ಪ್ರಿಯೆ,
ನೆನಪಿವೆಯೇ ಆ ಕ್ಷಣಗಳು..
ನಾವು ಅಪರಿಚಿತರಾಗಿದ್ದ ಆ ದಿನಗಳು..
ನಿನ್ನ ನೋಡಲು ನಾ ಮಾಡುತಿದ್ದ ಚೇಷ್ಟೆಗಳು ಅನೇಕ;
ಆ ನಿನ್ನ ಕಣ್ಣೋಟ ಕಂಡು ನಾ ಕಳೆದುಹೋದ ಅನುಭವಗಳು ಅನೇಕ;
ಪ್ರೀತಿ ವ್ಯಕ್ತಪಡಿಸಲಾಗದೆ ಚಡಪಡಿಸಿದ ಸಂದರ್ಭಗಳೂ ಅನೇಕ;
ಆ ದಿನಗಳಿಗೂ ಈ ದಿನಗಳಿಗೂ ಇರುವ ವ್ಯತ್ಯಾಸ ಇಷ್ಟೇ..
ಅಪರಿಚಿತರಾಗಿದ್ದವರು ದಂಪತಿಗಳಾಗಿದ್ದೇವೆ ಅಷ್ಟೇ.
ಈಗಲೂ ನಿನ್ನ ಕಣ್ಣೋಟಕ್ಕೆ ಸೋತು ಕರಗುವ ಸನ್ನಿವೇಶಗಳು ಅನೇಕ;
ಜೀವನವೆಂದರೆ ನಿನ್ನಿಂದಲೇ ಎಂದು ಹೃದಯ ಮತ್ತೆ ಮತ್ತೆ ಪಿಸುಗುಡುವ ಘಳಿಗೆಗಳೂ ಅನೇಕ.
- ರಿಪುವರ್ಧನ
- Log in or register to post comments
- 122 ಹಿಟ್ಸ್
Printer-friendly version