ನೌಕೆಗೊಬ್ಬ ನಾವಿಕನಾಗಿ..

0

(Picture courtesy: Ms.serene . This poem was inspired by the above picture)

ಹೀಗೇ ವೀ ಚಾಟೊಂದರಲ್ಲಿ ಪರಿಚಿತರೊಬ್ಬರು ಹಾಕಿದ್ದ ಚಿತ್ರವೊಂದು ಆಕರ್ಷಕವಿದೆಯೆನಿಸಿ, ತುಸು ಆಳವಾಗಿ ನೋಡಿದೆ. ಪೈಂಟಿಂಗಿನ ಪೋಟೊ ತೆಗೆದಂತಿದ್ದರು ಚಿತ್ರ ತುಂಬಾ ಮುದ ನೀಡುವಂತಿದೆಯೆನಿಸಿತು. ಸಾಗರದಲ್ಲೊ, ನದಿಯಲ್ಲೊ ಒಬ್ಬಂಟಿಯಾಗಿ ಕೊಡೆಯ ಅಡಿ ನೌಕೆಯಲಿ ಕೂತ ವನಿತೆಯೊಬ್ಬಳು, ಎಲ್ಲಿಗೊ ಹೊರಟ ಪಯಣ. ಬರಿ ಅರ್ಧ ನಾವೆಯ ಚಿತ್ರದಿಂದಾಗಿ ಮಿಕ್ಕರ್ಧ ಭಾಗ ಊಹೆಯ ಪಾಲು. ಯಾರಾದರು ಜತೆಗಿರುವರೆ ಅಥವಾ ಬರಿಯ ನಾವಿಕ ಮಾತ್ರ ಹುಟ್ಟು ಹಾಕಿ ನಡೆಸುತ್ತಿರುವನೆ ಎನ್ನುವುದು ಅವರವರ ಊಹೆಗೆ ಬಿಟ್ಟದ್ದು..

ಅದೇನೆ ಇದ್ದರು ಆ ನೌಕೆಯ ವಿನ್ಯಾಸವಾಗಲಿ, ತೊಟ್ಟುಡುಗೆಯ ಖದರಾಗಲಿ, ನೀಳ ಕೇಶರಾಶಿಯಾಗಲಿ, ಕೊಡೆಯ ಜೋತಾಡುವ ಮಣಿ ಲಾಲಿತ್ಯವಾಗಲಿ, ಮುಖದಲ್ಲಡಗಿದ ಭಾವ ಸಂಪದವಾಗಲಿ - ಎಲ್ಲವು ಏನೊ ಕಥೆ ಹೇಳುವಂತೆ ಕಂಡಾಗ ಅದಕ್ಕೊಂದು ಕವಿತೆಯ ರೂಪ ಕೊಡುವುದೆ ಸರಿಯೆನಿಸಿತು. ಆಗ ಮೂಡಿದ ಭಾವಗಳಿಗಿತ್ತ ಪದ ರೂಪ ಈ ಕವಿತೆ.

ಚಿತ್ರವನ್ನು ಬಳಸಿಕೊಳ್ಳಲು ಅನುಮತಿಯಿತ್ತ ಅದರೊಡತಿ ಸೆರೀನಳಿಗೆ ಈ ಮೂಲಕ ಮತ್ತೊಮ್ಮೆ ಕೃತಜ್ಞತೆಗಳು...:-)

ಅಗಾಧ ಸಾಗರ ಸುತ್ತ
ಸುಪ್ತ ಗಾಢ ಏಕಾಂತ
ನಿಗೂಢ ಮೌನ ಅನಂತ
ನೌಕೆಯದೊಂದೆ ತೇಲುತ್ತ.. ||

ಬಿದಿರ ಮೆಳೆ ಮರದದಿರೊ
ಕುದುರಿಸಿ ಕಟ್ಟಿದ ನಾರೊ
ಸರಳ ತೇಲುವುದ್ದದ ತೆಪ್ಪ
ಪ್ರಕ್ಷುಬ್ದಕು ಶಾಂತ ಸ್ವರೂಪ.. ||

