ನೆನಪಿದೆಯಾ..?

4

ಕಣ್ಣಸನ್ನೆಯಿಂದ ನೀ ನನ್ನ ನೋಡಿದ ಕ್ಷಣ,
ಮಾತಿಲ್ಲದೆ ಎನ್ನ ಕರೆದೆ ಆ ದಿನ...
ನಗುವಿನ ಮುತ್ತಿನ ಮಳೆಯ ಸುರಿಸಿ ಸೆಳೆದೆ..
ನೆನಪಿದೆಯಾ...?

ಕೈಹಿಡಿದು ಒಟ್ಟಾಗಿ ನೆಡೆದು...
ಬಹುಕಾಲ ಪ್ರೇಮದ ಗುಂಗಲ್ಲೇ ಕಳೆದು..
ಅಣೆ-ಪ್ರಮಾಣವ ಮಾಡಿ ಒಂದಾದೆವು ಅಂದು ನೀಲಿ ಆಗಸದ ಕೆಳಗೆ..
ನೆನಪಿದೆಯಾ..?

ಇರುವೆನು ನಿನ್ನೊಂದಿಗೆ ಎಂದೂ ಜೊತೆ,
ಇಡುವೆನು ಮುಳ್ಳಿನ ಹಾದಿಯಲ್ಲೂ ಹೆಜ್ಜೆ..
ನನ್ನ ಜೀವ ನೀನು ನಲ್ಲ ಎಂದು ಕೂಗಿ-ಕೂಗಿ ಹೇಳಿದೆಯಲ್ಲ..
ನೆನಪಿದೆಯಾ..?

ಕಾರಣವಲ್ಲದ ಕಾರಣಕ್ಕೆ ತೋರಿದೆ ಮುನಿಸು,
ನಿನಗಿಂತ ನನ್ನ ಕುಟುಂಬವೇ ಹೆಚ್ಚು..
ಇಂದೇ ಮರೆತು ಬಿಡು ನಮ್ಮ ಪ್ರೀತಿಯನ್ನು ಎಂದ್ಹೇಳಿ..
ಕಣ್ಣೀರ್ ಹಾಕಿಸಿ ನಡೆದುಬಿಟ್ಟೆಯೆಲ್ಲಾ..
ನೆನಪಿದೆಯಾ..?

ಕಳೆದ ಒಂದು ಸಂವತ್ಸರ, ನೀನಿಲ್ಲದ ಅ ಸಾವಿರ ಕ್ಷಣ..
ಇನ್ನು ಮರೆಯದ ನನ್ನ ಮನ.. ನೋವು ಪ್ರತಿ ದಿನ...
ಆದರೂ ಹೇಳುವುದಿಲ್ಲ ನಾ.. ನೀ ಏಕೆ ತೊರೆದೆ ಯೆನ್ನ..
ಏಕೆಂದರೆ ನಾ ತಿಳಿದೆ.. ಹೆಚ್ಚು ಬಯಸಿದ ವಸ್ತುವೇ ನೋಯಿಸುವುದು ನನ್ನ..
ನೆನಪಿದೆಯಾ..?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮರೆತಿರುವಳು ಅವಳು ನಿಮ್ಮ ನೆನಪುಗಳನ್ನು ನೆನಪಿದೆಯಾ ಎಂದು ಕೇಳಿದರೆ ಅವಳಿಗೆ ನೆನಪೆಲ್ಲಿ ನೆನಪಿಟ್ಟಿರುವವರು ನೀವು ಅವಳನ್ನ ಅವಳ ಪ್ರೀತಿಯನ್ನ ನೆನಪಿದೆಯಾ ಎಂದು ಕೇಳದಿರಿ ಅವಳನ್ನ ಅವಳು ಹೇಳಿದ್ದು ಈಗ ನಮ್ಮ ಪ್ರೀತಿಯೆಲ್ಲಿ ನಿನಗೆ ಪ್ರೀತಿ ಮರೆತು ಬಿಡು ಎಂದಿದ್ದೆ ನೆನಪಿದೆಯಾ? ಅನ್ನುವಳು.. ಕವನ ಚೆನ್ನಾಗಿ ಮೂಟಿ ಬಂದಿದೆ.. ವಿನಯ್.. ಮುಂದುವರೆಯಲಿ ಒಂದಿಲ್ಲ ೊಂದು ದಿನ ನಾನು ಮರೆತಿದ್ದೆ ನಿನ್ನನ್ನು ನೆಪಿನಲ್ಲಿಡಲು ಎಂಬ ಕವನ ಮೂಡಿ ಬರಲಿ.

ಕೀರ್ತಿ ಯವರೆ, ಪ್ರತಿಕ್ರಿಯೆಯಾಗಿ ಬಹಳ ಮುದ್ದಾದ ಕವನ ಬರೆದಿದ್ದೀರಿ.. ಅದಕ್ಕೆ ನನ್ನ ಅನಂತ ಧನ್ಯವಾದಗಳು. ಹೌದು ಕವನದಲ್ಲಿ ಹುಡುಗಿ ಹುಡುಗನನ್ನು ಮರೆತಿದ್ದಾಳೆ.. ಆದರೆ ಹುಡುಗ ಅವನದೇ ಸಾಲುಗಳಲ್ಲಿ ಅವಳಿಗೆ ಹೀಗೆ ಪ್ರತಿಕ್ರಿಯಿಸಬಹುದು: "ಮರೆತರೂ ನೀನು ನನ್ನ, ನನ್ನ ಕೊನೆಉಸಿರು ಇರುವ ತನಕ ನಿನ್ನ ಸವಿನೆನಪಿನಲ್ಲಿ ಇರುವೆ ಚಿನ್ನ.." . ನಿಮ್ಮ ಆಶಯದಂತೆ "ನಾನು ಮರೆತಿದ್ದೆ ನಿನ್ನನ್ನು ನೆಪಿನಲ್ಲಿಡಲು " ಎಂಬ ಕವನ ಬರೆದರೆ ಮೊದಲು ನಿಮಗೆ ಮರೆಯದೆ ತಿಳಿಸುವೆ.. :) -- ವಿನಯ್