮ ಮಾತು ಅಕ್ಶರಶಹ ನಿಜ. ವಿನಯದಿಂದ, ಶಶಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಶಿಕುಮಾರ್ ರವರೆ ತಮ್ಮ ಪ್ರತಿಕ್ರಿಯೆಗೆ ಹಾಗು ನನ್ನ ಅನಿಸಿಕೆ ಒಪ್ಪಿರುವದಕ್ಕೆ ವ0ದನೆಗಳು ತಮ್ಮ ವಿಶ್ವಾಸಿ, ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿಯವರೆ, ಪಕ್ಷಿನೋಟ ಮತ್ತು ದಾಖಲಿಸಿದ ನಿಮ್ಮ ತಾಳ್ಮೆ..ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಾಗ್ವತರಿಗೆ ತಮ್ಮ ಪ್ರತಿಕ್ರಿಯೆಗಾಗಿ ವ0ದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಸಾರಥಿಯವರೆ, ಸು೦ದರ, ಸವಿವರ, ಸಮಗ್ರ ಸಿ೦ಹಾವಲೋಕನ! ಸ್ತುತ್ಯರ್ಹ ಕಾರ್ಯಕ್ಕೆ ಪಕ್ಷಿ, ಗಜಗಳನ್ನು ಬಿಟ್ಟು ಸಿ೦ಹದ ಹೋಲಿಕೆಯೇ ಸರಿಯನ್ನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಅಭಿಪ್ರಾಯಕ್ಕೆ ವಿಶ್ವಾಸಕ್ಕೆ ನಮನ ಮಂಜುರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಂಪದವಲೋಕನ ತಿಂಗಳ ಸಮಗ್ರ ಬರಹಗಳನ್ನು ಕಣ್ಮುಂದೆ ತಂದಿತು.ಪಕ್ಷಿನೋಟ ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ನಂದೀಶ್ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.