ಅದರೊಂದು ಚೂಪು ತುದಿಗೆ
ಸುಂದರ ಕೊಡೆಯೊಂದರಡಿಗೆ
ಕುಳಿತಿಹಳಾರೊ ಆ ಹುಡುಗಿ
ನೀಳ ಕೂದಲಲಿ ತಲೆಯಡಗಿ.. ||

ಬಣ್ಣದ ಚಾಮರ ವಿನ್ಯಾಸ ಭಿನ್ನ
ಜೋತಾಡಿವೆ ಮಣಿ ಸಂಪನ್ನ
ಮರದ ಕಡ್ಡಿಗಳ ಸುತ್ತಿದ ಬೆರಗು
ಹಾರೊ ಹಕ್ಕಿಗು ಮೂಡಿಸಿ ಬೆರಗು.. ||

ಕೂತು ಕಣ್ಮುಚ್ಚಿದ ಪ್ರಶಾಂತ
ವದನದೊಳ ಚಿಂತನೆ ಅಮೂರ್ತ
ಪ್ರಪುಲ್ಲತೆ ಹರಿದಿದೆ ತಂತಾನೆ
ಒಂಟಿ ಹೊರಟಳೆಲ್ಲಿಗೆ ಜಾಣೆ ? ||

ಯಾರೊ ನಡೆಸಿರಬೇಕು ನಾವೆ
ಸದ್ದ ಮಾಡದೆ ಕದಲಿಸದೆ ತಾವೆ
ಸಮಾಧಿಯಲಿಹ ಯೋಗಿನಿ ಜತೆ
ಏನಿರಬಹುದವಳ ಚಿಂತನೆ ಕಥೆ ? ||

ಕಾಣದವನಾರೊ ನಡೆಸಿರಬೇಕಲ್ಲಿ
ನಾನಾಗಬಾರದೆ ನಾವಿಕನಲ್ಲಿ ?
ಎಂದುದಿಸಿದ ಆಸೆಯ ಪಲುಕು
ಆ ತುದಿಗೆ ಕೂತಂತೆ ಮೆಲುಕು.. ||

ಕೂತೊಟ್ಟಿಗೆ ಹೋಗುವ ದೂರ
ಯಾರು ಬಲ್ಲರು ಉದ್ದಗಲ ಸಾಗರ ?
ಹೋದಷ್ಟು ದೂರ ಆಸರೆ ಅಪ್ಪುಗೆ
ಕೊಡಲಾರೆಯ ಜತೆ ಬರಲೊಪ್ಪಿಗೆ ? ||

Thanks and best regards,
Nagesha MN

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಾಯರೊಳಗಣ‌ ಕವಿಯೋಚನಾಲಹರಿ ಚಿತ್ರದ‌ ಸಮುದ್ರದ‌ ಲಹರಿಗಿಂತ‌ ಮೇಲ್ಮಟ್ಟದಲ್ಲಿದೆ. ಕವಿತೆ ಓದಿದ‌ ಮೇಲೆ ನಾನು ನಾವಿಕನಾಗಿರ್ಬೇಕಿತ್ತೆನಿಸಿದ್ದು ರಾಯರ‌ ಮೇಲೆ ಅಸೂಯೆಯಿಂದ್ಲಾ?!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಗವಂತ! ನೈಜದಲ್ಲಿರದಿದ್ದರೆ ಬೇಡಾ ಕಲ್ಪನೆಯ ಕಥೆ, ಕವನದಲ್ಲಾದ್ರು 'ಲೀಡ್ ರೋಲ್' ತೊಗೊಳೋಣಾ ಅಂದ್ರೆ ಅಲ್ಲೂ ಕಾಂಫಿಟೇಶನ್ನಲ್ಲಪ್ಪಾ? 'ಪಾಪಿ ಸಮುದ್ರಕ್ಕೋದ್ರು ಮೊಣಕಾಲುದ್ದ ನೀರೆ..' ಅನ್ನೊ ಹಾಗೆ :-)

