ನೆನಪು,ಕನಸುಗಳನ್ನೇರಿ ಸಾಗುತ್ತಿದೆ ಜೀವನದ ಸವಾರಿ

4.714285

 

ತಾಯಿಯ ಋಣ ತೀರಿಸಲಾಗದು,ಬಾನಿಗೆಂದೂ ಕಲ್ಲು ಹೊಡೆಯಲಾಗದು.ಕಳೆದು ಹೋದ ಶಾಲಾ ದಿನಗಳು ಮತ್ತೆ ಸಿಗದು....ಅವು ಕನಸುಗಳು, ಇವು ನೆನಪುಗಳಷ್ಠೆ ನಮ್ಮ ಜೀವನಕ್ಕೆ ಸಿಕ್ಕ ದೊಡ್ಡ ಪ್ರತಿಷ್ಠೆ........

 

ಆನೆಗಳ ಗುಂಪು ಚದುರಿಸುವ ಪ್ರಯತ್ನ ಬೇಡ

ಮನಸ್ಸಲ್ಲಿ ಕೆಟ್ಟದನ್ನ ಎಂದೂ ಯೊಚಿಸಬೇಡ

ಕೋಗಿಲೆಗೆ ಸಮನಾಗಿ ಹಾಡುವಾಸೆಯೇ ನಿನಗೆ

ಎಂದೂ ಆಗದು ಕಲ್ಲು ಹೊಡೆಯಲು ಬಾನಿಗೆ.
 

ನೂರು ಜನ್ಮ ಹುಟ್ಟಿಬಂದರು ತೀರಿಸಲಾಗಲ್ಲ ತಾಯಿ ಋಣ

ತಾಯಿಯೇ ದೇವರು ಇದು ದೊಡ್ಡವರ ಮಾತಣ್ಣ

ಹೃದಯವೆಂಬ ಹಾಸಿಗೆಯಲಿ ಮಾಡದಿರು ನಿದ್ದೆ

ಮಾಡಿದರೆ ನಿದ್ದೆ, ಏಳಾಲಾಗದು ಎಂದೂ ಓ ಪೆದ್ದೆ.
 

ಎಷ್ಟು ಹುಡುಕಿದರು ಮತ್ತೆ ಮತ್ತೆ ಸಿಗದು ಶಾಲಾ ದಿನ

ಅದು ಪ್ರತಿಯೊಬ್ಬರ ಜೀವನದಲ್ಲೂ ಚಿನ್ನದ ಕ್ಷಣ

ಎಂದೆಂದೂ ಮಾಡದಿರು ಸಮಯವನು ವ್ಯರ್ಥ

ಅದು ಕೂಡ ವಹಿಸಿದೆ ಬದುಕಲಿ ಪ್ರಮುಖ ಪಾತ್ರ.|

                                      ಸೋಮೇಶ್ ಗೌಡ

                                                   ಮಾಕಳಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (7 votes)
To prevent automated spam submissions leave this field empty.