ನೋಡ ಬನ್ನಿ ಮತ್ಸ್ಯತೀರ್ಥ

3.5

ಶಿಶಿಲ ವೆಂದರೆ  ಸುತ್ತಲೂ ಹಸಿರು ಗಿರಿವನಗಳಿಂದ  ಕೂಡಿದ ಪ್ರದೇಶ ..ಚಳಿಗಾಲದ ಸಮಯದಲ್ಲಿ ಹಿಮಾಲಯಕ್ಕೆ ಹೋದ ಅನುಭವವಾಗುತ್ತದೆ . ಮೊನ್ನೆ ನಾನು  ಕೂಡ  ಶಿಶಿಲಕ್ಕೆ ಹೋಗಿದ್ದೆ . ಈ ಭಾಗದ ಏಕೈಕ ಶಿಶಿಲೇಶ್ವರ ದೇವಸ್ಥಾನ ಮತ್ಸ್ಯತೀರ್ಥವೆಂದೇ ಪ್ರಸಿದ್ಧವಾಗಿದೆ . ಕಪಿಲಾ ನದಿ ಪ್ರವಾಸಿಗರನ್ನು ಮತ್ತು ಭಕ್ತರನ್ನು ಜುಳು ಜುಳು ನಾದದೊಂದಿಗೆ ಸ್ವಾಗತಿಸುವುದು ಮಾತ್ರ ವಿಶೇಷವೇ  ಸರಿ .

ಈ ದೇವಳದ ಪಕ್ಕದಲ್ಲೇ  ಹರಿಯುವ ಕಪಿಲಾ ನದಿಯಲ್ಲಿ "ಪೆರುವೋಳ್" ಜಾತಿಯ ದೊಡ್ಡ  ಗಾತ್ರದ ಮೀನುಗಳನ್ನು ಕಣ್ಣಾರೆ ನೋಡಬಹುದು.  ತೂಗು ಸೇತುವೆಜೊತೆಯಲ್ಲಿ ಉದಯ ಪರ್ವತ ನೋಡುಗರಿಗೆ ಮತ್ತಷ್ಟು ಆನಂದವನ್ನು ಕೊಡುತ್ತದೆ .ಹಳ ದೊಡ್ಡ ಸಂಖ್ಯೆ ಯಲ್ಲಿ   ಮತ್ಸ್ಯ ಸಂಕುಲವಿರುವ ಕಾರಣಕ ಈ ದೇವಳದ ಆಸುಪಾಸಿನ ಎರಡು ಕಿ.ಮೀ.ಗೂ ವ್ಯಾಪ್ತಿಯಲ್ಲಿ ಮೀನುಗಾರಿಕೆಮಾಡುವುದನ್ನು   ಬ್ರಿಟಿಷರ ಆಡಳಿತಾವಧಿಯಲ್ಲೇ ನಿಷೇಧ ಮಾಡಲಾಗಿದ್ದು ಈಗಲೂ ಈ ನಿಯಮ ಮುಂದುವರಿದಿದೆ . ,ಕಪಿಲಾ ನದಿಯ  ಮೇಲ್ಭಾಗದಲ್ಲಿ ಈ ಮೀನುಗಳ ಉಗಮ ಸ್ಥಾನ "ಮೀನಗುಂಡಿ' ಎಂಬ ಪ್ರದೇಶವಿದೆ.ಹಾಗೆಯೇ ದಶಕಗಳ ಹಿಂದೆ ಇಲ್ಲಿನ  ಮೀನ ಗುಂಡಿಗೆ ದುಷ್ಕರ್ಮಿಗಳು ವಿಷ ಹಾಕಿದ್ದರಿಂದ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು ಶಿಶಿಲದಲ್ಲಿ ನಡೆದ ದೊಡ್ಡ  ದುರಂತ. ಇಲ್ಲಿ ಸತ್ತು ಬಿದ್ದ ಮೀನುಗಳ ರಾಶಿ ನೋಡಿ ಜನರು ಮೂಕ ವಿಸ್ಮಿತರಾದರು .ಮೀನುಗಳು ಸಾವನ್ನೋಪ್ಪಿದ ನೆನಪಿಗೆ ಕಟ್ಟಿರುವ ಸ್ಮಾರಕ ಇಲ್ಲಿದೆ ನೋಡಿ 

ಎಲ್ಲೂ ಕಾಣಸಿಗದ ಅನೇಕ ಮದ್ದಿನ ಗುಣವುಳ್ಳ  ಸಸಿ ಮತ್ತು ಬಳ್ಳಿ ಗಳು ಇಲ್ಲಿ ಸಿಗುತ್ತವೆ . ತುಂಬೆಯ ಗಿಡವಂತು  ಹೇರಳವಾಗಿದೆ . ಶಿಶಿಲ ದೇವಾಸ್ಥಾನ ದ ಎದುರು ಬಾಗದಲ್ಲಿ ನಿಂತರೆ ಎತ್ತಿನ ಭುಜ ,ಅಮೇ ದಿಕ್ಕೆಲ್ ಬಹಳ ನಯನ ಮನೋಹರವಾಗಿ ಕಾಣುತ್ತದೆ .ಶಿಶಿಲ ಬೆಳ್ತಂಗಡಿ ತಾಲೂಕಿ ಗೆ ಸೇರಿದ್ದು  ಕೊಕ್ಕಡ ದಿಂದ ನೇರವಾಗಿ ಅರಸಿನಮಕ್ಕಿ  ಮೂಲಕ ಶಿಶಿಲವನ್ನು ಸೇರಬಹುದು  .

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸ್ಥಳ ಪರಿಚಯ ಚೆನ್ನಾಗಿದೆ. ತಲುಪುವ ಮಾರ್ಗ ವಿವರಿಸಿದ್ದರೆ ಆಸಕ್ತರಿಗೆ ಉಪಯೋಗವಾಗುತ್ತಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಿಶಿಲದ ತೂಗು ಸೇತುವೆ ಚಿತ್ರ + ಬರಹ ಸೂಪರ್.
ಕವಿನಾಗರಾಜರೆ, ಧರ್ಮಸ್ಥಳದಿಂದ ಕೇವಲ ೨೫ ಕಿ.ಮೀ. ದೂರ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.