ಶಾಸ್ತ್ರಿಗಳೆ, ನೀವು (ಅಥವಾ ಓದುಗರು ಯಾರಾದ್ರೂ ಸರಿಯೆ) ಆ ರೋಲ್ ತೊಗೊಳಕೆ ನಂದು ಫುಲ್ ಸಪೋರ್ಟ್ ! ಓದಿದ ಬಹುತೇಕರಿಗೆ ತಾವೆ ನಾವಿಕರಾಗಬೇಕಿತ್ತು ಅಂತನಿಸೊ ತರ ಇದ್ರೆ, ಅದು ಕವಿ-ಕಲ್ಪನೆ 'ಎಫೆಕ್ಟೀವ್' ಆಗಿದೆ ಅಂದ ಹಾಗೆ, ಅಲ್ವಾ? ಓದಿದವರೆಲ್ಲ, ತಾವೆ ಆ ಗಳಿಗೆಯ ಕವಿಗಳಾಗಿ ಪರಕಾಯ ಪ್ರವೇಶ ಮಾಡಿಬಿಡುತ್ತಾರೆಂದುಕೊಬಹುದು. ಆಗ ಅಸೂಯೆ, ಈರ್ಷೆಯ ಪ್ರಶ್ನೆಯೆ ಬರಲ್ಲ - ಎಲ್ಲ ಅವರವರ ಡೆಸ್ಟಿನಿಯ ನಾವಿಕರಾದಂತಷ್ಟೆ ಲೆಕ್ಕ ಆಗುತ್ತೆ. ಆದರೆ ಆ ರೋಲ್ ತೊಗೊಳ್ಳದೆ ಇರೋರು ಇರ್ತಾರಲ್ವಾ? ಅವರ ದೃಷ್ಟಿಕೋನಕ್ಕೆ ಆ ನಾವಿಕನ್ನ ಬೇರೆ ರೀತಿ ಅರ್ಥೈಸಬೇಕಾಗುತ್ತೆ - ಅಲ್ಲಿ ನಾವಿಕ ಅಂದ್ರೆ 'ವಿಧಾತ, ನಿಯಾಮಕ' ಅನ್ನೊ ಇಂಗಿತಾ ಸೂಕ್ತ. ಅವನು ನಡೆಸಿದ ಹಾಗೆ ನಡ್ಕೊಂಡು ಹೋಗುತ್ತೆ ಅನ್ನೋ ಹಾಗೆ..

ಏನಿವೆ ಯಾರಾದ್ರೂ ಆಗ್ಲಿ, ದಿಕ್ಕು ತಪ್ಪದ ಹಾಗೆ ನಡೆಸ್ಕೊಂಡು ಹೋಗ್ಲಿ ಅನ್ನೋಣವೆ ?

ಪ್ರತಿಕ್ರಿಯೆಗೆ ಧನ್ಯವಾದಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ಸರ್
ತುಂಬಾ ಚನ್ನಾಗಿದೆ ಸರ್ ನಿಮ್ಮ ಈ ಕವನ ಓದಿ ಸಂತೋಷ ವಾಯಿತು ನಿಮ್ಮ ಕಲ್ಹಪನೆಯ ಧೋಣಿಯಲಿ ನಿಮ್ಮ ಹೃದಯ ಭುವನ ಸುಂದರಿಯನು ಕುಳ್ಳಿರಿಸಿ ಸಾಗಿದ ರೀತಿ ಕಂಡು ಸಾಗರವನು ನೋಡಿದಷ್ಟು ಆನಂದವಾಯತು .

ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರವೀಂದ್ರರೆ ನಮಸ್ಕಾರ ಮತ್ತು ನಿಮ್ಮ ಆನಂದಭರಿತ ಪ್ರತಿಕ್ರಿಯೆಗೆ ಅಹ್ಲಾದಪೂರ್ಣ ಧನ್ಯವಾದಗಳು...! ಅಂದಹಾಗೆ ಈ ನೌಕಾಯಾನಕ್ಕೆ, ಆ ಕಲ್ಪನಾ ಲೋಕದ ಯಾತ್ರೆಯಷ್ಟೆ ಅಲ್ಲಾ, ಅದಕ್ಕು ಮೀರಿದ ಇನ್ನೊಂದು ಕಸರತ್ತು ಕೂಡಾ ಮಾಡಬೇಕಾಗಿ ಬಂತು - ಅದು ಪದ್ಯವನ್ನು ಇಂಗ್ಲೀಷಿಗೆ ಅನುವಾದಿಸುವ ಕೆಲಸ! ಕನ್ನಡದಲ್ಲೆ ಎಡಬಿಡಂಗಿ - ಇನ್ನು ಇಂಗ್ಲೀಷಿನಲ್ಲೆಂದರೆ ? ಸರಿ ಯಥಾರ್ಥವಿರುವಂತೆ ಪದಾನುವಾದ ಮಾಡಲಾಗದಿದ್ದರು ಅರೆಬರೆ ಭಾವಾರ್ಥವನ್ನಾದರು ಪ್ರತಿಬಿಂಬಿಸೋಣವೆಂದು ಮಾಡಿದ ಯತ್ನ ಈ ಕೆಳಗಿನಂತೆ ಬಂತು ನೋಡಿ.. ಬಹುತೇಕ ಹೊಂದುವಂತಿದ್ದರು ಕೆಲವೆಡೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕಾಗಿ ಬಂದಾಗ ನಮ್ಮ ಕಸ್ತೂರಿ ಕನ್ನಡವೆ ಸುಲಿದ ಬಾಳೆಯಂತಲ್ಲವೆ ಅನಿಸಿ ಆನಂದವೂ ಆಯ್ತು!

To be the sailor of the boat..
________________________________

This vast sea around,
hidden loneliness in depths
and secret silence, so infinite
- that boat is floating all alone..!

Made of raw wood and bamboo
plant threads bonding at the tip
long boat sailing, so simple
calmly, calamity looks peaceful..

Edges sharp and narrow raw
Holding that pretty umbrella
Seated there, who that unknown girl ?
long hair full, streaming her head full ..

umbrella so pretty, colourful
Hanging treasure of beads in skill
Made off delicate, round long stick
flying birds, feeling shy bending neck..

Closing eyes, she sat in so peace
trouble free face, looks so abstract
Radiating pleasure on its own accord
Where is she going alone, no crowd land ?

must be someone driving her together
That boat in silence & sheepish care
Sitting with meditating sagely girl
What her thoughts, what is her story tale..

That sailor must be the invisible god
Can't I be the driver there, instead ?
Thus dawned the wishes few and new
Dreaming so seated in other end of row..

Let us sit to go, long, longer, too far
Who knows sea's depth & distance to cover ?
As long as we could go, with an affectionate hug
Will you say 'yes', for this journey together ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶರೇ, ನಾವಿಕನ ಲಹರಿ ಚೈತನ್ಯದಾಯಕವಾಗಿದೆ. ಮೂಢನ ಲಹರಿ ಹೀಗೆ ಓಡಿತು:
ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು|
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ ||

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಇದು ಮೂಢನ ಲಹರಿಯಲ್ಲ - ಫ್ರೌಢನ ಪಾಂಡಿತ್ಯ ಪೂರ್ಣ ಉದ್ಗಾರ. ಭೌತಿಕ ನೆಲೆಯೆಂದೆತ್ತಿ ಅಲೌಕಿಕ ಸ್ತರಕ್ಕೆ ಕೂರಿಸಿಬಿಟ್ಟ ಚಮತ್ಕಾರ - ತಮ್ಮ ಕವನದ ಮೂಲಕ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.